ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


ಪುತ್ತೂರು ವಿಧಾನಸಭಾ ಕ್ಷೇತ್ರದ ಎನ್‌ಎಸ್‌ಯುಐ ಅಧ್ಯಕ್ಷರಾಗಿ ಎಡ್ವರ್ಡ್ ನೇಮಕ

Posted by Vidyamaana on 2024-03-28 20:08:33 |

Share: | | | | |


ಪುತ್ತೂರು ವಿಧಾನಸಭಾ ಕ್ಷೇತ್ರದ ಎನ್‌ಎಸ್‌ಯುಐ ಅಧ್ಯಕ್ಷರಾಗಿ ಎಡ್ವರ್ಡ್ ನೇಮಕ

ಪುತ್ತೂರು: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, ಎನ್‌ಎಸ್‌ಯುಐ ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಎಡ್ವರ್ಡ್ ಪುತ್ತೂರುರವರನ್ನು ಆಯ್ಕೆ ಮಾಡಲಾಗಿದೆ. ಎನ್‌ಎಸ್‌ಯುಐ ಜಿಲ್ಲಾ ಉಸ್ತುವಾರಿಗಳಾದ ಝಕೀರ್ ಹುಸೈನ್ ಮತ್ತು ಭರತ್ ರಾಮ್ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಎಡ್ವರ್ಡ್‌ರವರು ಪ್ರಸ್ತುತ ಪುತ್ತೂರಿನ ಸರಕಾರಿ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದು NSUI ವಿದ್ಯಾರ್ಥಿ ಸಂಘಟನೆಯಲ್ಲಿ 6 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಅಮ್ಮಿನಡ್ಕ ನಿವಾಸಿ ಮಿಂಗಲ್ ಡಿಸೋಜ ಮತ್ತು ಗ್ರೇಸಿ ಡಿಸೋಜ ದಂಪತಿಯ ಪುತ್ರ.

ಪುತ್ತೂರಿಗೆ ಆಗಮಿಸಿದ ಶೌರ್ಯ ಜಾಗರಣ ರಥಯಾತ್ರೆ

Posted by Vidyamaana on 2023-10-07 17:48:26 |

Share: | | | | |


ಪುತ್ತೂರಿಗೆ ಆಗಮಿಸಿದ ಶೌರ್ಯ ಜಾಗರಣ ರಥಯಾತ್ರೆ

ಪುತ್ತೂರು: ಹಿಂದೂ ಜಾಗೃತಿಗಾಗಿ ಆರಂಭವಾದ ವಿಶ್ವ ಹಿಂದೂ ಪರಿಷತ್‌ಗೆ ಇದೀಗ 60 ವರ್ಷಗಳ ಸಂಭ್ರಮ. ಹೀಗಾಗಿ ಭಾರತದಲ್ಲಿ ಈಗಾಗಲೇ ಶೌರ್ಯ ಜಾಗರಣ ರಥ ಯಾತ್ರೆ ಆರಂಭವಾಗಿದೆ. ಕರ್ನಾಟಕದಲ್ಲೂ ಚಿತ್ರದುರ್ಗದಿಂದ ಕರಾವಳಿ ಜಿಲ್ಲೆ ಉಡುಪಿಗೆ ಶೌರ್ಯ ರಥ ಯಾತ್ರೆ ಹಮ್ಮಿಕೊಂಡಿದ್ದು ಸೆಪ್ಟೆಂಬರ್ 25ರಂದು ಚಿತ್ರದುರ್ಗದಿಂದ ಹೊರಟ ರಥ ಯಾತ್ರೆ  ಪುತ್ತೂರಿಗೆ  ಆಗಮಿಸಿದೆ.


ಪುತ್ತೂರಿನ ಬೊಳವಾರಿನಲ್ಲಿ ಹಿಂದೂ ಶೌರ್ಯ ಜಾಗರಣ ರಥಯಾತ್ರೆಗೆ ಅದ್ಧೂರಿ ಸ್ವಾಗತ ನಡೆದು, ಅಲ್ಲಿಂದ ಕಿಲ್ಲೆ ಮೈದಾನದವರೆಗೆ ವಿಜ್ರಂಭಣೆಯ ಶೋಭಾಯಾತ್ರೆ ಸಾಗಲಿದೆ. ಇನ್ನು ಶೋಭಾಯಾತ್ರೆಯು ಶಂಖನಾದ, ಭಜನೆ, ಕೀರ್ತನೆಗಳು, ದೇಶದ ಮಹಾಪುರುಷರ ,ಶೌರ್ಯ ಪರಾಕ್ರಮಗಳ, ಬಲಿದಾನಗೈದ ವೀರರ ಸ್ತಬ್ದ ಚಿತ್ರಗಳೊಂದಿಗೆ, ಚಂಡೆ, ಕೊಂಬು ವಾದನಗಳೊಂದಿಗೆ ಅದ್ದೂರಿ ಶೋಭಾಯಾತ್ರೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ರೀತಿಯಲ್ಲಿ ರಾಜಮಾರ್ಗದಲ್ಲಿ ಸಾಗಲಿದೆ. ಇದಾದ ಬಳಿಕ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಶೋಭಾಯಾತ್ರೆ ಸಮಾವೇಶಗೊಳ್ಳಲಿದೆ.


ಸಮಾರೋಪ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಜೇಷ್ಟ ಪ್ರಚಾರಕ್ ಸು ರಾಮಣ್ಣ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಉಡುಪಿ : ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ

Posted by Vidyamaana on 2024-04-03 16:50:40 |

Share: | | | | |


ಉಡುಪಿ : ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ

ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.ಬೆಳಿಗ್ಗೆ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದ ಅವರು ಬಳಿಕ ನೂರಾರು ಕಾರ್ಯಕರ್ತರ ಜೊತೆ ತೆರಳಿ ನಾಮಪತ್ರ ಸಲ್ಲಿಸಿದರು.

ಕುಂದಾಪುರದಲ್ಲಿ ನದಿಯಲ್ಲಿ ನಾಪತ್ತೆಯಾಗಿದ್ದ ಐವರ್ನಾಡಿನ ಸುಹಾಸ್ ಮೃತದೇಹ ಪತ್ತೆ

Posted by Vidyamaana on 2023-05-06 08:42:14 |

Share: | | | | |


ಕುಂದಾಪುರದಲ್ಲಿ ನದಿಯಲ್ಲಿ ನಾಪತ್ತೆಯಾಗಿದ್ದ ಐವರ್ನಾಡಿನ ಸುಹಾಸ್ ಮೃತದೇಹ ಪತ್ತೆ

ಸುಳ್ಯ: ನಿನ್ನೆ ಕುಂದಾಪುರದ ಸಮೀಪದ ಬಿಡ್ಕಲ್ ಕಟ್ಟೆಯ ಸೌಡ ಹೊಳೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿ ಮುಳುಗಿ ನಾಪತ್ತೆಯಾಗಿದ್ದ ಸುಳ್ಯದ ಐವರ್ನಾಡಿನ ಯುವಕನ ಮೃತದೇಹ ನದಿಯಲ್ಲಿ ನಿನ್ನೆ ಪತ್ತೆಯಾಗಿದೆ.ಅಗ್ನಿ ಶಾಮಕ ದಳದವರು ಮತ್ತು ಮುಳುಗುತಜ್ಞರು ಸತತ ಹುಡುಕಾಟ ನಡೆಸಿದ್ದು ನದಿಗೆ ಇಳಿದ 300 ಮೀ ಅಂತರದಲ್ಲಿ ಮೃತದೇಹ ಪತ್ತೆಯಾಗಿದೆ.

ಕುಂದಾಪುರ ತಾಲೂಕಿನ ಬಿಟ್ಕಲ್ ಕಟ್ಟೆ ಸಮೀಪದ ಸೌಡ ಎಂಬಲ್ಲಿ ಐವರ್ನಾಡು ಗ್ರಾಮದ ಮಡ್ತಿಲ ಮೀರನಾಥ್ ಗೌಡ ಎಂಬುವರ ಮಗ ಸುಹಾಸ್.ಎಂ. (21) ಮಧ್ಯಾಹ್ನ ಹೊಳೆಗೆ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ತೆರಳಿ ನಾಪತ್ತೆಯಾಗಿದ್ದರು.

ಸುಹಾಸ್ ಮೂಡಬಿದ್ರೆಯ ಆಯುರ್ವೇದ ಔಷಧಿ ಕಂಪೆನಿಯೊಂದರ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದು, ಎ.29 ರಂದು ಬೆಳಿಗ್ಗೆ ತನ್ನ ಮನೆಯಾದ ಐವರ್ನಾಡಿನ ಮಡ್ತಿಲದಿಂದ ಮೂಡಬಿದ್ರೆಗೆ ಬಂದಿದ್ದರು. ಅಲ್ಲಿಂದ ಸ್ನೇಹಿತರೊಂದಿಗೆ ಸೌಡ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದರು. ಸೌಡ ಸಮೀಪದ ಹೊಳೆಯಲ್ಲಿ ನೀರಿಗಿಳಿದ ಸುಹಾಸ್ ಆಕಸ್ಮಿಕವಾಗಿ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂತರಿಕ ಭದ್ರತಾ ವಿಭಾಗಕ್ಕೆ ರವಿ ಡಿ ಚನ್ನಣ್ಣನವರ್ ವರ್ಗಾವಣೆ

Posted by Vidyamaana on 2023-06-08 15:23:05 |

Share: | | | | |


ಆಂತರಿಕ ಭದ್ರತಾ ವಿಭಾಗಕ್ಕೆ ರವಿ ಡಿ ಚನ್ನಣ್ಣನವರ್ ವರ್ಗಾವಣೆ

ಬೆಂಗಳೂರು: ಕಿಯೋನಿಕ್ಸ್ ಎಂಡಿ ಆಗಿದ್ದ ರವಿ ಡಿ ಚನ್ನಣ್ಣನವರ್ ಅವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಉಪ ಮಹಾ ನಿರೀಕ್ಷಕರಾಗಿ ರವಿ ಡಿ ಚನ್ನಣ್ಣನವರ್ ಅವರನ್ನು ನೇಮಕ ಮಾಡಲಾಗಿದೆ.ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿಯಿಂದ ಅಲೋಕ್ ಕುಮಾರ್​

ಅವರನ್ನು ಎಡಿಜಿಪಿ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಉಮೇಶ್ ಕುಮಾರ್ ಅವರನ್ನು ಎಡಿಜಿಪಿ ಕ್ರೈಂ & ಟೆಕ್ನಿಕಲ್ ಸರ್ವಿಸ್​, ಆರ್ ಹಿತೇಂದ್ರ ಅವರನ್ನು ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸೌಮೇಂದು ಮುಖರ್ಜಿ ಅವರನ್ನು ಎಡಿಜಿಪಿ ಪೊಲೀಸ್ ಆಡಳಿತ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.

ಪುತ್ತೂರು ನಗರಸಭಾ ಉಪಚುನಾವಣೆ : ತೆರವಾದ ಎರಡು ಸ್ಥಾನಗಳಿಗೆ ಇಂದು (ಡಿ. 27)ಚುನಾವಣೆ

Posted by Vidyamaana on 2023-12-27 10:05:49 |

Share: | | | | |


ಪುತ್ತೂರು ನಗರಸಭಾ ಉಪಚುನಾವಣೆ : ತೆರವಾದ ಎರಡು ಸ್ಥಾನಗಳಿಗೆ ಇಂದು (ಡಿ. 27)ಚುನಾವಣೆ

ಪುತ್ತೂರು : ನಗರ ಸಭಾ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ (ಡಿ.27) ಉಪಚುನಾವಣೆ ನಡೆಯಲಿದೆ.ಬಹಳ ಕೂತೂಹಲ ಮೂಡಿಸಿರುವ ನಗರಸಭಾ ಉಪಚುನಾವಣೆಗೆ ಕೆಲ ಗಂಟೆಗಳಷ್ಟೇ ಬಾಕಿಯಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಪುತ್ತಿಲ ಪರಿವಾರದ ಅಭ್ಯರ್ಥಿಗಳು ಪಕ್ಷೇತರರಾಗಿ ಚುನಾವಣಾ ಕಣದಲ್ಲಿದ್ದಾರೆ.


ವಾರ್ಡ್-11 ನೆಲ್ಲಿಕಟ್ಟೆಯ ಉಪಚುನಾವಣೆಯು ಕೊಂಬೆಟ್ಟು ಶಾಲೆಯಲ್ಲಿ ಹಾಗೂ ವಾರ್ಡ್-1 ರಕ್ತೇಶ್ವರಿ ವಠಾರದ ಉಪಚುನಾವಣೆಯು ಸುದಾನಶಾಲೆಯಲ್ಲಿ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ.ಅಭ್ಯರ್ಥಿಗಳ ವಿವರ :


ಬಿಜೆಪಿಯಿಂದ ನಗರಸಭೆಯ ವಾರ್ಡ್ 1ರ ಅಭ್ಯರ್ಥಿಯಾಗಿ ಸುನೀತಾ, ನಗರಸಭೆಯ ವಾರ್ಡ್ 11ರ ಅಭ್ಯರ್ಥಿಯಾಗಿ ರಮೇಶ್ ರೈ ಕಣದಲ್ಲಿದ್ದಾರೆ.

ಕಾಂಗ್ರೆಸ್ ನಿಂದ ನಗರಸಭೆಯ ವಾರ್ಡ್ 1ರ ಅಭ್ಯರ್ಥಿಯಾಗಿ ದಿನೇಶ್ ಶೇವಿರೆ ಹಾಗೂ ನಗರಸಭೆಯ ವಾರ್ಡ್ 11ರ ಅಭ್ಯರ್ಥಿಯಾಗಿ ದಾಮೋದರ ಭಂಡಾರ್ಕರ್ ಕಣದಲ್ಲಿದ್ದಾರೆ.

ಪುತ್ತಿಲ ಪರಿವಾರದಿಂದ ವಾರ್ಡ್ 11 ರ ಅಭ್ಯರ್ಥಿಯಾಗಿ ಚಿಂತನ್ ಪಿ., ವಾರ್ಡ್ 1 ರ ಅಭ್ಯರ್ಥಿಯಾಗಿ ಅನ್ನಪೂರ್ಣ ಎಸ್.ಕೆ. ಕಣದಲ್ಲಿದ್ದಾರೆ.



(ಡಿ.27) ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದ್ದು, ಅವಶ್ಯವಿದ್ದರೆ ಡಿ.29ರಂದು ಮರು‌ಮತದಾನ ನಡೆದು ಡಿ.30 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.


ನಗರ ಸಭಾ ವ್ಯಾಪ್ತಿ ಹಾಗೂ ಉಪ ಚುನಾವಣೆ ನಡೆಯುವ ವಾರ್ಡ್ ಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ಡಿ.8 ರಿಂದ 30 ರ ತನಕ ಜಾರಿಯಲ್ಲಿರಲಿದೆ.



Leave a Comment: