ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ಸುದ್ದಿಗಳು News

Posted by vidyamaana on 2024-07-24 16:52:02 |

Share: | | | | |


ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.


ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.

ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.


ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.

 Share: | | | | |


ವಯಸ್ಸಾದವರ ತರ ಮಾಡ್ಬೇಡ ಎಂದ ಶೋಕಿ ಪತ್ನಿ...ಮನನೊಂದ ಪತಿ ಆತ್ಮಹತ್ಯೆ

Posted by Vidyamaana on 2024-02-16 07:21:51 |

Share: | | | | |


ವಯಸ್ಸಾದವರ ತರ ಮಾಡ್ಬೇಡ ಎಂದ ಶೋಕಿ ಪತ್ನಿ...ಮನನೊಂದ ಪತಿ ಆತ್ಮಹತ್ಯೆ

ಚಾಮರಾಜನಗರ, ಫೆ 15: ಪತ್ನಿ ಮಾಡಿದ ರೀಲ್ಸ್​​​ನಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದಲ್ಲಿ ನಡೆದಿದೆ. ಕುಮಾರ್ (33) ಮೃತ ವ್ಯಕ್ತಿ. ಪತ್ನಿ ರೂಪಾ, ರೂಪಾಳ‌ ಸೋದರಮಾವ ಗೋವಿಂದನ ವಿರುದ್ಧ ಮೃತನ ಸೋದರ ಮಹಾದೇವಸ್ವಾಮಿ ದೂರು ಕೊಟ್ಟಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.


ಕಳೆದ 10 ರಂದು ರೂಪಾಳ ತವರು ಮನೆಯಾದ ಗುಂಡಾಪುರಕ್ಕೆ ಕುಮಾರ್ ಮತ್ತು ರೂಪಾ ಇಬ್ಬರು ತೆರಳಿದ್ದರು. ಒಂದು ದಿನ ಇದ್ದು ಕುಮಾರ್ ಮರುದಿನ ಪಿ.ಜಿ‌‌. ಪಾಳ್ಯಕ್ಕೆ ವಾಪಸ್​ ಆಗಿದ್ದರೆ, ಪತ್ನಿ ರೂಪಾ ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದರು. ರೂಪಾ ಊರಿನಲ್ಲಿದ್ದ ವೇಳೆ ಸೋದರಮಾವ ಹಾಗೂ ಆತನ ಸಹೋದರಿ ಜೊತೆ ಸೇರಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್​​ಲೋಡ್ ಮಾಡಿದ್ದಾರೆ. ಇದನ್ನು ಸ್ನೇಹಿತರು ಕುಮಾರನ ಗಮನಕ್ಕೆ ತಂದಿದ್ದರು. ತಕ್ಷಣ ಫೋನ್ ಪತ್ನಿಗೆ​ ಮಾಡಿದ್ದ ಕುಮಾರ್, ಈ ರೀತಿ ರೀಲ್ಸ್​ಗಳನ್ನು ಏಕೆ ಮಾಡುತ್ತಿದ್ದಿ? ಬಿಟ್ಟುಬಿಡು ಎಂದಾಗ ಪತ್ನಿಯು, ನಾನು ಇರುವುದೇ ಹೀಗೆ, ನೀನೇಕೆ ವಯಸ್ಸಾದವರ ರೀತಿ ಇದ್ದೀಯಾ ಎಂದಿದ್ದಾಳೆ. ಇದರಿಂದ ದಂಪತಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಮನನೊಂದ ಕುಮಾರ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 


ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹನೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹನೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕರಾವಳಿಯಲ್ಲಿ ಭಾರೀ ಬಿಸಿಗಾಳಿ ಬೀಸುವ ಸಾಧ್ಯತೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ

Posted by Vidyamaana on 2023-03-03 17:20:17 |

Share: | | | | |


ಕರಾವಳಿಯಲ್ಲಿ ಭಾರೀ ಬಿಸಿಗಾಳಿ ಬೀಸುವ ಸಾಧ್ಯತೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಮಂಗಳೂರು: ಈಗಾಗಲೇ ಬಿಸಿಲಿನಿಂದ ಬಳಲಿ ಬೆಂಡಾಗಿ ಹೋಗಿರುವ ಕರಾವಳಿಗರಿಗೆ ಭಾರತೀಯ ಹವಾಮಾನ ಇಲಾಖೆ ಇದೀಗ ಮತ್ತೊಂದು ಶಾಕ್ ನೀಡಿದೆ.

ದಕ್ಷಿಣಕನ್ನಡ ಉಡುಪಿ ಸಹಿತ ಕರಾವಳಿ ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಬಲವಾದ ಬಿಸಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಅಲ್ಲದೆ ಈ ಅವಧಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮೀರುವ ಸಾಧ್ಯತೆಗಳಿದ್ದು, ಜನರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವಿಶೇಷ ನಿಗಾ ವಹಿಸಲು ಸೂಚನೆ ನೀಡಲಾಗಿದೆ.

ಕಡಬದಲ್ಲಿ ವಿದ್ಯಾರ್ಥಿನಿಯರ ಮೇಲೆ ಆಸಿಡ್‌ ದಾಳಿ ಪ್ರಕರಣ

Posted by Vidyamaana on 2024-03-12 11:25:53 |

Share: | | | | |


ಕಡಬದಲ್ಲಿ ವಿದ್ಯಾರ್ಥಿನಿಯರ ಮೇಲೆ ಆಸಿಡ್‌ ದಾಳಿ ಪ್ರಕರಣ

ಕಡಬ : ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಇನ್ನಿಬ್ಬರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಧಾನ ಆರೋಪಿ ಕೇರಳ ಮೂಲದ ಎಂಬಿಎ ವಿದ್ಯಾರ್ಥಿ ಅಭಿನ್ ನನ್ನು ಮಾ.5 ರಂದು ಬಂಧಿಸಲಾಗಿತ್ತು. ಉಪ್ಪಿನಂಗಡಿ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಪ್ರಧಾನ ಆರೋಪಿ ಜೊತೆ ಕೇರಳದ ಎರ್ನಾಕುಲಂ ಮತ್ತು ತಮಿಳುನಾಡಿನ ಕೊಯಮತ್ತೂರಿನ ಪ್ರದೇಶಕ್ಕೆ ತೆರಳಿ ತನಿಖೆ ನಡೆಸಿದ್ದು, ಇದೀಗ ಕೇರಳದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಕಡಬಕ್ಕೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿ ಅಬಿನ್ ಆ್ಯಸಿಡ್ ದಾಳಿ ನಡೆಸಿದ ದಿನ ಕಾಲೇಜಿನ ಸಮವಸ್ತ್ರ ಹೋಲುವ ಡ್ರೆಸ್ ಹಾಕಿದ್ದು, ಇದನ್ನು ಹೊಲಿದುಕೊಟ್ಟ ವ್ಯಕ್ತಿ ಹಾಗೂ ಆ್ಯಸಿಡ್ ನೀಡಿದ ವ್ಯಕ್ತಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.


BIG NEWS: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಎಂಬ ಸುದ್ದಿ ಸುಳ್ಳು : ಪರೀಕ್ಷಾ ಮಂಡಳಿ ಸ್ಪಷ್ಟನೆ

Posted by Vidyamaana on 2024-04-03 08:35:16 |

Share: | | | | |


BIG NEWS: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಎಂಬ ಸುದ್ದಿ ಸುಳ್ಳು : ಪರೀಕ್ಷಾ ಮಂಡಳಿ ಸ್ಪಷ್ಟನೆ

ಬೆಂಗಳೂರು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುವ ಸಂಬಂಧ ಏಪ್ರಿಲ್ 3 ರ ಇಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಪತ್ರಿಕಾಗೋಷ್ಠಿ ಆಯೋಜಿಸಿದೆ ಎಂದು ಹಬ್ಬಿರುವ ಮಾಹಿತಿ ಸುಳ್ಳು ಎಂದು ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ಸ್ಪಷ್ಟಪಡಿಸಿದ್ದಾರೆ.ಕಿಡಿಗೇಡಿಗಳು ಮಂಡಳಿ ಹೆಸರಿನಲ್ಲಿ ನಕಲಿ ಪತ್ರಿಕಾ ಹೇಳಿಕೆಯನ್ನು ಸೃಷ್ಟಿಸಿ ಸಾಮಾಜಕ ಜಾಲತಾಣದಲ್ಲಿ ಹರಿಬಿಟ್ಟು ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಮಂಡಳಿಯಿಂದ ಅಂತಹ ಯಾವುದೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿಲ್ಲ ಎಂದು ಹೇಳಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ಫಲಿತಾಂಶ ಪ್ರಕಟಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಬಿಗ್ ಶಾಕ್: ಸೆಪ್ಟೆಂಬ‌ರ್ ನಿಂದ ಲ್ಯಾಂಡ್ ಬೀಟ್ ಆಯಪ್ ಆಧರಿಸಿ ತೆರವು

Posted by Vidyamaana on 2024-08-12 20:17:43 |

Share: | | | | |


ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಬಿಗ್ ಶಾಕ್: ಸೆಪ್ಟೆಂಬ‌ರ್ ನಿಂದ ಲ್ಯಾಂಡ್ ಬೀಟ್ ಆಯಪ್ ಆಧರಿಸಿ ತೆರವು

ಬೆಂಗಳೂರು : ರಾಜ್ಯಾಧ್ಯಂತ ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಬಿಗ್ ಶಾಕ್ ಎನ್ನುವಂತೆ ಸೆಪ್ಟೆಂಬರ್ ನಿಂದ ಲ್ಯಾಂಡ್ ಬೀಟ್‌ ಆಯಪ್ ಆಧರಿಸಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸರ್ಕಾರ ನಡೆಸಲಿದೆ.ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ಹಂಚಿಕೊಂಡಂತ ಕಂದಾಯ ಸಚಿವ ಕೃಷ್ಣಭೈರೇಗೌಡ, ಲ್ಯಾಂಡ್ ಬೀಟ್‌ ಆಯಪ್ ಆಧರಿಸಿ ಸೆಪ್ಟೆಂಬರ್‌ ತಿಂಗಳಿನಿಂದ ರಾಜ್ಯಾದ್ಯಂತ ಸರ್ಕಾರ ಭೂ ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ರೈಲ್ವೆಗೆ ಇನ್ನು ಒಂದೇ ಸಹಾಯವಾಣಿ

Posted by Vidyamaana on 2023-06-12 08:22:08 |

Share: | | | | |


ರೈಲ್ವೆಗೆ ಇನ್ನು ಒಂದೇ ಸಹಾಯವಾಣಿ

ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರು ತಮ್ಮ ಎಲ್ಲಾ ವಿಚಾರಣೆಗಳು ಮತ್ತು ದೂರುಗಳನ್ನು ಗಮನದಲ್ಲಿಟ್ಟುಕೊಂಡು ಕೇವಲ ಒಂದು ಸಂಖ್ಯೆಯನ್ನು ಮಾತ್ರ ನೆನಪಿಟ್ಟುಕೊಳ್ಳಬೇಕು. ವಿವಿಧ ರೀತಿಯ ಕಾಳಜಿಗಳು ಅಥವಾ ಸೇವೆಗಳಿಗಾಗಿ ಅನೇಕ ಸಹಾಯವಾಣಿಗಳನ್ನು ಡಯಲ್ ಮಾಡುವ ಬದಲು, ಪ್ರಯಾಣಿಕರು ಈಗ ಒಂದೇ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡುವ ಮೂಲಕ ತಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಬಹುದು.ಪ್ರಯಾಣದ ಸಮಯದಲ್ಲಿ ಯಾವುದೇ ರೀತಿಯ ಸಹಾಯಕ್ಕಾಗಿ ಪ್ರವಾಸಿಗರು ಅಧಿಕೃತ website-railm

non

non

@rb.railnet.gov.in ಭೇಟಿ ನೀಡಬಹುದು. ಉದಾಹರಣೆಗೆ, ವೈದ್ಯಕೀಯ ಸಹಾಯ. ರೈಲು ಸಹಾಯ ಅಪ್ಲಿಕೇಶನ್ ಅನ್ನು ಉಮಾಂಗ್ ಅಪ್ಲಿಕೇಶನ್ ಮೂಲಕವೂ ಪ್ರವೇಶಿಸಬಹುದು. ಪ್ರಯಾಣದ ಸಮಯದಲ್ಲಿ ಗ್ರಾಹಕರ ಪ್ರಶ್ನೆಗಳು ಮತ್ತು ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಅನುಕೂಲವಾಗುವಂತೆ, ರೈಲ್ವೆ 182 ಸೇವೆಗಳು ಸೇರಿದಂತೆ ಎಲ್ಲಾ ಸಹಾಯವಾಣಿಗಳನ್ನು 139 ಎಂಬ ಒಂದೇ ಸಂಖ್ಯೆಯ ಅಡಿಯಲ್ಲಿ ಸಂಪರ್ಕಿಸಿದೆ. ಕಳ್ಳತನ ಮತ್ತು ಇತರ ಅಪರಾಧ ಘಟನೆಗಳಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆ 182 ಆಗಿದೆಪ್ರಯಾಣಿಕರು ಯಾವ ಸೌಲಭ್ಯಗಳನ್ನು ಪಡೆಯುತ್ತಾರೆ?

ರೈಲು ದೂರುಗಳು

ಈ ಸೇವೆಯು ನಾಗರಿಕರಿಗೆ ದೂರು ಸಲ್ಲಿಸಲು ಅಥವಾ ಘಟನೆಯ ಆಯ್ದ ದಿನಾಂಕಗಳಿಗೆ (ಪ್ರಸ್ತುತ ದಿನಾಂಕ ಅಥವಾ ಕೊನೆಯ ನಾಲ್ಕು ದಿನಾಂಕಗಳು) ಸಲಹೆಗಳನ್ನು ಒದಗಿಸುತ್ತದೆ. ದೂರು ನೀಡಲು, ಪ್ರಯಾಣಿಕರು ಘಟನೆಯ ದಿನಾಂಕದ ನಂತರ ರೈಲು ಸಂಖ್ಯೆಯನ್ನು ನಮೂದಿಸಬಹುದು, ನಂತರ ಕಾಯ್ದಿರಿಸದ ಟಿಕೆಟಿಂಗ್ ಸಿಸ್ಟಮ್ (ಯುಟಿಎಸ್) ಸಂಖ್ಯೆ ಅಥವಾ ಪಿಎನ್‌ಆರ್ ಸಂಖ್ಯೆಯನ್ನು ನಮೂದಿಸಬಹುದು.ಸ್ಟೇಷನ್ ದೂರು ಆಯ್ಕೆ ಮಾಡಿದ ಘಟನೆಯ ದಿನಾಂಕಕ್ಕೆ (ಪ್ರಸ್ತುತ ದಿನಾಂಕ ಅಥವಾ ಕೊನೆಯ ನಾಲ್ಕು ದಿನಾಂಕಗಳು) ಸ್ಟೇಷನ್-ಸಂಬಂಧಿತ ದೂರು ಅಥವಾ ಸಲಹೆಯನ್ನು ಸಲ್ಲಿಸಲು ಈ ಸೇವೆಯು ನಾಗರಿಕರನ್ನು ಒದಗಿಸುತ್ತದೆ.

ನಿಮ್ಮ ದೂರನ್ನು ಟ್ರ್ಯಾಕ್ ಮಾಡಿ ಈ ಸೇವೆಯು ನಾಗರಿಕರಿಗೆ ರೈಲು ಅಥವಾ ನಿಲ್ದಾಣಕ್ಕೆ ಸಂಬಂಧಿಸಿದ ತಮ್ಮ ನೋಂದಾಯಿತ ದೂರುಗಳನ್ನು ಉಲ್ಲೇಖ ಸಂಖ್ಯೆಯನ್ನು ಒದಗಿಸುವ ಮೂಲಕ ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ.

ಸರಕುಗಳು / ಪಾರ್ಸೆಲ್ ವಿಚಾರಣೆಘಟನೆಯ ದಿನಾಂಕದಿಂದ 30 ದಿನಗಳ ಒಳಗೆ ಆಯ್ದ ಘಟನೆಯ ದಿನಾಂಕಕ್ಕಾಗಿ ಸರಕು / ಪಾರ್ಸೆಲ್ ವಿಚಾರಣೆಗಳಿಗೆ ಸಂಬಂಧಿಸಿದ ವಿಚಾರಣೆಗಳು / ದೂರುಗಳನ್ನು ಸಲ್ಲಿಸಲು ಈ ಸೇವೆಯು ನಾಗರಿಕರಿಗೆ ಅನುವು ಮಾಡಿಕೊಡುತ್ತದೆ.

Recent News


Leave a Comment: