ಲಡ್ಡು ಬಂದು ಬಾಯಿಗೆ ಬಿತ್ತು..! ಆರ್ಡರ್ ಮಾಡಿದ್ದು ಫುಡ್ ಪಾರ್ಸೆಲ್ ಬಂದಿದ್ದು ಕ್ಯಾಶ್!!

ಸುದ್ದಿಗಳು News

Posted by vidyamaana on 2024-07-21 15:34:53 |

Share: | | | | |


ಲಡ್ಡು ಬಂದು ಬಾಯಿಗೆ ಬಿತ್ತು..! ಆರ್ಡರ್ ಮಾಡಿದ್ದು ಫುಡ್ ಪಾರ್ಸೆಲ್ ಬಂದಿದ್ದು ಕ್ಯಾಶ್!!

ಕೊಪ್ಪಳ: ಗ್ರಾಹಕನಿಗೆ ಆಹಾರ ಪಾರ್ಸಲ್​ ಕವರ್​ ನೀಡುವ ಬದಲಿಗೆ ಹೋಟೆಲ್ ಮಾಲಿಕ 50 ಸಾವಿರ ರೂ. ಹಣವಿದ್ದ ಕವರ್​ ನೀಡಿದ ಘಟನೆ ನಡೆದಿದ್ದು, ಗ್ರಾಹಕ ಪಾರ್ಸಲ್​ ತೆಗೆದುಕೊಂಡು ಹೋಗಿ ಮನೆಯಲ್ಲಿ ನೋಡಿದಾಗ ತಿಂಡಿ ಬದಲಿಗೆ 50 ಸಾವಿರ ರೂ. ಇರುವುದು ಕಂಡಿದೆ.

ರಸೂಲ್ ಸಾಬ ಸೌದಾಗರ್ ಎಂಬುವರು ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಶನಿವಾರ ಅವರು ಬ್ಯಾಂಕ್​ಗೆ ಕಟ್ಟಲು ಎಂದು ಮನೆಯಿಂದ 49,625 ರೂಪಾಯಿ ಇದ್ದ ಹಣದ ಕವರ್​ನ್ನು ಹೋಟೆಲ್ ನಲ್ಲಿಟ್ಟಿದ್ದರು.



ಮುಂಜಾನೆ ಕುಷ್ಟಗಿ ಪಟ್ಟಣದ ನಿವಾಸಿಯಾಗಿರುವ ಸರ್ಕಾರಿ ಶಾಲೆ ಶಿಕ್ಷಕ ಶ್ರೀನಿವಾಸ್ ದೇಸಾಯಿ, ಸೌದಾಗರ್ ಹೋಟೆಲ್​ಗೆ ಬಂದಿದ್ದರು. ತನಗೆ ಇಡ್ಲಿ, ವಡೆ, ದೋಸೆಯನ್ನು ಪಾರ್ಸಲ್ ಕೊಡಿ ಅಂತ ಹೇಳಿದ್ದರು. ಆದರೆ ಸೌದಾಗರ್ ಆಹಾರವಿದ್ದ ಕವರ್ ನೀಡುವ ಬದಲು ಹಣವಿದ್ದ ಕವರ್ ನೀಡಿ, ನಿಮ್ಮ ಪಾರ್ಸಲ್ ತೆಗೆದುಕೊಂಡು ಹೋಗಿ ಅಂತ ಹೇಳಿದ್ದರು. ಹೀಗಾಗಿ ಶ್ರೀನಿವಾಸ ದೇಸಾಯಿ ಅವರು ಕವರ್​​ ಅನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು. ಆದರೆ ಆ ಹಣವನ್ನು ಹೋಟೆಲ್​ ಮಾಲಿಕನಿಗೆ ಗ್ರಾಹಕ ​ ಶಿಕ್ಷಕ ಮರಳಿಸಿದ್ದಾರೆ.

 Share: | | | | |


ಪುರುಷರಕಟ್ಟೆ: ಕೆ ಎಸ್‌ ಆರ್ ಟಿ ಸಿ- ಬೈಕ್ ಡಿಕ್ಕಿ ಬೈಕ್‌ ಸವಾರ ಮೋಕ್ಷಿತ್ ಗೌಡ ಮೃತ್ಯು

Posted by Vidyamaana on 2024-05-15 09:52:02 |

Share: | | | | |


ಪುರುಷರಕಟ್ಟೆ: ಕೆ ಎಸ್‌ ಆರ್ ಟಿ ಸಿ- ಬೈಕ್ ಡಿಕ್ಕಿ  ಬೈಕ್‌ ಸವಾರ ಮೋಕ್ಷಿತ್ ಗೌಡ ಮೃತ್ಯು

ಪುತ್ತೂರು: ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ ಎಂಬಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮೇ. 15ರಂದು ನಡೆದಿದೆ. 

ನೇಣು ಬಿಗಿದ ಸ್ಥಿತಿಯಲ್ಲಿ ಆರ್ಶಿಯ ಬಾನು ಮೃತದೇಹ ಪತ್ತೆ; ಪತಿಯ ವಿರುದ್ಧ ದೂರು

Posted by Vidyamaana on 2023-07-12 01:43:28 |

Share: | | | | |


ನೇಣು ಬಿಗಿದ ಸ್ಥಿತಿಯಲ್ಲಿ ಆರ್ಶಿಯ ಬಾನು ಮೃತದೇಹ ಪತ್ತೆ; ಪತಿಯ ವಿರುದ್ಧ ದೂರು

ಹಾಸನ, ಜು.11: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಮೈಸೂರಿನ ಎನ್.ಆರ್.ಮೊಹಲ್ಲಾದ ಮನೆಯೊಂದರಲ್ಲಿ ಪತ್ತೆಯಾಗಿದರುವುದು ವರದಿಯಾಗಿದೆ.


ಮೃತರನ್ನು ಹಾಸನದ ಮೆಹಬೂಬ್ ನಗರ ಇದ್ದಾ ನಿವಾಸಿ ಅರ್ಶಿಯ ಬಾನು (27) ಎಂದು ಗುರುತಿಸಲಾಗಿದೆ. ಇವರನ್ನು ಸಕಲೇಶಪುರ ತಾಲೂಕಿನ ಬೆಳಗೋಡು ಗ್ರಾಮದ ನಿವಾಸಿ ತಝ್ ಅಲಿ(35)ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ 1 ವರ್ಷ 6 ತಿಂಗಳಿನ ಒಂದು ಮಗು ಇದೆ ಎಂದು ತಿಳಿದು ಬಂದಿದೆ.

ಅರ್ಶಿಯ ಬಾನುಗೆ ಪತಿ ತಬ್ರೇಝ್ ಅಲಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಈತನಿಗೆ ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ಕಾರು, ಹಣ, ಚಿನ್ನವನ್ನು ಎಲ್ಲವನ್ನೂ ಕೊಟ್ಟಿದ್ದರೂ ನನ್ನ ಪುತ್ರಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೋಷಕರು ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆಲಂಕಾರು ಬಳಿ ಆಕ್ಸಿಜನ್ ಸಿಲಿಂಡರ್ ಸಾಗಾಟದ ಲಾರಿ ಮತ್ತು ಟೆಂಪೋ ನಡುವೆ ಭೀಕರ ಅಪಘಾತ

Posted by Vidyamaana on 2024-03-31 06:15:03 |

Share: | | | | |


ಆಲಂಕಾರು ಬಳಿ ಆಕ್ಸಿಜನ್ ಸಿಲಿಂಡರ್ ಸಾಗಾಟದ ಲಾರಿ ಮತ್ತು ಟೆಂಪೋ ನಡುವೆ ಭೀಕರ ಅಪಘಾತ

ಆಲಂಕಾರು: ಇಲ್ಲಿನ ಕಡಬ ಠಾಣಾ ವ್ಯಾಪ್ತಿಯ ಆಲಂಕಾರು -ಶಾಂತಿಮೊಗರು ರಸ್ತೆಯ ಬುಡೇರಿಯಾ ಬಳಿ ಆಕ್ಷಿಜನ್ ಸಿಲಿಂಡರ್ ಸಾಗಾಟದ ಮತ್ತು ಟೆಂಪೋ ವಾಹನ ನಡುವೆ ಭೀಕರ ಅಫಘಾತ ಸಂಭವಿಸಿದ್ದು ಇಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಮಾ.30 ರ ರಾತ್ರಿ ನಡೆದಿದೆ.

ಬ್ಲಡ್ ಡೋನರ್ಸ್ ಮಂಗಳೂರು ನೂತನ ಸಮಿತಿ ಅಸ್ತಿತ್ವಕ್ಕೆ

Posted by Vidyamaana on 2023-07-09 03:31:43 |

Share: | | | | |


ಬ್ಲಡ್ ಡೋನರ್ಸ್ ಮಂಗಳೂರು ನೂತನ ಸಮಿತಿ ಅಸ್ತಿತ್ವಕ್ಕೆ

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ವಾರ್ಷಿಕ ಮಹಾ ಸಭೆಯು ಡಾನ್ ಬಾಸ್ಕೊ ಹಾಲ್ ಬಲ್ಮಟ್ಟದಲ್ಲಿ ಜುಲೈ 6 ರಂದು ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಚುನಾವಣಾ ಉಸ್ತುವಾರಿಗಳಾದ ಶಾಹುಲ್ ಹಮೀದ್ ಕಾಶಿಪಟ್ನಾ ಹಾಗೂ ಫರ್ಝಾನ್ ಸಿದ್ದಕಟ್ಟೆ ಇವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಸಿದ್ದೀಕ್ ಮಂಜೇಶ್ವರ, ಅಧ್ಯಕ್ಷರಾಗಿ ನವಾಝ್ ಕಲ್ಲರಕೋಡಿ, ಉಪಾಧ್ಯಕ್ಷರಾಗಿ ಅಶ್ರಫ್ ಉಪ್ಪಿನಂಗಡಿ, ಲತೀಫ್ ಎಚ್.ಎಸ್.ಎ ಉಪ್ಪಿನಂಗಡಿ, ಪ್ರದಾನ ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಕಾಶಿಪಟ್ನಾ, ಕಾರ್ಯದರ್ಶಿಯಾಗಿ ಫಯಾಝ್ ಮಾಡೂರು, ಜೊತೆ ಕಾರ್ಯದರ್ಶಿ‌ಯಾಗಿ ನಿಸಾರ್ ಉಳ್ಳಾಲ, ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಪಜೀರ್, ಸದಸ್ಯರಾಗಿ ಸಲಾಂ ಚೊಂಬುಗುಡ್ಡೆ, ಅಬ್ದುಲ್ಲಾ ಭವಾನಿ, ಅಫ್ತಾಬ್ ಕುಲಾಯಿ, ಮೊಯಿದು ಸೀತಾಂಗೋಳಿ, ಫರ್ಝಾನ್ ಸಿದ್ದಕಟ್ಟೆ, ಫಾರೂಕ್ ಬಿಗ್ ಗ್ಯಾರೇಜ್, ಮುನಾಫಿಲ್ ಜೆಪ್ಪು, ಮನ್ಸೂರ್ ಕಲ್ಲಡ್ಕ, ಹಕೀಮ್ ಕೆಸಿ ರೋಡ್ ಇವರನ್ನು ಆಯ್ಕೆ ಮಾಡಲಾಯಿತು.

ಕ್ಯಾಂಪ್ ಇನ್ ಚಾರ್ಜ್ ಆಗಿ ಫರ್ಝಾನ್ ಸಿದ್ದಕಟ್ಟೆ, ಮಾಧ್ಯಮ ಉಸ್ತುವಾರಿ ಆಗಿ ಅಫೀಝ್ ಓಮಾನ್, ನಿಝಾಮುದ್ದೀನ್  ತಬೂಕ್, ಝಹೀರ್ ಶಾಂತಿನಗರ ಫಾರೂಕ್(ಫಾದ್) ಇವರನ್ನು ನೇಮಿಸಲಾಯಿತು.

ಗಲ್ಫ್(ಜಿ.ಸಿ. ಸಿ) ಸಮೀತಿ ಅಧ್ಯಕ್ಷರಾಗಿ ನಝೀರ್ ಬಿಕರ್ನಕಟ್ಟೆ ಪುನರಾಯ್ಕೆ ಯಾದರು. ಉಪಾದ್ಯಕ್ಷರಾಗಿ ದಾವೂದ್ ಬಜಾಲ್, ಇಮ್ಮು ಉಳ್ಳಾಲ್, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಸಾಲ್ಮರ, ಕಾರ್ಯದರ್ಶಿಯಾಗಿ ನೌಫಲ್ ಬಜ್ಪೆ ಇವರನ್ನು ಆಯ್ಕೆ ಮಾಡಲಾಯಿತು.

 ಆರ್ಥಿಕ ವ್ಯವಹಾರಗಳ ಇನ್ ಚಾರ್ಜ್ ಆಗಿ ಇರ್ಫಾನ್ ಕಲ್ಲಡ್ಕ, ಮೆಡಿಕಲ್ ಇನ್ ಚಾರ್ಜ್ ಆಗಿ ಜಮಾಲ್ ಕಲ್ಲಡ್ಕ, ಬ್ಲಡ್ ಬ್ಯಾಂಕ್ ಇಂಚಾರ್ಜ್ ಆಗಿ ತೌಫಿಕ್ ಕುಲಾಯಿ, ಸಿರಾಜ್ ಪಜೀರ್,  ಮನ್ಸೂರ್ ಕೋಡಿಜಾಲ್, ಸಮೀರ್ ನಾರಾವಿ, ಮುನೀರ್ ಚೊಂಬುಗುಡ್ಡೆ, ರೌಫ್ ಪಾಲ್ತಾಡ್, ಇಮ್ತಿಯಾಝ್ ಜೋಕಟ್ಟೆಯವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶಾಹುಲ್ ಹಮೀದ್ ಕಾಶಿಪಟ್ನಾ ಇವರು ಸ್ವಾಗತಿಸಿ ವಂದಿಸಿದರು.

ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಹತ್ಯೆ: ಗೆಳತಿ ಮತ್ತು ಆಕೆಯ ಪ್ರಿಯಕರ ಬಂಧನ

Posted by Vidyamaana on 2024-04-01 04:49:58 |

Share: | | | | |


ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಹತ್ಯೆ: ಗೆಳತಿ ಮತ್ತು ಆಕೆಯ ಪ್ರಿಯಕರ ಬಂಧನ

ರಾಂಚಿ: ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಶಾಂತ್ ಕುಮಾರ್ ಸಿನ್ಹಾರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮಾಜಿ ಗೆಳತಿ ಕಾಜಲ್ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್ ಕುಮಾರ್ ಸಿನ್ಹಾ ಹತ್ಯೆ ಮಾಡಿ ಬಳಿಕ ಶವವನ್ನು ಜಾರ್ಖಂಡ್‌ನ ಹಜಾರಿಬಾಗ್‌ನ ಛದ್ವಾ ಸೇತುವೆಯ ಕೆಳಗೆ ಎಸೆಯಲಾಗಿತ್ತು.



ಪುರುಷರಕಟ್ಟೆಯಲ್ಲೊಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಪ್ರಾರಂಭ

Posted by Vidyamaana on 2023-10-28 12:06:16 |

Share: | | | | |


ಪುರುಷರಕಟ್ಟೆಯಲ್ಲೊಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಪ್ರಾರಂಭ

ಪುತ್ತೂರು:  ಬೆಳ್ತ೦ಗಡಿ ಲಾಯಿಲ ಪ್ರಸನ್ನ ಆಯುರ್ವೇದ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ.ಸುಜಯ್ ಕೃಷ್ಣ ತಂತ್ರಿಯವರ ನರಿಮೊಗರು ಗ್ರಾಮದ ಪುರುಷರಕಟ್ಟೆಯ ಸಿದ್ದಣ್ಣ ಕಾಂಪ್ಲೆಕ್ಸ್‌ ಉದಯಭಾಗ್ಯ ಹೊಟೇಲ್ ಪ್ರಥಮ ಮಹಡಿಯಲ್ಲಿ ಪ್ರಾರ೦ಭಿಸಿರುವ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಜನರಿಗೆ ಕ್ಲಿನಿಕ್, ಲ್ಯಾಬೋರೇಟರಿ ಹಾಗೂ ಫಿಸಿಯೋತೆರಫಿ ಮತ್ತು ವಿವಿಧ ನುರಿತ ತಜ್ಞ ವೈದ್ಯರಿಂದ ತಪಾಸಣೆ ಹಾಗೂ ಸಲಹೆಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿದೆ.

ಅ.29 ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ:

ನೂತನವಾಗಿ ಪ್ರಾರಂಭಗೊಂಡಿರುವ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಅ.29ರಂದು ನರಿಮೊಗ್ರು ಗ್ರಾ.ಪಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಮೊಗರು, ಓಂ ಫ್ರೆಂಡ್ಸ್ ಮುಕ್ತ, ಆಟೋರಿಕ್ಷಾ ಚಾಲಕ ಮ್ಹಾಲಕ ಸಂಘ ಮುಕ್ತ, ಬೆದ್ರಾಳ ನಂದಿಕೇಶ್ವರ ಭಜನಾ ಮಂಡಳಿ, ಪುರುಷರಕಟ್ಟೆ ಪೂರ್ಣಾನಂದ ಭಜನಾ ಮಂದಿರ, ಶಾಂತಿಗೋಡು ವಿಕ್ರಂ ಯುವಕ ಮಂಡಲ, ನರಿಮೊಗರು ಸೇರಾಜೆ ಶ್ರೀಶಾರದಾಂಬಾ ಭಜನಾ ಮಂಡಳಿ, ವನದುರ್ಗಾಂಬಿಕಾ ಭಜನಾ ಮಂಡಳಿ ದೇವಿನಗರ, ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು ನರಿಮೊಗರು ಹಾಗೂ ಸರಸ್ವತಿ ವಿದ್ಯಾ ಸಂಸ್ಥೆ ಪುರುಷರಕಟ್ಟೆ, SKSSF ಮುಕ್ವೆ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್‌ ವೈದ್ಯಕೀಯ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಲಿದೆ.


ಜನರಲ್ ಪಿಸಿಷಿಯನ್ ಹಾಗೂ ಆಯುರ್ವೇದ ತಜ್ಞ ವೈದ್ಯರಾಗಿರುವ ಡಾ.ಸುಜಯ್ ತಂತ್ರಿಯವರ ಕ್ಲಿನಿಕ್ ನಲ್ಲಿ ಕಂಪ್ಯೂಟರೀಕೃತ ರಕ್ತ ಪರೀಕ್ಷೆ, ಇಸಿಜಿ, ನೆಬ್ಯುಲೈಸರ್ ಗೆ ಪೂರಕವಾದ ಸುಸಜ್ಜಿತ ಲ್ಯಾಬೋರೇಟರಿ ಸೌಲಭ್ಯವಿದೆ. ಜೊತೆಗೆ ಅಲೋಪತಿ, ಹೋಮಿಯೋಪತಿ, ಆಯುರ್ವೇದ, ಕೌನ್ಸೆಲಿಂಗ್ ವಿಭಾಗಗಳಲ್ಲಿ ತಜ್ಞ ವೈದ್ಯರು ಕ್ಲಿನಿಕ್‌ನಲ್ಲಿ ಸೇವೆಗೆ ಲಭ್ಯಲಿರಲಿದ್ದಾರೆ. ಫಿಸಿಯೋಥೆರಫಿ, ಕಪ್ಪಿ೦ಗ್ ಥೆರಫಿ, ಫಾರ್ಮುಸಿ, ಮರ್ಮ ಚಿಕಿತ್ಸೆ, ಕೈರೋ ಪ್ರಾಕ್ಟಿಕ್ ಥೆರಫಿ, ಡಯೆಟ್ ಫೆರಫಿ ಹಾಗೂ ರಕ್ತ ಮೇಕೆಗಳು ಮೊದಲಾದ ಸೇವೆಗಳು ಕ್ಲಿನಿಕ್ ನಲ್ಲಿ ಲಭ್ಯವಿದ್ದು ವಿವಿಧ ವಿಭಾಗಳ ನುರಿತ ತಜ್ಞ ವೈದ್ಯರುಗಳು ಕ್ಲಿನಿಕ್ ನಲ್ಲಿ ಸೇವೆಗೆ ಲಭ್ಯ ವಿದ್ದಾರೆ 


ಕ್ಲಿನಿಕ್‌ನಲ್ಲಿರುವ ಸೌಲಭ್ಯಗಳು :

ಸುಸಜ್ಜಿತ, ಆಧುನಿಕ ಕಂಪ್ಯೂಟರೀಕೃತ, ರಕ್ತ ಪರೀಕ್ಷೆ, ಎಲ್ಲಾ ರೀತಿಯ ರಕ್ತ, ಮಲ, ಮೂತ್ರ ಮತ್ತು ಕಫಗಳ ಪರೀಕ್ಷೆ, ಪೈನ್ ಮ್ಯಾನೇಜ್‌ಮೆಂಟ್ ಯೂನಿಟ್(ನೋವು ನಿವಾರಣಾ ಘಟಕ), ಫಿಸಿಯೋಥೆರಫಿ ಮತ್ತು ರಿಹೇಬಿಲಿಟೇಷನ್,ಕಪ್ಪಿಂಗ್ ಥೆರಫಿ ಹಾಗೂ ಕೈರೋಪ್ರಾಕ್ಟಿಕ್ ಥೆರಫಿಗಳು ಮೊದಲಾದ ಸೇವೆಗಳು ಕ್ಲಿನಿಕ್‌ನಲ್ಲಿ ದೊರೆಯಲಿದೆ. ಕ್ಲಿನಿಕ್‌ನಲ್ಲಿ ಪ್ರತಿ ಅದಿತ್ಯವಾರ ಅಪರಾಹ್ನ ಗಂಟೆ 3.30ರಿಂದ ಮೂಲವ್ಯಾದಿ, ಫಿಷರ್, ಫಿಸ್ಟುಲ ಕಾಯಿಲೆಗಳಿಗೆ ನುರಿತ ತಜ್ಞವೈದ್ಯರಿಂದ ಪರೀಕ್ಷೆ ಅಗತ್ಯವಿದ್ದಲ್ಲಿ ಸಕ್ರಿಯೆಗಳನ್ನು ನಡೆಸಲಾಗುವುದು.

ಸೇವೆಗೆ ಲಭ್ಯರಿರುವ ವೈದ್ಯರುಗಳು:

     ಕ್ಲಿನಿಕ್‌ನಲ್ಲಿ ಚೀಫ್ ಕನ್ಸಲೆಂಟ್ ಮತ್ತು ಫಿಸಿಷಿಯನ್ ಆಗಿರುವ ಡಾ.ಸುಜಯ್ ತಂತ್ರಿ ಕೆಮ್ಮಿಂಜೆಯವರು ಸೋಮವಾರದಿಂದ ಬುಧವಾರ ತನಕ ಬೆಳಿಗ್ಗೆ ಗಂಟೆ 8 ರಿಂದ 9 ಸಂಜೆ 5ರಿಂದ 7 ತನಕ ಹಾಗೂ ಗುರುವಾರದಿಂದ ಶನಿವಾರ ತನಕ ಸಂಜೆ ಗಂಟೆ 3.30ರಿಂದ 7 ತನಕ ಲಭ್ಯವಿದ್ದಾರೆ. ಮಕ್ಕಳ ತಜ್ಞ ಡಾ.ಸಂದೀಪ್‌ ರವರು ಪ್ರತಿ ಆದಿತ್ಯವಾರ ಬೆಳಿಗ್ಗೆ ಗಂಟೆ 10.30ರಿಂದ 12.30ರ ತನಕ, ಹಿರಿಯ ತಜ್ಞ ವೈದ್ಯ ಡಾ. ಶ್ರೀಕುಮಾರ್‌ ಕತ್ರಿಬೈಲುರವರು ಪ್ರತಿ ಸೋಮವಾರ ಸಂಜೆ 5.30ರಿಂದ 6.30ರ ತನಕ, ಫಿಸಿಷಿಯನ್ ಮತ್ತು ಮಧುಮೇಹ ತಜ್ಞೆ ಡಾ.ಅನನ್ಯ ಲಕ್ಷೀ ಸಂದೀಪ್ ರವರು ಪ್ರತಿ ಆದಿತ್ಯವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರ ತನಕ, ಎಲುಬು ಮತ್ತು ಕೀಲು ತಜ್ಞ ಡಾ.ಸಚಿನ್ ಶಂಕರ್ ಹಾರಕರೆಯವರು ಪ್ರತಿ ಮಂಗಳವಾರ ಮಧ್ಯಾಹ್ನ 3.30ರಿಂದ 4.30ರ ತನಕ, ಕ್ಯಾನ್ಸರ್ ತಜ್ಞ ಡಾ. ಮಹೇಶ್ ಟಿಯವರು ಪ್ರತಿ ತಿಂಗಳ 4ನೇ ಮಂಗಳವಾರ ಬೆಳಿಗ್ಗೆ 11ರಿಂದ 12 ರ ತನಕ, ಮನೋರೋಗ ಮತ್ತು ಕೌನ್ಸಿಲಿಂಗ್‌ ತಜ್ಞ ಡಾ.ಅಕ್ಷತಾ.ಸಿ.ಜೆಯವರು ಪ್ರತಿ ಶನಿವಾರ ಮಧ್ಯಾಹ್ನ 2.30ರಿಂದ 5.00ರ ತನಕ ಹಾಗೂ ಚಿರೋಪ್ರಾಕ್ಟಿಕ್ ಥೆರಫಿ ತಜ್ಞ ಡಾ.ವಿಖ್ಯಾತ್‌ ನಾರಾಯಣ್ ಪ್ರತಿ ಸೋಮವಾರ ಮತ್ತು ಬುಧವಾರ ಮಧ್ಯಾಹ್ನ 3.30ರಿಂದ ಸಂಜೆ 5 ರ ತನಕ ಸೇವೆಗೆ ಲಭ್ಯವಿದ್ದಾರೆ.


ಡಾ.ಸುಜಯ್ ತಂತ್ರಿ ಕಮ್ಮಿಂಜೆ, ಡಾ. ಸಂದೀಪ್ ಎಚ್.ಎಸ್., ಡಾ.ಶ್ರೀಕುಮಾರ್ ಕತ್ರಿಬೈಲ್‌, ಡಾ.ಅನ್ಯಲಕ್ಷ್ಮೀ ಸಂದೀಪ್, ಡಾ.ಸಚಿನ್ ಶಂಕರ್ ಹಾರಕರ, ಡಾ.ಅಕ್ಷತಾ ಸಿ.ಜೆ. ಡಾ.ಗ್ರೀಷ್ಮಾ ಕೆ.ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಿಕೊಡಲಿದ್ದಾರೆ.

ಮಧುಮೇಹ ತಪಾಸಣೆ, ರಕ್ತದ ಒತ್ತಡ, ಇಸಿಜಿ ಮೊದಲಾದ ಚಿಕಿತ್ಸೆ ಹಾಗೂ ತಪಾಸಣೆಗಳನ್ನು ನಡೆಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರತಿಷ್ಠಿತ ಕೆಮ್ಮಿಂಜೆ ತಂತ್ರಿ ಮನೆ ತನದ ದಿ.ಕೇಶವ ತಂತ್ರಿಗಳ ಮೊಮ್ಮಗ, ದಿ.ಸುಬ್ರಹ್ಮಣ್ಯ ತಂತ್ರಿಗಳ ಪುತ್ರ ಚೀಫ್ ಕನ್ನಲ್ಪೆಂಟ್ ಹಾಗೂ ಫಿಸಿಷಿಯನ್‌ ಡಾ.ಸುಜಯ್ ತಂತ್ರಿ ಕೆಮ್ಮಿಂಜೆ ತಿಳಿಸಿದ್ದಾರೆ.

Recent News


Leave a Comment: