ಪುತ್ತೂರಿನ ಶೈಕ್ಷಣಿಕ ಮುಕುಟಕ್ಕೊಂದು ಹೊಸ ಗರಿ – ಸುದಾನ ಪಿ.ಯು ಕಾಲೇಜು ಜು.27ರಂದು ಶುಭಾರಂಭ

ಸುದ್ದಿಗಳು News

Posted by vidyamaana on 2024-07-26 15:01:18 |

Share: | | | | |


ಪುತ್ತೂರಿನ ಶೈಕ್ಷಣಿಕ ಮುಕುಟಕ್ಕೊಂದು ಹೊಸ ಗರಿ – ಸುದಾನ ಪಿ.ಯು ಕಾಲೇಜು ಜು.27ರಂದು ಶುಭಾರಂಭ

ಪುತ್ತೂರು: 33 ವರ್ಷಗಳ ಹಿಂದೆಯೇ ನಾಡಿನ ಶೈಕ್ಷಣಿಕ ಕ್ರಾಂತಿಗೆ ನಾಂದಿಯನ್ನು ಹಾಡಿದ ಬಾಸೆಲ್ ಮಿಷನ್ ಸಂಸ್ಥೆಯ ಮೂಲದಿಂದ ಸುದಾನ ವಿದ್ಯಾಸಂಸ್ಥೆಗಳ ಉದಯವಾಗಿದ್ದು ಇದೀಗ ವಿಸ್ತರಿತ ಶೈಕ್ಷಣಿಕ ಸೇವೆಯಲ್ಲೊಂದು ಹೊಸ ಹೆಜ್ಜೆಯನ್ನಿರಿಸಿದ ಸುದಾನ ಸಮೂಹ ಶಿಕ್ಷಣ ಸಂಸ್ಥೆಯು ಸುದಾನ ಕ್ಯಾಂಪಸ್ಸಿನಲ್ಲಿ ಸುಧಾನ ಪದವಿ ಪೂರ್ವ ಕಾಲೇಜ್ ಅನ್ನು ಪ್ರಾರಂಭಿಸಿದೆ. ಇದರ ಉದ್ಘಾಟನಾ ಕಾರ್ಯಕ್ರಮವು ಜು.27 ರಂದು ಸಂಸ್ಥೆಯ ಸುದಾನ ಎಡ್ವರ್ಡ್ ಸಭಾಂಗಣದಲ್ಲಿ ಜರಗಲಿದೆ.

ನೂತನ ಸುದಾನ ಪದವಿ ಪೂರ್ವ ಕಾಲೇಜ್‌ ಅನ್ನು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್‌ರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣರವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಅಧ್ಯಕ್ಷ ರೆ.ವಿಜಯ ಹಾರ್ವಿನ್‌ರವರು ವಹಿಸಿಕೊಳ್ಳಲಿದ್ದಾರೆ. 


ಗೌರವ ಅತಿಥಿಗಳಾಗಿ ಪ್ರತ್ತೂರಿನ ಮಾಜಿ ಶಾಸಕರಾದ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಸಂಜೀವ ಮಠಂದೂರು, ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಯಪಾಲ ಸುಪ್ರೀತ್ ಕೆ.ಸಿರವರು ಉಪಸ್ಥಿತರಿರಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಗೌರವ ಅತಿಥಿಗಳಾಗಿ ಪ್ರತ್ತೂರಿನ ಮಾಜಿ ಶಾಸಕರಾದ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಸಂಜೀವ ಮಠಂದೂರು, ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ   ಸುಪ್ರೀತ್ ಕೆ.ಸಿರವರು ಉಪಸ್ಥಿತರಿರಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Additional Image

 Share: | | | | |


ಮಂಗಳೂರು ಲಾಡ್ಜ್ ನಲ್ಲಿ ಬೆಂಕಿ: ಓರ್ವ ಮೃತ್ಯು

Posted by Vidyamaana on 2023-11-23 10:53:49 |

Share: | | | | |


ಮಂಗಳೂರು  ಲಾಡ್ಜ್ ನಲ್ಲಿ ಬೆಂಕಿ: ಓರ್ವ ಮೃತ್ಯು

ಮಂಗಳೂರು: ಲಾಡ್ಜ್ ನ ರೂಮ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ಮೃತಪಟ್ಟಿರುವ ಘಟನೆ ನಗರದ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ನಡೆದಿದೆ.


ಯಶ್ರಾಜ್ ಎಸ್.ಸುವರ್ಣ(43) ಮೃತರು ಎಂದು ತಿಳಿದು ಬಂದಿದೆ.


ನಗದರ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ಮಧ್ಯರಾತ್ರಿ 12:35 ಕ್ಕೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಯಶ್ರಾಜ್ ಅವರ ಮೃತದೇಹ ಮಲಗಿದ ಸ್ಥಿತಿಯಲ್ಲಿದ್ದು, ಬಾಗಿಲಿನ ಚಿಲಕ ಹಾಕಿಕೊಂಡಿದ್ದರು. ಅನಂತರ ಲಾಡ್ಜ್ ನವರು ತೆರೆದಾಗಬೆಂಕಿ ಆವರಿಸಿತ್ತು.


ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

ಫೆ.27: ಉಡುಪಿಗೆ ಭೇಟಿ ನೀಡಲಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ

Posted by Vidyamaana on 2023-02-26 16:07:56 |

Share: | | | | |


ಫೆ.27: ಉಡುಪಿಗೆ ಭೇಟಿ ನೀಡಲಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ

ಉಡುಪಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಫೆ.27ರ ಬೆಳಗ್ಗೆ 9:30ಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಲಿದ್ದು, ಉಡುಪಿಯ 5 ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಲಿರುವ 5 ಪ್ರಗತಿ ರಥಗಳಿಗೆ ಚಾಲನೆ ನೀಡಲಿದ್ದಾರೆ.

ಅಪರಾಹ್ನ 3:00 ಗಂಟೆಗೆ ಕಾರ್ಕಳದಲ್ಲಿ ನಡೆಯುವ ಬೃಹತ್ ಬೈಕ್ ಜಾಥಾದಲ್ಲಿ ಭಾಗವಹಿಸಿ, ಸಂಜೆ 4:00 ಗಂಟೆಗೆ ಅಜೆಕಾರಿನಲ್ಲಿ ನಡೆಯುವ ಉಡುಪಿ ಜಿಲ್ಲಾ ಮಟ್ಟದ ಯುವ ಮೋರ್ಚಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಸಚಿವ ವಿ.ಸುನೀಲ್ ಕುಮಾರ್, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕೆ.ಸಿ. ಸಹಿತ ರಾಜ್ಯ ಮತ್ತು ಜಿಲ್ಲಾ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಅಕ್ಷಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅಕ್ಷಯ ಗುರು ಪುರಸ್ಕಾರ ಕಾರ್ಯಕ್ರಮ

Posted by Vidyamaana on 2023-09-14 17:50:42 |

Share: | | | | |


ಅಕ್ಷಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅಕ್ಷಯ ಗುರು ಪುರಸ್ಕಾರ ಕಾರ್ಯಕ್ರಮ

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಆಯೋಜನೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಅಕ್ಷಯ ಗುರು ಪುರಸ್ಕಾರ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಡಿ ಮಹೇಶ್ ರೈ,ನಿವೃತ್ತ ಕನ್ನಡ ಪ್ರಾಧ್ಯಾಪಕರು ವಿವೇಕಾನಂದ ಕಾಲೇಜು ಪುತ್ತೂರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ, ಯಾವಾಗ ತಾನೇ ಕಲಿಸಿದ ವಿದ್ಯಾರ್ಥಿ ಶಿಕ್ಷಕನನ್ನು ಮೀರಿ ಬೆಳೆದು ಉನ್ನತಸ್ಥಾನಕ್ಕೇರುತ್ತಾನೋ, ಅಂದು ಶಿಕ್ಷಕನ ಜೀವನ ಸಾರ್ಥಕ ಎಂದರು.


ಅಕ್ಷಯ ಗುರು ಪುರಸ್ಕಾರವನ್ನು ದಯಾನಂದ ರೈ ಕರ‍್ಮಂಡ, ರಾಜ್ಯ ಪ್ರಶಸ್ತಿ ವಿಜೇತರು,ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಕೋಟಿಯಪ್ಪ ಪೂಜಾರಿ ಸೇರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ನಾರಾಯಣ ಕೆ ನಿವೃತ್ತ ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಉಪ್ಪಳಿಗೆ, ರವೀಶ್ ಪಡುಮಲೆ ಸಹಪ್ರಾಧ್ಯಾಪಕರು, ಎಸ್ ಡಿ ಎಂ ಎಂಜಿನಿಯರಿಂಗ್ ಕಾಲೇಜು ಉಜಿರೆ, ಶುಭಲತಾ ಹಾರಾಡಿ,ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು,ಮುಖ್ಯಗುರುಗಳು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ, ಸಂಧ್ಯಾ ರವೀಶ್ಚಂದ್ರ, ನಿವೃತ್ತ ಅಂಗನವಾಡಿ ಕರ‍್ಯರ‍್ತೆ ಸಂಪ್ಯ, ಉದಯಕುಮಾರ್ ರೈ ಎಸ್, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು, ಸಹ ಶಿಕ್ಷಕರು ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಡಾಕ್ಟರ್ ರವೀಶ್ ಪಡುಮಲೆಯವರು ತಮ್ಮ ಸನ್ಮಾನವನ್ನು ಗುರುಗಳಾದ ರಘುನಾಥ ರೈ ಅವರಿಗೆ ಅರ್ಪಿಸಿದರು.

ಶುಭಲತಾ ಹಾರಾಡಿಯವರು ಶಾಶ್ವತವಾದ ಆನಂದ ನಮ್ಮೊಳಗೆ ಇದೆ ಅದನ್ನು ನಾವು ಕಂಡುಕೊಳ್ಳಬೇಕು ಎಂದು ಹೇಳಿದರು.

ಕೋಟಿಯಪ್ಪ ಪೂಜಾರಿ ಸೇರ ಅವರು ತಮ್ಮ ಒಕ್ಕಣೆಯ ಮೂಲಕ ಕಾಲೇಜಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಅತಿಥಿಗಳಾಗಿ ಆಗಮಿಸಿದ ವಿದ್ಯಾಮಾತಾ ಅಕಾಡೆಮಿ ನಿರ್ದೆಶಕ ಭಾಗ್ಯೇಶ್ ರೈ  ಮಾತನಾಡಿ ನಿಮ್ಮ ಬದುಕನ್ನ ಪ್ರೀತಿಸಿ, ಇನ್ನೊಬ್ಬರ ಬದುಕನ್ನ ಗೌರವಿಸಿ ಎಂದು ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳನ್ನು ತಿಳಿಸಿದರು.


ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದ, ಜಯಂತ ನಡುಬೈಲು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಗೌರವಿಸುವುದು ನಮ್ಮ ಭಾಗ್ಯ ಎಂದರು.


ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ನಾಯಕ ವಿನೋದ್ ಕೆ ಸಿ ಹಾಗೂ ಕಾರ್ಯದರ್ಶಿ ಶೈಲಾಶ್ರೀ ಉಪಸ್ಥಿತರಿದ್ದರು. ಅಕ್ಷಯ ಗುರುಪುರಸ್ಕಾರದ ಸನ್ಮಾನ ಪತ್ರವನ್ನು ಕುಮಾರಿ ಭವ್ಯಶ್ರೀ ಬಿ, ಓದಿದರು. ರಶ್ಮಿ ಕೆ,ಮತ್ತು ಕಿಶನ್ ರಾವ್, ಪ್ರಕೃತಿ ಮತ್ತು ಬಳಗದಿಂದ ಪ್ರಾರ್ಥನೆ ನಡೆಯಿತು.


ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ಸ್ವಾಗತಿಸಿ, ಆಡಳಿತಾಧಿಕಾರಿ ಅರ್ಪಿತ್ ಟಿಎ ವಂದಿಸಿದರು. ಪ್ರಾಂಶುಪಾ ಸಂಪತ್ ಪಕ್ಕಳ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಆಶಿಕಾ ಕಾರ್ಯಕ್ರಮ ನಿರೂಪಿಸಿದರು

ಪುತ್ತೂರು ನಗರ ಠಾಣಾ ಪೊಲೀಸರ ಭರ್ಜರಿ ಬೇಟೆ

Posted by Vidyamaana on 2024-03-23 19:42:29 |

Share: | | | | |


ಪುತ್ತೂರು ನಗರ ಠಾಣಾ ಪೊಲೀಸರ ಭರ್ಜರಿ ಬೇಟೆ

ಪುತ್ತೂರು :ನಗರ ಠಾಣಾ ಪೊಲೀಸರು ತಮಿಳುನಾಡು ಮೂಲದ ಅಂತರ್ ರಾಜ್ಯ ಕಳ್ಳಿಯನ್ನು ಬಂಧಿಸಿದ್ದು, ಅಕೆಯಿಂದ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.


ಪೆ. 12ರಂದು ಪುತ್ತೂರು ನಗರದ KSRTC ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಈ ಪ್ರಕರಣವನ್ನು ಪುತ್ತೂರು ನಗರ ಠಾಣಾ ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸಿದ್ದು, ಪ್ರಕರಣದ ಆರೋಪಿ ತಮಿಳುನಾಡು ಮೂಲದ ಅಂತರ್ ರಾಜ್ಯ ನಟೋರಿಯಸ್ ಕಳ್ಳಿ ಈಸ್ಟರಿ (45) ಎಂಬಾಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಆಕೆಯ ಬಳಿಯಿದ್ದ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.


ಈ ಪ್ರಕರಣವನ್ನು ಬೇದಿಸುವಲ್ಲಿ ದ ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯತ್ ಮತ್ತು ದ ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಮ್ ಎನ್ ರವರ ನಿರ್ದೇಶನದಲ್ಲಿ ಪುತ್ತೂರು ಉಪವಿಭಾಗದ ಉಪಾಧೀಕ್ಷಕ ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ, ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಸತೀಶ್ ಜಿ ಜೆ, ರವರ ಸಾರಥ್ಯದಲ್ಲಿ ಪುತ್ತೂರು ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ್ ಎಮ್ ಎಮ್ ಹಾಗೂ ಸುಬ್ರಹ್ಮಣ್ಯ ಹೆಚ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್ ಸಿ ಸ್ಕರಿಯ ಎಮ್ ಎ. ಹೆಚ್ ಸಿ ಕೆ ಬಸವರಾಜ, ಹೆಚ್ ಸಿ ಜಗದೀಶ್, ಹೆಚ್ ಸಿ ಸುಬ್ರಹ್ಮಣ್ಯ, ಪಿಸಿ ವಿನಾಯಕ ಎಸ್ ಬಾರ್ಕಿ, ಪಿಸಿ ಶರಣಪ್ಪ ಪಾಟೀಲ್, ಮಪಿಸಿ ರೇವತಿ ಹಾಗೂ ದ.ಕ ಜಿಲ್ಲಾ ಗಣಕ ಯಂತ್ರ ವಿಭಾಗದ ಎಹೆಚ್ ಸಿ ಸಂಪತ್ ಮತ್ತು ಸಿಪಿಸಿ ದಿವಾಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಭಾರತ್ ಅಕ್ಕಿ ಪಡೆಯಲು ಮುಗಿ ಬಿದ್ದ ಜನರು; ಕೆಲವೇ ಕ್ಷಣಗಳಲ್ಲಿ ಖಾಲಿಯಾದ ಕ್ಯಾಂಟರ್

Posted by Vidyamaana on 2024-02-07 07:21:02 |

Share: | | | | |


ಭಾರತ್ ಅಕ್ಕಿ ಪಡೆಯಲು ಮುಗಿ ಬಿದ್ದ ಜನರು; ಕೆಲವೇ ಕ್ಷಣಗಳಲ್ಲಿ ಖಾಲಿಯಾದ ಕ್ಯಾಂಟರ್

ಕೋಲಾರ, ಫೆ.07: ಭಾರತ್ ಅಕ್ಕಿ(bharat brand rice) ಪಡೆಯಲು ಜನರು ಮುಗಿಬಿದ್ದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ(Bangarapet) ಪಟ್ಟಣದ ಬಸ್ ನಿಲ್ದಾಣದ ಬಳಿ ಕಂಡುಬಂದಿದೆ. ಒಬ್ಬೊಬ್ಬರು ಎರಡು ಮೂರು ಬ್ಯಾಗ್ ಅಕ್ಕಿ ಖರೀದಿ ಮಾಡಿದ್ದಾರೆ. ಹತ್ತು ಕೆ.ಜಿ ತೂಕದ ಬ್ಯಾಗ್​ಗಳನ್ನು ಕ್ಯಾಂಟರ್ ವಾಹನದಲ್ಲಿ ತುಂಬಿಕೊಂಡು ಬಂದು ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ನೋಡ‌ ನೋಡುತ್ತಲೇ ಭಾರತ್ ಅಕ್ಕಿ ಪಡೆಯಲು ಜನರ ನೂಕು ನುಗ್ಗಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಕ್ಯಾಂಟರ್ ಖಾಲಿಯಾಗಿದೆ.

ಮೂಡುಬಿದಿರೆ; ಕಾಲೇಜು ವಿದ್ಯಾರ್ಥಿ ಸ್ವಾತಿಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ.

Posted by Vidyamaana on 2023-06-19 03:48:57 |

Share: | | | | |


ಮೂಡುಬಿದಿರೆ; ಕಾಲೇಜು ವಿದ್ಯಾರ್ಥಿ ಸ್ವಾತಿಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ.

ಮೂಡುಬಿದಿರೆ:ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುರಸಭೆ ವ್ಯಾಪ್ತಿಯ ಅಲಂಗಾರಿನಲ್ಲಿ ನಡೆದಿದೆ.


ಮೂಡುಬಿದಿರೆ ಎಸ್.ಎನ್.ಎಂ ಪಾಲಿಟೆಕ್ನಿಕ್‌ನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಸುರೇಶ್ ಭಂಡಾರಿ ಅವರ ಪುತ್ರ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಸಾತ್ವಿಕ್(21) ಆತ್ಮಹತ್ಯೆ ಮಾಡಿಕೊಂಡವರು.


ಭಾನುವಾರ ಬೆಳಗ್ಗೆ ಸಾತ್ವಿಕ್‌ನನ್ನು ಆತನ ತಾಯಿ ಎಬ್ಬಿಸುವಾಗ ಕೋಪಗೊಂಡಿದ್ದು, ಕೆಲವು ನಿಮಿಷಗಳ ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮಗನನ್ನು ಎಬ್ಬಿಸಿ, ಪರೀಕ್ಷೆ ಹತ್ತಿರ ಬಂದಿದೆ, ಬೇಗ ಎದ್ದು ಓದು ಎಂದು ಬುದ್ದಿವಾದ ಹೇಳಿದರೆನ್ನಲಾಗಿದೆ.ಇಷ್ಟಕ್ಕೆ ಕೋಪಗೊಂಡ ಸಾತ್ವಿಕ್‌ ಕೋಣೆಯ ಬಾಗಿಲು ಮುಚ್ಚಿ ಶಾಲನ್ನು ಫ್ಯಾನಿಗೆ ಕಟ್ಟಿ ಆತ್ಮಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ಷುಲ್ಲಕ ಕಾರಣಕ್ಕೆ ಪ್ರತಿಭಾವಂತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಬೇರೆ ಏನಾದರೂ ಕಾರಣ ಇದೆಯಾ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ.



Leave a Comment: