ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಸುದ್ದಿಗಳು News

Posted by vidyamaana on 2024-07-23 19:43:42 |

Share: | | | | |


ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್‍ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‍ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

 Share: | | | | |


ತುಂಬೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತ

Posted by Vidyamaana on 2023-07-06 08:29:15 |

Share: | | | | |


ತುಂಬೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತ


ಪುತ್ತೂರು: ತುಂಬೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಮಂಗಳೂರು ಅಲೋಶಿಯಸ್ ವಿದ್ಯಾರ್ಥಿನಿ, ಪುತ್ತೂರಿನ ಕೂರ್ನಡ್ಕ ನಿವಾಸಿ ಹನಾ (19) ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಕೂರ್ನಡ್ಕ ನಿವಾಸಿ ಅಬ್ದುಲ್ ಮಜೀದ್ ಹಾಗೂ ಶಮೀಮಾ ದಂಪತಿ ಪುತ್ರಿ ಹನಾ (19) ಮೃತಪಟ್ಟವರು. ಇವರು ಅಲೋಶಿಯಸ್ ನಲ್ಲಿ ಬಿಬಿಎಂ ವಿದ್ಯಾರ್ಥಿನಿ.

ಪುತ್ತೂರಿನಿಂದ ಮಂಗಳೂರು ಕಡೆಗೆ ಐ20 ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ‌. ಚಾಲಕನ ನಿಯಂತ್ರಣ ತಪ್ಪಿದ ಕಾರು, ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ.

ಫೆ.18 : ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

Posted by Vidyamaana on 2023-02-17 05:34:28 |

Share: | | | | |


ಫೆ.18 : ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಕಡಬ : ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಫೆ.18 ಶನಿವಾರ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ.

ಮಹಾಶಿವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಭಜನಾ ತಂಡಗಳಿಂದ ಸಂಜೆ 6 ಕ್ಕೆ ಕುಣಿತ ಭಜನೆ,  ಮಹಾಪೂಜೆ  ಮತ್ತು ರಾತ್ರಿ 9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 12 ಕ್ಕೆ ಮಹಾಶಿವರಾತ್ರಿಯ ವಿಶೇಷ ಪೂಜೆ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.

ಅಶೋಕ್ ಕುಮಾರ್ ರೈಗೆ ಬಾಲಕ ನೀಡಿದ ಪತ್ರದಲ್ಲೇನಿತ್ತು

Posted by Vidyamaana on 2023-06-03 02:02:32 |

Share: | | | | |


ಅಶೋಕ್ ಕುಮಾರ್ ರೈಗೆ ಬಾಲಕ ನೀಡಿದ ಪತ್ರದಲ್ಲೇನಿತ್ತು

ವಿಟ್ಲ: ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಟ್ಲದಲ್ಲಿ ವಿಜಯೋತ್ಸವ, ಕೃತಜ್ಞತಾ ಸಬೆ ಆಯೋಜಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಕಾಂಗ್ರೆಸಿಗರು ಹರ್ಷ ವ್ಯಕ್ತಪಡಿಸಿದರು. ಅಶೋಕ್ ಕುಮಾರ್ ರೈ ಅವರ ಅಭಿಮಾನಿಗಳು ಸಂಭ್ರಮಿಸಿದರು. ಎಲ್ಲವೂ ಆಯಿತು. ಆದರೆ ಬಾಲಕರೀರ್ವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಬಗೆ ಯಾರಿಗೂ ತಿಳಿಯಲೇ ಇಲ್ಲ.

ಸಮಾರಂಭಕ್ಕೆ ಮೊದಲು ನಡೆದ ವಿಜಯೋತ್ಸವ ಮೆರವಣಿಗೆ ನಡೆದಿತ್ತು. ಅಶೋಕ್ ಕುಮಾರ್ ರೈ ಅವರು ಜೀಪಿನಿಂದ ಇಳಿಯುವುದನ್ನೇ ಕಾಯುತ್ತಿದ್ದರೆಂದು ಕಾಣಬೇಕು. ತೆರೆದ ಜೀಪಿನಿಂದ ಅಶೋಕ್ ರೈ ಇಳಿಯುತ್ತಿದ್ದಂತೆ ಇಬ್ಬರು ಬಾಲಕರು ನೇರವಾಗಿ ಅಶೋಕ್ ಕುಮಾರ್ ರೈ ಅವರ ಬಳಿಗೆ ಓಡೋಡಿ ಬಂದರು. ಹಾಗೆ ಬಂದವರೇ ಅಶೋಕ್ ರೈ ಅವರ ಕೈಗೆ ಚೀಟಿಯೊಂದನ್ನು ನೀಡಿದರು.

ಲಗುಬಗೆಯ ವಾತಾವರಣದಲ್ಲೂ ಅಶೋಕ್ ರೈ ಆ ಪತ್ರವನ್ನು ತದೇಕಚಿತ್ತದಿಂದ ಓದತೊಡಗಿದರು. ಗಡಿಬಿಡಿಯ ನಡುವೆಯೂ ಮುಖದಲ್ಲಿ ನಗು ಅರಳಿತು. ಮಕ್ಕಳ ಸಂತೋಷದಲ್ಲಿ ತಾವು ಪಾಲ್ಗೊಂಡರು. 

ಬಾಲಕರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಶಾಸಕರು ಮಕ್ಕಳ ಸಂತೋಷ ನೋಡಿ, ಮನತುಂಬಿ ಹರಸಿದರು. ಮಾತ್ರವಲ್ಲ. ತಮ್ಮ ಕಿಸೆಗೆ ಕೈ ಹಾಕಿ, ಕೈಗೆ ಸಿಕ್ಕ ನೋಟನ್ನು ಬಾಲಕರಿಗೆ ನೀಡಿದರು.

ಮಕ್ಕಳು ಬರೆದ ಪತ್ರದ ಸಾಲುಗಳು ಹೀಗಿತ್ತು…

ಕರ್ನಾಟಕ, ವಿಧಾನಸಭಾ ಚುನಾವಣೆ ಪುತ್ತೂರು ವಿಧಾನಸಭಾ ಕ್ಷೇತ್ರ

      ನಮ್ಮ ಊರಿನ ನೆಚ್ಚಿನ MLA ಆಗಿರುವ ಪ್ರೀಯ ಅಶೋಕ್ ಕುಮಾರ್ ರೈ ಅವರಿಗೆ ನಮಸ್ಕಾರ.

ನೀವು ಚಂದಳಿಗೆ ಭಾರತ್ ಅಡಿಟೋರಿಯಂಗೆ ಸಂದರ್ಶಿಸಿದಾಗ ನಿಮ್ಮಲ್ಲಿ ನಾನು ನಿಮ್ಮ ಕೈ ಹಿಡಿದು ಹೇಳಿದ್ದೆ. ನೀವು ಈ ಸಲ ಗೆಲ್ಲುತ್ತೀರಿ ಎಂದಾಗ ನೀವು (ತುಳು ಭಾಷೆಯಲ್ಲಿ) ಎಡ್ಡೆ ಬಾಳೆ ಎಂದು ಹೇಳಿದ್ದೀರಿ.

ಇನ್ನು ಮುಂದಕ್ಕೂ ನೀವು ಪ್ರಧಾನ ಮಂತ್ರಿಯಾಗಬೇಕು ಎಂದೂ ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತೇವೆ.

- ಶಾಹುಲ್ ಹಮೀದ್ 2ನೇ ತರಗತಿ,

ಚಂದಳಿಕೆ ಶಾಲೆ

ಜಿದ್ದಾಜಿದ್ದಿನ ಕಣದಲ್ಲಿ ಭರ್ಜರಿ ಜಯಭೇರಿ ಭಾರಿಸಿದ ಬಿಜೆಪಿಯ ಡಾ.ಧನಂಜಯ ಸರ್ಜಿ

Posted by Vidyamaana on 2024-06-07 07:51:44 |

Share: | | | | |


ಜಿದ್ದಾಜಿದ್ದಿನ ಕಣದಲ್ಲಿ ಭರ್ಜರಿ ಜಯಭೇರಿ ಭಾರಿಸಿದ ಬಿಜೆಪಿಯ ಡಾ.ಧನಂಜಯ ಸರ್ಜಿ

ಮೈಸೂರು : ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಡಾ.ಧನಂಜಯ ಸರ್ಜಿ ಭರ್ಜರಿ ಬಹುಮತದಿಂದ ಗೆಲುವು ಕಂಡಿದ್ದಾರೆ. 

ರೋಚಕ ಕದನದಲ್ಲಿ ಬಿಜೆಪಿಯ ಧನಂಜಯ ಸರ್ಜಿ ಕಾಂಗ್ರೇಸ್‍ನ ಆಯನೂರು ಮಂಜುನಾಥ್ , ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ರಘುಪತಿ ಭಟ್ ಕಣದಲ್ಲಿ ಇದ್ದರು.

ದಾವಣಗೆರೆಯ ಹೊನ್ನಳ್ಳಿಯಿಂದ ಶಿವಮೊಗ್ಗ,  ಉಡುಪಿ- ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮಡಿಕೇರಿಯ ವರೆಗೆ ಐದುವರೆ ಲೋಕಸಭಾ ಕ್ಷೇತ್ರಗಳನ್ನೊಳಗೊಂಡ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಶಿವಮೊಗ್ಗದ ಖ್ಯಾತ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿಯವರು 37627 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯಭೇರಿ ಬಾರಿಸಿದರು.

ಮೇಕಪ್ ಹಾಗೂ ಪೋನ್ ಗೀಳು: ಹೆಂಡತಿಯ ಕಾಟ ತಾಳಲಾರದೆ ಪತಿ ಆತ್ಮಹತ್ಯೆ

Posted by Vidyamaana on 2024-07-17 14:27:21 |

Share: | | | | |


ಮೇಕಪ್ ಹಾಗೂ ಪೋನ್ ಗೀಳು: ಹೆಂಡತಿಯ ಕಾಟ ತಾಳಲಾರದೆ ಪತಿ ಆತ್ಮಹತ್ಯೆ

ಬೆಂಗಳೂರು ಗ್ರಾಮಾಂತರ: ಪತ್ನಿಯ ಡ್ರೆಸ್ ಹಾಗೂ ಮೇಕಪ್ ಗಾಗಿ ಗಲಾಟೆ ನಡೆದಿದ್ದು, ಪತಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala)ದ ತೊಣಚಿನಕುಪ್ಪೆ ಗ್ರಾಮದಲ್ಲಿ ನಡೆದಿದೆ.ಅಸ್ಸಾಂ ಮೂಲದ ಗುಲ್ಜರ್ ಹುಸೇನ್ ಚೌದರಿ (28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಏ 19:ಪುತ್ತೂರು ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ನಾಮಪತ್ರ ಸಲ್ಲಿಕೆ

Posted by Vidyamaana on 2023-04-18 15:37:50 |

Share: | | | | |


ಏ 19:ಪುತ್ತೂರು ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ನಾಮಪತ್ರ ಸಲ್ಲಿಕೆ

: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ ಏ.19 ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ನಾಳೆ ಬೆಳಗ್ಗೆ 8 ಗಂಟೆಗೆ  ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ  ಜೆ ಡಿ ಎಸ್ ಕಾರ್ಯಕರ್ತರು , ಬೆಂಬಲಿಗರು ಹಾಗೂ ಹಿತೈಷಿಗಳೊಂದಿಗೆ ಬೆಳಗ್ಗೆ 10 ಗಂಟೆಗೆ ದರ್ಬೆ ಸರ್ಕಲ್ ನಿಂದ ಬೃಹತ್ ರ‍್ಯಾಲಿಯ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ  ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‍ ಪಕ್ಷಕ್ಕೆ ಸೇರಿದ್ದರು.

Recent News


Leave a Comment: