ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಹೆಚ್. ವಿಶ್ವನಾಥ್‌ ಸೇರಿದಂತೆ ಮುಡಾ ನಿವೇಶನ ಪಡೆದ BJP-JDS ನಾಯಕರ ಪಟ್ಟಿ ಬಹಿರಂಗ

ಸುದ್ದಿಗಳು News

Posted by vidyamaana on 2024-07-27 02:09:11 |

Share: | | | | |


ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಹೆಚ್. ವಿಶ್ವನಾಥ್‌ ಸೇರಿದಂತೆ ಮುಡಾ ನಿವೇಶನ ಪಡೆದ BJP-JDS ನಾಯಕರ ಪಟ್ಟಿ ಬಹಿರಂಗ

ಬೆಂಗಳೂರು : ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ಅಕ್ರಮ ನಿವೇಶನ ಹಂಚಿಕೆ ಹಗರಣ ರಾಜ್ಯದಲ್ಲಿ ತೀವ್ರ ಜಟಾಪಟಿಗೆ ಕಾರಣವಾಗಿದೆ. ಅಲ್ಲದೆ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸಿವೆ. ಈ ಮಧ್ಯೆ ಮುಡಾ ನಿವೇಶನ ಪಡೆದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪಟ್ಟಿಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬಿಡುಗಡೆ ಮಾಡಿದ್ದಾರೆ.

ಮುಡಾ ನಿವೇಶನ ಬದಲಿಗೆ ಸೈಟ್ ಪಡೆದುಕೊಂಡಿರುವ ಬಿಜೆಪಿ-ಜೆಡಿಎಸ್ ನಾಯಕರು ಪಟ್ಟಿ ಬಿಡುಗಡೆ ಮಾಡುವ ಮೂಲಕ ಬೈರತಿ ಸುರೇಶ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಸಹ ಮುಡಾ ನಿವೇಶನ ಪಡೆದುಕೊಂಡಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಸುರೇಶ್, ಸಿದ್ದರಾಮಯ್ಯನವರ ಕುಟುಂಬಕ್ಕೆ ಪರ್ಯಾಯ ನಿವೇಶನ ದೊರೆತಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರೂ ಮುಡಾದಿಂದ ನಿವೇಶನ ಪಡೆದಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮುಡಾದಿಂದ 21 ಸಾವಿರ ಚದರ ಅಡಿ ಜಾಗ ಮಂಜೂರಾಗಿದ್ದು, ಬಿಜೆಪಿ ಮುಖಂಡರಾದ ಎಚ್.ವಿಶ್ವನಾಥ್ ಮತ್ತಿತರರಿಗೂ ನಿವೇಶನ ಹಂಚಿಕೆ ಮಾಡಲಾಗಿದೆ ಎಂದರು.

ಜೆಡಿಎಸ್ ಶಾಸಕ ಜಿಟಿ ದೇವೇಗೌಡರಿಗೆ ಎರಡು ಕಡೆ ಪರ್ಯಾಯ ಜಮೀನು ಮಂಜೂರು ಮಾಡಲಾಗಿದೆ ಎಂದು ಸಚಿವ ಸುರೇಶ್ ಹೇಳಿದ್ದಾರೆ. ವಿರೋಧ ಪಕ್ಷಗಳಿಗೆ ಲಗತ್ತಿಸಿರುವ ಇತರ ರಾಜಕೀಯ ನಾಯಕರಿಗೆ ಮುಡಾ ನೀಡಿರುವ ಪರ್ಯಾಯ ನಿವೇಶನಗಳ ಪಟ್ಟಿಯನ್ನೂ ಅವರು ಬಿಡುಗಡೆ ಮಾಡಿದ್ದಾರೆ.

Additional Image

ಮುಡಾದಿಂದ ಪರ್ಯಾಯ ನಿವೇಶನಗಳನ್ನು ಪಡೆದಿರುವ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಹೆಸರನ್ನು ಬಹಿರಂಗಪಡಿಸಲು ಅವಕಾಶ ನೀಡುವಂತೆ ಸ್ಪೀಕರ್ ಯುಟಿ ಖಾದರ್ ಅವರನ್ನು ಒತ್ತಾಯಿಸಿದ್ದೆ. ಆದರೆ, ಸ್ಪೀಕರ್ ಇದಕ್ಕೆ ಅನುಮತಿ ನಿರಾಕರಿಸಿದ್ದರು ಎಂದು ಹೇಳಿದರು.

 Share: | | | | |


ಪುಣಚ ರಾದೀಪ್ ಪೂಜಾರಿ ನಿಧನ

Posted by Vidyamaana on 2024-07-11 10:18:03 |

Share: | | | | |


ಪುಣಚ ರಾದೀಪ್ ಪೂಜಾರಿ ನಿಧನ

ವಿಟ್ಲ : ಅನಾರೋಗ್ಯದಿಂದಾಗಿ ಮೂಡಂಬೈಲು ಬೊಳಂತಿಮೊಗೇರು ನಿವಾಸಿ, ರಾದೀಪ್ ಪೂಜಾರಿ (38) ನಿಧನರಾದರು.

ಬಾರ್ ನಲ್ಲಿ ತಲವಾರ್ ಝಲಪಿಸಿದ ಪ್ರಜ್ವಲ್-ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್

Posted by Vidyamaana on 2023-06-10 23:24:13 |

Share: | | | | |


ಬಾರ್ ನಲ್ಲಿ ತಲವಾರ್ ಝಲಪಿಸಿದ ಪ್ರಜ್ವಲ್-ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್

ಪುತ್ತೂರು:ತನ್ನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಕರೆ ಕಟ್ ಮಾಡಲು ಹೇಳಿದ್ದನ್ನು ಕೇಳಲೆಂದು ಯುವಕನೋರ್ವ ತಲ್ವಾರ್, ಝಳಪಿಸಿಕೊಂಡು ಬಂದು, ಬರ್‌ಡೇ ಪಾರ್ಟಿ ಆಚರಿಸುತ್ತಿದ್ದ ಯವಕರ ತಂಡದಲ್ಲಿದ್ದ ಓರ್ವನ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ಇಲ್ಲಿನ ದರ್ಬೆಯಲ್ಲಿ ಜೂ.9ರ ರಾತ್ರಿ ನಡೆದಿದೆ. ಆರೋಪಿ ತಲ್ವಾರ್ ಬೀಸಿಕೊಂಡು ಯುವಕನನ್ನು ಅಟ್ಟಾಡಿಸುತ್ತಿರುವ ದೃಶ್ಯ  ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಘಟನೆ ಮಾಹಿತಿ ತಿಳಿದು ಜಿಲ್ಲಾ ಪ್ರಭಾರ ಎಸ್ಪಿ ಸಿ.ಬಿ.ರಿಷ್ಯಂತ್ ಅವರು ಪುತ್ತೂರು ನಗರ ಪೊಲೀಸ್‌ ಠಾಣೆಗೆ ಆಗಮಿಸಿ | ವಿಚಾರಿಸಿದ ಬಳಿಕ ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.

ದರ್ಬೆಯಲ್ಲಿರುವ ಮಂಗಳಾ ಲಾಡ್ಜ್‌ ಕಟ್ಟಡದ ಮೇಲಂತಸ್ತಿನಲ್ಲಿ ಈ ಘಟನೆ ನಡೆದಿದೆ.ದರ್ಜೆ ನಿರೀಕ್ಷಣಾ ಮಂದಿರ ತಿರುವು ರಸ್ತೆಯ ಬಳಿ ಬಾರ್ ಹೊಂದಿರುವ ಮಂಗಳಾ ಲಾಡ್ ಕಟ್ಟಡದ ಎರಡನೇ ಅಂತಸ್ತಿನಲ್ಲಿರುವ ರೂಂ ನಂಬ್ರ 402ರಲ್ಲಿ ಗಾಡ್ರಿನ್ ದಿನಕರ್, ಅವರ ಗೆಳೆಯರಾದ ರಕ್ಷಿತ್, ಭವಿತ್, ಹೇಮಂತ್ ಮತ್ತು ಸಂದೇಶ್‌ ಎಂಬವರು ಸೇರಿಕೊಂಡು ರಕ್ಷಿತ್ ಅವರ ಹುಟ್ಟು ಹಬ್ಬ ಆಚರಣೆ ಮಾಡಿ ನಂತರ ಡಿನ್ನರ್ ಪಾರ್ಟಿ ಮಾಡಿದ್ದರು.ಅಲ್ಲಿಗೆ ಹೊರಗಿನಿಂದ ಬಂದ ಪ್ರಜ್ವಲ್ ಎಂಬಾತ ಕೈಯಲ್ಲಿ ತಲ್ವಾರ್ ಝಳಪಿಸಿಕೊಂಡು ಬರ್ತ್‌ಡೇ ಪಾರ್ಟಿಯಲ್ಲಿದ್ದ ಯುವಕರ ಮೇಲೆ ಹಲ್ಲೆಗೆ ಮುಂದಾಗಿದ್ದಾಗಿ ಆರೋಪಿಸಲಾಗಿದೆ.

ಸಿಸಿ ಕ್ಯಾಮರಾದಲ್ಲಿ ಸೆರೆ: ಯುವಕನೋರ್ವ ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಯುವಕನನ್ನು ಅಟ್ಟಾಡಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಈ ಸಂದರ್ಭ ತನ್ನ ಜೀವ ಕಾಪಾಡಲು ಅಡ್ಡಾದಿಡ್ಡಿ ಓಡಿದ ಯುವಕ ಆಯತಪ್ಪಿ ಮಹಡಿಯ ಮೆಟ್ಟಿಲುಗಳಿ೦ದ ಬೀಳುವ ದೃಶ್ಯವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಘಟನೆಯಿಂದ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತೆರಳಿದ್ದರು.ಬರ್ತಡೇ ಪಾರ್ಟಿ | ಮಾಡುತ್ತಿದ್ದವರ ಪೈಕಿ ಓರ್ವ ಪ್ರಜ್ವಲ್ ಎಂಬಾತನಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಇದನ್ನು ನೋಡಿದ ಇನ್ನೋರ್ವ ಯುವಕ ಕರೆ ಕಟ್ ಮಾಡುವಂತೆ ಹೇಳಿದ್ದು ಕರೆ ಕಟ್ ಮಾಡಿದ್ದರು.ಆ ಕಡೆಯಿಂದ ಇದನ್ನು ಕೇಳಿಸಿಕೊಂಡ ಪ್ರಜ್ವಲ್ ಬಳಿಕ ಅಲ್ಲಿಗೆ ಬಂದು ಈ ಬಗ್ಗೆ ಪ್ರಶ್ನಿಸಿ ಹೊರಟು ಹೋಗಿದ್ದು ಸಲ್ಪ ಹೊತ್ತಿನ ಬಳಿಕ ತಲಾ‌ ತಂದು, ಫೋನ್ ಕರೆ ಕಟ್ ಮಾಡಲು ಹೇಳಿದ್ದ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದರೆನ್ನಲಾಗಿದೆ.ಘಟನೆ ಕುರಿತು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ವೈರಲ್ ಆಗುತ್ತಿದ್ದಂತೆ ದ.ಕ.ಜಿಲ್ಲಾ ಪ್ರಭಾರ ಮೈ ಸಿ.ಬಿ.ರಿಷ್ಯಂತ್ ಅವರು ಈ ಕುರಿತು ವಿಚಾರಣೆ ಮಾಡಿ ಮಾಹಿತಿ ನೀಡುವಂತೆ ಪುತ್ತೂರು ಪೊಲೀಸರಿಗೆ ಸೂಚಿಸಿದ್ದರು.ಸಂಜೆ ವೇಳೆಗೆ ಪತ್ತೂರು ನಗರ ಪೊಲೀಸ್‌ ಠಾಣೆಗೆ ಆಗಮಿಸಿದ ಎಸ್ಪಿಯವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಅವರಿಗೆ ಸೂಚನೆ ನೀಡಿದ್ದರು.ಅದರಂತೆ ರಾತ್ರಿ ವೇಳೆ ಪ್ರಕರಣ ದಾಖಲಾಗಿದೆ.

ಆರೋಪಿ ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲು: ದರ್ಬೆಯ ಹರ್ಷ ಶೋ | ರೂಮ್‌ನಲ್ಲಿ ಸೇಲ್ಸ್‌ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುವ ಬಪ್ಪಳಿಗೆ ಕರ್ಕು೦ಜದ ಗಾಡಿನ್  ದಿನಕರ್ ಎಂಬವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಜ್ವಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ತಾನು ಹಾಗೂ ಗೆಳೆಯರಾದ ರಕ್ಷಿತ್, ಭವಿತ್, ಹೇಮಂತ್ ಮತ್ತು ಸಂದೇಶ್‌ ಎಂಬವರು ಸೇರಿ ಮಂಗಳಾ ಲಾಡ್ಜ್‌ನ ಎರಡನೇ ಅಂತಸ್ತಿನಲ್ಲಿರುವ ರೂಮ್ ನಂ.402ರಲ್ಲಿ ರಕ್ಷಿತ್ ಅವರ ಹುಟ್ಟು ಹಬ್ಬ ಆಚರಣೆ ಮಾಡಿ ಬಳಿಕ ಡಿನ್ನರ್ ಪಾರ್ಟಿ ಮಾಡಿದ್ದೆವು.ಆ ಸಮಯ ರಾತ್ರಿ ಸುಮಾರು 1 ಗಂಟೆಗೆ ನಾನು ಪರಿಚಯದ ಪ್ರಜ್ವಲ್ ಎಂಬಾತನಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದ ಸಂದರ್ಭ ಸ್ನೇಹಿತ ರಕ್ಷಿತ್, ಫೋನ್ ಕಾಲ್ ಕಟ್ ಮಾಡು.ನೀನು ಹುಟ್ಟು ಹಬ್ಬದ ಪಾರ್ಟಿಗೆ ಬಂದವ, ಹುಚ್ಚೆ ನೀನು ಇಲ್ಲಿ ಏನು ಫೋನ್ ಮಾಡುತ್ತೀಯಾ ಎಂದು ಕೇಳಿದ್ದರು.ಆವೇಳೆ ನಾನು ಫೋನ್ ಕಾಲ್ ಕಟ್ ಮಾಡಿದ್ದೆ. ಇದನ್ನು ಕೇಳಿಸಿಕೊಂಡಿದ್ದ ಪ್ರಜ್ವಲ್ ಸ್ವಲ್ಪ ಸಮಯದ ನಂತರ ಏಕಾಏಕಿಯಾಗಿ ನಾವಿರುವ ರೂಮ್‌ಗೆ ಬಂದು, ನನಗೆ ಫೋನ್‌ನಲ್ಲಿ ಬೈದವರು ಯಾರು? ಎಂದು ಕೇಳಿದಾಗ, ನಿನಗೆ ಬೈದದ್ದಲ್ಲ. ಅದು ನನಗೆ ಫೋನ್ ಇಡುವಂತೆ ಜೋರು ಮಾಡಿರುವುದು ಎಂದು ನಾನು ಹೇಳಿದೆ.ಅನಂತರ ಅಲ್ಲಿಂದ ಹೊರಗಡೆ ಹೋದ ಪ್ರಜ್ವಲ್ ಸ್ವಲ್ಪ ಸಮಯದ ನಂತರ ವಾಪಸ್ ಕೈಯಲ್ಲಿ ಕತ್ತಿಯಂತಹ ಆಯುಧವನ್ನು ಹಿಡಿದುಕೊಂಡು ಬಂದು ಲಾಡ್ಜ್‌ನ ಬಾಲ್ಕನಿಯಲ್ಲಿ ರಕ್ಷಿತ್ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದಾಗ, ನಿನಗೆ ಎಷ್ಟು ಧೈರ್ಯ, ನನ್ನನ್ನೇ ಕೀಳಾಗಿ ಮಾತನಾಡುತ್ತೀಯಾ? ಎಂದು ಹೇಳಿದಾಗ ಪ್ರಜ್ವಲ್‌ನ ಕೈಯಲ್ಲಿದ್ದ ಆಯುಧವನ್ನು ನೋಡಿದ ರಕ್ಷಿತ್ ಅಲ್ಲಿಂದ ಓಡಿ ಹೋಗಲು ಮುಂದಾದಾಗ ತಡೆದ ಪ್ರಜ್ವಲ್ ಆತನ ಮೇಲೆ ಹಲ್ಲೆ ಮಾಡಲು ಮುಂದಾದ ಆವೇಳೆ ರಕ್ಷಿತ್, ಪ್ರಜ್ವಲ್‌ ನಿಂದ ತಪ್ಪಿಸಿಕೊಂಡು ಕೆಳಗಡೆ ಓಡುವ ಸಂದರ್ಭ ಲಾಡ್‌ನ ಮೆಟ್ಟಿಲಿನಲ್ಲಿ ಕಾಲು ಜಾರಿ ಬಿದ್ದಿದ್ದು ಬಳಿಕ ಎದ್ದು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದರು.ಆ ಬಳಿಕ ಪ್ರಜ್ವಲ್, ನನ್ನ ತಂಟೆಗೆ ಯಾರು ಬಂದರೂ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಅಲ್ಲಿಂದ ನನಗೆ ಮತ್ತು ಸ್ನೇಹಿತರಿಗೆ ಕೆಟ್ಟ ಪದಗಳಿಂದ ಬೈಯುತ್ತಾ ಬೆದುಕೆ ಹಾಕಿ ಅಲ್ಲಿಂದ ಹೊರಟು ಹೋಗಿದ್ದಾಗಿ ಗಾಡ್ರಿನ್‌ ದಿನಕರ್, ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು.ಕಾಲು ಜಾರಿ ಬಿದ್ದ ರಭಸಕ್ಕೆ ರಕ್ಷಿತ್ ಅವರ ಎದುರಿನ ಮೇಲ್ಬಾಗದ ಎರಡು ಹಲ್ಲು ತುಂಡಾಗಿರುತ್ತದೆ. ಗಾಯಗೊಂಡ ರಕ್ಷಿತ್ `ರನ್ನು ಭವಿತ್ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು.ತನಗೆ ಹಾಗೂ ಸ್ನೇಹಿತರಿಗೆ ತೊಂದರೆ ನೀಡಿ ಬೆದರಿಕೆ ಹಾಕಿ, ರಕ್ಷಿತ್ ಮೇಲೆ ಹಲ್ಲೆ ಮಾಡಲು ಬಂದ ಪ್ರಜ್ವಲ್ ಬಗ್ಗೆ ಪೊಲೀಸ್ ದೂರು ನೀಡಲು ತೀರ್ಮಾನಿಸಿ ಜೂ.10ರಂದು ದೂರು ನೀಡಿರುವುದಾಗಿ ಗಾಲ್ವಿನ್ ದಿನಕರ್ ದೂರಿನಲ್ಲಿ ತಿಳಿಸಿದ್ದಾರೆ.ಅವರು ನೀಡಿರುವ ದೂರಿನ ಮೇರೆಗೆ ಆರೋಪಿ ಪ್ರಜ್ವಲ್ ವಿರುದ್ಧ ಕಲಂ 341,504,506,324 ಐಪಿಸಿ ಹಾಗೂ 25(ಬಿ)(ಬಿ) ಆರ್ಮ್ಸ್ ಆಕ್ ನಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಆರೋಪಿ ಪೊಲೀಸ್‌ ವಶಕ್ಕೆ: ಆರೋಪಿ ಪ್ರಜ್ವಲ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಸೀದಿಯ ಬಳಿ ರಸ್ತೆಯಲ್ಲಿ ಬಿದ್ದಿದ್ದ ನಗದು ತುಂಬಿದ್ದ ಬ್ಯಾಗನ್ನು ವಾರಸುದಾರರಿಗೆ ಮರಳಿಸಿದ ಮುಸ್ಲಿಯಾರ್

Posted by Vidyamaana on 2024-05-30 22:47:11 |

Share: | | | | |


ಮಸೀದಿಯ ಬಳಿ ರಸ್ತೆಯಲ್ಲಿ ಬಿದ್ದಿದ್ದ ನಗದು ತುಂಬಿದ್ದ ಬ್ಯಾಗನ್ನು ವಾರಸುದಾರರಿಗೆ ಮರಳಿಸಿದ ಮುಸ್ಲಿಯಾರ್

ಬಂಟ್ವಾಳ : ಇಲ್ಲಿನ ಕೆಳಗಿನ ಪೇಟೆಯ ಕೇಂದ್ರ ಜುಮಾ ಮಸೀದಿಯ ಬಳಿ ರಸ್ತೆಯಲ್ಲಿ ಬಿದ್ದಿದ್ದ ನಗದು ತುಂಬಿದ್ದ ಬ್ಯಾಗನ್ನು ಸ್ಥಳೀಯ ಮದರಸದ ಮುಖ್ಯ ಶಿಕ್ಷಕರು ಅದರ ವಾರೀಸುದಾರರಿಗೆ ಹಿಂದಿರುಗಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿರುವುದು ವರದಿಯಾಗಿದೆ.

ಬಂಟ್ವಾಳ ನಿವಾಸಿ ಉದ್ಯಮಿ ಶ್ರೀಪತಿ ಶ್ರೀಕಾಂತ್ ಭಟ್ ಅವರು ಮಂಗಳವಾರ ಬೆಳಿಗ್ಗೆ ಬೈಕ್ ನಲ್ಲಿ ಬಂಟ್ವಾಳದಿಂದ ಬಿ.ಸಿ. ರೋಡಿಗೆ ಹೋಗುತ್ತಿದ್ದ ವೇಳೆ ಬಂಟ್ವಾಳ ಕೆಳಗಿನ ಪೇಟೆಯ ಕೇಂದ್ರ  ಜುಮಾ ಮಸೀದಿ ಬಳಿ ರೂಪಾಯಿ 2.43 ಲಕ್ಷ ತುಂಬಿದ್ದ ಬ್ಯಾಗ್ ರಸ್ತೆಯಲ್ಲಿ ಬಿದ್ದಿತ್ತು. ಇಲ್ಲಿನ  ಮನಾರುಲ್  ಇಸ್ಲಾಂ ಮದ್ರಸದ ಮುಖ್ಯ ಶಿಕ್ಷಕ ಮಜೀದ್ ಫೈಝಿ ಹಾಗೂ ಶಿಕ್ಷಕ ಆದಂ ಮದನಿ ಅವರು ತರಗತಿ ಮುಗಿದ ಬಳಿಕ ವಿದ್ಯಾರ್ಥಿಗಳನ್ನು ರಸ್ತೆ ದಾಟಿಸುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಬ್ಯಾಗೊಂದು ಬಿದ್ದು ಕಂಡಿದ್ದು ಅದನ್ನು ನೋಡಿದಾಗ ನಗದು ತುಂಬಿತ್ತು. ಅದನ್ನು ಜೋಪಾನವಾಗಿ ಇರಿಸಿಕೊಂಡ ಅವರು ನನಗೊಂದು ನಗದು ತುಂಬಿದ ಬ್ಯಾಗ್ ರಸ್ತೆಯಲ್ಲಿ ಸಿಕ್ಕಿರುತ್ತದೆ, ಕಳೆದುಕೊಂಡವರು ಇದ್ದಲ್ಲಿ ನನ್ನನ್ನು ಸಂಪರ್ಕಿಸಲಿ ಎಂದು ಸ್ಥಳೀಯರಿಗೆ ಮಾಹಿತಿ ನೀಡಿದ್ದರು.

ಹಳ್ಳಕ್ಕೆ ಉರುಳಿ ಬಿದ್ದ ಕಾರು - ಮೂವರು ಯುವಕರ ದುರ್ಮರಣ

Posted by Vidyamaana on 2024-02-05 07:21:13 |

Share: | | | | |


ಹಳ್ಳಕ್ಕೆ ಉರುಳಿ ಬಿದ್ದ ಕಾರು - ಮೂವರು ಯುವಕರ ದುರ್ಮರಣ

ಮಂಡ್ಯ : ರಸ್ತೆ ಬದಿಯ ಹಳ್ಳಕ್ಕೆ ಕಾರು ಉರುಳಿ ಬಿದ್ದು ಮೂವರು ಯುವಕರು ದುರ್ಮರಣಕ್ಕೀಡಾಗಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಬಳಿ ನಡೆದಿದೆ. ಕೆ.ಆರ್ ಪೇಟೆ ಪಟ್ಟಣದ ಅನಿಚಿತ್, ಪವನ್ ಶೆಟ್ಟಿ ಹಾಗೂ ಚಿರು ಮೃತ ದುರ್ದೈವಿಗಳು. ಶನಿವಾರ ರಾತ್ರಿ ಮೂವರೂ ಹೋಂಡಾ ಸಿಟಿ ಕಾರಿನಲ್ಲಿ ಕೆ ಆರ್ ಪೇಟೆ - ಭೇರ್ಯ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಅಕ್ಕಿ ಹೆಬ್ಬಾಳು ಸೇತುವೆ ಬಳಿ ನಿಯಂತ್ರಣ ತಪ್ಪಿದ ಕಾರು ಹಳ್ಳಕ್ಕೆ ಉರುಳಿ ಬಿದ್ದಿದೆ.ತಕ್ಷಣ ಸ್ಥಳೀಯರು ರಕ್ಷಣೆಗೆ ಮುಂದಾದರಾದರೂ ತೀವ್ರ ಗಾಯಗೊಂಡಿದ್ದ ಮೂವರು ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕೆ.ಆರ್ ಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಮೂವರು ಯುವಕರು ಅಪಘಾತ ನಡೆದ ಸ್ಥಳದಲ್ಲಿ ಶೋಕ ಮಡುಗಟ್ಟಿದ್ದು, ಮೃತರ ಮನೆಯವರ ಆಕ್ರಂದನ ಕರಳು ಹಿಂಡುವಂತಿತ್ತು.

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳೇ ಗಮನಿಸಿ : ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಆನ್‌ಲೈನ್‌ ಅರ್ಜಿ ಅಹ್ವಾನ

Posted by Vidyamaana on 2024-04-13 17:38:35 |

Share: | | | | |


ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳೇ ಗಮನಿಸಿ : ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಆನ್‌ಲೈನ್‌ ಅರ್ಜಿ ಅಹ್ವಾನ

ಬೆಂಗಳೂರು: ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಆನ್‌ಲೈನ್‌ ಅರ್ಜಿ ಅಹ್ವಾನಿಸಲಾಗಿದೆ


ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ 200 ಮೌಲಾನಾ ಆಜಾದ್ ಮಾದರಿ ಶಾಲೆಗಳು ಆಂಗ್ಲ ಮಾಧ್ಯಮದಲ್ಲಿ ರಾಜ್ಯಪಠ್ಯಕ್ರಮವನ್ನು ಅಳವಡಿಸಿಕೊಂಡು 6 ರಿಂದ 10 ನೇ ತರಗತಿಯವರೆಗೆ ಕಾರ್ಯನಿರ್ವಹಿಸುತ್ತಿರುತ್ತವೆ.

ಬನ್ಸ್‌ ರಾಘು ಕೊಲೆ ಪ್ರಕರಣ; ಶಿವಮೊಗ್ಗ ಮೂಲದ ಇಬ್ಬರ ಬಂಧನ

Posted by Vidyamaana on 2023-10-06 21:44:14 |

Share: | | | | |


ಬನ್ಸ್‌ ರಾಘು ಕೊಲೆ ಪ್ರಕರಣ; ಶಿವಮೊಗ್ಗ ಮೂಲದ ಇಬ್ಬರ ಬಂಧನ

ಕುಂದಾಪುರ: ಇಲ್ಲಿನ ನಗರದಲ್ಲಿ ರವಿವಾರ ಸಂಜೆ ಚೂರಿ ಇರಿತದಿಂದ ರಾಘವೇಂದ್ರ ಶೇರುಗಾರ್‌ ಕೊಲೆಗೆ ಸಂಬಂಧಿಸಿದ ಶಿವಮೊಗ್ಗ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ನಗರದ ಚಿಕ್ಕನ್‌ಸಾಲ್‌ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್‌ ಬಳಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಘವೇಂದ್ರ ಶೇರುಗಾರ್‌ ಯಾನೆ ಬನ್ಸ್‌ ರಾಘು (42) ಸೋಮವಾರ ಮೃತಪಟ್ಟಿದ್ದರು.

ಅಪರಿಚಿತರಿಂದಲೇ ಕೃತ್ಯ


ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?



ಕೊಲೆಯಾದ ಬಳಿಕ ರಾಘವೇಂದ್ರ ಅವರಿಗೂ ಕೊಲೆಗಡುಕರಿಗೂ ಪರಿಚಯ ಇತ್ತು, ಹಳೆ ವೈಷಮ್ಯ ಇತ್ತು, ಹಣದ ವ್ಯವಹಾರದಲ್ಲಿ ತಕರಾರು ಇತ್ತು ಎಂದೆಲ್ಲ ಪುಕಾರುಗಳು ಹಬ್ಬಿದ್ದವು. ಆದರೆ ಕಾರುಗಳು ಪರಸ್ಪರ ಸ್ಪರ್ಶಿಸಿಕೊಂಡಲ್ಲಿಂದ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿತ್ತು ಎಂದು ಗೊತ್ತಾಗಿದೆ. ಕೊಲೆ ಆರೋಪಿಗಳು ಬನ್ಸ್‌ ರಾಘು ಅವರಿಗೆ ಪರಿಚಿತರಲ್ಲ ಎನ್ನುವುದೂ ತನಿಖೆ ವೇಳೆ ಬಯಲಾಗಿದೆ.ಪೂರ್ವದ್ವೇಷ ಇರಲಿಲ್ಲ


ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?


ಮೊದಲಿಗೆ ಪೂರ್ವ ದ್ವೇಷದಿಂದಲೇ ರಾಘವೇಂದ್ರ ಅವರ ಹತ್ಯೆಗೆ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದು ಪೂರ್ವ ದ್ವೇಷದ ಕೃತ್ಯವಲ್ಲ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.


ಕ್ಷಿಪ್ರ ಪತ್ತೆಗೆ ಮೂರು ತಂಡ


ಆರೋಪಿ ಶಿವಮೊಗ್ಗ ಮೂಲದವ ಎಂದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಪಿ ಅವರು ಆರೋಪಿಗಳ ಪತ್ತೆಗೆ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ, ವೃತ್ತ ನಿರೀಕ್ಷಕ ನಂದಕುಮಾರ್‌ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ್‌ ನೇತೃತ್ವದಲ್ಲಿ 3 ವಿಶೇಷ ತಂಡಗಳನ್ನು ರಚಿಸಿದ್ದರು. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸೂಕ್ತ ಸುಳಿವು ಇಲ್ಲದಿದ್ದರೂ, ಸಾಕ್ಷ್ಯಗಳು ದೊರೆಯದಂತೆ ಆರೋಪಿಗಳು ಪರಾರಿಯಾಗಿದ್ದರೂ, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.


ಅಪಘಾತ ಕಾರಣ!


ಸಂಗಮ್‌ ಬಳಿಯಿಂದ ಬರುತ್ತಿದ್ದ ವ್ಯಾಗನರ್‌ ಕಾರು ಹಾಗೂ ರಾಘು ಅವರ ಕಾರು ತುಸು ಸ್ಪರ್ಶವಾಗಿತ್ತು. ಈ ಸಂದರ್ಭ ಸಣ್ಣ ಮಾತಿನ ಚಕಮಕಿಯಲ್ಲಿ ಮುಗಿಯಬಹುದಾಗಿದ್ದ ಪ್ರಕರಣ ಹಿಂಬಾಲಿಸಿಕೊಂಡು ಬಂದು ಜಗಳ ಮಾಡುವಲ್ಲಿಗೆ ತಲುಪಿದೆ. ಪರಸ್ಪರ ಹಲ್ಲೆ ನಡೆದಿತ್ತು. ನಡೆಯುತ್ತಿದ್ದ ಜಗಳವನ್ನು ಸ್ಥಳೀಯರು ಬಿಡಿಸಿ ಒಂದು ಹಂತದಲ್ಲಿ ಪ್ರಕರಣ ಮುಗಿವಲ್ಲಿಗೆ ತಲುಪಿತ್ತಾದರೂ, ಮತ್ತೆ ಹೊಡೆದಾಟ ನಡೆದು ಚೂರಿ ಹಾಕುವಲ್ಲಿಯವರೆಗೆ ಹೋಗಿ ಕೊಲೆಯಾಗುವ ಹಂತ ತಲುಪಿತ್ತು.


ದುಶ್ಚಟವೇ ಅವರ ಹವ್ಯಾಸ!


ಆರೋಪಿಗಳು ಶಿವಮೊಗ್ಗದವರಾಗಿದ್ದು, ಈ ಪೈಕಿ ಒಬ್ಬನಿಗೆ ಉಡುಪಿ ಜಿಲ್ಲೆಯಿಂದ ವಿವಾಹವಾಗಿದೆ. ಕುಂದಾಪುರ, ಭಟ್ಕಳ ಪರಿಸರ ಸೇರಿದಂತೆ ವಿವಿಧೆಡೆ ಜುಗಾರಿ, ಇಸ್ಪೀಟ್‌ ಆಡುವುದು ಇವರ ದುಶ್ಚಟ. ಹಾಗೆ ಸೆ. 29ರಂದು ಕುಂದಾಪುರಕ್ಕೆ ಬಂದು ಇಲ್ಲಿನ ನಗರದ ಲಾಡ್ಜ್ ಒಂದರಲ್ಲಿ ತಂಗಿದ್ದ ಆರೋಪಿಗಳು ಕೋಣಿ ಪ್ರದೇಶದ ಮನೆಯೊಂದರಲ್ಲಿ ನಡೆಯುತ್ತಿದ್ದ ಜುಗಾರಿ ಆಟದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಜುಗಾರಿ ಮುಗಿಸಿ ಮರಳಿ ಬರುವಾಗ ಈ ದುರ್ಘ‌ಟನೆ ನಡೆದಿದೆ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.

8ಕ್ಕೂ ಅಧಿಕ ಕ್ರಿಮಿನಲ್‌ ಪ್ರಕರಣ

ಆರೋಪಿಗಳ ಪೈಕಿ ಒಬ್ಟಾತನ ಮೇಲೆ 8ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳಿವೆ ಎನ್ನಲಾಗಿದೆ. ಚೂರಿ ಹಿಡಿದುಕೊಂಡೇ ತಿರುಗಾಡುವ ಈತ ಸಣ್ಣಪುಟ್ಟ ಜಗಳಗಳಲ್ಲೂ ಚೂರಿ ಝಳಪಿಸುವವನಾಗಿದ್ದ. ಕೆಲವು ಸಮಯಗಳ ಹಿಂದೆ ಆಗುಂಬೆಯಲ್ಲಿ ಅಪಘಾತ ಸಂಭವಿಸಿದಾಗ ನಡೆದ ಜಗಳದಲ್ಲೂ ಒಬ್ಬರಿಗೆ ಚೂರಿಯಿಂದ ಈತ ಇರಿದಿದ್ದ ಎಂಬ ಮಾಹಿತಿಯಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಇಲ್ಲಿ ಕೊಲೆಯಲ್ಲಿ ಪರ್ಯಾವಸನವಾಗಿದೆ.



Leave a Comment: