ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಬೆಳ್ತಂಗಡಿ: ಪತ್ನಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಹಲ್ಲೆ ಪ್ರಕರಣ; ಆರೋಪಿ ಸುರೇಶ್ ಗೌಡ ಬಂಧನ

Posted by Vidyamaana on 2023-12-19 21:35:14 |

Share: | | | | |


ಬೆಳ್ತಂಗಡಿ: ಪತ್ನಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಹಲ್ಲೆ ಪ್ರಕರಣ; ಆರೋಪಿ ಸುರೇಶ್ ಗೌಡ ಬಂಧನ

ಬೆಳ್ತಂಗಡಿ: ಪತ್ನಿ ಕಣ್ಣು ಕಚ್ಚಿ ಮಾಂಸ ಹೊರಬರುವಂತೆ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಆರೋಪಿ ಪತಿ ಸುರೇಶ್ ಗೌಡ(55), ತನ್ನ ಹೆಂಡತಿ ಮೋಹಿನಿ(55) ಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಗಾಯಗೊಳಿಸಿದ್ದ ವಿಕೃತ ಘಟನೆ ನಡೆದಿತ್ತು. ಬಳಿಕ ಪರಾರಿಯಾಗಿ ಮನೆಯ ಹತ್ತಿರದ ತೋಟದಲ್ಲಿ ಅಡಗಿ ಕುಳಿತ್ತಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯಿಂದ 3೦ ಸಾವಿರ ಲಂಚ ಪಡೆದ ಉಗ್ರಾಣಿ

Posted by Vidyamaana on 2023-09-06 18:39:08 |

Share: | | | | |


ಮಹಿಳೆಯಿಂದ 3೦ ಸಾವಿರ ಲಂಚ ಪಡೆದ ಉಗ್ರಾಣಿ

ಪುತ್ತೂರು: ಅಕ್ರಮಸಕ್ರಮ ಕಡತ ವಿಲೇವಾರಿ ಮಾಡುವುದಾಗಿ ಹೇಳಿ ಮಹಿಳೆಯಿಂದ ಪಡೆದ ಲಂಚದ ಹಣವನ್ನು ಹಿಂತಿರುಗಿಸುವಂತೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ಗ್ರಾಮವೊಂದರ ಉಗ್ರಾಣಿಗೆಗೆ ಸೂಚನೆಯನ್ನು ನೀಡಿದ್ದಾರೆ.

ಕುಂಡಡ್ಕ ದಲ್ಲಿ ಶ್ರೀ ಕೃಷ್ಣಾಅಷ್ಟಮಿ ಕಾರ್ಯಕ್ರಮಕ್ಕೆ ತೆರಳಿದ ಶಾಸಕರ ಬಳಿ ಬಂದ ಚಂದ್ರಾವತಿ ಎಂಬ ಮಹಿಳೆ ನಾನು ಶಕುಂತಳಾ ಶೆಟ್ಟಿ ಶಾಸಕರಾಗಿದ್ದ ಸಂದರ್ಭದಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದ್ದೆ. ನನ್ನ ಮನೆ ಸರಕಾರಿ ಜಾಗದಲ್ಲಿದೆ. ನನ್ನ ಮನೆ ಇರುವ ಜಾಗವನ್ನು ಸಕ್ರಮ ಮಾಡಿಕೊಡಬೇಕೆಂದು ಅರ್ಜಿ ಸಲ್ಲಿಸಿದ್ದೇನೆ. ಸಲ್ಲಿಸಿದ ಅರ್ಜಿಯ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ . ನಾನು ಅರ್ಜಿ ಕೊಟ್ಟಾಗ ನನ್ನಿಂದ ನನ್ನ ಗ್ರಾಮದ ಉಗ್ರಾಣಿ ಒಟ್ಟು ೩೦ ಸಾವಿರ ಹಣವನ್ನು ಲಂಚವಾಗಿ ಪಡೆದುಕೊಂಡಿದ್ದಾರೆ. ಏಳು ವರ್ಷ ಕಳೆದರೂ ನನಗೆ ಅಕ್ರಮ ಸಕ್ರಮದಲ್ಲಿ ಜಾಗ ರೆಕಾರ್ಡ್ ಆಗಲಿಲ್ಲ, ನಾನು ಬಡವೆ, ನನ್ನಲ್ಲಿ ಏನೂ ಇಲ್ಲ, ನಾನು ಬೀಡಿಕಟ್ಟಿ ಜೀವನ ಮಾಡುವುದು,  ಆದರೂ ನನ್ನಿಂದ ಹಣಪಡೆದುಕೊಂಡಿದ್ದಾರೆ. ಹಣ ಕೊಟ್ಟರೂ ಕೆಲಸ ಮಾಡಿಲ್ಲ ನನಗೆ ನ್ಯಾಯ ಕೊಡಿ ಎಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ. ಕೂಡಲೇ ಹಣ ಪಡೆದುಕೊಂಡ ಉಗ್ರಾಣಿಗೆ ಕರೆ ಮಾಡಿದ ಶಾಸಕರು ಬಡ ಮಹಿಳೆಯಿಂದ ಲಂಚವಾಗಿ ಪಡೆದುಕೊಂಡ ೩೦ ಸಾವಿರ ಹಣವನ್ನು ವಾರದೊಳಗೆ ಮಹಿಳೆಗೆ ಪಾವತಿಸಿಬೇಕು ಇಲ್ಲವಾದರೆ ಕೆಲಸದಿಂದ ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಹಿಳೆಗೆ ಸಾಂತ್ವನ ಹೇಳಿದ ಶಾಸಕರು ನಿಮ್ಮ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಸೂಚನೆ ಕೊಡುತ್ತೇನೆ. ಅಕ್ರಮ ಸಕ್ರಮ ಸಮಿತಿಯಾದ ತಕ್ಷಣವೇ ನಿಮ್ಮ ಜಾಗ ನಿಮಗೆ ರೆಕಾರ್ಡ್ ಆಗಲಿದೆ ಎಂದು ಹೇಳಿದಾಗ ಮಹಿಳೆ ಶಾಸಕರಿಗೆ ನಮಸ್ಕರಿಸಿದರು.

ಯಡಿಯೂರಪ್ಪ ಧರ್ಮ ದ್ವೇಷಿಯಲ್ಲ: ಕಾಂಗ್ರೆಸ್‌ ಶಾಸಕ

Posted by Vidyamaana on 2024-03-10 12:54:02 |

Share: | | | | |


ಯಡಿಯೂರಪ್ಪ ಧರ್ಮ ದ್ವೇಷಿಯಲ್ಲ: ಕಾಂಗ್ರೆಸ್‌ ಶಾಸಕ

ಚಿಕ್ಕಮಗಳೂರು: ಬಿ.ಎಸ್‌. ಯಡಿಯೂರಪ್ಪ ಬಿಜೆಪಿಯಲ್ಲಿದ್ದರೂ ಎಂದಿಗೂ ಯಾವುದೇ ಧರ್ಮವನ್ನು ದ್ವೇಷಿಸಲಿಲ್ಲ ಎಂದು ಕಾಂಗ್ರೆಸ್‌ ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.

ಜಿಲ್ಲಾ ಉರ್ದು ಅದಬ್, ರಾಜ್ಯ ಅಂಜುಮನ್ ತಾರಕಿ ಉರ್ದು ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಉರ್ದು ಸಮ್ಮೇಳನ ಹಾಗೂ ಗಜಲ್-ಕವಾಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿಕಾರಿಪುರದಲ್ಲಿ ಯಡಿಯೂರಪ್ಪ ಅನಭಿಶಕ್ತ ದೊರೆ ಇದ್ದಂತೆ. ಯಾವ ವ್ಯಕ್ತಿ ತನ್ನ ಧರ್ಮದೊಂದಿಗೆ ಇತರೆ ಧರ್ಮವನ್ನು ಪ್ರೀತಿಸುತ್ತಾನೆಯೋ ಆ ವ್ಯಕ್ತಿಯನ್ನು ಎಲ್ಲರೂ ಗೌರವಿಸುತ್ತಾರೆ ಎಂದರು.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

Posted by Vidyamaana on 2024-02-27 08:41:28 |

Share: | | | | |


ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿಎಲ್) ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ ನೀಡಿದ್ದಾರೆ. ಪಿಪಿಬಿಎಲ್ ಮಂಡಳಿಯನ್ನು ಪುನರ್ ರಚಿಸಲಾಗಿದೆ ಎಂದು ಒನ್ 97 ಕಮ್ಯುನಿಕೇಷನ್ಸ್ ಷೇರು ಮಾರುಕಟ್ಟೆ ಮಂಡಳಿಗೆ ಮಾಹಿತಿ ನೀಡಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಶ್ರೀಧರ್, ನಿವೃತ್ತ ಐಎಎಸ್ ಅಧಿಕಾರಿ ದೇಬೇಂದ್ರನಾಥ್ ಸಾರಂಗಿ, ಬ್ಯಾಂಕ್ ಆಫ್ ಬರೋಡಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ಗರ್ಗ್ ಮತ್ತು ನಿವೃತ್ತ ಐಎಎಸ್ ರಜನಿ ಸೆಖ್ರಿ ಸಿಬಲ್ ಪಿಪಿಬಿಎಲ್ ಮಂಡಳಿಗೆ ಸೇರಿದ್ದಾರೆ ಎಂದು ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅವರು ಸ್ವತಂತ್ರ ನಿರ್ದೇಶಕರಾಗಿ ಸೇರಿಕೊಂಡಿದ್ದಾರೆ ಎಂದು ತಿಳಿಸಿದೆ.


ಜನವರಿ 31 ರಂದು ಆರ್ಬಿಐ ಪಿಪಿಬಿಎಲ್ ಮೇಲೆ ಪ್ರಮುಖ ವ್ಯವಹಾರ ನಿರ್ಬಂಧಗಳನ್ನು ವಿಧಿಸಿತು. ಇದರಲ್ಲಿ ಫೆಬ್ರವರಿ 29 ರ ನಂತರ ಹೊಸ ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಕ್ರೆಡಿಟ್ ವಹಿವಾಟುಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಫೆಬ್ರವರಿ 16 ರಂದು ಗಡುವನ್ನು ಮಾರ್ಚ್ 15 ರವರೆಗೆ ವಿಸ್ತರಿಸಲಾಗಿದೆ.

ಅಹ್ಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

Posted by Vidyamaana on 2024-05-07 11:48:08 |

Share: | | | | |


ಅಹ್ಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದಾದ್ಯಂತ ಇಂದು 3ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಗಾಂಧಿನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಹಮದಾಬಾದ್ನಲ್ಲಿ ಮತದಾನ ಮಾಡಿದರು

ಇಂದು ಸುದಾನ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ದ.ಕ ಜಿಲ್ಲಾ ಶಾಲಾ ಬಾಲಕ ಬಾಲಕಿಯರ ವಾಲಿಬಾಲ್‌ ಪಂದ್ಯಾಟ

Posted by Vidyamaana on 2024-01-06 08:05:45 |

Share: | | | | |


ಇಂದು ಸುದಾನ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ದ.ಕ ಜಿಲ್ಲಾ ಶಾಲಾ ಬಾಲಕ ಬಾಲಕಿಯರ ವಾಲಿಬಾಲ್‌ ಪಂದ್ಯಾಟ

ಪುತ್ತೂರು: ದ.ಕ ಜಿಲ್ಲಾ ವಾಲಿಬಾಲ್ ಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ ಪುತ್ತೂರು ತಾಲೂಕು ವಾಲಿಬಾಲ್ ಸಂಸ್ಥೆ ಮತ್ತು ಸುದಾನ ವಸತಿಯುತ ವಿದ್ಯಾಸಂಸ್ಥೆ ಪುತ್ತೂರು ಇವರ ಸಹಯೋಗದೊಂದಿಗೆ ದ.ಕ.ಜಿಲ್ಲಾ ಮಟ್ಟದ 14, 17 ಮತ್ತು 19 ವರ್ಷ ವಯೋಮಾನದ ಶಾಲಾ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟ ಜ.6ರಂದು ಸುದಾನ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಜರಗಲಿದೆ ಎಂದು ದ.ಕ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಬಿ.ಎಸ್ ಸತೀಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಈ ಹಿಂದಿನ ಶಾಲಾ ಮಕ್ಕಳ ವಾಲಿಬಾಲ್ ಪಂದ್ಯಾಟವು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ್ದು ಜಿಲ್ಲೆಯ 47 ತಂಡಗಳು ಭಾಗವಹಿಸಿತ್ತು. ಈ ಭಾರಿ 24 ತಂಡಗಳು ಈಗಾಗಲೇ ನೋಂದಾವಣೆ ಮಾಡಿಕೊಂಡಿವೆ. ಇನ್ನೂ ನೋಂದಾವಣೆಗೆ ಅವಕಾಶವಿದೆ ಎಂದು ಹೇಳಿದರು. ಜ.6ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಸಂಚಾಲಕ ಸೀತಾರಾಮ ರೈ ಸವಣೂರು ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಪಂದ್ಯಾಟದ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದ‌ರ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧ‌ರ್ ಜೈನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನ್ಯಾಕ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ನ ಅಧ್ಯಕ್ಷ ಜಗದೀಶ್ ಶೆಟ್ಟಿ, ಡಿಎಫ್‌ಒ ಶ್ರೀಧರ್ ಅವರು ಭಾಗವಹಿಸಲಿದ್ದಾರೆ.


ಸಂಜೆ ಪಂದ್ಯಾಟದ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ನ್ಯಾಯವಾದಿ ಜಯಪ್ರಕಾಶ್ ರೈ ಸುಳ್ಯ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಆಂಜನೇಯ ರೆಡ್ಡಿ, ಉದ್ಯಮಿ ಸಹಜ್ ರೈ, ಸುದಾನ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ, ಪುತ್ತೂರು ಯುವ ಸಬಲೀಕರಣ ಮತ್ತು ಯುವಜನ ಸೇವಾ ಕ್ರೀಡಾಧಿಕಾರಿ ಶ್ರೀಕಾಂತ್ ಪೂಜಾರಿ ಬಿರಾವು, ಬಿ.ಎಸ್.ಎನ್.ಎಲ್‌ನ ಗಣೇಶ್ ರೈ, ದ.ಕ. ಜಿಲ್ಲಾ ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಧಾಕೃಷ್ಣ ನ್ಯಾಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.


ಪಂದ್ಯಾಟದಲ್ಲಿ ಆಯ್ಕೆಗಳು ನಡೆಯಲಿದೆ: ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಿ ಅವರಿಗೆ ವಿಶೇಷ ತರಬೇತಿ ನೀಡಲಿದ್ದೇವೆ. ದಕ್ಷಿಣ ಕನ್ನಡದ ವಾಲಿಬಾಲ್ ಆಟಗಾರರಿಗೆ ಉತ್ತಮ ಹೆಸರಿದೆ. ಇದರ ಜೊತೆಗೆ ತೀರ್ಪುಗಾರರಿಗೂ ತರಬೇತಿ ನೀಡುತ್ತೇವೆ. ಈ ಎಲ್ಲಾ ಚಟುವಟಿಕೆಗಳು ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಉತ್ಸಾಹ ಹೆಚ್ಚಿಸಲಿದೆ. ಮುಂದಿನ ದಿನ ಮಕ್ಕಳಲ್ಲಿ ಎಲ್ಲಾ ರೀತಿಯ ಬೆಳವಣಿಗೆಗೆ ಕಾರಣವಾಗಲಿದೆ ಎಂದು ವಾಲಿಬಾಲ್ ಸಂಸ್ಥೆಯ ಗೌರವಾಧ್ಯಕ್ಷರಾಗಿರುವ ಸುದಾನ ವಸತಿಯುತ ಶಾಲೆಯ ಸಂಚಾಲಕರಾದ ರೇ. ವಿಜಯ ಹಾರ್ವಿನ್ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಶಂಕರ್ ಶೆಟ್ಟಿ ಪರಾರಿಗುತ್ತು, ತಾಲೂಕು ಸಂಸ್ಥೆಯ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಕಾರ್ಯದರ್ಶಿ ಬಾಬು ಮಾಸ್ತರ್ ಉಪಸ್ಥಿತರಿದ್ದರು.

Recent News


Leave a Comment: