ಉಪ್ಪಿನಂಗಡಿ : ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೋ ಚಿತ್ರೀಕರಣ :ಪೆರಿಯಡ್ಕ ನಿವಾಸಿ ರೆಹಮಾನ್ ಪೊಲೀಸ್ ವಶಕ್ಕೆ

ಸುದ್ದಿಗಳು News

Posted by vidyamaana on 2024-07-22 17:34:57 |

Share: | | | | |


ಉಪ್ಪಿನಂಗಡಿ : ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೋ ಚಿತ್ರೀಕರಣ :ಪೆರಿಯಡ್ಕ ನಿವಾಸಿ ರೆಹಮಾನ್ ಪೊಲೀಸ್ ವಶಕ್ಕೆ

ಉಪ್ಪಿನಂಗಡಿ: ಹಿಂದೂ ಯುವತಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡಿದ ರಹಿಮಾನ್ ಎಂಬಾತನ ಸ್ಥಳೀಯರು ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ಜು.21ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಮಾಡುತ್ತಿದ್ದ ರಹಿಮಾನ್ ನನ್ನು ಸ್ಥಳೀಯರು ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದ ಅರುಣ್ ಕುಮಾರ್ ಪುತ್ತಿಲ, ಆರೋಪಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಸಿಸಿಟಿವಿಗೆ ಒತ್ತಾಯ: ಈಗಾಗಲೇ ಉಪ್ಪಿನಂಗಡಿಯಲ್ಲಿ ಹಿಂದೂಗಳನ್ನು ಕೇಂದ್ರೀಕರಿಸಿ ಹಲವು ಘಟನೆಗಳು ನಡೆದಿದ್ದು, 2ವರ್ಷದ ಹಿಂದೆ ಮೀನು ಅಂಗಡಿಗೆ ಬೆಂಕಿ ಹಾಕಿದ್ದು ಇನ್ನೂ ಪತ್ತೆಯಾಗಿಲ್ಲ.

ಈ ಘಟನೆಯಲ್ಲಿ ಆರೋಪಿಯನ್ನು ಊರಾವರೇ ಹಿಡಿದುಕೊಟ್ಟಿದ್ದಾರೆ. ಪೆರಿಯಡ್ಕ ಜಂಕ್ವನ್ ನಲ್ಲಿ ಪೊಲೀಸ್ ಇಲಾಖೆಯ ಸಿಸಿಟಿವಿ ಅಗತ್ಯತೆ ಇದೆ ಎಂದು ಠಾಣಾಧಿಕಾರಿಯಲ್ಲಿ ಮನವಿ ಮಾಡಿದರು.

 Share: | | | | |


ವಿಟ್ಲ: ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ; ಬಾಯಾರು ನಿವಾಸಿ ರಾಜೇಶ್ ಬಂಧನ

Posted by Vidyamaana on 2023-08-01 16:08:11 |

Share: | | | | |


ವಿಟ್ಲ: ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ; ಬಾಯಾರು ನಿವಾಸಿ  ರಾಜೇಶ್ ಬಂಧನ

ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು  ವಿಟ್ಲ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.


ಕೇರಳ ಬಾಯಾರು ನಿವಾಸಿ ರಾಜ ಯಾನೆ ರಾಜೇಶ(26) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ನೊಂದ ಬಾಲಕಿ ಐದು ಮಂದಿಯ ಹೆಸರನ್ನು ದೂರಿನಲ್ಲಿ ತಿಳಿಸಿದ್ದು ಮೂರು ಮಂದಿಯನ್ನು ರವಿವಾರ ಬಂಧಿಸಿದ್ದು, ಓರ್ವನನ್ನು ಸೋಮವಾರ ಬಂಧಿಸಿದರೆ, ಇನ್ನೋರ್ವ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜು9: ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ

Posted by Vidyamaana on 2023-07-08 15:04:02 |

Share: | | | | |


ಜು9: ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ

ಪುತ್ತೂರು: ರೋಟರಿ ಕ್ಲಬ್‌ ಪುತ್ತೂರು ಇದರ ಪ್ರಾಯೋಜಕತ್ವದ ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಪದಸ್ವೀಕಾರ ಹಾಗೂ ಜಿಲ್ಲಾ ರೋಟರ್ಯಾಕ್ಟ್ ಪ್ರತಿನಿಧಿ ಪದಸ್ವೀಕಾರ ಸಮಾರಂಭ ಜುಲೈ 9ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಹಾಲಿನಲ್ಲಿ ನಡೆಯಲಿದೆ.

ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ರಾಹುಲ್ ಆಚಾರ್ಯ ನೇಮಕಗೊಂಡಿದ್ದು, ಕಾರ್ಯದರ್ಶಿಯಾಗಿ ಶ್ರೇಯಸ್, ಖಜಾಂಚಿಯಾಗಿ ಮಹೇಶ್ಚಂದ್ರ ಮತ್ತು ಅವರ ತಂಡ ಪದಸ್ವೀಕಾರ ಮಾಡಲಿದ್ದಾರೆ.

ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ:

ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷರಾಗಿ ಜ್ಯೋತಿಕಾ, ಕಾರ್ಯದರ್ಶಿಯಾಗಿ ಧನುಷಾ, ಐಪಿಪಿಯಾಗಿ ಗಣೇಶ್ ಎನ್. ಕಲ್ಲರ್ಪೆ ನೇಮಕಗೊಂಡಿದ್ದಾರೆ. ಸಭಾಪತಿಯಾಗಿ ಪ್ರೇಮಾನಂದ್ ಕಾರ್ಯನಿರ್ವಹಿಸಲಿದ್ದಾರೆ.

ಉಪಾಧ್ಯಕ್ಷರಾಗಿ ವಿಶಾಲ್, ಜತೆ ಕಾರ್ಯದರ್ಶಿಯಾಗಿ ನವೀನ್ ಚಂದ್ರ, ಕೋಶಾಧಿಕಾರಿಯಾಗಿ ಸುಕನ್ಯಾ, ಸಮುದಾಯ ಸೇವಾ ನಿರ್ದೇಶಕರಾಗಿ ವಿಜಯ್, ವೃತ್ತಿ ಸೇವಾ ನಿರ್ದೇಶಕರಾಗಿ ಪುರುಷೋತ್ತಮ್, ಅಂತಾರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ಮಹೇಶ್ಚಂದ್ರ, ಸಂಘ ಸೇವಾ ನಿರ್ದೇಶಕರಾಗಿ ಶಶಿಧರ್ ಕೆ. ಮಾವಿನಕಟ್ಟೆ, ಬುಲೆಟಿನ್ ಎಡಿಟರ್ ಆಗಿ ಶ್ರೀಕಾಂತ್ ಬಿರಾವು, ಕ್ರೀಡಾ ನಿರ್ದೇಶಕರಾಗಿ ಹಿಮಾಂಶು ಕುಮಾರ್, ಸಾಂಸ್ಕೃತಿಕ ನಿರ್ದೇಶಕರಾಗಿ ಸುಬ್ರಹ್ಮಣಿ, ಪಿ.ಆರ್.ಓ. ಆಗಿ ನವೀನ್ ಬನ್ನೂರು, ಸಾರ್ಜಂಟ್ ಆಗಿ ಮುರಳಿ ನೇಮಕಗೊಂಡಿದ್ದಾರೆ.

ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಚಾಲಕ ಚಿರ ನಿದ್ರೆಗೆ

Posted by Vidyamaana on 2023-12-29 16:22:57 |

Share: | | | | |


ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಚಾಲಕ ಚಿರ ನಿದ್ರೆಗೆ

ಉಪ್ಪಿನಂಗಡಿ: ರಾತ್ರಿ ಲಾರಿ ನಿಲ್ಲಿಸಿ ಮಲಗಿದ್ದ ಚಾಲಕ ಲಾರಿಯಲ್ಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಉಪ್ಪಿನಂಗಡಿಯಲ್ಲಿ ನಡೆದಿದೆ.


ಮೈಸೂರು ಜಿಲ್ಲೆಯ ಚೆನ್ನಪಟ್ಟಣದ ಖಲೀಲ್ ಖಾನ್ (58) ಮೃತ ವ್ಯಕ್ತಿ ಮೈಸೂರಿನಿಂದ ಬಿ.ಸಿ.ರೋಡಿಗೆ ಹಾಸಿಗೆಯ ಲೋಡನ್ನು ಲಾರಿಯಲ್ಲಿ ತಂದಿದ್ದ ಖಲೀಲ್, ಲೋಡ್ ಖಾಲಿ ಮಾಡಿ ಎರಡು ದಿನಗಳ ಹಿಂದೆ ರಾತ್ರಿ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದರು.ಲಾರಿಯ ಕ್ಯಾಬಿನ್‍ನ ಬಾಗಿಲು ಹಾಕಿದ್ದರಿಂದ ಚಾಲಕ ಲಾರಿಯೊಳಗೆ ಮೃತಪಟ್ಟಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಡಿ.29ರಂದು ಲಾರಿಯಿಂದ ವಾಸನೆ ಬರಲಾರಂಭಿಸಿದ್ದು, ಸಂಶಯಗೊಂಡ ಸ್ಥಳೀಯರು ಪರಿಶೀಲಿಸಿದಾಗ ಲಾರಿ ಚಾಲಕ ಮಲಗಿದ್ದಲ್ಲೇ ಮೃತಪಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಲಾರಿಯಿಂದ ಲಾರಿ ಚಾಲಕನ ಮೃತದೇಹವನ್ನು ತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕಡಬ : ಚಿಲ್ಲರೆ ಇಲ್ಲವೆಂದದ್ದಕ್ಕೆ ಕ್ ಎಸ್ ಆರ್ ಟಿ ಸಿ ಬಸ್ಸಿನಿಂದ ಇಳಿಸಿದ ನಿರ್ವಾಹಕ

Posted by Vidyamaana on 2024-01-07 13:30:48 |

Share: | | | | |


ಕಡಬ : ಚಿಲ್ಲರೆ ಇಲ್ಲವೆಂದದ್ದಕ್ಕೆ ಕ್ ಎಸ್ ಆರ್ ಟಿ ಸಿ ಬಸ್ಸಿನಿಂದ ಇಳಿಸಿದ ನಿರ್ವಾಹಕ

ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಚಿಲ್ಲರೆ ಇಲ್ಲ ಎನ್ನುವ ಕಾರಣಕ್ಕೆ 75 ವರ್ಷ ಪ್ರಾಯದ ವೃದ್ಧವ್ಯಕ್ತಿಯನ್ನುಮಾರ್ಗ ಮಧ್ಯ ದಲ್ಲಿ ಇಳಿಸಿ ನಿರ್ವಾಹಕನೋರ್ವ ಅಮಾನವೀ ಯತೆ ತೋರಿದ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ಜ. 6ರಂದು ನಡೆದಿದೆ.ಕಲ್ಲುಗುಡ್ಡೆಯಿಂದ ಉಪ್ಪಿನಂಗಡಿಗೆ ಸಂಚರಿಸುವ ಈ ಬಸ್‌ಗೆ ಶಾಂತಿಗುರಿ ನಿವಾಸಿ ಬಾಬು ಗೌಡರು ಕಾಂಚನಕ್ಕೆ ತೆರಳಲು ಹತ್ತಿದ್ದು, ಟಿಕೆಟ್‌ ನೀಡುವ ಸಂದರ್ಭ ಅವರು 200 ರೂ. ನೋಟು ನೀಡಿದ್ದರು. ಈ ಸಂದರ್ಭ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ ಬಾಬು ಗೌಡರನ್ನು ಗೋಳಿಯಡ್ಕ ಎಂಬಲ್ಲಿ ಇಳಿಸಿ ಅಗೌರವ ತೋರಿದ್ದಾರೆ ಎಂದು ಆರೋಪಿಸಲಾಗಿದೆ.ಮುಂದೆ ಚಿಲ್ಲರೆ ಆಗುವ ವೇಳೆ ಚಿಲ್ಲರೆ ನೀಡುವಂತೆ ಬಾಬು ಅವರು ತಿಳಿಸಿದ್ದರೂ ಸ್ಪಂದಿಸದ ನಿರ್ವಾಹಕ ಹಿರಿಯ ವ್ಯಕ್ತಿಯನ್ನು ಮಾರ್ಗಮಧ್ಯೆ ಇಳಿಸಿದ್ದಾರೆ. ಬಸ್‌ ನಿರ್ವಾಹಕನ ನಡೆಗೆ ಬೇಸರ ವ್ಯಕ್ತಪಡಿಸಿದ ಬಾಬು ಅವರು, ಈ ರೀತಿ ನಡೆಸಿಕೊಂಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಘಟನೆ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.

ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳ ಆಶೀರ್ವಾದ ಡಾ.ಧನಂಜಯ ಸರ್ಜಿ

Posted by Vidyamaana on 2024-05-23 13:54:45 |

Share: | | | | |


ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳ ಆಶೀರ್ವಾದ ಡಾ.ಧನಂಜಯ ಸರ್ಜಿ

ಪುತ್ತೂರು: ಕರ್ನಾಟಕ ವಿಧಾನ ಪರಿಷತ್ ನೈರುತ್ಯ ಪಧವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಮೇ.23ರಂದು ಉಡುಪಿಯ ಶ್ರೀ ಕೃಷ್ಣ ದೇಗುಲಕ್ಕೆ ಭೇಟಿ ನೀಡಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಸಂಧರ್ಭದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶಪಾಲ್ ಸುವರ್ಣ

ಪ್ರೀತಿಗೆ ಪೋಷಕರ ನಿರಾಕರಣೆ; ಪ್ರೇಮಿಗಳಿಬ್ಬರು ನೇಣಿಗೆ ಶರಣು

Posted by Vidyamaana on 2024-02-03 18:08:10 |

Share: | | | | |


ಪ್ರೀತಿಗೆ ಪೋಷಕರ ನಿರಾಕರಣೆ; ಪ್ರೇಮಿಗಳಿಬ್ಬರು ನೇಣಿಗೆ ಶರಣು

ಕಲಬುರಗಿ : ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರು ನಿರಾಕರಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರೆ ಗ್ರಾಮದಲ್ಲಿ ನಡೆದಿದೆ. ಶಶಿಕಲಾ (20) ಗೊಲ್ಲಾಳಪ್ಪ (24) ನೇಣಿಗೆ ಶರಣಾದ ಪ್ರೇಮಿಗಳು. ಶಶಿಕಲಾ ಮತ್ತು ಗೊಲ್ಲಾಳಪ್ಪ ಇಬ್ಬರು ಕೂಡ ವರಸೆಯಲ್ಲಿ ಅಣ್ಣ ತಂಗಿ ಆಗಿದ್ದರು.ಗೊಲ್ಲಾಳಪ್ಪ ಪ್ರೀತಿಯನ್ನು ನಿರಾಕರಿಸಿ ಶಶಿಕಲಾಗೆ ಬೇರೆ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದರು. ಅದರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಗ್ರಾಮದ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು. ಮುಂದಿನ ತಿಂಗಳು ಮದುವೆ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ.ಪ್ರೇಯಸಿಗೆ ಮದುವೆ ನಿಶ್ಚಯ ಆಗಿರುವ ವಿಷಯ ತಿಳಿದ ಗೊಲ್ಲಾಳಪ್ಪ ನಿನ್ನೆ ರಾತ್ರಿ ಶಶಿಕಲಾಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. ನಂತರ ಮಾಗಣಪುರ ಗ್ರಾಮದ ದೇವಸ್ಥಾನದಲ್ಲಿ ಜೋಡಿ ಮದುವೆ ಮಾಡಿಕೊಂಡಿದ್ದಾರೆ. ಬಳಿಕ ಅದೇ ಗ್ರಾಮದ ಹೊರವಾಲಯದ ತೋಟದ ಜಮೀನಿನಲ್ಲಿ ಇಬ್ಬರು ನೇಣಿಗೆ ಶರಣಾಗಿದ್ದಾರೆ. ಪ್ರೇಮಿಗಳಿಬ್ಬರು ನೇಣಿಗೆ ಶರಣಾಗುವ ಮುನ್ನ ತಾವು ಮದುವೆ ಮಾಡಿಕೊಂಡಿರುವುದರ ಬಗ್ಗೆ ಸೆಲ್ಫಿ ಫೋಟೋ ತೆಗೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Recent News


Leave a Comment: