ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ರಾಜ್ಯಾದ್ಯಂತ ವ್ಯಾಪಿಸುತ್ತಿದೆ ಸಾಂಕ್ರಾಮಿಕ ಡೆಂಗ್ಯೂ - ಎಚ್ಚರ ಇರಲಿ : ರಾಜ್ಯದ ಜನರಿಗೆ ಸಿಎಂ ಮನವಿ

Posted by Vidyamaana on 2023-09-11 16:32:51 |

Share: | | | | |


ರಾಜ್ಯಾದ್ಯಂತ ವ್ಯಾಪಿಸುತ್ತಿದೆ ಸಾಂಕ್ರಾಮಿಕ ಡೆಂಗ್ಯೂ - ಎಚ್ಚರ ಇರಲಿ : ರಾಜ್ಯದ ಜನರಿಗೆ ಸಿಎಂ ಮನವಿ

ಬೆಂಗಳೂರು : ಕಳೆದ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ಅತ್ಯಧಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.ರಾಜ್ಯಾದ್ಯಂತ ಕಳೆದ ಕೆಲವು ದಿನಗಳಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಕಂಡುಬಂದಿದೆ. ಹೀಗಾಗಿ ಎಲ್ಲರೂ ಮನೆ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಿ, ಸೊಳ್ಳೆ ಕಡಿತದ ಬಗ್ಗೆ ಎಚ್ಚರಿಕೆ ವಹಿಸುವಂತೆ ಅವರು ಹೇಳಿದ್ದಾರೆ.ಡೆಂಗ್ಯೂ ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪಡಣೆ, ನೀರು ಶೇಖರಣೆಯಾಗುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವುದು ಸೇರಿದಂತೆ ಸೊಳ್ಳೆ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಡೆಂಗ್ಯೂ ಬಗ್ಗೆ ಭಯ ಬೇಡ, ಆದರೆ ಜಾಗೃತೆ ವಹಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಾಹನ ಸವಾರರೇ ಗಮನಿಸಿ: HSRP ಪಡೆಯಲು ತೊಂದರೆಗಳಾದಲ್ಲಿ ಈ ನಂಬರ್‌ಗೆ ಕರೆ ಮಾಡಿ!

Posted by Vidyamaana on 2024-02-19 08:42:36 |

Share: | | | | |


ವಾಹನ ಸವಾರರೇ ಗಮನಿಸಿ: HSRP ಪಡೆಯಲು ತೊಂದರೆಗಳಾದಲ್ಲಿ ಈ ನಂಬರ್‌ಗೆ ಕರೆ ಮಾಡಿ!

ಬೆಂಗಳೂರು : ರಾಜ್ಯದಲ್ಲಿ 1ನೇ ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (High Security Registration Plates - HSRP) ಅಳವಡಿಸುವುದು ಕಡ್ಡಾಯವಾಗಿದ್ದು, ಹೆಚ್‍ಎಸ್‍ಆರ್‍ಪಿ ಅಳವಡಿಕೆಗೆ ಫೆಬ್ರವರಿ 17 ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಮೇ 31 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.ಸಾರ್ವಜನಿಕರು ಆನ್‍ಲೈನ್ ಮೂಲಕ ಹೆಚ್.ಎಸ್.ಆರ್.ಪಿ. ಪಡೆಯಲು ತೊಂದರೆಗಳಾದಲ್ಲಿ ದೂರವಾಣಿ ಸಂಖ್ಯೆ 94498 63429, 94498 63429 ಮೂಲಕ ಸಹಾಯವಾಣಿಯನ್ನು ಕಛೇರಿ ಕಾರ್ಯದ ಸಮಯ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಸಂಪರ್ಕಿಸಬಹುದಾಗಿದೆ.


ಸಾರ್ವಜನಿಕರು https://transport.karnataka.gov.in ಅಥವಾ www.siam.in ಗೆ ತಮ್ಮ ವಾಹನಗಳಿಗೆ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಲು ಆನ್‍ಲೈನ್ ಮೂಲಕ ವಿವರಗಳನ್ನು ಒದಗಿಸಿ ಹೆಚ್‍ಎಸ್‍ಆರ್‍ಪಿ ಅಳವಡಿಸುವ ದಿನಾಂಕ, ವಾಹನ ಡೀಲರ್ ಕೇಂದ್ರದ ಹೆಸರು ಮತ್ತು ವಿಳಾಸವನ್ನು ಖಚಿತ ಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.ಈ ವೆಬ್-ಸೈಟ್ ಮೂಲಕ ಹೆಚ್‍ಎಸ್‍ಆರ್‍ಪಿ ಅಳವಡಿಸಿದ್ದಲ್ಲಿ ಮಾತ್ರ ಹೆಚ್‍ಎಸ್‍ಆರ್‍ಪಿ ನೋಂದಣಿ ಫಲಕಗಳು ಮಾನ್ಯತೆ ಹೊಂದಿರುತ್ತವೆ. ಇನ್ನಿತರೆ ಯಾವುದೇ ವೆಬ್ ಪೋರ್ಟಲ್ ಉಪಯೋಗಿಸಿ ಬುಕ್ ಮಾಡಿದ್ದಲ್ಲಿ ಅವುಗಳು ಅನಧಿಕೃತ ನೋಂದಣಿ ಫಲಕಗಳಾಗುತ್ತವೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸಕರ ಇಂದಿನ ಕಾರ್ಯಕ್ರಮ ಆ 23

Posted by Vidyamaana on 2023-08-23 01:24:41 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 23

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 23 ರಂದು

ಬೆಳಿಗ್ಗೆ 10 ಗಂಟೆಗೆ ಕೋಡಿಂಬಾಡಿ ಗ್ರಾಪಂ ನೂತನ ಆಡಳಿತ ಪದಗ್ರಹಣ ಸಮಾರಂಭ

11 ಗಂಟೆಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಂದಾಯ ಇಲಾಖಾ ಅಧಿಕಾರಿಗಳ ಸಭೆ

ಸಂಜೆ 4 ಗಂಟೆಗೆ ಮಂಗಳೂರಿನಲ್ಲಿ ಸಭೆ

ಎಸ್.ಡಿ.ಪಿ.ಐ ಉಪ್ಪಿನಂಗಡಿ ಇಳಂತಿಳ ಬ್ಲಾಕ್ ಸಮಿತಿ ವತಿಯಿಂದ ಪಕ್ಷದ ಸಮಾವೇಶ

Posted by Vidyamaana on 2023-10-23 12:02:52 |

Share: | | | | |


ಎಸ್.ಡಿ.ಪಿ.ಐ ಉಪ್ಪಿನಂಗಡಿ  ಇಳಂತಿಳ ಬ್ಲಾಕ್ ಸಮಿತಿ ವತಿಯಿಂದ ಪಕ್ಷದ ಸಮಾವೇಶ

ಊಪ್ಪಿನಂಗಡಿ: ಎಸ್.ಡಿ.ಪಿ.ಐ ಉಪ್ಪಿನಂಗಡಿ ಬ್ಲಾಕ್  ಮತ್ತು ಇಳಂತಿಳ ಜಂಟಿ ಸಮಿತಿಗಳ ವತಿಯಿಂದ ಕಾರ್ಯಕರ್ತರೊಂದಿಗೆ ಪಕ್ಷದ ಸಮಾವೇಶವು ಅ 22 ರಂದು ಎಚ್.ಎಂ ಆಡಿಟೋರಿಯಂ ನಲ್ಲಿ ನಡೆಯಿತು.


ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಮಾತನಾಡಿ ಪಕ್ಷದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ವಿಚಾರಗಳ ವಿನಿಮಯ ಮಾಡಿದರು.ಪಕ್ಷವು ಹಲವಾರು ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸಿದರೂ ಕೂಡ ಇಷ್ಟು ಬಲಿಷ್ಟ ವಾಗಿರಲು ಕಾರಣ ನಾಯಕರುಗಳ ಮತ್ತು ಬೂತ್ ಮಟ್ಟದ ಕ್ಯಾಡರ್ ಗಳ ತ್ಯಾಗ ಬಲಿದಾನವಾಗಿದೆ  ಎಂದರು. 

ಎಸ್.ಡಿ‌.ಪಿ.ಐ ದ.ಕ ಜಿಲ್ಲಾ ಅಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಸಾಂದರ್ಭಿಕವಾಗಿ  ಮಾತನಾಡಿದರು.

ವೇದಿಕೆಯಲ್ಲಿ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಹಮೀದ್ ಸಾಲ್ಮರ, ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಉಸ್ಮಾನ್ ಎಕೆ,ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಸದಸ್ಯರಾದ ಅಡ್ವೊಕೇಟ್ ಅಬ್ದುಲ್ ರಹಿಮಾನ್,ಎಸ್.ಡಿ.ಪಿ.ಐ ಉಪ್ಪಿನಂಗಡಿ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಮುಸ್ತಫಾ ಲತೀಫಿ,ಎಸ್.ಡಿ.ಪಿ.ಐ ಬೆಳ್ತಂಗಡಿ ತಾಲ್ಲೂಕು ಸಮಿತಿಯ ಕಾರ್ಯದರ್ಶಿ ನಿಸಾರ್ ಕುದ್ರಡ್ಕ,ಎಸ್.ಡಿ.ಪಿ.ಐ ಇಳಂತಿಳ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಪೈಸಲ್ ಮುರುಗೋಳಿ ಸೇರಿದಂತೆ ನಾಯಕರು,ಪಕ್ಷದ ಕ್ಯಾಡರ್ ಗಳು ಉಪಸ್ಥಿತರಿದ್ದರು.

ತುಂಡುಡುಗೆ ಧರಿಸುತ್ತಿದ್ದಾಳೆ ಎಂಬ ಕೋಪಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

Posted by Vidyamaana on 2023-12-31 16:41:49 |

Share: | | | | |


ತುಂಡುಡುಗೆ ಧರಿಸುತ್ತಿದ್ದಾಳೆ ಎಂಬ ಕೋಪಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

ಹಾಸನ: ಬಟ್ಟೆ ಧರಿಸುವ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಕಲಹ ನಡೆದಿದೆ. ಈ ವೇಳೆ ಪತಿಯೇ ಪತ್ನಿಯನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ (Arsikere) ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಜ್ಯೋತಿ (22) ಕೊಲೆಯಾದ ಮಹಿಳೆ, ರಾಂಪುರ ಗ್ರಾಮದ ನಿವಾಸಿ ಜೀವನ್ (25) ಪತ್ನಿ ಕೊಲೆಗೈದ ಆರೋಪಿ.ಜೀವನ್‌, ಜ್ಯೋತಿ ಈ ಹಿಂದೆ ಗಾರ್ಮೆಂಟ್ಸ್‌ನಲ್ಲಿ ಪರಸ್ಪರ ಕೆಲಸ ಮಾಡುತ್ತಿದ್ದಾಗಲೇ ಪ್ರೀತಿಸಿ ಮದುವೆ ಯಾಗಿದ್ದರು (Love Marriage). ಕಳೆದ 6 ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದಾ ಮಾಡ್ರನ್‌ ಡ್ರೆಸ್‌ ಧರಿಸುತ್ತಿದ್ದ ಜ್ಯೋತಿ ಬೋಲ್ಡ್‌ ಆಗಿ ಇರುತ್ತಿದ್ದರು. ಇದೇ ಕಾರಣಕ್ಕೆ ಪತಿ ಜೀವನ್‌ ಕೋಪಗೊಂಡಿದ್ದ, ಅನುಮಾನ ಪಟ್ಟು ಜಗಳವಾಡಿದ್ದ.


ಶನಿವಾರ ಸಂಜೆಯು ಸಹ ಮಾಡ್ರನ್‌ ಡ್ರೆಸ್‌ ಹಾಕಿಕೊಂಡು ಜ್ಯೋತಿ ಹೊರಗೆ ಹೊರಟಿದ್ದಳು. ಆಗಲೂ ಜೀವನ್‌ ವಿರೋಧಿಸಿದ್ದ, ಕೊನೆಗೆ ಬೈಕ್‌ನಲ್ಲಿ ಡ್ರಾಪ್‌ ಕೊಡುವುದಾಗಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದ ಜೀವನ್‌ ಚಾಕುವಿನಿಂದ ಕುತ್ತಿಗೆ ಕೊಯ್ದು ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ಎಸ್ಕೇಪ್‌ ಆಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅರಸೀಕೆರೆ ತಾಲೂಕಿನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಕ್ಕಳನ್ನು ಗುಂಡಿಟ್ಟು ಕೊಲ್ಲಿ: ಪೊಲೀಸ್‌ ಆಯುಕ್ತರ ಎದುರು ತಂದೆ ಕಣ್ಣೀರು

Posted by Vidyamaana on 2024-08-22 07:41:17 |

Share: | | | | |


ಮಕ್ಕಳನ್ನು ಗುಂಡಿಟ್ಟು ಕೊಲ್ಲಿ: ಪೊಲೀಸ್‌ ಆಯುಕ್ತರ ಎದುರು ತಂದೆ ಕಣ್ಣೀರು

ಹುಬ್ಬಳ್ಳಿ: ನಾನು ಕಳೆದ 40 ವರ್ಷಗಳಿಂದ‌ ಕಷ್ಟಪಟ್ಟು ಬೆಳೆಸಿದ್ದೇನೆ, ಆದರೆ ಅವರು ನಮ್ಮ ಮನೆತನದ ಮಾನ-ಮರ್ಯಾದೆ ಹಾಳು ಮಾಡಿದ್ದಾರೆ. ಅವರನ್ನು ಗುಂಡಿಟ್ಟು ಕೊಲ್ಲಿ. ಬೇಕಾದರೆ ಬರೆದುಕೊಡುವೆ ಎಂದು ನಗರದಲ್ಲಿ ತಂದೆಯೊಬ್ಬ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಎದುರು ಕಣ್ಣೀರು ಹಾಕಿದ್ದಾರೆ.ಈ ವಿಡಿಯೋ ಈಗ ವೈರಲ್ ಆಗಿದೆ.

ಹಳೇಹುಬ್ಬಳ್ಳಿ ಸದರಸೋಪಾ ಬ್ಯಾಹಟ್ಟಿ ಪ್ಲಾಟ್ ನಿವಾಸಿ ಗೌಸಸಾಬ ಕರಡಿಗುಡ್ಡ ಎಂಬವರು ಮಕ್ಕಳಿಬ್ಬರ‌ ನಡತೆ ಬಗ್ಗೆ ಪೊಲೀಸ್ ಆಯುಕ್ತರ ಎದುರು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.

ರವಿವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್‌ವಾರ್‌ ಘಟನೆಗೆ ಸಂಬಂಧಿಸಿ ಕಸಬಾಪೇಟೆ ಪೊಲೀಸರು ಸೋಮವಾರ ಬೆಳಗ್ಗೆ ಬುಡರಸಿಂಗಿ ಬಳಿಯ ರಿಂಗ್ ರಸ್ತೆಯಲ್ಲಿ ಗೌಸಸಾಬ್‌ ಅವರ ಮಗನಾದ ಅಫ್ತಾಬ್ ಮತ್ತು ಶಾಹಬಾದ್‌ನನ್ನು ವಶಕ್ಕೆ ಪಡೆಯಲು ಹೋದಾಗ ಅಫ್ತಾಬ್‌ನು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.



Leave a Comment: