ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಬಿಜೆಪಿ ವತಿಯಿಂದ ಪಂಜಿನ ಮೆರವಣಿಗೆ | ನಳಿನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ವಿಭಜನ-ವಿಭೀಷಕ ಸ್ಮೃತಿ ದಿವಸ್

Posted by Vidyamaana on 2023-08-15 03:12:13 |

Share: | | | | |


ಬಿಜೆಪಿ ವತಿಯಿಂದ ಪಂಜಿನ ಮೆರವಣಿಗೆ | ನಳಿನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ವಿಭಜನ-ವಿಭೀಷಕ ಸ್ಮೃತಿ ದಿವಸ್

ಬೆಂಗಳೂರು: ಬಿಜೆಪಿ ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ ವಿಭಜನ, ವಿಭೀಷಕ ಸ್ಮೃತಿ ದಿವಸ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ಹೆಬ್ಬಾಳ ಗೆದ್ದಲಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಪಂಜಿನ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮಂಡಲ ಕಾರ್ಯಾಲಯದ ವರೆಗೆ ಈ ಮೆರವಣಿಗೆ ನಡೆಯಿತು.ದೇಶ ವಿಭಜನೆ ಸಂದರ್ಭದಲ್ಲಿ ನಡೆದ ಕರಾಳ ದುರ್ಘಟನೆಯ ಸಂತಾಪ ಕಾರ್ಯಕ್ರಮ ಇದಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಶಾಸಕ ಎಸ್.ಆರ್.ವಿಶ್ವನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣ ಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಇಲ್ಯಾಸ್ ತುಂಬೆ

Posted by Vidyamaana on 2023-03-16 16:35:24 |

Share: | | | | |


ಚುನಾವಣಾ  ಕಣದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಇಲ್ಯಾಸ್ ತುಂಬೆ

ಬಂಟ್ವಾಳ: ಕಳೆದ ಬಾರಿ ರಾಜಕೀಯ ಪ್ರಬುದ್ಧತೆಯ ಕೊರತೆಯಿಂದ ಕಾಂಗ್ರೆಸ್ ಪಕ್ಷವನ್ನು ನಂಬಿ ಸೋತಿದ್ದೇವೆ, ಈ ಬಾರಿ ಅಂತಹ ಮಹಾ ತಪ್ಪು ಮಾಡುವುದಿಲ್ಲ, 2023 ರ ವಿಧಾನಸಭಾ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಎಸ್. ಡಿ.ಪಿ.ಐ.ಪಕ್ಷದ ಅಭ್ಯರ್ಥಿ ಇಲ್ಯಾಸ್ ತುಂಬೆ ತಿಳಿಸಿದ್ದಾರೆ.ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯ ಪ್ರಭಾವಿ ನಾಯಕರ ವಿನಂತಿಯಂತೆ ಎರಡು ಶರತ್ತಿನ ಮೇಲೆ ಒಪ್ಪಂದ ವಾಗಿತ್ತು. ಮೂರು ಕ್ಷೇತ್ರದಲ್ಲಿ ಮಾತ್ರ ಎಸ್.ಡಿ.ಪಿ.ಐ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದು, ಉಳಿದ ಎಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸಹಕಾರ ನೀಡುವ ಒಪ್ಪಂದವಾಗಿತ್ತು. ಆದರೆ ಚುನಾವಣೆಯ ಸಂದರ್ಭದಲ್ಲಿ ಅವರು ನೀಡಿದ ಮಾತನ್ನು ಪಾಲಿಸಿಲ್ಲ, ಅದೇ ನಾಯಕನ ಸೂಚನೆಯಂತೆ ಗೇಮ್ ಪ್ಲಾನ್ ನಂತೆ ಕಾಂಗ್ರೇಸಿಗರು ಬಿಜೆಪಿಗೆ ಸೇರಿ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು. ಇದು ಕಾಂಗ್ರೆಸ್ ವಿಶ್ವಾಸ ದ್ರೋಹದ ಕೆಲಸ ಎಂದು ಟೀಕಿಸಿದರು.ಇನ್ನು ಕಳೆದ ಬಾರಿ ಪಕ್ಷದ ತಪ್ಪು ನಿರ್ಧಾರದಿಂದ ಪಕ್ಷದ ಸಂಘಟನೆಗೆ ಬಲಬಾದ ಹೊಡೆದ ಬಿದ್ದಿದೆ. ಹೀಗಾಗಿ ಈ ಬಾರಿ ಅಂತಹ ತಪ್ಪು ಮರುಕಳಿಸದಂತೆ ಮತ್ತು ತಲಮಟ್ಟದಿಂದ ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರ ಜುಮ್ಮಾ ಮಸೀದಿ ಗೆ ಭೇಟಿ ನೀಡಿದ ಪುತ್ತೂರಿನ ನೂತನ ಶಾಸಕ ಅಶೋಕ್ ರೈ

Posted by Vidyamaana on 2023-05-13 16:12:12 |

Share: | | | | |


ಕೇಂದ್ರ ಜುಮ್ಮಾ ಮಸೀದಿ ಗೆ ಭೇಟಿ ನೀಡಿದ ಪುತ್ತೂರಿನ ನೂತನ ಶಾಸಕ ಅಶೋಕ್ ರೈ

ಪುತ್ತೂರು: ನೂತನ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ ಅವರು ಶನಿವಾರ ಸಂಜೆ ದರ್ಗಾ ಹಾಗೂ ಚರ್ಚಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.

ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ವಠಾರ ದಲ್ಲಿರುವ ಪುತ್ತೂರು ತಂಙಳ್ ದರ್ಗಕ್ಕೆ  ಭೇಟಿ ನೀಡಿ ಪ್ರಾರ್ಥಿಸಿದರು. ಅವರ ಜೊತೆಗೆ ಪ್ರಮುಖರು ಉಪಸ್ಥಿತರಿದ್ದರು.

ಸೆ.10ಕ್ಕೆ ಎಸ್‌ಎಸ್‌ಎಫ್ ಗೋಲ್ಡನ್ ಫಿಫ್ಟಿ ಮಹಾಸಮ್ಮೇಳನ: ಸಿಎಂ ಸಿದ್ದರಾಮಯ್ಯ ಭಾಗಿ

Posted by Vidyamaana on 2023-09-09 07:27:01 |

Share: | | | | |


ಸೆ.10ಕ್ಕೆ ಎಸ್‌ಎಸ್‌ಎಫ್ ಗೋಲ್ಡನ್ ಫಿಫ್ಟಿ ಮಹಾಸಮ್ಮೇಳನ: ಸಿಎಂ ಸಿದ್ದರಾಮಯ್ಯ ಭಾಗಿ

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್‌ಎಸ್‌ಎಫ್) 50ನೇ ವರ್ಷಾಚರಣೆಯ ಅಂಗವಾಗಿ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನವನ್ನು ಇದೇ 10ರಂದು ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಆಯೋಜಿಸಿದೆಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಎಸ್‌ಎಫ್‌ ರಾಜ್ಯ ಘಟಕದ ಅಧ್ಯಕ್ಷ ಸುಫ್ಯಾನ್ ಸಖಾಫಿ, ‘ಎಸ್‌ಎಸ್‌ಎಫ್‌ ರಾಷ್ಟ್ರೀಯ ಸಮಿತಿ ಆಯೋಜಿಸಿರುವ ಸಂವಿಧಾನ ಯಾತ್ರೆ ಕಾಶ್ಮೀರದಿಂದ ಆರಂಭವಾಗಿದೆ. ಈ ಯಾತ್ರೆಯ ಸಮಾರೋಪ ಸಮಾರಂಭ ಅದೇ ದಿನ ನಡೆಯಲಿದೆ. ಅಂದು ಬೆಳಿಗ್ಗೆ 10ಕ್ಕೆ ಎಸ್‌ಎಸ್‌ಎಫ್‌ ಪ್ರತಿನಿಧಿ ಸಮಾವೇಶ ನಡೆಯಲಿದ್ದು, ರಾಜ್ಯದ 7 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.


ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕದ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲುಮಾ ಮಾಣಿ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ.

BREAKING : ಬೆಂಕಿ ವದಂತಿಯಿಂದ ಪಕ್ಕದ ಹಳಿಗೆ ಜಿಗಿದ ಪ್ರಯಾಣಿಕರು : ಗೂಡ್ಸ್ ರೈಲು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು

Posted by Vidyamaana on 2024-06-15 06:48:55 |

Share: | | | | |


BREAKING : ಬೆಂಕಿ ವದಂತಿಯಿಂದ ಪಕ್ಕದ ಹಳಿಗೆ ಜಿಗಿದ ಪ್ರಯಾಣಿಕರು : ಗೂಡ್ಸ್ ರೈಲು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು

ನವದೆಹಲಿ : ಸಸಾರಾಮ್ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ವದಂತಿ ಹಿನ್ನೆಲೆಯಲ್ಲಿ ರೈಲಿನಿಂದ ಜಿಗಿದ ಮೂವರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಧನ್ಬಾದ್ ವಿಭಾಗದ ಕುಮಂಡಿಹ್ ರೈಲ್ವೆ ನಿಲ್ದಾಣದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ನಡೆದ ಘಟನೆಯಲ್ಲಿ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ.

ಭವಾನಿ ರೇವಣ್ಣರ ಕೋಟಿ ಬೆಲೆಯ ಆ ಕಾರು ಯಾವುದು? ಅದರ ವಿಶೇಷತೆಗಳೇನು?

Posted by Vidyamaana on 2023-12-05 07:11:18 |

Share: | | | | |


ಭವಾನಿ ರೇವಣ್ಣರ ಕೋಟಿ ಬೆಲೆಯ ಆ ಕಾರು ಯಾವುದು? ಅದರ ವಿಶೇಷತೆಗಳೇನು?

  ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ KA-03-NK-5 ನಂಬರಿನ ದುಬಾರಿ ಕಾರಿಗೆ ಸಾಲಿಗ್ರಾಮದ ಬಳಿ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದಿದ್ದ. ಈ ವೇಳೆ ಬೈಕ್ ಸವಾರನ ವಿರುದ್ಧ ಭವಾನಿ ರೇವಣ್ಣ ಗರಂ ಆದರು. ಈ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿದೆ. ಈ ವೇಳೆ ಹೆಚ್ಚು ಚರ್ಚೆಗೆ ಬಂದಿರುವುದು ಅವರು ಪ್ರಯಾಣಿಸುತಿದ್ದ ಐಷಾರಾಮಿ ಟೊಯೊಟಾ ವೆಲ್‌ಫೈರ್ (Toyota Vellfire) ಕಾರ್ ಆಗಿದೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರ ಸೊಸೆ ಭವಾನಿ ರೇವಣ್ಣ (Bhavani Revanna) ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಬೈಕ್‌ವೊಂದು ಡಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗದ ನಂಬರ್ ಪ್ಲೇಟ್ ಮತ್ತು ಮುಂಭಾಗದಲ್ಲಿ ಬಂಪರ್ ಡ್ಯಾಮೇಜ್ ಆಗಿದೆ. ಈ ಕಾರು ಅಪಘಾತ ರಾಜ್ಯದಲ್ಲಿ ಭಾರೀ ಸದ್ದು ಮಾಡಿದೆ. ಹೀಗಾಗಿ ಇದು ಯಾವ ಕಾರು ಎಂಬ ಕುತೂಹಲ ಮೂಡಿದೆ. ಭವಾನಿ ರೇವಣ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಯಾವುದು ಮತ್ತು ಇದರ ವಿಶೇಷತೆಗಳ ಬಗ್ಗೆ ಮಾಹಿತಿ ಇಲ್ಲಿದೆ.


ಭವಾನಿ ರೇವಣ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಟೊಯೊಟಾ ವೆಲ್‌ಫೈರ್ ಆಗಿದೆ. ಈ ಕಾರಿಗೆ ಪ್ರಸ್ತುತ ಆನ್ ರೋಡ್ ಬೆಲೆಯು ರೂ.1,48,58,511 ಆಗಿದ್ದು, ಈ ಕಾರಿನ ಟಾಪ್ ವೆರಿಯೆಂಟ್ ಮಾದರಿಯ ಆನ್ ರೋಡ್ ಬೆಲೆಯು ರೂ.1.61 ಕೋಟಿಯಾಗಿದೆ. ಇದು ಸ್ಟ್ಯಾಂಡ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವು 2.5-ಲೀಟರ್ ಇನ್‌ಲೈನ್ 4-ಸಿಲಿಂಡರ್ DOHC (ಡಬಲ್ ಓವರ್‌ಹೆಡ್ ಕ್ಯಾಮ್‌ಶಾಫ್ಟ್) ಎಂಜಿನ್ ಅನ್ನು ಹೊಂದಿದೆ.ಇದು 142 kW (@ 6000 rpm) ಮತ್ತು ಗರಿಷ್ಠ 240 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದು ಎಲೆಕ್ಟ್ರಿಕ್ ಮೋಟಾರು ಮತ್ತು ಹೈಬ್ರಿಡ್ ಬ್ಯಾಟರಿಯೊಂದಿಗೆ ಕಡಿಮೆ ಕಾರ್ಬನ್ ಹೊರಸೂಸುವಿಕೆಯನ್ನು ಖಾತ್ರಿಪಡಿಸುತ್ತದೆ. ಟೊಯೊಟಾದ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಸಿಸ್ಟಮ್ ಅತ್ಯುತ್ತಮ ಮೈಲೇಜ್ ಕೂಡ ಒದಗಿಸುತ್ತದೆ. ಕಂಪನಿಯ ಪ್ರಕಾರ ಹೊಸ ಕಾರು ಪ್ರತಿ ಲೀಟರ್‌ಗೆ 19.28 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.


ಇಂಟೀರಿಯರ್ ಬಗ್ಗೆ ಹೇಳುವುದಾದರೆ, ಹೆಚ್ಚಿದ ಆಸನ ಅಂತರದೊಂದಿಗೆ ಹೊಸ ಸುಧಾರಿತ ಆಂತರಿಕ ಸ್ಥಳವನ್ನು ಆಪ್ಟಿಮೈಸ್ ಮಾಡಲಾಗಿದೆ. ಡ್ರೈವರ್ ಸೀಟ್ ಮಾರ್ಪಾಡುಗಳ ಮಾಸ್ಟರ್‌ಫುಲ್ ಆರ್ಕೆಸ್ಟ್ರೇಶನ್ ಮತ್ತು ಎರಡನೇ ಸಾಲಿನ ಆಸನಗಳ ಅತ್ಯಾಧುನಿಕ ನಿರ್ಮಾಣದ ಮೂಲಕ, ಮುಂಭಾಗ ಮತ್ತು ಎರಡನೇ ಸಾಲಿನ ಆಸನಗಳ ನಡುವಿನ ಅಂತರವನ್ನು ಈಗ ಯಶಸ್ವಿಯಾಗಿ ಹೆಚ್ಚಿಸಲಾಗಿದೆ.ಹೊಸ ಸೂಪರ್-ಲಾಂಗ್ ಓವರ್‌ಹೆಡ್ ಕನ್ಸೋಲ್ ಸೀಲಿಂಗ್‌ನ ಮಧ್ಯದಲ್ಲಿ ಅಗತ್ಯ ವಸ್ತುಗಳನ್ನು ಕೇಂದ್ರೀಕರಿಸುತ್ತದೆ. ಕಂಫರ್ಟ್ ಝೋನ್ ಅನ್ನು ಕಸ್ಟಮೈಸ್ ಮಾಡಲು ಪವರ್ ಕಂಟ್ರೋಲ್‌ಗಳಂತಹ ಡಿಟ್ಯಾಚೇಬಲ್ ಸ್ಮಾರ್ಟ್ ಫೋನ್ ಅನ್ನು ಒದಗಿಸುವ ಮೂಲಕ ಸವಾರಿ ಸೌಕರ್ಯವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. 2 ನೇ ಸಾಲಿನ ಸೀಟುಗಳು ಮಸಾಜ್ ಕಾರ್ಯವನ್ನು ಸಕ್ರಿಯಗೊಳಿಸಲಿವೆ.


ಟೊಯೋಟಾ ಕಾರುಗಳಲ್ಲಿ ಸುರಕ್ಷತೆಯು ಅತ್ಯುನ್ನತ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಟೊಯೋಟಾ ಸೇಫ್ಟಿ ಸೆನ್ಸ್‌ನೊಂದಿಗೆ, ಹೊಸ ವೆಲ್‌ಫೈರ್ ಪ್ರಯಾಣಿಕರಿಗೆ ಮತ್ತು ಪಾದಚಾರಿಗಳಿಗೆ ಸಮಗ್ರ ರಕ್ಷಣೆಯನ್ನು ಒದಗಿಸಲು ಅತ್ಯಾಧುನಿಕ ಸೇಫ್ಟಿ ಫೀಚರ್‌ಗಳನ್ನು ಹೊಂದಿದೆ. ಇದರಲ್ಲಿ ಪ್ರೀ-ಕೊಲಿಷನ್ ಸೇಫ್ಟಿ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಟ್ರೇಸ್ ಅಸಿಸ್ಟ್, ಅಡಾಪ್ಟಿವ್ ಹೈ ಬೀಮ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್‌ನಂತಹ ಪ್ರೊಆಕ್ಟಿವ್ ಡ್ರೈವಿಂಗ್ ಅಸಿಸ್ಟ್ ವೈಶಿಷ್ಟ್ಯಗಳು ಟೊಯೋಟಾ ಸೇಫ್ಟಿ ಸೆನ್ಸ್ ಭಾಗವಾಗಿ ವೆಲ್‌ಫೈರ್‌ನಲ್ಲಿ ಬರುತ್ತವೆ.


ಈ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು ಐಷಾರಾಮಿ ವಿಭಾಗದಲ್ಲಿ ಸುರಕ್ಷತೆ ಮತ್ತು ಚಾಲನಾ ಸಹಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸುಧಾರಿತ ತಂತ್ರಜ್ಞಾನಕ್ಕೆ ಅನುಗುಣವಾಗಿ, ವೆಲ್‌ಫೈರ್ ಈಗ ರಿಮೋಟ್ ಡೋರ್ ಲಾಕ್/ಅನ್‌ಲಾಕ್, ಹವಾನಿಯಂತ್ರಣ, ತುರ್ತು ಸೇವೆಗಳು, ವೆಹಿಕಲ್ ಡಯಾಗ್ನೋಸ್ಟಿಕ್, ಚಾಲಕ ಮಾನಿಟರಿಂಗ್ ಎಚ್ಚರಿಕೆಗಳಂತಹ 60 ಕ್ಕೂ ಹೆಚ್ಚು ಸಂಪರ್ಕಿತ ಫಿಚರ್ಸ್ ಗಳನ್ನು ಹೊಂದಿವೆ.


ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

Recent News


Leave a Comment: