ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

Posted by Vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

2000 ರೂಪಾಯಿ ನೋಟ್‌ ಹಿಂಪಡೆದ ಆರ್‌ಬಿಐ

Posted by Vidyamaana on 2023-05-19 14:41:54 |

Share: | | | | |


2000 ರೂಪಾಯಿ ನೋಟ್‌ ಹಿಂಪಡೆದ ಆರ್‌ಬಿಐ

ನವದೆಹಲಿ : (Rs 2000 Currency Note) ಭಾರತೀಯ ರಿಸರ್ವ್‌ ಬ್ಯಾಂಕ್‌ 2000 ರೂಪಾಯಿ ಮುಖ ಬೆಲೆಯ ನೋಟ್‌ ನ್ನು ಹಿಂಪಡೆದಿದೆ. 2000 ರೂಪಾಯಿ ನೋಟಿನ ಚಲಾವಣೆ ಈ ಕ್ಷಣದಿಂದಲೇ ಸ್ಥಗಿತವಾಗಲಿದೆ. ಆದರೆ 2000 ರೂಪಾಯಿ ನೋಟು ಹೊಂದಿದ್ದವರು ಬ್ಯಾಂಕುಗಳಿಗೆ ತೆರಳಿ ಸೆಪ್ಟೆಂಬರ್ 30 2023ರ ಒಳಗಾಗಿ ನೋಟನ್ನು ಬದಲಾಯಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.2000 ರೂಪಾಯಿಯ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದರೆ ಕರೆನ್ಸಿ ನೋಟುಗಳ ಚಲಾವಣೆ ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧವಾಗಿ ಮುಂದುವರಿಯುತ್ತದೆ . ಸೆಪ್ಟೆಂಬರ್ 30, 2023 ರವರೆಗೆ 2,000 ರೂ ನೋಟುಗಳಿಗೆ ಠೇವಣಿ ಮತ್ತು/ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುವಂತೆ RBI ಬ್ಯಾಂಕ್‌ಗಳನ್ನು ಕೇಳಿದೆ.ಆದರೆ ಬ್ಯಾಂಕುಗಳು ಯಾವುದೇ ಕಾರಣಕ್ಕೂ ಈ ನೋಟುಗಳನ್ನು ಚಲಾವಣೆ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಸುತ್ತೋಲೆಯಲ್ಲಿ ತಿಳಿಸಿದ. ಎರಡು ಸಾವಿರ ರೂಪಾಯಿಯ ನೋಟು ಹೊಂದಿದ್ದವರು ಆತಂಕ ಪಡುವ ಅಗತ್ಯವಿಲ್ಲ. ಇನ್ನು ಕಳೆದ ಒಂದು ವರ್ಷಗಳಿಗೂ ಅಧಿಕ ಕಾಲದಿಂದಲೂ ಎರಡು ಸಾವಿರ ರೂಪಾಯಿಯ ನೋಟು ಎಟಿಎಂ, ಬ್ಯಾಂಕ್‌ ಶಾಖೆಗಳಲ್ಲಿಯೂ ಲಭ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಹಿಂದೆಯೇ ಎರಡು ಸಾವಿರ ರೂಪಾಯಿಯ ನೋಟು ಬ್ಯಾನ್‌ ಆಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಕುರಿತು ಯಾವುದೇ ಯೋಚನೆಯೂ ಕೇಂದ್ರ ಸರಕಾರದ ಮುಂದಿಲ್ಲ ಎಂದು ತಿಳಿಸಿದ್ದರು.

ಈ ಹಿಂದೆ ದೇಶದಲ್ಲಿ ನೋಟು ಅಮಾನ್ಯೀಕರಣದ ನಂತರ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಚಲಾವಣೆಗೆ ತಂದಿತ್ತು. ಸುಮಾರು ಆರು ವರ್ಷಗಳ ತರುವಾಯ ಆರ್‌ಬಿಐ ಎರಡು ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿದೆ. ಸಪ್ಟೆಂಬರ್‌ ವರೆಗೂ ನೋಟುಗಳು ಚಲಾವಣೆಯಲ್ಲಿ ಇರಲಿದ್ದು, ನಂತರದಲ್ಲಿ ಸಂಪೂರ್ಣವಾಗಿ ನೋಟುಗಳ ಚಲಾವಣೆ ರದ್ದಾಗಲಿದೆ.

ನನ್ನ ಸಾವಿಗೆ ನಾನೇ ಕಾರಣ.. ಕಾಯರ್ತಡ್ಕದಲ್ಲಿ ಯುವತಿ ನೇಣಿಗೆ ಶರಣು

Posted by Vidyamaana on 2024-02-08 17:57:10 |

Share: | | | | |


ನನ್ನ ಸಾವಿಗೆ ನಾನೇ ಕಾರಣ.. ಕಾಯರ್ತಡ್ಕದಲ್ಲಿ ಯುವತಿ ನೇಣಿಗೆ ಶರಣು

ಮಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಯುವತಿ ತನ್ನ ಸ್ವಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ಕಳೆಂಜ ಗ್ರಾಮದ ಕಾಯರ್ತಡ್ಕದಲ್ಲಿ ನಡೆದಿದೆ. ಕಾಯರ್ತಡ್ಕ ಕುರುಂಬುಡೇಲು ನಿವಾಸಿ ವನಿತಾ ಯಾನೆ ರೇವತಿ(30) ಮೃತ ಯುವತಿ.ವನಿತಾರವರು ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು ಅನಾರೋಗ್ಯ ಸಮಸ್ಯೆ ಕಾಡಿದ ಹಿನ್ನಲೆಯಲ್ಲಿ ಒಂದು ತಿಂಗಳ ಹಿಂದೆ ಮನೆಗೆ ಬಂದಿದ್ದರು. ಫೆ. 8 ರಂದು ಮುಂಜಾನೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಡೆತ್ ನೋಟ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

WATCH VIDEO: ಮಗನ ಶವದ ಮುಂದೆ ಸಿದ್ದರಾಮಯ್ಯ ಸರ್ಕಾರದ 2 ಸಾವಿರ ರೂ. ನೆನೆದ ತಾಯಿ: ವಿಡಿಯೋ ವೈರಲ್‌!!

Posted by Vidyamaana on 2024-02-18 14:01:49 |

Share: | | | | |


WATCH VIDEO: ಮಗನ ಶವದ ಮುಂದೆ ಸಿದ್ದರಾಮಯ್ಯ ಸರ್ಕಾರದ 2 ಸಾವಿರ ರೂ. ನೆನೆದ ತಾಯಿ: ವಿಡಿಯೋ ವೈರಲ್‌!!

ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಂದ ನಂತ್ರ, ಮಹಿಳೆಯರು ಪುಲ್ ಖುಷ್ ಆಗಿದ್ದಾರೆ. ಬಡತನದ ಬೇಗೆಯಲ್ಲಿ ಇದ್ದಂತ ಅದೆಷ್ಟೋ ಯಜಮಾನಿಯರಿಗೆ ಗೃಹ ಲಕ್ಷ್ಮೀ ಯೋಜನೆ ಸಂಸಾರದ ನೊಗವನ್ನೇ ಮುನ್ನೆಡೆಸೋ ಶಕ್ತಿಯನ್ನು ನೀಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅನಾರೋಗ್ಯದಿಂದ ಸಾವನ್ನಪ್ಪಿದಂತ ಮಗನ ಶವದ ಮುಂದೆ ತಾಯಿಯೊಬ್ಬಳು ಕಣ್ಣೀರಿಡುತ್ತಲೇ ಗೃಹಲಕ್ಷ್ಮೀ ಯೋಜನೆ ಬಗ್ಗೆ ಆಡುವ ಮಾತು ಮನ ಮಿಡಿಸುತ್ತದೆ.ಸೋಷಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದೆ.

WATCH VIDEO: ಮಗನ ಶವದ ಮುಂದೆ ಸಿದ್ದರಾಮಯ್ಯ ಸರ್ಕಾರದ 2 ಸಾವಿರ ರೂ. ನೆನೆದ ತಾಯಿ: ವಿಡಿಯೋ ವೈರಲ್‌!!


ಸತ್ತ ಮಗನ ಶವಕ್ಕೆ ಹಾರ ಹಾಕುತ್ತ, ಆ ತಾಯಿ ಕಣ್ಣೀರು ಇಡೋದು ಎಂಥವರನ್ನು ಕಣ್ಣೀರು ತರಿಸುವಂತಿದೆ. ಮಗನ ಶವಕ್ಕೆ ಹಾರ ಹಾಕುತ್ತಲೇ, ಆಸ್ಪತ್ರೆಗೆ ತೋರಿಸಿಕೊಳ್ಳೋ ಅಂದಿದ್ದೆ. ತೋರಿಸಿಕೊಂಡಿದ್ರೇ ಹಿಂಗೆ ಆಗುತ್ತಿರಲಿಲ್ಲ. ಅಯ್ಯೋ ಮಗನೆ ಎಂಬುದಾಗಿ ದುಖ ತೋಡಿಕೋಳ್ಳೋದನ್ನು ಕಾಣ ಬಹುದಾಗಿದೆ.


ಸವದತ್ತಿ ತಾಲೂಕು ಮರಕುಂಬಿ ಗ್ರಾಮದ ವಿಶ್ವನಾಥ ಶಿವಲಿಂಗಪ್ಪ ಗುರಕ್ಕನವರ(34) ಅನಾರೋಗ್ಯದಿಂದ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ವೇಳೆ ಮೃತ ವಿಶ್ವನಾಥನ ತಾಯಿ‌ ನೀಲವ್ವಗೆ ಯಂಗ್ ಬೆಲಗಾಮ್ ಫೌಂಡೇಶನ್. ನೇರವಿಗೆ ನಿಂತಿದೆ. ಈ ನಡುವೆ ಮೃತ ಪುತ್ರನಿಗೆ ಅಂತಿಮ‌ ನಮನ ಸಲ್ಲಿಸುವ ವೇಳೆ ಅಜ್ಜಿ ನೀಲವ್ವ ಸಿದ್ದರಾಮಯ್ಯ ಸರ್ಕಾರದ ಗೃಹ ಲಕ್ಷ್ಮೀ ಯೋಜನೆ 2 ಸಾವಿರ ರೂ. ನೆನೆಸಿಕೊಂಡರು. ಪ್ರತಿ ತಿಂಗಳು 2 ಸಾವಿರ ರೂ. ಬರುತ್ತೆ. ಅದರಲ್ಲಿ ನಮ್ಮ ಅವ್ವನ ಹೊಟ್ಟೆ ತುಂಬುತ್ತೆ ಎಂದು ಮಗ ಹೇಳಿದ್ದ ಎಂದು ಕಣ್ಣೀರು ಹಾಕಿದ್ದಾರೆ.ಮಗನೇ ನಿನ್ನನ್ನೇ ನಾನು ಸಾಕುತ್ತಿದ್ದೆ. ನೀನು ನನ್ನ ಚೆನ್ನಾಗಿ ನೋಡಿಕೊಳ್ಳೋದು ಏನು. ನನಗೆ ಗೃಹಲಕ್ಷ್ಮೀ ಯೋಜನೆಯ 2000 ಹಣ ಬರ್ತಿದೆ. ಅದು ನಮ್ಮ ಜೀವನ ನಿರ್ವಹಣೆಗೆ ಸಾಕಾಗಿತ್ತು. ಅಯ್ಯೋ ಮಗ ಸತ್ತೋಗಿ ಬಿಟ್ಟೆಯಲ್ಲೋ. ನೀನು ಚೆನ್ನಾಗಿರಬೇಕು. ಚೆನ್ನಾಗಿ ಇರು ಎನ್ನುತ್ತಲೇ ಶವದ ಮುಂದೆ ಕಣ್ಣೀರಿಡುವ ತಾಯಿ, ತನಗೆ ಗೃಹಲಕ್ಷ್ಮೀ ಯೋಜನೆ 2000 ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿದೆ ಎಂಬುದನ್ನು ಬಿಚ್ಚಿಡುತ್ತಾಳೆ.


ಒಟ್ಟಾರೆಯಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಶಕ್ತಿ ಯೋಜನೆ ಮಹಿಳೆಯರಿಗೆ ಹೊದೊಂದು ಚೈತನ್ನಯವನ್ನು ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸೋದಕ್ಕೆ ತುಂಬಿದೆ. ಇನ್ನೂ ಗೃಹಲಕ್ಷ್ಮೀ ಯೋಜನೆಯಿಂದ ಯಜಮಾನಿಯರಿಗೆ ಪ್ರತಿ ತಿಂಗಳು ಸಿಗುವಂತ 2000 ಹಣ ಸಂಸಾರವನ್ನೇ ಮುನ್ನೆಡೆಸೋ ಶಕ್ತಿಯನ್ನೇ ನೀಡಿದೆ ಎನ್ನಬಹುದು.

ಬೆಳ್ತಂಗಡಿ : ಡ್ರಾಯಿಂಗ್ ಶಿಕ್ಷಕ ರೂಪೇಶ್ ನ ಅಶ್ಲೀಲ ಮೆಸೇಜ್ ; ಮನನೊಂದ ವಿದ್ಯಾರ್ಥಿನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

Posted by Vidyamaana on 2024-02-12 21:19:40 |

Share: | | | | |


ಬೆಳ್ತಂಗಡಿ : ಡ್ರಾಯಿಂಗ್ ಶಿಕ್ಷಕ ರೂಪೇಶ್ ನ ಅಶ್ಲೀಲ ಮೆಸೇಜ್ ; ಮನನೊಂದ ವಿದ್ಯಾರ್ಥಿನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

ಬೆಳ್ತಂಗಡಿ, ಫೆ.12: ಡ್ರಾಯಿಂಗ್ ಶಿಕ್ಷಕನೊಬ್ಬ ತನ್ನ ಬಗ್ಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ ಎಂಬ ಕಾರಣಕ್ಕೆ ನೊಂದ ವಿದ್ಯಾರ್ಥಿನಿ ಇಲಿ ಪಾಷಾಣ ಸೇವಿಸಿ ಸಾವಿಗೆ ಶರಣಾದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದ್ದು ಧರ್ಮಸ್ಥಳ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. 


ವಿಷ ಸೇವನೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ವಾರದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಫೆ.12ರಂದು ಮೃತಪಟ್ಟಿದ್ದಾಳೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದ ಧರ್ಮಸ್ಥಳದ ನಿವಾಸಿ 16 ವರ್ಷದ ಹುಡುಗಿ ಮೃತ ವಿದ್ಯಾರ್ಥಿನಿ. ಶಾಲೆಯ ಡ್ರಾಯಿಂಗ್ ಶಿಕ್ಷಕ ರೂಪೇಶ್ ಪೂಜಾರಿ ಎಂಬಾತ ಮೃತಪಟ್ಟ ವಿದ್ಯಾರ್ಥಿನಿಯ ಬಗ್ಗೆ ಬೇರೊಬ್ಬ ವಿದ್ಯಾರ್ಥಿನಿಗೆ ಅವಮಾನ ಆಗುವ ರೀತಿಯಲ್ಲಿ ಮೆಸೇಜ್ ಮಾಡಿದ್ದ. ಈ ಬಗ್ಗೆ ಆಕೆ ವಿಷಯವನ್ನು ವಿದ್ಯಾರ್ಥಿನಿಗೆ ತಿಳಿಸಿದ್ದಳು. ಇದರಿಂದ ನೊಂದ ವಿದ್ಯಾರ್ಥಿನಿ ಮನೆಯವರಿಗೆ ತಿಳಿಸಿದ್ದಳು. ಮರುದಿನ ತಾಯಿ ಜೊತೆ ಹೋಗಿ ವಿದ್ಯಾರ್ಥಿನಿ ವಿಚಾರಿಸಿದ್ದಾಳೆ. 


ಬಳಿಕ ಫೆ.7ರಂದು ವಿದ್ಯಾರ್ಥಿನಿ ಶಾಲೆಗೆ ಬರುವಾಗ ಬಿಸ್ಕೆಟ್ ಪ್ಯಾಕೆಟ್ ಜೊತೆ ಇಲಿ ಪಾಷಾಣ ಅಂಗಡಿಯಿಂದ ಖರೀದಿಸಿ ತಂದಿದ್ದಾಳೆ ಎನ್ನಲಾಗಿದೆ. ಶಾಲೆಯಲ್ಲಿ ಬಿಸ್ಕೆಟ್ ಜೊತೆ ಇಲಿ ಪಾಷಾಣ ಪೇಸ್ಟ್ ಮಿಕ್ಸ್ ಮಾಡಿ ಸೇವಿಸಿದ್ದು ಪ್ರಜ್ಞೆ ಕಳಕೊಂಡಿದ್ದಳು.‌ ತಕ್ಷಣ ಶಾಲೆಯ ಶಿಕ್ಷಕರು ಆಕೆಯನ್ನು ಆಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ವಿದ್ಯಾರ್ಥಿನಿ ಲಿವರ್ ಮತ್ತು ಕಿಡ್ನಿ ನಿಷ್ಕ್ರಿಯವಾಗಿ ಫೆ.12 ರಂದು ಮುಂಜಾನೆ 5:30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾಳೆ. ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಶಿಕ್ಷಕ ರೂಪೇಶ್ ಪೂಜಾರಿ ವಿರುದ್ಧ ವಿದ್ಯಾರ್ಥಿನಿ ತಾಯಿ ನೀಡಿದ ದೂರಿನ ಮೇರೆಗೆ IPC 354D, 509, POSO Act 12 , 75JJ Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಶಿಕ್ಷಕ ರೂಪೇಶ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಕಂಬಳದ ಬಿಗ್ ಅಪ್ಡೇಟ್!

Posted by Vidyamaana on 2023-09-21 16:00:48 |

Share: | | | | |


ಬೆಂಗಳೂರು ಕಂಬಳದ ಬಿಗ್ ಅಪ್ಡೇಟ್!

ಪುತ್ತೂರು: ಬೆಂಗಳೂರಿನ ಕಂಬಳದಲ್ಲಿ ಭಾಗವಹಿಸಲು ಕಂಬಳ ಕೋಣಗಳಿಗೆ ಅವಕಾಶ ಕಲ್ಪಿಸಿದ್ದು, ಈ ಹಿನ್ನೆಲೆಯಲ್ಲಿ ಕಂಬಳ ಕೋಣಗಳ ಯಜಮಾನರುಗಳ ಸಭೆಯನ್ನು ಕರೆಯಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಸೆ. 30ರಂದು ಸಂಜೆ 3 ಗಂಟೆಗೆ ಮಂಗಳೂರು ಹೊಟೇಲ್ ವುಡ್’ಲ್ಯಾಂಡಿನಲ್ಲಿ ಕೋಣಗಳ ಯಜಮಾನರುಗಳ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ, ಸೂಚನೆ ನೀಡುವಂತೆ ತಿಳಿಸಲಾಗಿದೆ.

ನವಂಬರಿನಲ್ಲಿ ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕಂಬಳ ಕೋಣಗಳ ಯಜಮಾನರುಗಳ ಸಭೆ ಕರೆದಿದ್ದು, ಬೆಂಗಳೂರು ಕಂಬಳದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಲು ಅವಕಾಶ ನೀಡಲಾಗಿದೆ.  ಮಾಹಿತಿಗೆ ರಾಜೀವ್ ಶೆಟ್ಟಿ ಎತ್ತೂರು 8861949607, ನಿರಂಜನ್ ರೈ ಮಠಂತಬೆಟ್ಟು 9972772505 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



Leave a Comment: