ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಸುದ್ದಿಗಳು News

Posted by vidyamaana on 2024-07-03 13:36:16 |

Share: | | | | |


ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಬೆಂಗಳೂರು (ಜು.3): ಇಲ್ಲಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು.

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಮದುವೆಯಾಗಿದ್ದ ಶ್ರೀಕಾಂತ್!

ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 Share: | | | | |


ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಮುರುಘಾಶ್ರೀ ಗೆ ಜಾಮೀನು

Posted by Vidyamaana on 2023-11-08 18:18:21 |

Share: | | | | |


ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ  ಮುರುಘಾಶ್ರೀ ಗೆ ಜಾಮೀನು

ಬೆಂಗಳೂರು, ನ.8: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶ್ರೀಗೆ ಜಾಮೀನು ಸಿಕ್ಕಿದೆ. ಒಂದು ಪ್ರಕರಣದಲ್ಲಿ ಮಾತ್ರ ಮುರುಘಾ ಶ್ರೀಗೆ ಜಾಮೀನು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಬಿಡುಗಡೆ ಭಾಗ್ಯ ಇಲ್ಲ. ಜಾಮೀನ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ಕೋರ್ಟ್​, ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂದು ಹೇಳುವ ಮೂಲಕ ಚಿತ್ರದುರ್ಗ ಹೋಗದಂತೆ ಷರತ್ತು ವಿಧಿಸಿದೆ. ಮೊದಲು ದಾಖಲಾಗಿದ್ದ ಒಂದು ಪ್ರಕರಣದಲ್ಲಿ ಜಾಮೀನು ಲಭ್ಯವಾಗಿದ್ದು, ಪೋಕ್ಸೋ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣದಲ್ಲಿ ಅವರು ಜೈಲಿನಲ್ಲಿ ಉಳಿದುಕೊಳ್ಳಲಿದ್ದಾರೆ.


ವಕೀಲರು ಹೇಳಿದ್ದೇನು?


ಈ ಬಗ್ಗೆ ಮಾಹಿತಿ ನೀಡಿರುವ ಮುರುಘಾಶ್ರೀ ಪರ ವಕೀಲಸ್ವಾಮೀನಿ ಗಣೇಶ್, ಏಳು ಷರತ್ತುಗಳ ಮೇಲೆ ಮುರುಘಾಶ್ರೀ ಜಾಮೀನು ಲಭ್ಯವಾಗಿದೆ. ಪಾಸ್‌ಪೋರ್ಟ್ ಸರೆಂಡರ್‌ ಮಾಡಬೇಕು. ವಿಟ್ನೆಸ್ ಗಳ ಮೇಲೆ ಪ್ರಭಾವ ಬೀರಬಾರದು. ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ. ಎರಡು ಲಕ್ಷ ಬಾಂಡ್ ಹಾಗೂ ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಮೇರೆಗೆ ಜಾಮೀನು ಮಂಜೂರು ಮಾಡಲಾಗಿದೆ ಎಂಬ ವಿವರಿಸಿದ್ದಾರೆ.

ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದ ಹಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಮುರುಘಾ ಶ್ರೀ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನಡೆಸಿದ್ದು, ಇದೀಗ ನ್ಯಾಯಾಲಯ ಮುರುಘಾ ಶ್ರೀಗೆ ಜಾಮೀನು  ಮಾಡಿದೆ. 


2022ರ ಸೆಪ್ಟೆಂಬರ್ 1ರಿಂದ ಜೈಲುವಾಸ ಅನುಭವಿಸುತ್ತಿರುವ ಮುರುಘಾ ಶ್ರೀಯ ಜಾಮೀನು ಅರ್ಜಿಯನ್ನು ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿತ್ತು. ನಂತರ ಜಾಮೀನಿಗಾಗಿ ಮುರುಘಾ ಶ್ರೀ ಪರ ವಕೀಲರು ಹೈಕೋರ್ಟ್​ ಮೆಟ್ಟಲೇರಿದ್ದರು. ಈ ಜಾಮೀನು ಅರ್ಜಿಯ ತೀರ್ಪನ್ನು ಇಂದು ಕರ್ನಾಟಕ ಹೈಕೋರ್ಟ್ ಪ್ರಕಟಿಸಿದೆ.


ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದ ಹಲವು ವಿದ್ಯಾರ್ಥಿನಿಯರಿಗೆ ಮುರುಘಾ ಶ್ರೀ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಕದ ತಟ್ಟಿದ್ದರು. ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿ ನಿಲಯದಲ್ಲಿರುವ ನಮ್ಮನ್ನು ಮುರುಘಾ ಶ್ರೀ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.


ಅಲ್ಲದೇ, ಮುರುಘಾ ಶ್ರೀಗಳಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ಅವರೇ ನಮ್ಮನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಇದ್ದ ಸ್ಥಳಕ್ಕೆ ತೆರಳಿದರೆ ಅಲ್ಲಿ ನಮಗೆ ನಶೆ ಬರುವಂತೆ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಆರೋಪಿಸಿ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು.

ಆಸ್ಪತ್ರೆಗೆ ತೆರಳಿ ಮನೆಗೆ ಮರಳುತ್ತಿದ್ದ ದಂಪತಿಗೆ ಅಪಘಾತ – ಪತ್ನಿ ದಾರುಣ ಸಾವು

Posted by Vidyamaana on 2024-01-29 18:51:49 |

Share: | | | | |


ಆಸ್ಪತ್ರೆಗೆ ತೆರಳಿ ಮನೆಗೆ ಮರಳುತ್ತಿದ್ದ ದಂಪತಿಗೆ ಅಪಘಾತ – ಪತ್ನಿ ದಾರುಣ ಸಾವು

ಪುತ್ತೂರು:ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಬೈಕ್ ಹಾಗೂ ಟಿಪ್ಪರ್ ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್‌ನ ಹಿಂಬದಿ ಸವಾರೆ, ಮಾಣಿ ಖಾಸಗಿ ಶಾಲಾ ಶಿಕ್ಷಕಿ ಮೃತಪಟ್ಟಿರುವ ಘಟನೆ ಜ.29ರಂದು ಮಧ್ಯಾಹ್ನ ನಡೆದಿದೆ.ಬಂಟ್ವಾಳ ತಾಲೂಕು ಇಡಿದು ಗ್ರಾಮದ ಮಿತ್ತೂರು ಮದಕ ಸುರೇಶ್ ಕುಲಾಲ್ ಪತ್ನಿ ಅನಿತಾ(35ವ.) ಮೃತಪಟ್ಟವರು. ಮಾಣಿ ಸಮೀದ ಗಡಿಯಾರ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಅನಿತಾ ಕೆಲ ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಜ.29ರಂದು ಬೆಳಿಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಚಿಕಿತ್ಸೆ ಪಡೆದು ಬೈಕ್‌ನಲ್ಲಿ ಹಿಂತಿರುಗುವ ವೇಳೆ ಕಬಕ ಸಮೀಪ ಪೋಳ್ಯ ಎಂಬಲ್ಲಿ ಮಣ್ಣು ರಸ್ತೆಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿ ಏಕಾಏಕಿ ಡಂಬಾರು ರಸ್ತೆ ಗೆ ಬಂದಾಗ ಬೈಕ್ ಸಾವರನಿಗೆ ನಿಯಂತ್ರಣ ತಪ್ಪಿ  ಟಿಪ್ಪರ್ ಲಾರಿಗೆ  ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿ ಸವಾರೆ ಅನಿತಾ ಹಾಗೂ ಅವರು ಮಗು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಬೊಳುವಾರು ಮಹಾವೀರ ಆಸ್ಪತ್ರೆಗೆ ಕರೆ ತರಲಾಗಿದ್ದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಮಗುವಿನ ಭುಜದ ಭಾಗಕ್ಕೆ ಸಣ್ಣ ಪುಟ್ಟ ಗಾಯವಾಗಿದ್ದು, ಸುರೇಶ್ ಕುಲಾಲ್ ಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.ಮೃತರ ಪತಿ ಸುರೇಶ್ ಕುಲಾಲ್ ನೀಡಿದ ದೂರಿನಂತೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತಿ ಸುರೇಶ್ ಕುಲಾಲ್, ಪುತ್ರಿ ಋತ್ವಿಯವರನ್ನು ಅಗಲಿದ್ದಾರೆ.

ಕುರಿಯ ಓಟಿತ್ತಿಮ್ಮಾರಿನಲ್ಲಿ ಪರಿಶಿಷ್ಟ ಜಾತಿ ಕಾಲನಿ ಅಭಿವೃದ್ಧಿಗೆ ಅನುದಾನ ಬಿಡುಗಡೆ

Posted by Vidyamaana on 2024-01-14 12:59:09 |

Share: | | | | |


ಕುರಿಯ ಓಟಿತ್ತಿಮ್ಮಾರಿನಲ್ಲಿ ಪರಿಶಿಷ್ಟ ಜಾತಿ ಕಾಲನಿ ಅಭಿವೃದ್ಧಿಗೆ ಅನುದಾನ ಬಿಡುಗಡೆ


ವರದಿ : ನಿಝರ್ ಅಜ್ಜಿಕಟ್ಟೆ

ಪುತ್ತೂರು ವಿಧಾನಸಭಾ ಕ್ಷೇತ್ರದ ಕುರಿಯ ಗ್ರಾಮದ ಓಟಿತ್ತಿಮ್ಮಾರು ಎಂಬಲ್ಲಿಯ ಪರಿಶಿಷ್ಟ ಜಾತಿ ಕಾಲೋನಿಗೆ ಶಾಸಕ ಅಶೋಕ್ ಕುಮಾರ್ ರೈ 5 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಈ ಕಾಮಗಾರಿಯ ಗುದ್ದಲಿ ಪೂಜೆ ಜ.10ರಂದು ನಡೆಯಿತು 

ಗುದ್ದಲಿ ಪೂಜೆಯನ್ನು ಈ ಭಾಗದ ಹಿರಿಯರಾದ ರಾಮಕೃಷ್ಣ ಭಟ್ ಮತ್ತು ಮುಹಮ್ಮದ್  (ಮೋನು) ನೇರವೇರೆಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಬೂಡಿಯಾರ್ ಪುರುಷೋತ್ತಮ ರೈ ಕುರಿಯ ಗ್ರಾಮ ಪಂಚಾಯತ್  ಸದಸ್ಯರಾದ ಯಾಕೂಬ್, ನಾಗೇಶ ಎಂ ಹಾಗೂ ಬಸೀರ್ ಕರೆಜ್ಜ, ನೌಷಾದ್, ಸೇಲಿಂ ಕೊಟ್ರಾಸ್, ಕೊರಗ, ಶೀನಪ್ಪ ಗೌಡ, ನೆಬಿಸ, ಸೇಲಿನ, ಜುಬೈದ, ಕುಸುಮ, ಸುಂದರಿ, ಜಾನಕಿ ಮೊದಲಾದವರು ಉಪಸ್ಥಿತರಿದ್ದರು.

BIG NEWS : ವಾರಾಣಸಿಯಲ್ಲಿ ಪ್ರಧಾನಿ ಮೋದಿ ಕಾರಿನ ಮೇಲೆ ಚಪ್ಪಲಿ ಎಸೆತ! Watch Video

Posted by Vidyamaana on 2024-06-20 11:59:54 |

Share: | | | | |


BIG NEWS : ವಾರಾಣಸಿಯಲ್ಲಿ ಪ್ರಧಾನಿ ಮೋದಿ ಕಾರಿನ ಮೇಲೆ ಚಪ್ಪಲಿ ಎಸೆತ! Watch Video

ರಣಾಸಿ : ವಾರಣಾಸಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರಿನ ಮೇಲೆ ಚಪ್ಪಲಿ ಎಸೆದ ಘಟನೆ ಮಂಗಳವಾರ ನಡೆದಿದೆ.

ಪ್ರಧಾನಿಯನ್ನು ಸ್ವಾಗತಿಸಲು ನೆರೆದಿದ್ದ ಜನಸಮೂಹವನ್ನು ಅವರ ಬೆಂಗಾವಲು ಹಾದುಹೋಗುತ್ತಿದ್ದಂತೆ ಅವರ ಕಾರಿನ ಮೇಲೆ ಚಪ್ಪಲಿ ಎಸೆಯಲಾಯಿತು.ಭದ್ರತಾ ಸಿಬ್ಬಂದಿ ಚಪ್ಪಲಿಯನ್ನು ತೆಗೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ವಿಟ್ಲ ಪೊಲೀಸ್ ಠಾಣೆಗೆ ಪಶ್ಚಿಮ ವಲಯ ಐ.ಜಿ.ಡಾ. ಚಂದ್ರಗುಪ್ತ ಭೇಟಿ

Posted by Vidyamaana on 2023-04-04 12:50:07 |

Share: | | | | |


ವಿಟ್ಲ ಪೊಲೀಸ್ ಠಾಣೆಗೆ ಪಶ್ಚಿಮ ವಲಯ ಐ.ಜಿ.ಡಾ. ಚಂದ್ರಗುಪ್ತ  ಭೇಟಿ

ವಿಟ್ಲ: ಚುನಾವಣಾ ನೀತಿ ಜಾರಿಯಾಗುತ್ತಿದ್ದಂತೆ ತಪಾಸಣಾ ಕೇಂದ್ರಗಳನ್ನು ಅಳವಡಿಸಲಾಗಿದೆ. ಶಾಶ್ವತವಾದ ಚೆಕ್ ಪೋಸ್ಟ್ ಹೊರತಾಗಿ ಬಿಟ್ಟ ರಸ್ತೆಗಳನ್ನು ಸೇರಿಸಿ ಒಳ ಮಾರ್ಗಗಳಿಗೆ ಹೆಚ್ಚುವರಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮುಂದಿನ ಎರಡು ದಿನದಲ್ಲಿ ಪ್ಯಾರಾ ಮಿಲಿಟರಿಯನ್ನು ಕರೆಸಿಕೊಳ್ಳಲಾಗುತ್ತಿದ್ದು, ಅವರಿಂದಲೂ ತಪಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಪಶ್ಚಿಮ ವಲಯ ಐ.ಜಿ. ಡಾ.ಚಂದ್ರಗುಪ್ತ ಹೇಳಿದರು.

ಚುನಾವಣಾ ಹಿನ್ನಲೆಯಲ್ಲಿ ವಿಟ್ಲ ಠಾಣೆಗೆ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರ ಸಭೆಯನ್ನು ನಡೆಸಿ, ವಿವಿಧ ಗಡಿ ಭಾಗದ ತಪಾಸಣಾ ಕೇಂದ್ರಗಳನ್ನು ಪರಿಶೀಲನೆ ನಡೆಸಿ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದರು.ಠಾಣೆ ಅಥವಾ ಹೊರ ಠಾಣೆಯನ್ನು ಸ್ಥಾಪನೆ ಮಾಡಿದ ಮೇಲೆ ಸಾರ್ವಜನಿಕರ ಅನುಕೂಲಕ್ಕೆ

ನಿತ್ಯ ತೆರೆಯಲಾಗುತ್ತದೆ. ನೆಲ್ಲಿಕಟ್ಟೆ ಹಾಗೂ ಆನೆಕಲ್ಲು ಭಾಗದಲ್ಲಿ ಚೆಕ್ ಪೋಸ್ಟ್ ಇದ್ದು, ಸಿಬ್ಬಂದಿಗಳು ಮಾತ್ರ ಕನ್ಯಾನದಲ್ಲಿ ತಪಾಸಣೆ ಮಾಡುವ ಕಾರ್ಯ ಮಾಡಬಾರದು.ಕನ್ಯಾನ ಹೊರ ಠಾಣೆಯ ಸ್ಥಾಪನೆಯ ಉದ್ದೇಶ ಹಾಗೂ ತಪಸಣಾ ಕೇಂದ್ರದ ಪ್ರತ್ಯೇಕ ಸ್ಥಳದಲ್ಲಿ ಸ್ಥಾಪನೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ದ. ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಿಕ್ರಂ ಅಮಟೆ ಉಪಸ್ಥಿತರಿದ್ದರು 

ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ಮಾರಿದ್ರೆ ಕೇಸ್ ಹಾಕಲಾಗುವುದು: ಪೊಲೀಸ್ ಆಯುಕ್ತ ದಯಾನಂದ್

Posted by Vidyamaana on 2023-10-17 20:16:44 |

Share: | | | | |


ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ಮಾರಿದ್ರೆ ಕೇಸ್ ಹಾಕಲಾಗುವುದು: ಪೊಲೀಸ್ ಆಯುಕ್ತ ದಯಾನಂದ್

ಬೆಂಗಳೂರು: ನಿಯಮ ಮೀರಿದ ಪಬ್, ಬಾರ್ ರೆಸ್ಟೋರೆಂಟ್ ಗಳ ಮೇಲೆ ಕೇಸ್ ದಾಖಲು ಬಗ್ಗೆ  ನಗರ‌ ಪೊಲೀಸ್ ಆಯುಕ್ತ ದಯಾನಂದ್ ಪ್ರತಿಕ್ರಿಯೆ ನೀಡಿದ್ದಾರೆ.ನಿಯಮ ಮೀರಿದ ಪಬ್, ಬಾರ್ ರೆಸ್ಟೋರೆಂಟ್ ಗಳ ಮೇಲೆ ಕೋಟ್ಪಾ ಆ್ಯಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಸ್ಮೋಕಿಂಗ್ ಗೆ ಅವಕಾಶ ಕೊಟ್ಟವರ ಮೇಲೆ ಕೇಸ್ನೋ ಸ್ಮೋಕಿಂಗ್ ಏರಿಯಾಗಳಲ್ಲಿ ಅಧಿಕಾರಿಗಳು ತೆರಳಿ ಸ್ಟಿಕ್ಕರ್ ಅಂಟಿಸಲಾಗಿದೆ 4698 ಕಡೆ ಅರಿವು ಮೂಡಿಸಲು ಸ್ಟಿಕ್ಕರ್ ಅಂಟಿಸಲಾಗಿದೆ ಅಪ್ರಾಪ್ತರಿಗೆ ಧೂಮಪಾನಕ್ಕೆ ಅವಕಾಶ ಕೊಟ್ಟವರ ಮೇಲೆ ಕೇಸ್ ದಾಖಲಿಸಲಾಗಿದೆ. 1051 ಕ್ಕೂ ಅಧಿಕ ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ


ಹೊಟೇಲ್ ನಲ್ಲಿ  ಧೂಮಪಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.ಹಾಗೆ ಅಪ್ರಾಪ್ತರಿಗೆ ತಂಬಾಕು  ಉತ್ಪನ್ನ ಮಾರಿದ್ರೆ ಕೇಸ್ ಹಾಕಲಾಗುವುದು ಶಾಲಾ ಕಾಲೇಜಿನ 100 ಮೀಟರ್ ವ್ಯಾಪ್ತಿಯಲ್ಲಿ 200 ರೂ ದಂಡ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ್ರೆ 200 ರೂ ದಂಡ ತಂಬಾಕು ಪದಾರ್ಥದ ಬಗ್ಗೆ ಜಾಹೀರಾತು ನೀಡಿದರೆ 1000 ರೂ ದಂಡ ಹಾಕಲಾಗುವುದು ಎಂದು ತಿಳಿಸಿದರು.



Leave a Comment: