BREAKING : ಇನ್ಮುಂದೆ ಟೋಲ್ ವ್ಯವಸ್ಥೆ ಇಲ್ಲ, ರದ್ದು : ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹತ್ವದ ಘೋಷಣೆ

ಸುದ್ದಿಗಳು News

Posted by vidyamaana on 2024-07-26 16:26:50 |

Share: | | | | |


BREAKING : ಇನ್ಮುಂದೆ ಟೋಲ್ ವ್ಯವಸ್ಥೆ ಇಲ್ಲ, ರದ್ದು : ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹತ್ವದ ಘೋಷಣೆ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ದೊಡ್ಡ ನಿರ್ಧಾರವನ್ನ ತೆಗೆದುಕೊಂಡಿದ್ದು, ಅಸ್ತಿತ್ವದಲ್ಲಿರುವ ಟೋಲ್ ವ್ಯವಸ್ಥೆಯನ್ನ ರದ್ದುಗೊಳಿಸಿದ್ದಾರೆ. ಇದರೊಂದಿಗೆ, ಉಪಗ್ರಹ ಟೋಲ್ ಸಂಗ್ರಹ ವ್ಯವಸ್ಥೆಯ ಉಡಾವಣೆಯನ್ನ ಘೋಷಿಸಲಾಗಿದೆ. ಸರ್ಕಾರವು ಟೋಲ್ ರದ್ದುಗೊಳಿಸುತ್ತಿದೆ ಮತ್ತು ಶೀಘ್ರದಲ್ಲೇ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನ ಪ್ರಾರಂಭಿಸಲಾಗುವುದು ಎಂದು ಅವರು ಶುಕ್ರವಾರ (ಜುಲೈ 26) ಹೇಳಿದರು.

ಅದ್ರಂತೆ, ಟೋಲ್ ಸಂಗ್ರಹವನ್ನ ಹೆಚ್ಚಿಸುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ದಟ್ಟಣೆಯನ್ನ ಕಡಿಮೆ ಮಾಡುವುದು ಈ ವ್ಯವಸ್ಥೆಯನ್ನ ಜಾರಿಗೆ ತರುವ ಹಿಂದಿನ ಉದ್ದೇಶವಾಗಿದೆ.

ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಅವರು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಜಾರಿಗೆ ತರಲಿದೆ ಎಂದು ಹೇಳಿದರು. ಇದನ್ನು ಆಯ್ದ ಟೋಲ್ ಪ್ಲಾಜಾಗಳಲ್ಲಿ ಮಾತ್ರ ಮಾಡಲಾಗುತ್ತದೆ.

ಇದಕ್ಕೂ ಮುನ್ನ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ನಿತಿನ್ ಗಡ್ಕರಿ, ಈಗ ನಾವು ಟೋಲ್ ರದ್ದುಗೊಳಿಸುತ್ತಿದ್ದೇವೆ ಮತ್ತು ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಇರುತ್ತದೆ. ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನ ಕಡಿತಗೊಳಿಸಲಾಗುತ್ತದೆ ಮತ್ತು ನೀವು ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ. ಇದು ಸಮಯ ಮತ್ತು ಹಣವನ್ನ ಉಳಿಸುತ್ತದೆ. ಈ ಮೊದಲು ಮುಂಬೈನಿಂದ ಪುಣೆಗೆ ಪ್ರಯಾಣಿಸಲು 9 ಗಂಟೆಗಳು ತೆಗೆದುಕೊಳ್ಳುತ್ತಿತ್ತು, ಈಗ ಅದು 2 ಗಂಟೆಗಳಿಗೆ ಇಳಿದಿದೆ ಎಂದರು.

ನಿತಿನ್ ಗಡ್ಕರಿ ಕಳೆದ ವರ್ಷವಷ್ಟೇ ಹೊಸ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದ್ದರು .!

2024ರ ಮಾರ್ಚ್ ವೇಳೆಗೆ ಈ ಹೊಸ ವ್ಯವಸ್ಥೆಯನ್ನ ಜಾರಿಗೆ ತರುವ ಗುರಿಯನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ವ) ಹೊಂದಿದೆ ಎಂದು ನಿತಿನ್ ಗಡ್ಕರಿ ಡಿಸೆಂಬರ್ ನಲ್ಲಿ ಘೋಷಿಸಿದ್ದರು. ಕಾರ್ಯವಿಧಾನಗಳನ್ನ ಸುಗಮಗೊಳಿಸುವ ಮತ್ತು ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನ ಕಡಿಮೆ ಮಾಡುವ ಪ್ರಯತ್ನಗಳ ಬಗ್ಗೆ ವಿಶ್ವ ಬ್ಯಾಂಕ್ ಗೆ ತಿಳಿಸಲಾಗಿದೆ. ಫಾಸ್ಟ್ಟ್ಯಾಗ್ ಪರಿಚಯಿಸುವುದರೊಂದಿಗೆ, ಟೋಲ್ ಪ್ಲಾಜಾಗಳಲ್ಲಿ ಸರಾಸರಿ ಕಾಯುವ ಸಮಯವು ಗಮನಾರ್ಹವಾಗಿ ಕಡಿಮೆಯಾಗಿದೆ. ಇದನ್ನು ಕರ್ನಾಟಕದ ಎನ್‌ಎಚ್ -275 ರ ಬೆಂಗಳೂರು-ಮೈಸೂರು ವಿಭಾಗದಲ್ಲಿ ಮತ್ತು ಹರಿಯಾಣದ ಎನ್‌ಎಚ್ -709 ರ ಪಾಣಿಪತ್-ಹಿಸಾರ್ ವಿಭಾಗದಲ್ಲಿ ಪ್ರಯತ್ನಿಸಲಾಗುತ್ತದೆ.

 Share: | | | | |


MLA ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿಯಿಂದ ಏಳು ಕೋಟಿ ಸುಲಿಗೆ - ಸೂತ್ರಧಾರಿ ಚೈತ್ರಾ ಕುಂದಾಪುರ ಮೂವರು ಸಹಚರರ ಬಂಧನ

Posted by Vidyamaana on 2023-09-13 01:49:38 |

Share: | | | | |


MLA ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿಯಿಂದ ಏಳು ಕೋಟಿ ಸುಲಿಗೆ - ಸೂತ್ರಧಾರಿ ಚೈತ್ರಾ ಕುಂದಾಪುರ ಮೂವರು ಸಹಚರರ ಬಂಧನ

ಉಡುಪಿ : ಮುಂಬಯಿಯ ಉದ್ಯಮಿಯೊಬ್ಬರಿಗೆ ಎಂಎಲ್‌ಎ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ರೂಪಾಯಿ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.


ಕಳೆದ ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರ ಕೊನೆಗೂ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾರೆ . ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ಸಿನಿಮಿಯ ಶೈಲಿಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.


ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರು ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು ಇವರಿಗೆ ಚೈತ್ರಾ ಮತ್ತಾಕೆಯ ಸಹಚರರ ತಂಡ ಸುಮಾರು ಏಳು ಕೋಟಿ ರೂಪಾಯಿ ವಂಚನೆ ಮಾಡಿತ್ತು.ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಬಿಲ್ಲವ ನಾಯಕ ಗೋವಿಂದ ಬಾಬು ಪೂಜಾರಿ ಅವರ ಮುಗ್ಧತೆಯನ್ನು ಬಳಸಿಕೊಂಡು ಚೈತ್ರಾಳ ತಂಡ ಮಹಾವಂಚನೆ ನಡೆಸಿತ್ತು.


ಉತ್ತರ ಕರ್ನಾಟಕ ಭಾಗದಲ್ಲಿ ಭಾಷಣಕಾರ್ತಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ, ಟಿಕೆಟ್ ಕೊಡಿಸುವುದಾಗಿ ನಾಲೈದು ಜನರ ತಂಡದಿಂದ ಬೃಹನ್ನಾಟಕ ನಡೆಸಿದ್ದಳು. ಕೇಂದ್ರದ ನಾಯಕರು, ಆರೆಸ್ಸೆಸ್ ಪ್ರಮುಖರ ಹೆಸರಿನಲ್ಲಿ ಪಂಗನಾಮ ಹಾಕಿದ್ದಳು. ಅಲ್ಲದೆ ಆರ್ ಎಸ್ ಎಸ್ ಪ್ರಮುಖರು ಎಂದು ನಕಲಿ ನಾಯಕರನ್ನು ಸೃಷ್ಟಿ ಮಾಡಿದ್ದ ಚೈತ್ರ ಅಂಡ್ ಟೀಮ್ ಬಳಿಕ ಹಂತ ಹಂತವಾಗಿ ಗೋವಿಂದ ಬಾಬು ಪೂಜಾರಿ ಅವರಿಂದ ಏಳು ಕೋಟಿ ರೂಪಾಯಿ ಸುಲಿಗೆ ಮಾಡಿತ್ತು.ಚೈತ್ರಾ ಅಲ್ಲದೇ ಶ್ರೀಕಾಂತ್ ನಾಯಕ್ ಪೆಲತ್ತೂರು ಎಂಬಾತನನ್ನೂ ಕೂಡ ವಶಕ್ಕೆ ಪಡೆದ ಪೊಲೀಸರು ಇಬ್ಬರು ಆರೋಪಿಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.


ಸುಮಾರು ಮೂರು ಹಂತದಲ್ಲಿ ಏಳು ಕೋಟಿ ರೂಪಾಯಿ ಪೀಕಿಸಿದ್ದ ಖದೀಮರು ಬೈಂದೂರು ಬಿಜೆಪಿಯ ಟಿಕೆಟ್ ಪಕ್ಕ ಮಾಡಿಕೊಡುವುದಾಗಿ ನಂಬಿಸಿ ವಂಚನೆ ಎಸಗಿದ್ದರು. ವಂಚನೆ ಪ್ರಕರಣದಲ್ಲಿ ಈವರೆಗೆ ಒಟ್ಟು ನಾಲ್ವರನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಚೈತ್ರಾ ಕುಂದಾಪುರ, ಗಗನ್ ಕಡೂರು, ಶ್ರೀಕಾಂತ ನಾಯಕ್ ಮತ್ತು ಪ್ರಸಾದ್ ಈ ನಾಲ್ವರ ತಂಡ ಇದೀಗ ಪೋಲಿಸರ ಬಂಧನಕ್ಕೆ ಒಳಗಾಗಿದೆ.

ಬೆಳ್ತಂಗಡಿ ಹೆದ್ದಾರಿ ಬದಿ ಅಂಗಡಿ ಪುಡಿಗೈದ ಕಿಡಿಗೇಡಿಗಳು

Posted by Vidyamaana on 2023-12-03 09:08:40 |

Share: | | | | |


ಬೆಳ್ತಂಗಡಿ ಹೆದ್ದಾರಿ ಬದಿ ಅಂಗಡಿ ಪುಡಿಗೈದ ಕಿಡಿಗೇಡಿಗಳು

ಬೆಳ್ತಂಗಡಿ: ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಕಿಡಿಗೇಡಿ ಗಳು ರಾತ್ರಿ ವೇಳೆ ಧ್ವಂಸಗೊಳಿಸಿದ ಘಟನೆ ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ.



ಕೊಕ್ಕಡ ಗ್ರಾಮದ ಮಲ್ಲಿಗೆ ಮಜಲು ನಿವಾಸಿ ಅಬ್ದುಲ್‌ ಅಜೀಜ್‌ ಅವರು ಕಳೆದ ಮೂರು ವರ್ಷಗಳಿಂದ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗೂಡಂಗಡಿ ಇರಿಸಿ ವ್ಯಾಪಾರ ನಡೆಸುತ್ತಿದ್ದರು. ಶುಕ್ರವಾರ ರಾತ್ರಿಯ ವೇಳೆ ಎಂದಿನಂತೆ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಬ್ದುಲ್‌ ಅಜೀಜ್‌ ಶನಿವಾರ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯನ್ನು ಧ್ವಂಸಗೊಳಿಸಿರು ವುದು ಕಂಡು ಬಂದಿದೆ.


ಅಂಗಡಿಯಲ್ಲಿದ್ದ ವಸ್ತುಗಳೆಲ್ಲವನ್ನು ಹೊರಗೆಳೆದು ನಾಶಗೊಳಿಸಲಾಗಿದೆ. ತಂಪು ಪಾನೀಯಗಳ ಬಾಟ್ಲಿಗಳನ್ನು ಒಡೆದು ಹಾಕಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.

ಆ 05:ಪುತ್ತೂರಿನ ಫ್ಯಾಶನ್ ಲೋಕದ ಅತಿ ದೊಡ್ಡ ಉತ್ಸವ - ರಾಧಾಸ್ ವಸ್ತ್ರ ಮಳಿಗೆಯಲ್ಲಿ ಮಾನ್ಸೂನ್ ಮೇಳ

Posted by Vidyamaana on 2024-08-01 08:33:07 |

Share: | | | | |


ಆ 05:ಪುತ್ತೂರಿನ ಫ್ಯಾಶನ್ ಲೋಕದ ಅತಿ ದೊಡ್ಡ ಉತ್ಸವ - ರಾಧಾಸ್ ವಸ್ತ್ರ ಮಳಿಗೆಯಲ್ಲಿ ಮಾನ್ಸೂನ್ ಮೇಳ

ಪುತ್ತೂರು : ಪುತ್ತೂರಿನ ಫ್ಯಾಷನ್ ಲೋಕದ ಅತಿ ದೊಡ್ಡ ಉತ್ಸವ ರಾಧಾಸ್ ಮಾನ್ಸೂನ್ ಮೇಳ ಆ.5 ರಿಂದ ಪ್ರಾರಂಭಗೊಳ್ಳಲಿದೆ.

ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಧಾಸ್ ಸಿಲ್ಕ್ಸ್,ಟೆಕ್ಸ್ ಟೈಲ್ಸ್, ರೆಡಿಮೇಡ್ ಫ್ಯಾಮಿಲಿ ಶೋರೂಂನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮಾನ್ಸೂನ್ ಮೇಳ ಅತಿದೊಡ್ಡ ಸಂಗ್ರಹದೊಂದಿದೆ ಆರಂಭಗೊಳ್ಳಲಿದೆ.

ತೀರ್ಥದಲ್ಲಿ ನಿದ್ರೆಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ಚಾನೆಲ್ ನಿರೂಪಕಿಯ ರೇಪ್!

Posted by Vidyamaana on 2024-05-16 20:27:47 |

Share: | | | | |


ತೀರ್ಥದಲ್ಲಿ ನಿದ್ರೆಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ಚಾನೆಲ್ ನಿರೂಪಕಿಯ ರೇಪ್!

ಚೆನ್ನೈ: ಪಾರಿಸ್ ಕಾರ್ನರ್‌ನಲ್ಲಿರುವ ಜನಪ್ರಿಯ ದೇವಸ್ಥಾನದ ಅರ್ಚಕರ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದಿದೆ.

ಟಿವಿ ನಿರೂಪಕಿಯೊಬ್ಬರು ತನ್ನ ಮೇಲೆ ಅತ್ಯಾಚಾರ ನಡೆದಿರುವುದರ ಬಗ್ಗೆ ವಿರುಗಂಬಾಕ್ಕಂ (Virugambakkam) ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅತ್ಯಾಚಾರದ ಆರೋಪದ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಸದ್ಯಕ್ಕೆ ಇಬ್ಬರ ವಿಚಾರಣೆಯನ್ನು ನಡೆಸಲಾಗುತ್ತಿದೆ.


ಮಹಿಳೆ ನೀಡಿದ ದೂರಿನ ಪ್ರಕಾರ, ‘ಅರ್ಚಕ ಕಾರ್ತಿಕ್ ಮುನುಸಾಮಿ 2022ರ ಕೊನೆಯಲ್ಲಿ ಮತ್ತು 2023ರ ಆರಂಭದಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ತೀರ್ಥಕ್ಕೆ ಅಮಲು ಬರುವ ಔಷಧಿ ಹಾಕಿ ಅದನ್ನು ನೀಡಿದ ಬಳಿಕ ಅತ್ಯಾಚಾರ ನಡೆಸಿದ್ದಾರೆ. ಈ ಬಗ್ಗೆ ಅವರೊಂದಿಗೆ ಜಗಳವಾಡಿದ ನಂತರ ಆತ ನನಗೆ ತಾಳಿ ಕಟ್ಟಿ ಮದುವೆಯಾಗುವ ಮೂಲಕ ಒಟ್ಟಿಗೆ ಜೀವನ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಮದುವೆಯಾಗಬೇಕೆಂದು ನಿನ್ನ ಹೊಟ್ಟೆಯಲ್ಲಿರುವ ಭ್ರೂಣವನ್ನು ಗರ್ಭಪಾತ ಮಾಡುವಂತೆ ಒತ್ತಾಯಿಸಿದರು. ಆದರೆ, ಹಣಕ್ಕಾಗಿ ಇನ್ನೊಬ್ಬ ಪುರುಷನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿ ಈಗ ಹಿಂಸೆ ನೀಡುತ್ತಿದ್ದಾರೆ ಎಂದು ಆ ಮಹಿಳೆ ದೂರು ನೀಡಿದ್ದಾರೆ

ಪುತ್ತೂರು: ಪೈಂಟರ್ ಬಾಲಕೃಷ್ಣ ಆತ್ಮಹತ್ಯೆ

Posted by Vidyamaana on 2024-03-01 14:05:03 |

Share: | | | | |


ಪುತ್ತೂರು: ಪೈಂಟರ್ ಬಾಲಕೃಷ್ಣ ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಸಾಮೆತ್ತಡ್ಕ ನಿವಾಸಿ ಬಾಲಕೃಷ್ಣ (48) ಮೃತರು ಬಾಲಕೃಷ್ಣ ಅವರು ಪೈಂಟರ್ ಕೆಲಸ ನಿರ್ವಹಿಸುತ್ತಿದ್ದು, ಸಾಮೆತ್ತಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಪಿಡಿಓ ನೇಮಕಾತಿಗೆ ಅರ್ಜಿ ಆಹ್ವಾನಿಸಿದ ಪಂಚಾಯತ್ ರಾಜ್ ಇಲಾಖೆ- ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪ್ರಾರಂಭ

Posted by Vidyamaana on 2024-03-18 16:52:23 |

Share: | | | | |


ಪಿಡಿಓ ನೇಮಕಾತಿಗೆ ಅರ್ಜಿ ಆಹ್ವಾನಿಸಿದ ಪಂಚಾಯತ್ ರಾಜ್ ಇಲಾಖೆ- ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪ್ರಾರಂಭ

ಪುತ್ತೂರು  ಕರ್ನಾಟಕ ಸರಕಾರವು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) 150 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದ್ದು ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ನೇರ ಮತ್ತು ಆನ್ಲೈನ್ ಮೂಲಕ ಲಿಖಿತ ಪರೀಕ್ಷಾ ತರಬೇತಿಯನ್ನು ಪ್ರಾರಂಭಿಸಲಿದ್ದು 18/03/2024 ಸೋಮವಾರದಿಂದ ಪ್ರವೇಶಾತಿ ಪ್ರಾರಂಭಗೊಳ್ಳಲಿದೆ.


ತರಬೇತಿ ಅವಧಿ ಎರಡುವರೆ ತಿಂಗಳು. ಕಳೆದ ಎರಡುವರೆ ವರ್ಷದಿಂದ ಪೊಲೀಸ್ ,ಅರಣ್ಯ ಇಲಾಖೆ, ಬ್ಯಾಂಕಿಂಗ್, ಕೆ.ಎಂ.ಎಫ್ ,ಶಿಕ್ಷಕರ ನೇಮಕಾತಿ ಸೇರಿದಂತೆ 116 ಎಷ್ಟು ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಸರಕಾರಿ ಹುದ್ದೆಗಳನ್ನು ಏರಿರುತ್ತಾರೆ. ಕರ್ನಾಟಕ ಸರಕಾರವು ಇತ್ತೀಚೆಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿರುವ ಗ್ರಾಮ ಆಡಳಿತ ಅಧಿಕಾರಿ(VAO) ಹುದ್ದೆಗಳಿಗೂ ಅಕಾಡೆಮಿಯಲ್ಲಿ ತರಬೇತಿ ಪ್ರಾರಂಭವಾಗಿದ್ದು, ಸದ್ಯ ಕರೆದಿರುವ ಪಿಡಿಓ ಹುದ್ದೆಗಳಿಗೆ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದೆ.


ನೇರ ತರಗತಿಗಳು – ಬೆಳಗ್ಗೆ 9:30 ರಿಂದ ಮಧ್ಯಾಹ್ನ 1:00 ರವರೆಗೆ (ವಾರದ 5 ದಿನ) ಆನ್ಲೈನ್ ತರಗತಿಗಳು – ರಾತ್ರಿ 7:00 ರಿಂದ 8:00 ರವರೆಗೆ (ವಾರದ ಎಲ್ಲಾ ದಿನ) ಉದ್ಯೋಗಸ್ಥರಿಗೆ, ವಿದ್ಯಾರ್ಥಿಗಳಿಗೆ , ಗೃಹಿಣಿಯರಿಗಾಗಿ ಅನುಕೂಲವಾಗುವಂತೆ ನಡೆಯುತ್ತವೆ.


ಪಿಡಿಓ ನೇಮಕಾತಿಯ ಅರ್ಹತೆಗಳು :-

ವಿದ್ಯಾರ್ಹತೆ : ಯಾವುದೇ ಪದವಿ

ವೇತನ : 70,000 ವರೆಗೆ

ಹುದ್ದೆಗಳು :150

ವಯಸ್ಸಿನ ಮಿತಿ :18 ರಿಂದ 40 (ಸಾಮಾನ್ಯ 35 , ಒ.ಬಿ.ಸಿ 38 , SC,ST 40)

ನೇಮಕಾತಿ ಪ್ರಕ್ರಿಯೆ : ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ

ಅರ್ಜಿ ಪ್ರಾರಂಭ ದಿನಾಂಕ : 15/04/2024 ರಿಂದ 15/05/2024

ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು: ಫೋಟೋ ,ಅಂಕಪಟ್ಟಿ ,ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ,ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ.


ತರಬೇತಿಗಾಗಿ ಪ್ರವೇಶಾತಿ ಪಡೆಯಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ :

ವಿದ್ಯಾಮಾತಾ ಅಕಾಡೆಮಿ – ಹಿಂದೂಸ್ತಾನ್ ಕಾಂಪ್ಲೆಕ್ಸ್,1 ನೇ ಮಹಡಿ ,ಎ.ಪಿ.ಎಂ.ಸಿ ರಸ್ತೆ ಪುತ್ತೂರು.

9620468869/ 9148935808

ಸುಳ್ಯ ಶಾಖೆ : TAPCMS ಬಿಲ್ಡಿಂಗ್ ,ಕಾರ್ ಸ್ಟ್ರೀಟ್

9448527606



Leave a Comment: