ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಸುದ್ದಿಗಳು News

Posted by vidyamaana on 2024-07-25 19:32:58 | Last Updated by Vidyamaana on 2024-07-25 19:32:58

Share: | | | | |


ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಬಂಟ್ವಾಳ : ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. 

 ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ

ಬಾತಿಷಾ( 22) ಮೃತಪಟ್ಟವರು.ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

 Share: | | | | |


ಪವಿತ್ರಾಗೌಡಗೆ ಅಶ್ಲೀಲ ಫೋಟೊ ಕಳಿಸಿದ್ದು ದೃಢ; ಆದ್ರೆ ರೇಣುಕಾಸ್ವಾಮಿ ಕೊಲೆಯಲ್ಲಿ ಈ ಮೂವರು ಭಾಗಿಯೇ ಆಗಿಲ್ಲ

Posted by Vidyamaana on 2024-09-03 14:33:08 |

Share: | | | | |


ಪವಿತ್ರಾಗೌಡಗೆ ಅಶ್ಲೀಲ ಫೋಟೊ ಕಳಿಸಿದ್ದು ದೃಢ; ಆದ್ರೆ ರೇಣುಕಾಸ್ವಾಮಿ ಕೊಲೆಯಲ್ಲಿ ಈ ಮೂವರು ಭಾಗಿಯೇ ಆಗಿಲ್ಲ

ಬೆಂಗಳೂರು : ಚಿತ್ರದುರ್ಗದರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder case) ಸಂಬಂಧಿಸಿದಂತೆ ಸ್ಫೋಟಕ ತಿರುವು ಸಿಕ್ಕಿದೆ. ಈಗಾಗಲೇ ದರ್ಶನ್‌ ಮತ್ತು ಗ್ಯಾಂಗ್‌ (Actor Darshan) ಜೈಲಿನಲ್ಲಿ ಬಂಧಿಯಾಗಿದ್ದಾರೆ. ಚಾರ್ಜ್ ಶೀಟ್‌ನಲ್ಲಿ ರೇಣುಕಾಸ್ವಾಮಿ ಕೊಲೆಯಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳು ಭಾಗಿಯಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ನಿಖಿಲ್ ನಾಯ್ಕ್, ಕೇಶವಮೂರ್ತಿ ಹಾಗೂ ಕಾರ್ತಿಕ್ ಈ ಮೂವರು ಆರಂಭದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರಿಗೆ ತಾವೇ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ಸೆರೆಂಡರ್ ಆಗಿದ್ದರು. ಆದರೆ ಈಗ ಈ ಕೊಲೆಯಲ್ಲಿ ಮೂವರ ಪಾತ್ರ ಇಲ್ಲ ಎಂಬುದು ಸಾಬೀತಾಗಿದೆ. ನಿಖಿಲ್ ನಾಯ್ಕ್, ಕೇಶವಮೂರ್ತಿ, ಕಾರ್ತಿಕ್‌ ಮೇಲೆ ಕೊಲೆ ಕೇಸ್‌ ಇಲ್ಲದಿದ್ದರೂ, ಚಾರ್ಜ್​​​ಶೀಟ್​​​ನಲ್ಲಿ 201 ಅಡಿ ಸಾಕ್ಷಿ ನಾಶ ಆರೋಪವಿದೆ. ಮೂವರ ವಿರುದ್ಧ ಸಾಕ್ಷ್ಯ ನಾಶ ಮಾಡಿದ ಆರೋಪವನ್ನು ಪೊಲೀಸರು ಪ್ರಸ್ತಾಪ ಮಾಡಿದ್ದಾರೆ. ಸಾಕ್ಷಿ ನಾಶ ಹಾಗೂ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದಾಗಿ ಉಲ್ಲೇಖಿಸಿದ್ದಾರೆ.

ಅರುಣ್ ಕುಮಾರ್ ಪುತ್ತಿಲ : ಪಕ್ಷೇತರ ಅಭ್ಯರ್ಥಿಯ ಅಧಿಕೃತ ಚಿಹ್ನೆ ಪ್ರಕಟ

Posted by Vidyamaana on 2023-04-24 11:35:31 |

Share: | | | | |


ಅರುಣ್ ಕುಮಾರ್ ಪುತ್ತಿಲ : ಪಕ್ಷೇತರ ಅಭ್ಯರ್ಥಿಯ ಅಧಿಕೃತ ಚಿಹ್ನೆ ಪ್ರಕಟ

ಪುತ್ತೂರು : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ತಮ್ಮ ಚುನಾವಣಾ ಚಿಹ್ನೆಯನ್ನು ಪ್ರಕಟಗೊಳಿಸಿದ್ದಾರೆ.

ಪುತ್ತಿಲ ರವರು ಚುನಾವಣಾ ಚಿಹ್ನೆಯಾಗಿ ಕ್ರಿಕೆಟ್ ‘ಬ್ಯಾಟ್’ ಅನ್ನು ಆಯ್ದುಕೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪುತ್ತಿಲ ರವರು ತಮ್ಮ ಚಿಹ್ನೆಯಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಬಗ್ಗೆ ಭಾರೀ ಕುತೂಹಲವಿತ್ತು.

ಲೋಕಸಭೆ ಚುನಾವಣೆ | ನಾನು ಈಗಲೂ ಟಿಕೆಟ್‌ ಆಕಾಂಕ್ಷಿ: ಸದಾನಂದ ಗೌಡ

Posted by Vidyamaana on 2024-03-10 07:29:27 |

Share: | | | | |


ಲೋಕಸಭೆ ಚುನಾವಣೆ | ನಾನು ಈಗಲೂ ಟಿಕೆಟ್‌ ಆಕಾಂಕ್ಷಿ: ಸದಾನಂದ ಗೌಡ

ಬೆಂಗಳೂರು: ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ನನಗೇ ಟಿಕೆಟ್‌ ಸಿಗುವ ವಿಶ್ವಾಸವಿದೆ ಎಂದು ಈ ಕ್ಷೇತ್ರದ ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.


ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ಬೇರೆಯವರಿಗೆ ಟಿಕೆಟ್‌ ಕೊಡಿ ಎಂದು ಹಿಂದೆ ಹೇಳಿದ್ದೆ.ಕ್ಷೇತ್ರದ ಎಲ್ಲ ಶಾಸಕರು ಮತ್ತು ಮುಖಂಡರು ನೀವೇ ಅಭ್ಯರ್ಥಿಯಾಗಬೇಕು ಎಂದು ಒತ್ತಾಯ ಮಾಡಿದ್ದರು. ಆ ಕಾರಣದಿಂದ ಟಿಕೆಟ್‌ ಬಯಸಿದ್ದೇನೆ ಎಂದರು.


ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಬಿ.ಎಸ್‌. ಯಡಿಯೂರಪ್ಪ ಅವರ ನಂತರದಲ್ಲಿ ನನಗೆ ಹೆಚ್ಚು ಅವಕಾಶಗಳನ್ನು ನೀಡಿದೆ. ಆದರೆ, ಈಗ ಟಿಕೆಟ್‌ ಕೊಡದೇ ಇದ್ದರೆ ಸ್ವಲ್ಪ ನೋವಾಗುತ್ತದೆ ಎಂದು ಹೇಳಿದರು.

Alert : ಮನೆಯಲ್ಲಿ ಫ್ರಿಜ್ ಇಡುವಾಗ ಈ ತಪ್ಪು ಮಾಡಿದ್ರೆ ಬ್ಲ್ಯಾಸ್ಟ್ ಆಗೋದು ಗ್ಯಾರಂಟಿ!

Posted by Vidyamaana on 2024-06-20 06:13:40 |

Share: | | | | |


Alert : ಮನೆಯಲ್ಲಿ ಫ್ರಿಜ್ ಇಡುವಾಗ ಈ ತಪ್ಪು ಮಾಡಿದ್ರೆ ಬ್ಲ್ಯಾಸ್ಟ್ ಆಗೋದು ಗ್ಯಾರಂಟಿ!

ಪುತ್ತೂರು : ಮನೆಯಲ್ಲಿ ಫ್ರೀಜ್‌ ಇಡುವವರು ತಪ್ಪದೇ ಈ ಸುದ್ದಿಯನ್ಮೊಮ್ಮೆ ಓದಿ. ಏಕೆಂದರೆ ಮನೆಯಲ್ಲಿ ಫ್ರಿಜ್‌ ಇಡುವಾಗ ಮಾಡುವ ಕೆಲವೊಂದು ತಪ್ಪುಗಳು ಸ್ಪೋಟಕ್ಕೆ ಕಾರಣವಾಗಬಹುದು.ಹೌದು, ಇಲ್ಲಿಯವರೆಗೆ ವಿವಿಧ ಭಾಗಗಳಿಂದ ಅನೇಕ ಎಸಿ ಮತ್ತು ಫ್ರಿಜ್ ಸ್ಫೋಟದ ಘಟನೆಗಳು ವರದಿಯಾಗಿವೆ.

ಇದು ತುಂಬಾ ಅಪರೂಪವಾಗಿದ್ದರೂ, ನೀವು ಕೆಲವು ವಿಷಯಗಳನ್ನು ನಿರ್ಲಕ್ಷಿಸಿದರೆ ಅಪಘಾತವು ಯಾವುದೇ ಸಮಯದಲ್ಲಿ ಸಂಭವಿಸಬಹುದು. ನಿಮ್ಮ ಫ್ರಿಜ್ ಅನ್ನು ಸುತ್ತಲೂ ಗಾಳಿಗೆ ಕಿಟಕಿಯಿಲ್ಲದ ಸ್ಥಳದಲ್ಲಿ ಇರಿಸಿದರೆ, ನೀವು ಫ್ರಿಜ್ ಅನ್ನು ಗೋಡೆಯನ್ನು ಬಿಟ್ಟು ದೂರದಲ್ಲಿ ಇಡಬೇಕು ಇಲ್ಲದಿದ್ದರೆ ಅದು ಶಾಖದಿಂದ ಸ್ಫೋಟಗೊಳ್ಳಬಹುದು. ಫ್ರಿಜ್ ಮತ್ತು ಗೋಡೆಯ ನಡುವೆ ಅಂತರವನ್ನು ಹೊಂದಿರುವುದು ಏಕೆ ಮುಖ್ಯ ಎಂದು ಮೊದಲು ತಿಳಿಯೋಣ.

ಫ್ರಿಜ್ ಮತ್ತು ಗೋಡೆಯ ನಡುವೆ ಅಂತರವಿರಬೇಕು.

ತಂಪಾಗಿಸುವಿಕೆ ಉತ್ತಮವಾಗಿರುತ್ತದೆ

ನೀವು ಫ್ರಿಜ್ ಅನ್ನು ಗೋಡೆಗೆ ಅಂಟಿಸಿದರೆ, ಅದು ಫ್ರಿಜ್ ಕಂಪ್ರೆಸರ್ ಅನ್ನು ತುಂಬಾ ಬಿಸಿಯಾಗಿಸುತ್ತದೆ. ಆದ್ದರಿಂದ ಫ್ರಿಜ್ ಅನ್ನು ತಂಪಾಗಿಡಲು, ಅದನ್ನು ಯಾವಾಗಲೂ ಗೋಡೆಯಿಂದ ದೂರವಿಡಿ. ಕಂಪ್ರೆಸರ್ ಅನ್ನು ಅತಿಯಾಗಿ ಬಿಸಿ ಮಾಡಿದರೆ, ಅದು ಫ್ರಿಜ್ ನ ತಂಪಾಗಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ.

ಮಾಣಿಲ ಗ್ರಾಮದ ಕಾಮಜಾಲಿನಲ್ಲಿ ೧೦೦ ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣ

Posted by Vidyamaana on 2023-10-17 07:44:31 |

Share: | | | | |


ಮಾಣಿಲ ಗ್ರಾಮದ ಕಾಮಜಾಲಿನಲ್ಲಿ ೧೦೦ ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣ

ಪುತ್ತೂರು: ಮಾಣಿಲ ಗ್ರಾಮದ ಕಾಮಜಾಲು ಎಂಬಲ್ಲಿ ನದಿಗೆ ಕಿಂಡಿ ಅಣೆಕಟ್ಟು ಮತ್ತು ಸೇತುವೆ ನಿರ್ಮಾಣಕ್ಕೆ ಈಗಾಗಲೇ ೧೦೦ ಕೋಟಿ ರೂ ಪ್ರಸ್ತಾವನೆ ಸಲ್ಲಿಸಲಾಗಿದ್ದು ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶವಾದ ಕಾರಣ ಕೇರಳ ಮತ್ತು ಕರ್ನಾಟಕ ಸರಕಾರದ ಒಪ್ಪಿಗೆಯೊಂದಿಗೆ ಇಲ್ಲಿ ಕಾಮಗಾರಿ ನಡೆಸಬೇಕಾಗಿದ್ದು ಕೇರಳದಿಂದ ಒಪ್ಪಿಗೆಗಾಗಿ ಸರಕಾರದ ಜೊತೆ ಮಾತುಕತೆ ನಡೆಸುವುದಾಗಿ ಮಂಜೇಶ್ವರ ಶಾಸಕರಾದ ಎನ್ ಕೆ ಎಂ ಅಶ್ರಫ್‌ರವರು ಒಪ್ಪಿಕೊಂಡಿದ್ದು ಶೀಘ್ರದಲ್ಲೇ ಕಾಮಗಾರಿಗೆ ಸಂಬಂದಿಸಿದ ಪ್ರಸ್ತಾವನೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಯವರು ತಿಳಿಸಿದ್ದಾರೆ.


ನದಿಯ ಒಂದು ತಟ ಕರ್ನಾಟಕ್ಕೆ ಸೇರಿದರೆ ಇನ್ನೊಂದು ತಟ ಕೇರಳಕ್ಕೆ ಸೇರಿದ್ದಾಗಿದೆ. ಇಲ್ಲಿ ಸೇತುವೆ ನಿರ್ಮಾಣವಾಗಬೇಕಾದರೆ ಎರಡೂ ಸರಕಾರದ ಒಪ್ಪಿಗೆ ಅಗತ್ಯವಾಗಿದೆ. ಇದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೆರ್ಲಕ್ಕೆ ಸಂಪರ್ಕ ಕಲ್ಪಿಸುತ್ತದೆ. ಮಾಣಿಲಂದಿದ ಕಾಸರಗೋಡಿಗೆ ತೆರಳಬೇಕಾದರೆ ಸುತ್ತು ಬಳಸಿ ಹೋಗಬೇಕಾಗಿದ್ದು ಸೇತುವೆ ನಿರ್ಮಾಣವಾದಲ್ಲಿ ಕೇವಲ ಬೆರಳೆಣಿಕೆಯ ಕಿ ಮಿ ದೂರ ಕ್ರಯಿಸಿದರೆ ಪೆರ್ಲವನ್ನು ತಲುಪಬಹುದಾಗಿದೆ. ಇಲ್ಲಿ ಸೇತುವೆ ನಿರ್ಮಾಣವಾಗಬೇಕೆಂದು ಕಳೆದ ೩೦ ವರ್ಷಗಳಿಂದ ಜನರು ಬೇಡಿಕೆಯನ್ನು ಸಲ್ಲಿಸುತ್ತಿದ್ದಾರೆ. ಒಂದು ಬಾರಿ ಸ್ಥಳದಲ್ಲಿ ಸರ್ವೆ ಕಾರ್ಯ ನಡೆದಿದ್ದು ಆ ಬಳಿಕ ಅದು ಸ್ಥಗಿತಗೊಂಡಿತ್ತು. ನದಿಯ ಒಂದು ಬದಿ ಎಣ್ಮಕಜೆ ಗ್ರಾಪಂ ಸೇರಿದ್ದು ಈಚೆ ಬದಿ ಕಾಮಜಾಲು ಹೆಸರಿನಿಂದ ಕರೆದರೆ ಆಚೆ ಬದಿ ಪೂವನಡ್ಕಂ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.

ಮಂಜೇಶ್ವರ ಶಾಸಕರ ಜೊತೆ ಅಶೋಕ್ ರೈ ಮಾತುಕತೆ

ಕೇರಳ ಮತ್ತು ಕರ್ನಾಟಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿರುವ ಕಾರಣ ಕೇರಳ ಸರಕಾರದಿಂದ ಎನ್ ಒ ಸಿ ಪಡೆಯಬೇಕಾಗಿದೆ. ಕರ್ನಾಕಟದಿಂದ ಎನ್ ಒ ಸಿ ವ್ಯವಸ್ಥೆಯನ್ನು ಸಾಸಕ ಅಶೋಕ್ ರೈ ಮಾಡಲಿದ್ದು ಕೇರಳ ಸರಕಾರದಿಂದ ಮಂಜೇಶ್ವರ ಶಾಸಕರಾದ ಅಶ್ರಫ್ ರವರು ಎನ್ ಒ ಸಿ ವ್ಯವಸ್ಥೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಈ ನದಿ ತಡದಲ್ಲಿ ಸುಮಾರು ೫೦೦ ಎಕ್ರೆ ಕೃಷಿ ಭೂಮಿಯೂ ಇದೆ. ನದಿಯ ನೀರನ್ನು ಕರ್ನಾಟಕ ಮತ್ತು ಕೇರಳದ ಕೃಷಿಕರು ಬಳಸುವ ಕಾರಣ ಮುಂದಕ್ಕೆ ತಕರಾರು ಬಾರದಂತೆ ವ್ಯವಸ್ಥೆಯನ್ನೂ ಮಾಡಬೇಕಿದೆ. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಶಾಸಕದ್ವಯರು ಮಾತುಕತೆ ನಡೆಸಿದ್ದಾರೆ.

ಪೆರ್ಲಕ್ಕೆ ೭ ಕಿ ಮೀ

ಸೇತುವೆಯ ಜೊತೆಗೆ ಅಣೆಕಟ್ಟು ಕೂಡಾ ನಿರ್ಮಾಣವಾಗಲಿದೆ. ಸೇತುವೆ ನಿರ್ಮಾಣವಾದರೆ ಮಾಣಿಲದಿಂದ ಪೆರ್ಲಕ್ಕೆ ಕೇವಲ ೭ ಕಿ ಮೀ ದೂರ ಕ್ರಯಿಸಿದರೆ ಸಾಕಾಗುತ್ತದೆ. ಮಾಣಿಲದಿಂದ ಪೆರ್ಲಕ್ಕೆ ತೆರಳಬೇಕದರೆ ಸುತ್ತು ಬಳಸಿ ೩೫ ಕಿ ಮೀ ಪ್ರಯಾಣ ಮಾಡಬೇಕಾಗುತ್ತದೆ. ಸೇತುವೆಯ ಎರಡು ರಾಜ್ಯಗಳ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲಿದೆ. ಉಪ್ಪಳಕ್ಕೆ ತೆರಳುವುದು ಅತ್ಯಂತ ಹತ್ತಿರವಾಗಲಿದೆ.

೧೦೦ ಕೋಟಿ ರೂ ಪ್ರಸ್ತಾವನೆ

ಹೊಸ ಸೇತುವೆಯ ನಿರ್ಮಾಣಕ್ಕೆ ೧೦೦ ಕೋಟಿ ರೂ ಬೇಕಾಗಿದ್ದು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜನತೆಯ ಹಲವು ವರ್ಷಗಳ ಬೇಡಿಕೆಯ ಬಗ್ಗೆ ಚುನಾವಣಾ ಸಮಯದಲ್ಲಿ ಗ್ರಾಮಸ್ಥರು ಶಾಸಕರ ಮುಂದಿಟ್ಟಿದ್ದರು. ಇದೀಗ ಶಾಸಕರು ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿದ್ದಾರೆ.


ಮಾಣಿಲ ಗ್ರಾಮದ ಕಾಮಜಾಲಿನಲ್ಲಿ ಕೇರಳ ಸಂಪರ್ಕ ಸೇತುವೆಯ ನಿರ್ಮಾಣದ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಒಂದು ಬದಿ ಕೇರಳಕ್ಕೆ ಸೇರಿದ ಕಾರಣ ಕೇರಳ ಸರಕಾರದಿಂದ ಎನ್ ಒ ಸಿ ಪೊಡೆಯಬೇಕಾಗುತ್ತದೆ ಇದಕ್ಕಾಗಿ ಈಗಾಗಲೇ ಮಂಜೇಶ್ವರ ಶಾಸಕರು ಎನ್ ಒ ಸಿ ಗಾಗಿ ಕೇರಳ ಸರಕಾರದ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ಕೇರಳ ಮತ್ತು ಕರ್ನಾಟಕ ಸರಕಾರಗಳ ಜಂಟಿ ಯೋಜನೆಯಲ್ಲಿ ಇಲ್ಲಿ ಸೇತುವೆಯ ನಿರ್ಮಾಣವಾಗಲೂ ಬಹುದು. ಏನೇ ಆಗಲಿ ಜನರ ಬೇಡಿಕೆಯನ್ನು ಪರಿಗಣಿಸಲಾಗಿದೆ.

ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು

ಪುತ್ತೂರು ನಗರ ಸಭೆ ಬೈ ಎಲೆಕ್ಷನ್ ಮುಕ್ತಾಯ - ಎರಡು ವಾರ್ಡ್ ಗಳಲ್ಲಿ ಎಷ್ಟು ವೋಟಿಂಗ್ ಆಯ್ತು

Posted by Vidyamaana on 2023-12-27 18:23:46 |

Share: | | | | |


ಪುತ್ತೂರು ನಗರ ಸಭೆ ಬೈ ಎಲೆಕ್ಷನ್ ಮುಕ್ತಾಯ - ಎರಡು ವಾರ್ಡ್ ಗಳಲ್ಲಿ ಎಷ್ಟು ವೋಟಿಂಗ್ ಆಯ್ತು

ಪುತ್ತೂರು : ನಗರ ಸಭೆಯ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ನಡೆದ ಚುನಾವಣೆಯು ಮುಕ್ತಾಯಗೊಂಡಿದ್ದು, ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯಿತು.ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆಗಳು ಪ್ರಾರಂಭಗೊಂಡ ಮತದಾನ ಸಂಜೆ 5 ಗಂಟೆಯ ತನಕ ನಡೆಯಿತು.


ವಾರ್ಡ್1ರಲ್ಲಿ ಒಟ್ಟು 1304 ಮತದಾರರಲ್ಲಿ 449 ಪುರುಷರು ಹಾಗೂ 509 ಮಹಿಯರು ಸೇರಿದಂತೆ ಒಟ್ಟು 958 ಮತ ಚಲಾವಣೆಯಾಗಿದೆ. ಶೇ.73.45 ಮತ ಚಲಾವಣೆಯಾಗಿದೆ.ವಾರ್ಡ್ 11 ರಲ್ಲಿ ಒಟ್ಟು 1724 ಮತದಾರರಲ್ಲಿ 525 ಪುರುಷರು, 528 ಮಹಿಳೆಯರು ಸೇರಿದಂತೆ 1053 ಮಂದಿ ಮತ ಚಲಾಯಿಸಿದ್ದು ಶೇ.61.07 ಮತದಾನವಾಗಿದೆ.



Leave a Comment: