ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ತಿಂಗಳಿಗೆ 8,500ರೂ ಪಡೆಯಲು ಪೋಸ್ಟ್ ಆಫೀಸ್ ಮುಂದೆ ಸಾಲುಗಟ್ಟಿ ಮಹಿಳೆಯರು

Posted by Vidyamaana on 2024-05-29 16:19:09 |

Share: | | | | |


ತಿಂಗಳಿಗೆ 8,500ರೂ ಪಡೆಯಲು ಪೋಸ್ಟ್ ಆಫೀಸ್ ಮುಂದೆ ಸಾಲುಗಟ್ಟಿ ಮಹಿಳೆಯರು

ಬೆಂಗಳೂರು : ಅಧಿಕಾರಕ್ಕೆ ಬಂದರೆ ರಕ್ಷಣಾ ಸೇವೆಗಳ ನೇಮಕಾತಿಯ ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸಿ, ಪ್ರತಿ ತಿಂಗಳು ಪ್ರತಿ ಮಹಿಳೆಯ ಖಾತೆಗೆ 8,500 ರೂ.ಗಳನ್ನು ಜಮಾ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ಬಿಹಾರದಲ್ಲಿ ಮಹಾಘಟಬಂಧನ್ ಅಭ್ಯರ್ಥಿಗಳ ಪರವಾಗಿ ಬ್ಯಾಕ್ ಟು ಬ್ಯಾಕ್ ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ಇಂಡಿಯಾ ಮೈತ್ರಿ ಕೂಟದ ಪರವಾಗಿ ಸ್ಪಷ್ಟ ಅಲೆ ಇರುವುದರಿಂದ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಪಾದಿಸಿದರು.

ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ ಪವಿತ್ರ ; ಕಂತೆ ಕಂತೆ ನೋಟುಗಳ ವಿಡಿಯೋ ನೋಡಿ ಹಣ ಕಳೆದುಕೊಂಡ ಜನ

Posted by Vidyamaana on 2024-02-10 08:32:44 |

Share: | | | | |


ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ ಪವಿತ್ರ ; ಕಂತೆ ಕಂತೆ ನೋಟುಗಳ ವಿಡಿಯೋ ನೋಡಿ ಹಣ ಕಳೆದುಕೊಂಡ ಜನ

ಆನೇಕಲ್, ಫೆ.10: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹಾಗೂ ಆರ್​ಬಿಐ (RBI) ಹೆಸರು ಹೇಳಿಕೊಂಡು ಬ್ಯಾಂಕ್​ಗಳಿಂದ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬಳು ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನಲ್ಲಿ ನಡೆದಿದೆ. ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡಿರುವ ತಮಿಳುನಾಡಿನ ಹೊಸೂರು ಮೂಲದ ಪವಿತ್ರ ಆ್ಯಂಡ್ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.ಟ್ರಸ್​​ಗೆ ಆರ್​ಬಿಐನಿಂದ 17 ಕೋಟಿ ಬಂದಿರುವುದಾಗಿ ಹಾಗೂ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರ ಸಹಿ ಇರುವ ನಕಲಿ ಕಾಪಿ ತೋರಿಸಿ ಚಂದಾಪುರು, ಅತ್ತಿಬೆಲೆ, ಹೊಸೂರು, ಧರ್ಮಪುರಿ ಸೇರಿದಂತೆ ಹಲವು ಕಡೆಗಳಲ್ಲಿ ನೂರಾರು ಜನವರಿಗೆ ವಂಚಿಸಿದ್ದಾಳೆ.ಕಂತೆ ಕಂತೆ ಹಣದ ನೋಟುಗಳ ವಿಡಿಯೋಗಳನ್ನ ಕಳುಹಿಸಿ ಜನರನ್ನು ಮರುಳು ಮಾಡಿದ ಪವಿತ್ರಾ, ಒಬ್ಬರಿಗೆ 10 ಲಕ್ಷ ಲೋನ್ ನೀಡಿದರೆ ಅದರಲ್ಲಿ ಐದು ಲಕ್ಷ ಸಬ್ಸಿಡಿ ಎಂದು ನಂಬಿಸಿದ್ದಳು. ಲೋನ್ ಬೇಕು ಅಂದರೆ ಮೊದಲು ಹಣ ಡೆಪಾಸಿಟ್ ಮಾಡಬೇಕೆಂದು ಕಥೆ ಕಟ್ಟಿದ್ದಾಳೆ. ಇದನ್ನು ನಂಬಿದ ಜನರು ಲಕ್ಷಾಂತರ ರೂಪಾಯಿ ಹಣ ನೀಡಿದ್ದಾರೆ. ಕೆಲವರು ಸಾಲ ಮಾಡಿ ಹಣ ನೀಡಿದ್ದಾರೆ.ಆದರೆ, ಕೆಲವು ತಿಂಗಳಾದರೂ ಲೋನ್ ಬಾರದೆ ಇದ್ದಾಗ ವಂಚಕಿ ಪವಿತ್ರಾಳ ಕಳ್ಳಾಟ ಬಯಲಾಗಿದೆ. ಸಾಲದ ಸುಲಿಗೆ ಸಿಲುಕಿದ ಅಮಾಯಕ ಜನರು ಬೀದಿಪಾಲಾಗಿದ್ದಾರೆ. ಪ್ರಕರಣ ಸಂಬಂಧ ಸೂರ್ಯನಗರ, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪವಿತ್ರ, ಪ್ರವೀಣ್, ಯಲ್ಲಪ್ಪ, ಶೀಲ, ರುಕ್ಮಿಣಿ, ರಾಧ, ಮಮತಾ, ನೆಹರೂಜಿ, ಶರತ್ ಕುಮಾರ್, ಸತೀಶ್, ಮಂಜುಳಾ, ಹಾಲ್ಬರ್ಟ್ ಮಾರ್ಟಿನ್, ಹೇಮಲತಾ, ಶಾಲಿನಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾ.23 ಗುರುವಾರ ಪವಿತ್ರ ರಂಝಾನ್ ಉಪವಾಸ ಆರಂಭ

Posted by Vidyamaana on 2023-03-22 15:07:52 |

Share: | | | | |


ಮಾ.23 ಗುರುವಾರ ಪವಿತ್ರ ರಂಝಾನ್ ಉಪವಾಸ ಆರಂಭ

ಮಂಗಳೂರು: ಪವಿತ್ರ ರಮಝಾನ್‌ನ ಪ್ರಥಮ ಚಂದ್ರದರ್ಶನವು ಬುಧವಾರ ಆಗಿರುವುದರಿಂದ ಗುರುವಾರದಿಂದ ರಮಝಾನ್ ಉಪವಾಸ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಪುತ್ತೂರು :ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಫೀಝ ಹೃದಯಾಘಾತಕ್ಕೆ ಬಲಿ

Posted by Vidyamaana on 2024-02-16 08:59:27 |

Share: | | | | |


ಪುತ್ತೂರು :ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಫೀಝ ಹೃದಯಾಘಾತಕ್ಕೆ ಬಲಿ

ಪುತ್ತೂರು : ಕಾಲೇಜು ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮಲಗಿದ್ದಲ್ಲೇ ಮೃತಪಟ್ಟ ಘಟನೆ 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ನಡೆದಿದೆ.

ಕೆ.ಎ. ಸ್ಟೋರ್ ಮಾಲಕ ದಾವೂದು ಎಂಬವರ ಪುತ್ರಿ ಹಫೀಝ (17) ಮೃತ ಬಾಲಕಿ.

ಹಫೀಝ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದು, ಇಂದು ಬೆಳಗ್ಗೆ ಎದ್ದೇಳುವಾಗ ಮೃತಪಟ್ಟಿದ್ದಳು.

ಮಲಗಿದಲ್ಲೇ ಹೃದಯಾಘಾತಕ್ಕೀಡಾಗಿ ಹಫೀಝ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಮೃತಳು ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾಳೆ.

ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಅರಳಿದ ಪೂಕಳಂ

Posted by Vidyamaana on 2023-08-29 11:51:13 |

Share: | | | | |


ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಅರಳಿದ ಪೂಕಳಂ

ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ 16 ನೇ ವರ್ಷದ ಓಣಂ ಹಬ್ಬವನ್ನು ಆಚರಿಸಲಾಯಿತು. 

ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದವರು ಸೇರಿ ಪೂಕಳಂ ರಚಿಸಿದ್ದು ಸಂಸ್ಥೆಯ ಸಂಚಾಲಕರಾದ ಗೋಕುಲ್ನಾಥ್ ಪಿ. ವಿ. ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಗೋಕುಲ್ನಾಥ್ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಓಣಂ ಹಬ್ಬದ ಆಚರಣೆಗೆ ಚಾಲನೆ ನೀಡಲಾಯಿತು.

ಸಂಸ್ಥೆಯ ಉಪನ್ಯಾಸಕಿಯರಾದ ಅನುಪಮ ಇವರು ಓಣಂ ಹಬ್ಬವನ್ನು ಆಚರಿಸುವ ರೀತಿಯ ಕುರಿತು ತಿಳಿಸಿದರು.

ಹಾಸ್ಟೆಲ್ ವಾರ್ಡನ್ ಆಗಿರುವ ಕಲಾವತಿ ಇವರು ಮಾತನಾಡಿ, ‘ಓಣಂ ಹಬ್ಬದಲ್ಲಿರುವ ವಿಶೇಷ ಖಾದ್ಯದ ಹಾಗೂ ಆಚರಣೆಯ ಕುರಿತು ಮಾಹಿತಿನೀಡಿದರು. ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್ನಾಥ್ ಅವರು ಮಾತನಾಡಿ, ‘ಈ ಹಬ್ಬದ ಆಚರಣೆಯು ನಿಮ್ಮಲ್ಲರ ಬದುಕಿನಲ್ಲಿ ಒಂದು ಸವಿ ನೆನಪಾಗಿ ಉಳಿಯಲಿ’ ಎಂದು ಹಾರೈಸಿದರು.

ಸಂಸ್ಥೆಯ ಮುಖ್ಯ ಶಿಕ್ಷಕಿ, ‘ಓಣಂ ಹಬ್ಬದ ಹೂವಿನ ಅಲಂಕಾರದಲ್ಲಿ ಬಳಸಿದ ವಿವಿಧ ಹೂವುಗಳಂತೆ ವಿದ್ಯಾರ್ಥಿಗಳ ಜೀವನವು ಸುಂದರವಾಗಲಿ’ ಎಂದು ಶುಭಹಾರೈಸಿದರು. ಕಛೇರಿ ಸಿಬ್ಬಂದಿಯಾದ ಶ್ರೀಮತಿ ಸುಷ್ಮಲತಾ ಮಾತನಾಡಿ ಶುಭಹಾರೈಸಿದರು.

ಸಂಸ್ಥೆಯ ಸಂಚಾಲಕರಾದ ಗೋಕುಲ್ನಾಥ್ ಪಿ. ವಿ. ಓಣಂ ಹಬ್ಬವನ್ನು ಕೇರಳದಲ್ಲಿ ಯಾಕೆ ಆಚರಿಸುತ್ತಾರೆ ಎನ್ನುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ‘ಕೇರಳದಲ್ಲಿ ಆಚರಿಸುವ ಅತೀ ದೊಡ್ಡ ಹಬ್ಬ ಓಣಂ ಆಗಿದ್ದು ಇದನ್ನು ಹತ್ತು ದಿನ ಆಚರಿಸುತ್ತಿದ್ದು ಹಬ್ಬದಲ್ಲಿ ವಿಶೇಷವಾಗಿ 24 ಬಗೆಯ ಖಾದ್ಯಗಳನ್ನು ಸವಿಯುದರ ಜತೆಗೆ ಮಹಾಬಲಿ ಚಕ್ರವರ್ತಿಯನ್ನು ವಿಶೇಷವಾಗಿ ಗೌರವಿಸುವುದು ಸಂಪ್ರದಾಯವಾಗಿದೆ ಎಂದು ತಿಳಿಸಿ ಓಣಂ ಹಬ್ಬದ ಶುಭಾಶಯವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪುತ್ತೂರು : ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ನಾಮಪತ್ರ ಸಲ್ಲಿಕೆ

Posted by Vidyamaana on 2023-04-20 20:51:39 |

Share: | | | | |


ಪುತ್ತೂರು : ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ನಾಮಪತ್ರ ಸಲ್ಲಿಕೆ

ಪುತ್ತೂರು : ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ರವರು ಚುನಾವಣಾಧಿಕಾರಿ ಗಿರೀಶ್ ನಂದನ್ ರವರಿಗೆ ನಾಮಪತ್ರ ಸಲ್ಲಿಸಿದರು.

ಈ ವೇಳೆ ಹಾಲಿ ಶಾಸಕ ಸಂಜೀವ ಮಠಂದೂರು, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸಹಿತ ಪ್ರಮುಖರು ಉಪಸ್ಥಿತರಿದ್ದರು

ಬೃಹತ್ ಸಂಖ್ಯೆಯ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಲಾಯಿತು.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಚಲನಚಿತ್ರ ನಟಿ ಶೃತಿ, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸಹಿತ ಹಲವಾರು ಮಂದಿ ಕೇಂದ್ರ ಮತ್ತು ರಾಜ್ಯದ ನಾಯಕರು, ಸಾವಿರಾರು ಮಂದಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಗೊಂಬೆ ಕುಣಿತ, ಚೆಂಡೆ, ಶಲ್ಯ ಧರಿಸಿದ ಕಾರ್ಯಕರ್ತರು, ಮಹಿಳೆಯರು, ನಾಸಿಕ್ ಬ್ಯಾಂಡ್ ವಿಶೇಷ ಆಕರ್ಷಣೆಯಾಗಿತ್ತು..



Leave a Comment: