ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಿಂಜಾವೇ ಕಾರ್ಯಕರ್ತರಿಗೆ ಭವ್ಯ ಸ್ವಾಗತ

Posted by Vidyamaana on 2023-05-29 16:59:13 |

Share: | | | | |


ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಿಂಜಾವೇ ಕಾರ್ಯಕರ್ತರಿಗೆ ಭವ್ಯ ಸ್ವಾಗತ

ಪುತ್ತೂರು : ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಹಿಂದೂ ಜಾಗರಣ ವೇದಿಕೆ ಪುರುಷರಕಟ್ಟೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯಿದರು


ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಹಿನ್ನೆಲೆ ಹಿಂದೂ ಜಾಗರಣ ವೇದಿಕೆ ಪುರುಷರಕಟ್ಟೆ ಕಾರ್ಯಕರ್ತರು ಪುರುಷರಕಟ್ಟೆ ಪೇಟೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಯಕರ್ತರನ್ನು ಹಲವಾರು ಪ್ರಮುಖರು ಭೇಟಿಯಾಗಿ ಧೈರ್ಯ ತುಂಬಿದ್ದು, ಈ ರೀತಿ ದೌರ್ಜನ್ಯವೆಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು

ಎಚ್‌3ಎನ್‌2 ಜತೆಗೆ ಕಾಡುತ್ತಿದೆ ಅಡೆನೋವೈರಸ್ ಭೀತಿ: ಮಕ್ಕಳೇ ಟಾರ್ಗೆಟ್

Posted by Vidyamaana on 2023-03-10 08:14:03 |

Share: | | | | |


ಎಚ್‌3ಎನ್‌2 ಜತೆಗೆ ಕಾಡುತ್ತಿದೆ ಅಡೆನೋವೈರಸ್ ಭೀತಿ: ಮಕ್ಕಳೇ ಟಾರ್ಗೆಟ್

ಪಶ್ಚಿಮ ಬಂಗಾಳ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಅಡೆನೋವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಮುಖ್ಯವಾಗಿ ಮಕ್ಕಳನ್ನು ಕಾಡುವ ಈ ಸೋಂಕು, ಪ್ಲೂ ಪ್ರಕರಣಗಳ ಜತೆಗೆ ಆರೋಗ್ಯ ಕ್ಷೇತ್ರದಲ್ಲಿನ ಆತಂಕವನ್ನು ಹೆಚ್ಚಿಸಿದೆ.

ಭಾರತದ ಅನೇಕ ಭಾಗಗಳಲ್ಲಿ ಎಚ್‌3ಎನ್‌2 ಫ್ಲೂ ಹಾವಳಿ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಮಾರಕ ಅಡೆನೋವೈರಸ್ ಪ್ರಕರಣಗಳಲ್ಲಿಯೂ ಗಂಭೀರ ಏರಿಕೆ ಉಂಟಾಗುತ್ತಿದೆ. ಮಕ್ಕಳು ಈ ವೈರಸ್‌ಗೆ ತುತ್ತಾಗುತ್ತಿದ್ದು, ವೈದ್ಯರು ಅಪಾಯದ ಗಂಟೆ ಮೊಳಗಿಸಿದ್ದಾರೆ.

ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಅಡೆನೋವೈರಸ್ ಭೀತಿ ಹೆಚ್ಚಾಗಿದೆ. ತೀವ್ರ ಉಸಿರಾಟ ಸೋಂಕಿನಿಂದಾಗಿ (ಎಆರ್‌ಐ) ಮಂಗಳವಾರ ಮತ್ತು ಬುಧವಾರದ ನಡುವೆ ಕೋಲ್ಕತಾದ ಮೂರು ಸರ್ಕಾರಿ ಆಸ್ಪತ್ರೆಗಳಲ್ಲಿ ನಾಲ್ಕು ಮಕ್ಕಳು ಕೊನೆಯುಸಿರೆಳೆದಿದ್ದಾರೆ. ಅವರಲ್ಲಿ ಎರಡು ಮಕ್ಕಳಲ್ಲಿ ಅಡೆನೋವೈರಸ್ ಪಾಸಿಟಿವ್ ದೃಢಪಟ್ಟಿದೆ.

ಪಶ್ಚಿಮ ಬಂಗಾಳದಲ್ಲಿ ಕಳೆದ 9 ದಿನಗಳಲ್ಲಿ 36ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಆದರೆ ಎರಡು ಮಕ್ಕಳ ಸಾವು ಮಾತ್ರ ಅಡೆನೋವೈರಸ್‌ಗೆ ಸಂಬಂಧಿಸಿದ್ದು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಕೂಡ ಅಡೆನೋವೈರಸ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಆದರೆ ಸೋಂಕು ಸ್ವಯಂ ಸೀಮಿತತೆ ಹೊಂದಿರುವುದರಿಂದ ಹೆಚ್ಚು ಕಳವಳ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

"ಕಳೆದ ಮೂರು ವಾರಗಳಲ್ಲಿ ಅಡೆನೋವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಹಿಂದಿನ ಎರಡು ತಿಂಗಳಲ್ಲಿ 21 ಖಚಿತ ಪಾಸಿಟಿವ್ ಪ್ರಕರಣಗಳಿದ್ದವು. ಈಗ ಅಂತಹ ಸೋಂಕು ಹೊಂದಿರಬಹುದಾದ ಸುಮಾರು 30 ಮಕ್ಕಳು ಪ್ರತಿದಿನವೂ ಒಪಿಡಿ ಮತ್ತು ಇಆರ್‌ಗಳಿಗೆ ಬರುತ್ತಿದ್ದಾರೆ. ಫ್ಲೂ ಅಥವಾ ಅಡೆನೋವೈರಸ್ ಲಕ್ಷಣಗಳೊಂದಿಗೆ ದಾಖಲಾದ ಮಕ್ಕಳ ಗಂಟಲಿನ ದ್ರವಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಪ್ರತಿದಿನವೂ ಅಂತಹ 3-4 ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿದ್ದೇವೆ" ಎಂದು ಬೆಂಗಳೂರಿನ ಸಕ್ರಾ ವರ್ಲ್ಡ್ ಆಸ್ಪತ್ರೆಯ ಶಿಶುವೈದ್ಯ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ. ರಜತ್ ಅತ್ರೇಯಾ ತಿಳಿಸಿದ್ದಾರೆ.

ರಾಷ್ಟ್ರೀಯ ವೈರಾಣು ಸಂಸ್ಥೆಯ ಪ್ರಕಾರ, ನಗರದಲ್ಲಿ ಈ ವರ್ಷ ಇದುವರೆಗೂ ಕೇವಲ 13 ಅಡೆನೋವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಕರ್ನಾಟಕದ ಒಟ್ಟು ಸೋಂಕಿತರ ಸಂಖ್ಯೆ 37 ಇದೆ. ಖಾಸಗಿ ಆಸ್ಪತ್ರೆಗಳು ಅಡೆನೋವೈರಸ್ ಪ್ರಕರಣಗಳ ಬಗ್ಗೆ ನೀಡುವ ಮಾಹಿತಿ ಸುಧಾರಿಸಬೇಕಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಫ್ಲೂ ಮತ್ತು ಅಡೆನೋವೈರಸ್ ಲಕ್ಷಣಗಳೇನು?

ಅಡೆನೋವೈರಸ್, ಅಧಿಕ ಅಪಾಯಕಾರಿ ವೈರಸ್ ಆಗಿದೆ. ಅದು ಸಾಮಾನ್ಯವಾದ ಶೀತ, ಶ್ವಾಸನಾಳಗಳ ಒಳ ಪದರ ಉರಿತ ಮತ್ತು ನ್ಯುಮೋನಿಯಾ ಸೇರಿದಂತೆ ವಿವಿಧ ಬಗೆಯ ಅನಾರೋಗ್ಯಗಳನ್ನು ಉಂಟುಮಾಡುತ್ತದೆ. ಅಡೆನೋವೈರಸ್ ಸೋಂಕು ಹೆಚ್ಚಾಗಿ ಜ್ವರ, ಕೆಮ್ಮು, ನೆಗಡಿ ಹಾಗೂ ಪಿಂಕ್ ಐ ಸಮಸ್ಯೆಗಳಂತಹ ಲಕ್ಷಣಗಳನ್ನು ಉಂಟುಮಾಡುತ್ತದೆ. ಆದರೆ ಅದು ಮುಖ್ಯವಾಗಿ, ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವವರಲ್ಲಿ ಬಹಳ ಗಂಭೀರ ಕಾಯಿಲೆಯನ್ನೂ ಉಂಟುಮಾಡಬಹುದು.

ಎಚ್‌3ಎನ್‌2 ಅಥವಾ ಫ್ಲೂ ಎನ್ನುವುದು ಇನ್‌ಫ್ಲೂಯೆಂಜಾ ವೈರಸ್‌ಗಳಿಂದ ಸೃಷ್ಟಿಯಾಗುವ ಉಸಿರಾಟದ ಸಮಸ್ಯೆಯಾಗಿದೆ. ಫ್ಲೂ ಕೂಡ ತೀವ್ರ ಅಪಾಯಕಾರಿ ಮತ್ತು ಸೋಂಕು ತಗುಲಿದ ವ್ಯಕ್ತಿಗಳ ಜತೆಗಿನ ನಿಕಟ ಸಂಪರ್ಕ, ಕಲುಷಿತ ಮೇಲ್ಮೈಗಳು ಅಥವಾ ಗಾಳಿಯಿಂದ ಹರಡುವ ದ್ರವಗಳಿಂದ ಕೂಡ ಹರಡಬಲ್ಲದು. ಜ್ವರ, ಕೆಮ್ಮು, ಗಂಟಲು ನೋವು, ಸ್ನಾಯು ನೋವು ಮತ್ತು ಅಸ್ವಸ್ಥತೆ- ಇವು ಫ್ಲೂ ಲಕ್ಷಣಗಳು. ಇದು ಕೂಡ ನ್ಯುಮೋನಿಯಾ, ಶ್ವಾಸನಾಳಗಳ ಉರಿತ ಹಾಗೂ ಸಾವಿಗೆ ಕೂಡ ಕಾರಣವಾಗಬಹುದು.

ಎರಡರ ನಡುವಿನ ವ್ಯತ್ಯಾಸವೇನು?

ಅಡೆನೋವೈರಸ್ ಮತ್ತು ಇನ್‌ಫ್ಲೂಯೆಂಜಾಗಳು ಉಸಿರಾಟ ಸಂಬಂಧಿ ಕಾಯಿಲೆಗೆ ಕಾರಣವಾಗುವ ಎರಡು ಸಾಮಾನ್ಯ ವೈರಸ್‌ಗಳಾದರೂ, ಇವರೆಡರ ನಡುವೆ ವ್ಯತ್ಯಾಸಗಳಿವೆ. ಇವೆರಡೂ ಉಂಟುಮಾಡಬಹುದಾದ ಅನಾರೋಗ್ಯದ ತೀವ್ರತೆಯೇ ಮುಖ್ಯ ವ್ಯತ್ಯಾಸ. ಎರಡೂ ಸಂಕೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಫ್ಲೂ ಸಾಮಾನ್ಯವಾಗಿ ಗಂಭೀರ ಕಾಯಿಲೆ ಮತ್ತು ಆಸ್ಪತ್ರೆ ದಾಖಲಾಗುವಿಕೆಗೆ ಎಡೆಮಾಡಿಕೊಡುತ್ತದೆ. ಚಿಕ್ಕ ಮಕ್ಕಳು, ವೃದ್ಧರು, ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಅಪಾಯ ಅಧಿಕ. ಅಡೆನೋವೈರಸ್ ಸಾಧಾರಣದಿಂದ ಮಧ್ಯಮ ಪ್ರಮಾಣದ ಲಕ್ಷಣಗಳನ್ನು ಉಂಟುಮಾಡುತ್ತದೆ.

ಫ್ಲೂಗೆ ಪ್ರಸ್ತುತ ಲಸಿಕೆ ಲಭ್ಯವಿದೆ. ಆದರೆ ಅಡೆನೋವೈರಸ್‌ಗೆ ಲಸಿಕೆ ಇಲ್ಲ. ಫ್ಲೂ ಬರುವ ಸಾಧ್ಯತೆಗಳನ್ನು ತಡೆಗಟ್ಟಲು ಆರು ತಿಂಗಳು ದಾಟಿದ ಮಕ್ಕಳಿಂದ ಎಲ್ಲ ದೊಡ್ಡವರೂ ಪ್ರತಿ ವರ್ಷ ಕೂಡ ಈ ಲಸಿಕೆ ಹಾಕಿಸಿಕೊಳ್ಳಬೇಕು. ಇದರಿಂದ ಫ್ಲೂ ಬಂದರೂ ಅದರ ತೀವ್ರತೆ ಕಡಿಮೆ ಇರುತ್ತದೆ ಎಂದು ಸಲಹೆ ನೀಡಲಾಗಿದೆ. ಅಡೆನೋವೈರಸ್‌ಗೆ ಲಸಿಕೆ ಇಲ್ಲದಿರುವುದರಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು, ಸೋಂಕಿತರೊಂದಿಗೆ ಸಮೀಪದ ಸಂಪರ್ಕ ಸಾಧಿಸುವುದರಿಂದ ದೂರ ಇರುವುದು ಮುಂತಾದ ಉತ್ತಮ ಅಭ್ಯಾಸಗಳನ್ನು ಕಾಪಾಡಿಕೊಳ್ಳುವುದೇ ಪರಿಹಾರ.

ಮುಸ್ಲಿಂ ಮುಖಂಡ ಕಾಶಿಮ್ ಅಲಿ ಮನೆಯಲ್ಲಿ ಅಯ್ಯಪ್ಪ ಮಲಾಧಾರಿಗಳಿಗೆ ಅನ್ನಸಂತರ್ಪಣೆ

Posted by Vidyamaana on 2024-01-11 06:30:18 |

Share: | | | | |


ಮುಸ್ಲಿಂ ಮುಖಂಡ ಕಾಶಿಮ್ ಅಲಿ ಮನೆಯಲ್ಲಿ ಅಯ್ಯಪ್ಪ ಮಲಾಧಾರಿಗಳಿಗೆ ಅನ್ನಸಂತರ್ಪಣೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಜಯನಗರದಲ್ಲಿರುವ ಕಾಶಿಂ ಅಲಿ ಮುದ್ದಾಬಳ್ಳಿಯವರ ಮನೆಯಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪೂಜೆ, ಭಜನೆ ಮಾಡಿದ್ದಾರೆ. ಪೂಜೆಯ ಬಳಿಕ ಕಾಶಿಂ ಕುಟುಂಬದಿಂದ ನೂರಾರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಸಂತರ್ಪಣೆಯೂ ನಡೆದಿದೆ.


ಈ ಕುರಿತು ಮಾತನಾಡಿದ ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷರಾಗಿರೋ ಕಾಶಿಂ ಅಲಿ ಮುದ್ದಾಬಳ್ಳಿ, ಎಲ್ಲಾ ಧರ್ಮಗಳು ಒಂದೇ, ಎಲ್ಲಾ ಧರ್ಮದ ಸಾರಗಳು ಗೊತ್ತಿರಬೇಕು ಎಂದರು.


ಕಾಶಿಂ ಅವರ ಈ ನಡೆಯು ಮತ ಸೌಹಾರ್ದತೆಯ ಜ್ವಲಂತ ಉದಾಹರಣೆಯೆಂದು ಊರಿನ ಜನರು ಪ್ರಶಂಸಿದ್ದಾರೆ ಎನ್ನಲಾಗಿದೆ.

ಪುತ್ತೂರು :ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಕಡಬ ಮೂಲದ ಡಾ.ಆದಂ ಅಸೌಖ್ಯದಿಂದ ನಿಧನ

Posted by Vidyamaana on 2024-04-20 19:47:08 |

Share: | | | | |


ಪುತ್ತೂರು :ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಕಡಬ ಮೂಲದ ಡಾ.ಆದಂ ಅಸೌಖ್ಯದಿಂದ ನಿಧನ

ಬೆಳ್ತಂಗಡಿ : ತಲಪಾಡಿ ಕೆ.ಸಿ ರೋಡ್ ನಿವಾಸಿ ಡಾ! ಆದಂ ಉಸ್ಮಾನ್(65) ಅಲ್ಪಕಾಲದ ಅಸೌಖ್ಯದಿಂದ ಎ.20 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.

ಪುತ್ತೂರು,ಕಡಬ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಸುಮಾರು 14 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತರಾಗಿದ್ದರು.

ಕುಂಬೋಳ್ ತಂಙಳ್ ವಿಧಾನ ಸೌಧದಲ್ಲಿ

Posted by Vidyamaana on 2023-05-23 09:22:02 |

Share: | | | | |


ಕುಂಬೋಳ್ ತಂಙಳ್ ವಿಧಾನ ಸೌಧದಲ್ಲಿ

ಬೆಂಗಳೂರು: ಸುನ್ನಿ ಉಲೆಮಾ ಲೋಕದ ಮಹಾನ್ ವಿದ್ವಾಂಸರಾದ ಶೈಕುನಾ ಸಯ್ಯದ್ ಕುಂಞಿ ಕೋಯಾ ತಂಙಳ್ ರವರು‌ಮಂಗಳವಾರ ವಿಧಾನ ಸೌಧದಲ್ಲಿ ಕಾಣಿಸಿಕೊಂಡರು.

ಉಳ್ಳಾಲ ಶಾಸಕ ಯು ಟಿ ಖಾದರ್ ಜೊತೆ ಬೆಂಗಳೂರಿಗೆ ತೆರಳಿದ್ದ ಅವರು ಇಂದು ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೊತೆ ಕುಶಲೋಪರಿ ನಡೆಸಿದರು. ಅನೇಕ ಪವಾಡಗಳಿಂದ ಪ್ರಸಿದ್ದಿ ಪಡೆದ ಕುಂಬೋಳ್ ತಂಙಳ್  ಈ ಸಂದರ್ಬದಲ್ಲಿ ಯು ಟಿ ಖಾದರ್ ರವರಿಗೆ ಉಡುಗೋರೆ ನೀಡಿ ಆಶೀರ್ವದಿಸಿದರು.ಮುಖ್ಯಮಂತ್ರಿ  ಹಾಗೂ ಡಿಸಿಎಂ ತಂಙಳ್ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ದ ಕ ಲೋಕ ಸಭಾ ಕ್ಷೇತ್ರದ ಜಿಲ್ಲಾ ಪ್ರಚಾರ ಸಮಿತಿಯ ಸಹ ಉಸ್ತುವಾರಿ ಯಾಗಿ ಮಹಮ್ಮದ್ ಬಡಗನ್ನೂರು ನೇಮಕ

Posted by Vidyamaana on 2024-04-11 15:29:45 |

Share: | | | | |


ದ ಕ ಲೋಕ ಸಭಾ ಕ್ಷೇತ್ರದ ಜಿಲ್ಲಾ ಪ್ರಚಾರ ಸಮಿತಿಯ ಸಹ ಉಸ್ತುವಾರಿ ಯಾಗಿ ಮಹಮ್ಮದ್ ಬಡಗನ್ನೂರು ನೇಮಕ

ಪುತ್ತೂರು :ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಕೆಪಿಸಿಸಿ ಯಿಂದ ದ ಕ ಲೋಕ ಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ರಮಾನಾಥ ರೈ ಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಚಾರ ಸಮಿತಿಯನ್ನು ರಚಿಸಲಾಗಿದ್ದು, ಮಹಮ್ಮದ್ ಬಡಗನ್ನೂರು  ರವರನ್ನು ಜಿಲ್ಲಾ ಪ್ರಚಾರ ಸಮಿತಿಯ ಸಹ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

Recent News


Leave a Comment: