ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಇನ್ಫೋಸಿಸ್ ಸುಧಾಮೂರ್ತಿ ಹೆಸರು ಬಳಸಿ ವಂಚನೆ

Posted by Vidyamaana on 2023-10-16 15:08:21 |

Share: | | | | |


ಇನ್ಫೋಸಿಸ್ ಸುಧಾಮೂರ್ತಿ ಹೆಸರು ಬಳಸಿ ವಂಚನೆ

ಬೆಂಗಳೂರು: ಇನ್ಫೋಸಿಸ್ ಮುಖ್ಯಸ್ಥೆ ಡಾ ಸುಧಾಮೂರ್ತಿಯವರ ಹೆಸರು ಬಳಸಿಕೊಂಡು ವಂಚನೆ ಮಾಡಲಾದ ಪ್ರಕರಣ ಸಂಬಂಧ ಕೆಲ ದಿನಗಳ ಹಿಂದಷ್ಟೇ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿತ್ತು. ಈಗ  ಮತ್ತೊಂದು ವಂಚನೆ ಬಯಲಾಗಿದೆ. ಸುಧಾ ಮೂರ್ತಿ ಅವರ ಹೆಸರಿನಲ್ಲಿ ಸುಳ್ಳು ಭರವಸೆ ನೀಡಿ ವಂಚನೆ ಮಾಡಿದ ಆರೋಪದಲ್ಲಿ 34 ವರ್ಷದ ಅರುಣ್ ಕುಮಾರ್ ಎಂಬ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.



ಈ ಎರಡೂ ಪ್ರಕರಣದ ಹಿಂದೆ ಆರೋಪಿ ಅರುಣ್ ಮಾಸ್ಟರ್ ಮೈಂಡ್ ಇದೆ ಎಂಬುವುದು ಬಯಲಾಗಿದೆ.ಆರೋಪಿ ಅರುಣ್ ಕುಮಾರ್, ತಾನು ಸುಧಾ ಮೂರ್ತಿ ಅವರ ಸಂಸ್ಥೆಯ ಸಿಬ್ಬಂದಿ ಎಂದು ಸುಳ್ಳು ಹೇಳಿಯುಎಸ್‌ಎ ನಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಅಕ್ರಮವಾಗಿ ಹಣವನ್ನು ಸಂಗ್ರಹಿಸಿದ್ದರು.


ಆರೋಪಿ ಅರುಣ್ ಕುಮಾರ್ ಜನರಿಂದ 5 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಸುಧಾ ಮೂರ್ತಿ ಅವರ ಕಾರ್ಯನಿರ್ವಾಹಕ ಸಹಾಯಕಿ ಮಮತಾ ಸಂಜಯ್ ಅವರು ಸೆಪ್ಟೆಂಬರ್‌ನಲ್ಲಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ರಾಜಾಜಿನಗರದ ನಿವಾಸಿ ಅರುಣ್ ಕುಮಾರ್ ಅವರನ್ನು ಬಂಧಿಸಲಾಗಿದೆ.


ತನಿಖೆ ವೇಳೆ ಅರುಣ್ ಕುಮಾರ್ ತನ್ನ ಧ್ವನಿಯನ್ನು ಮಹಿಳೆಯಂತೆ ಬದಲಾಯಿಸಿ ಸಂಪರ್ಕಿಸಿ ಹಣ ವಂಚಿಸಿದ್ದಾನೆ ಎಂದು ಬಯಲಾಗಿದ್ದು ಸುಧಾ ಮೂರ್ತಿಯವರ ಹೆಸರು ಬಳಸಿ ಮಾಡಲಾಗಿದ್ದ ಎರಡೂ ವಂಚನೆಗಳ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಅರುಣ್ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ವಂಚನೆ ಪ್ರಕರಣದಲ್ಲಿ ಇನ್ನೆಷ್ಟು ಮಂದಿ ಶಾಮೀಲಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಅರುಣ್ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹಾಲಶ್ರೀ ಸ್ವಾಮಿಜಿ ಅರೆಸ್ಟ್ ಹಿಂದಿದೆ ಸಿಸಿಬಿ ಎಸಿಪಿ ರೀನಾ ಸುವರ್ಣ ಶ್ರಮ!

Posted by Vidyamaana on 2023-09-20 15:25:32 |

Share: | | | | |


ಹಾಲಶ್ರೀ ಸ್ವಾಮಿಜಿ ಅರೆಸ್ಟ್ ಹಿಂದಿದೆ ಸಿಸಿಬಿ ಎಸಿಪಿ ರೀನಾ ಸುವರ್ಣ ಶ್ರಮ!

ಬೆಂಗಳೂರು : ಚೈತ್ರ ಅಂಡ್ ಗ್ಯಾಂಗ್ 5 ಕೊಟ್ಟಿ ವಂಚನೆ ಸಂಬಂಧ ಹಾಲಾಶ್ರೀ ಸ್ವಾಮಿಜಿ ಸಿಸಿಬಿಗೆ ಲಾಕ್ ಆಗಿದ್ದೆ ರೋಚಕ ಸ್ವಾಮಿಜಿ ಅರೆಸ್ಟ್ ಹಿಂದಿದೆ ಎಸಿಪಿ ರೀನಾ ಸುವರ್ಣ ಟೆಕ್ನಿಕಲ್ ಎಫರ್ಟ್. ಸತತ ಐದು ದಿನಗಳಿಂದ ಸ್ವಾಮಿಜಿ ಹಿಂದೆ ಬಿದ್ದಿದ್ದ ಸಿಸಿಬಿ ತಂಡ.‌ಆದ್ರ ಮೈಸೂರಿನಿಂದ‌ ಮಿಸ್ ಆಗಿದ್ದ ಸ್ವಾಮಿಜಿ ವೇಚ ಬದಲಿಸಿ ಮೊಬೈಲ್ ಸ್ವಿಟ್ಚ್ ಆಫ್ ಮಾಡಿ ಎಸ್ಕೇಪ್ ಆಗಿದ್ರು.ಹೈದರಬಾದ್ ಮಾಹಿತಿ ಪಡೆದು ಹೈದರಬಾದ್ ಗೂ ತೆರಳಿತ್ತು ಸಿಸಿಬಿ ಟೀಮ್. ಆದ್ರೆ ಹೈದರಾಬಾದ್ ಮಠದಿಂದ ಸ್ವಾಮಿಜಿ ಟ್ರೈನ್ ಮೂಲಕ ಕಾಶಿ ಕಡೆ ಪ್ರಯಾಣ ಮಾಡಿದ್ರು.‌ ಹೈದರಬಾದ್ ಮಠವೊಂದರ ಕಾರ್ ನಲ್ಲೇ ಸ್ವಾಮಿಜಿ ರತಯಲ್ವೇ ಸ್ಟೇಷನ್ ಗೆ ಡ್ರಾಪ್ ಪಡೆದುಕೊಂಡಿದ್ರು. ಮಾರ್ಗ ಮಧ್ಯ ಹೈದರಬಾದ್ ನಲ್ಲಿ ಸ್ವಾಮಿಜಿ ಹೊಸ ಮೊಬೈಲ್ ಖರೀದಿ ಮಾಡಿದ್ರ.


ಸಿಸಿಬಿ ಪೊಲಿಲೀಸ್ರ ವಿಚಾರಣೆ ವೇಳೆ ಮಠದ ಕಾರು ಚಾಲಕ ಹೊಸ ಮೊಬೈಲ್ ಬಗ್ಗೆ ಮಾಹಿತಿ ನೀಡಿದ್ದ.‌ ನಂತರ ಶುರುವಾಗಿದ್ದೆ ಅಸಲಿ ಕಹಾನಿ.‌ ಮೊಬೈಲ್ ಐ ಎಂ ಐ ನಂಬರ್ ನಿಂದ‌ ಸ್ವಾಮಿಜಿ ಟ್ರಾಕ್ ಮಾಡಿದ ಎಸಿಪಿ ರೀನಾ ಸುವರ್ಣ ಅಂಡ್ ಟೀಮ್. ಸ್ವಾಮಿಜಿ‌ ಹೊಸ ಮೊಬೈಲ್ ನಿಂದ ತಮ್ಮ‌ಮಠ ಹಾಗೂ ಹೈದರಬಾದಗ ಮಠದ ಸ್ವಾಮಿಜಿ ಸಂಪರ್ಕ ಮಾಡಿದ್ರು. ಇದಾದ ಕೆಲವೇ ಹೊತ್ತಲ್ಲಿ ಸ್ವಾಮಿಜಿಗೆ ಪೊಲೀಸ್ರು ಹೈದರಬಾದ್ ಗೆ ಬಂದಿರೋ‌ ವಿಷಯ ಕೂಡ ತಲುಪಿತ್ತು.ಹೈದರಾಬಾದ್ ನಲ್ಲಿ ತೆಗೆದುಕೊಂಡಿದ್ದ ಮೊಬೈಲ್‌ ಸ್ವಿಟ್ಚ್ ಆಫ್ ಮಾಡಿ ಒಡಿಶಾದಲ್ಲಿ ಹೊಸ ಸಿಮ್‌ಮತ್ತು ಮೊಬೈಲ್‌ಖರೀದಿ‌ಮಾಡಿದ್ರು. ಆದ್ರೆ ಸ್ವಾಮಿಜಿ‌ ರೆಗ್ಯೂಲರ್ ಆಗಿ ಫೋನ್‌ಮಾಡಿದ್ದ ನಂಬರ್ ಮೇಲೆ‌ ಸಿಸಿಬಿ ಕಣ್ಣಿಟ್ಟಿತ್ತು.‌ ಮತ್ತೆ ಅದೇ ನಂಬರ್ ಗೆ ಸ್ವಾಮಿಜಿ ಕರೆ ಮಾಡಿದಾಗ ಸಿಸಿಬಿ ಟ್ರಾಕ್ ಗೆ ಮತ್ತೆ ಸ್ವಾಮಿಜಿ ಬಂದಿದ್ರು.


ಈ ಒಟ್ಟು ತನಿಖಾ ಸಮಯದಲ್ಲಿ ಮೊಬೈಲ್ ಐಎಂಇಐ ಸಿಡಿ ಆರ್ ಹಾಗೂ ಲೊಕೇಶ್ ಟ್ರೇಸ್ ಸೇರಿದಂತೆ ಎಲ್ಲಾ ಟೆಕ್ನಿಕಲ್ ಡಾಟವನ್ನ ಇದೇ ಎಸಿಪಿ ರೀನಾ ಸುವರ್ಣ ನಿರ್ವಹಿಸಿದ್ರು. ಸಿಸಿಬಿ ಕಚೇರಿಯಲ್ಲೇ ಕುಳಿತು ಈ ಎಲ್ಲಾ ಟೆಕ್ನಿಕಲ್ ಎವಿಡೆನ್ಸ್ ನ ಎಸಿಪಿ ರೀನಾ ಸುವರ್ಣ ಕಲೆಕ್ಟ್ ಮಾಡಿ ಸಿಸಿಬಿ ಸಿಬ್ಬಂದಿಗೆ ಕೊಟ್ಟಿದ್ರು .‌ ಇದೇ ಕಾರಣಕ್ಕೆ ಸ್ವಾಮಿಜಿಯನ್ನ ಸಿಸಿಬಿ ಪೊಲೀಸ್ರು ಈಸಿಯಾಗಿ ಕ್ಯಾಚ್ ಮಾಡಲು ಸಹಕಾರಿಯಾಗಿದೆ.

MLC Election: ಬಿಜೆಪಿ ಪಟ್ಟಿ ಪ್ರಕಟ; ಸಿ.ಟಿ ರವಿ, ಎಂ.ಜಿ ಮೂಳೆ, ರವಿಕುಮಾರ್ ಗೆ ಟಿಕೆಟ್

Posted by Vidyamaana on 2024-06-02 13:00:45 |

Share: | | | | |


MLC Election: ಬಿಜೆಪಿ ಪಟ್ಟಿ ಪ್ರಕಟ; ಸಿ.ಟಿ ರವಿ, ಎಂ.ಜಿ ಮೂಳೆ, ರವಿಕುಮಾರ್ ಗೆ ಟಿಕೆಟ್

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಶುರುವಾಗಿರುವಾಗ ಬಿಜೆಪಿ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ. ಹೀಗಾಗಿ ಇಂದು ಬಿಜೆಪಿ ಹೈಕಮಾಂಡ್ ಅಂತಿಮವಾಗಿ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.

ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಕೊನೆಗೂ ಮಾಜಿ ಸಚಿವ ಸಿ.ಟಿ ರವಿ, ಎನ್. ರವಿಕುಮಾರ್ ಮತ್ತು ಎಂ.ಜಿ ಮೂಳೆ ಅವರಿಗೆ ಮಣೆ ಹಾಕಿದೆ. ಎಂಎಲ್‌ಸಿ ಚುನಾವಣೆಗೆ ಸಾಕಷ್ಟು ಮಂದಿಯ ಹೆಸರು ಕೇಳಿ ಬಂದರು ಅಂತಿಮವಾಗಿ ಬಿಜೆಪಿ ವರಿಷ್ಠರು ಮೂವರ ಹೆಸರು ಅಂತಿಮಗೊಳಿಸಿದ್ದಾರೆ.

ಭಾರತಕ್ಕೆ 302 ರನ್ ಗಳ ಗೆಲುವು: ಶಮಿ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಲಂಕಾ

Posted by Vidyamaana on 2023-11-02 21:07:57 |

Share: | | | | |


ಭಾರತಕ್ಕೆ 302 ರನ್ ಗಳ  ಗೆಲುವು: ಶಮಿ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಲಂಕಾ

ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಂ ನಲ್ಲಿ ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಅಬ್ಬರಕ್ಕೆ ನಲುಗಿ ಹೋದ ಶ್ರೀಲಂಕಾ ವಿಶ್ವಕಪ್ ಆಸೆ ಕೈಬಿಟ್ಟಿತು. 302 ರನ್‌ಗಳ ದಾಖಲೆಯ ಜಯ ಸಾಧಿಸಿದ ಭಾರತ ಅಜೇಯ ಯಾತ್ರೆ ಮುಂದುವರಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮತ್ತೆ ವಿರಾಜಮಾನವಾಗಿದೆ. ಲಂಕಾ ಆಡಿದ 7 ಪಂದ್ಯಗಳಲ್ಲಿ 5 ನೇ ಸೋಲು ಅನುಭವಿಸಿತು.

ಭಾರತ ತಂಡ ನೀಡಿದ 358 ರನ್ ಗಳ ದೊಡ್ಡ ಮೊತ್ತ ಬೆನ್ನಟ್ಟಿದ್ದ ಲಂಕಾ ಆರಂಭದಿಂದಲೇ ಭಾರತದ ವೇಗಿಗಳ ದಾಳಿ ತಡೆಯಲಾಗದೆ ನಡುಗಿತು. ಒಬ್ಬರಾದ ಬಳಿಕ ಒಬ್ಬರು ಪೆವಿಲಿಯನ್ ಪರೇಡ್ ನಡೆಸಿದರು. 14ಕ್ಕೆ 6 ವಿಕೆಟ್ ಕಳೆದುಕೊಂಡ ಲಂಕಾ ಕೊನೆಗೂ 55 ರನ್ ಗಳಿಸುವಲ್ಲಿ ಯಶಸ್ವಿಯಾಗಿ ಏಷ್ಯಾ ಕಪ್ ಫೈನಲ್ ನಲ್ಲಿ ಅನುಭವಿಸಿದ ಸೋಲಿನ ಕೆಟ್ಟ ದಾಖಲೆಯಿಂದ ದೂರವಾಯಿತು. ಏಷ್ಯಾ ಕಪ್ ನಲ್ಲಿ ಸಿರಾಜ್ ದಾಳಿಗೆ ನಲುಗಿ 50 ಕ್ಕೆ ಆಲೌಟಾಗಿ ಹೀನಾಯ ಸೋಲು ಅನುಭವಿಸಿತ್ತು. 19.4 ಓವರ್ ಗಳಲ್ಲಿ 55 ರನ್ ಗಳಿಗೆ ಆಲೌಟಾಯಿತು.


ಶಮಿ ಮತ್ತೆ ಮೋಡಿ

ಹಾರ್ದಿಕ್ ಪಾಂಡ್ಯ ಗಾಯಾಳಾಗಿ ತಂಡದಿಂದ ಹೊರ ಬಿದ್ದ ಕಾರಣ ಆಡುವ ಬಳಗದಲ್ಲಿ ಕಾಣಿಸಿಕೊಂಡ ವೇಗಿ ಮೊಹಮ್ಮದ್ ಶಮಿ ವಿಶ್ವಕಪ್ ನಲ್ಲಿ ಮತ್ತೊಮ್ಮೆ ಐದು ವಿಕೆಟ್ ಸಾಧನೆ ಮಾಡಿದರು. 5 ಓವರ್ ಎಸೆದು 1 ಮೇಡನ್ ಸಹಿತ 18 ರನ್ ನೀಡಿ 5 ವಿಕೆಟ್ ಕಬಳಿಸಿ ತಂಡದಲ್ಲಿ ತನ್ನ ಸಾಮರ್ಥ್ಯ ಮೆರೆದರು.


ಶಮಿ ಏಕದಿನ ಇತಿಹಾಸದಲ್ಲಿ ಸತತ ಮೂರು ಬಾರಿ 4 ಪ್ಲಸ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. 2019 ರ ವಿಶ್ವಕಪ್‌ನಲ್ಲಿ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ 4/40, 4/16 ಮತ್ತು 5/69 ರ ನಂತರ ಇದು ಅವರ ಎರಡನೇ ಸರಣಿಯಾಗಿದೆ. ವಕಾರ್ ಯೂನಿಸ್ ಮಾತ್ರ ಈ ಸಾಧನೆಯನ್ನು ಸಾಧಿಸಿದ್ದರು ಮೂರು ಬಾರಿ (1990 ರಲ್ಲಿ ಎರಡು ಬಾರಿ ಮತ್ತು 1994 ರಲ್ಲಿ ಒಮ್ಮೆ). ವಿಶ್ವಕಪ್‌ನಲ್ಲಿ ಭಾರತದ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮೊಹಮ್ಮದ್ ಶಮಿ ಅವರ ಹೆಸರಿನಲ್ಲಿ ದಾಖಲಾಯಿತು. ಒಟ್ಟು 45 ವಿಕೆಟ್ ಪಡೆದಿದ್ದಾರೆ. ಜಹೀರ್ ಖಾನ್ 44 ವಿಕೆಟ್ ಪಡೆದಿದ್ದರು.

ಬದಿಯಡ್ಕ: ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ಅಬ್ದುಲ್ ರಹ್ಮಾನ್-ತಾಹಿರಾ ದಂಪತಿಗಳ ನವಜಾತ ಶಿಶು ಮೃತ್ಯು

Posted by Vidyamaana on 2023-02-18 14:42:11 |

Share: | | | | |


ಬದಿಯಡ್ಕ: ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ಅಬ್ದುಲ್ ರಹ್ಮಾನ್-ತಾಹಿರಾ ದಂಪತಿಗಳ ನವಜಾತ ಶಿಶು ಮೃತ್ಯು

ಬದಿಯಡ್ಕ : ತಾಯಿಯ ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ನವಜಾತ ಶಿಶು ಸಾವಿಗೀಡಾಗಿದ ಹೃದಯ ವಿದ್ರಾವಕ ಘಟನೆ ಬದಿಯಡ್ಕದಲ್ಲಿ ವರದಿಯಾಗಿದೆ. ಎದೆಹಾಲು ಗಂಟಲಲ್ಲಿ ಸಿಲುಕಿ ಉಕ್ಕಿನಡ್ಕ ನಿವಾಸಿಗಳಾದ ಅಬ್ದುಲ್ ರಹ್ಮಾನ್-ತಾಹಿರಾ ದಂಪತಿಯ ದಿನದ 25 ಹಸುಗೂಸು ಸಾವಿಗೀಡಾಗಿದೆ.

     ಫೆ. 16ರಂದು ಮಗುವಿಗೆ ಎದೆ ಹಾಲು ಉಣಿಸುತ್ತಿದ್ದಾಗ ಹಾಲು ಗಂಟಲಲ್ಲಿ ಸಿಲುಕಿಕೊಂಡು ಮಗು ಅಸ್ವಸ್ಥಗೊಂಡಿತು. ಕೂಡಲೇ ಮಗುವನ್ನು ಬದಿಯಡ್ಕ ಸರಕಾರಿ ಆಸ್ಪತ್ರೆಗೆ ಆ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೂ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾ.10 : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಲೆಕ್ಕಪತ್ರ ಮಂಡನೆ ಸಭೆ

Posted by Vidyamaana on 2024-03-07 18:06:31 |

Share: | | | | |


ಮಾ.10 : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಲೆಕ್ಕಪತ್ರ ಮಂಡನೆ ಸಭೆ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವವು ಜ.15 ರಿಂದ 21 ರ ತನಕ ಭಕ್ತವೃಂದದ ಪೂರ್ಣ ಸಹಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆದಿರುವುದು ನಿಮ್ಮೆಲ್ಲರಿಗೂ ತಿಳಿದ ವಿಚಾರ. ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರೆ, ಬ್ರಹ್ಮರಥೋತ್ಸವದ ಲೆಕ್ಕಪತ್ರದ ಮಂಡನೆಯು‌10-03-2024 ರಂದು ಬೆಳಿಗ್ಗೆ 9 ಕ್ಕೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದ್ದು ಈ ಸಂದರ್ಭ ಎಲ್ಲ ಭಗವದ್ಭಕ್ತರು ಪಾಲ್ಗೊಳ್ಳಬೇಕಾಗಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ‌ ಮಾಜಿ‌ ಅಧ್ಯಕ್ಷ ಪಿ.ಪದ್ಮನಾಭ ಶೆಟ್ಟಿ ತಿಳಿಸಿದ್ದಾರೆ.



Leave a Comment: