ಪ್ರಿಯತಮೆಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಯುವಕ

ಸುದ್ದಿಗಳು News

Posted by vidyamaana on 2024-07-24 16:19:59 |

Share: | | | | |


ಪ್ರಿಯತಮೆಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಯುವಕ

ಶಿವಮೊಗ್ಗ, ಜುಲೈ.24: ಕಳೆದ ಎರಡೂವರೆ ವರ್ಷದಿಂದ ಪ್ರೀತಿಸುತ್ತಿದ್ದ (Love) ಯುವಕ ತನ್ನ ಪ್ರಿಯತಮೆಯನ್ನೇ ಕತ್ತುಹಿಸುಕಿ ಕೊಲೆ (Murder) ಮಾಡಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಸೌಮ್ಯ ಕೊಲೆಯಾದವಳು. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಆರೋಪಿ ಸೃಜನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಸೌಮ್ಯ ಮದುವೆಯಾಗುವಂತೆ ಸೃಜನ್​ನನ್ನು ಪೀಡಿಸುತ್ತಿದ್ದಳು. ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಕೋಪಗೊಂಡ ಸೃಜನ್ ಪ್ರಿಯತಮೆಯ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಇನ್ನು ಸೃಜನ್ ಕೊಲೆ ಮಾಡಿ ಮೃತದೇಹವನ್ನು ಶಿವಮೊಗ್ಗದ ಮುಂಬಾಳು ಗ್ರಾಮದ ಬಳಿ ಹೂತಿಟ್ಟಿದ್ದ. ಯುವತಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದು ವಿಚಾರ ಬೆಳಕಿಗೆ ಬಂದಿದೆ.


ತೀರ್ಥಹಳ್ಳಿಯಲ್ಲಿ ಫೈನಾನ್ಸ್ ವೊಂದರಲ್ಲಿ ಕೆಲಸ ಮಾಡ್ತಿದ್ದ ಸೃಜನ್​ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಈ ವೇಳೆ ನರ್ಸಿಂಗ್ ವ್ಯಾಸಂಗ ಮಾಡ್ತಿದ್ದ ಸೌಮ್ಯಾಳ ಪರಿಚಯವಾಗಿತು. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರದ್ದು ಬೇರೆ ಬೇರೆ ಸಮುದಾಯವಾಗಿದ್ದರಿಂದ ಸೃಜನ್ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರು. ಇದೇ ವೇಳೆ ಯುವತಿ ಸೌಮ್ಯ ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಜುಲೈ 2 ರಂದು‌ ಕೊಪ್ಪದಿಂದ ತೀರ್ಥಹಳ್ಳಿಗೆ ಬಂದಿದ್ದಳು.

ಬಳಿಕ ತನ್ನ ಪ್ರಿಯತಮನನ್ನು ಭೇಟಿ ಮಾಡಿ ಮನೆಗೆ ‌ಕರೆದುಕೊಂಡು‌ ಹೋಗುವಂತೆ ‌ಒತ್ತಡ ಹಾಕಿದ್ದಾಳೆ.


ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು ಎಂದು ಸೃಜನ್ ಮನವೊಲಿಸಲು ಪ್ರಯತ್ನಿಸಿದ್ದಾನೆ. ತೀರ್ಥಹಳ್ಳಿಯಿಂದ ಹೆದ್ದಾರಿಪುರಕ್ಕೆ ಕರೆದುಕೊಂಡು ಬಂದು ಸಮಾಧಾನದ ಮಾತುಗಳನ್ನಾಡಿದ್ದಾನೆ. ಇದರಿಂದ ಅನುಮಾನಗೊಂಡ ಸೌಮ್ಯ ನನ್ನನ್ನು ದೂರ ಮಾಡುತ್ತಿದ್ದಾನೆ. ಮೋಸ ಮಾಡುತ್ತಿದ್ದಾನೆ ಎಂದು ಭಾವಿಸಿ ವಾದ ಮಾಡಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು ಕೋಪಗೊಂಡ ಸೃಜನ್ ಸೌಮ್ಯ ಮೇಲೆ ಹಲ್ಲೆ ಮಾಡಿದ್ದಾನೆ. ಕತ್ತು ಹಿಸುಕಿ ಹಲ್ಲೆ ಮಾಡಿದ ಪರಿಣಾಮ ಯುವತಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.ಇದರಿಂದ ಗಾಬರಿಗೊಂಡ ಆರೋಪಿ ಸೃಜನ್ ಮುಂಬಾಳು ಬಳಿ ಶವವನ್ನು ಹೂತಿಟ್ಟಿದ್ದಾನೆ. ಮತ್ತೊಂದೆಡೆ ಮಗಳು ಮನೆಗೆ ಬರದಿದ್ದಕ್ಕೆ ಟೆನ್ಷನ್ ಆಗ ಪೋಷಕರು ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕೊಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಯುವಕನನ್ನು ಹುಡುಕಿಕೊಂಡು ಸಾಗರಕ್ಕೆ ‌ಬಂದಿದ್ದು ಯುವತಿಯನ್ನು ಕೊಂದು ಹೂತಿಟ್ಟ ರಹಸ್ಯವನ್ನು ಸೃಜನ್ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ. ಇಂದು ಎಸಿ ಸಮ್ಮುಖದಲ್ಲಿ ಯುವತಿಯ ಶವ ಹೊರಗೆ ತೆಗೆಯಲು ಸಿದ್ದತೆ ನಡೆಯುತ್ತಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದಾರೆ.

 Share: | | | | |


ಲಡ್ಡು ಬಂದು ಬಾಯಿಗೆ ಬಿತ್ತು..! ಆರ್ಡರ್ ಮಾಡಿದ್ದು ಫುಡ್ ಪಾರ್ಸೆಲ್ ಬಂದಿದ್ದು ಕ್ಯಾಶ್!!

Posted by Vidyamaana on 2024-07-21 15:34:53 |

Share: | | | | |


ಲಡ್ಡು ಬಂದು ಬಾಯಿಗೆ ಬಿತ್ತು..! ಆರ್ಡರ್ ಮಾಡಿದ್ದು ಫುಡ್ ಪಾರ್ಸೆಲ್ ಬಂದಿದ್ದು ಕ್ಯಾಶ್!!

ಕೊಪ್ಪಳ: ಗ್ರಾಹಕನಿಗೆ ಆಹಾರ ಪಾರ್ಸಲ್​ ಕವರ್​ ನೀಡುವ ಬದಲಿಗೆ ಹೋಟೆಲ್ ಮಾಲಿಕ 50 ಸಾವಿರ ರೂ. ಹಣವಿದ್ದ ಕವರ್​ ನೀಡಿದ ಘಟನೆ ನಡೆದಿದ್ದು, ಗ್ರಾಹಕ ಪಾರ್ಸಲ್​ ತೆಗೆದುಕೊಂಡು ಹೋಗಿ ಮನೆಯಲ್ಲಿ ನೋಡಿದಾಗ ತಿಂಡಿ ಬದಲಿಗೆ 50 ಸಾವಿರ ರೂ. ಇರುವುದು ಕಂಡಿದೆ.

ರಸೂಲ್ ಸಾಬ ಸೌದಾಗರ್ ಎಂಬುವರು ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಶನಿವಾರ ಅವರು ಬ್ಯಾಂಕ್​ಗೆ ಕಟ್ಟಲು ಎಂದು ಮನೆಯಿಂದ 49,625 ರೂಪಾಯಿ ಇದ್ದ ಹಣದ ಕವರ್​ನ್ನು ಹೋಟೆಲ್ ನಲ್ಲಿಟ್ಟಿದ್ದರು.



ಶಾಸಕರ ಇಂದಿನ ಕಾರ್ಯಕ್ರಮ ಆ 11

Posted by Vidyamaana on 2023-08-10 23:16:42 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 11

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 11 ರಂದು


ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಗೃಹಜ್ಯೋತಿ ಇದರ ಉದ್ಘಾಟನಾ ಕಾರ್ಯಕ್ರಮದ ಲ್ಲಿ ಭಾಗವಹಿಸಲಿದ್ದಾರೆ

ಹೃದಯಾಘಾತದಿಂದ ಭಾರತೀಯ ನೌಕಾಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ನಿಧನ

Posted by Vidyamaana on 2024-08-18 22:06:05 |

Share: | | | | |


ಹೃದಯಾಘಾತದಿಂದ ಭಾರತೀಯ ನೌಕಾಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ನಿಧನ

ನವದೆಹಲಿ: ಭಾರತೀಯ ಕೋಸ್ಟ್ ಗಾರ್ಡ್ ಮಹಾನಿರ್ದೇಶಕ ರಾಕೇಶ್ ಪಾಲ್ ಅವರು ಭಾನುವಾರ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಲ್ ಅವರು ಕಳೆದ ವರ್ಷ ಜುಲೈ 19 ರಂದು ಭಾರತೀಯ ಕೋಸ್ಟ್ ಗಾರ್ಡ್ನ 25 ನೇ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಪಾಲ್ ಅವರನ್ನು ಚೆನ್ನೈನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ಕೋಸ್ಟ್ ಗಾರ್ಡ್ ಮಹಾನಿರ್ದೇಶಕರು ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರ ಪಾರ್ಥಿವ ಶರೀರವನ್ನು ದೆಹಲಿಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ.

ಪಾಲ್ ಅವರ ನಿಧನವು ಅಕಾಲಿಕ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಭಾರತದ ಕಡಲ ಭದ್ರತೆಯನ್ನು ಬಲಪಡಿಸುವಲ್ಲಿ ದೊಡ್ಡ ದಾಪುಗಾಲು ಹಾಕಿದೆ ಎಂದು ಹೇಳಿದರು.

ಮಂಗಳೂರು; ಉಳ್ಳಾಲದಲ್ಲಿ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Posted by Vidyamaana on 2023-08-29 01:48:42 |

Share: | | | | |


ಮಂಗಳೂರು; ಉಳ್ಳಾಲದಲ್ಲಿ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

ಮಂಗಳೂರು; ಕೆರೆಯಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ಉಳ್ಳಾಲದ ತಲಪಾಡಿಯಲ್ಲಿ ನಡೆದಿದೆ.ದುರ್ಗಿಪಳ್ಳ ನಿವಾಸಿ ಹರೀಶ ಯಾನೆ ಹರಿ ಪ್ರಸಾದ್ ಆಚಾರ್ಯ (36) ದುರ್ದೈವಿ.ಅವಿವಾಹಿತರಾಗಿದ್ದ ಹರಿಪ್ರಸಾದ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ವಿಪರೀತ ಕುಡಿತ ಚಟ ಹೊಂದಿದ್ದರಂತೆ.ಕಳೆದ ನಾಲ್ಕು ದಿವಸಗಳಿಂದ ಮನೆಗೂ ಹೋಗಿರಲಿಲ್ಲ ಎನ್ನಲಾಗಿದೆ.ಹರಿಪ್ರಸಾದ್ ಯುವರಾಜ್ ಯಾನೆ ಮುನ್ನ ಲೋಹಿತ್, ನವೀನ್ ದೇವಾಡಿಗ, ನಿತೇಶ್ ಉಚ್ಚಿಲ್ ಎಂಬವರೊಂದಿಗೆ ಸಮೀಪದ ಖಾಸಗಿ ಲೇ ಔಟ್ ನಲ್ಲಿರುವ ಕೆರೆಗೆ ಸ್ನಾನಕ್ಕೆ ತೆರಳಿದ್ದ ಸಂದರ್ಭ ಅಕಸ್ಮತ್ ಆಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

ಶಾಸಕರ ಇಂದಿನ ಕಾರ್ಯಕ್ರಮ (ಜೂ 2)

Posted by Vidyamaana on 2023-06-02 03:15:32 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ (ಜೂ 2)

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಜೂನ್ 2ರಂದು ಮಧ್ಯಾಹ್ನದ‌ ಬಳಿಕ ಕುಡಿಯುವ ನೀರಿನ‌ ವಿಷಯದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ

ಮಧ್ಯಾಹ್ನ 3 ಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ.

ಸಂಜೆ 5.30ಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಸಭೆ.

ಕೆಎಸ್‌ಆರ್‌ಟಿಸಿಯಲ್ಲಿ 46 ಮಂದಿ ಚಾಲಕ ಹುದ್ದೆಗೆ ಆಯ್ಕೆ : ಸ್ವಂತ ಖರ್ಚಿನಲ್ಲೇ ತರಬೇತಿ ವ್ಯವಸ್ಥೆ ಮಾಡಿದ್ದ ಪುತ್ತೂರು ಶಾಸಕರು

Posted by Vidyamaana on 2023-08-18 02:52:08 |

Share: | | | | |


ಕೆಎಸ್‌ಆರ್‌ಟಿಸಿಯಲ್ಲಿ 46 ಮಂದಿ ಚಾಲಕ ಹುದ್ದೆಗೆ ಆಯ್ಕೆ : ಸ್ವಂತ ಖರ್ಚಿನಲ್ಲೇ ತರಬೇತಿ ವ್ಯವಸ್ಥೆ ಮಾಡಿದ್ದ ಪುತ್ತೂರು ಶಾಸಕರು

ಪುತ್ತೂರು : ಕೆಎಸ್‌ಆರ್‌ಟಿಸಿ ಯಲ್ಲಿ ಪುತ್ತೂರು ವಿಭಾಗ ಸೇರಿದಂತೆ ಕರಾವಳಿ ಭಾಗದಲ್ಲಿ ಚಾಲಕ ಹುದ್ದೆ ಇರುವುದನ್ನು ಮನಗಂಡು ಈ ಹುದ್ದೆಗೆ ದ ಕ ಜಿಲ್ಲೆಯವರನ್ನೇ ನೇಮಕವಾಗಬೇಕು ಎಂಬ ಉದ್ದೇಶದಿಂದ ಚಾಲಕ ಹುದ್ದೆಗೆ ಸುಮಾರು 70 ಮಂದಿ ಅರ್ಜಿ ಸಲ್ಲಿಸಿದ್ದರು.


ಈ ಪೈಕಿ ತರಬೇತಿಗೆ ಹಾಜರಾಗಿ ಮೊದಲ ಪರೀಕ್ಷೆಯಲ್ಲಿ 55 ಮಂದಿ ತೇರ್ಗಡೆಹೊಂದಿದ್ದರು, ಈ ಪೈಕಿ 49 ಮಂದಿಗೆ ಮೊದಲ ಹಂತದಲ್ಲಿ ಚಾಲಕ ಹುದ್ದೆಗೆ ನೇಮಕವಾಗಿದ್ದು ಶಾಸಕರು ಪಟ್ಟ ಶ್ರಮ ಸಾರ್ಥಕವಾಗಿದೆ.



ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಶಾಸಕರು ತನ್ನ ಸ್ವಂತ ಖರ್ಚಿನಿಂದ ಎಲ್ಲಾ ಚಾಲಕ ಆಕಾಂಕ್ಷಿಗಳನ್ನು ಹಾಸನಕ್ಕೆ ಕರೆದೊಯ್ದು ಅಲ್ಲಿ ತರಬೇತಿಯನ್ನು ಕೊಡಿಸಿದ್ದರು. ಮೊದಲ ಹಂತದ ತರಬೇತಿಯಲ್ಲಿ ೨೭ ಮಂದಿ ಮತ್ತು ಎರಡನೆ ತಂಡದಲ್ಲಿ ೨೮ ಮಂದಿಗೆ ತರಬೇತಿಯನ್ನು ನೀಡಲಾಗಿತ್ತು. ಈ ಪೈಕಿ ಕೆಲವು ಮಂದಿ ತರಬೇತಿಯಲ್ಲಿ ಅನುತ್ತೀರ್ಣರಾದ ಕಾರಣ ಅವರನ್ನು ಮುಂದಿನ ತರಬೇತಿ ಅವಧಿಗೆ ಕಾಯ್ದಿರಿಸಲಾಗಿತ್ತು.


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದವರು ಆ.10 ರಂದು ಪ್ರಾದೇಶಿಕ ತರಬೇತಿ ಕೇಂದ್ರ ಹಾಸದಲ್ಲಿ ಚಾಲಕರ ಆಯ್ಕೆ ಯನ್ನು ಮಾಡಿರುತ್ತಾರೆ. ಇದರಲ್ಲಿ ಟ್ರಸ್ಟ್ ಮೂಲಕ ತರಬೇತಿ ಪಡಕೊಂಡ ೪೬ ಮಂದಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಠೆಯ ಹೊರಗುತ್ತಿಗೆ ಆಧಾರದಲ್ಲಿ ಬಸ್ ಚಾಲಕರಾಗಿ ಆಯ್ಕೆಯಾಗಿರುತ್ತಾರೆ.


ನಮ್ಮ ಜನರಿಗೆ ಕೆಎಸ್‌ಆರ್‌ಟಿಸಿಯಲ್ಲಿ ಹುದ್ದೆ ದೊರೆಯಬೇಕೆಂಬ ಉದ್ದೇಶದಿಂದ ನಾನು ಚಾಲಕ ಹುದ್ದೆಗೆ ಅರ್ಜಿ ಹಾಕುವಂತೆ ಪತ್ರಿಕೆಯಲ್ಲಿ ಜಾಹಿರಾತು ನೀಡಿ, ಹುದ್ದೆ ಆಕಾಂಕ್ಷಿಗಳನ್ನು ಆಯ್ಕೆ ಮಾಡಿ ಅವರನ್ನು ತನ್ನ ಸ್ವಂತ ಖರ್ಚಿನಲ್ಲೇ ಹಾಸಕನಕ್ಕೆ ಕರೆದೊಯ್ದು ಚಾಲನಾ ತರಬೇತಿಯನ್ನು ಕೊಡಿಸಿದ್ದು ಮೊದಲ ಆಯ್ಕೆ ಪ್ರಕ್ರಿಯೆಯಲ್ಲಿ ೪೬ ಮಂದಿ ಚಾಲಕ ಹುದ್ದೆಗೆ ನೇಮಕವಾಗಿದ್ದಾರೆ.


ಸರಕಾರಿ ಹುದ್ದೆಗೆ ಈ ಭಾಗದವರು ಅರ್ಜಿ ಹಾಕುವುದು ಬಹಳ ಕಡಿಮೆ. ನಮ್ಮವರಿಗೂ ಸರಕಾರಿ ಹುದ್ದೆ ಸಿಗಬೇಕು ಎಂಬ ಏಕೈಕ ಉದ್ದೇಶದಿಂದ ನಾನು ಶಾಸನೆಂಬ ನೆಲೆಯಲ್ಲಿ ಪ್ರಯತ್ನ ಪಟ್ಟಿದ್ದೆ ಅದಕ್ಕೆ ಪೂರಕ ಎಂಬಂತೆ ಚಾಲಕರು ಸಹಕಾರ ನೀಡಿದ್ದು ಇದೀಗ ೪೭ ಮಂದಿಗೆ ಉದ್ಯೋಗ ಲಭಿಸಿದ್ದು ನನಗೆ ಅತೀವ ಸಂತೋಷವನ್ನು ತಂದಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

Recent News


Leave a Comment: