ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ಸುದ್ದಿಗಳು News

Posted by vidyamaana on 2024-07-24 23:15:54 |

Share: | | | | |


ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ ಹಲವಾರು ಮಂದಿ ಕಾಡಿನಲ್ಲಿ ಹುಡುಕಾಡಿದ್ದಾರೆನ್ನಲಾಗಿದೆ.

ಜನ ಸೇರುತ್ತಿದ್ದಂತೆ ಅರೆ ನಗ್ನ ಸ್ಥಿತಿಯಲ್ಲಿ ಬೈಕ್, ಬಟ್ಟೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕ-ಯುವತಿ ಪರಾರಿಯಾಗಿದ್ದಾರೆನ್ನಲಾಗಿದೆ.

ಸಾರ್ವಜನಿಕರ ಮಾಹಿತಿ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆಗಳು, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಕಣ್ಣೆತ್ತಿ ಇಲ್ಲಿ ನೋಡಿ... ನಾವಿಲ್ಲಿ ಇಲ್ಲ

Posted by Vidyamaana on 2024-02-20 05:00:45 |

Share: | | | | |


ಕಣ್ಣೆತ್ತಿ ಇಲ್ಲಿ ನೋಡಿ... ನಾವಿಲ್ಲಿ ಇಲ್ಲ

ಪುತ್ತೂರು: ಮರದಲ್ಲಿ ವಾಸವಾಗಿರುವ ಪಕ್ಷಿಗಳನ್ನು ತೆರವುಗೊಳಿಸಿ ಎಂದು ಕೆಲವರ ಬೊಬ್ಬೆ... ಬೇಡ ಮರದಲ್ಲಿರುವ ನೀರು ಕಾಗೆಗಳನ್ನು ನೋಯಿಸಬೇಡಿ ಎಂದು ಇನ್ನು ಕೆಲವರ ವಾದ.

ಇದು ಪುತ್ತೂರಿನ ಐತಿಹಾಸಿಕ ಅಶ್ವತ್ಥ ಕಟ್ಟೆಯ ಮರದ ಹಿಂದೆ ಇರುವ ಕಥೆ.

ಹೌದು... ಮರದಲ್ಲಿರುವ ಪಕ್ಷಿಗಳನ್ನು ಯಾಕಾದರೂ ತೆರವುಗೊಳಿಸಬೇಕು ಎಂದು ಪ್ರಶ್ನಿಸಿದರೆ - ಮರದಡಿ ಸಾಗಲು ಸಾಧ್ಯವಿಲ್ಲ. ಹಕ್ಕಿಗಳು ಹಿಕ್ಕೆ ಹಾಕುತ್ತವೆ ಎಂಬ ಉತ್ತರ ಪುತ್ತೂರಿನ ಅಷ್ಟೂ ಮಂದಿಯ ಬಾಯಿಯಿಂದ ಬರುತ್ತವೆ. ಇನ್ನು ಮುಂದೆ ಹೀಗೆ ಉತ್ತರಿಸುವಂತಿಲ್ಲ. ಕಾರಣ, ಉಪದ್ರವ ಎಂದು ನೀವು ಹೇಳುತ್ತಿದ್ದ ನೀರು ಕಾಗೆ ಸಹಿತ ಕೆಲ ಜಾತಿಯ ಪಕ್ಷಿಗಳು ಜಾಗ ಖಾಲಿ ಮಾಡಿವೆ.

ಪುತ್ತೂರಿನ ಹೃದಯ ಭಾಗದಲ್ಲಿರುವ ಈ ಅಶ್ವತ್ಥ ಮರದಡಿ ನಿಂತು ಕಣ್ಣೆತ್ತಿ ನೋಡಿ - ಒಂದೂ ಹಕ್ಕಿಗಳು ಅಲ್ಲಿಲ್ಲ.

ಆಶ್ಚರ್ಯಗೊಂಡೀರೇ... ಇದು ಸತ್ಯ. ಎಲ್ಲರ ಮೇಲೂ ಹಿಕ್ಕೆ ಹಾಕಿ, ಖ್ಯಾತಿಯಾಗಿದ್ದ ನೀರು ಕಾಗೆಗಳು ಇಂದು ಅಲ್ಲಿಲ್ಲ. ಯಾವುದೋ ಬಲವಾದ ಕಾರಣಕ್ಕೆ ಜಾಗ ಖಾಲಿ ಮಾಡಿವೆ. ಹಾಗಾದರೆ ಆ ಕಾರಣ ಯಾವುದು?

ಎಲ್ಲಿಂದಲೋ ಬಂದು ಸಂತನಾಭಿವೃದ್ಧಿ ಮಾಡಿ, ತೆರಳುತ್ತಿದ್ದ ಹಕ್ಕಿಗಳ ಬಗ್ಗೆ ಮುತ್ತಿನ ನಗರಿಯ ಜನರಿಗೆ ಅದೇನೋ ಒಲವು. ತಮ್ಮ ಮೇಲೆ ಹಿಕ್ಕೆ ಹಾಕಿದರೂ, ತಮಗೆ ತಾವೇ ಸಮಾಧಾನ ಮಾಡಿಕೊಂಡು ತೆರಳುತ್ತಿದ್ದರು. ಇನ್ನು ಕೆಲವರು ಇದನ್ನು ಹಾಸ್ಯದ ವಸ್ತುವಾಗಿ ಪರಿಗಣಿಸಿದ್ದೂ ಇದೆ. ಆದರೆ ಯಾರೂ ಕೂಡ ಈ ಹಕ್ಕಿಗಳನ್ನು ನಿರ್ನಾಮ ಮಾಡಲೇಬೇಕೆಂಬ ಹಠಕ್ಕೆ ಬಿದ್ದಿಲ್ಲ. ಇದೀಗ ಹಕ್ಕಿಗಳು ತಾವಾಗಿಯೇ ಓಡಿ ಹೋಗಿವೆ. ಈ ಹಕ್ಕಿಗಳು ಹೋಗಿದ್ದಾದರೂ ಎಲ್ಲಿಗೆ? ಹೋದದ್ದಾದರೂ ಯಾಕೆ? ಇದೆಲ್ಲಾ ಯಕ್ಷಪ್ರಶ್ನೆಯಾಗಿ ಉಳಿದಿವೆ.

ಪಕ್ಷಿಪ್ರೇಮಿಗಳೇ, ಇತ್ತ ಸ್ವಲ್ಪ ಗಮನಹರಿಸಿ. ಎಷ್ಟೋ ವರ್ಷಗಳಿಂದ ಬೀಡು ಬಿಟ್ಟಿದ್ದ ಹಕ್ಕಿಗಳು ಏಕಾಏಕೀ ಜಾಗ ಖಾಲಿ ಮಾಡಲು ಸಾಧ್ಯವೇ? ಇದರ ಹಿಂದೆ ಬಲವಾದ ಕಾರಣವೊಂದು ಇರಲೇಬೇಕು ತಾನೇ? ಆ ಕಾರಣವಾದರೂ ಏನು ಎಂಬುದನ್ನು ಪತ್ತೆ ಹಚ್ಚಲೇಬೇಕು. ಇಲ್ಲವಾದರೆ, ಪ್ರಕೃತಿಗೆ ಇಂತಹ ಬಹುದೊಡ್ಡ ಹೊಡೆತ ಮೇಲಿಂದ ಮೇಲೆ ಬೀಳುವುದು ನಿಶ್ಚಿತ.

ಮಣಿಪುರ ಹಿಂಸಾಚಾರ ಖಂಡಿಸಿ ಕೆಥೋಲಿಕ್ ಸಭಾ ಮಂಗಳೂರು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Posted by Vidyamaana on 2023-07-28 03:52:06 |

Share: | | | | |


ಮಣಿಪುರ ಹಿಂಸಾಚಾರ ಖಂಡಿಸಿ ಕೆಥೋಲಿಕ್ ಸಭಾ ಮಂಗಳೂರು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಮಂಗಳೂರು, ಜುಲೈ 27: ಮಣಿಪುರದಲ್ಲಿ ಸರಣಿ ಅತ್ಯಾಚಾರ, ಮಹಿಳೆಯರ ಬೆತ್ತಲೆ ಮೆರವಣಿಗೆ, ಹತ್ಯಾಕಾಂಡ ವಿಚಾರದಲ್ಲಿ ಕೇಂದ್ರ ಮತ್ತು ಮಣಿಪುರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಮಂಗಳೂರಿನಲ್ಲಿ ಕೆಥೋಲಿಕ್ ಸಭಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಟೌನ್ ಹಾಲ್ ಮುಂಭಾಗದಲ್ಲಿ ಸೇರಿದ ಎರಡು ಸಾವಿರಾರು ಜನರು, ಬಿಜೆಪಿ ಸರಕಾರದ ಇಬ್ಬಗೆ ನೀತಿಯ ಬಗ್ಗೆ ಖಂಡನೆ, ಧಿಕ್ಕಾರ ಕೂಗಿದರು.


ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಯ್ ಕ್ಯಾಸ್ಟಲಿನೋ, ಮಣಿಪುರದಲ್ಲಿ ಕುಕ್ಕಿ ಮತ್ತು ಮೈಥಿ ಸಮುದಾಯಗಳ ನಡುವೆ ಬಿಕ್ಕಟ್ಟು, ಕಲಹ 40 ವರ್ಷಗಳಿಂದಲೂ ನಡೀತಿದೆ. ಆದರೆ, ಅದನ್ನೀಗ ರಾಜಕೀಯಕ್ಕೆ ಬಳಸುತ್ತಿದ್ದಾರೆ. ಮೊನ್ನೆ ಮಹಿಳೆಯರ ಬೆತ್ತಲೆ ಮೆರವಣಿಗೆ ಹೊರಬಂದಾಗ ಇಡೀ ದೇಶ ಕಂಬನಿ ಹಾಕಿತ್ತು. ಆದರೆ ಒಬ್ಬರು ಮಾತ್ರ ಕನಿಕರ ತೋರಲಿಲ್ಲ. ನಿರ್ಲಕ್ಷ್ಯ ನೋಡಿದರೆ, ಕ್ರೈಸ್ತರನ್ನು ಹೊರಗಟ್ಟುವ ಷಡ್ಯಂತ್ರ ಇರುವಂತೆ ಕಾಣುತ್ತಿದೆ. ಇಂಟರ್ನೆಟ್ ಬ್ಯಾನ್ ಮಾಡಿ, ಅಲ್ಲಿನ ಹೆಣ್ಮಕ್ಕಳ ಚಿತ್ರಹಿಂಸೆ, ಹತ್ಯೆ ಘಟನೆಗಳು ಹೊರಬರದಂತೆ ಮಾಡಿದ್ದಾರೆ. ಪ್ರಧಾನಿಯ 56 ಇಂಚಿನ ಎದೆಯ ಬಗ್ಗೆ ಟೆಲಿಗ್ರಾಫ್ ಪತ್ರಿಕೆ ಮೊಸಳೆಯ ಫೋಟೋ ತೋರಿಸಿ ಅಣಕಿಸಿದೆ. ಡಬಲ್ ಇಂಜಿನ್ ಸರ್ಕಾರದಿಂದ ಲಾಭ ಎನ್ನುವವರು ಮಣಿಪುರದಲ್ಲಿ ಯಾಕೆ ಮೂರು ತಿಂಗಳಿನಿಂದ ಗಲಭೆ ಹತ್ತಿಕ್ಕಲು ಸಾಧ್ಯವಾಗಿಲ್ಲ. 70 ದಿನಗಳ ಇಂಟರ್ನೆಟ್ ಸ್ಥಗಿತ ಕೊನೆಗೊಂಡಾಗಲೇ ಒಂದು ವಿಡಿಯೋ ಹೊರಬಂದಿತ್ತು. ಆ ವಿಡಿಯೋ ಉದ್ದೇಶಪೂರ್ವಕ ಹೊರಬಿಟ್ಟಿದ್ದು, ಇಡೀ ದೇಶದ ಜನರನ್ನು ಭಯ ಪಡಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.ಇದೇ ವೇಳೆ, ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, 56 ಇಂಚಿನ ಎದೆಗಾರರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ. ಮಣಿಪುರದ ಜನರು ಊಟಕ್ಕಾಗಿ ಪರದಾಡುತ್ತಿದ್ದರೆ ಪ್ರಧಾನಿಯ ಮನಸ್ಸು ಕರಗಲಿಲ್ಲ. ಸಂಸತ್ತಿನಲ್ಲಿ ಹೇಳಿಕೆ ಕೊಡಿ ಎಂದರೂ, ನಿರ್ಲಕ್ಷ್ಯ ತೋರುತ್ತಾರೆ. ಇದರ ನಡುವೆ, ಮುಂದಿನ ಪ್ರಧಾನಿ ನಾನೇ ಎಂದು ಅಬ್ಬರಿಸುತ್ತಾರೆ. 2024ರಲ್ಲಿ ಜನರು ಈ ರೀತಿಯ ಫ್ಯಾಸಿಸ್ಟ್ ಸರಕಾರವನ್ನು ಬದಲಾಯಿಸಬೇಕು ಎಂದು ಹೇಳಿದರು.ಉಲೇಮಾ ಹಿಂದ್ ಸಂಘಟನೆಯ ಮಹಮ್ಮದ್ ದಾರಿಮಿ ಮಾತನಾಡಿ, ನಾವು ರಾಮಾಯಣ, ಮಹಾಭಾರತ ಓದಿಕೊಂಡು ಬೆಳೆದವರು. ದುಶ್ಶಾಸನ ದ್ರೌಪದಿಯ ಸೀರೆ ಎಳೆದಿದ್ದೇ ಮಹಾಭಾರತಕ್ಕೆ ಕಾರಣವಾಯಿತು. ಅದೇ ಕಾರಣಕ್ಕೆ ಶ್ರೀಕೃಷ್ಣ ಧರ್ಮದ ಪರವಾಗಿ ನಿಂತು ಅಧರ್ಮಿಗಳನ್ನು ವಧಿಸುವಂತೆ ಮಾಡಿದ. ರಾಮಾಯಣ, ಮಹಾಭಾರತ ಬರೀಯ ಹಿಂದುಗಳದ್ದಲ್ಲ. ಅದು ಈ ದೇಶದ ಅಸ್ಮಿತೆ. ನಾವೀಗ ಈ ದೇಶದ ನೈಜ ಹಿಂದುಗಳನ್ನು ಉಳಿಸುವುದಕ್ಕಾಗಿ ಹೋರಾಡಬೇಕಿದೆ. ಸಾವಿರಾರು ವರ್ಷಗಳಿಂದ ಈ ದೇಶದಲ್ಲಿರುವ ಹಿಂದುಗಳನ್ನು ಹಿಂದುತ್ವದ ಹೆಸರಲ್ಲಿ ವಿಭಜಿಸಲು, ಧ್ರುವೀಕರಣ ಮಾಡಲು ಹೊರಟಿದ್ದಾರೆ. ಕ್ರೈಸ್ತ, ಮುಸ್ಲಿಮರನ್ನು ಎತ್ತಿ ಕಟ್ಟಿ ಮತ ಗಳಿಸುತ್ತಿದ್ದಾರೆ. ನಾವೀಗ ಹಿಂದುಗಳ ಪರ ನಿಲ್ಲುವ ಅವಶ್ಯಕತೆಯಿದೆ. ನೈಜ ಹಿಂದು ಯಾವತ್ತೂ ಕೇಡು ಬಗೆಯಲ್ಲ. ಉದಾರಿ ವ್ಯಕ್ತಿತ್ವದವರು ಎಂದು ಹೇಳಿದರು.ಪ್ರತಿಭಟನಾ ಸಭೆಯಲ್ಲಿ ಮಣಿಪುರದ ಜನರು ನಮ್ಮವರೇ, ಅವರೊಂದಿಗೆ ನಾವಿದ್ದೇವೆ ಎನ್ನುವ ಘೋಷಣೆ ಕೂಗಿದರು. ಅಲ್ಲದೆ, ನೂರಾರು ಪ್ಲೇಕಾರ್ಡ್ ಹಿಡಿದು ಮಣಿಪುರದ ಪರವಾಗಿ ಘೋಷಣೆ ಕೂಗಿದರು. ಮಂಗಳೂರು ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಿಂದಲೂ ಧರ್ಮಗುರು ಸಹಿತ ಭಗಿನಿಯರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದ್ದರು.

10ನೇ ಬಾರಿ ಫೈನಲ್ ಗೆ ಎಂಟ್ರಿ ಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್

Posted by Vidyamaana on 2023-05-24 00:57:21 |

Share: | | | | |


10ನೇ ಬಾರಿ ಫೈನಲ್ ಗೆ ಎಂಟ್ರಿ ಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ : ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ. ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ (ಮೇ 23) ನಡೆದ ಹೈ ವೋಲ್ವೇಜ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟನ್ಸ್ ತಂಡವನ್ನು 15 ರನ್‌ಗಳ ಅಂತರದಲ್ಲಿ ಬಗ್ಗುಬಡಿಯಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ದಾಖಲೆಯ 10ನೇ ಬಾರಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟ ಸಾಧನೆ ಮೆರೆದಿದೆ.

ಸಿಎಸ್‌ಕೆ ಭರ್ಜರಿ ಬ್ಯಾಟಿಂಗ್

ಕ್ವಾಲಿಫೈಯರ್ 1 ಹಣಾಹಣಿಯಲ್ಲಿ ಟಾಸ್ ಸೋತ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟ್ ಮಾಡುವಂತ್ತಾಯಿತು. ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಿಎಸ್‌ಕೆ ಮೊತ್ತ ದಾಖಲಿಸಿತು. ಓಪನರ್‌ಗಳಾದ ಋತುರಾಜ್ ಗಾಯಕ್ವಾಡ್ (60) ಮತ್ತು ಡೆವೋನ್ ಕಾನ್ವೇ (40) ಮೊದಲ ವಿಕೆಟ್‌ಗೆ 87 ರನ್‌ಗಳನ್ನು ಒಗ್ಗೂಡಿಸಿ ತಂಡದ ದೊಡ್ಡ ಮೊತ್ತಕ್ಕೆ ಭದ್ರ ಅಡಿಪಾಯ ಹಾಕಿತು. ಟೈಟನ್ಸ್ ತಂಡದ ವೇಗಿಗಳ ಮೊಹಮ್ಮದ್ ಶಮಿ ಮತ್ತು ಮೋಹಿತ್ ಶರ್ಮಾ ತಲಾ ವಿಕೆಟ್ ಕಿತ್ತು, ಸಿಎಸ್‌ಕೆ ಬ್ಯಾಟರ್‌ಗಳ ಅಬ್ಬರಕ್ಕೆ ಕೊಂಚ ಬ್ರೇಕ್ ಹಾಕಿದರು. ಆದರೂ, ಸ್ಲಾಗ್ ಓವರ್‌ಗಳಲ್ಲಿ ರವೀಂದ್ರ ಜಡೇಜಾ (22) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸಿಎಸ್‌ಕೆ 170ರ ಗಡಿ ದಾಟಿತು. 20 ಓವರ್‌ಗಳಲ್ಲಿ 172/7 ರನ್ ಕಲೆಹಾಕಿತು.

ಚೇಸಿಂಗ್‌ನಲ್ಲಿ ಸೋತ ಪಾಂಡ್ಯ ಪಡೆ

ಟೂರ್ನಿಯುದ್ದಕ್ಕೂ ರನ್ ಚೇಸಿಂಗ್‌ನಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟನ್ಸ್, ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುರಿ ಬೆನ್ನತ್ತಿ ಮುಗ್ಗರಿಸಿತು. ಸಿಎಸ್‌ ಕ್ಯಾಪ್ಟನ್ ಎಂಎಸ್ ಧೋನಿ ರಚಿಸಿದ್ದ ಫೀಲ್ಡಿಂಗ್ ವ್ಯೂಹ ಮತ್ತು ಬೌಲರ್‌ಗಳಿಂದ ಮೂಡಿಬಂದ ಕಟ್ಟುನಿಟ್ಟಿನ ದಾಳಿ ಎದುರು ಟೈಟನ್ಸ್ ರನ್ ಹೆಕ್ಕಲು ತಡಬಡಾಯಿಸಿತು. ಇನ್ ಫಾರ್ಮ್ ಓಪನರ್ ಶುಭಮನ್ ಗಿಲ್ (42) ಮತಯ್ತು ಇನಿಂಗ್ಸ್ ಅಂತ್ಯದಲ್ಲಿ ರಶೀದ್ ಖಾನ್ (30) ಹೋರಾಡಿದರೂ, ಟೈಟನ್ಸ್ 157 ರನ್‌ಗಳಿಗೆ ಆಲ್‌ಔಟ್ ಆಯಿತು. ಸಿಎಸ್‌ಕೆ ಪರ ದೀಪಕ್ ಚಹ‌, ಮತೀಶ ಪತಿರಣ, ಮಹೇಶ್ ತೀಕ್ಷಣ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಉರುಳಿಸಿ ಚೆನ್ನೈಗೆ ಜಯದ ಮಾಲೆ ತೊಡಿಸಿದರು.ಫೈನಲ್ ತಲುಪಲು ಟೈಟನ್ಸ್‌ಗೆ ಮತ್ತೊಂದು ಅವಕಾಶ ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟನ್ಸ್ ತಂಡ ಕ್ವಾಲಿಫೈಯರ್ 1 ಪಂದ್ಯದಲ್ಲಿ ಸಿಎಸ್‌ಕೆ ಎದುರು ಮುಗ್ಗರಿಸಿದರೂ, ಫೈನಲ್‌ಗೆ ಅರ್ಹತೆ ಪಡೆಯಲು ಮತ್ತೊಂದು ಅವಕಾಶ ಹೊಂದಿದೆ. ಮೇ 26ರಂದು ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಎಲಿಮಿನೇಟರ್ ಪಂದ್ಯದ ವಿನ್ನರ್ ಎದುರು ಫೈನಲ್ ಅರ್ಹತೆಗಾಗಿ ಪೈಪೋಟಿ ನಡೆಸಲಿದೆ. ಮೇ 24ರಂ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಮತ್ತು ಲಖನೌ ಸೂಪರ್ ಜಯಂಟ್ಸ್ ತಂಡಗಳು ಪೈಪೋಟಿ ನಡೆಸಲಿವೆ. ಇಲ್ಲಿ ಗೆದ್ದ ತಂಡಕ್ಕೆ ಗುಜರಾತ್ ಟೈಟನ್ಸ್ ಸವಾಲು ಎದುರಾಗಲಿದೆ. ಫೈನಲ್ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 28ರಂದು ನಡೆಯಲಿದೆ.

ಕಡೂರು ಶಾಸಕರ ವಿರುದ್ಧ ವಾಟ್ಸಾಪ್ ಸ್ಟೇಟಸ್ : ಮಹಿಳಾ ಪೇದೆ ಅಮಾನತು

Posted by Vidyamaana on 2023-08-12 12:04:39 |

Share: | | | | |


   ಕಡೂರು ಶಾಸಕರ ವಿರುದ್ಧ ವಾಟ್ಸಾಪ್ ಸ್ಟೇಟಸ್  : ಮಹಿಳಾ ಪೇದೆ ಅಮಾನತು

ಚಿಕ್ಕಮಗಳೂರು: ವರ್ಗಾವಣೆ ವಿರೋಧಿಸಿ ಕಡೂರು ಶಾಸಕರ ವಿರುದ್ಧ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಪೊಲೀಸ್ ಕಾನ್ಸ್ಟೇಬಲ್ ರನ್ನು ಅಮಾನತು ಮಾಡಲಾಗಿದೆ.

ಕಡೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಪೇದೆ ಲತಾ ಅವರನ್ನು ತರಿಕೆರೆ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದು ದ್ವೇಷದ ವರ್ಗಾವಣೆ ಎಂದು ಶಾಸಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ವರ್ಗಾವಣೆ ವಿರೋಧಿಸಿ ಲತಾ ಸಬ್ ಇನ್ಸ್ ಪೆಕ್ಟರ್ ಜೊತೆಯೂ ಮಾತಿನ ಚಕಮಕಿ ನಡೆಸಿದ್ದರು.


ಇದೀಗ ‘ಕಡೂರು ಎಂಎಲ್ ಎ ಗೆ ನನ್ನ ಧಿಕ್ಕಾರವಿರಲಿ. ನನಗೆ ಏನಾದರು ತೊಂದರೆ ಆದರೆ ಎಂಎಲ್ಎ ಕಾರಣ’ ಎಂದು ವಾಟ್ಸಪ್ ಸ್ಟೇಟಸ್ ನಲ್ಲಿ ಶಾಸಕರ ವಿರುದ್ಧ ಸಮರಕ್ಕಿಳಿದಿದ್ದಾರೆ.


ಇದೀಗ ಚಿಕ್ಕಮಗಳೂರು ಎಸ್ ಪಿ ಅವರು ಮಹಿಳಾ ಪೇದೆ ಲತಾರನ್ನ ಅಮಾನತು ಮಾಡಿದ್ದಾರೆ.

ಬಂಟ್ವಾಳ: ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಕಾರು

Posted by Vidyamaana on 2023-07-05 10:45:16 |

Share: | | | | |


ಬಂಟ್ವಾಳ: ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಕಾರು

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಬಂಟ್ವಾಳದ ತುಂಬೆ ಎಂಬಲ್ಲಿ ನಡೆದಿದೆ.ಬೆಳ್ತಂಗಡಿ ನಿವಾಸಿ ನವಾಜ್ ಎಂಬವರು ಕಾರಿನಲ್ಲಿ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ವೇಳೆ ತುಂಬೆಯಲ್ಲಿ ಈ ಘಟನೆ ನಡೆದಿದೆ.ಕಾರು ಡಿವೈಡರ್ ಮೇಲೆ ಹತ್ತಿದ್ದಲ್ಲದೆ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರಿನ ಒಂದು ಭಾಗ ನಜ್ಜುಗುಜ್ಜಾಗಿದೆ. ಆದರೆ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ

ಕದ್ದ ಸ್ಕೂಟಿಯಲ್ಲಿ ತಿರುಗಾಡುತ್ತಲೇ ಹಲವೆಡೆ ಕಳ್ಳತನ – ಚಾಲಾಕಿ ಖದೀಮ ಸುರೇಶ ಅಂದರ್

Posted by Vidyamaana on 2023-08-26 09:01:14 |

Share: | | | | |


ಕದ್ದ ಸ್ಕೂಟಿಯಲ್ಲಿ ತಿರುಗಾಡುತ್ತಲೇ ಹಲವೆಡೆ ಕಳ್ಳತನ – ಚಾಲಾಕಿ ಖದೀಮ ಸುರೇಶ ಅಂದರ್

ಬೆಳ್ತಂಗಡಿ : ಪೊಲೀಸರಿಗೆ ತಲೆನೋವಾಗಿದ್ದ ಸರಣಿ ಅಂತರ್ ರಾಜ್ಯ ಕಳ್ಳನೊಬ್ಬ ಸ್ಕೂಟರ್ ಕದ್ದು ಬೆಳ್ತಂಗಡಿ ತಾಲೂಕಿನ ಹಲವೆಡೆ ಕನ್ನ ಹಾಕಿ ಅದರಲ್ಲಿ ಸಿಕ್ಕಿದ್ದ ಹಣವನ್ನು ಜೂಜಾಟಕ್ಕೆ ಬಳಸುತ್ತಿದ್ದ ಕದಿಮನೊಬ್ಬನನ್ನು ಕಳ್ಳತನ ಮಾಡಿ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಆಗಸ್ಟ್ 25 ರಂದು ಧರ್ಮಸ್ಥಳ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ‌.


ಆಗಸ್ಟ್  9 ರಂದು ರಾತ್ರಿ 10 ಗಂಟೆಯಿಂದ ಆಗಸ್ಟ್ 10 ರ ಬೆಳಿಗ್ಗೆ 6.30 ಗಂಟೆಯ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಸೋಮಂತಡ್ಕ ಎಂಬಲ್ಲಿ ಪ್ರಸನ್ನ ಅರಿಗ ಎಂಬವರ ಪದ್ಮಾಂಬ ಪ್ರಾವಿಜನ್ ಸ್ಟೋರ್ ರಾಡ್ ನಿಂದ ಬೀಗ ಮುರಿದು ಒಳಹೋಗಿ ಕ್ಯಾಶ್ ಕೌಂಟರ್ ನಲ್ಲಿದ್ದ ಐದು ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಸನ್ನ ಅರಿಗ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 


 

ಧರ್ಮಸ್ಥಳ ಪೊಲೀಸ್‌ ಸಬ್ ಇನ್ಸ್ಪೆಕ್ಟರ್ ಅನಿಲ್‌ ಕುಮಾರ್ ತಂಡ ಆಗಸ್ಟ್25 ರಂದು ವಾಹನ ತಪಾಸಣೆ ನಡೆಸುತ್ತಿದ್ದಾಗ ಕಳ್ಳತನ ಮಾಡಿಕೊಂಡು ಸ್ಕೂಟರ್ ವಾಹನದಲ್ಲಿ ಕಾರ್ಕಳ ಮನೆಗೆ ಹೋಗುತ್ತಿದ್ದಾಗ ಅಡ್ಡಹಾಕಿ ವಾಹನ ಪರಿಶೀಲನೆ ನಡೆಸಿದಾಗ ದಾಖಲೆಗಳಿಲ್ಲದೆ  ಅನುಮಾನಸ್ಪದವಾಗಿ ವರ್ತಿಸುತ್ತಿದ್ದಾಗ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಕೂಟರ್ ಕಳ್ಳತನ ಮಾಡಿ ಅದರಲ್ಲಿಯೇ ಹಲವು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ‌‌. ಆರೋಪಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ,ಅತ್ತೂರು ಗ್ರಾಮದ ದಿ.ಕೊರಗಪ್ಪ ಪೂಜಾರಿ ಮಗನಾದ  ಸುರೇಶ ಕೆ. ಪೂಜಾರಿ(50) ಎಂಬಾತ ಆರೋಪಿಯಾಗಿದ್ದಾನೆ.ಈ ಆರೋಪಿಯು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ KA-21-U-9418 ನಂಬರಿನ ಸ್ಕೂಟಿಯೊಂದನ್ನು ಕಳ್ಳತನ ಮಾಡಿ ಸದ್ರಿ ಸ್ಕೂಟಿಯನ್ನು ಉಪಯೋಗಿಸಿಕೊಂಡು ಸುಮಾರು ಒಂದುವರೆ ತಿಂಗಳಿನಿಂದ ಧರ್ಮಸ್ಥಳ, ಕಕ್ಕಿಂಜೆ, ಉಜಿರೆ, ಸೋಮಂತಡ್ಕ, ನೆರಿಯಾ, ಕಲ್ಮಂಜ, ಕನ್ಯಾಡಿ, ಗುರುವಾಯನಕೆರೆ, ವೇಣೂರು ಸೇರಿ ಸುಮಾರು 25 ಕ್ಕೂ ಹೆಚ್ಚು ಕಡೆಗಳಲ್ಲಿ ಸರಣಿ ಕಳವು ಮಾಡಿದ್ದು. ಈತನು ಮಟ್ಕಾ (ಓಸಿ) ಆಡುವ ಚಟವುಳ್ಳವನಾಗಿದ್ದು, ಕಳ್ಳತನ ಮಾಡಿದ ಹಣವನ್ನು ಮಟ್ಕಾ ಆಟಕ್ಕೆ ಕಟ್ಟಿ ಸೊತಿರುವುದಾಗಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿರುತ್ತಾನೆ. 


ಈತನು ಕಾರ್ಕಳ ಗ್ರಾಮಾಂತರ ಠಾಣೆ, ಶಿರ್ವ ಠಾಣೆ, ಹಿರಿಯಡಕ ಠಾಣೆ, ಪಡುಬಿದ್ರಿ ಠಾಣೆ, ಮುಲ್ಕಿ ಠಾಣೆ, ಹೆಬ್ರಿ ಠಾಣೆ, ಉಡುಪಿ ನಗರ ಠಾಣೆ, ದಾವಣಗೆರೆ ಗ್ರಾಮಾಂತರ ಠಾಣೆ, ಮತ್ತು ಬೆಳಗಾಂ ಮಾರ್ಕೆಟ್‌ ಪೊಲೀಸ್‌ ಠಾಣೆಗಳು ಸೇರಿ ಒಟ್ಟು 10 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಲ್ಲಿದ್ದು. ಕಳೆದ ಎರಡು ತಿಂಗಳು ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರಗೆ ಬಂದು ವಾಪಸ್ ಕಳ್ಳತನ ಕೃತ್ಯ ಮುಂದುವರೆಸಿಕೊಂಡಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.ಆರೋಪಿಯಿಂದ 20,220 ರೂಪಾಯಿ ನಗದು ಹಾಗೂ ಕಳ್ಳತನ ಮಾಡಿ ಕೃತ್ಯಕ್ಕೆ ಉಪಯೋಗಿಸಿದ KA-21-U-9418 ನಂಬರಿನ ಸ್ಕೂಟಿ ವಾಹನ ಅಂದಾಜು ಮೌಲ್ಯ 25 ಸಾವಿರ ಅಗಿದ್ದು ಅದನ್ನು ವಶಪಡಿಸಿಕೊಂಡಿದ್ದು ವಶಪಡಿಸಿಕೊಂಡಿರುವ ಸೊತ್ತುಗಳು ಒಟ್ಟು ಅಂದಾಜು ಮೌಲ್ಯ 45 ಸಾವಿರ ಅಗಿದ್ದು. ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಆಗಸ್ಟ್ 26 ರಂದು (ಇಂದು) ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ‌.


ಈ ಪ್ರಕರಣದಲ್ಲಿ ಆರೋಪಿಯ ಪತ್ತೆಗಾಗಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ (ಕಾ.ಸು)ಅನಿಲ್ ಕುಮಾರ್ ಡಿ, ಪಿ.ಎಸ್.ಐ (ತನಿಖೆ) ಸಮರ್ಥ ಗಾಣಿಗೇರ್ ಅಲ್ಲದೇ ಈ ಹಿಂದೆ ಪಿಎಸ್ಐ ಆಗಿದ್ದ (ತನಿಖೆ) ಲೋಲಾಕ್ಷ ಪಿ ರವರ ನೇತೃತ್ವದ ಸಿಬ್ಬಂದಿಗಳಾದ ಎ.ಎಸ್.ಐ ಸ್ಯಾಮುವೆಲ್ ತಂಡದ ಸಿಬ್ಬಂದಿಗಳಾದ ರಾಜೇಶ್‌, ಪ್ರಶಾಂತ್, ಶೇಖರ್, ಸತೀಶ ನಾಯ್ಕ ಜಿ, ಶಶಿಧರ, ಮಂಜುನಾಥ,ಧರ್ಮಪಾಲ್, ಅಸ್ಲಾಂ, ಕೃಷ್ಣಪ್ಪ, ಪ್ರಮೋದಿನಿ, ಮಲ್ಲಿಕಾರ್ಜುನ,ಅಭಿಜಿತ್ ಮೆಹಬೂಬ್, ನಾಗರಾಜ ಬುಡ್ರಿ, ದೀಪು, ಮಧು, ಹರೀಶ್, ಜಗದೀಶ್ , ಚಾಲಕ ಲೋಕೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.



Leave a Comment: