ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ - ಇಂದು ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ

ಸುದ್ದಿಗಳು News

Posted by vidyamaana on 2024-07-09 08:24:41 |

Share: | | | | |


ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ - ಇಂದು ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ

ಪುತ್ತೂರು: ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಹರಾ ಅರ್ಥಮೂವರ್ ಮತ್ತು ಬೋರ್ ವೆಲ್ ಮಾಲಕ ಪಿ.ಎಂ ಅಶ್ರಫ್, ಕಾರ್ಯದರ್ಶಿಯಾಗಿ ಕೊಂಕಣ್ ಗ್ಯಾಸ್ ನಲ್ಲಿ 22 ವರ್ಷ ಸೀನಿಯರ್ ಎಕೌಂಟೆಂಟ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ವಸಂತ್ ಶಂಕರ್, ಕೋಶಾಧಿಕಾರಿಯಾಗಿ ಯುನೈಟೆಡ್ ಇನ್ಸೂರೆನ್ನ ನಿವೃತ್ತ ಉದ್ಯೋಗಿ ನವೀನ್‌ಚಂದ್ರ  ರವರು ಆಯ್ಕೆಯಾಗಿದ್ದಾರೆ.

ಉಳಿದಂತೆ ಜೊತೆ ಕಾರ್ಯದರ್ಶಿ ಯಾಗಿ ನವ್ಯಶ್ರೀ , ನಿಯೋಜಿತ ಅಧ್ಯಕ್ಷರಾಗಿ ಚಂದ್ರಹಾಸ ರೈ ಬಿ, ಉಪಾಧ್ಯಕ್ಷರಾಗಿ ಪ್ರದೀಪ್‌ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾಗಿ ಡಾ.ರಾಜೇಶ್ ಬೆಜ್ಜಂಗಳ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಜಯಪ್ರಕಾಶ್ ಎ.ಎಲ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಲೋಕೇಶ್

ಎಂ.ಎಚ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇತಕರಾಗಿ ಸನತ್ ರೈ, ಯೂತ್ ಸರ್ವಿಸ್ ನಿರ್ದೇಶಕರಾಗಿ ಜಗನ್ನಾಥ್ ಆರಿಯಡ್ಕ, ಸಾರ್ಜಂಟ್ ಎಟ್ ಆರ್ಮ್ಸ್ ಶಿವರಾಂ ಎಂ.ಎಸ್. ಚೀರ್‌ಮ್ಯಾನ್‌ಗಳಾಗಿ ಡಾ.ರಾಮಚಂದ್ರ ಕೆ(ವೆಬ್), ಡಾ.ನಮಿತಾ(ಪೋಲಿಯೋ ಪ್ಲಸ್),ಭಾರತಿ ಎಸ್.ರೈ(ಟೀಚ್), ಜಯಪ್ರಕಾಶ್ಅಮೈ(ಟಿಆ‌ರ್ ಎಫ್), ಲಾವಣ್ಯ  (ಮೆಂಬರ್‌ಶಿಪ್ ಡೆವಲಪ್‌ಮೆಂಟ್). ಪದ್ಮನಾಭ ಶೆಟ್ಟಿ(ಜಿಲ್ಲಾ ಪ್ರಾಜೆಕ್ಟ್), ಸಂತೋಷ್ ಶೆಟ್ಟಿ(ಕ್ರೀಡೆ), ಪ್ರಮೋದ್ ಕುಮಾರ್ ಕೆ.ಕೆ(ಸಾಂಸ್ಕೃತಿಕ), ಪ್ರದೀಪ್ ಬೊಳ್ಳಾರ್ (ಫೆಲೋಶಿಪ್), ಶಾಂತಕುಮಾರ್(ಹಾಜರಾತಿ ಸಮಿತಿ), ಮೊಹಮ್ಮದ್ ರಫೀಕ್ ದರ್ಜೆ (ಸಿಎಲ್‌ಸಿಸಿ), ಅಮಿತಾ ಶೆಟ್ಟಿ(ಎಥಿಕ್ಸ್), ಸಂತೋಷ್ ಶೆಟ್ಟಿ(ಕ್ಲಬ್ ಫೆಸಿಲಿಟೇಟರ್ )ರವರು ಆಯ್ಕೆಯಾಗಿದ್ದಾರೆ.

ಇಂದು ಪದ ಪ್ರದಾನ: ಜು.9 ರಂದು ಪರ್ಲಡ್ಕ-ಬೈಪಾಸ್ ಆಫ್ರಿ ಕಂಫರ್ಟ್‌ನಲ್ಲಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಜರಗಲಿದ್ದು, ರೋಟರಿ ಜಿಲ್ಲೆ 3181 ಇದರ ಪಿಡಿಜಿ ರಂಗನಾಥ್ ಭಟ್ ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ವಲಯ ಐದರ ಅಸಿಸ್ಟಂಟ್ ಗವರ್ನರ್ ಸೂರ್ಯನಾಥ ಆಳ್ವ, ವಲಯ ಸೇನಾನಿ ಮೊಹಮದ್ ರಫೀಕ್ ದರ್ಬೆ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ.ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 Share: | | | | |


ಪಾರ್ಲೆ ಜಿ ಬಿಸ್ಕತ್ ಪ್ಯಾಕೆಟ್‌ನಲ್ಲಿದ್ದ ಮುದ್ದು ಮಗುವಿನ ಫೋಟೋ ಚೇಂಜ್‌, ಇದ್ಯಾವುದಪ್ಪಾ ಹೊಸ ಮುಖ?

Posted by Vidyamaana on 2023-12-29 06:43:12 |

Share: | | | | |


ಪಾರ್ಲೆ ಜಿ ಬಿಸ್ಕತ್ ಪ್ಯಾಕೆಟ್‌ನಲ್ಲಿದ್ದ ಮುದ್ದು ಮಗುವಿನ ಫೋಟೋ ಚೇಂಜ್‌, ಇದ್ಯಾವುದಪ್ಪಾ ಹೊಸ ಮುಖ?

ಪಾರ್ಲೆಜಿ ಬಿಸ್ಕೆಟ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. 80-90ರ ದಶಕಗಳಲ್ಲಿ ಹುಟ್ಟಿ ಬೆಳದವರ ನೆಚ್ಚಿನ ಬಿಸ್ಕೆಟ್‌ಗಳಲ್ಲಿ ಒಂದು ಈ ಪಾರ್ಲೆ-ಜಿ. ಪ್ರತಿದಿನ ಬೆಳಿಗ್ಗೆ ಚಾಯ್ ಅಥವಾ ಟೀ ಜೊತೆ ಪಾರ್ಲೆ-ಜಿ ಬಿಸ್ಕೆಟ್ ಬೇಕು ಎಂದು ಜನರು ಹೇಳುವ ಕಾಲವೊಂದಿತ್ತು.ಏಕೆಂದರೆ ಈ ಬಿಸ್ಕತ್ತುಗಳು ಬಾಲ್ಯದಿಂದಲೂ ಪ್ರತಿಯೊಬ್ಬ ಭಾರತೀಯರ ಮೆಚ್ಚಿನವುಗಳಾಗಿವೆ. ಪಾರ್ಲೆ ಜೀ ಬಿಸ್ಕೆಟ್‌ನ ರುಚಿ ಬೇರೆ ಯಾವ ಬಿಸ್ಕೆಟ್‌ಗೂ ಸರಿಸಾಟಿಯಾಗಲ್ಲ ಎಂಬ ಮಾತನ್ನು ಅನೇಕರು ಈಗಲೂ ಹೇಳುತ್ತಾರೆ. ಅದರಲ್ಲೂ ಪಾರ್ಲೆ ಜಿ ಬಿಸ್ಕೆಟ್ ಪ್ಯಾಕೆಟ್‌ನಲ್ಲಿರುವ ಪುಟ್ಟ ಬಾಲಕಿಯ ಪೋಟೋ ಎಲ್ಲರಿಗೂ ಅಚ್ಚುಮೆಚ್ಚು.


ಪಾರ್ಲೆ ಜಿ ಬಿಸ್ಕೆಟ್ ಪ್ಯಾಕೆಟ್‌ನ್ನು ಆ ಪುಟ್ಟ ಮಗುವಿನ ಫೋಟೋವಿಲ್ಲದೆ ಊಹಿಸುವುದು ಸಹ ಕಷ್ಟ. ಅಷ್ಟರ ಮಟ್ಟಿಗೆ ಹಳದಿ ಬಣ್ಣದ ರ್ಯಾಪರ್‌ನಲ್ಲಿ ಪುಟ್ಟ ಮಗುವಿನ ಚಿತ್ರ ಮನಸ್ಸಿನಲ್ಲಿ ಅಚ್ಚೊತ್ತಿ ಬಿಟ್ಟಿದೆ. ಆದ್ರೆ ಇತ್ತೀಚಿಗೆ ಪಾರ್ಲೆ-ಜಿ ಐಕಾನಿಕ್ ಹುಡುಗಿಯ ಚಿತ್ರವನ್ನು ಈ ಇನ್‌ಸ್ಟಾಗ್ರಾಮ್ ಪ್ರಭಾವಶಾಲಿ ಮುಖದೊಂದಿಗೆ ಬದಲಾಯಿಸಿದೆ.ಬಿಸ್ಕೆಟ್ ಪ್ಯಾಕ್‌ನಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಮುಖ

ಬಿಸ್ಕತ್ತು ತಯಾರಕ ಪಾರ್ಲೆ ತನ್ನ ಪ್ಯಾಕೆಟ್‌ನ ಕವರ್‌ನಲ್ಲಿ ಐಕಾನಿಕ್ ಪಾರ್ಲೆ-ಜಿ ಹುಡುಗಿಯ ಬದಲಿಗೆ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಮುಖವನ್ನು ಒಳಗೊಂಡ ಪೋಸ್ಟ್‌ನ್ನು ಹಂಚಿಕೊಂಡ ನಂತರ ಇದು ಇಂಟರ್‌ನೆಟ್‌ ಬಳಕೆದಾರರನ್ನು ಆಶ್ಚರ್ಯಗೊಳಿಸಿದೆ. ಹಲವರು ಈ ರ್ಯಾಪರ್ ಬದಲಾವಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳ ಇತಿಹಾಸವಿರುವ ಪಾರ್ಲೆ ಜಿ ಬಿಸ್ಕೆಟ್‌ನ ಕವರ್ ಬದಲಾಯಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ವಾಸ್ತವದಲ್ಲಿ, ಪಾರ್ಲೆ ಜಿ ಕಂಪೆನಿ ತನ್ನ ಬಿಸ್ಕೆಟ್ ಕವರ್‌ನಿಂದ ಮಗುವಿನ ಫೋಟೋವನ್ನು ಬದಲಾಯಿಸಿಲ್ಲ. ಬದಲಿಗೆ ಇದು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ತಮಾಷೆಗೆ ಮಾಡಿರುವ ವೀಡಿಯೋ ಆಗಿದೆ.


ಕಂಟೆಂಟ್ ಕ್ರಿಯೇಟರ್ ಝೆರ್ವಾನ್ ಜೆ ಬುನ್‌ಶಾ, ಈ ವೀಡಿಯೋವನ್ನು ಮಾಡಿದ್ದು, ಎಲ್ಲೆಡೆ ವೈರಲ್ ಆಗಿದೆ. ವೀಡಿಯೋದಲ್ಲಿ ಅವರು, ನೀವು ಪಾರ್ಲೆ ಮಾಲೀಕರನ್ನು ಭೇಟಿಯಾದರೆ, ಅವರನ್ನು ಪಾರ್ಲೆ ಸರ್, ಮಿ. ಪಾರ್ಲೆ ಅಥವಾ ಪಾರ್ಲೆ ಜಿ ಹೇಗೆ ಕರೆಯುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಬುನ್‌ಶಾಹ್ ಫೋಟೋ ಇರುವ ಪಾರ್ಲೆ-ಜಿ ಪ್ಯಾಕೆಟ್ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಬುನ್‌ಶಾಹ್‌ ಕಾರಿನಲ್ಲಿ ಗೊಂದಲದ ಮುಖದೊಂದಿಗೆ ಕುಳಿತಿರುವುದು ಕಂಡುಬರುತ್ತದೆ. ಈ ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.ಒಬ್ಬ ಬಳಕೆದಾರರು, ನಿಮ್ಮನ್ನು OG ಎಂದು ಕರೆಯಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಪಾರ್ಲೆ-ಜಿ ಮಾಲೀಕರನ್ನು ಏನೆಂದು ಕರೆಯಬೇಕೆಂದು ನೀವು ಲೆಕ್ಕಾಚಾರ ಮಾಡುವಾಗ, ಒಂದು ಕಪ್ ಚಾಯ್‌ ಜೊತೆ ನೆಚ್ಚಿನ ಬಿಸ್ಕತ್ತು ಸವಿಯಬಹುದು ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಬುನ್‌ಶಾ, ಬಾಲ್ಯದಲ್ಲಿ ಪಾರ್ಲೆ-ಜಿ ಬಿಸ್ಕೆಟ್‌ಗಳನ್ನು ಹೇಗೆ ಪ್ರೀತಿಸುತ್ತಿದ್ದರು ಎಂಬುದರ ಕುರಿತು ಮಾತನಾಡಿದರು. ಮತ್ತೊಬ್ಬ ಬಳಕೆದಾರರು, ಇದು ನರಕ, ಕ್ರಿಯೇಟಿವ್ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಪುತ್ತೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯ

Posted by Vidyamaana on 2023-12-12 04:48:39 |

Share: | | | | |


ಇಂದು ಪುತ್ತೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ  ವಿದ್ಯುತ್ ವ್ಯತ್ಯಯ

ಪುತ್ತೂರು: ಮಾಣಿ ಮೈಸೂರು ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ ಹಾಗೂ 110/33/11ಕೆವಿ ಮಾಡಾವು ವಿದ್ಯುತ್‌ ಉಪಕೇಂದ್ರದಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಡಿ.12 ರಂದು ಮಂಗಳವಾರ ಪೂರ್ವಾಹ್ನ 10:00 ರಿಂದ ಸಾಯಂಕಾಲ 5:00 ವರೆಗೆ  ಮಾಡಾವು-ಕಾವು-ಸುಳ್ಯ, 33ಕೆವಿ ಮಾಡಾವು-ಬೆಳ್ಳಾರೆ ಮತ್ತು 33 ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು ವಿದ್ಯುತ್ ಮಾರ್ಗ ಹಾಗೂ 33/11ಕೆವಿ ಕುಂಬ್ರ ವಿದ್ಯುತ್ ಉಪಕೇಂದ್ರದ 11ಕೆವಿ ದೇರ್ಲ, 11ಕೆವಿ ಮಾದ್ದ ಮತ್ತು 11ಕೆವಿ ಸುಳ್ಯಪದವು ವಿದ್ಯುತ್ ಮಾರ್ಗಗಳ ವಿದ್ಯುತ್‌ ನಿಲುಗಡೆ ಮಾಡಲಾಗುವುದು.


ಆದ್ದರಿಂದ 110/33/11ಕೆವಿ ಮಾಡಾವು. 33/11ಕೆವಿ ಸುಳ್ಯ, ಬೆಳ್ಳಾರೆ, ಗುತ್ತಿಗಾರು ಮತ್ತು ಕಾವು ವಿದ್ಯುತ್ “ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡಗರ್‌ಳು ಮತ್ತು 33/11ಕೆವಿ ಕುಂಬ್ರ ವಿದ್ಯುತ್‌ ಉಪಕೇಂದ್ರದ 11ಕೆವಿ ದೇರ್ಲ, 11ಕೆವಿ ಮಾದ್ದ ಮತ್ತು 11ಕೆವಿ ಸುಳ್ಯಪದವು ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ

ಹೈವೇ ಬದಿಯಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಗೆ ಕಾರು ಡಿಕ್ಕಿ

Posted by Vidyamaana on 2023-10-12 22:11:32 |

Share: | | | | |


ಹೈವೇ ಬದಿಯಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಗೆ ಕಾರು ಡಿಕ್ಕಿ

ಬಂಟ್ವಾಳ : ಕಾರು ಡಿಕ್ಕಿ ಹೊಡೆದು ಪಾದಚಾರಿ ಯುವತಿಯೋರ್ವಳು ಮೃತಪಟ್ಟ ಘಟನೆ ಗುರುವಾರ ರಾತ್ರಿ ಸುಮಾರು 6.30 ಕ್ಕೆ ರಾಷ್ಟ್ರೀಯ ಹೆದ್ದಾರಿ 75 ರ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.


    ಮೃತಪಟ್ಟ ಯುವತಿಯನ್ನು ವೀರಕಂಭ ಗ್ರಾಮದ ಬಾಯಿಲ ನಿವಾಸಿ ಶೇಖರ ಪೂಜಾರಿ ಅವರ ಪುತ್ರಿ ಪಾವನ ( 23) ಎಂದು ಗುರುತಿಸಲಾಗಿದೆ.


    ಬಿ.ಸಿ.ರೋಡಿನ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಕೆಲಸ ಬಿಟ್ಟು  ಬಸ್ ಮೂಲಕ ಬಂದು ದಾಸಕೋಡಿ ಎಂಬಲ್ಲಿ  ಇಳಿದು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುವ ವೇಳೆ  ಡಸ್ಟರ್  ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.


    ಡಿಕ್ಕಿಯ ರಭಸಕ್ಕೆ ಯುವತಿ ರಸ್ತೆ ಬದಿಯ ತೋಡಿಗೆ ಎಸೆಯಲ್ಪಟ್ಟಿದ್ದು ತುಸು ದೂರದ ತನಕ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕಾರು ಕೂಡ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ  ಎಂದು ಹೇಳಲಾಗಿದೆ.


     ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ.


ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಡವಟ್ಟು ಮಾತ್ರೆಗಳನ್ನ ಹಿಂಪಡೆದ ಡಿಎಚ್ಓ

Posted by Vidyamaana on 2023-09-23 07:45:36 |

Share: | | | | |


ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಡವಟ್ಟು ಮಾತ್ರೆಗಳನ್ನ ಹಿಂಪಡೆದ ಡಿಎಚ್ಓ

ಉಳ್ಳಾಲ: ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರಕ್ಕೆ ಚಿಕಿತ್ಸೆಗೆಂದು ತೆರಳಿದ್ದ ತಾಯಿ, ಮಗಳಿಗೆ ಶಿಲೀಂದ್ರ ಲೇಪಿತ ಮಾತ್ರೆಗಳನ್ನು ನೀಡಿದ ಘಟನೆ ನಡೆದಿದ್ದು, ದೂರಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯಾಧಿಕಾರಿ ತಕ್ಷಣ ಅಲ್ಲಿಗೆ ನೀಡಿರುವ ಪ್ಯಾರಾ ಸಿಟಮಾಲ್ ಮಾತ್ರೆಗಳನ್ನ ಹಿಂಪಡೆದಿದ್ದಾರೆ. 


ಕೋಟೆಕಾರು, ಬೀರಿ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿನ್ನೆ ಮಧ್ಯಾಹ್ನ ಕೆ.ಸಿ ನಗರ ನಿವಾಸಿ ಮಹಿಳೆಯೊಬ್ಬರು ತನ್ನ ಆರನೇ ತರಗತಿಯ ಮಗಳು‌ ರಾಫಿಯಾ ಜೊತೆ ಜ್ವರಕ್ಕೆ ಚಿಕಿತ್ಸೆ ಪಡೆಯಲು ತೆರಳಿದ್ದರು. ಇಬ್ಬರನ್ನೂ ಪರೀಕ್ಷೆ ನಡೆಸಿದ ವೈದ್ಯರು ಎರಡು‌ ದಿವಸಗಳ ಔಷಧಿಗಳನ್ನ ನೀಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ಔಷಧಿ ಸೇವಿಸಲು ಮುಂದಾದಾಗ ಪ್ಯಾರಾ ಸಿಟಮಾಲ್ ಮಾತ್ರೆಯ ಬಣ್ಣ ಬದಲಾಗಿ ಶಿಲೀಂದ್ರ ಆವರಿಸಿತ್ತು. ಈ ಬಗ್ಗೆ ವಿಚಾರಿಸಿದಾಗ ಆರೋಗ್ಯ ಕೇಂದ್ರದ ಸಿಬ್ಬಂದಿ ಎಲ್ಲಾ ಮಾತ್ರೆಗಳು ಹೀಗೇ  ಇವೆ, ಏನಾಗುವುದಿಲ್ಲವೆಂದು ಬಾಲಿಶ ಉತ್ತರ ನೀಡಿದ್ದರಂತೆ.


ಆನಂತರ ಮಾಜಿ ಗ್ರಾಮ ಪಂಚಾಯತ್ ಸದಸ್ಯರೋರ್ವರು ಶಿಲೀಂದ್ರ ಆವರಿಸಿದ್ದ ಮಾತ್ರೆಯ ವೀಡಿಯೋ ತೆಗೆದು ಜಿಲ್ಲಾ ಆರೋಗ್ಯಾಧಿಕಾರಿಯ ವಾಟ್ಸಪ್ ಕಳಿಸಿದ್ದಾರೆ. ತಕ್ಷಣ ಸ್ಪಂದನೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಎಚ್‌.ಆರ್ ತಿಮ್ಮಯ್ಯ, ಕೋಟೆಕಾರು ಆರೋಗ್ಯ ಕೇಂದ್ರಕ್ಕೆ ನೀಡಿರುವ ಪ್ಯಾರಸೆಟಮೋಲ್ ಮಾತ್ರೆಗಳನ್ನು ಹಿಂದಕ್ಕೆ ತರಿಸಿಕೊಂಡಿದ್ದಾರೆ. 


ಹೆಡ್ ಲೈನ್ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿದ ಅವರು ಎರಡು ಬ್ಯಾಚ್ ನ ಪ್ಯಾರಾಸೆಟಮೋಲ್ ಮಾತ್ರೆಗಳಲ್ಲಿ ಕೆಲವು ಸ್ಟ್ರಿಪ್ ಗಳ ಮಾತ್ರೆಗಳಿಗೆ ಶಿಲೀಂದ್ರ ಆವರಿಸಿದೆ. 2025 ರ ಜನವರಿ ತಿಂಗಳ ವರೆಗೆ ಮಾತ್ರೆಗಳು ಬಳಕೆಗೆ ಯೋಗ್ಯವಾಗಿದ್ದರೂ ಮಾತ್ರೆಗಳ ವಿತರಣೆಯನ್ನ ನಿಲ್ಲಿಸಿ ಎಲ್ಲವನ್ನು ಹಿಂಪಡೆದಿದ್ದು ಅದನ್ನ ಬೆಂಗಳೂರಿಗೆ ಪರೀಕ್ಷೆಗೆ ಕಳಿಸಲಾಗುವುದು. ಜಿಲ್ಲೆಯ ಉಳಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ಯಾರ ಸೆಟಮೋಲ್ ಮಾತ್ರೆಗಳನ್ನ ಹಿಂಪಡೆದು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಜನ ಪ್ರತಿನಿಧಿ ಎಂಬ ಕಾರಣಕ್ಕೆ ಠಾಣೆ ಮುಂದೆ ಹೋಗಿ ಪ್ರತಿಭಟನೆ ನಡೆಸುವುದು ಎಷ್ಟು ಸರಿ?

Posted by Vidyamaana on 2024-05-31 14:17:34 |

Share: | | | | |


ಜನ ಪ್ರತಿನಿಧಿ ಎಂಬ ಕಾರಣಕ್ಕೆ ಠಾಣೆ ಮುಂದೆ ಹೋಗಿ ಪ್ರತಿಭಟನೆ ನಡೆಸುವುದು ಎಷ್ಟು ಸರಿ?

ಬೆಂಗಳೂರು : ಪರವಾನಿಗೆ ಪಡೆಯದೆ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಗಳ ಅಕ್ರಮ ದಾಸ್ತಾನು ಮಾಡಿದ್ದ ವ್ಯಕ್ತಿಯ ಬಂಧನವನ್ನು ಖಂಡಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕ್ರಮಕ್ಕೆ ಮೇ.31 ರಂದು(ಇಂದು) ಹೈಕೊರ್ಟ್ ತೀವ್ರ ತರಾಟೆ ತೆಗೆದು ಕೊಂಡಿದೆ.ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳಲ್ಲಿ ನಿಂಧಿಸಿದ ಹಾಗೂ ಪ್ರತಿಭಟನೆ ಮೂಲಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ದಾಖಲಾಗಿದ್ದ ಎರಡು ಎಫ್‌ಐಆರ್‌ಗಳನ್ನು ಪ್ರಶ್ನಿಸಿ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಇಂದು ನಡೆಸಿದ ನ್ಯಾಯಮೂರ್ತಿ ಕೃಷ್ಣ ಧೀಕ್ಷಿತ್ ಅವರಿದ್ದ ನ್ಯಾಯಪೀಠ, ಶಾಸಕರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಪೊಲೀಸರು ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಬಹುದು. ಅಕ್ರಮ ಬಂಧನ ಮಾಡಿದಲ್ಲಿ ಹೆಬಿಯಾಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಆದರೆ, ಜನ ಪ್ರತಿನಿಧಿ ಎಂಬ ಕಾರಣಕ್ಕೆ ಠಾಣೆ ಮುಂದೆ ಹೋಗಿ ಪ್ರತಿಭಟನೆ ನಡೆಸುವುದು ಎಷ್ಟು ಸರಿ ?, ಅಲ್ಲದೆ, ಶಾಸಕರು ಕಾನೂನು ಮಾಡುವ ಕೆಲಸವನ್ನು ಮಾಡಬೇಕು. ಅದರ ಬದಲಾಗಿ ನ್ಯಾಯಾಲಯದ ಕೆಲಸದಲ್ಲಿ ಮಾಡುವುದಕ್ಕೆ ಮುಂದಾಗುವದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಿದ್ದಾರೆ, ನ್ಯಾಯಾಲಯದ ಕಾರ್ಯವನ್ನು ನೀವು ಮಾಡುವುದಕ್ಕೆ ಮುಂದಾಗಬೇಡಿ. ನಿಮ್ಮ ಕೆಲಸ ಕಾನೂನು ಮಾಡುವುದನ್ನು ಮಾಡಿ, ನ್ಯಾಯಾಲಯ ತನ್ನ ಕಾರ್ಯ ಕಾಡುವುದಕ್ಕೆ ಬಿಡಿ ಎಂದು ಪೀಠ ಸಲಹೆ ನೀಡಿತು.ಮುಂದೊಂದು ದಿನ ನ್ಯಾಯಾಧೀಶರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ನಮ್ಮ ಹಿಂದೆ ಬಂದು ಕೂತರೆ ನಾವೆಲ್ಲರೂ ಹೆಗೆ ಕೆಲಸ ಮಾಡಬೇಕು. ಈ ರೀತಿಯ ವರ್ತನೆಯನ್ನು ಸಹಿಸಲಾಗುವುದಿಲ್ಲ ಎಂದು ಪೀಠ ತಿಳಿಸಿತು.

ಪೆರ್ನಾಳ್ ಸಂಭ್ರಮದ ನಡುವೆ ಆ ದುರಂತ ವಾರ್ತೆ ಮರುಕಳಿಸದಿರಲಿ

Posted by Vidyamaana on 2024-04-10 06:35:52 |

Share: | | | | |


ಪೆರ್ನಾಳ್ ಸಂಭ್ರಮದ ನಡುವೆ ಆ ದುರಂತ ವಾರ್ತೆ ಮರುಕಳಿಸದಿರಲಿ

ಕೈಯಲ್ಲೊಂದು ಮೊಬೈಲ್, ಸಂಚರಿಸಲೊಂದು ಬೈಕ್ ಸಿಕ್ಕರೆ ಹದಿಹರೆಯದ ಯುವಕರಿಗೆ ಮತ್ತೆ ಉಪದೇಶದ ಅಗತ್ಯವೂ, ಕೇಳಿಸಿಕೊಳ್ಳುವ ವ್ಯವಧಾನವೂ ತೀರಾ ಇಲ್ಲದಾಗಿದೆ.

ಹಬ್ಬದ ಸಂಭ್ರಮ ದ ಹೆಸರಿನಲ್ಲಿ ಮೈಮರೆತು ಓಡಾಡದಿರಿ.

ಕೈಯಲ್ಲಿರುವ ಬೈಕ್ ನ ನಿಯಂತ್ರಣ ನಿಮ್ಮಲ್ಲಿದ್ದರೂ ಮುಂದುಗಡೆಯಿಂದ ಬರುವ ವಾಹನದ ನಿಯಂತ್ರಣ ನಿಮ್ಮಲ್ಲಿರಲ್ಲ ಎಂಬ ಪ್ರಜ್ಞೆಯಾದರೂ ಇರಲಿ.ಸಣ್ಣ ಪ್ರಾಯದ ಯುವಕರು ರಸ್ತೆಯ ನಡುವೆ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಕಳೆದುಕೊಳ್ಳುವಾಗ ಯಾರಿಗೆ ತಾನೆ ಅದನ್ನು ಸಹಿಸಲು ಸಾಧ್ಯ.

ಆಸ್ಪತ್ರೆಯ ಶವಾಗಾರದ ಮುಂದೆ ಏನೂ ಪರಿಚಯವಿಲ್ಲದವರೇ ಜನಾಝವನ್ನು ನೋಡಿ ಬಿಕ್ಕಿ ಬಿಕ್ಕಿ ಅಳುವಾಗ, ಹೆತ್ತು ಸಾಕಿ ಸಲಹಿದ ಆ ಹೆತ್ತವರ ರೋಧನೆ ಅದೆಷ್ಟರ ಮಟ್ಟಿಗೆ ಇರಬಹುದು?

ತಾಯಿಗೆ ಸಲಾಂ ಹೇಳಿ ಮನೆಯಿಂದ ಹೊರಟ ಮಗ ಮರಳಿ ಬಂದದ್ದು ಬಿಳಿ ವಸ್ತ್ರವನ್ನು ಹೊದಿಸಿದ ರೂಪದಲ್ಲಿ ಮಯ್ಯತ್ತಾಗಿಯಾಗಿತ್ತು!

ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಗನ ಕಬರ್ ತೋಡಿದ್ದು ಸ್ವತಃ ಅಪ್ಪನೇ ಆಗಿತ್ತು!

ಇಂತಹ ಹೃದಯ ಕಲ್ಲಾಗಿಸುವ ಅದೆಷ್ಟು ಮರಣ ವಾರ್ತೆಗಳಾಗಿದೆ ಕಳೆದ ಆರೇಳು ವರ್ಷಗಳಿಂದ ನಾವು ಕಣ್ಣಾರೆ ಕಾಣುತ್ತಿರುವುದು?

ಮರಣದ ಸ್ಮರಣೆಗಿಂತ ಉತ್ತಮವಾದ ಉಪದೇಶ ಮತ್ತೊಂದಿಲ್ಲ.ಆದರೂ ಪ್ರತಿಯೊಂದು ಮರಣ ಸಂಭವಿಸಿದಾಗಲೂ ಒಂದೆರಡು ವಾರಗಳಲ್ಲಿ ನಾವದನ್ನು ಮರೆತುಬಿಡುತ್ತೇವೆ.



Leave a Comment: