ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಸುದ್ದಿಗಳು News

Posted by vidyamaana on 2024-07-25 16:43:22 |

Share: | | | | |


ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

 ಮುಂಬೈ: ಇಂಜಿನಿಯರ್ ಒಬ್ಬರು ತಮ್ಮ ಕಾರನ್ನು ಅಟಲ್ ಸೇತುವಿನಲ್ಲಿ ನಿಲ್ಲಿಸಿ ಸೇತುವೆಯಿಂದ ಕೆಳಗೆ ಹಾರಿದ್ದಾರೆ. ಈ ದೃಶ್ಯ ಅಲ್ಲಿ ಇದ್ದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ.

ಸೇತುವೆಯಿಂದ ಕೆಳಗೆ ಹಾರಿದವರನ್ನು ಡೊಂಬಿವಿಲಿಯ ಪಲ್ಲವ ನಗರದ ನಿವಾಸಿ ಕರ್ತುರಿ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ವಾಸ ಮಾಡುತ್ತಿದ್ದರು.

ಮಧ್ಯಾಹ್ನ 12.35ರ ಸುಮಾರಿಗೆ ಇವರು ತಮ್ಮ ಕಾರಿನಲ್ಲಿ ಆಟಲ್ ಸೇತು ಬ್ರಿಡ್ಜ್ ಮೇಲೆ ಬಂದಿದ್ದು, ಸೇತುವೆ ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದಾರೆ. ಇದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಟೋಲ್ ಕಂಟ್ರೋಲ್‌ ರೂಮ್‌ನವರ ಗಮನಕ್ಕೆ ಬಂದಿದೆ. ಕೂಡಲೇ ಅವರು ನವಶೇವ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.

ಕೂಡಲೇ ಎಂಟಿಹೆಚ್‌ಎಲ್‌ನಿಂದ ರಕ್ಷಣಾ ತಂಡ ಹಾಗೂ ಕರಾವಳಿ ಭದ್ರತಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಹಣಕಾಸಿನ ತೊಂದರೆಯಿಂದಲೇ ಶ್ರೀನಿವಾಸ್ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕಾರಿನಲ್ಲಿ ಕೇವಲ ತನ್ನ ಪರ್ಸ್ ಮಾತ್ರ ಬಿಟ್ಟು ಶ್ರೀನಿವಾಸ್ ಸಮುದ್ರಕ್ಕೆ ಹಾರಿದ್ದಾರೆ. ಈ ಪರ್ಸ್‌ನಲ್ಲಿ ಆಧಾರ್ ಕಾರ್ಡ್‌, ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಐಡಿ ಕಾರ್ಡ್ ಇತ್ತು. ಡೆತ್‌ನೋಟ್ ಆಗಲಿ, ಫೋನ್ ಆಗಲಿ ಕಾರಿನಲ್ಲಿ ಪತ್ತೆಯಾಗಿಲ್ಲ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ಅಂಜುಮನ್ ಬಾಗ್ವಾನ್ ಹೇಳಿದ್ದಾರೆ.

ಬಿಟೆಕ್ ಮಾಡಿದ್ದ ಶ್ರೀನಿವಾಸ್ ಮುಂಬೈನ ಲೋಧಾದಲ್ಲಿ 2023ರಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು. ಇದಕ್ಕೂ ಮೊದಲು ಅರಬ್ ರಾಷ್ಟ್ರ ಕುವೈತ್‌ನಲ್ಲಿ ಕೆಲಸ ಮಾಡಿದ್ದರು. 2023ರಲ್ಲಿ ಮುಂಬೈಗೆ ವಾಪಸಾದ ಅವರು ಲೋಧಾ ಗ್ರೂಪ್‌ಗೆ ಕೆಲಸಕ್ಕೆ ಸೇರಿದ್ದರು. ಇದಾದ ನಂತರ ಇವರು ತಮ್ಮ ಪಾಲುದಾರರ ಜೊತೆಗೂಡಿ ಇಲೆಕ್ಟ್ರಿಕ್ ಕಂಟ್ರಾಕ್ಟ್ ಕೆಲಸ ಶುರು ಮಾಡಿದ್ದರು. ಶ್ರೀನಿವಾಸ್ ಪತ್ನಿಯಿಂದಲೂ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದು, ಶ್ರೀನಿವಾಸ್ ಈ ಹಿಂದೆಯೂ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಜೀವ ಕಳೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಸಮಯಕ್ಕೆ ಸರಿಯಾಗಿ ಯಾರೋ ಪಾರು ಮಾಡಿದ್ದರಿಂದ ಅವರ ಜೀವ ಉಳಿದಿತ್ತು ಎಂದು ಪತ್ನಿ ಹೇಳಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಶ್ರೀನಿವಾಸ್ ಕಡೆಯದಾಗಿ ಸಂಬಂಧಿಕರೊಬ್ಬರ ಜೊತೆ ಮಾತನಾಡಿದ್ದು, ಈ ವೇಳೆ ಅವರು ಸಹಜವಾಗಿ ಮಾತನಾಡಿದ್ದರು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇದುವರೆಗೂ ನೀರಿಗೆ ಹಾರಿದ ಶ್ರೀನಿವಾಸ್ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದು ಮೊದಲ ಪ್ರಕರಣ ಅಲ್ಲ ಈ ಹಿಂದೆ ಮಹಿಳಾ ವೈದ್ಯರೊಬ್ಬರು ಅಟಲ್ ಸೇತುವಿನಿಂದ ಕೆಳಗೆ ಹಾರಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದರು.

 Share: | | | | |


ಮುಕ್ರಂಪಾಡಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸರತಿ ಸಾಲು ಪಾರ್ಕಿಂಗ್: ದರ್ಬೆಯಿಂದಲೇ ಟ್ರಾಫಿಕ್ ಜಾಮ್

Posted by Vidyamaana on 2023-01-24 15:16:30 |

Share: | | | | |


ಮುಕ್ರಂಪಾಡಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸರತಿ ಸಾಲು ಪಾರ್ಕಿಂಗ್: ದರ್ಬೆಯಿಂದಲೇ ಟ್ರಾಫಿಕ್ ಜಾಮ್

ಪುತ್ತೂರು: ಮಂಗಳವಾರ ಸಂಜೆಯಿಂದ ರಾತ್ರಿ ಸುಮಾರು 8 ಗಂಟೆಯವರೆಗೆ ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದ ಸಮೀಪದಿಂದ, ಮುಕ್ರಂಪಾಡಿ ಕೆ.ಎಸ್.ಆರ್.ಟಿ.ಸಿ. ಡಿಪೋವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳು ಒಂದರ ಹಿಂದೊಂದರಂತೆ ತೆವಳುತ್ತಾ ಸಾಗುತ್ತಿದ್ದ ದೃಶ್ಯ ಕಂಡುಬಂದಿತು.

ಇದು ಮಂಗಳವಾರ ಒಂದು ದಿನದ ಸಮಸ್ಯೆಯಲ್ಲ. ಪ್ರತಿದಿನವೂ ಇದೇ ಪರಿಸ್ಥಿತಿ. ಇದಕ್ಕೆ ಕಾರಣ, ಕೆ.ಎಸ್.ಆರ್.ಟಿ.ಸಿ. ಬಸ್ಗಳನ್ನು ರಸ್ತೆ ಬದಿ ಸರತಿ ಸಾಲಿನಲ್ಲಿ ಪಾರ್ಕಿಂಗ್ ಮಾಡುತ್ತಿರುವುದು. ರಸ್ತೆಯ ಹೆಚ್ಚಿನ ಭಾಗವನ್ನು ಬಸ್ಗಳು ಆಕ್ರಮಿಸಿಕೊಳ್ಳುವುದರಿಂದ, ಇಲ್ಲಿ ದಿನವೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಕೆಲ ವರ್ಷಗಳ ಹಿಂದೆ ಪುತ್ತೂರು ಪೇಟೆಯ ಮುಖ್ಯಭಾಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಹಾಗೂ ಡಿಪೋ ಇತ್ತು ಎನ್ನುವುದು ಎಲ್ಲರೂ ತಿಳಿದಿರುವ ವಿಷಯವೇ. ಅಲ್ಲಿಂದ ಡಿಪೋವನ್ನು ಮುಕ್ರಂಪಾಡಿಗೆ ವರ್ಗಾಯಿಸಲಾಯಿತು. ಪೇಟೆಯ ಬೆಳವಣಿಗೆಗೆ ತಕ್ಕಂತೆ ಹಾಗೂ ಡಿಪೋದಲ್ಲಿ ಹೆಚ್ಚಿನ ಬಸ್ಗಳನ್ನು ಪಾರ್ಕಿಂಗ್ ಮಾಡಲು ಸ್ಥಳಾವಕಾಶದ ಕಾರಣದಿಂದ ಹೊಸ ಜಾಗ ಹುಡುಕುವುದು ಅನಿವಾರ್ಯವೂ ಆಗಿತ್ತು. ಆದರೆ ಈಗ ಮತ್ತೆ ಸಾರ್ವಜನಿಕರಿಗೆ ಪುತ್ತೂರು ಕೆ.ಎಸ್.ಆರ್.ಟಿ.ಸಿ. ಹೊಸ ತಲೆನೋವು ತಂದಿತ್ತಿದೆ.

ಸಂಜೆ ಹೊತ್ತಿಗೆ ಪಾಳಿಯಿಂದ ಹಿಂದಿರುಗುವ ಬಸ್ಗಳು ಡಿಪೋ ಪ್ರವೇಶಿಸಲು, ಸಾನ್ತೋಮ್ ಗುರುಮಂದಿರದಿಂದ ಕೆ.ಎಸ್.ಆರ್.ಟಿ.ಸಿ. ಡಿಪೋದವರೆಗೆ ರಸ್ತೆ ಬದಿಯಲ್ಲೇ ಪಾರ್ಕಿಂಗ್ ಮಾಡಲಾಗುತ್ತಿದೆ. ಮಾತ್ರವಲ್ಲ, ಈಗ ಸ್ಥಳೀಯ ಪೆಟ್ರೋಲ್ ಬಂಕ್ನಲ್ಲಿ ಡೀಸಿಲ್ ತುಂಬಿಸಿಕೊಳ್ಳಲು ಬಸ್ಗಳನ್ನು ರಸ್ತೆ ಬದಿಯೇ ಸರತಿ ಸಾಲಿನಲ್ಲಿ ನಿಲ್ಲಿಸಲಾಗುತ್ತಿದೆ.

ಸಂಜೆ ಹೊತ್ತು ನಾಗರಿಕರು ಕಚೇರಿಯಿಂದ ಮನೆಗೆ ಹಿಂದಿರುಗುವ ಹೊತ್ತು. ಅಲ್ಲದೇ, ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಬಳಿಕ, ಪುತ್ತೂರು – ಸುಳ್ಯ ರಸ್ತೆಯಲ್ಲಿ ವಿಪರೀತ ವಾಹನಗಳ ಓಡಾಟ ಇದೆ. ಎಷ್ಟೆಂದರೆ, ಕೆಲ ಸಂದರ್ಭದಲ್ಲಿ ರಸ್ತೆ ದಾಟಲೂ ಸಮಯ ತೆಗೆದುಕೊಳ್ಳುವಂತಾಗಿದೆ. ಇಂತಹ ಒತ್ತಡದ ರಸ್ತೆಯಲ್ಲಿ, ಅರ್ಧದಷ್ಟು ರಸ್ತೆಯನ್ನು ಕೆ.ಎಸ್.ಆರ್.ಟಿ.ಸಿ. ಬಸ್ಗಳು ಆಕ್ರಮಿಸಿಕೊಂಡು ಬಿಟ್ಟರೆ, ಸಾರ್ವಜನಿಕರು ಹೇಗೆ ಪ್ರಯಾಣಿಸಬೇಕು? ಸಾರ್ವಜನಿಕರ ಕಷ್ಟವನ್ನು ಕೆ.ಎಸ್.ಆರ್.ಟಿ.ಸಿ. ನೋಡಿಯೂ ಸುಮ್ಮನಿದೆ ಎನ್ನುವುದೇ ದೊಡ್ಡ ದುರಂತ.

ಪೆರ್ನೆ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Posted by Vidyamaana on 2023-04-29 15:04:31 |

Share: | | | | |


ಪೆರ್ನೆ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ಪುತ್ತೂರಿನ ಜನತೆಯ ಆಶೀರ್ವಾದದಿಂದ ನಾನು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಶಾಸಕನಾಗಿ ಆಯ್ಕೆಯಾದಲ್ಲಿ ಶಾಸಕನಾದವನಿಗೆ ಸಿಗುವ ಸರಕರಿ ವೇತನ ಹಾಗೂ ಎಲ್ಲಾ ಭತ್ಯೆಯನ್ನು ತಾನು ಸಮಾಜ ಸೇವೆಗೆ ಬಳಸುತ್ತೇನೆ, ಜನರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದರಿಂದ ನನಗೆ ಸಿಗುವ ಆ ಮೊತ್ತವನ್ನು ಜನರಿಗೆ ಬಳಸುತ್ತೇನೆ, ಬಡವರಿಗಾಗಿಯೇ ಖರ್ಚು ಮಾಡುತ್ತೇನೆ ಅದರಲ್ಲಿ ಒಂದು ರುಪಾಯಿಯನ್ನೂ ತನ್ನ ಸ್ವಂತ ಬಳಕೆಗೆ ಬಳಸುವುದೇ ಇಲ್ಲ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.

ಒಳಮೊಗ್ರು ಶಿಥಿಲಗೊಂಡ ಕಿರು ಸೇತುವೆ ವೀಕ್ಷಿಸಿದ ಶಾಸಕ ಅಶೋಕ್ ರೈ

Posted by Vidyamaana on 2023-10-04 15:29:15 |

Share: | | | | |


ಒಳಮೊಗ್ರು ಶಿಥಿಲಗೊಂಡ ಕಿರು ಸೇತುವೆ ವೀಕ್ಷಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಒಳಮೊಗ್ರು ಗ್ರಾಮದ ಕುಟಿನೋಪ್ಪಿನಡ್ಕ ಸಮೀಪದ ಮುಳಿಯಡ್ಕ ಎಂಬಲ್ಲಿರುವ ಕಿರು ಸೇತುವೆಯು ಶಿಥಿಲಗೊಂಡಿದ್ದು ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸೇತುವೆಯನ್ನು ಪರಿಶೀಲನೆ ಮಾಡಿದರು.

ಗ್ರಾಮದ ಪರ್ಪುಂಜದಿಂದ ಕುಟನೋಪ್ಪಿನಡ್ಕ ಮೂಲಕ ದರ್ಬೆತ್ತಡ್ಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಈ ಸೇತುವೆಯು ಸುಮಾರು ೩೦ ವರ್ಷಗಳ ಹಿಂದೆ ಜನಾರ್ಧನ ಪೂಜಾರಿಯವರು ಲೋಕಸಭಾ ಸದಸ್ಯರಾಗಿರುವ ಕಾಲದಲ್ಲಿ ನಿರ್ಮಾಣವಾಗಿದೆ. ಸೇತುವೆ ಅಗಲ ಕಿರಿದಾಗಿದ್ದು ಘನ ವಾಹನಗಳು ಇದರಲ್ಲಿ ಸಂಚರಿಸಲು ಸಾಧ್ಯವಿಲ್ಲ. ಸೇತವೆಯು ಶಿಥಿಲಗೊಂಡಿದ್ದು ಲಘು ವಾಹನ ಸಂಚಾರಕ್ಕೂ ಅಯೋಗ್ಯವಾಗಿದೆ. ಸೇತುವೆಯನ್ನು ದುರಸ್ಥಿ ಮಡಿ ಎಂದು ಕಳೆದ ೧೫ ವರ್ಷಗಳಿಂದ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳ ಬಳಿ ಮನವಿ ಮಾಡುತ್ತಿದ್ದಾರೆ. ಆದರೆ ಯಾವೊಬ್ಬ ಜನಪ್ರತಿನಿಧಿಯಾಗಲಿ ಇತ್ತ ಕಡೆ ಸುಳಿಯಲಿಲ್ಲ. ಅ. ೩ ರಂದು ಸ್ಥಳಕ್ಕೆ ಭೇಟಿ ನೀಡಿದ ಶಸಕರು ಶಿಥಿಲಗೊಂಡ ಸೇತುವೆಯನ್ನು ವೀಕ್ಷಣೆ ಮಾಡಿದರು. ಶೀಘ್ರದಲ್ಲೇ ಹೊಸ ಸೇತುವೆಯ ನಿರ್ಮಾಣ ಮತ್ತು ಸೇತುವೆಯ ಸಂಪರ್ಕದ ಎರಡೂ ಬದಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ಹೇಳಿದರು. ಇದರಿಂದಾಗಿ ಈ ಭಾಗದ ಜನತೆಯ ಸುಮಾರು ೧೫ ವರ್ಷಗಳ ಕನಸು ನನಸಾದಂತಾಗಿದೆ. ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷರಾದ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ್, ಶಾರದಾ,  ಕುಂಬ್ರ ಕೆಪಿಎಸ್ ಸ್ಕೂಲ್ ಕಾರ್ಯಾಧ್ಯಕ್ಷರಾದ ರಕ್ಷಿತ್ ರೈ ಮುಗೇರು,ಕೆ ಪಿ ಮಹಮ್ಮದ್, ಸೇರಿದಂತೆ ಗ್ರಾಮಸ್ಥರು ಉಪಸ್ತಿತರಿದ್ದರು.


ಕೋಟ್


ಸೇತುವೆ ಮಾಡಿ ಎಂದು ಮನವಿ ಮಾಡಿ ಸಾಕಾಗಿ ಹೋಗಿದೆ. ಈಗ ಇರುವ ಸೇತುವೆ ಅಗಲ ಕಿರಿದಾಗಿರುವ ಕಾರಣ ಉಪಯೋಗ ಶೂನ್ಯವಾಗಿದೆ. ಪ್ರಧಾನ ಸಂಪರ್ಕ ಕೊಂಡಿಯಾಗಿರುವ ಈ ಸೇತುವೆಗೆ ಮುಕ್ತಿ ದೊರೆಯುವ ವಿಶ್ವಾಸ ನಮಗಿದ್ದು ಹೊಸ ಸೇತುವೆಗೆ ಅನುದಾನ ಒದಗಿಸುವುದಾಗಿ ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ಶಾಸಕರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ. ಇಚ್ಚಾಶಕ್ತಿಯ ಕೊರತೆಯಿಂದಾಗಿ ಇಷ್ಟು ವರ್ಷದಲ್ಲಿ ಈ ಸೇತವೆಗೆ ಮುಕ್ತಿ ದೊರೆತಿರಲಿಲ್ಲ


ಇಸುಬು, ಮಾಜಿ ಉಪಾಧ್ಯಕ್ಷರು, ಒಳಮೊಗ್ರು ಗ್ರಾಪಂ



ಕೋಟ್

ನುಡಿದಂತೆ ನಡೆಯುವ ಪುತ್ತೂರು ಶಾಸಕರು ಮುಳಿಯಡ್ಕ ಸೇತುವೆಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಖಂಡಿತವಾಗಿಯೂ ಇಲ್ಲಿ ಹೊಸ ಸೇತುವೆಯ ನಿರ್ಮಾಣ ಕಾರ್ಯ ನಡೆಯಲಿದೆ. ಸೇತುವೆಯ ನಿರ್ಮಾಣದ ಜೊತೆಗೆ ರಸ್ತೆ ಕಾಮಗಾರಿ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಶಾಸಕರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ


ಅಶೋಕ್ ಪೂಜಾರಿ ಬೊಳ್ಳಾಡಿ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರು

ಕೇಂದ್ರ ಜುಮ್ಮಾ ಮಸೀದಿ ಗೆ ಭೇಟಿ ನೀಡಿದ ಪುತ್ತೂರಿನ ನೂತನ ಶಾಸಕ ಅಶೋಕ್ ರೈ

Posted by Vidyamaana on 2023-05-13 16:12:12 |

Share: | | | | |


ಕೇಂದ್ರ ಜುಮ್ಮಾ ಮಸೀದಿ ಗೆ ಭೇಟಿ ನೀಡಿದ ಪುತ್ತೂರಿನ ನೂತನ ಶಾಸಕ ಅಶೋಕ್ ರೈ

ಪುತ್ತೂರು: ನೂತನ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ ಅವರು ಶನಿವಾರ ಸಂಜೆ ದರ್ಗಾ ಹಾಗೂ ಚರ್ಚಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.

ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ವಠಾರ ದಲ್ಲಿರುವ ಪುತ್ತೂರು ತಂಙಳ್ ದರ್ಗಕ್ಕೆ  ಭೇಟಿ ನೀಡಿ ಪ್ರಾರ್ಥಿಸಿದರು. ಅವರ ಜೊತೆಗೆ ಪ್ರಮುಖರು ಉಪಸ್ಥಿತರಿದ್ದರು.

ಸಿ.ಟಿ.ರವಿ ಸಿಎಂ ಆಗಲಿ.. ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಈಶ್ವರಪ್ಪ ಹೇಳಿಕೆ

Posted by Vidyamaana on 2023-04-25 12:40:04 |

Share: | | | | |


ಸಿ.ಟಿ.ರವಿ ಸಿಎಂ ಆಗಲಿ.. ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಈಶ್ವರಪ್ಪ ಹೇಳಿಕೆ

ಚಿಕ್ಕಮಗಳೂರು: ಚುನಾವಣೆ ನಡೆಯುವ ಮೊದಲೇ ರಾಜಕೀಯ ಪಕ್ಷಗಳಲ್ಲಿ ಮುಂದಿನ ಸಿಎಂ ಚರ್ಚೆ ಜೋರಾಗಿದೆ. ಅಧಿಕಾರಕ್ಕೇರುವ ಮುನ್ನವೇ ಸಿಎಂ ಕೂಗು ಕೇಳಿ ಬರುತ್ತಿದೆ. ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪನವರು ಸಿಟಿ ರವಿ ಅವರು ಮುಂದಿನ ಸಿಎಂ ಆಗಲಿ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ನಿಡಘಟ್ಟದಲ್ಲಿ ನಡೆದ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಸಿಟಿ ರವಿ ಅವರನ್ನು ದೊಡ್ಡ ಅಂತರದಿಂದ ಗೆಲ್ಲಿಸಿ ಅವರನ್ನು ಕರ್ನಾಟಕದ ಮುಂದಿನ ಸಿಎಂಯನ್ನಾಗಿ ಮಾಡಬೇಕೆಂದಿದ್ದಾರೆ.ಕಾಂಗ್ರೆಸ್‌ ನಲ್ಲಿ ಓಡಾಡುತ್ತಿದ್ದ ಸಿಎಂ ಕೂಗು ಇದೀಗ ಬಿಜೆಪಿಯಲ್ಲೂ ಕೇಳಿ ಬಂದಿದೆ. ಬಹಿರಂಗ ಸಭೆಯಲ್ಲೇ ಸಿ.ಟಿ.ರವಿ ಪರ ಈಶ್ವರಪ್ಪ ಅವರು ಒಲವು ತೋರಿದ್ದು, ಇದೀಗ ಈ ಸಂಬಂಧಿತ ವಿಡಿಯೋ ಸದ್ದು ಮಾಡುತ್ತಿದೆ.ನಿನ್ನೆಯಷ್ಟೇ ಸಿಟಿ ರವಿ ಅವರು ಮೈಸೂರಿನಲ್ಲಿ ಮಾತನಾಡುವ ವೇಳೆ ಸಿಎಂ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು.ಈಶ್ವರಪ್ಪ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ

ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ನಿಧನ

Posted by Vidyamaana on 2024-07-22 11:26:34 |

Share: | | | | |


ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ನಿಧನ

ಮುಕ್ಕೂರು : ಪೆರುವಾಜೆ ಗ್ರಾಮದ ಕಾನಾವು ನಿವಾಸಿ, ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ಜು.22 ರಂದು ಬೆಳಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.





Leave a Comment: