ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಬೆಳ್ತಂಗಡಿ : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಭರತ್ ಬಂಧನ

Posted by Vidyamaana on 2023-06-15 23:18:55 |

Share: | | | | |


ಬೆಳ್ತಂಗಡಿ : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಭರತ್ ಬಂಧನ

ಬೆಳ್ತಂಗಡಿ : ಜೆ.ಎಮ್.ಎಫ್.ಸಿ ನ್ಯಾಯಾಲಯ ಬೆಳ್ತಂಗಡಿ. ನ್ಯಾಯಾಲಯದ ಚೆಕ್ ಪ್ರಕರಣದ ವಾರಂಟು ಆರೋಪಿ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕಡ್ಯ ನಿವಾಸಿ ಜನಾರ್ಧನ ಗೌಡರ ಮಗನಾದ ಭರತ್ ಪಿ(36) ಎಂಬವರನ್ನು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರು ಶಿವಕುಮಾರ್ ಹಾಗೂ ಧರ್ಮಸ್ಥಳ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಅನೀಲ್ ಕುಮಾರ್ ರವರ ಮಾರ್ಗದರ್ಶನದಂತೆ ಜೂನ್ 15 ರ 7 ಗಂಟೆಗೆ ಸುಳ್ಯ ತಾಲೂಕಿನ ಮಡಪ್ಪಾಡಿ ಬಸ್ಸು ತಂಗುದಾಣದ ಬಳಿಯಿಂದ ಧರ್ಮಸ್ಥಳ ಠಾಣಾ ಸಿಬ್ಬಂದಿಗಳಾದ ರಾಜೇಶ್ ಮತ್ತು ರೋಶನ್ ರವರು ವಶಕ್ಕೆ ಪಡೆದು ಮಾನ್ಯ ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಎಸ್.ಅಂಗಾರ

Posted by Vidyamaana on 2023-04-12 05:58:07 |

Share: | | | | |


ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಎಸ್.ಅಂಗಾರ

ಸುಳ್ಯದಲ್ಲಿ‌ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಹಾಲಿ ಸಚಿವ, ಎಸ್ ಅಂಗಾರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು   ಪಕ್ಷ ಟಿಕೆಟ್ ನೀಡದ ಕುರಿತು ನನ್ನ ಅಸಮಾಧಾನವಲ್ಲ. ಆದರೆ ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಮಾಡಿದ ಸೇವೆಯನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲದಂತಾಗಿದೆ. ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು ಎಂದು ಹೇಳಿದ ಅಂಗಾರರು, ನಾನು ಇನ್ನು ರಾಜಕಾರಣದಲ್ಲಿಲ್ಲ. ಚುನಾವಣಾ ಪ್ರಚಾರ ಕಣದಲ್ಲೂ ಇಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬಹುದು ಎಂದು ಹೇಳಿದರು.

ಸುರತ್ಕಲ್ ; ರಿಯಲ್ ಎಸ್ಟೇಟ್ ಉದ್ಯಮಿ ಸಚಿನ್ ಸಂಶಯಾಸ್ಪದ ರೀತಿಯಲ್ಲಿ ಮೃತ್ಯು

Posted by Vidyamaana on 2023-10-22 07:33:09 |

Share: | | | | |


ಸುರತ್ಕಲ್ ; ರಿಯಲ್ ಎಸ್ಟೇಟ್ ಉದ್ಯಮಿ ಸಚಿನ್ ಸಂಶಯಾಸ್ಪದ ರೀತಿಯಲ್ಲಿ ಮೃತ್ಯು

ಮಂಗಳೂರು: ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಸಸಿಹಿತ್ಲು ಭಗವತಿ ದೇವಸ್ಥಾನದ ಬಳಿ ಸಂಶಯಾಸ್ಪದ ರೀತಿಯಲ್ಲಿ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಫೈನಾನ್ಸ್, ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದ ಸಸಿಹಿತ್ಲು ನಿವಾಸಿ ಸಚಿನ್ ಕುಕ್ಯಾನ್ (40) ಮೃತ ವ್ಯಕ್ತಿ. ಅ.19ರಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಘಟನೆ ನಡೆದಿದೆ.   ಅಂದು ಮಧ್ಯಾಹ್ನ ಸಚಿನ್ ಕುಟುಂಬದ ಹೆಸರಲ್ಲಿ ಸಸಿಹಿತ್ಲು ಭಗವತಿ ದೇವಸ್ಥಾನದಲ್ಲಿ ಅನ್ನದಾನ  ವ್ಯವಸ್ಥೆ ಮಾಡಲಾಗಿತ್ತು. ಊಟದ ಬಳಿಕ ಸಚಿನ್ ಅವರು ತನ್ನ ಪತ್ನಿಯನ್ನು ಮನೆಗೆ ಕರೆದೊಯ್ದು ಬಿಟ್ಟು ಬಂದಿದ್ದರು. ಬಳಿಕ ಕುದ್ರೋಳಿ ದೇವಸ್ಥಾನಕ್ಕೆಂದು ಹೊರಡಲು ತಯಾರಿ ನಡೆಸುತ್ತಿದ್ದರು. 


ಎರಡು ಗಂಟೆ ವೇಳೆಗೆ ಮನೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಕಾರಿನತ್ತ ಬಂದಿದ್ದು ಅಲ್ಲಿ ಫೋನಲ್ಲಿ ಮಾತನಾಡುತ್ತಿದ್ದಾಗಲೇ ದಿಢೀರ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಣೆಗೆ ಗಾಯಗೊಂಡಿದ್ದ ರೀತಿಯಲ್ಲಿ ಸಚಿನ್ ಪತ್ತೆಯಾಗಿದ್ದರು. ಕೂಡಲೇ ಸ್ಥಳೀಯರು ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ಕರೆತಂದಿದ್ದು ಅಷ್ಟರಲ್ಲಿ ಸಾವು ಕಂಡಿದ್ದರು. ಹಣೆಗೆ ಗಾಯಗೊಂಡ ರೀತಿ ಕಂಡುಬಂದಿದ್ದರಿಂದ ಯಾರೋ ಹೊಡೆದು ಹೋಗಿರಬೇಕೆಂದು ಶಂಕೆ ವ್ಯಕ್ತವಾಗಿದ್ದು ಸಾವಿನ ಬಗ್ಗೆ ಸಂಶಯಿಸಿ ಮನೆಯವರು ಪೊಲೀಸ್ ದೂರು ನೀಡಿದ್ದಾರೆ. 


ಪೊಲೀಸರು ಸ್ಥಳದಲ್ಲಿ ಆಸುಪಾಸಿನ ಸಿಸಿಟಿವಿ ಪರಿಶೀಲನೆ ನಡೆಸಿದ್ದು ಅಂತಹ ಕೃತ್ಯದ ಸುಳಿವು ಸಿಕ್ಕಿಲ್ಲ ಎನ್ನುತ್ತಿದ್ದಾರೆ. ಹಣೆಗೆ ಗಾಯವಾಗಿದ್ದು ಹೌದು. ಹೃದಯಾಘಾತದಿಂದ ಕುಸಿದು ಬಿದ್ದು ರಸ್ತೆಯ ಕಾಂಕ್ರೀಟ್ ತಾಗಿ ಗಾಯವಾಗಿರುವ ಸಾಧ್ಯತೆಯಿದೆ. ಪೋಸ್ಟ್ ಮಾರ್ಟಂ ವರದಿಗೆ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಸ್ಥಳೀಯರು ಸಾವಿನ ಬಗ್ಗೆ ಸಂಶಯಿಸಿದ್ದು ಅದೇ ವೇಳೆಗೆ ಯಾವುದೋ ಸ್ವಿಫ್ಟ್ ಕಾರು ಬಂದಿತ್ತು. ನಾಲ್ಕು ನಿಮಿಷದಲ್ಲಿ ಘಟನೆ ನಡೆದು ಹೋಗಿತ್ತು. ಅದರ ಬೆನ್ನಲ್ಲೇ ಬಸ್ ಬಂದಿದ್ದು ಬಸ್ ಸಿಬಂದಿಯೇ ಸಚಿನ್ ಕುಸಿದು ಬಿದ್ದಿರುವುದನ್ನು ತಿಳಿಸಿದ್ದರು ಎನ್ನುತ್ತಾರೆ, ಸ್ಥಳೀಯರು. ಸಚಿನ್ ಹಿಂದು ಸಂಘಟನೆಯಲ್ಲಿ ಗುರುತಿಸಿದ್ದು ಅಂತ್ಯಕ್ರಿಯೆ ಸಂದರ್ಭದಲ್ಲಿ ಸಾಕಷ್ಟು ಜನ ಸೇರಿದ್ದರು.‌ ಸ್ಥಳೀಯವಾಗಿ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು.

ಮಹಿಳೆಯಿಂದ 3೦ ಸಾವಿರ ಲಂಚ ಪಡೆದ ಉಗ್ರಾಣಿ

Posted by Vidyamaana on 2023-09-06 18:39:08 |

Share: | | | | |


ಮಹಿಳೆಯಿಂದ 3೦ ಸಾವಿರ ಲಂಚ ಪಡೆದ ಉಗ್ರಾಣಿ

ಪುತ್ತೂರು: ಅಕ್ರಮಸಕ್ರಮ ಕಡತ ವಿಲೇವಾರಿ ಮಾಡುವುದಾಗಿ ಹೇಳಿ ಮಹಿಳೆಯಿಂದ ಪಡೆದ ಲಂಚದ ಹಣವನ್ನು ಹಿಂತಿರುಗಿಸುವಂತೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ಗ್ರಾಮವೊಂದರ ಉಗ್ರಾಣಿಗೆಗೆ ಸೂಚನೆಯನ್ನು ನೀಡಿದ್ದಾರೆ.

ಕುಂಡಡ್ಕ ದಲ್ಲಿ ಶ್ರೀ ಕೃಷ್ಣಾಅಷ್ಟಮಿ ಕಾರ್ಯಕ್ರಮಕ್ಕೆ ತೆರಳಿದ ಶಾಸಕರ ಬಳಿ ಬಂದ ಚಂದ್ರಾವತಿ ಎಂಬ ಮಹಿಳೆ ನಾನು ಶಕುಂತಳಾ ಶೆಟ್ಟಿ ಶಾಸಕರಾಗಿದ್ದ ಸಂದರ್ಭದಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದ್ದೆ. ನನ್ನ ಮನೆ ಸರಕಾರಿ ಜಾಗದಲ್ಲಿದೆ. ನನ್ನ ಮನೆ ಇರುವ ಜಾಗವನ್ನು ಸಕ್ರಮ ಮಾಡಿಕೊಡಬೇಕೆಂದು ಅರ್ಜಿ ಸಲ್ಲಿಸಿದ್ದೇನೆ. ಸಲ್ಲಿಸಿದ ಅರ್ಜಿಯ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ . ನಾನು ಅರ್ಜಿ ಕೊಟ್ಟಾಗ ನನ್ನಿಂದ ನನ್ನ ಗ್ರಾಮದ ಉಗ್ರಾಣಿ ಒಟ್ಟು ೩೦ ಸಾವಿರ ಹಣವನ್ನು ಲಂಚವಾಗಿ ಪಡೆದುಕೊಂಡಿದ್ದಾರೆ. ಏಳು ವರ್ಷ ಕಳೆದರೂ ನನಗೆ ಅಕ್ರಮ ಸಕ್ರಮದಲ್ಲಿ ಜಾಗ ರೆಕಾರ್ಡ್ ಆಗಲಿಲ್ಲ, ನಾನು ಬಡವೆ, ನನ್ನಲ್ಲಿ ಏನೂ ಇಲ್ಲ, ನಾನು ಬೀಡಿಕಟ್ಟಿ ಜೀವನ ಮಾಡುವುದು,  ಆದರೂ ನನ್ನಿಂದ ಹಣಪಡೆದುಕೊಂಡಿದ್ದಾರೆ. ಹಣ ಕೊಟ್ಟರೂ ಕೆಲಸ ಮಾಡಿಲ್ಲ ನನಗೆ ನ್ಯಾಯ ಕೊಡಿ ಎಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ. ಕೂಡಲೇ ಹಣ ಪಡೆದುಕೊಂಡ ಉಗ್ರಾಣಿಗೆ ಕರೆ ಮಾಡಿದ ಶಾಸಕರು ಬಡ ಮಹಿಳೆಯಿಂದ ಲಂಚವಾಗಿ ಪಡೆದುಕೊಂಡ ೩೦ ಸಾವಿರ ಹಣವನ್ನು ವಾರದೊಳಗೆ ಮಹಿಳೆಗೆ ಪಾವತಿಸಿಬೇಕು ಇಲ್ಲವಾದರೆ ಕೆಲಸದಿಂದ ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಹಿಳೆಗೆ ಸಾಂತ್ವನ ಹೇಳಿದ ಶಾಸಕರು ನಿಮ್ಮ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಸೂಚನೆ ಕೊಡುತ್ತೇನೆ. ಅಕ್ರಮ ಸಕ್ರಮ ಸಮಿತಿಯಾದ ತಕ್ಷಣವೇ ನಿಮ್ಮ ಜಾಗ ನಿಮಗೆ ರೆಕಾರ್ಡ್ ಆಗಲಿದೆ ಎಂದು ಹೇಳಿದಾಗ ಮಹಿಳೆ ಶಾಸಕರಿಗೆ ನಮಸ್ಕರಿಸಿದರು.

ಅರ್ಧ ಗಂಟೆ ಕಾಲ ಸರತಿ ಸಾಲಿನಲ್ಲಿ ನಿಂತು ತನ್ನ ಹಕ್ಕು ಚಲಾಯಿಸಿದ ಪದ್ಮರಾಜ್

Posted by Vidyamaana on 2024-04-26 11:05:12 |

Share: | | | | |


ಅರ್ಧ ಗಂಟೆ ಕಾಲ ಸರತಿ ಸಾಲಿನಲ್ಲಿ ನಿಂತು ತನ್ನ ಹಕ್ಕು ಚಲಾಯಿಸಿದ ಪದ್ಮರಾಜ್

ಮಂಗಳೂರು, ಎ.26: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಕಪಿತಾನಿಯೋ ಶಾಲೆಯ ಮತಗಟ್ಟೆಯಲ್ಲಿ ಪತ್ನಿ ಮತ್ತು ಮಗಳ ಜೊತೆ ಮತ ಚಲಾಯಿಸಿದರು. 

ಮತಗಟ್ಟೆಯತ್ತ ಬರುವಾಗಲೇ ಮತದಾರರಿಗೆ ಕೈಮುಗಿಯುತ್ತಲೇ ಒಳಬಂದ ಪದ್ಮರಾಜ್, ಸರತಿ ಸಾಲಿನಲ್ಲಿ ಅರ್ಧ ಗಂಟೆ ಕಾಲ ನಿಂತು ಮತ ಚಲಾಯಿಸಿದರು.

ಪುತ್ತೂರು ತಾಲೂಕು ಯುವ ಬಂಟರ ಸಂಘದಿಂದ ಬಂಟರ ಭವನದಲ್ಲಿ ಯುವ ವಿಕಾಸ

Posted by Vidyamaana on 2024-06-03 07:14:00 |

Share: | | | | |


ಪುತ್ತೂರು ತಾಲೂಕು ಯುವ ಬಂಟರ ಸಂಘದಿಂದ  ಬಂಟರ ಭವನದಲ್ಲಿ ಯುವ ವಿಕಾಸ

ಪುತ್ತೂರು: ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಜೂ.೨ ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಒಂದು ದಿನದ ನಾಯಕತ್ವ, ವ್ಯಕ್ತಿತ್ವ ವಿಕಸನ ಮತ್ತು ಪರಿಣಾಮಕಾರಿ ಸಂವಹನ ವಿಚಾರ ಸಂಕೀರ್ಣ ಯುವ ವಿಕಾಸ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸಹಕಾರತ್ನ ಸವಣೂರು ಕೆ.ಸೀತಾರಾಮ ರೈಯವರು ದೀಪ ಬೆಳಗಿಸಿ, ಉದ್ಘಾಟನೆಗೈದು ಮಾತನಾಡಿ  ಯುವ ಸಮುದಾಯ ಸಮಾಜದ ಶಕ್ತಿಯಾಗಿದ್ದು, ಬಂಟ ಸಮಾಜದ ಯುವ ಪೀಳಿಗೆಯ ಅಭಿವೃದ್ಧಿಗೆ ಇಂಥ ಕಾರ್‍ಯಕ್ರಮ ಸಹಕಾರಿ ಎಂದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು,




Leave a Comment: