ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿಗಳು News

Posted by vidyamaana on 2024-07-08 17:22:55 |

Share: | | | | |


ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ ಜು.09 ರಂದು ರೆಡ್ ಅಲರ್ಟ್ ಘೋಷಿಸಿದ್ದು ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.9ರಂದು ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ

 Share: | | | | |


ಬ್ಯಾಂಕಾಕ್​ನಿಂದ ಮುಂಬೈ ಗೆ ಬಂದಿದ್ದ ಪ್ಯಾಸೆಂಜರ್ ಸೂಟ್ ಕೇಸ್​ನಲ್ಲಿ ಇತ್ತು 9 ಹೆಬ್ಬಾವು

Posted by Vidyamaana on 2023-12-23 12:51:09 |

Share: | | | | |


ಬ್ಯಾಂಕಾಕ್​ನಿಂದ ಮುಂಬೈ ಗೆ ಬಂದಿದ್ದ ಪ್ಯಾಸೆಂಜರ್ ಸೂಟ್ ಕೇಸ್​ನಲ್ಲಿ ಇತ್ತು 9 ಹೆಬ್ಬಾವು

ಮುಂಬೈ, ಡಿ 23: ವಿದೇಶಿ ಹಾವುಗಳು ಮತ್ತು ಹೆಬ್ಬಾವುಗಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ತಂಡವು ಬಂಧಿಸಿದೆ. ಆತನಿಂದ ಒಂಬತ್ತು ಹೆಬ್ಬಾವು ಮತ್ತು ಎರಡು ಹಾವುಗಳನ್ನು ಡಿಆರ್‌ಐ ತಂಡ ವಶಪಡಿಸಿಕೊಂಡಿದೆ. ಇದಾದ ಬಳಿಕ ಈ ಹಾವು ಮತ್ತು ಹೆಬ್ಬಾವುಗಳನ್ನು ವಿದೇಶಕ್ಕೆ ಕಳುಹಿಸಲು ಡಿಆರ್‌ಐ ವ್ಯವಸ್ಥೆ ಮಾಡಿದೆ.


ಡಿಆರ್‌ಐ ಮೂಲಗಳ ಪ್ರಕಾರ, ಅವರ ತಂಡ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಯಮಿತವಾಗಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಇದೇ ವೇಳೆ ಬ್ಯಾಂಕಾಕ್​ನಿಂದ ಬಂದಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆತನನ್ನು ಪರಿಶೀಲನೆಗೆ ಒಳಪಡಿಸಿದಾಗ ಒಂಬತ್ತು ಹೆಬ್ಬಾವುಗಳು (ಪೈಥಾನ್ ರೆಜಿಯಸ್) ಮತ್ತು ಎರಡು ಹಾವುಗಳು (ಪ್ಯಾಂಥೆರೊಫಿಸ್ ಗುಟ್ಟಾಟಸ್) ಆತನ ಬ್ಯಾಗ್​ನಲ್ಲಿ ಕಂಡುಬಂದಿವೆ. ಇದನ್ನು ಕಸ್ಟಮ್ಸ್ ಆಕ್ಟ್, 1962 ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಯಿತು. ವಶಪಡಿಸಿಕೊಂಡ ಹಾವು ಮತ್ತು ಹೆಬ್ಬಾವುಗಳ ಬಗ್ಗೆ ವನ್ಯಜೀವಿ ಅಪರಾಧ ನಿಯಂತ್ರಣ ಇಲಾಖೆ ಅಧಿಕಾರಿಗಳು ವಿಚಾರಿಸಿದಾಗ ಅವು ವಿದೇಶದಿಂದ ಬಂದಿರುವುದು ಕಂಡುಬಂದಿತು.


ಇದು ಆಮದು ನೀತಿಯ ಉಲ್ಲಂಘನೆಯಾಗಿರುವುದರಿಂದ ಹೆಬ್ಬಾವು ಮತ್ತು ಹಾವನ್ನು ಬ್ಯಾಂಕಾಕ್‌ಗೆ ವಾಪಸ್ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ, ಚೇತರಿಸಿಕೊಂಡ ಹಾವುಗಳು ಮತ್ತು ಹೆಬ್ಬಾವುಗಳನ್ನು ವಿಮಾನಯಾನ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು, ವಿಮಾನಯಾನ ಸಂಸ್ಥೆಯ ಸಹಾಯದಿಂದ ಬ್ಯಾಂಕಾಕ್‌ಗೆ ವಾಪಸ್ ಕಳುಹಿಸಲಾಗುವುದು. ಈ ಪ್ರಕರಣದಲ್ಲಿ ಬಂಧಿತ ವ್ಯಕ್ತಿಯನ್ನು ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಡಿಆರ್​ಐ ಅಧಿಕಾರಿಗಳು ತಿಳಿಸಿದ್ದಾರೆ.


ಸೂಟ್​ಕೇಸ್​ನಲ್ಲಿ ವಿಷಕಾರಿ ಹಾವುಗಳು ಪತ್ತೆ:


ಈ ಹಿಂದೆ ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಲಗೇಜ್​ಗಳನ್ನ ತಪಾಸಣೆ ಮಾಡಿದಾಗ ಆತನ ಸೂಟ್ ಕೇಸ್​ನಲ್ಲಿ 20 ವಿಷಕಾರಿ ಕಿಂಗ್ ಕೋಬ್ರಾಗಳು ಪತ್ತೆಯಾಗಿದ್ದವು. ಹೆಬ್ಬಾವು, ಕೋತಿಗಳು ಸೇರಿದಂತೆ ಒಟ್ಟು 78 ಪ್ರಾಣಿಗಳು ಆತನ ಲಗೇಜ್​ನಲ್ಲಿ ಕಂಡು ಬಂದಿದ್ದವು.


ಹೌದು, ಸೆಪ್ಟೆಂಬರ್​ 6 ರಂದು ಬ್ಯಾಂಕಾಕ್​ನಿಂದ ದೇವನಹಳ್ಳಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕ ಬಂದಿಳಿದ್ದಿದ್ದನು. ರಾತ್ರಿ 10:30ಕ್ಕೆ ಫ್ಲೈಟ್ ನಂ. ಎಫ್‌ಡಿ 137 ಏರ್ ಏಷ್ಯಾ ವಿಮಾನದಲ್ಲಿ ಬಂದ ಪ್ರಯಾಣಿಕನ ಲಗೇಜ್​ಗಳನ್ನ ಪರಿಶೀಲನೆ ಮಾಡಿದಾಗ ಸೂಟ್ ಕೇಸ್​ನಲ್ಲಿ 17 ಜೀವಂತ ಕಿಂಗ್ ಕೋಬ್ರಾಗಳು ಪತ್ತೆಯಾಗಿದ್ದವು. ಜೊತೆಗೆ 55 ಬಾಲ್ ಹೆಬ್ಬಾವುಗಳು ಸಹ ಕಂಡು ಬಂದಿದ್ದವು. ಆದ್ರೆ ಆ ಸಮಯದಲ್ಲಿ 6 ಕಪುಚಿನ್ ಮಂಗಗಳು ಸತ್ತಿರುವುದು ಬೆಳಕಿಗೆ ಬಂದಿತ್ತು. ಒಟ್ಟು 78 ಪ್ರಾಣಿಗಳನ್ನ ಪ್ರಯಾಣಿಕ ಅಕ್ರಮವಾಗಿ ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಸಾಗಿಸುವ ಯತ್ನದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದನು. ಆರೋಪಿಯ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಅಡಿ ಪ್ರಕರಣ ದಾಖಲು ಮಾಡಲಾಗಿ ತನಿಖೆ ಕೈಗೊಂಡಿದ್ದರು

ಇದ್ರೀಸ್ ಹತ್ಯೆ ಪ್ರಕರಣ : ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ

Posted by Vidyamaana on 2023-04-05 08:26:14 |

Share: | | | | |


 ಇದ್ರೀಸ್ ಹತ್ಯೆ ಪ್ರಕರಣ : ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ

ಕನಕಪುರ: ಸಾತನೂರು ಸಮೀಪ ಗೋ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇದ್ರೀಸ್ ಪಾಷಾ ಎಂಬವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಪುನೀತ್ ಕೆರೆಹಳ್ಳಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದೊಂದು ವಾರದಿಂದ ತಲೆಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿದಂತೆ ಒಟ್ಟು ಐವರನ್ನು ಸಾತನೂರು ಠಾಣೆ ಪೊಲೀಸರು ಬುಧವಾರ ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಸಾತನೂರು ಬಳಿ ಶುಕ್ರವಾರ ಮಧ್ಯರಾತ್ರಿ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಮಂಡ್ಯ ಮೂಲದ ಇದ್ರೀಸ್ ಪಾಷಾ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ

ಕಳೆದೊಂದು ವಾರದಿಂದ ತಲೆಮರೆಸಿಕೊಂಡಿದ್ದ ಪುನೀತ್ ‌ಕೆರೆಹಳ್ಳಿ ಸೇರಿದಂತೆ ಒಟ್ಟು ಐವರರನ್ನು ಸಾತನೂರು ಠಾಣೆ ಪೊಲೀಸರನ್ನೊಳಗೊಂಡ ರಾಮನಗರ ಪೊಲೀಸರ ವಿಶೇಷ ತಂಡಗಳು ಇಂದು ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿವೆ.

ಕಳೆದ ಮಾ.31ರ ಮಧ್ಯರಾತ್ರಿ ಸಾತನೂರು ಪೊಲೀಸ್ ಠಾಣೆ ಮುಂಭಾಗ ಜಾನುವಾರುಗಳನ್ನು ತುಂಬಿದ್ದ ಕ್ಯಾಂಟರ್‌ ವಾಹನವನ್ನು ಅಡ್ಡಗಟ್ಟಿದ್ದ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್‌ ಕೆರೆಹಳ್ಳಿ, ಇತರೆ ನಾಲ್ವರು  ಆರೋಪಿಗಳೊಂದಿಗೆ ತಲೆಮರೆಸಿಕೊಂಡಿದ್ದ. ಏ.2 ರಾತ್ರಿ ವಿಡಿಯೊವೊಂದನ್ನು ಹರಿಬಿಟ್ಟಿದ್ದ ಪುನೀತ್‌, ‘ನಾನೇ ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ಹೇಳಿಕೊಂಡು  ನಾಪತ್ತೆ ಆಗಿದ್ದ ಆರೋಪಿಯನ್ನು ಬಂಧಿಸುವಲ್ಲಿ‌ ತಂಡಗಳು ಯಶಸ್ವಿಯಾಗಿವೆ.

ಇದ್ರೀಷ್ ಪಾಷ ಸಾವಿಗೆ ನಿಖರ ಕಾರಣ ಏನೆಂಬುದು ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ ಎಸ್‌ ಎಲ್) ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ. ಕನಕಪುರದ ವೈದ್ಯರ ತಂಡವು ಇದ್ರೀಷ್ ಅವರ ಮರಣೋತ್ತರ ಪರೀಕ್ಷೆ ನಡೆಸಿದೆ. ಎಫ್‌ ಎಸ್‌ ಎಲ್‌ ವರದಿಯನ್ನೂ ಪಡೆಯಲಾಗುತ್ತದೆ.

ಮೂರು ಎಫ್‌ಐಆರ್‌: ಪ್ರಕರಣ ಸಂಬಂಧ ಸಾತನೂರು ಠಾಣೆಯಲ್ಲಿ ಮೂರು ಎಫ್‌ ಐಆರ್‌ ಗಳು ದಾಖಲಾಗಿವೆ. ಮೊದಲಿಗೆ ಅಕ್ರಮ ಗೋವು ಸಾಗಣೆಗೆ ಸಂಬಂಧಿಸಿದಂತೆ ಪುನೀತ್‌ ಕೆರೆಹಳ್ಳಿ ದೂರು ನೀಡಿದ್ದ. ಗೋವು ಸಂರಕ್ಷಣೆ ನೆಪದಲ್ಲಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಕ್ಯಾಂಟರ್‌ ಚಾಲಕ ಪ್ರತಿ ದೂರು ನೀಡಿದ್ದರು. ಮರು ದಿನ ಬೆಳಿಗ್ಗೆ 8ರ ಸುಮಾರಿಗೆ ಘಟನೆ ನಡೆದ ಸ್ಥಳದ 100 ಮೀಟರ್‌ ದೂರದಲ್ಲಿ ಇದ್ರೀಷ್‌ ಅವರ ಶವ ಪತ್ತೆ ಆಗಿದ್ದು, ಅವರ ಸಹೋದರ ಯೂನುಸ್‌ ಪಾಷ ನೀಡಿದ ದೂರಿನ ಅನ್ವಯ ಮತ್ತೊಂದು ಎಫ್‌ ಐಆರ್‌ ದಾಖಲಿಸಿದ್ದೇವೆ ಎಂದು ಎಸ್ ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

ಸ್ನಾನಕ್ಕೆ ಹೋದಾಗ ಗ್ಯಾಸ್‌ ಗೀಸರ್‌ ಲೀಕ್‌; ಗರ್ಭಿಣಿ ಸಾವು, ಮಗು ಗಂಭೀರ

Posted by Vidyamaana on 2023-12-23 19:33:10 |

Share: | | | | |


ಸ್ನಾನಕ್ಕೆ ಹೋದಾಗ ಗ್ಯಾಸ್‌ ಗೀಸರ್‌ ಲೀಕ್‌; ಗರ್ಭಿಣಿ ಸಾವು, ಮಗು ಗಂಭೀರ

ಬೆಂಗಳೂರು: ಮಗು ಜತೆಗೆ ಸ್ನಾನಕ್ಕೆ ಹೋದಾಗ ಗೀಸರ್‌ ಲೀಕ್‌ ಆಗಿ (gas geyser leaks) ಪ್ರಜ್ಞೆ ತಪ್ಪಿ ಬಾತ್‌ರೂಮ್‌ನಲ್ಲೇ ಗರ್ಭಿಣಿಯೊಬ್ಬರು (Bangalore News) ಮೃತಪಟ್ಟಿದ್ದಾರೆ. ರಮ್ಯ (23) ಮೃತ ದುರ್ದೈವಿ.


ಬೆಂಗಳೂರಿನ ಅಶ್ವತ್ ನಗರದಲ್ಲಿ ಈ ದುರ್ಘಟನೆ ನಡೆದಿದೆ.ರಮ್ಯ ತಮ್ಮ ನಾಲ್ಕು ವರ್ಷದ ಮಗುವಿನೊಟ್ಟಿಗೆ ಸ್ನಾನ ಮಾಡಲು ಹೋಗಿದ್ದಾರೆ. ಆದರೆ ಈ ವೇಳೆ ಗ್ಯಾಸ್ ಗೀಸರ್‌ನಿಂದ ವಿಷ ಅನಿಲ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿದೆ. ಆದರೆ ಇದು ತಿಳಿಯದೆ ಸ್ನಾನ ಮಾಡಲು ಬಾತ್‌ ರೂಮ್‌ಗೆ ಹೋಗಿದ್ದಾರೆ. ಗೀಸರ್‌ ಸೋರಿಕೆಯಾದ ಕಾರಣ ಸ್ನಾನ ಮಾಡುತ್ತಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ.ಕೂಡಲೇ ಕುಟುಂಬಸ್ಥರು ರಮ್ಯಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗರ್ಭಿಣಿಯಾಗಿದ್ದ ರಮ್ಯರ ಮಗುವೂ ಪ್ರಪಂಚ ನೋಡುವ ಮುನ್ನವೇ ಗರ್ಭದಲ್ಲೇ ಮೃತಪಟ್ಟಿದೆ. ಇತ್ತ ರಮ್ಯರ ನಾಲ್ಕು ವರ್ಷದ ಮಗುವಿಗೂ ಚಿಕಿತ್ಸೆ ಮುಂದುವರಿದಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದೆ.


ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


ಸ್ನಾನಕ್ಕೆ ಜೋಡಿಯಾಗಿ ಹೋಗಿದ್ದ ಯುವಕ- ಯುವತಿ ಬಾತ್‌ರೂಮ್‌ನಲ್ಲಿ ಸಾವು


ಕಳೆದ ಜೂನ್‌ನಲ್ಲೂ ಇದೇ ರೀತಿ ಗ್ಯಾಸ್‌ ಗೀಸರ್‌ ಲೀಕ್‌ ಇಬ್ಬರು ಮೃತಪಟ್ಟಿದ್ದರು. ಹಸೆಮಣೆ ಏರಬೇಕಿದ್ದ ಜೋಡಿಯೊಂದು ದಾರುಣ ಅಂತ್ಯ ಕಂಡಿತ್ತು. ಸ್ನಾನಕ್ಕೆ ಜೋಡಿಯಾಗಿ ಹೋದಾಗ ಗೀಸರ್‌ ಲೀಕ್‌ ಆಗಿ (gas geyser leaks) ಪ್ರಜ್ಞೆ ತಪ್ಪಿ ಬಾತ್‌ರೂಮ್‌ನಲ್ಲಿ ಮೃತ್ಯು (Bangalore News) ಆಗಿದ್ದರು. ಗುಂಡ್ಲುಪೇಟೆ ತಾಲೂಕಿನ ಚಂದ್ರಶೇಖರ್, ಗೋಕಾಕ್ ತಾಲೂಕಿನ ಸುಧಾರಾಣಿ ಮೃತ ದುರ್ದೈವಿಗಳು.


ಬೆಂಗಳೂರು: ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಜೋಡಿಯೊಂದು ದಾರುಣ ಅಂತ್ಯ ಕಂಡಿದೆ. ಸ್ನಾನಕ್ಕೆ ಜೋಡಿಯಾಗಿ ಹೋಗಿದ್ದಾಗ ಗೀಸರ್‌ ಲೀಕ್‌ ಆಗಿ (gas geyser leaks) ಪ್ರಜ್ಞೆ ತಪ್ಪಿ ಬಾತ್‌ರೂಮ್‌ನಲ್ಲಿ ಮೃತ್ಯು (Bangalore News) ಆಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಚಂದ್ರಶೇಖರ್, ಗೋಕಾಕ್ ತಾಲೂಕಿನ ಸುಧಾರಾಣಿ ಮೃತ ದುರ್ದೈವಿಗಳು.ಗ್ಯಾಸ್‌ ಗೀಸರ್‌ ಸೋರಿಕೆ

ಕಳೆದ ಜೂನ್‌ 10ರಂದು ಚಿಕ್ಕಜಾಲದ ತರಬನಹಳ್ಳಿ ಬಳಿ ಈ ದುರ್ಘಟನೆ ನಡೆದಿತ್ತು. ಈ ಜೋಡಿ ರಾತ್ರಿ 9 ಗಂಟೆ ಸುಮಾರಿಗೆ ಸ್ನಾನಕ್ಕೆಂದು ಗ್ಯಾಸ್ ಗೀಸರ್‌ ಆನ್ ಮಾಡಿತ್ತು. ಈ ವೇಳೆ ಗ್ಯಾಸ್ ಗೀಸರ್‌ನಿಂದ ವಿಷ ಅನಿಲ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿತ್ತು. ಆದರೆ ಇದ್ಯಾವುದರ ಅರಿವು ಇವರೇ ಒಟ್ಟಿಗೆ ಸ್ನಾನ ಮಾಡಲು ಬಾತ್‌ ರೂಮ್‌ಗೆ ಹೋಗಿದ್ದರು. ಗೀಸರ್‌ ಸೋರಿಕೆಯಾದ ಕಾರಣ ಸ್ನಾನ ಮಾಡುತ್ತಲೇ ಇಬ್ಬರು ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದರು.


ಮನೆಯಿಂದ ಹೊರಗೆ ಬಾರದೆ ಇದ್ದಾಗ ಬೆಳಗ್ಗೆ ಮನೆ ಮಾಲೀಕರು ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದು, ಬಾಗಿಲು ಮುರಿದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದರು.

ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ 4ರಿಂದ 6 ರೂಪಾಯಿ ಕಡಿತಕ್ಕೆ ಚಿಂತನೆ

Posted by Vidyamaana on 2023-12-31 04:55:39 |

Share: | | | | |


ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ 4ರಿಂದ 6 ರೂಪಾಯಿ ಕಡಿತಕ್ಕೆ ಚಿಂತನೆ

ನವದೆಹಲಿ: 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರವು ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲು ಚಿಂತನೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. ಪ್ರತಿ ಲೀಟರ್‌ಗೆ 4 ರಿಂದ 6 ರೂಪಾಯಿಗಳವರೆಗೆ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ. ಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸಿ ತಗ್ಗಿಸಲು ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ. ಬೆಲೆ ಕಡಿತದ ಸಮಾನ ಹೊರೆಯನ್ನು ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪೆನಿಗಳಿಗೆ ವಹಿಸುವ ಪ್ರಸ್ತಾವನೆಯು ಪರಿಗಣನೆಯಲ್ಲಿದೆ ಎಂದು ಬಿಸಿನೆಸ್‌ ಟುಡೇ ವರದಿ ತಿಳಿಸಿದೆ. ಕೇಂದ್ರವು ಪ್ರತಿ ಲೀಟರ್‌ಗೆ 10 ರೂ.ವರೆಗೆ ಹೆಚ್ಚಿನ ಬೆಲೆ ಕಡಿತಕ್ಕೆ ಮುಂದಾಗಬಹುದು. ಇಂಧನ ಬೆಲೆ ಕಡಿತವು ನವೆಂಬರ್‌ನಲ್ಲಿ ಮೂರು ತಿಂಗಳ ಗರಿಷ್ಠ 5.55% ಕ್ಕೆ ಏರಿದೆ. ಪೆಟ್ರೋಲಿಯಂ ಸಚಿವಾಲಯ ಮತ್ತು ಹಣಕಾಸು ಸಚಿವಾಲಯ ಇತ್ತೀಚೆಗೆ ಚರ್ಚೆ ನಡೆಸಿದ್ದು, ಈ ಕುರಿತು ಪ್ರಧಾನಿ ಕಾರ್ಯಾಲಯಕ್ಕೆ ಆಯ್ಕೆಗಳನ್ನು ಸಲ್ಲಿಸಿದೆ. ಈ ಎರಡು ಸಚಿವಾಲಯಗಳು ಪ್ರತಿ ಹದಿನೈದು ದಿನಗಳಿಗೊಮ್ಮೆ ಇಂಧನ ಬೆಲೆಗಳ ಬಗ್ಗೆ ಚರ್ಚೆ ನಡೆಸುತ್ತವೆ. ವಾಹನ ಸವಾರರಿಗೆ ಗುಡ್ ನ್ಯೂಸ್: ಅಗ್ಗವಾಗಲಿದೆ ಪೆಟ್ರೋಲ್, ಡೀಸೆಲ್ ಬೆಲೆ! ಕಳೆದ ಮೂರು ತಿಂಗಳಿನಿಂದ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 70-80 ಡಾಲರ್‌ಗಳ ಮಧ್ಯೆ ಏರಿಳಿತವಾಗುತ್ತಿರುವ ಕಾರಣ ಕೇಂದ್ರ ಸರ್ಕಾರ ಇಂಧನ ಬೆಲೆ ಕಡಿತಕ್ಕೆ ಚಿಂತನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರವು ಕೇಂದ್ರ ಅಬಕಾರಿ ಸುಂಕವನ್ನು ನವೆಂಬರ್ 2021 ಮತ್ತು ಮೇ 2022 ರಲ್ಲಿ ಎರಡು ಕಂತುಗಳಲ್ಲಿ ಕ್ರಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ ಒಟ್ಟು ರೂ 13 ಮತ್ತು ರೂ 16 ರಷ್ಟು ಕಡಿಮೆ ಮಾಡಿದೆ. ಅಬಕಾರಿ ಕಡಿತವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಲಾಯಿತು ಮತ್ತು ಇದರ ಪರಿಣಾಮವಾಗಿ ಚಿಲ್ಲರೆ ಬೆಲೆಗಳು ಕುಸಿಯಿತು. ಕಡಿಮೆ ಕಚ್ಚಾ ತೈಲ ಬೆಲೆಗಳು ಮೂರು ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪ್ (IOC), ಭಾರತ್ ಪೆಟ್ರೋಲಿಯಂ ಕಾರ್ಪ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ (HPCL) ದೊಡ್ಡ ಲಾಭವನ್ನು ನೀಡಿದೆ. ಗುರುವಾರ ತೈಲ ಬೆಲೆಗಳು ಸ್ಥಿರವಾಗಿವೆ. ಬ್ರೆಂಟ್ ಒಂದು ಬ್ಯಾರೆಲ್‌ಗೆ $80 ರ ಸಮೀಪದಲ್ಲಿ ವ್ಯಾಪಾರ ಮಾಡುವುದರೊಂದಿಗೆ ಹೆಚ್ಚಿನ ದಾಸ್ತಾನುಗಳು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿನ ದಾಖಲೆಯ ಉತ್ಪಾದನೆಯು ಕೆಂಪು ಸಮುದ್ರದಲ್ಲಿನ ಜಾಗತಿಕ ವ್ಯಾಪಾರದ ಅಡೆತಡೆಗಳ ಮೇಲೆ ಆತಂಕವನ್ನು ಕಡಿಮೆ ಮಾಡಿದೆ.

ಅರ್ಧ ಗಂಟೆಯ ದೃಶ್ಯಕ್ಕೆ 50 ಕೋಟಿ ರೂಪಾಯಿ ಸುರಿದ ಪುಷ್ಪ 2 ನಿರ್ಮಾಪಕರು

Posted by Vidyamaana on 2024-02-29 16:05:29 |

Share: | | | | |


ಅರ್ಧ ಗಂಟೆಯ ದೃಶ್ಯಕ್ಕೆ 50 ಕೋಟಿ ರೂಪಾಯಿ ಸುರಿದ ಪುಷ್ಪ 2 ನಿರ್ಮಾಪಕರು

       ಕೆಲವು ವರದಿಗಳ ಪ್ರಕಾರ ಪುಷ್ಪ 2 ಚಿತ್ರದಲ್ಲಿ ಇಂಟರ್​ವಲ್​ಗೂ ಮೊದಲು 30 ನಿಮಿಷಗಳ ದೃಶ್ಯವೊಂದು ಬರಲಿದೆ. ಇದಕ್ಕಾಗಿ ಬರೋಬ್ಬರಿ 35 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಈ ದೃಶ್ಯ ಸೆರೆಹಿಡಿಯಲು ಬರೋಬ್ಬರಿ 50 ಕೋಟಿ ರೂಪಾಯಿ ಖರ್ಚಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪ 2 ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾನ ಅಂದುಕೊಂಡ ದಿನಾಂಕದಂದು ರಿಲೀಸ್ ಮಾಡಬೇಕು ಎಂಬ ನಿಟ್ಟಿನಲ್ಲಿ ನಿರ್ದೇಶಕ ಸುಕುಮಾರ್ ಅವರು ಕೆಲಸ ಮಾಡುತ್ತಿದ್ದಾರೆ. ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಈಗ ಸಿನಿಮಾ ಬಗ್ಗೆ ಭರ್ಜರಿ ಅಪ್​​ಡೇಟ್ ಒಂದು ಸಿಕ್ಕಿದೆ. ಈ ಚಿತ್ರದ ಒಂದು ಪ್ರಮುಖ ದೃಶ್ಯಕ್ಕೆ ತಂಡ ಬರೋಬ್ಬರಿ 50 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.


ಪುಷ್ಪ ಸಿನಿಮಾ 2021ರ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಿ ಬರೋಬ್ಬರಿ 300 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ಈ ಹಿನ್ನೆಲೆಯಲ್ಲಿ ಎರಡನೇ ಪಾರ್ಟ್ ಬಗ್ಗೆ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಕೂಡ ಒಳ್ಳೆಯ ಬಿಸ್ನೆಸ್ ಮಾಡುವ ಬಗ್ಗೆ ತಂಡಕ್ಕೆ ನಿರೀಕ್ಷೆ ಇದೆ. ಬಜೆಟ್ ವಿಚಾರದಲ್ಲಿ ಮೈತ್ರಿ ಮೂವೀ ಮೇಕರ್ಸ್ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ.ನಿರ್ದೇಶಕರು ಕೇಳಿದಷ್ಟು ಹಣವನ್ನು ಚೆಲ್ಲುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ.


ಕೆಲವು ವರದಿಗಳ ಪ್ರಕಾರ ಪುಷ್ಪ 2 ಸಿನಿಮಾದಲ್ಲಿ ಇಂಟರ್​ವಲ್​ಗೂ ಮೊದಲು 30 ನಿಮಿಷಗಳ ದೃಶ್ಯವೊಂದು ಬರಲಿದೆ. ಇದಕ್ಕಾಗಿ ಬರೋಬ್ಬರಿ 35 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಈ ದೃಶ್ಯ ಸೆರೆಹಿಡಿಯಲು ಬರೋಬ್ಬರಿ 50 ಕೋಟಿ ರೂಪಾಯಿ ಖರ್ಚಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ 30 ನಿಮಿಷಗಳು ಕಥೆಗೆ ಪ್ರಮುಖ ಟ್ವಿಸ್ಟ್ ನೀಡಲಿವೆಯಂತೆ.ಪುಷ್ಪ ಕಥೆ ತಿರುಪತಿಯಲ್ಲಿ ಸಾಗಿತ್ತು. ಈ ಕಾಡಿನಲ್ಲಿ ಸಿಗುವ ರಕ್ತಚಂದನದ ಕಳ್ಳ ಸಾಗಣೆ ಬಗ್ಗೆ ಹೇಳಲಾಗಿತ್ತು. ಎರಡನೇ ಭಾಗದಲ್ಲಿ ತಿರುಪತಿಯ ಗಂಗಮ್ಮ ಜಾತ್ರೆಯೂ ಇರಲಿದೆಯಂತೆ. ಮಧ್ಯಂತರಕ್ಕೂ ಮೊದಲ 30 ನಿಮಿಷಗಳ ಕಥೆ ಇದೇ ಜಾತ್ರೆಯಲ್ಲಿ ಸಾಗಲಿದೆ ಎನ್ನಲಾಗಿದೆ. ಇದಕ್ಕಾಗಿ ದೊಡ್ಡ ದೊಡ್ಡ ಸೆಟ್​ಗಳನ್ನು ಹಾಕಲಾಗಿದೆ.

ಏನೆಲ್ಲ ಇರಲಿದೆ?

30 ನಿಮಿಷಗಳಲ್ಲಿ ಒಂದು ಸಾಂಗ್, ಫೈಟ್ ಹಾಗೂ ಭಾವನಾತ್ಮಕ ದೃಶ್ಯಗಳು ಇರಲಿವೆ. ಈ ಚಿತ್ರದ ಬಜೆಟ್ 500 ಕೋಟಿ ರೂಪಾಯಿ ಎನ್ನಲಾಗಿದೆ. ಸದ್ಯದ ಮಟ್ಟಿಗೆ ಇವೆಲ್ಲವೂ ಅಂತೆ-ಕಂತೆ ಹಂತದಲ್ಲಿದೆ. ಸಿನಿಮಾ ನೋಡಿದ ಬಳಿಕವೇ ಇದಕ್ಕೆ ಉತ್ತರ ಸಿಗಲಿದೆ.


ಮೊದಲ ಭಾಗದಲ್ಲಿ


ಸಾಮಾನ್ಯ ಕೂಲಿಯವನಾಗಿದ್ದ ಪುಷ್ಪರಾಜ್ (ಅಲ್ಲು ಅರ್ಜುನ್) ರಕ್ತಚಂದನದ ಕಳ್ಳ ಸಾಗಣೆ ದಂಧೆ ಸೇರಿಕೊಳ್ಳುತ್ತಾನೆ. ಅಲ್ಲಿಂದ ಆತ ಬೆಳೆಯುತ್ತಾ ಹೋಗುತ್ತಾನೆ. ಮೊದಲ ಭಾಗದ ಕೊನೆಯಲ್ಲಿ ಆತ ಡಾನ್ ಆಗಿ ನಿಲ್ಲುತ್ತಾನೆ. ಸಂಪೂರ್ಣ ದಂಧೆಯನ್ನು ತನ್ನ ವಶಕ್ಕೆ ಪಡೆಯುತ್ತಾನೆ. ಎರಡನೇ ಭಾಗದಲ್ಲಿ ಆತ ಏನು ಮಾಡುತ್ತಾನೇ ಅನ್ನೋದೆ ಕಥೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆಗೆ ಫಹಾದ್ ಫಾಸಿಲ್, ಕನ್ನಡದ ಡಾಲಿ ಧನಂಜಯ್ ಮೊದಲಾದವರು ನಟಿಸಿದ್ದಾರೆ.

ಬಂಟ್ವಾಳ: ಯುವಕ ಮೇಲೆ ತಂಡವೊಂದರಿಂದ ಹಲ್ಲೆ

Posted by Vidyamaana on 2023-09-11 15:38:32 |

Share: | | | | |


ಬಂಟ್ವಾಳ: ಯುವಕ ಮೇಲೆ ತಂಡವೊಂದರಿಂದ ಹಲ್ಲೆ

ಬಂಟ್ವಾಳ, ಯುವಕ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಬಂಟ್ವಾಳದ ಮೈಂದಾಳ ಎಂಬಲ್ಲಿ ನಡೆದಿದೆ.ಮೈಂದಾಳ ನಿವಾಸಿ ನಿಸಾರ್ ಎಂಬವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.


ಶನಿವಾರ ರಾತ್ರಿ 9.45ರ ಸುಮಾರಿಗೆ ನಿಸಾರ್ ಅಜ್ಜಿ ಮನೆಯಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಗುರಿಮಜಲು ಎಂಬಲ್ಲಿ ಅಟೋ ರಿಕ್ಷಾದ ಬಳಿ ನಿಂತಿದ್ದ 5 ಜನರ ಪೈಕಿ ಇಬ್ಬರು ನಿಸಾರ್ ಅವರನ್ನು ಅಡ್ಡ ಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.


ಇದೇ ಸಂದರ್ಭ ರಿಕ್ಷಾದ ಬಳಿ ತಲವಾರು ಹಿಡಿದುಕೊಂಡು ನಿಂತಿದ್ದ ಮೂವರ ಪೈಕಿ ಓರ್ವ ನಿಸಾರ್ ಗೆ ದಾಳಿ ಮಾಡುವಂತೆ ಹೇಳುತ್ತಿದ್ದ ಎನ್ನಲಾಗಿದೆ.ಈ ವೇಳೆ ನಿಸಾರ್ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿ ಓಡಿ ಹೋಗಿದ್ದು, ಸ್ನೇಹಿತನಿಗೆ ಕರೆ ಮಾಡಿ ತಿಳಿಸಿ ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent News


Leave a Comment: