ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ :ರಾಜ್ಯ ಸರ್ಕಾರ ಆದೇಶ

ಸುದ್ದಿಗಳು News

Posted by vidyamaana on 2024-07-05 17:43:40 |

Share: | | | | |


ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ :ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡಿ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ .ಈ ಮೂಲಕ ಆಟೋ, ಕ್ಯಾಬ್ ಚಾಲಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.ಕಳೆದ ವರ್ಷ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗಿತ್ತು.

ಈ ವೇಳೆ ಸರ್ಕಾರದಿಂದ ಎಲ್ಲ ಮಾದರಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೂ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡುವಂತೆ ಸಾರಿಗೆ ಸಂಘಟನೆಗಳು ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿತ್ತು ಸಾರಿಗೆ ಸಂಘಟನೆಗಳ ಮನವಿ ಬೆನ್ನಲ್ಲೇ ಸಾರಿಗೆ ಇಲಾಖೆ ಅಧಿಕಾರಿಗಳು ಅನಧಿಕೃತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ವಿರುದ್ದ ಕ್ರಮಕ್ಕೆ ಮುಂದಾಗಿದೆ.

ಈ ಹಿನ್ನೆಲೆ ಸಾರಿಗೆ ಅಧಿಕಾರಿಗಳು ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದು. 11 ತಂಡವನ್ನು ರಚಿಸಿ ಆರ್ಟಿಓ ಅಧಿಕಾರಿಗಳ ನೇತೃತ್ವದಲ್ಲಿ ಸೀಜ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.ರಾಜ್ಯಾದ್ಯಂತ ಜು.5ರಿಂದ ಕಡ್ಡಾಯವಾಗಿ ಎಲೆಕ್ಟ್‌ಇಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕಂಡುಬಂದಲ್ಲಿ ಕೂಡಲೇ ಅವುಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

 Share: | | | | |


ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ಮುಂಗಡ ಬುಕ್ಕಿಂಗ್ ಆಫರ್

Posted by Vidyamaana on 2024-04-24 04:21:00 |

Share: | | | | |


ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ಮುಂಗಡ ಬುಕ್ಕಿಂಗ್ ಆಫರ್

ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕರಿಗೆ ಅಕ್ಷಯ ತೃತೀಯ ಪ್ರಯುಕ್ತ ಮುಂಗಡ ಬುಕ್ಕಿಂಗ್ ಆಫರ್ ಏಪ್ರಿಲ್ 20ರಿಂದ ಮೇ.9ರವರೆಗೆ ಲಭ್ಯವಿದೆ.


ಎಲ್ಲಾ ಮಳಿಗೆಗಳಾದ ಪುತ್ತೂರು, ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿಯೂ ಈ ರಿಯಾಯಿತಿ ಆಫರ್ ಲಭ್ಯವಿದೆ. ಸಂಸ್ಕೃತದಲ್ಲಿ ಅಕ್ಷಯ ಎಂದರೆ ಶಾಶ್ವತ ಎಂದರ್ಥ ಅಕ್ಷಯ ತೃತೀಯ ಎಂಬುವುದು ಶುಭದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಜನರು ಚಿನ್ನ ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಖರೀದಿಸುತ್ತಾರೆ ಏಕೆಂದರೆ ಇದು ಕುಟುಂಬಕ್ಕೆ ಸಮೃದ್ಧಿ ಮತ್ತು ಆದೃಷ್ಟವನ್ನು ತರುತ್ತದೆ ಎಂಬುದು ನಂಬಿಕೆ ಆದುದರಿಂದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ತಮ್ಮೆಲ್ಲ ನೆಚ್ಚಿನ ಗ್ರಾಹಕರಿಗೆ ಅಕ್ಷಯ ತೃತೀಯ ಪ್ರಯುಕ್ತ ಮುಂಗಡ ಬುಕ್ಕಿಂಗ್ ಆಫರ್, ಮದುವೆ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಹಾಗೂ ಗ್ರಾಹಕರಿಗೆ ಮೆಚ್ಚಿನ ಆಭರಣಗಳನ್ನು ಆಯ್ಕೆ ಮಾಡಿ ಚಿನ್ನದ ನಾಣ್ಯವನ್ನು ಗೆಲ್ಲುವ ಸುವರ್ಣವಕಾಶ ಕಲ್ಪಿಸಿದೆ.

ಪುತ್ತೂರು ಶಾಸಕರ ಜನಪರ ಕಾಳಜಿ - ಎ.23ರ ಪದ್ಮರಾಜ್ ಚುನಾವಣಾ ರೋಡ್ ಶೋ ರದ್ದು

Posted by Vidyamaana on 2024-04-22 17:13:52 |

Share: | | | | |


ಪುತ್ತೂರು ಶಾಸಕರ ಜನಪರ ಕಾಳಜಿ - ಎ.23ರ ಪದ್ಮರಾಜ್ ಚುನಾವಣಾ ರೋಡ್ ಶೋ ರದ್ದು

ಪುತ್ತೂರು: ಏ.23ರಂದು ಕಾಂಗ್ರೆಸ್ ನ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಪುತ್ತೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ರೋಡ್ ಶೋ ಚುನಾವಣಾ ರ್ಯಾಲಿಯನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ರದ್ದುಗೊಳಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೋಡ್ ಶೋ ನಡೆಸುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ವಾಹನಗಳಲ್ಲಿ ವಿವಿಧ ಕಡೆ ತೆರಳುವ ಜನರಿಗೆ ತೊಂದರೆಯಾಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ತೊಂದರೆಯಾಗಲಿದ್ದು, ದೈನಂದಿನ ವ್ಯವಹಾರಕ್ಕಾಗಿ ನಗರಕ್ಕೆ ಬರುವ ಜನಸಾಮಾನ್ಯರಿಗೂ ತೊಂದರೆಯಾಗಲಿದೆ ಎಂದು ಏ.23ರಂದು ನಡೆಸಲು ಉದ್ದೇಶಿಸಿದ್ದ ರೋಡ್ ಶೋ ಪ್ಯಾಲಿಯನ್ನು ರದ್ದುಗೊಳಿಸಲಾಗಿದೆ.

ಮೈತ್ರಿ ಮುಟ್ಟಿನ ಕಪ್ ಯೋಜನೆಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ

Posted by Vidyamaana on 2023-09-11 11:58:32 |

Share: | | | | |


ಮೈತ್ರಿ ಮುಟ್ಟಿನ ಕಪ್ ಯೋಜನೆಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು: ಮೈತ್ರಿ ಮುಟ್ಟಿನ ಕಪ್ ಯೋಜನೆಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಡಿ. ರಂದೀಪ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಡಾ. ಎಂ. ಇಂದುಮತಿ, ವಿಧಾನ ಪರಿಷತ್ ಶಾಸಕರಾದ ಕೆ. ಮಂಜುನಾಥ ಭಂಡಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಯೋಜನಾ ನಿರ್ದೇಶಕರಾದ ಡಾ. ಶ್ರೀನಿವಾಸ್ ಜಿ.ಎನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗಿಯ ಸಹ ನಿರ್ದೇಶಕರಾದ ಡಾ.ರಾಜೇಶ್ವರಿ ದೇವಿ ಎಚ್. ಆರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕರಾದ ಡಾ. ವೀಣಾ ವಿ., ಮಂಗಳೂರು ಮೇಯರ್ ಸುಧೀರ್ ಶೆಟ್ಟಿ, ಖ್ಯಾತ ಚಲನ ಚಿತ್ರ ನಟಿ ಸಪ್ತಮಿ ಗೌಡ ಭಾಗವಾಹಿಸಿದ್ದರು.

ಸುಳ್ಯ : ಏಕಾಏಕಿ ಭೂಮಿ ಕುಸಿದು ಬೃಹತ್ ಹೊಂಡ ನಿರ್ಮಾಣ : ಕುಸಿದ ಭೂಮಿ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಧರಾಶಾಹಿ

Posted by Vidyamaana on 2023-11-03 22:30:47 |

Share: | | | | |


ಸುಳ್ಯ : ಏಕಾಏಕಿ ಭೂಮಿ ಕುಸಿದು ಬೃಹತ್ ಹೊಂಡ ನಿರ್ಮಾಣ : ಕುಸಿದ ಭೂಮಿ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಧರಾಶಾಹಿ

ಸುಳ್ಯ : ಕೆಲ ಸಮಯದ ಹಿಂದೆ ಸುರಿದ ಭಾರೀ ಮಳೆಗೆ ಏಕಾಏಕಿ ಭೂಮಿ ಕುಸಿದು ಬೃಹತ್ ಹೊಂಡ ನಿರ್ಮಾಣವಾದ ಘಟನೆ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗ ನಡೆದಿದ್ದು, ಸಮೀಪವಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಧರೆಗುರುಳಿದೆ.


ಕುಸಿದ ಭೂಮಿ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ಫಾರ್ಮರ್ ಧರಾಶಾಹಿ - ಇಲ್ಲಿದೆ ನೋಡಿ ವೀಡಿಯೋ

ಸುಮಾರು ಹತ್ತು ಅಡಿಯಷ್ಟು ಉದ್ದಕ್ಕೆ ಗುಂಡಿ ನಿರ್ಮಾಣವಾಗಿದ್ದು, ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ಬೀಳುವ ಹಂತಕ್ಕೆ ತಲುಪಿತ್ತು. ಹೊಂಡ ನಿರ್ಮಾಣವಾದ ಸ್ವಲ್ಪ ಸಮಯದ ಬಳಿಕ ವಿದ್ಯುತ್ ಟ್ರಾನ್ಸ್ಫಾರ್ಮರ್ ನೆಲಕ್ಕುರುಳಿದೆ.


ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಜಯ ನಮ್ದೇ- ಗೆಲುವನ್ನು ಹೀಗೆ ಸಂಭ್ರಮಿಸಿ.. ಅಶೋಕ್ ರೈ ಕೈ ಕಾರ್ಯಕರ್ತರಿಗೆ ಹೇಳಿದ್ದೇನು

Posted by Vidyamaana on 2023-05-11 09:09:32 |

Share: | | | | |


ಜಯ ನಮ್ದೇ- ಗೆಲುವನ್ನು ಹೀಗೆ ಸಂಭ್ರಮಿಸಿ.. ಅಶೋಕ್ ರೈ ಕೈ ಕಾರ್ಯಕರ್ತರಿಗೆ ಹೇಳಿದ್ದೇನು

ಪುತ್ತೂರು: ವಿಧಾನಸಭಾ ಚುನಾವಣೆಗೆ ಮತದಾನ ನಿನ್ನೆಯಷ್ಟೇ ಮುಕ್ತಾಯಗೊಂಡಿದೆ. ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಮತದಾನವಾಗಿದೆ. ಕ್ಷೇತ್ರದ ಜನರು ಮತ್ತು ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ಹಾಗೂ ಪಕ್ಷೇತರ ಅಭ್ಯರ್ಥಿ ಹಾಗೂ ಅವರ ಹಿಂಬಾಲಕರೂ ಸಹ ಗೆಲುವಿನ ಲೆಕ್ಕಾಚಾರ ಮತ್ತು ಕಾತರದಲ್ಲಿದ್ದಾರೆ.


ಈ ನಡುವೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದು ಅದರಲ್ಲಿ ಅವರು ಮತದಾರರಿಗೆ ಕೃತಜ್ಞತೆ ಅರ್ಪಿಸುವ ಜೊತೆಗೆ ಗೆಲುವು ತಮ್ಮದೇ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅವರ ಮಾತಿನ ಸಾರಾಂಶ ಇಲ್ಲಿದೆ.., ‘ಒಳ್ಳೆಯ ರೀತಿಯಲ್ಲಿ ಚುನಾವಣೆ ನಡೆದಿದೆ, ಅಲೆ ನಮ್ಮ ಪರವಾಗಿದ್ದು ನಾವು ಸುಮಾರು 25 ಸಾವಿರದಿಂದ 30 ಸಾವಿರ ಅಂತರದಿಂದ ಜಯಭೇರಿ ಬಾರಿಸ್ತೇವೆ. ನಮ್ಮ ಕಾರ್ಯಕರ್ತರಿಗೆ ನನ್ನದೊಂದು ಮನವಿ ಇದೆ, ಯಾರೂ ಕೂಡಾ ವಿಜಯೋತ್ಸವ ಸಂದರ್ಭದಲ್ಲಿ ಬೇರೆ ಪಕ್ಷದವರ ಮನೆಯ ಹತ್ತಿರ ಅವರ ಮನೆಗಳ ಕಾಂಪೌಡ್ ಸಮೀಪ ಪಟಾಕಿ ಹೊಡೆಯುವ ಕೆಲಸ ಮಾಡಬಾರದು, ಅದೇ ರೀತಿ ಅನ್ಯಪಕ್ಷದವನರನ್ನು ನಿಂದಿಸುವ ಅಥವಾ ಅವರಿಗೆ ನೋವು ಉಂಟುಮಾಡುವ ರೀತಿಯಲ್ಲಿ ಯಾರೂ ವರ್ತಿಸಬಾರದು. ಹಿಂದೆ ಏನೇ ಆಗಿರ್ಬಹುದು ಆದರೆ ಈ ಬಾರಿ ಇಂತಹ ಯಾವುದೇ ವರ್ತನೆಗೆ ನೀವು ಅವಕಾಶ ಮಾಡಿಕೊಡಬಾರದು’ ಎಂದು ಅಶೋಕ್ ಕುಮಾರ್ ರೈ ಹೇಳುವ ಮೂಲಕ ಪುತ್ತೂರು ಕ್ಷೇತ್ರದಲ್ಲಿ ಸೌಹಾರ್ದ ರಾಜಕೀಯ ವಾತಾವರಣವನ್ನು ನಿರ್ಮಿಸಿ ಅದನ್ನು ಮುಂದುವರಿಸಿಕೊಂಡು ಹೋಗುವ ಭರವಸೆಯನ್ನು ಮೂಡಿಸಿದ್ದಾರೆ.

ಕಾಂಕ್ರೀಟ್ ರಸ್ತೆಗಾಗಿ ಡಾಂಬರು ರಸ್ತೆಯ ದುರುಪಯೋಗ ಕೆಲಸದ ಬಳಿಕವೂ ಸರಿಪಡಿಸುವ ಗೊಡವೇ ಇಲ್ಲ ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ

Posted by Vidyamaana on 2023-02-16 15:01:32 |

Share: | | | | |


ಕಾಂಕ್ರೀಟ್ ರಸ್ತೆಗಾಗಿ ಡಾಂಬರು ರಸ್ತೆಯ ದುರುಪಯೋಗ  ಕೆಲಸದ ಬಳಿಕವೂ ಸರಿಪಡಿಸುವ ಗೊಡವೇ ಇಲ್ಲ  ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ

ಪುತ್ತೂರು: ಹೊಸ ರಸ್ತೆಯ ಕಾಮಗಾರಿ ನಡೆಸುವಾಗ, ಹಳೆಯ ರಸ್ತೆಯನ್ನು ಹಾಳು ಮಾಡಬಾರದು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಂತಹ ಕನಿಷ್ಠ ಜ್ಞಾನವೂ ಇಲ್ಲದ ಆಡಳಿತದ ವೈಖರಿಗೆ ಸಾಕ್ಷಿಯಾಗಿ ನಿಂತಿದೆ ನಾಣಿಲ ಜಂಕ್ಷನ್.

ಬೈತಡ್ಕ - ನಾಣಿಲ - ಗುಜ್ಜರ್ಮೆ ರಸ್ತೆಯನ್ನು ಇತ್ತೀಚೆಗೆ ಅಭಿವೃದ್ಧಿಗೊಳಿಸಲಾಯಿತು. ಈ ಮೂರು ರಸ್ತೆಗಳು ಸೇರುವ ಜಂಕ್ಷನ್ ಅನ್ನು ಬಿಟ್ಟು, ಉಳಿದಂತೆ ಮೂರು ಪ್ರದೇಶದ ರಸ್ತೆಗಳಿಗೂ ಕಾಂಕ್ರೀಟಿಕರಣ ಮಾಡಲಾಯಿತು. ಹೀಗೆ ಕಾಂಕ್ರೀಟಿಕರಣ ಮಾಡುವಾಗ, ಕಾಂಕ್ರೀಟ್ ಮಿಕ್ಸ್ ಮಾಡಲು ಬಳಸಿದ್ದು ಮಾತ್ರ ಜಂಕ್ಷನ್‌ನಲ್ಲಿದ್ದ ಡಾಂಬರು ರಸ್ತೆಯನ್ನು!

ಡಾಂಬರು ರಸ್ತೆಯನ್ನು ಕಾಂಕ್ರೀಟ್ ಮಿಕ್ಸ್ ಮಾಡಲು ಬಳಸಿದ್ದೇ ಮೊದಲ ತಪ್ಪು. ಹೋಗಲಿ ಬಿಡಿ. ಕೆಲಸವಾದ ಬಳಿಕವಾದರೂ, ಕಾಂಕ್ರೀಟ್‌ನ ತುಣುಕುಗಳನ್ನು ಡಾಂಬರು ರಸ್ತೆಯಿಂದ ತೆರವು ಮಾಡಬೇಕಲ್ಲವೇ? ಅದೂ ಮಾಡಿಲ್ಲ. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಿಂದ ಸಾಗಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ.

ಮೂರು ರಸ್ತೆ ಸೇರುವ ಜಾಗದಲ್ಲಿ ಸಣ್ಣ ವೃತ್ತ ಇದೆ. ಈ ವೃತ್ತದ ಸುತ್ತಮುತ್ತ ಸುಮಾರು 100 ಮೀಟರ್ ಅಂತರದಲ್ಲಿ ಈ ಡಾಂಬರು ರಸ್ತೆ ಹರಡಿದೆ. ಉಳಿದೆಲ್ಲವೂ ಕಾಂಕ್ರೀಟಿಕರಣ ಆಗಿದೆ. ಈ 100 ಮೀಟರ್ ಡಾಂಬರು ರಸ್ತೆಯನ್ನು ಹಾಳುಮಾಡಿದ ಶ್ರೇಯಸ್ಸು ಆಡಳಿತಕ್ಕೆ, ಗುತ್ತಿಗೆದಾರರಿಗೆ ಸಲ್ಲುತ್ತದೆ!

ಸ್ಥಳೀಯರು ಮೌನ:

2022ರ ಅಕ್ಟೋಬರ್ 27ರಂದು ಈ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟನೆ ಮಾಡಲಾಗಿದೆ. ಘಟಾನುಘಟಿ ನಾಯಕರು ಸ್ಥಳಕ್ಕೆ ಆಗಮಿಸಿದ್ದರೂ ಕೂಡ. ಅಲ್ಲಿಂದ ಇಲ್ಲಿವರೆಗೆ ಅಂದರೆ ಸುಮಾರು 4 ತಿಂಗಳುಗಳ ಕಾಲ ಡಾಂಬರು ರಸ್ತೆ ದೈನವೀ ಸ್ಥಿತಿಯಲ್ಲೇ ಇದೆ. ಸ್ಥಳೀಯರು, ದ್ವಿಚಕ್ರ ಸವಾರರು ಇದೇ ರಸ್ತೆಯಲ್ಲಿ ಹರಸಾಹಸ ಪಟ್ಟುಕೊಂಡು ಹೋಗುತ್ತಿದ್ದಾರೆ. ಆದರೆ ಯಾರೂ ಕೂಡ, ಇದನ್ನು ಸರಿಪಡಿಸಿ ಎಂದು ಆಗ್ರಹ ಪಡಿಸಿಲ್ಲ. ಆದ್ದರಿಂದ ಡಾಂಬರು ರಸ್ತೆ ಇನ್ನೂ ಹಾಗೇ ಉಳಿದುಕೊಂಡಿದೆ. ಚೆನ್ನಾಗಿದ್ದ ರಸ್ತೆಯನ್ನು ಹಾಳುಗೆಡವಿದರ ಬಗ್ಗೆ ಪ್ರಶ್ನಿಸುವ ಗೋಜಿಗೆ ಹೋಗದ ಸ್ಥಳೀಯರ ಮೌನವೇ, ಸಮಸ್ಯೆ ಪರಿಹಾರಕ್ಕೆ ದೊಡ್ಡ ತೊಡಕಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

Recent News


Leave a Comment: