ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ಢಿಕ್ಕಿ ಹೊಡೆದು ಓಡಿ ಹೋದ ನಂಬರ್ ಪ್ಲೇಟ್ ಬಿಟ್ಟು ಹೋದ ಸುಲಭದಲ್ಲಿ ಸಿಕ್ಕಿ ಬಿದ್ದ

Posted by Vidyamaana on 2023-05-29 04:35:05 |

Share: | | | | |


ಢಿಕ್ಕಿ ಹೊಡೆದು ಓಡಿ ಹೋದ ನಂಬರ್ ಪ್ಲೇಟ್ ಬಿಟ್ಟು ಹೋದ ಸುಲಭದಲ್ಲಿ ಸಿಕ್ಕಿ ಬಿದ್ದ

ಬೆಳ್ಳಾರೆ : ತಾನು ಓಡಿಸುವ ವಾಹನ ಇನ್ನೊಂದು ವಾಹನಕ್ಕೆ ಢಿಕ್ಕಿ ಹೊಡೆಯಿತು ಎಂದಾಕ್ಷಣ ನಿಂತು ವಿಚಾರಿಸಬೇಕು ತಾನೇ? ವಿಚಾರಿಸದೇ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಪಾಲ್ತಾಡಿನಲ್ಲಿ ನಡೆದ ಘಟನೆಯೇ ಸಾಕ್ಷಿ.

ಅಂಕತ್ತಡ್ಕದಿಂದ ಪಾಲ್ತಾಡು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನ ಸವಾರ, ಪಾಲ್ತಾಡು ನಿವಾಸಿ ಸಿ. ಇಸಾಕ್ ಸಾಹೇಬ್ ಅವರು ರಸ್ತೆಗೆ ಎಸೆಯಲ್ಪಟ್ಟು, ಗಾಯಗೊಂಡರು. ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಪುತ್ತೂರಿನ ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಕಾರು ಚಾಲಕ ಮಾತ್ರ, ಢಿಕ್ಕಿ ಹೊಡೆದು ಸೀದಾ ಪರಾರಿಯಾಗಿದ್ದ.

ಆರೋಪಿ ಕಾರು ಚಾಲಕನಿಗೆ ಎಲ್ಲರೂ ಹಿಡಿಶಾಪ ಹಾಕುವವರೇ. ಆದರೆ ಅವರ ಜಾಡನ್ನು ಹಿಡಿದದ್ದೇ ಭಾರೀ ಕುತೂಹಲದ ವಿಷಯ.

ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ನಂಬರ್ ಪ್ಲೇಟ್ ರಸ್ತೆಯಲ್ಲೇ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರೋರ್ವರು ನಂಬರ್ ದಾಖಲಿಸಿಕೊಂಡು, ಕಾರಿನ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಅಪಘಾತ ನಡೆಸಿ ಪರಾರಿಯಾದ ಕಾರು ಚಾಲಕನ ಮೇಲೆ ಭಾರೀ ಕೋಪ - ಆಕ್ರೋಶದ ನಡುವೆಯೂ ಆತನ ಎಡವಟ್ಟಿಗೆ ಎಲ್ಲರೂ  ಮುಸಿಮುಸಿ ನಕ್ಕರು.

ಮೇ 26ರಂದು ರಾತ್ರಿ 8 ಗಂಟೆಗೆ ಘಟನೆ ನಡೆದಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ ಪ್ರಕರಣ ; ಆರೋಪಿ ಚೈತ್ರಾ ಜೊತೆಗೆ ಕುಂದಾಪುರ ಸ್ಥಳನಾಮ ಬಳಸದಂತೆ ಮಾಧ್ಯಮಗಳಿಗೆ ಕೋರ್ಟ್​​ ತಡೆಯಾಜ್ಞೆ

Posted by Vidyamaana on 2023-09-24 07:16:32 |

Share: | | | | |


ವಂಚನೆ ಪ್ರಕರಣ ; ಆರೋಪಿ ಚೈತ್ರಾ ಜೊತೆಗೆ ಕುಂದಾಪುರ ಸ್ಥಳನಾಮ ಬಳಸದಂತೆ ಮಾಧ್ಯಮಗಳಿಗೆ ಕೋರ್ಟ್​​ ತಡೆಯಾಜ್ಞೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಟಿಕೆಟ್​ ಕೊಡಿಸುವುದಾಗಿ ಹೇಳಿ ಉದ್ಯಮಿಯೊಬ್ಬರಿಂದ ಕೋಟ್ಯಾಂತರ ರೂ. ವಂಚನೆ ನಡೆಸಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಹೆಸರಿನ ಜೊತೆಗೆ ‘ಕುಂದಾಪುರ’ ಎಂಬ ಸ್ಥಳನಾಮ ಬಳಸದಂತೆ ಬೆಂಗಳೂರು ನಗರದ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.


ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಆರೋಪಿ ಜೊತೆಗಿನ ಕುಂದಾಪುರ ಹೆಸರು ತೆಗೆದುಹಾಕುವಂತೆ ಕೋರಿ ನ್ಯಾಯಾಲಯಕ್ಕೆ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಉದ್ಯಮಿ, ಪ್ರಸ್ತುತ ಬೆಂಗಳೂರು ಹನುಮಂತ ನಗರದ ನಿವಾಸಿ ಗಣೇಶ್​ ಶೆಟ್ಟಿ ಅರ್ಜಿ ಸಲ್ಲಿಸಿದ್ದರು.


ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಅವರ ಸುದ್ದಿ ಪ್ರಸಾರ ಮಾಡುವಾಗ ಹೆಸರಿನ ಜೊತೆಗೆ ಕುಂದಾಪುರ ಹೆಸರನ್ನು ಬಳಸುವುದರಿಂದ ಕುಂದಾಪುರ ಊರಿನ ಹೆಸರಿಗೆ ಘಾಸಿಯಾಗುತ್ತದೆ. ಈ ಒಂದು ಘಟನೆಯಿಂದ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು. ಕುಂದಾಪುರ ದೇವಾಲಯಗಳಿರುವ ಮತ್ತು ಪ್ರಕೃತಿ ಸೊಬಗಿನ ಊರು. ಈ ಊರಿನ ಹೆಸರು ಆರೋಪಿಯೊಬ್ಬರ ಹೆಸರಿನ ಜೊತೆಗೆ ಥಳುಕು ಹಾಕಿದ ಕಾರಣಕ್ಕೆ ಹಾಳಾಗಬಾರದು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.


ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಮತ್ತು ತಂಡದ ವಿಚಾರಣೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು ಈ ನಡುವೆ ಚೈತ್ರಾ ಪ್ರಕರಣದಲ್ಲಿ ಕುಂದಾಪುರ ಹೆಸರನ್ನು ಪದೇ ಪದೇ ಬಳಸುತ್ತಿರುವುದರಿಂದ ಅಲ್ಲಿನ ನಿವಾಸಿಗಳ, ಸ್ಥಳೀಯರ ಭಾವನೆಗೆ ಧಕ್ಕೆಯಾಗುತ್ತಿರುವುದರಿಂದ ಮಾದ್ಯಮಗಳಿಗೆ ಕುಂದಾಪುರ ಹೆಸರನ್ನು ಬಳಸದಂತೆ ನಿರ್ಬಂಧ ನೀಡುವಂತೆ ಕೋರ್ಟ್​ ಮೊರೆ ಹೋಗಿದ್ದರು. ಅದರಂತೆ ಕೋರ್ಟ್ ತಡೆಯಾಜ್ಞೆ ವಿಧಿಸಿದ್ದು, ಹೆಸರಿನ ಜೊತೆಗೆ ಸ್ಥಳನಾಮ ಬಳಸದಂತೆ ಸಮನ್ಸ್ ನೀಡಿದೆ, ಅಲ್ಲದೆ, ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಕಾಯ್ದಿರಿಸಿದೆ. ಈ ಬಗ್ಗೆ ಹೈಕೋರ್ಟ್ ವಕೀಲರಾದ ಎಚ್. ಪವನಚಂದ್ರ ಶೆಟ್ಟಿ ವಾದಿಸಿದ್ದರು.

ಶಾಸಕರ ಇಂದಿನ ಕಾರ್ಯಕ್ರಮ(ಜೂ.5)

Posted by Vidyamaana on 2023-06-04 23:14:37 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ(ಜೂ.5)

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಜೂನ್ 5ರಂದು ಬೆಳಿಗ್ಗೆ 9.30ಕ್ಕೆ ಉಪ್ಪಿನಂಗಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಳಾಭಿಷೇಕ ನೆರವೇರಿಸಲಿದ್ದಾರೆ.

ನಂತರ 10.30ಕ್ಕೆ ಪುತ್ತೂರು ಬಾಲವನದಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗಿಯಾಗುವರು.

ಬೆಳಿಗ್ಗೆ 11.15ಕ್ಕೆ ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯಲ್ಲಿ ಶಾಸಕರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.

ರಾಜ್ಯಸಭೆ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಕಟ

Posted by Vidyamaana on 2024-02-11 21:30:15 |

Share: | | | | |


ರಾಜ್ಯಸಭೆ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು, ಫೆ.11: ಬಿಜೆಪಿ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.  ಕರ್ನಾಟಕದಿಂದ ಬಾಗಲಕೋಟೆ ಮೂಲದ ನಾರಾಯಣ ಬಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ. ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ನಿರಾಸೆಗೊಂಡಿದ್ದಾರೆ.


ಜೊತೆಗೆ ಬಿಹಾರದಲ್ಲಿ ಡಾ.ಧರ್ಮಶೀಲಾ ಗುಪ್ತಾ ಹಾಗೂ ಡಾ.ಭೀಮಸಿಂಗ್​ ಸೇರಿ ಇಬ್ಬರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದೆ.ಇನ್ನುಳಿದಂತೆ ಛತ್ತೀಸ್​ಗಢದಲ್ಲಿ ರಾಜಾ ದೇವೇಂದ್ರಪ್ರತಾಪ್​ ಸಿಂಗ್​, ಹರಿಯಾಣದಲ್ಲಿ ಸುಭಾಷ್​ ಬಾರ್ಲಾಗೆ ಹಾಗೂ ಉತ್ತರ ಪ್ರದೇಶದಲ್ಲಿ ಆರ್​.ಪಿ.ಎನ್​ ಸಿಂಗ್​ಗೆ ಟಿಕೆಟ್ ನೀಡಲಾಗಿದೆ.


1.ಧರ್ಮಶೀಲಾ ಗುಪ್ತಾ: ಬಿಹಾರ

2.ಡಾ.ಭೀಮ್ ಸಿಂಗ್: ಬಿಹಾರ

3.ರಾಜಾ ದೇವೇಂದ್ರ ಪ್ರತಾಪ್ ಸಿಂಗ್: ಛತ್ತೀಸಗಢ್

4.ಸುಭಾಷ್ ಬರಲಾ: ಹರಿಯಾಣ

5.ನಾರಾಯಾಣ ಭಾಂಡಗೆ: ಕರ್ನಾಟಕ

6.ಆರ್​​ಪಿಎನ್​​​ ಸಿಂಗ್: ಉತ್ತರ ಪ್ರದೇಶ

7.ಸುಭಾಂಶು ತ್ರಿವೇದಿ: ಉತ್ತರ ಪ್ರದೇಶ

8.ಚೌಧರಿ ತೇಜ್​ವೀರ್ ಸಿಂಗ್: ಉತ್ತರ ಪ್ರದೇಶ

9.ಸಾಧನಾ ಸಿಂಗ್: ಉತ್ತರ ಪ್ರದೇಶ

10.ಅಮರಪಾಲ್ ಮೌರ್ಯ: ಉತ್ತರ ಪ್ರದೇಶ

11.ಸಂಗೀತಾ ಬಲ್ವಂತ್: ಉತ್ತರ ಪ್ರದೇಶ

12.ನವೀನ್ ಜೈನ್: ಉತ್ತರ ಪ್ರದೇಶ

13.ಮಹೇಂದ್ರ ಭಟ್: ಉತ್ತರಾಖಂಡ್

14.ಸಮಿಕಾ ಭಟ್ಟಾಚಾರ್ಯ: ಪಶ್ಚಿಮ ಬಂಗಾಳ

ವಿಟ್ಲ: ಬೊರ್ ವೆಲ್ ಲಾರಿ ಹಾಗೂ ದ್ವಿಚಕ್ರ ವಾಹನ ಮಧ್ಯೆ ಭೀಕರ ಅಪಘಾತ - ಸವಾರ ರಂಜಿತ್ ಮೃತ್ಯು

Posted by Vidyamaana on 2023-03-18 10:49:06 |

Share: | | | | |


ವಿಟ್ಲ: ಬೊರ್ ವೆಲ್ ಲಾರಿ ಹಾಗೂ ದ್ವಿಚಕ್ರ ವಾಹನ ಮಧ್ಯೆ ಭೀಕರ ಅಪಘಾತ - ಸವಾರ ರಂಜಿತ್ ಮೃತ್ಯು

ವಿಟ್ಲ:ಮಾ 18 ಕಡೂರು ಕಾಂಞಗಾಡ್ ಅಂತರಾಜ್ಯ ಹೆದ್ದಾರಿಯವಿಟ್ಲ ಸಮೀಪದ ಕಾಶಿ ಮಠ ಬಳಿ ಕೊಳವೆ ಬಾವಿ ಕೊರೆಯುವ ಯಂತ್ರ ಹೊತ್ತ ವಾಹನ ಹಾಗೂ ದ್ವಿಚಕ್ರ ವಾಹನ ನಡುವೆ ಬೀಕರ ಅಪಘಾತ ಸಂಭವಿಸಿದ್ದು, ವಾಹನ ಸಹ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮಾ 18 ರಂದು ಮಧ್ಯಾಹ್ನ ದುರ್ಘಟನೆ ನಡೆದಿದೆ.ಅಲಂಗಾರು ಬ್ರಾಣ ಪಾದೆ ನಿವಾಸಿ ರಂಜಿತ್ (19) ಸ್ಥಳದಲ್ಲೆ ಮೃತಪಟ್ಟ ಯುವಕ. ಸವಾರ ನಿತಿನ್ (28) ಗಂಭೀರವಾಗಿ ಗಾಯಗೊಂಡಿದ್ದಾರೆ ಕೊಳವೆ ಬಾವಿ ಕೊರೆಯುವ ಯಂತ್ರವಿದ್ದ ಲಾರಿಯ ಚಾಲಕ ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ, ಘನ ವಾಹನವೆಂದು ಲೆಕ್ಕಿಸದೆ ಚಲಾಯಿಸಿದೆ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಅರೋಪಿಸಿದ್ದಾರೆ.ಢಿಕ್ಕಿಯ ಬಳಿಕ ಲಾರಿಯು ಬೈಕ್ ಸವಾರರನ್ನು ಕೆಲ ಮೀಟರುಗಳ ದೂರ ಎಳೆದೊಯ್ದಿದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರನ ತಲೆ ಛಿದ್ರವಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

ಇಂದು ಸಿದ್ದರಾಮಯ್ಯ 15ನೇ ಬಜೆಟ್‌: ಬೆಳಗ್ಗೆ 10.15ರಿಂದ ಮಂಡನೆ

Posted by Vidyamaana on 2024-02-16 09:14:05 |

Share: | | | | |


ಇಂದು ಸಿದ್ದರಾಮಯ್ಯ 15ನೇ ಬಜೆಟ್‌: ಬೆಳಗ್ಗೆ 10.15ರಿಂದ ಮಂಡನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ 2024-25ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ. ಇದು ಅವರ ದಾಖಲೆಯ 15ನೇ ಬಜೆಟ್‌. ಬಜೆಟ್‌ ಗಾತ್ರ 3.75 ಲಕ್ಷ ಕೋಟಿ ರೂ.ಗಳಿಂದ 3.80 ಲಕ್ಷ ಕೋಟಿ ರೂ. ವರೆಗೆ ಇರಲಿದೆ ಎನ್ನಲಾಗಿದೆ.


ರಾಹುಕಾಲದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಬೆಳಗ್ಗೆ 10.15ಕ್ಕೆ ಬಜೆಟ್‌ ಮಂಡಿಸಲಿದ್ದಾರೆ. ಅಂದರೆ 15 ನಿಮಿಷಗಳ ಮೊದಲೇ ವಿಧಾನಸಭೆಗೆ ಅವರು ಆಗಮಿಸಲಿದ್ದಾರೆ. 10.30ರಿಂದ ಆರಂಭವಾಗಲಿರುವ ಬಜೆಟ್‌ ಭಾಷಣ ಮಧ್ಯಾಹ್ನ 12.30ರ ವರೆಗೆ ಮುಂದುವರಿಯಲಿದೆ.

ಬಜೆಟ್‌ ನಿರೀಕ್ಷೆಗಳು ಏನು?

ಸುವರ್ಣ ಸಂಭ್ರಮ ನಿಮಿತ್ತ ಹೊಸ ಯೋಜನೆಗಳು

ರೈತರಿಗೆ ಶೂನ್ಯ ಬಡ್ಡಿದರಲ್ಲಿ 5 ಲಕ್ಷ ರೂ.ಗಳಿಂದ 7 ಲಕ್ಷ ರೂ.ವರೆಗೆ ಸಾಲ

ತೆರಿಗೆ ಹೊರೆ ಬದಲು 50 ಸಾವಿರ ಕೋ.ರೂ. ಸಾಲ

ಗ್ಯಾರಂಟಿ ಯೋಜನೆಗಳಿಗೆ 55-65 ಸಾವಿರ ಕೋಟಿ ರೂ. ಮೀಸಲು

ಕೇಂದ್ರದ ಅನುದಾನ ಹಂಚಿಕೆ ತಾರತಮ್ಯ ಅಂಕಿಅಂಶ ಸಹಿತ ಬಹಿರಂಗ

Recent News


Leave a Comment: