ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿಗಳು News

Posted by vidyamaana on 2024-07-08 17:22:55 |

Share: | | | | |


ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ ಜು.09 ರಂದು ರೆಡ್ ಅಲರ್ಟ್ ಘೋಷಿಸಿದ್ದು ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.9ರಂದು ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ

 Share: | | | | |


ಪುತ್ತೂರು : ಉತ್ತರ ಪ್ರದೇಶ ಸಿಎಂ ಯೋಗಿ ಆಗಮನ ಹಿನ್ನೆಲೆ : ವಾಹನ ಸಂಚಾರದಲ್ಲಿ ಬದಲಾವಣೆ

Posted by Vidyamaana on 2023-05-05 12:07:39 |

Share: | | | | |


ಪುತ್ತೂರು : ಉತ್ತರ ಪ್ರದೇಶ ಸಿಎಂ ಯೋಗಿ ಆಗಮನ ಹಿನ್ನೆಲೆ : ವಾಹನ ಸಂಚಾರದಲ್ಲಿ ಬದಲಾವಣೆ

ಪುತ್ತೂರು : ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರು ಪುತ್ತೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ

.ಸದರಿ ಆದೇಶವನ್ನು ಕಾರ್ಯರೂಪಕ್ಕೆ ತರುವಾಗ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.

ಬದಲಿ ರಸ್ತೆಯ ವಿವರ :

ಸುಳ್ಯ; ಅಜ್ಜಾವರದಲ್ಲಿ ತಾಯಾನೆಯಿಂದ ಬೇರ್ಪಟ್ಟ ಮರಿಯಾನೆ ದುಬಾರೆಯಲ್ಲಿ ಸಾವು

Posted by Vidyamaana on 2023-05-10 06:48:15 |

Share: | | | | |


ಸುಳ್ಯ; ಅಜ್ಜಾವರದಲ್ಲಿ ತಾಯಾನೆಯಿಂದ ಬೇರ್ಪಟ್ಟ ಮರಿಯಾನೆ ದುಬಾರೆಯಲ್ಲಿ ಸಾವು

ಸುಳ್ಯದ ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಕೆರೆಗೆ ಬಿದ್ದು ಮೇಲೆ ಬಂದ ತಾಯಾನೆಯಿಂದ ಬೇರ್ಪಟ್ಟಿದ್ದ ಮರಿಯಾನೆಯನ್ನು ದುಬಾರೆಯ ಆನೆ ಶಿಬಿರಕ್ಕೆ ಕಳುಹಿಸಲಾಗಿತ್ತು. ಇದೀಗ ಮರಿಯಾನೆ ದುಬಾರೆಯ ಆನೆ ಶಿಬಿರದಲ್ಲಿ ಸಾವನ್ನಪ್ಪಿದೆ.

ಏಪ್ರಿಲ್ 13 ರಂದು ನಾಲ್ಕು ಆನೆಗಳು ಅಜ್ಜಾವರ ತುದಿಯಡ್ಕದ ಸಂಪತ್ ರೈ ಯವರ ತೋಟದ ಕೆರೆಗೆ ಬಿದ್ದಿದ್ದವು. ಬಳಿಕ ಮೂರು ಆನೆಗಳನ್ನು ಮೇಲಕ್ಕೆ ಎತ್ತಲಾಗಿತ್ತು. ಆದ್ರೆ ಒಂದು ಮರಿಯಾನೆ ಮಾತ್ರ ಮೇಲೆ ಬರಲಾಗದೆ ಜಾರಿ ಬಿದ್ದುದರಿಂದ ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ಅದನ್ನು ದೂಡಿ ಮೇಲಕ್ಕೆ ಹತ್ತಿಸಿದ್ದರು. ಆ ವೇಳೆಗೆ ಆನೆಗಳ ಹಿಂಡು ಮುಂದಕ್ಕೆ ಹೋಗಿದ್ದುದರಿಂದ ಈ ಮರಿಯಾನೆಗೆ ಗುಂಪು ಸೇರಲಾಗಿರಲಿಲ್ಲ.ಮರುದಿನ ಗುಂಪಿಗೆ ಸೇರಿಸಲು ಯತ್ನಿಸಿದರೂ ಮರಿಯಾನೆ ವಾಪಸ್ ಬಂದಿತ್ತು . ಬಳಿಕ ಆನೆ ತಜ್ಞರ ಅಭಿಪ್ರಾಯದ ಮೇರೆಗೆ ದುಬಾರೆ ಆನೆ ಶಿಬಿರದಿಂದ ತಜ್ಞರು ಬಂದು ಎ.16 ರಂದು ದುಬಾರೆ ಆನೆ ಶಿಬಿರಕ್ಕೆ ಅದನ್ನು ಕೊಂಡುಯೊಯ್ಯಲಾಗಿತ್ತು. ಶಿಬಿರದಲ್ಲಿ ಈ ಮರಿಯಾನೆಯು ಚುರುಕಾಗಿದ್ದು ಹಾಲು ಸೇವಿಸುತ್ತಿತ್ತು. ಇತರ ಆನೆ ಮರಿಗಳೊಂದಿಗೆ ಬೆರೆಯುತ್ತಿತ್ತು. ಆದರೆ ವಾರದ ಹಿಂದೆ ದಿಢೀರನೆ ಆನೆ ಮರಿ ಸಾವನ್ನಪ್ಪಿದೆ. ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ.

ಕೆಸರು ನೀರನಲ್ಲಿ ಮುಳುಗಿಸಿ ಸಾಯಿಸಿದಳು ತಾಯಿ

Posted by Vidyamaana on 2023-09-14 11:45:45 |

Share: | | | | |


ಕೆಸರು ನೀರನಲ್ಲಿ ಮುಳುಗಿಸಿ ಸಾಯಿಸಿದಳು ತಾಯಿ

ಮಂಜೇಶ್ವರ: ಒಂದೂವರೆ ತಿಂಗಳ ಹಸುಗೂಸನ್ನು ಮಗುವಿನ ತಾಯಿಯೇ ಕೆಸರು ನೀರಿನಲ್ಲಿ ಮುಳುಗಿಸಿ ಸಾಯಿಸಿರುವ ಹೃದಯವಿದ್ರಾವಕ ಘಟನೆಯೊಂದು ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಪಚ್ಚಂಪಾರೆ ಎಂಬಲ್ಲಿ ನಡೆದಿದೆ.


ಸತ್ಯನಾರಾಯಣ ಮತ್ತು ಸುಮಂಗಲಿ ದಂಪತಿಯ ಒಂದೂವರೆ ತಿಂಗಳ ಹೆಣ್ಣುಮಗುವೇ ಈ ರೀತಿಯಾಗಿ ಸಾವಿಗೀಡಾಗಿದ್ದು, ಕೆಲ ದಿನಗಳ ಹಿಂದೆ ತಾಯಿ ಮತ್ತು ಮಗು ನಾಪತ್ತೆಯಾಗಿದ್ದರು.


ಬಳಿಕ ಮನೆಯವರು ಹುಡುಕಲು ಪ್ರಾರಂಭಿಸಿದಾಗ, ಮನೆಯ ಸ್ವಲ್ಪ ದೂರದಲ್ಲೇ ಸುಮಂಗಲಿ ಪತ್ತೆಯಾಗಿದ್ದಾರೆ. ಆಕೆಯ ಬಳಿ ಮಗುವಿನ ಕುರಿತು ವಿಚಾರಿಸಿದಾಗ, ಮಗುವನ್ನು ಅಲ್ಲೇ ಸ್ವಲ್ಪ ದೂರದಲ್ಲಿದ್ದ ಕೆಸರು ನೀರಿನಲ್ಲಿ ಮುಳುಗಿಸಿ ಸಾಯಿಸಿರುವುದಾಗಿ ಆಕೆ ತಿಳಿಸಿದಾಗ ಎಲ್ಲರಿಗೂ ಶಾಕ್ ಆಗಿತ್ತು.


ಕೂಡಲೇ ಆಕೆ ಹೇಳಿದ ಸ್ಥಳದಲ್ಲಿಹುಡುಕಿದಾಗ ಅಲ್ಲಿ ಶಿಶು ಪತ್ತೆಯಾಗಿದ್ದು ತಕ್ಷಣವೇ ಆ ಮಗುವನ್ನು ಉಪ್ಪಳದ ಮಂಗಲ್ಪಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಆ ಪುಟ್ಟ ಕಂದಮ್ಮ ತನ್ನ ಉಸಿರನ್ನು ನಿಲ್ಲಿಸಿಯಾಗಿತ್ತು!


ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಗಡುಕಿ ಮಹಿಳೆಯನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದು, ಮಗುವನ್ನು ಕೊಲೆ ಮಾಡಲು ಬೇರಿನ್ಯಾವುದೇ ಕಾರಣವಿದೆಯೇ ಎಂಬುದರ ಕುರಿತೂ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

Posted by Vidyamaana on 2024-01-14 08:28:15 |

Share: | | | | |


ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಹೈದರಾಬಾದ್: ಮನೆಯ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ತನಿಷ್ಕ್ (11) ಮೃತಪಟ್ಟಿರುವ ಘಟನೆ ಅತ್ತಾಪುರ ಪ್ರದೇಶದಲ್ಲಿ ನಡೆದಿದೆ.


ತನಿಷ್ಕ್ ತಮ್ಮ ಮನೆಯ ಮಹಡಿ ಮೇಲೆ ನಿಂತು ಗಾಳಿ ಪಟ ಹಾರಿಸುವ ವೇಳೆ ಗಾಳಿ ಪಟದ ದಾರ ವಿದ್ಯುತ್​ ತಂತಿಗೆ ಸಿಲುಕಿಕೊಂಡಿದೆ. ಅದನ್ನು ಬಿಡಿಸಲು ಹೋದಾಗ ದೇಹಕ್ಕೆ ವಿದ್ಯುತ್​ ಪ್ರವಹಿಸಿದೆ.


ತಕ್ಷಣ ಬಾಲಕ ಕಿರುಚಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ. ಪೋಷಕರ ರೋದನ ಮುಗಿಳುಮುಟ್ಟಿದ್ದು, ಮಕ್ಕಳ ಚಲನವಲನ ಬಗ್ಗೆ ಹೆಚ್ಚಿನ ನಿಗಾ ಅಗತ್ಯ ಎಂದು ಪೊಲೀಸರು ನಾಗರಿಕರಿಗೆ ಸಲಹೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಅಯೋಧ್ಯಾ ಕರಸೇವಕರ ವಿರುದ್ಧ ಪ್ರಕರಣ: ಕಾಂಗ್ರೆಸ್ ಸರಕಾರದ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಸಂಘ ಪರಿವಾರದಿಂದ ಪ್ರತಿಭಟನೆ

Posted by Vidyamaana on 2024-01-03 21:52:57 |

Share: | | | | |


ಹುಬ್ಬಳ್ಳಿಯಲ್ಲಿ ಅಯೋಧ್ಯಾ ಕರಸೇವಕರ ವಿರುದ್ಧ ಪ್ರಕರಣ: ಕಾಂಗ್ರೆಸ್ ಸರಕಾರದ ವಿರುದ್ಧ ಹಿಂದೂ ಜಾಗರಣಾ ವೇದಿಕೆ  ಸಂಘ ಪರಿವಾರದಿಂದ  ಪ್ರತಿಭಟನೆ

ಪುತ್ತೂರು: ಹುಬ್ಬಳ್ಳಿಯಲ್ಲಿ ರಾಮಭಕ್ತರನ್ನು ಬಂಧಿಸಿರುವ ಪೊಲೀಸ್‌ ಇಲಾಖೆಯ ವಿರುದ್ಧ ಹಾಗೂ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ಬುಧವಾರ ಇಲ್ಲಿನ ದರ್ಬೆ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲೆ ವತಿಯಿಂದ ಜ.3ರಂದು  ಬೃಹತ್ ಪ್ರತಿಭಟನೆ ನಡೆಯಿತು.

ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಜರಂಗದಳ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ರಾಮನ ಕೆಲಸ ಮಾಡುವವರನ್ನು ಹತ್ತಿಕ್ಕುವ


ಪ್ರಯತ್ನ ಸಿದ್ಧರಾಮಯ್ಯ ಸರಕಾರ ಮಾಡಿದರೆ ಲಂಕೆಯ ಉದಾಹರಣೆಯ ಮೂಲಕ ಸರಕಾರಕ್ಕೆ ಪ್ರತಿ ಉತ್ತರ ನೀಡಬೇಕಾಗಬಹುದು ಎಂದು  ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಏಜೆಂಟರ ಮೂಲಕ ಅಧಿಕಾರಿಗಳನ್ನು ನೇಮಿಸುವ ಕಾರ್ಯ ಒಂದೆಡೆಯಾದರೆ, ಇನ್ನೊಂದೆಡೆ ಅಲ್ಪಸಂಖ್ಯಾತರ ಓಟಿಗೋಸ್ಕರ ಹಿಂದೂಗಳನ್ನು, ರಾಮಭಕ್ತರನ್ನು ಧಮನಿಸುವ ಕಾರ್ಯ ನಡೆಸುತ್ತಿದೆ. ದೇಶದಲ್ಲಿ ರಾಮನ ನಾಡು ನಿರ್ಮಾಣವಾಗುತ್ತಿದೆಯೇ ಹೊರತು ರಾವಣನ ನಾಡು ನಿರ್ಮಾಣ ಆಗುತ್ತಿಲ್ಲ ಎಂಬುದನ್ನು ಸಿದ್ಧರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರ ಮಂದಿರ ನಿರ್ಮಾಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಸಂಭ್ರಮದಿಂದ ಇರಬೇಕಾದ ಅಸಂಖ್ಯಾತ ಹಿಂದೂಗಳ ಮಾನಸಿಕ ಸ್ಥೆರ್ಯವನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ. ಸಿದ್ಧರಾಮಯ್ಯನವರಿಗೆ ತಾಕತ್ತಿದ್ದರೆ ರಾಮರಾಜ್ಯ ನಿರ್ಮಾಣದ ಕನಸು ತಡೆಯಲಿ ಎಂದು ಸವಾಲು ಎಸೆದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ನನಸಾಗುತ್ತಿರುವ ಸಂದರ್ಭದಲ್ಲಿ 32 ವರ್ಷಗಳ ಹಿಂದೆ ರಾಮ ಮಂದಿರಕ್ಕಾಗಿ ಹೋರಾಟ ಮಾಡಿದವರನ್ನು ಬಂಧಿಸುವ ಕೆಲಸ ಸಿದ್ದರಾಮಯ್ಯ ಸರಕಾರದಿಂದ ಆಗುತ್ತಿದೆ. ಈ ಮೂಲಕ ಹಿಂದೂಗಳ ಮಾನಸಿಕ ಧೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ. ಸೀತೆ ರಾಮನ ಜತೆಗೂಡಿ ರಾವಣನನ್ನು ಹೇಗೆ ಧ್ವಂಸ ಮಾಡಿದ್ದಾರೆ ಅದೇ ರೀತಿಯ ಉತ್ತರ ನೀಡಲು ಮಾತೆಯರು ಸೀತೆಯರಾಗಿ ಸರಕಾರವನ್ನು ಧ್ವಂಸ ಮಾಡಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.


ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ರಾವ್‌ ಬಪ್ಪಳಿಗೆ ಮಾತನಾಡಿ, 30 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಹೋರಾಟವನ್ನು ನಡೆಸಿದ ರಾಮಭಕ್ತರ ಮೇಲೆ ಸಿದ್ದರಾಮಯ್ಯ ಸರಕಾರ ಪುನಃ ಕೇಸು ಹಾಕಿ ಬಂಧಿಸಲು ಮುಂದಾಗುತ್ತಿದ್ದು, ಇನ್ನಷ್ಟು ರಾಮಭಕ್ತರನ್ನು ಬಂಧನ ಮಾಡಲಿ. ಪರಿಣಾಮ ಹಿಂದೂ ಸಮಾಜಕ್ಕೆ ಮತ್ತಷ್ಟು ಶಕ್ತಿ ಬರಲಿದೆ ಎಂಬುದನ್ನು ಸಿದ್ಧರಾಮಯ್ಯ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದ ಅವರು, 30 ವರ್ಷ ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡ ವಿಚಾರವನ್ನು ಎಳೆ ಎಳೆಯಾಗಿ ತೆರೆದಿಟ್ಟರು.


ಪ್ರತಿಭಟನೆಯನ್ನುದ್ದೇಶಿಸಿ ಡಾ.ಸುರೇಶ್ ಪುತ್ತೂರಾಯ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ಮುಖಂಡ ಮೋಹನದಾಸ್‌ ಕಾಣಿಯೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧ‌ರ್ ಜೈನ್, ಬಿಜೆಪಿ ಹಿರಿಯ ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಅಪ್ಪಯ್ಯ ಮಣಿಯಾಣಿ, ರಾಜೇಶ್‌ ಬನ್ನೂರು, ರಾಧಾಕೃಷ್ಣ ಬೋರ್ಕರ್, ನಗರಸಭೆ ಸದಸ್ಯ ಜಗನ್ನಿವಾಸ ರಾವ್, ಆರ್.ಸಿ ನಾರಾಯಣ, ಶಶಿಕುಮಾ‌ರ್ ಬಾಲ್ಯೂಟ್ಟು, ಸತೀಶ್ ನಾಯ್ಕ, ವಿಹಿಂಪದ ಡಾ. ಪ್ರಸನ್ನ ಭಟ್, ಶ್ರೀಧರ್ ತೆಂಕಿಲ, ಸೀತಾರಾಮ ರೈ ಕೆದಂಬಾಡಿಗುತ್ತು,, ಮಹಿಳಾ ಬಿಜೆಪಿಯ ಗೌರಿ ಬನ್ನೂರು, ಜಯಶ್ರೀ ಶೆಟ್ಟಿ, ನಿಶಾಂತ್, ಮೀನಾಕ್ಷಿ ಶಾಂತಿಗೋಡು, ದೀಕ್ಷಾ ಪೈ, ಹರಿಣಿ ಪುತ್ತೂರಾಯ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು. ಅಜಿತ್ ರೈ ಹೊಸಮನೆ ಸ್ವಾಗತಿಸಿದರು. ದಿನೇಶ್ ಪಂಜಿಗ ಕಾರ್ಯಕ್ರಮ ನಿರೂಪಿಸಿದರು.

ತನ್ನ ಪಾಡಿಗೆ ತಾನು ಗುಜುರಿ ಹೆಕ್ಕಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಮಲಗಿದ್ದ ಸ್ಥಿತಿಯಲ್ಲೇ ಸಾವು

Posted by Vidyamaana on 2023-05-24 08:40:50 |

Share: | | | | |


ತನ್ನ ಪಾಡಿಗೆ ತಾನು ಗುಜುರಿ ಹೆಕ್ಕಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಮಲಗಿದ್ದ ಸ್ಥಿತಿಯಲ್ಲೇ ಸಾವು

ಪುತ್ತೂರು: ಗುಜುರಿ ಹೆಕ್ಕಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರು ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿರುವ ಘಟನೆ ಕಲ್ಲಾರೆಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಉಪ್ಪಿನಂಗಡಿ ಮೂಲದ ಮಂಜುನಾಥ್ ಎಂದು ಗುರುತಿಸಲಾಗಿದ್ದು ಇಲ್ಲಿನ ನವಾಜ್ ಕಾಂಪ್ಲೆಕ್ಸ್ ಹಿಂಭಾಗ ಮಂಜುನಾಥ್ ಮೃತದೇಹ ಪತ್ತೆಯಾಗಿದೆ.

ಪ್ರತೀನಿತ್ಯ ನಗರದ ವಿವಿಧ ಕಡೆಗಳಲ್ಲಿ ಗುಜುರಿ ಹೆಕ್ಕಿ ಜೀವನ ಸಾಗಿಸುತ್ತಿದ್ದ ಮಂಜುನಾಥ್ ಬಳಿಕ ಪ್ರತೀದಿನ ಈ ಕಟ್ಟಡದ ಬಳಿಯಲ್ಲೇ ಮಲಗುತ್ತಿದ್ದರು. ನಿರುಪದ್ರವಿಯಾಗಿ ತಮ್ಮ ಪಾಡಿಗೆ ತಾವು ಗುಜುರಿ ಹೆಕ್ಕಿಕೊಂಡು ಜೀವನ ಸಾಗಿಸುತ್ತಿದ್ದ ಮಂಜುನಾಥ್ ಇದೀಗ ಯಾರಿಗೂ ತೊಂದರೆ ಕೊಡದ ಸ್ಥಿತಿಯಲ್ಲಿ ಮಲಗಿದಲ್ಲೇ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದರು.

Recent News


Leave a Comment: