ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಎಂ.ಸಂಜೀವ ಶೆಟ್ಟಿ ಸಿಲ್ಟ್, ರೆಡಿಮೇಡ್ಸ್ ನೂತನ ಶಾಖೆ MSS ALL EXCLUSIVE ಮಾ.24ರಂದು ಶುಭಾರಂಭ

Posted by Vidyamaana on 2023-03-23 16:02:19 |

Share: | | | | |


ಎಂ.ಸಂಜೀವ ಶೆಟ್ಟಿ ಸಿಲ್ಟ್, ರೆಡಿಮೇಡ್ಸ್ ನೂತನ ಶಾಖೆ MSS ALL EXCLUSIVE ಮಾ.24ರಂದು ಶುಭಾರಂಭ

ಪತ್ತೂರು: ಸುಮಾರು 79 ವರ್ಷಗಳ ವಸ್ತ್ರ ಪರಂಪರೆಯನ್ನು ಹೊಂದಿರುವ, ಎಲ್ಲಾ ಪೀಳಿಗೆಯ ಗ್ರಾಹಕರ ಮನಗೆದ್ದ, ಮದುವೆ ಜವಳಿಗೆಂದೇ ಪ್ರಸಿದ್ದಿ ಪಡೆದ ಎಂ.ಸಂಜೀವ ಶೆಟ್ಟಿ ಮಳಿಗೆಯ ನೂತನ ಶಾಖೆ MSS ALL EXCLUSIVE ಮಾ.24ರಂದು ಬೆಳಿಗ್ಗೆ ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಎಂ. ಸಂಜೀವ ಶೆಟ್ಟಿ ಹಳೆಯ ಜವಳಿ ಮಳಿಗೆಯ ಎದುರುಗಡೆ ಶುಭಾರಂಭಗೊಳ್ಳಲಿದೆ.

1944ರಲ್ಲಿ ಪುತ್ತೂರಿನಲ್ಲಿ ಬಟ್ಟೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಎಂ.ಸಂಜೀವ ಶೆಟ್ಟಿ ವಸ್ತ್ರವ್ಯಾಪಾರ ಮಳಿಗೆ ಪ್ರಾರಂಭಿಸಿದೆ.

2017ರಲ್ಲಿ ಜಿಲ್ಲೆಯಲ್ಲೇ ಬಹುದೊಡ್ಡ 3 ಅಂತಸ್ತಿನವಸ್ತ್ರವ್ಯಾಪಾರ ಮಳಿಗೆ ಪ್ರಾರಂಭಿಸಿದೆ.ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಎಂ.ಸಂಜೀವ ಶೆಟ್ಟಿ ಶಾಖಾ ಶೋ ರೂಮ್ ಹೊಂದಿದೆ. ಗ್ರಾಹಕರ ಇನ್ನೂ ಹೆಚ್ಚಿನ ವೈವಿಧ್ಯಮಯ ಆಯ್ಕೆಗಾಗಿ ಇದೀಗ ವಿನೂತನ ವ್ಯವಹಾರಕ್ಕೆ ಕೈ ಹಾಕಿರುವ ಎಂ.ಸಂಜೀವ ಶೆಟ್ಟಿ ಸಂಸ್ಥೆಯವರು, ತಮ್ಮ ಮೊದಲಿನ ಶೋರೂಂ ನಲ್ಲಿ MSS ALL EXCLUSIVE ನ್ನು ಪ್ರಾರಂಭಿಸಿದ್ದಾರೆ.

ಗ್ರಾಹಕರಿಗೆ ಎಲ್ಲಾ ಬ್ರಾಂಡೆಡ್ ವಸ್ತುಗಳು ಒಂದೇ ಸೂರಿನಡಿ ಸಿಗಬೇಕೆನ್ನುವ ನಿಲುವಿನಿಂದ ಹಳೆಯ ಶೋರೂಂನ್ನೇ ಈ ಶೋರೂಂ ಆಗಿ ಬದಲಿಸಲಾಗಿದೆ.

ವೈಶಿಷ್ಟ್ಯತೆಗಳು: ಸಂಸ್ಥೆಯ ನೆಲಅಂತಸ್ತಿನಲ್ಲಿ ಕಾಸ್ಟೆಟಿಕ್ಸ್, ಪ್ಯಾಡ್ ಬ್ಯಾಗ್, ನ್ಯೂಬಾರ್ನ್ ಡೈಸನ್ಸ್, ಹಾಗೂ ಟಾಯ್ಸ್ ಲಭ್ಯವಿದೆ. ಪ್ರಥಮ ಮಹಡಿಯಲ್ಲಿ ಲೇಡಿಸ್ ಎಕ್ನಿಕ್ ವೇರ್, ಮನ್ಸ್ ಫಾರ್ಮಲ್, ಕ್ಯಾಸುವಲ್ ವೇರ್, ಎರಡನೇ ಮಹಡಿಯಲ್ಲಿ ಮನ ಎಕ್ನಿಕ್ ವೇರ್, ಟ್ರಾವಲ್ ಬ್ಯಾಗ್ ಮತ್ತು ಗೃಹಾಲಂಕಾರಿಕಾ ವಸ್ತುಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಬನ್ನೂರು, ಉಪ್ಪಿನಂಗಡಿ,ನಿಡ್ಪಳ್ಳಿ, ಚರ್ಚ್ ಗಳಿಗೆ ಭೇಟಿ.

Posted by Vidyamaana on 2023-04-30 05:22:52 |

Share: | | | | |


ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಬನ್ನೂರು, ಉಪ್ಪಿನಂಗಡಿ,ನಿಡ್ಪಳ್ಳಿ, ಚರ್ಚ್ ಗಳಿಗೆ  ಭೇಟಿ.

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭಾನುವಾರ ಬೆಳಿಗ್ಗೆ  ಬನ್ನೂರು, ಉಪ್ಪಿನಂಗಡಿ, ನಿಡ್ಪಳ್ಳಿ ಚರ್ಚ್ ಗಳಿಗೆ  ಭೇಟಿ ನೀಡಿದರು.

ಮಲಪ್ಪುರಂ:ಬೋಟ್ ಪಲ್ಟಿಯಾಗಿ ಮಕ್ಕಳು, ಮಹಿಳೆಯರು ಸೇರಿದಂತೆ 11 ಜನರು ಮೃತ್ಯು

Posted by Vidyamaana on 2023-05-07 18:02:36 |

Share: | | | | |


ಮಲಪ್ಪುರಂ:ಬೋಟ್ ಪಲ್ಟಿಯಾಗಿ ಮಕ್ಕಳು, ಮಹಿಳೆಯರು ಸೇರಿದಂತೆ 11 ಜನರು ಮೃತ್ಯು

ಕೇರಳ: ಬೋಟ್ ಪಲ್ಟಿಯಾಗಿ ನಾಲ್ವರು ಮಕ್ಕಳು, ಮಹಿಳೆಯರು ಸೇರಿದಂತೆ 11 ಜನರು ಮೃತಪಟ್ಟ ದಾರುಣ ಘಟನೆ ಮಲಪ್ಪುರಂ ಜಿಲ್ಲೆಯ ತಿರೂರು ತಾಲೂಕಿನ ತಾನೂರ್​ ಬಳಿ ನಡೆದಿದೆ.

ಸುಮಾರು 30ರಿಂದ 40ಕ್ಕೂ ಹೆಚ್ಚು ಪ್ರವಾಸಿಗರಿದ್ದ ಬೋಟ್ ಇಂದು(ಭಾನುವಾರ) ಸಂಜೆ ಏಳು ಗಂಟೆಗೆ ಪಲ್ಟಿಯಾಗಿ ದುರಂತ ಸಂಭವಿಸಿದೆ.ಏಳು ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ದುರಂತದಲ್ಲಿ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಾತ್ರಿಯಾಗಿರುವುದರಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗುತ್ತಿದ್ದು, ಬೋಟ್ ಈಗಲೂ ನೀರಿನಡಿಯಲ್ಲೇ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಅಗ್ನಿಶಾಮಕ ದಳ, ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ದೀಪಿಕಾ ಸುಳ್ಯದಲ್ಲಿ ಪತ್ತೆ

Posted by Vidyamaana on 2024-05-10 07:20:16 |

Share: | | | | |


ನಾಪತ್ತೆಯಾಗಿದ್ದ ವಿದ್ಯಾರ್ಥಿನಿ  ದೀಪಿಕಾ ಸುಳ್ಯದಲ್ಲಿ ಪತ್ತೆ

ಮಂಗಳೂರು, ಮೇ 9: ರೋಶನಿ ನಿಲಯದಲ್ಲಿ ಎಂಎಸ್ಸಿ ಕಲಿಯುತ್ತಿದ್ದು ಪರೀಕ್ಷೆ ಹಾಲ್ ನಿಂದಲೇ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜ್ ಅವರನ್ನು ಪೊಲೀಸರು ಸುಳ್ಯದಲ್ಲಿ ಪತ್ತೆ ಮಾಡಿದ್ದಾರೆ.

ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಸೈನ್ಸ್ ವಿಷಯದಲ್ಲಿ ಮೊದಲನೇ ವರ್ಷದ ಎಂಎಸ್ಸಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಮೇ 7ರಂದು ಎರಡನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಹೊರಗೆ ಬಂದವಳು ನಾಪತ್ತೆಯಾಗಿದ್ದಳು. ಮನೆಯವರು ಪಾಂಡೇಶ್ವರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪುಸ್ತಕ ಮತ್ತು ಮೊಬೈಲನ್ನು ಕಾಲೇಜಿನಲ್ಲಿಯೇ ಬಿಟ್ಟು ತೆರಳಿದ್ದರಿಂದ ಭಾರೀ ಕುತೂಹಲ ಉಂಟಾಗಿತ್ತು.

ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ - ವೈರಲ್ ಆಯ್ತು ಅಪರೂಪದ ವಿಡಿಯೋ..!

Posted by Vidyamaana on 2023-09-28 11:51:31 |

Share: | | | | |


ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ - ವೈರಲ್ ಆಯ್ತು ಅಪರೂಪದ ವಿಡಿಯೋ..!

ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಈ ವೇಳೆ ರೋಬೊಟ್ ಪ್ರಧಾನ ಮಂತ್ರಿಗೆ ಚಹಾ ತಂದು ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ.ಮೋದಿ ಅವರು ಟ್ವಿಟರ್ (ಎಕ್ಸ್‌) ನಲ್ಲಿ ಆಸಕ್ತಿದಾಯಕ ವಿಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಪ್ರದರ್ಶನದಲ್ಲಿ ವಿವಿಧ ರೋಬೋಟ್ ಸ್ಟಾಲ್‌ಗಳಲ್ಲಿ ಹಲವಾರು ರೋಬೋಟಿಕ್ ಕ್ರಿಯೆಗಳನ್ನು ವೀಕ್ಷಿಸುತ್ತಿದ್ದಾರೆ. ಈ ವೇಳೆ ಪ್ರಧಾನಿ ಮತ್ತು ಸಿಎಂಗೆ ರೋಬೋಟ್ ಚಹಾವನ್ನು ನೀಡಿದೆ‌.ನೈಸರ್ಗಿಕ ವಿಕೋಪಗಳು ಅಥವಾ ಅಗ್ನಿ ಅವಘಡಗಳ ಸಂದರ್ಭದಲ್ಲಿ ಮಾನವರಿಗೆ ರೋಬೋಟ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಪ್ರಧಾನಿ ಮೋದಿ ಅವರು ನೋಡಿದ್ದಾರೆಂದು ಈ ಕ್ಲಿಪ್ ತೋರಿಸಿದೆ.ರೋಬೋಟ್ ಇಂಜಿನಿಯರ್‌ಗಳು ಪಿಎಂ ಮೋದಿಯವರಿಗೆ ರೋಬೋಟ್‌ಗಳು ಹೇಗೆ ಜೀವನದ ವಿವಿಧ ಹಂತಗಳಲ್ಲಿ ಶಕ್ತರಾಗಿ ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ವಿವರಿಸಿದ್ದಾರೆ.

ವೈರಲ್ ಆಯ್ತು ಅಪರೂಪದ ವಿಡಿಯೋ..!


ರೊಬೊಟಿಕ್ಸ್‌ ನೊಂದಿಗೆ ಭವಿಷ್ಯದ ಅಂತ್ಯವಿಲ್ಲದ ಸಾಧ್ಯತೆಗಳನ್ನು ಅನ್ವೇಷಿಸುವುದು! ಎಂದು ಟ್ವಿಟರ್ (ಎಕ್ಸ್) ಪೋಸ್ಟ್‌ ನಲ್ಲಿ ಪಿಎಂ ಮೋದಿ ಬರೆದುಕೊಂಡಿದ್ದಾರೆ.

ಬೆಳ್ತಂಗಡಿ : ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ : ಯುವ ಮೋರ್ಚಾ ಪ್ರತಿಭಟನೆಗೆ ನಿರ್ಬಂಧ

Posted by Vidyamaana on 2024-05-20 14:32:53 |

Share: | | | | |


ಬೆಳ್ತಂಗಡಿ : ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ : ಯುವ ಮೋರ್ಚಾ ಪ್ರತಿಭಟನೆಗೆ ನಿರ್ಬಂಧ

ಬೆಳ್ತಂಗಡಿ : ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಪೊಲೀಸರು ನಿರ್ಬಂಧ ಹೇರಿದ್ದಾರೆ ಎಂದು ವರದಿಯಾಗಿದೆ.

ಅಕ್ರಮ ಕಲ್ಲು ಗಣಿಗಾರಿಕೆ ಆರೋಪದಡಿಯಲ್ಲಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಪೊಲೀಸರು ಬಂಧಿಸಿದ್ದು, ಇದರ ವಿರುದ್ಧ ಮೇ.20 ರಂದು ಬೆಳಗ್ಗೆ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಲು ಯುವ ಮೋರ್ಚಾ ಸಿದ್ಧತೆ ನಡೆಸಿತ್ತು



Leave a Comment: