ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಕುಡಿಯುವ ನೀರಿನ ಸಂಪರ್ಕಕ್ಕೆ ದಾಖಲೆ ಕೇಳಬೇಡಿ

Posted by Vidyamaana on 2023-10-17 07:46:38 |

Share: | | | | |


ಕುಡಿಯುವ ನೀರಿನ ಸಂಪರ್ಕಕ್ಕೆ ದಾಖಲೆ ಕೇಳಬೇಡಿ

ಪುತ್ತೂರು: ಗ್ರಾಮದಲ್ಲಾಗಲಿ, ನಗರದಲ್ಲಾಗಲಿ ವಾಸ್ತವ್ಯ ಇರುವ ಮನೆಗೆ ನೀರಿನ ಸಂಪರ್ಕ ನೀಡಲು ಮನೆಯವರಲ್ಲಿ ಯಾವುದೇ ದಾಖಲೆಗಳನ್ನು ಕೇಳಬೇಡಿ, ಕುಡಿಯುವ ನೀರು ಎಲ್ಲರಿಗೂ ದೊರೆಯುವಂತಾಗಬೇಕು , ದಾಖಲೆ ಇಲ್ಲ ಎಂದು ನೀರಿನ ಸಂಪರ್ಕ ಕೊಡದೆ ಇರಬಾರದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ಖಡಕ್ ಸೂಚನೆಯನ್ನು ನೀಡಿದ್ದಾರೆ.


ಪುತ್ತೂರು ಶಾಸಕರ ಭವನದಲ್ಲಿ ನಡೆದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಈ ಸೂಚನೆಯನ್ನು ನೀಡಿದ್ದಾರೆ.


ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿಯೋರ್ವರಿಗೆ ಗ್ರಾಪಂ ಕುಡಿಯುವ ನೀರಿನ ಸಂಪರ್ಕ ನೀಡಿಲ್ಲ ಎಂಬ ದೂರುಗಳು ಬಂದಿದೆ, ಆ ಮನೆಯವರು ಪಿಕಪ್‌ನಲ್ಲಿ ಬೇರೆ ಕಡೆಯಿಂದ ಕುಡಿಯುವ ನೀರು ಮನೆಗೆ ತರುತ್ತಿದ್ದಾರೆ ಎಂಬ ಮಾಹಿತಿ ಇದ್ದು ತಕ್ಷಣವೇ ಆ ಮನೆಗೆ ನೀರಿನ ಸಂಪರ್ಕ ನೀಡುವಂತೆ ಗ್ರಾಪಂ ಪಿಡಿಒ ರವರಿಗೆ ಶಾಸಕರು ಸೂಚನೆಯನ್ನು ನೀಡಿದ್ದಾರೆ.


ಕೆಲವು ಗ್ರಾಪಂ ನಲ್ಲಿ ಮನೆಗೆ ಡೋರ್ ನಂಬರ್ ಇಲ್ಲ, ರೇಶನ್ ಕಾರ್ಡು ಇಲ್ಲ, ಆಧಾರ್ ಕಾರ್ಡು ಇಲ್ಲ ಎಂದು ನೆಪ ಹೇಳಿ ಕುಡಿಯುವ ನೀರಿನ ಸಂಪರ್ಕ ನೀಡದೇ ಇರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಸದಸ್ಯರುಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಂಥಹ ಮನೆಗಳಿಗೆ ತಕ್ಷಣ ನೀರಿನ ಸಂಪರ್ಕ ನೀಡಬೇಕು. ನನ್ನ ಕ್ಷೇತ್ರದಲ್ಲಿ ಯಾರು ಕೂಡಾ ಹಸಿವನಿಂದ ಇರಬಾರದು, ಕರೆಂಟ್ ಇಲ್ಲದೆ ಕತ್ತಲೆಯಲ್ಲಿ ಇರಬಾರದು, ಕುಡಿಯುವ ನೀರು ಇಲ್ಲದೇ ಇರಬಾರದು . ಈ ಮೂರು ವ್ಯವಸ್ಥೆಗಳಿಂದ ಯವುದಾದರೂ ಕುಟುಂಬ ವಂಚಿತರಾಗಿದ್ದರೆ ನಾನೇ ಫೀಲ್ಡಿಗೆ ಇಳಿಯಬೇಕಾಗುತ್ತದೆ ಎಂದು ಶಾಸಕರು ಸೂಚನೆಯನ್ನು ನೀಡಿದ್ದಾರೆ.

BIG NEWS: ಆದಾಯ ಗಳಿಕೆಯಲ್ಲಿ ಸತತ 13ನೇ ವರ್ಷವೂ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಮೊದಲ ಸ್ಥಾನ

Posted by Vidyamaana on 2024-04-07 11:17:04 |

Share: | | | | |


BIG NEWS: ಆದಾಯ ಗಳಿಕೆಯಲ್ಲಿ ಸತತ 13ನೇ ವರ್ಷವೂ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಮೊದಲ ಸ್ಥಾನ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇಗುಲ 2023 - 24ನೇ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 146.01 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಈ ಮೂಲಕ ಸತತ 13ನೇ ವರ್ಷವೂ ಆದಾಯ ಗಳಿಕೆಯಲ್ಲಿ ರಾಜ್ಯದ ಮೊದಲ ದೇಗುಲವಾಗಿ ಹೊರಹೊಮ್ಮಿದೆ.ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕಳೆದ ಹಣಕಾಸು ವರ್ಷದಲ್ಲಿ 123 ಕೋಟಿ ರೂಪಾಯಿ ಆದಾಯ ಬಂದಿದ್ದು, ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಕುಕ್ಯೆ ಸುಬ್ರಹ್ಮಣ್ಯವೂ ಸೇರಿದಂತೆ ರಾಜ್ಯದ ಹಲವು ದೇಗುಲಗುಳ ಆದಾಯ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

ನೆಟ್ಟಿಗರ ಭಾವನೆಗಳನ್ನು ಅಲ್ಲಾಡಿಸಿದ ಬಡ ವಿದ್ಯಾರ್ಥಿಯ ಬರ್ತ್ ಡೇ ಪಾರ್ಟಿ

Posted by Vidyamaana on 2023-11-06 14:05:44 |

Share: | | | | |


ನೆಟ್ಟಿಗರ ಭಾವನೆಗಳನ್ನು ಅಲ್ಲಾಡಿಸಿದ ಬಡ ವಿದ್ಯಾರ್ಥಿಯ ಬರ್ತ್ ಡೇ ಪಾರ್ಟಿ

ಕೊಲಂಬೊ: ಬರ್ತ್‌ ಡೇ (BirthDay) ಬಂತೆಂದರೆ ಸಾಕು ಮಕ್ಕಳು ಖುಷಿಯಾಗುತ್ತಾರೆ. ಅದರಲ್ಲೂ ಕೇಕ್‌ ಕಟ್ಟಿಂಗ್‌, ಸರ್ಪ್ರೈಸ್‌ ಪಾರ್ಟಿ ಇದ್ದರಂತೂ ಕೇಳೋದೇ ಬೇಡ, ಅವರು ಸಂತಸದಿಂದ ತೇಲಾಡುತ್ತಾರೆ. ಆದರೆ ಬಡತನದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಆ ಭಾಗ್ಯವಿರುವುದಿಲ್ಲ.ಅಂತಹ ಹುಡುಗನೊಬ್ಬನ ಬರ್ತ್‌ಡೇಯನ್ನು ಸರ್ಪ್ರೈಸ್‌ ಆಗಿ ಆಚರಿಸಿದ ವಿಡಿಯೊ ಇದೀಗ ವೈರಲ್‌ (Viral Video) ಆಗಿದೆ. ಮೊದಲ ಬಾರಿ ತನ್ನ ಹುಟ್ಟುಹಬ್ಬವನ್ನು ಆಯೋಜಿಸಿರುವುದನ್ನು ನೋಡಿ ಆ 8ರ ಹರೆಯದ ಬಾಲಕ ಭಾವುಕನಾಗಿದ್ದಾನೆ. ಈ ವಿಡಿಯೊ ನೋಡಿ ಹಲವರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.ವಿಡಿಯೊದಲ್ಲೇನಿದೆ?


ಕೊಲಂಬಿಯಾದ ಹುಡುಗನೊಬ್ಬನ ಬರ್ತ್ ಡೇ ಪಾರ್ಟಿ ಎಲ್ಲರ ಮನ ಕಲುಕಿದ ವಿಡಿಯೋ ಇದು!!


ಕೊಲಂಬಿಯಾದ ಎಬೆಜಿಕೊದ 8 ವರ್ಷದ ಏಂಜೆಲ್ ಡೇವಿಡ್​ನ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಹೀಗಾಗಿ ಆತನ ಹುಟ್ಟುಹಬ್ಬವನ್ನು ಆಚರಿಸುತ್ತಿರಲಿಲ್ಲ. ಎಂದಿನಂತೆ ಈ ಬಾರಿಯೂ ಆತನ ಬರ್ತ್‌ಡೇ ಬಂತು. ಆತನಿಗೆ ಸರ್ಪ್ರೈಸ್‌ ಕೊಡಲು ಶಿಕ್ಷಕರು, ಸಹಪಾಠಿಗಳು ನಿರ್ಧರಿಸಿದರು. ಅದರಂತೆ ಆತನ ಕ್ಲಾಸ್‌ ರೂಮ್‌ ಅನ್ನು ಅವನಿಗೆ ಗೊತ್ತಿಲ್ಲದಂತೆ ಅಲಂಕರಿಸಿದರು. ಎಂದಿನಂತೆ ಶಾಲೆಗೆ ಬಂದ ಡೇವಿಡ್​ ತರಗತಿಯ ಬಾಗಿಲಿನಲ್ಲೇ ನಿಂತುಬಿಟ್ಟ. ಯಾವುದನ್ನೂ ಊಹಿಸಿರದ ಅವನು ಬರ್ತ್‌ಡೇ ಸರ್ಪ್ರೈಸ್‌ ನೋಡಿ ಭಾವುಕನಾದ. ಕಣ್ಣಿನಲ್ಲಿ ನೀರು ತುಂಬಿ ಬಂತು. ಕೂಡಲೇ ಅವನ ಬಳಿ ತೆರಳಿದ ಸಹಪಾಠಿಗಳು ಪ್ರೀತಿಯಿಂದ ಅಪ್ಪಿಕೊಂಡು ಸಮಾಧಾನ ಮಾಡಿ, ಶುಭಾಶಯ ತಿಳಿಸಿದರು.ಮಕ್ಕಳ ಮುಗ್ಧತೆಗೆ ನೆಟ್ಟಿಗರು ಮನ ಸೋತಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೊವನ್ನು ಈಗಾಗಲೇ 20 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಡೇವಿಡ್‌ನ ಮುಗ್ಧತೆ ಜತೆಗೆ ಬರ್ತ್‌ಡೇ ಸರ್ಪ್ರೈಸ್‌ ಪಾರ್ಟಿ ಆಯೋಜಿಸಿದ್ದ ಶಿಕ್ಷಕರು, ಸಹಪಾಠಿಗಳಿಗೂ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಮಕ್ಕಳ ಈ ಕಪಟವಿಲ್ಲದೆ ಸ್ವಭಾವದ ಕಾರಣದಿಂದಲೇ ಅವರನ್ನು ದೇವರಿಗೆ ಹೋಲಿಸಲಾಗುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.


ನೆಟ್ಟಿಗರು ಏನಂದ್ರು?


ವಿಡಿಯೊ ನೋಡಿದ ಒಬ್ಬರಂತೂ ಭಾವುಕರಾಗಿ ʼʼಹೃದಯಸ್ಪರ್ಶಿ ವಿಡಿಯೊ. ಕೆಲವೊಂದು ನಮ್ಮ ಚಿಕ್ಕ ಪುಟ್ಟ ಕೆಲಸಗಳೇ ಇತರರ ಮೇಲೆ ಅಗಾಧವಾದ ಧನಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮಿಂದ ಇತರರಿಗೆ ಸಹಾಯ ಆಗುವುದಿದ್ದರೆ ದಯವಿಟ್ಟು ಮಾಡಿ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಇತರರಿಗೆ ಸಹಾಯಹಸ್ತ ಚಾಚಿʼʼ ಎಂದಿದ್ದಾರೆ. ಅನೇಕರಿಗಂತೂ ಬರ್ತ್‌ಡೇ ಪಾರ್ಟಿ ಮಾಡಲು ಅಥವಾ ಉಡುಗೊರೆ ಕೊಳ್ಳಲು ಸಾಧ್ಯವಾಗದ ತಮ್ಮ ಬಾಲ್ಯದ ನೆನಪು ಕಾಡಿದೆ.ಈ ಬಗ್ಗೆ ನೆಟ್ಟಿಗರೊಬ್ಬರು ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ, ʼʼಈ ಹುಡುಗನ ಭಾವನೆ ನನಗೆ ಅರ್ಥವಾಗುತ್ತದೆ. ನಾನು 6 ವರ್ಷದವನಿದ್ದಾಗ ಬಡತನದ ಬೇಗೆಯಲ್ಲಿ ಬೇಯುತ್ತಿದ್ದೆವು. ನನ್ನ ಬರ್ತ್‌ಡೇ ದಿನ ಬೆಳಗ್ಗೆ ನಾನು ಅಳುತ್ತಿದ್ದೆ. ಕೇಕ್‌ ಮತ್ತು ಐಸ್‌ಕ್ರೀಂ ಕೊಳ್ಳಲು ಸಾಧ್ಯವಿಲ್ಲ ಎನ್ನುವುದೇ ನನ್ನ ಅಳುವಿಗೆ ಕಾರಣವಾಗಿತ್ತುʼʼ ಎಂದು ಹೇಳಿದ್ದಾರೆ. ʼʼಈ ವಿಡಿಯೊ ನೋಡಿ ಕಣ್ಣಂಚು ಒದ್ದೆಯಾಯ್ತುʼʼ ಎಂದಿದ್ದಾರೆ ಮತ್ತೊಬ್ಬರು. ʼʼನನಗೀಗ 50 ವರ್ಷ. ಆದರೂ ಈ ವಿಡಿಯೊ ನೋಡಿ ನನ್ನ ಕಣ್ಣು ತುಂಬಿ ಬಂತುʼʼ ಎಂದು ಇನ್ನೊಬ್ಬ ಭಾವುಕ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ

ಗದಗ: ನಗರ ಸಭಾ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

Posted by Vidyamaana on 2024-04-19 11:36:09 |

Share: | | | | |


ಗದಗ: ನಗರ ಸಭಾ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಗದಗ: ಬೆಳ್ಳಂಬೆಳಿಗೆ ಬೆಚ್ಚಿಬೀಳಿಸುವ ಸುದ್ದಿ ಹೊರಬಿದ್ದಿದ್ದು, ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಲಗಿದಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಆಘಾತಕಾರಿ ಘಟನೆ ಗದಗದ ನಗರದ ದಾಸರ ಓಣಿಯಲ್ಲಿ ನಡೆದಿದೆ.

ನಗರ ಸಭೆಯ ಉಪಾಧ್ಯಕ್ಷೆ ಸುನಂದಾ ಬಾಕಳೆಯವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪರಶುರಾಮ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು.

ಕಾರ್ಕಳ : ದಾಯಾದಿಗಳಿಂದಲೇ ಮೃತ ವ್ಯಕ್ತಿಯ 6.5 ಕೋಟಿ ರೂ. ಮೌಲ್ಯದ ಆಸ್ತಿ, ನಗದು ಲಪಟಾಯಿಸಿ ವಂಚನೆ

Posted by Vidyamaana on 2023-02-27 03:50:02 |

Share: | | | | |


ಕಾರ್ಕಳ : ದಾಯಾದಿಗಳಿಂದಲೇ ಮೃತ ವ್ಯಕ್ತಿಯ 6.5 ಕೋಟಿ ರೂ. ಮೌಲ್ಯದ ಆಸ್ತಿ, ನಗದು ಲಪಟಾಯಿಸಿ ವಂಚನೆ

ಕಾರ್ಕಳ: ದಾಯಾದಿ ಸೋದರರಿಬ್ಬರು ಸೇರಿಕೊಂಡು ತಮ್ಮದೇ ಕುಟುಂಬದ ಮೃತಪಟ್ಟ ವ್ಯಕ್ತಿಯೊಬ್ಬರ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಲಪಟಾಯಿಸಿದ್ದಾರೆ ಎಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತಂದೆಯ ಮರಣದ ನಂತರ ಅವರ ಹೆಸರಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯದ ಸ್ಥಿರಾಸ್ತಿ, ಷೇರುಗಳು ಹಾಗೂ ನಗದನ್ನು ಸೋದರ ಸಂಬಂಧಿಗಳಿಂದ ಲಪಟಾಯಿಸಿ ವಂಚನೆ ಎಸಗಿದ್ದಾರೆ ಎಂದು ಕಾರ್ಕಳದ ಪುನೀತ್ ರಾವ್ ಎಂಬವರು ನ್ಯಾಯಾಲಯದಲ್ಲಿ ದಾಖಲಿಸಿದ್ದ ಖಾಸಗಿ ದೂರಿನ ಮೇರೆಗೆ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.


ಪುನೀತ್ ರಾವ್ ಅವರ ತಂದೆ ಅಶೋಕ್ ರಾವ್ ಕಾರ್ಕಳದ ಮನೆಯಲ್ಲಿ ಒಬ್ಬರೇ ವಾಸವಿದ್ದು ಕಳೆದ 2020ರ ಜುಲೈ 13ರಂದು ಮೃತಪಟ್ಟಿದ್ದರು,ಅಶೋಕ್ ರಾವ್ ಅವರು ಕಾರ್ಕಳದ ಕಸಬಾ ಗ್ರಾಮದಲ್ಲಿ ಎಕರೆಗಟ್ಟಲೆ ಸ್ಥಿರಾಸ್ತಿ, ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತದ ಹಣ ಹಾಗೂ ವಿವಿಧ ಕಂಪೆನಿಗಳ ಕೋಟ್ಯಾಂತರ ರೂ. ಮೌಲ್ಯದ ಷೇರುಗಳನ್ನು ಹೊಂದಿದ್ದರು. ಅವರು ಮೃತಪಟ್ಟ ಮಾಹಿತಿಯನ್ನು ಆರೋಪಿ ದಿನೇಶ್. ಕೆ (51ವ) ಮತ್ತು ಅವರ ಪತ್ನಿ ಮಂಜುಳಾ ಎಂಬವರು ಪುನೀತ್ ರಾವ್ ಸಂಬAಧಿಕರಾದ ಕೃಷ್ಣರಾವ್ ಎಂಬವರಿಗೆ ಮಾಹಿತಿ ನೀಡಿದ್ದರು. ಮೃತಪಟ್ಟ ಮರುದಿನ ಅಶೋಕ್ ರಾವ್ ಹೆಸರಿನಲ್ಲಿದ್ದ ರೂ.4,24,90,548.90 ಮೌಲ್ಯದ ಷೇರುಗಳನ್ನು ಮತ್ತು ಅವರ ಹೆಸರಿನಲ್ಲಿದ್ದ ಸ್ಥಿರಾಸ್ತಿಗಳನ್ನು ಹಾಗೂ ಅವರ 2,20,76,238.81 ರೂ. ಬ್ಯಾಂಕ್ ಠೇವಣಿಗಳನ್ನು ಆರೋಪಿಗಳಾದ ಕಾರ್ಕಳ ಪೇಟೆಯ ನಿವಾಸಿ ದಿನೇಶ್ ಕೆ (51) ಮತ್ತು ಪೆರ್ವಾಜೆ ಗುದ್ದೇಲ್ ಬಾಕ್ಯಾರು ನಿವಾಸಿ ಪ್ರಸಾದ್ ಕೆ (27) ಎಂಬವರು ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ ಎಂದು ಪುನೀತ್ ರಾವ್ ದೂರಿನಲ್ಲಿ ತಿಳಿಸಿದ್ದಾರೆ.


ತಂದೆ ಅಶೋಕ್ ರಾವ್ ಅವರು ಮೃತಪಟ್ಟ ಸಂದರ್ಭದಲ್ಲಿ ನಾವೆಲ್ಲ ಅಮೆರಿಕದಲ್ಲಿ ವಾಸವಿದ್ದು, ಆ ಸಂದರ್ಭದಲ್ಲಿ ಕೋವಿಡ್ ಲಾಕ್ ಡೌನ್ ಇದ್ದ ಕಾರಣದಿಂದ ತಾಯಿ ಮತ್ತು ಸಹೋದರಿಗೆ ಊರಿಗೆ ಬರಲು ಸಾಧ್ಯವಾಗಿರಲಿಲ್ಲ.ಅಶೋಕ ರಾವ್ ಅವರು ಜೀವಂತವಾಗಿರುವಾಗ ತನ್ನ ಆಸ್ತಿ ಹಂಚಿಕೆ ಕುರಿತು ಯಾವುದೇ ಉಯಿಲು ಅಥವಾ ಬೇರೆ ಯಾವುದೇ ದಾಖಲೆ ಬರೆದಿರಲಿಲ್ಲ ಎಂದು ಅವರ ಪುತ್ರ ಪುನಿತ್ ರಾವ್ ಅವರು ದೂರಿನಲ್ಲಿ ತಿಳಿಸಿದ್ದು, ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ದಿನೇಶ್.ಕೆ ಹಾಗೂ ಪ್ರಸಾದ್ ಎಂಬವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಪುತ್ತೂರು: ಮಹಿಳೆಯ ಚಿನ್ನದ ಸರ ಕಸಿದು ಪರಾರಿ

Posted by Vidyamaana on 2023-10-15 04:56:34 |

Share: | | | | |


ಪುತ್ತೂರು: ಮಹಿಳೆಯ ಚಿನ್ನದ ಸರ ಕಸಿದು ಪರಾರಿ

ಪುತ್ತೂರು : ವೃದ್ಧ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಳ್ಳಿಯರ ತಂಡವೊಂದು ಹಾಡುಹಗಲೇ ರಾಜರೋಷವಾಗಿ ಪುತ್ತೂರಿನ ಬಸ್ಸು ನಿಲ್ದಾಣದ ಅವರಣದಲ್ಲಿ ಎಗರಿಸಿಕೊಂಡು ಹೋದ ಘಟನೆಯೊಂದು ಅ 14 ರಂದು ಶನಿವಾರ ಸಂಜೆ ನಡೆದಿದೆ.ಬಂಟ್ವಾಳ ತಾಲೂಕಿನ ಕನ್ಯಾನ ಸಮೀಪದ ನಂದರಬೆಟ್ಟು ನಿವಾಸಿ ಸುಂದರಿ ಚಿನ್ನದ ಸರ ಕಳಕೊಂಡವರು. ಸುಂದರಿಯವರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವಠಾರದ ಗಾಂಧೀಕಟ್ಟೆಯ ಬಳಿ ಇದ್ದಾಗ ಆಕೆಯಕುತ್ತಿಗೆಯಲ್ಲಿದ್ದ ಮೂರು ಪವನ್ ತೂಕದ ಚಿನ್ನದ ಸರವನ್ನು ಮಹಿಳೆಯರ

ತಂಡವೊಂದು ಕದ್ದಿದೆ.


ಸುಂದರಿ ಅವರು ಶನಿವಾರ ಸಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವಾಣಿಜ್ಯ ಸಂಕೀರ್ಣದಲ್ಲಿ ಗಾಂಧೀಕಟ್ಟೆ ಪಕ್ಕದಲ್ಲಿರುವ ಬೇಕರಿಯಲ್ಲಿ ತಿಂಡಿಗಳನ್ನು ಖರೀದಿಸಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದಂತೆಯೇ ನಾಲ್ವರಿದ್ದ ಕಳ್ಳಿಯರ ತಂಡವೊಂದು ಏಕಾಏಕಿಯಾಗಿ ಅವರ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿ ಎಸ್ಕೆಪ್ ಆಗಿದೆ. ಈ ವೇಳೆ ಮಹಿಳೆ ಜೋರಾಗಿ ಬೊಬ್ಬೆ ಹೊಡೆದು, ಸರ ಎಗರಿಸಿರುವ ಬಗ್ಗೆ ಅಲ್ಲಿದ್ದ ಸ್ಥಳೀಯರಲ್ಲಿ ತಿಳಿಸಿದ್ದಾರೆ.ಚಿನ್ನದ ಸರ ಕಳಕೊಂಡ ಮಹಿಳೆ  ಪುತ್ತೂರು ನಗರ ಠಾಣೆಗೆ ತೆರಳಿ ದೂರುನೀಡಿರುವುದಾಗಿ ತಿಳಿದು ಬಂದಿದೆ

Recent News


Leave a Comment: