ಮೂಗರ ಭಾಷೆ ಗೇಲಿ ಮಾಡಿ ಅಪಹಾಸ್ಯ: ರೇಡಿಯೊ ಜಾಕಿ ಸೇರಿ ಇಬ್ಬರ ಬಂಧನ

ಸುದ್ದಿಗಳು News

Posted by vidyamaana on 2024-07-27 01:04:24 |

Share: | | | | |


ಮೂಗರ ಭಾಷೆ ಗೇಲಿ ಮಾಡಿ ಅಪಹಾಸ್ಯ: ರೇಡಿಯೊ ಜಾಕಿ ಸೇರಿ ಇಬ್ಬರ ಬಂಧನ

ಬೆಂಗಳೂರು: ಮೂಕ ಸನ್ನೆ ಮೂಲಕ ಮಾತು ಬಾರದವರಿಗೆ ಅವಮಾನ ಮಾಡಿದ ರೇಡಿಯೋ ಜಾಕಿ ಸೇರಿ ಇಬ್ಬರನ್ನು ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರೋಹನ್ ಕಾರಿಯಪ್ಪ ಮತ್ತು ಶರವಣ ಭಟ್ಟಾಚಾರ್ಯ ಎಂದು ಗುರುತಿಸಲಾಗಿದೆ. ಆರೋಪಿಗಳು ಕಿವುಡ ಮತ್ತು ಮೂಗರ ಭಾಷೆಯನ್ನು ಅಶ್ಲೀಲ ಮೂಕ ಸನ್ನೆ ಮೂಲಕ ಅವಮಾನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ರೋಹನ್ ಕಾರಿಯಪ್ಪ ರೇಡಿಯೊ ಜಾಕಿಯಾಗಿ ಕೆಲಸ ಮಾಡುತ್ತಿದ್ದ. ಮತ್ತೋರ್ವ ಆರೋಪಿ ಶರವಣ ಯಾವ ಕೆಲಸ ಮಾಡದೇ ಮನೆಯಲ್ಲೇ ಇದ್ದ. ವಿದ್ಯಾವಂತ ಯುವ ರಾಜಕಾರಣಿಗಳನ್ನ ಅಣಕಿಸೋ ಭರದಲ್ಲಿ ಮಾತು ಬಾರದ ಮೂಗರು ಬಳಸೋ ಸನ್ನೆಯ ಮೂಲಕ ಅಶ್ಲೀಲವಾಗಿ ಅವಹೇಳನ ಮಾಡಿ ರೀಲ್ಸ್ ಮಾಡಿದ್ದರು.

 Share: | | | | |


ಗಣರಾಜ್ಯೋತ್ಸವದ ಪರೇಡ್‍‌ಗೆ ಕರ್ನಾಟಕದ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರ ಸರಕಾರ

Posted by Vidyamaana on 2024-01-10 04:21:37 |

Share: | | | | |


ಗಣರಾಜ್ಯೋತ್ಸವದ ಪರೇಡ್‍‌ಗೆ ಕರ್ನಾಟಕದ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರ ಸರಕಾರ

ಬೆಗಳೂರು: ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಭಾಗವಹಿಸಲು ರಾಜ್ಯಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಮತ್ತೊಮ್ಮೆ ಕನ್ನಡಿಗರ ಭಾವನೆಗೆ ಘಾಸಿ ಮಾಡಿದೆ.


ಗಣರಾಜ್ಯೋತ್ಸವದ ಪೆರೇಡ್‍ನಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ವಿಚಾರ. ಈ ಪರೇಡ್‌ನಲ್ಲಿ ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳುತ್ತವೆ. ಈ ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ಅಣ್ಣಮ್ಮ ದೇವಿಯ ಪ್ರತಿಕೃತಿಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ತಳ್ಳಿ ಹಾಕಿದೆ. ಕಳೆದ ವರ್ಷವೂ ಇದೇ ರೀತಿ ಸ್ತಬ್ಧ ಚಿತ್ರ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿತ್ತು.


ಚುನಾವಣಾ ವರ್ಷವಾಗಿದ್ದರಿಂದಾಗಿ ಅದು ರಾಜಕೀಯ ಸ್ವರೂಪವನ್ನು ಪಡೆದುಕೊಂಡಾಗ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರದ ಪ್ರಮುಖ ನಾಯಕರು ಕೇಂದ್ರದ ಮೇಲೆ ಒತ್ತಡ ತಂದು ವಿಶೇಷ ಅನುಮತಿ ಪಡೆಯುವ ಮೂಲಕ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ರಾಜ್ಯದ ಪ್ರತಿಕೃತಿ ಭಾಗವಹಿಸಲು ಅವಕಾಶ ಪಡೆದುಕೊಂಡಿದ್ದರು.


ವಸ್ತು ಪ್ರದರ್ಶನ ಮಳಿಗೆಯಲ್ಲಿ ರಾಜ್ಯದ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರಕಾರ ತಿಳಿಸಿದೆ.

ಅಮೆರಿಕದಲ್ಲಿ ಭಾರತೀಯ ಮೂಲದ ಕುಟುಂಬ ದುರಂತ ಅಂತ್ಯ: 41 ಕೋಟಿ ರೂ.ಬಂಗಲೆಯಲ್ಲಿ ಮೂವರ ಶವ ಪತ್ತೆ!

Posted by Vidyamaana on 2023-12-30 22:25:45 |

Share: | | | | |


ಅಮೆರಿಕದಲ್ಲಿ ಭಾರತೀಯ ಮೂಲದ ಕುಟುಂಬ ದುರಂತ ಅಂತ್ಯ: 41 ಕೋಟಿ ರೂ.ಬಂಗಲೆಯಲ್ಲಿ ಮೂವರ ಶವ ಪತ್ತೆ!

ವಾಷಿಂಗ್ಟನ್​: ಅಮೆರಿಕದಲ್ಲಿ ಭಾರತೀಯ ಮೂಲದ ಕುಟುಂಬವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಮ್ಯಾಸಚೂಸೆಟ್ಸ್‌ನ ಡೋವರ್‌ನಲ್ಲಿರುವ ಅವರ ಬಂಗಲೆಯಲ್ಲಿ ದಂಪತಿ ಮತ್ತು 18 ವರ್ಷದ ಯುವತಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ರಾಕೇಶ್ ಕಮಲ್ (57), ಟೀನಾ (54) ಮತ್ತು ಅವರ ಪುತ್ರಿ ಅರಿಯಾನಾ (18) ಎಂದು ಗುರುತಿಸಲಾಗಿದೆ. ರಾಕೇಶ್ ಮೃತದೇಹದ ಬಳಿ ಬಂದೂಕು ಪತ್ತೆಯಾಗಿದ್ದು, ಅವರ ಸಾವಿನ ಹಿಂದೆ ಹಲವು ಅನುಮಾನಗಳಿವೆ.ರಾಕೇಶ್ ಕಮಲ್ ದಂಪತಿ ಅಮೆರಿಕದಲ್ಲಿ ಶ್ರೀಮಂತ ಕುಟುಂಬ. ಕಮಲ್ ತಮ್ಮ ಶಿಕ್ಷಣವನ್ನು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಬೋಸ್ಟನ್ ವಿಶ್ವವಿದ್ಯಾಲಯ ಮತ್ತು ಎಂಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪೂರ್ಣಗೊಳಿಸಿದರು. ಟೀನಾ ತನ್ನ ಶಿಕ್ಷಣವನ್ನು ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಇಬ್ಬರಿಗೂ ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿದ್ದ ಕಾರಣ 2016ರಲ್ಲಿ ಎಡುನೋವಾ ಎಂಬ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದರು.


ಆದರೆ ಹಣಕಾಸಿನ ತೊಂದರೆಗಳಿಂದಾಗಿ ಇದು 2021 ರಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತು. ಕಳೆದ ವರ್ಷ ಸೆಪ್ಟೆಂಬರ್ 22ರಂದು ಶಿಕ್ಷಣ ಸಂಸ್ಥೆಯ ದಿವಾಳಿತನದ ಅರ್ಜಿಯನ್ನೂ ಸಲ್ಲಿಸಲಾಗಿದೆಯಂತೆ. ಇದರ ನಡುವೆ ಕಮಲ್ ದಂಪತಿ 2019 ರಲ್ಲಿ ಪ್ರತಿಷ್ಠಿತರು ವಾಸಿಸುವ ಮ್ಯಾಸಚೂಸೆಟ್ಸ್‌ನಲ್ಲಿ 4 ಮಿಲಿಯನ್ ಡಾಲರ್ ಕೊಟ್ಟು ಬೃಹತ್​ ಬಂಗಲೆ ಖರೀದಿಸಿದ್ದರು. 19 ಸಾವಿರ ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಈ ಕಟ್ಟಡದಲ್ಲಿ 11 ಮಲಗುವ ಕೋಣೆಗಳಿದ್ದವು. ಈಗ ಆ ಕಟ್ಟಡದ ಮೌಲ್ಯ 5 ಮಿಲಿಯನ್ ಡಾಲರ್ (ರೂ. 41.26 ಕೋಟಿ). ಸದ್ಯ ಈ ಬಂಗಲೆಯಲ್ಲೇ ಕಮಲ್ ದಂಪತಿ ವಾಸವಿದ್ದರು.ಎರಡು ದಿನವಾದರೂ ಕಮಲ್ ದಂಪತಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅವರ ಸಂಬಂಧಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಪೊಲೀಸರು ಕಟ್ಟಡಕ್ಕೆ ತೆರಳಿ ಪರಿಶೀಲಿಸಿದಾಗ ಮೂರು ಶವಗಳು ಪತ್ತೆಯಾಗಿವೆ. ಘಟನೆ ವೇಳೆ ಯಾರೂ ಇಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಅವರ ಸಾವಿಗೆ ಕೌಟುಂಬಿಕ ಕಲಹಗಳೇ? ಹಣಕಾಸಿನ ತೊಂದರೆಗಳು ಕಾರಣವೇ? ಅಥವಾ ಹೊರಗಿನವರಿಗೆ ಸಂಬಂಧವಿದೆಯೇ? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ತನಿಖೆ ನಡೆಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿ

Posted by Vidyamaana on 2023-09-26 09:59:36 |

Share: | | | | |


ಸುಪ್ರೀಂ ಕೋರ್ಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿ

ನವದೆಹಲಿ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಲ್ಲಿ ವಾಕ್ ಶ್ರವಣ ದೋಷವುಳ್ಳ ಮೂಕ ವಕೀಲೆಯೊಬ್ಬರು ಸಂಕೇತ ಭಾಷೆಯನ್ನು ಬಳಸುವ ಮೂಲಕ ವಾದ ಮಂಡಿಸಿದ್ದಾರೆ. ಈ ಮೂಲಕ ಹೊಸ ಇತಿಹಾಸವನ್ನು ದಾಖಲು ಮಾಡಲಾಗಿದೆ.ಹೌದು ಭಾರತದ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರಿದ್ದ ನ್ಯಾಯಪೀಠವು ವರ್ಚುವಲ್ ಆಗಿ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವೇಳೆ ಸಾರಾ ಸನ್ನಿ ಎಂಬ ಮೂಕ ವಕೀಲೆ ತಮ್ಮ ವ್ಯಾಖ್ಯಾನಕಾರ ಸೌರಭ್ ರಾಯ್ ಚೌಧರಿ ಮೂಲಕ ವಾದವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮುಂದೆ ಮಂಡಿಸಿದ್ದಾರೆ.ಸಾರಾ ಅವರ ಸಂಕೇತ ಭಾಷೆಯನ್ನು ಸೌರಭ್ ಅವರು ಬಾಯಿ ಮಾತಿನಲ್ಲಿ ಹೇಳುವ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ತಿಳಿಸಿಕೊಟ್ಟಿದ್ದಾರೆ. ಈ ಪ್ರಯತ್ನವನ್ನು ಅನೇಕ ಗಣ್ಯರು, ಹಿರಿಯ ವಕೀಲರು ಶ್ಲಾಘಿಸಿದ್ದಾರೆ.


ನಡೆದಿದ್ದೇನು.?


ಅರ್ಜಿಯೊಂದರ ವಿಚಾರಣೆಯ ಆರಂಭದ ವೇಳೆ ವರ್ಚುವಲ್ ವಿಚಾರಣೆಯ ತಾಂತ್ರಿಕ ತಂಡವು ಸಾರಾಗೆ ಸ್ಕ್ರೀನ್ ಮೇಲೆ ಬರಲು ಅನುತಿ ನೀಡದೇ ಕೇವಲ ವ್ಯಾಖ್ಯಾನಕಾರ ಸೌರಭ್ ಗೆ ಅನುಮತಿ ನೀಡಿತು. ಹೀಗಾಗಿ ಮೊದಲಿಗೆ ಸ್ಕ್ರೀನ್ ನಲ್ಲಿ ಸೌರಭ್ ಮಾತ್ರ ಕಾಣಿಸಿಕೊಂಡು ಸಾರಾ ತರೆಯ ಹಿಂದೆ ಸಂಜ್ಞೆಯ ಮೂಲಕ ಹೇಳುತ್ತಿದ್ದ ವಿವರವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬಾಯಿ ಮಾತಿನ ಮೂಲಕ ತಿಳಿಸಿದರು.ಆಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರು, ವಕೀಲೆ ಸಾರಾ ಅವರಿಗೂ ಸ್ಕ್ರೀನ್ ಮೇಲೆ ಅವಕಾಶ ನೀಡಿ ಅಂತ ಆದೇಶಿಸಿದರು. ಆಗ ಸಾರಾ ಅವರು ಒಂದು ಸ್ಕ್ರೀನ್ ನಲ್ಲಿ ತಮ್ಮ ಸಂಜ್ಞೆ ವಾದವನ್ನು ಮಂಡಿಸಿದರು. ಅವರ ವ್ಯಾಖ್ಯಾನಕಾರ ಸೌರಭ್, ಅವರ ಸಂಜ್ಞೆಗಳನ್ನು ಬಾಯಿ ಮಾತಿನಲ್ಲಿ ನ್ಯಾಯಪೀಠದ ಗಮಕ್ಕೆ ತಿಳಿಸಿದರು.


ನ್ಯಾಯಮೂರ್ತಿ ಚಂದ್ರ ಚೂಡ ಅವರು ಮೊದಲಿನಿಂದಲೂ ನ್ಯಾಯಕ್ಕೆ ಸಮಾನ ನ್ಯಾಯದಾನ ಪ್ರತೀಕರಾಗಿದ್ದಾರೆ. ಇಬ್ಬರು ಅಂಗವಿಕಲ ಬಾಲಕಿಯರ ದತ್ತು ತಂದೆಯೂ ಹೌದು. ವರ್ಷಾರಂಭದಲ್ಲಿ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳ್ನು ತಮ್ಮ ಕಚೇರಿಗೆ ಪ್ರವಾಸಕ್ಕೆಂದು ಕರೆತಂದು ಎಲ್ಲರನ್ನು ಚಕಿತಗೊಳಿಸಿದ್ದರು.


ನ್ಯಾಯಾಲಯವು ಹೇಗೆ ಕೆಲಸ ಮಾಡುತ್ತದೆ. ಅಲ್ಲಿ ತಮ್ಮ ಕೆಲಸ ಏನು ಎಂಬುದನ್ನು ಅವರು ತಮ್ಮ ಹೆಣ್ಣುಮಕ್ಕಳಿಗೆ ವಿವರಿಸಿದ್ದರು. ಇಂತಹ ಅವರು ದೇಶದ ಇತಿಹಾಸದಲ್ಲಿಇದೇ ಮೊದಲು ಎನ್ನುವಂತೆ ಮೂಕ ವಕೀಲೆಯೊಬ್ಬರಿಗೆ ವಾದ ಮಂಡಿಸೋದಕ್ಕೆ ಅವಕಾಶ ಮಾಡಿಕೊಟ್ಟು, ಹೊಸ ಇತಿಹಾಸವನ್ನು ಇದೀಗ ಬರೆದಿದ್ದಾರೆ.

ಬೆಳ್ತಂಗಡಿ: ಮಹಿಳೆಯ ಶವ ಬಾವಿಯಲ್ಲಿ ಪತ್ತೆ

Posted by Vidyamaana on 2023-11-03 18:35:01 |

Share: | | | | |


ಬೆಳ್ತಂಗಡಿ: ಮಹಿಳೆಯ ಶವ ಬಾವಿಯಲ್ಲಿ ಪತ್ತೆ

ಬೆಳ್ತಂಗಡಿ : ವಿವಾಹಿತ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿದ ಘಟನೆ ಸಂಬಂಧ ಧರ್ಮಸ್ಥಳ ಪೊಲೀಸರು ಪತಿ ಸುಧಾಕರ್ ನಾಯ್ಕ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಜ್ಯೋತಿನಗರದ ನಿವಾಸಿ ಟ್ಯಾಪಿಂಗ್ ಕೆಲಸ ಮಾಡುತ್ತಿರುವ ಪತಿ ಸುಧಾಕರ್ ಮತ್ತು ಪತ್ನಿ ಶಶಿಕಲಾ ನಡುವೆ ಗಲಾಟೆ ನಡೆದು ನಂತರ ಶಶಿಕಲಾ ವನ್ನು ಕೊಲೆ ಮಾಡಿ ಬಾವಿಗೆ ಹಾಕಿರುವ ಆರೋಪ ಪತ್ನಿ ಕುಟುಂಬದವರಿಂದ ಕೇಳಿಬರುತ್ತಿದೆ.


ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

45 ಕೋಟಿ ರೂ. ಬಹುಮಾನವೆಂಬ ಸುಳ್ಳು ಸುದ್ದಿ

Posted by Vidyamaana on 2023-06-24 16:36:52 |

Share: | | | | |


45 ಕೋಟಿ ರೂ. ಬಹುಮಾನವೆಂಬ ಸುಳ್ಳು ಸುದ್ದಿ

ಪುತ್ತೂರು: ಸುಳ್ಯದ ಯುವಕನೋರ್ವನಿಗೆ ಲಾಟರಿಯಲ್ಲಿ 45 ಕೋಟಿ ರೂ. ಬಹುಮಾನ ಬಂದಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಬುದಾಬಿಯಲ್ಲಿರುವ ಸುಳ್ಯ ಮೂಲದ ಯುವಕನಿಗೆ ಲಾಟರಿಯಲ್ಲಿ ದೊಡ್ಡ ಮೊತ್ತ ಬಂದಿದೆ ಎಂದು ಹೇಳಲಾಗುತ್ತಿದೆ. ಮೊದಲಿಗೆ ಬೆಳ್ತಂಗಡಿಯ ಯುವಕನೋರ್ವನ ಫೊಟೋ ಬಳಸಿಕೊಂಡು ಇಂತಹ ಫೇಕ್ ಸುದ್ದಿಯನ್ನು ರವಾನಿಸಲಾಗುತ್ತಿತ್ತು. ಬಳಿಕ ಸುಳ್ಯದ ಯುವಕನೋರ್ವನ ಫೊಟೋವನ್ನು ಬಳಸಕೊಳ್ಳಲಾಯಿತು. ಒಟ್ಟಿನಲ್ಲಿ ಇದು ರಾಜ್ಯದಲ್ಲಿ ಬ್ಯಾನ್ ಆಗಿರುವ ಲಾಟರಿಗೆ ಪ್ರೋತ್ಸಾಹ ನೀಡುವ ಕ್ರಮ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಿಧನ

Posted by Vidyamaana on 2024-07-31 17:58:59 |

Share: | | | | |


ನಿಧನ

ಮಂಗಳೂರು : ಮರ್ಕಝ್ ಅಲ್ - ಹಿದಾಯ ಸ್ಕೂಲ್ ಇದರ ಸದರ್ ಮುಅಲ್ಲಿಮ್, ಕುಂಪಲ ನೂರಾನಿಯಾ ಯತೀಮ್ ಖಾನ ಮೇಲ್ವಿಚಾರಕರೂ ಆಗಿದ್ದ ಅಬ್ದುಲ್ ರಹ್ಮಾನ್ ಅಹ್ಸನಿ ಜಲಾಳ್ ಬಾಗ್ (40) ಅವರು ಹೃದಯ ಸ್ತಂಭನನದಿಂದ ನಿಧನರಾಗಿದ್ದಾರೆ. ದಿವಂಗತ ಶುಹೈಬ್ ಮುಸ್ಲಿಯಾರ್ ಅವರ ಪುತ್ರರಾದ ಅಬ್ದುಲ್ ರಹ್ಮಾನ್ ಅಹ್ಸನಿ ಅವರು ಮಳಲಿ ನಿವಾಸಿ.



Leave a Comment: