ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಮುಸ್ಲಿಂ ಬಾಂಧವರಿಗೆ ಪ್ರಧಾನಿ ಮೋದಿ ಈದ್ ಶುಭಾಶಯ

Posted by Vidyamaana on 2024-04-11 15:51:49 |

Share: | | | | |


ಮುಸ್ಲಿಂ ಬಾಂಧವರಿಗೆ ಪ್ರಧಾನಿ ಮೋದಿ ಈದ್ ಶುಭಾಶಯ

ನವದೆಹಲಿ : ದೇಶದ ಅನೇಕ ಭಾಗಗಳಲ್ಲಿ ಕಂಡುಬರುವ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗಿದ್ದು, ನಾಳೆ ದೇಶಾದ್ಯಂತ ಆಡಂಬರದಿಂದ ಈದ್ ಆಚರಿಸಲಾಗುವುದು. ಸಧ್ಯ ದೇಶದ ಮುಸ್ಲಿಂ ಬಾಂಧವರಿಗೆ ಪ್ರಧಾನಿ ಮೋದಿ ಶುಭಾಶಯ ತಿಳಿಸಿದ್ದಾರೆ.ಟ್ವೀಟ್ ಮೂಲಕ ಶುಭಾಶಯ ತಿಳಿಸಿರುವ ಪ್ರಧಾನಿ ಮೋದಿ, ಈದ್-ಉಲ್-ಫಿತರ್ ಶುಭಾಶಯಗಳು

ಹೇಗಿರಲಿದೆ ಹತ್ತೂರು ಒಡೆಯನ ನೆಲದಲ್ಲಿ ಇಂದು ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ?

Posted by Vidyamaana on 2023-12-24 07:17:03 |

Share: | | | | |


ಹೇಗಿರಲಿದೆ ಹತ್ತೂರು ಒಡೆಯನ ನೆಲದಲ್ಲಿ ಇಂದು ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ?

ಶ್ರೀನಿವಾಸ ಕಲ್ಯಾಣೋತ್ಸವದ ಹೈಲೈಟ್ಸ್: 


ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಡಿ.24-25 ರಂದು ಜರಗುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮದ ವಿಶೇಷತೆ ಹೀಗಿದೆ. 


 50 ಸಾವಿರ ಶ್ರೀನಿವಾಸ ಕಲ್ಯಾಣ ಲಡ್ಡು ಪ್ರಸಾದ ಸೇವೆ ಸೇರಿದಂತೆ ಅನ್ನದಾನ ಸೇವೆ, ಸರ್ವ ಸೇವೆ, ಫಲಪಂಚಾಮೃತ ಅಭಿಷೇಕ  ಸೇವೆ , ಮಹಾನಿವೇದನಾ ಸೇವೆ , ಸುಪ್ರಭಾತ ಸೇವೆ ಹಾಗೂ ಈಗಾಗಲೇ ನೋಂದಾಣಿಯಾಗಿದೆ.


ಅಂದಾಜು 1.25 ಲಕ್ಷ ಜನ ಎರಡು ದಿನ ಭಾಗವಹಿಸಲಿದ್ದು,  ಬೆಳಿಗ್ಗೆ ಫಲಹಾರ , ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಇರಲಿದೆ. 


ಅದಕ್ಕಾಗಿ ವಿಶೇಷ ಅನ್ನಛತ್ರ ಪೆಂಡಲ್ ನಿರ್ಮಿಸಲಾಗಿದೆ.  


ವಿಶೇಷ ಅತ್ಯಾಕರ್ಷಕ ಹೂವಿನ ಆಲಂಕಾರವಿರಲಿದೆ.


ಮೆರವಣಿಗೆ ಹೇಗಿರಲಿದೆ ಗೊತ್ತೇ ..? 


ಉಪ್ಪಿನಂಗಡಿಯಿಂದ ದೇವರನ್ನು ಬರಮಾಡಿಕೊಂಡು ಬೊಳುವಾರಿನಿಂದ ಪೂರ್ಣಕುಂಭ ಸ್ವಾಗತವಿರಲಿದೆ.  


ದೇವರ ಸ್ವಾಗತ  ಹೇಗಿರಲಿದೆ : 

ಎದುರಿಗೆ ಪೂರ್ಣಕುಂಭ ಸ್ವಾಗತ ತಂಡ  ಅದರ ಹಿಂದೆ ರುದ್ರಪಾರಾಯಣ ತಂಡ ನಂತರ   ವಿಷ್ಣು ಸಹಸ್ರನಾಮ ತಂಡ ಆ ನಂತರ ಭಜನಾ ತಂಡ ಅದರ ಹಿಂದೆ ಶಂಖನಾದ ತಂಡ ಅದರ ಹಿಂದೆ ತೆರೆದ ವಾಹನದಲ್ಲಿ ಶ್ರೀನಿವಾಸ ದೇವರ ಮೂರ್ತಿ ಇರಲಿದೆ.



ಆ ನಂತರ ಚೆಂಡೆ ಅದರ ಹಿಂದೆ ಭಗವಧ್ಬಕ್ತರು ದೇವರ ನಾಮಸ್ಮರಣೆಯೊಂದಿಗೆ ಸಾಗಲಿದ್ದಾರೆ.



ಪುತ್ತೂರು ಪೇಟೆ ಕೇಸರಿಮಯ : ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮದ ಪ್ರಯುಕ್ತ ಪುತ್ತೂರು ಪೇಟೆ ಸಂಪೂರ್ಣ ಕೇಸರಿಮಯವಾಗಿರಲಿದೆ. ಇದಕ್ಕಾಗಿ ಕಾರ್ಯಕರ್ತರ ತಂಡ ರಾತ್ರಿ ಕೆಲಸ ಮಾಡುತ್ತಿದೆ. 


ಸಾವಿರಕ್ಕೂ ಮಿಕ್ಕಿ ಬ್ಯಾನರ್ : 

ಶ್ರೀನಿವಾಸ ದೇವರ ಅತ್ಯಾಕರ್ಷಕ ಪೋಟೋವಿರುವ ಬ್ಯಾನರ್ ಹಾಗೂ ದೊಡ್ಡ ಹೋಲ್ಡಿಂಗ್ಸ್ ಪುತ್ತೂರು ಪೇಟೆಯ ಡಿವೈಡರ್ ನಲ್ಲಿ ಹಾಗೂ ಪೇಟೆಯೆಲ್ಲೆಡೆ ಈಗಾಗಲೇ ಹಾಕಲಾಗಿದೆ.


ಉಪ್ಪಿನಂಗಡಿ, ಕಡಬ, ಸವಣೂರು, ಬೆಳ್ಳಾರೆ,  ಸುಳ್ಯ,  ವಿಟ್ಲ, ಬಂಟ್ವಾಳದಲ್ಲಿ ಈಗಾಗಲೇ ಭಕ್ತಾದಿಗಳು  ಬ್ಯಾನರ್ ಹಾಕಲಾಗಿದೆ.

ಪುತ್ತೂರು : ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹಲವರಿಗೆ ಗಾಯ

Posted by Vidyamaana on 2023-12-21 13:29:57 |

Share: | | | | |


ಪುತ್ತೂರು : ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹಲವರಿಗೆ ಗಾಯ

ಪುತ್ತೂರು : ಓಮ್ನಿ ಕಾರು ಮತ್ತು ಆಲ್ಟೊ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ನೆಹರುನಗರದಲ್ಲಿ ನಡೆದಿದೆ. ಡಿ 20 ರ  ತಡರಾತ್ರಿ ಈ ಘಟನೆ ನಡೆದಿದ್ದು, ಹಲವರಿಗೆ ಗಾಯಗಳಾಗಿವೆ. ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಖಾಸಗಿ ಕಾಲೇಜಿನ ಬಸ್ ಗೂ ಕಾರು ಡಿಕ್ಕಿಯಾಗಿದ್ದು, ಹಾನಿಯಾಗಿದೆ ಎಂದು ತಿಳಿದು ಬಂದಿದೆ

ಪುತ್ತೂರು ಜಾತ್ರೆ-ಇಂದು ಬ್ರಹ್ಮರಥೋತ್ಸವ- ಪುತ್ತೂರು ಬೆಡಿ ಪ್ರದರ್ಶನ

Posted by Vidyamaana on 2024-04-17 14:36:54 |

Share: | | | | |


ಪುತ್ತೂರು ಜಾತ್ರೆ-ಇಂದು ಬ್ರಹ್ಮರಥೋತ್ಸವ- ಪುತ್ತೂರು ಬೆಡಿ ಪ್ರದರ್ಶನ

ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದಲ್ಲಿ ಏ.17ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವ ಮತ್ತು ಪುತ್ತೂರು ಬೆಡಿ ಎಂದೇ ಪ್ರಸಿದ್ಧಿಯಾಗಿರುವ ವಿಶೇಷ ಸುಡುಮದ್ದುಗಳ ಪ್ರದರ್ಶನ ನಡೆಯಲಿದೆ.


ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ.ಬಂದೋಬಸ್ತ್ಗಾಗಿ ಜಿಲ್ಲೆಯ ವಿವಿಧ ಕಡೆಗಳಿಂದ ಪೊಲೀಸರನ್ನು ಕರೆಸಲಾಗಿದೆ.ಜೊತೆಗೆ ಸಶಸ ಮೀಸಲು ಪಡೆ, ಗೃಹ ರಕ್ಷಕ ದಳದವರೂ ಬಂದೋಬಸ್ತ್ ನಿರತರಾಗಿದ್ದಾರೆ.ಮಪ್ತಿಯಲ್ಲಿಯೂ ನೂರಾರು ಪೊಲೀಸರು ಕಾರ್ಯನಿರತರಾಗಿದ್ದಾರೆ. ಡಿವೈಎಸ್ಪಿ ಅರುಣ್‌ನಾಗೇಗೌಡರ ನೇತೃತ್ವದಲ್ಲಿ ಬಂದೋಬಸ್ತ್ ನಡೆಯಲಿದೆ.

ನೇತ್ರಾವತಿ ಸೇತುವೆಯ ಆವರಣ ಗೋಡೆಗೆ ಬೈಕ್ ಡಿಕ್ಕಿ ಸವಾರ ಸುರೇಶ್ ಸ್ಥಳದಲ್ಲೇ ಮೃತ್ಯು

Posted by Vidyamaana on 2024-01-24 11:05:40 |

Share: | | | | |


ನೇತ್ರಾವತಿ ಸೇತುವೆಯ ಆವರಣ ಗೋಡೆಗೆ ಬೈಕ್ ಡಿಕ್ಕಿ ಸವಾರ ಸುರೇಶ್ ಸ್ಥಳದಲ್ಲೇ ಮೃತ್ಯು

ಮಂಗಳೂರು : ಮಂಗಳೂರಿನ ನೇತ್ರಾವತಿ ನದಿಯ ಸೇತುವೆಯಲ್ಲಿ ಭೀಕರ ರಸ್ತೆ ಅಪಘಾತ ಜ 23 ರಂದು ತಡರಾತ್ರಿ ಸಂಭವಿಸಿದ್ದು ಸೇತುವೆ ಆವರಣ ಗೋಡೆಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. 


ಮೂಲತಃ ಬಾಗಲಕೋಟೆ ಜಿಲ್ಲೆ ನಿವಾಸಿ ಕಳೆದ ಹಲವಾರು ವರ್ಷಗಳಿಂದ ಉಳ್ಳಾಲ ತಾಲೂಕಿನ ಕಲ್ಲಾಪು, ಪಟ್ಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಸುರೇಶ್ (32) ಅಪಘಾತಕ್ಕೆ ಬಲಿಯಾದ ಯುವಕ. ಸುರೇಶ್ ನುರಿತ ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಆಗಿದ್ದು   ಸ್ವಂತ ಮೆಕ್ಯಾನಿಕ್ ಅಂಗಡಿ ತೆರೆದು ಕೆಲಸ ನಿರ್ವಹಿಸುತ್ತಿದ್ದರು. ಅವಿವಾಹಿತರಾಗಿರುವ ಸುರೇಶ್  ತಂದೆ, ತಾಯಿ, ಸಹೋದರಿ ಜತೆ ಕಲ್ಲಾಪಿನಲ್ಲಿ ನೆಲೆಸಿದ್ದರು.


 ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

ಕಿಲ್ಲೆ ಮೈದಾನ ದೇವತಾ ಸಮಿತಿ ಅಧ್ಯಕ್ಷ - ಧಾರ್ಮಿಕ ಮುಂದಾಳು ಎನ್. ಸುಧಾಕರ ಶೆಟ್ಟಿ ನಿಧನ

Posted by Vidyamaana on 2023-09-11 04:26:46 |

Share: | | | | |


ಕಿಲ್ಲೆ ಮೈದಾನ ದೇವತಾ ಸಮಿತಿ ಅಧ್ಯಕ್ಷ - ಧಾರ್ಮಿಕ ಮುಂದಾಳು ಎನ್. ಸುಧಾಕರ ಶೆಟ್ಟಿ ನಿಧನ

ಪುತ್ತೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೇ ಹೊರ ಜಿಲ್ಲೆಗಳಲ್ಲೂ ಪ್ರಸಿದ್ಧಿಯನ್ನು ಪಡೆದಿರುವ ಇಲ್ಲಿನ ಕಿಲ್ಲೆ ಮೈದಾನದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಗಣೇಶೋತ್ಸವ ಆಚರಣೆಯನ್ನು ಆಯೋಜಿಸುವ ‘ಕಿಲ್ಲೆ ಮೈದಾನ ದೇವತಾ ಸಮಿತಿ’ಯ ಅಧ್ಯಕ್ಷರಾದ ಉದ್ಯಮಿ, ಸಾಮಾಜಿಕ-ಧಾರ್ಮಿಕ ಮುಂದಾಳು ಮತ್ತು ದಾನಿ ಎನ್ ಸುಧಾಕರ ಶೆಟ್ಟಿ ಅವರು ಭಾನುವಾರ (ಸೆ.10) ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಈ ಬಾರಿಯ ಗಣೇಶೋತ್ಸವ ಆಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ, ಅದರ ಪೂರ್ವ ಸಿದ್ಧತಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸುಧಾಕರ ಶೆಟ್ಟಿ ಅವರ ಅನಿರೀಕ್ಷಿತ ಅಗಲಿಕೆ ಅವರ ಬಂಧುಗಳಿಗೆ, ಹಿತೈಷಿಗಳಿಗೆ ಮತ್ತು ಪುತ್ತೂರಿನ ಜನತೆಗೆ ಭಾರೀ ಆಘಾತ ನೀಡಿದೆ.


ನಾಳೆ (ಸೆ.11) ಅವರ ಮೃತದೇಹ ನೆಲ್ಲಿಕಟ್ಟೆಯಲ್ಲಿರುವ ಅವರ ಮನೆಗೆ ಬರಲಿದೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.


ನೆಲ್ಲಿಕಟ್ಟೆ ಸುಧಾಕರ ಶೆಟ್ಟಿ ಅವರು ಕಳೆದ 42 ವರ್ಷಗಳಿಂದ ದೇವತಾ ಸಮಿತಿಯ ಅಧ್ಯಕ್ಷರಾಗಿ ಕಿಲ್ಲೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ರೂವಾರಿಯಾಗಿದ್ದಾರೆ.


ಮಾತ್ರವಲ್ಲದೇ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ದೇವಸ್ಥಾನದ ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷರಾಗಿ, ಬ್ರಹ್ಮರಥ ಸಮರ್ಪಣಾ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವುದು ಮಾತ್ರವಲ್ಲದೇ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಸ್ಥಳೀಯ ರಾಜಕಾರಣದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸುಧಾಕರ ಶೆಟ್ಟಿ ಅವರು ಹತ್ತು ವರ್ಷಗಳ ಕಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.1999 ಮತ್ತು 2004ರಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯ ರಾಜಕಾರಣದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದರು. ಪುತ್ತೂರು  ವಿವೇಕಾನಂದ ಕಾಲೇಜಿನ ಪ್ರಥಮ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿದ್ದರು.


ಹೀಗೆ, ವಿದ್ಯಾರ್ಥಿ ದಿಸೆಯಿಂದಲೂ ಸಾಮಾಜಿಕ, ಧಾರ್ಮಿಕ ರಾಜಕೀಯ, ಕ್ರೀಡಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿ ಎಲ್ಲರ ಪ್ರೀತಿಪಾತ್ರರಾಗಿದ್ದ ‘ಸುಧಣ್ಣ’ ಅವರ ದಿಢೀರ್ ಅಗಲಿಕೆ ಪುತ್ತೂರಿನ ಜನತೆಗೆ ಆಘಾತ ತಂದಿದೆ.

Recent News


Leave a Comment: