ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


WhatsAppನಲ್ಲಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ? ಹೇಗೆ ಸರಿಪಡಿಸುವುದು ಎಂಬುದು ಇಲ್ಲಿದೆ

Posted by Vidyamaana on 2024-01-09 04:59:00 |

Share: | | | | |


WhatsAppನಲ್ಲಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ? ಹೇಗೆ ಸರಿಪಡಿಸುವುದು ಎಂಬುದು ಇಲ್ಲಿದೆ

HATSAPP ವಿಶ್ವದ ಅತ್ಯಂತ ಜನಪ್ರಿಯ ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಆದರೆ ನೀವು ಏನು ಹೇಳುತ್ತಿದ್ದೀರಿ ಎಂಬುದರ ಕುರಿತು ಇತರ ಜನರು ಸ್ನೂಪ್ ಮಾಡಲು ಸಾಧ್ಯವಾಗದಿದ್ದರೂ, ಇತರ WhatsApp ಡೇಟಾವನ್ನು ಪ್ರಕ್ರಿಯೆಗೊಳಿಸಲಾಗುತ್ತಿಲ್ಲ ಎಂದರ್ಥವಲ್ಲನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸೇವ್ ಆಗುತ್ತದೆ. ಇದರಿಂದ ಅವರ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ. ಈರೀತಿ ಸ್ಟೋರೇಜ್ ಫುಲ್ ಆಗದಂತೆ ತಡೆಯಲು ಒಂದು ಟ್ರಿಕ್ ಇದೆ.


ವಾಟ್ಸ್​ಆಯಪ್​ನಲ್ಲಿ ನಿಮಗೆ ಯಾವುದೇ ಮಿಡಿಯಾ ಬಂದರೆ ಅದು ಅಟೋಮೆಟಿಕ್ ಡೌನ್​ಲೋಡ್ ಆಗಿ ಫೋನ್ ಗ್ಯಾಲರಿಯಲ್ಲಿ ಸೇವ್ ಆಗುತ್ತದೆ. ಇದನ್ನು ತಡೆಯಲು ವಾಟ್ಸ್​ಆಯಪ್ ಸೆಟ್ಟಿಂಗ್ಸ್​ನಲ್ಲಿರುವ ಸ್ಟೋರೇಜ್-ಡೇಟಾ ಆಯ್ಕೆಗೆ ತೆರಳಿ ಮಿಡಿಯಾ ಅಟೋ-ಡೌನ್​ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಹೀಗೆ ಮಾಡಿದರೆ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್​ಗಳು ನೀವು ಡೌನ್​ಲೋಡ್ ಕೊಟ್ಟರೆ ಮಾತ್ರ ಆಗುತ್ತದೆ.


ಇಂದು 16GB, 32GB, 128GB ಮೆಮೊರಿ ಹೊಂದಿರುವ ಸ್ಮಾರ್ಟ್​ಫೋನುಗಳು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB, 128GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್ ನಿಂದಾಗಿ ಫೋನುಗಳು ನಿಧಾನವಾಗುತ್ತವೆ. ಅಂತೆಯೆ ಫೋನ್​ನಲ್ಲಿರುವ ಅಪ್ಲಿಕೇಷನ್​ಗಳನ್ನು ತೆರೆದಂತೆ ಮೊಬೈಲ್​ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ.


ಮೊಬೈಲ್​ನಲ್ಲಿ ಹೆಚ್ಚಿನ ಸ್ಥಳ ತಿನ್ನುವುದು ಫೋಟೋ ಮತ್ತು ವಿಡಿಯೋಗಳು. ಈ ತೊಂದರೆಯಿಂದ ದೂರವಾಗಲು ಫೋಟೋ ಮತ್ತು ವಿಡಿಯೋವನ್ನು ಮೊಬೈಲ್​ನಲ್ಲಿ ಸೇವ್ ಮಾಡುವ ಬದಲು ಕ್ಲೌಡ್ ಸ್ಟೊರೇಜ್​ನಲ್ಲಿ ಸೇವ್ ಮಾಡಬಹುದು.


WhatsApp ಡೌನ್‌ಲೋಡ್ ಸೆಟ್ಟಿಂಗ್‌ಗಳಿಗಾಗಿ ಕೆಲವು ಆಯ್ಕೆಗಳನ್ನು ಹೊಂದಿದೆ-ಅವು ಡೇಟಾ ಮತ್ತು ಸಂಗ್ರಹಣೆಯ ಬಳಕೆಯ ಮೆನುವಿನಲ್ಲಿ ಕಂಡುಬರುತ್ತವೆ. Android ಮತ್ತು iOS ಎರಡರಲ್ಲೂ ಆಯ್ಕೆಗಳು ಒಂದೇ ಆಗಿರುತ್ತವೆ. ನೀವು ಮೊಬೈಲ್ ಡೇಟಾವನ್ನು ಅವಲಂಬಿಸಿದ್ದರೆ, ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿದ್ದರೆ ಅಥವಾ ಎಂದಿಗೂ ಮಾಧ್ಯಮವು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುತ್ತದೆಯೇ ಎಂಬುದನ್ನು ನೀವು ಆಯ್ಕೆ ಮಾಡಬಹುದು. ನೀವು ರೋಮಿಂಗ್‌ನಲ್ಲಿರುವಾಗ ಸ್ವಯಂಚಾಲಿತ ಡೌನ್‌ಲೋಡ್‌ಗಳನ್ನು ಮಿತಿಗೊಳಿಸುವ ಆಯ್ಕೆಯನ್ನು ಆಂಡ್ರಾಯ್ಡ್ ಹೊಂದಿದೆ.


ಡೀಫಾಲ್ಟ್ ಆಗಿ, ನೀವು ಮೊಬೈಲ್ ಡೇಟಾ ಸಂಪರ್ಕವನ್ನು ಹೊಂದಿರುವಾಗ WhatsApp ಚಿತ್ರಗಳನ್ನು ಮತ್ತು ನೀವು Wi-Fi ನೆಟ್‌ವರ್ಕ್‌ಗೆ ಸಂಪರ್ಕಗೊಂಡಾಗ ವೀಡಿಯೊವನ್ನು ಡೌನ್‌ಲೋಡ್ ಮಾಡುತ್ತದೆ. ಈ ಆಯ್ಕೆಗಳನ್ನು ಎಂದಿಗೂ ಅಥವಾ Wi-Fi ನಲ್ಲಿ ಎಲ್ಲವನ್ನೂ ಡೌನ್‌ಲೋಡ್ ಮಾಡಲು ಮಾತ್ರ ಬದಲಾಯಿಸುವುದು ಕೆಲವು ಮೊಬೈಲ್ ಡೇಟಾವನ್ನು ಉಳಿಸಲು ಸಹಾಯ ಮಾಡುತ್ತದೆ ಆದರೆ ನೀವು ಅದನ್ನು ಡೌನ್‌ಲೋಡ್ ಮಾಡಲು ಬಯಸಿದಾಗ ಪ್ರತಿ ಚಿತ್ರ ಅಥವಾ ವೀಡಿಯೊವನ್ನು ಟ್ಯಾಪ್ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯೊಂದಿಗೆ ಬರುತ್ತದೆ.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆ

Posted by Vidyamaana on 2024-04-21 20:43:32 |

Share: | | | | |


ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವಕ್ಕೆ ಶನಿವಾರ ಸಂಜೆ ಹೊರೆ ಕಾಣಿಕೆ ಸಮರ್ಪಣೆ ಮೂಲಕ ಚಾಲನೆ ನೀಡಲಾಯಿತು.

ಶನಿವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹೊರೆಕಾಣಿಕೆ ಮೆರವಣಿಗೆ ಶ್ರೀ ದೇವಸ್ಥಾನದಕ್ಕೆ ತೆರಳಿತು. 

ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ತೆಂಗಿಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ವೈರಲ್ ವಿಡಿಯೋ : ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ ಮುಂದೇನಾಯಿತು

Posted by Vidyamaana on 2023-09-27 17:15:13 |

Share: | | | | |


ವೈರಲ್ ವಿಡಿಯೋ : ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ ಮುಂದೇನಾಯಿತು

Love Marriage: ವ್ರೀನಿ ಖನ್ನಾ ಮತ್ತು ಹಿತೇನ್​ ಎಂಟು ವರ್ಷ ಪ್ರೀತಿಸಿದ ನಂತರ ಮದುವೆ ತಯಾರಿ ನಡೆಸಿದರು. ಮದುವೆ ಇನ್ನೇನು ಒಂದು ತಿಂಗಳಿದೆ ಎನ್ನುವಾಗ ಹಿತೇನ್​ ಭೀಕರ ರಸ್ತೆ ಅಪಘಾತಕ್ಕೆ ಒಳಗಾದ. ಮೆದುಳು ತೀವ್ರವಾಗಿ ಗಾಯಗೊಂಡಿದ್ದರಿಂದ ಕೋಮಾಗೆ (Coma) ಜಾರಿಬಿಟ್ಟ. ವೈದ್ಯರು ಬದುಕುಳಿಯುವುದು ಕಷ್ಟ ಎಂದರು. ಆದರೂ ಅದೃಷ್ಟವಶಾತ್ ವೈದ್ಯೋಪಚಾರ ಮತ್ತು ವ್ರೀನಿಯ ಸತತ ಪ್ರೀತಿ, ಆರೈಕೆಯಲ್ಲಿ 3 ತಿಂಗಳುಗಳ ನಂತರ ಕೋಮಾದಿಂದ ಹೊರಬಂದ. ಈ ವೇಳೆಗೆ ಬರೋಬ್ಬರಿ 30 ಕಿ. ಗ್ರಾಂ ತೂಕ ಕಳೆದುಕೊಂಡಿದ್ದ. ಆದರೆ ಇವನನ್ನೇ ಮದುವೆಯಾಗುವುದು ಎಂದು ವ್ರೀನಿ ಹಠ ತೊಟ್ಟಿದ್ದಳು. ಇವನೊಂದಿಗೆ ಮದುವೆ ಬೇಡ ಎಂದು ಆಕೆಯ ಮನೆಯವರೆಲ್ಲ ಬುದ್ಧಿ ಹೇಳಿದರು. ನಂತರ 2022ರ ಜು. 6ರಂದು ಇವರಿಬ್ಬರ ಮದುವೆ ನಡೆಯಿತು.ನಾಲ್ಕು ಗಂಟೆಗಳ ಹಿಂದೆಯಷ್ಟೇ officialpeopleofindia ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋವನ್ನು ಈತನಕ ಸುಮಾರು 1.7 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ವ್ರೀನಿ ಮತ್ತು ಹಿತೇನ್​ ದಂಪತಿಯನ್ನು ಅಭಿನಂದಿಸಿದ್ದಾರೆ. ವ್ರಿನಿಯ ತಾಳ್ಮೆ ಮತ್ತು ಪ್ರೀತಿಯನ್ನು ಶ್ಲಾಘಿಸಿದ್ದಾರೆ.


ವ್ರೀನಿ ಹಿತೇನ್ ಪಯಣ

ವಿಡಿಯೋ ನೋಡಲು ಕ್ಲಿಕ್ ಮಾಡಿ 

ವೈರಲ್ ವಿಡಿಯೋ : ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ


ತನ್ನ ಹುಡುಗ/ಗಂಡನಿಗಾಗಿ ಹೆಣ್ಣುಮಕ್ಕಳು ಯಾವಾಗಲೂ ಟೊಂಕ ಕಟ್ಟಿ ನಿಲ್ಲುತ್ತಾರೆ ಎಂದಿದ್ದಾರೆ ಒಬ್ಬರು. ಜಗತ್ತಿನಲ್ಲಿ ಪ್ರೀತಿಯೇ ಎಲ್ಲದಕ್ಕಿಂತ ದೊಡ್ಡ ಶಕ್ತಿ. ವೈದ್ಯರೂ ಕೈಚೆಲ್ಲಿದಾಗ ನೀವು ಅವರನ್ನು ಬದುಕಿಸಿಕೊಂಡಿರಿ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ನೋಡಿ ನಾನು ಅಳುತ್ತಿದ್ದೇನೆ, ಸ್ವಾರ್ಥ ಬಯಸುವ ಅನೇಕರನ್ನು ನೋಡಿದ್ದೇನೆ. ಆದರೆ ನಿಮ್ಮಂಥ ಹೆಣ್ಣುಮಗಳು ನಿಜಕ್ಕೂ ಅಪರೂಪ, ನಿಮಗಿಬ್ಬರಿಗೂ ಒಳಿತಾಗಲಿ ಎಂದಿದ್ದಾರೆ ಮತ್ತೊಬ್ಬರು.ನಿಮ್ಮ ಜಾಗದಲ್ಲಿ ನನ್ನನ್ನು ನಾನು ನಿಲ್ಲಿಸಿಕೊಂಡು ನೋಡಿದೆ, ನನಗರಿವಿಲ್ಲದೇ ನನ್ನ ಕಣ್ಣಿಂದ ನೀರು ಇಳಿಯುತ್ತಿವೆ ಎಂದಿದ್ಧಾರೆ ಒಬ್ಬರು. ನಿಮ್ಮ ಈ ವಿಡಿಯೋ ನೋಡಿ ಮೈನವಿರೆದ್ದಿತು, ತುಂಬಾ ಅಪರೂಪದ ಜೋಡಿ ನಿಮ್ಮದು, ನಿಮ್ಮ ಆರೋಗ್ಯ ಸುಧಾರಿಸಲಿ ಎಂದಿದ್ದಾರೆ ಅನೇಕರು.

BREAKING: ಮೈಸೂರು ದಸರಾ ಖ್ಯಾತಿಯ ಆನೆ ಅಶ್ವತ್ಥಾಮ ಇನ್ನಿಲ್ಲ

Posted by Vidyamaana on 2024-06-11 16:20:39 |

Share: | | | | |


BREAKING: ಮೈಸೂರು ದಸರಾ ಖ್ಯಾತಿಯ ಆನೆ ಅಶ್ವತ್ಥಾಮ ಇನ್ನಿಲ್ಲ

ಮೈಸೂರು: ಕೆಲ ತಿಂಗಳ ಹಿಂದಷ್ಟೇ ಕಾಡಾನೆ ಸೆರೆ ಕಾರ್ಯಾಚರಣೆಯ ವೇಳೆಯಲ್ಲಿ ಮೈಸೂರು ದಸರಾ ಆನೆ ಅರ್ಜುನ ಕಾಳಗದಲ್ಲಿ ನಿಧನವಾಗಿತ್ತು. ಈ ಬೆನ್ನಲ್ಲೇ ಮೈಸೂರು ದಸರಾ ಮಹೋತ್ಸವದಲ್ಲಿ ಎರಡು ಬಾರಿ ಪಾಲ್ಗೊಂಡಿದ್ದಂತ ಅಶ್ವತ್ಥಾಮ ಎನ್ನುವಂತ ಆನೆ, ಮೃತಪಟ್ಟಿರೋದಾಗಿ ತಿಳಿದು ಬಂದಿದೆ.

ಈ ಕುರಿತಂತೆ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದು, ಮೈಸೂರು ದಸರಾದಲ್ಲಿ ಎರಡು ಬಾರಿ ಪಾಲ್ಗೊಂಡು ಅಂಬಾರಿ ಹೊತ್ತ ಆನೆಗೆ ಸಾಥ್ ನೀಡಿದ್ದಂತ ಅಶ್ವತ್ಥಾಮ ಆನೆಯನ್ನು ಹುಣಸೂರು-ಪಿರಿಯಾಪಟ್ಟಣ ತಾಲೂಕಿನ ಗಡಿ ಭಾಗದ ನಾಗರಹೊಳೆಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಇರಿಸಲಾಗಿತ್ತು ಎಂದಿದ್ದಾರೆ.

ಬೆಳ್ತಂಗಡಿ, ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ; ರೊಚ್ಚಿಗೆದ್ದ ಆಟಗಾರರಿಂದ ಮೈದಾನದಲ್ಲೇ ಫೈಟಿಂಗ್

Posted by Vidyamaana on 2023-02-22 04:33:01 |

Share: | | | | |


ಬೆಳ್ತಂಗಡಿ, ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ; ರೊಚ್ಚಿಗೆದ್ದ ಆಟಗಾರರಿಂದ ಮೈದಾನದಲ್ಲೇ ಫೈಟಿಂಗ್

ಬೆಳ್ತಂಗಡಿ: ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನಗೊಂಡ ಆಟಗಾರರು ಮೈದಾನದಲ್ಲಿ ಹೊಡೆದಾಡಿಕೊಂಡ ಘಟನೆ ಮುಂಡಾಜೆಯಲ್ಲಿ ನಡೆದಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಅಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಆಟಗಾರರ ಮಧ್ಯೆ ಗಲಾಟೆ ನಡೆದಿದ್ದು, ಸದ್ಯ ಹೊಡೆದಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದ ಆಡೂರು ಮೈದಾನದಲ್ಲಿ ಫೆ. 19ರಂದು . ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಕಬಡ್ಡಿ ವಂದ್ಯಾವಳಿ ಆಯೋಜಿಸಿದ್ದರು. ಇದರಲ್ಲಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಹಾಗೂ ಆಟಗಾರರ ಮಧ್ಯೆ ನಡೆದ ಹೊಡೆದಾಟವಾಗಿದೆ.

ಪುತ್ತೂರು- ನಿಂತಿದ್ದ ಗೂಡ್ಸ್ ಲಾರಿಗೆ ಕಾರು ಡಿಕ್ಕಿ-ಪೈವಳಿಕೆ ಮೂಲದ ನಾಲ್ವರಿಗೆ ಗಂಭೀರ ಗಾಯ

Posted by Vidyamaana on 2024-03-10 20:33:46 |

Share: | | | | |


ಪುತ್ತೂರು- ನಿಂತಿದ್ದ ಗೂಡ್ಸ್ ಲಾರಿಗೆ ಕಾರು ಡಿಕ್ಕಿ-ಪೈವಳಿಕೆ ಮೂಲದ ನಾಲ್ವರಿಗೆ ಗಂಭೀರ ಗಾಯ

ಪುತ್ತೂರು ಮಾ 10: ರಸ್ತೆ ಬದಿ ನಿಲ್ಲಿಸಿದ್ದ ಗೂಡ್ಸ್ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಮರೀಲ್ ನ ಕ್ಯಾಂಸ್ಕೋ ಚಾಕೊಲೇಟ್ ಫ್ಯಾಕ್ಟರಿ ಬಳಿ ನಡೆದಿದೆ.


ಗುಲಾಬಿ (55), ಕೃಷ್ಣಪ್ಪ ನಾಯ್ಕ (60) ಇಬ್ಬರಿಗೆ ಗಂಭೀರ ಗಾಯ, ರೋಹಿಣಿ (32), ಗನ್ಯ (2) ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮದ ಸುಳ್ಳಿಮಲೆಯ ಒಂದೇ ಕುಟುಂಬದ ನಿವಾಸಿಗಳು ಕಾರಿನಲ್ಲಿ ಬರುತ್ತಿದ್ದ ವೇಳೆ ಎದುರಿಗೆ ವೇಗವಾಗಿ ಬಂದ ಬೈಕ್ ಸೈಡ್ ಕೋಡುವ ಸಂದರ್ಭ ಕಾರು ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.ಗಂಭೀರ ಗಾಯಗೊಂಡ ದಂಪತಿಯನ್ನ ಸರ್ಕಾರಿ ಆಸ್ಪತ್ರೆಗೆ ತಂದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಾಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.



Leave a Comment: