ಕುತ್ತಾರು ಮದನಿ ನಗರ ದುರಂತ ಪ್ರಕರಣ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ; ಶೀಘ್ರ ಪರಿಹಾರ ಒದಗಿಸಲು ಸೂಚನೆ

ಸುದ್ದಿಗಳು News

Posted by vidyamaana on 2024-06-30 19:50:01 |

Share: | | | | |


ಕುತ್ತಾರು ಮದನಿ ನಗರ ದುರಂತ ಪ್ರಕರಣ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ; ಶೀಘ್ರ ಪರಿಹಾರ ಒದಗಿಸಲು ಸೂಚನೆ

ಮಂಗಳೂರು , ಜೂ. 30: ಕುತ್ತಾರು ಮದನಿ ನಗರದಲ್ಲಿ ಇತೀಚೆಗೆ ಪಕ್ಕದ ಮನೆಯ ಗೋಡೆ ಮನೆಯೊಂದರ ಮೇಲೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣದ ಘಟನಾ ಸ್ಥಳಕ್ಕೆ ರವಿವಾರ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಪರಿಶೀಲಿಸಿದರು.

ಸಂತ್ರಸ್ತರಿಗೆ ಶೀಘ್ರ ಪರಿಹಾರವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಇದೇ ಸಂದರ್ಭ, ಉಳ್ಳಾಲ- ಸೋಮೇಶ್ವರ ಭಾಗದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಡಲ್ಕೊರೆತ ತೀವ್ರಗೊಂಡಿರುವ ಉಚ್ಚಿಲ, ಮೊಗವೀರಪಟ್ನ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಕ್ಕೆ ಭೇಟಿ ನೀಡಿದರು. 


ಸಮುದ್ರತೀರದ ಮನೆಗಳಲ್ಲಿ ವಾಸವಾಗಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿದ ಸಂಸದ ಕ್ಯಾ. ಬ್ರಿಜೇಶ್, ಅಪಾಯದಂಚಿನಲ್ಲಿ ಇರುವ ಮನೆಮಂದಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಉಳ್ಳಾಲ ತಾಲೂಕು ತಹಶಿಲ್ದಾರರಾದ ಪ್ರದೀಪ್ ಕುರುಡೇಕರ್, ಬಂದರು ಇಲಾಖೆಯ ಇಂಜಿನಿಯರ್ ಪ್ರವೀಣ್, ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕರು ಪ್ರಮೋದ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಸಂತೋಷ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

 Share: | | | | |


ಪುತ್ತೂರು ಪೊಲೀಸ್ ದೌರ್ಜನ್ಯ ಪ್ರಕರಣ

Posted by Vidyamaana on 2023-05-18 06:21:23 |

Share: | | | | |


ಪುತ್ತೂರು ಪೊಲೀಸ್ ದೌರ್ಜನ್ಯ ಪ್ರಕರಣ

ಪುತ್ತೂರು; ಪುತ್ತೂರಿನಲ್ಲಿ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಏಳುಮಂದಿ ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂಬ ಮಾಹಿತಿ ಇದ್ದು ಪ್ರಕರಣದ ಬಗ್ಗೆ ಕೂಲಂಕುಶ ತನಿಖೆ ನಡೆಸಿ ತಪ್ಪತಸ್ಥರ ವಿರುದ್ದ ಕಾನೂನುಕ್ರಮ ಕೈಗೊಳ್ಳಬೇಕು ಮತ್ತು ಇವತ್ತು ಸಂಜೆಯೊಳಗೆ ಸಸ್ಪೆಂಡ್ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಯವರು ಪೊಲೀಸ್ ಇಲಾಖೆಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ.

ಬೆಂಗಳೂರಿನಲ್ಲಿರುವ ಶಾಸಕರು ದೂರವಾಣಿ ಮೂಲಕ ಸಂಬಂದಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಪ್ರಕರಣದ ಬಗ್ಗೆ ಇಲಾಖಾವಾರು ತನಿಖೆ ನಡೆಸಬೇಕು. ಪ್ರಕರಣದಲ್ಲಿ ಯಾರು ತಪ್ಪಿತಸ್ಥರಾದರೂ ಅವರ ವಿರುದ್ದ ಕಠಿಣಕ್ರಮಕೈಗೊಳ್ಳಬೇಕು. ಇವತ್ತು ಸಂಜೆ 3 ಗಂಟೆ ಯೊಳಗೆ ಹಲ್ಲೆ ಮಾಡಿದವರ ವಿರುದ್ದ ಕ್ರಮಕೈಗೊಳ್ಳುವ ಮೂಲಕ ಅವರನ್ನು ಸಸ್ಪೆಂಡ್ ಮಾಡಬೇಕು ಎಂದು ಸೂಚನೆಯನ್ನು ನೀಡಿದ್ದಾರೆ.

ಬ್ಯಾನರ್ ಹಾಕಿದ ಪ್ರಕರಣಕ್ಕೆ ಸಂಬಂದಿಸಿದಂತೆ ಪುತ್ತೂರಿನ ನರಿಮೊಗರು ಗ್ರಾಮದ ಏಳುಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದಿರುವ ವಿಚಾರ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.

ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮೊದಲೇ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಜಿ.ವಿ. ರಾಜೇಶ್ ದಿಢೀರ್ ಬದಲಾವಣೆ

Posted by Vidyamaana on 2024-05-26 11:01:07 |

Share: | | | | |


ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮೊದಲೇ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಜಿ.ವಿ. ರಾಜೇಶ್ ದಿಢೀರ್ ಬದಲಾವಣೆ

ಬೆಂಗಳೂರು: ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಜಿ.ವಿ. ರಾಜೇಶ್ ಅವರನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ.

ರಾಜೇಶ್ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸಂಸ್ಥೆ ಸಾಮರಸ್ಯದ ಹೊಣೆ ವಹಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಮೂಲದ ರಾಜೇಶ್  ಅವರು ಆರ್.ಎಸ್.ಎಸ್.ಪ್ರಚಾರಕರಾಗಿ ಅನೇಕ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

2022ರ ಜುಲೈನಲ್ಲಿ ಅವರನ್ನು ಬಿಜೆಪಿ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಮಹತ್ವದ ಹುದ್ದೆಗೆ ಬಂದವರ ಅವಧಿ ಸಾಮಾನ್ಯವಾಗಿ ಮೂರು ವರ್ಷ ಇರುತ್ತದೆ. ಆದರೆ ಅವಧಿಗೆ ಮೊದಲೇ ಅವರನ್ನು ಬದಲಾವಣೆ ಮಾಡಲಾಗಿದೆ.

ಫಾಸ್ಟಾಗ್‌ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್‌ ಖಾತೆಗಳು ನಿಷ್ಟ್ರಿಯ

Posted by Vidyamaana on 2024-01-17 09:31:21 |

Share: | | | | |


ಫಾಸ್ಟಾಗ್‌ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್‌ ಖಾತೆಗಳು ನಿಷ್ಟ್ರಿಯ

ಹೊಸದಿಲ್ಲಿ: ಫಾಸ್ಟಾಗ್‌ಗಳಿಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ಜ.31ರಿಂದ ಫಾಸ್ಟಾಗ್‌ ಖಾತೆಗಳು ನಿಷ್ಟ್ರಿಯವಾಗಲಿವೆ ಎಂದು ಈಗಾಗಲೇ ಎನ್‌ಎಚ್‌ಎಐ ಎಚ್ಚರಿಸಿದೆ. ಫಾಸ್ಟಾಗ್‌ಗೆ ಕೆವೈಸಿ ಪೂರ್ಣಗೊಂಡಿದೆಯೇ, ಇಲ್ಲವೇ ಎಂಬ ಸ್ಥಿತಿಗತಿ ತಿಳಿಯುವುದು ಹೇಗೆ ಹಾಗೂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.


ಪರಿಶೀಲನೆ ಹೇಗೆ?

ಬಳಕೆದಾರರು https://fastag.ihmcl.com ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಲಾಗಿನ್‌ ಆಗಲು ನೋಂದಾಯಿತ ಮೊಬೈಲ್‌ ಸಂಖ್ಯೆ, ಪಾಸ್‌ವರ್ಡ್‌ ಮತ್ತು ಬಳಿಕ ಮೊಬೈಲ್‌ಗೆ ಬರುವ ಒಟಿಪಿ ಬೇಕಾಗಲಿದೆ.

ಒಮ್ಮೆ ಲಾಗಿನ್‌ ಆದ ಅನಂತರ, ಡ್ಯಾಶ್‌ಬೋರ್ಡ್‌ಗೆ ತೆರಳಿ, “ಮೈ ಪ್ರೊಫೈಲ್‌’ ವಿಭಾಗದ ಮೇಲೆ ಕ್ಲಿಕ್‌ ಮಾಡಬೇಕು.

ಇಲ್ಲಿ ನಿಮ್ಮ ಕೈವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬ ಸ್ಥಿತಿಗತಿ ಹಾಗೂ ನೀವು ಸಲ್ಲಿಸಿರುವ ಪ್ರೊಫೈಲ್‌ ವಿವರ ಸಿಗಲಿದೆ.

ಪೂರ್ಣಗೊಳ್ಳದಿದ್ದರೆ ಏನು ಮಾಡಬೇಕು?

ಪ್ರೊಫೈಲ್‌ ವಿಭಾಗದಲ್ಲಿ, ಕೆವೈಸಿ ಎಂಬ ಉಪ ವಿಭಾಗವಿದೆ. ಅಲ್ಲಿ ಕ್ಲಿಕ್‌ ಮಾಡಿ ನೀವು ನಿಮ್ಮ ಕೆವೈಸಿ ಅಪ್‌ಡೇಟ್‌ ಮಾಡಬಹುದು.

ಬಳಕೆದಾರರು ಗುರುತು, ವಿಳಾಸದ ದಾಖಲೆಗಳನ್ನು ಸಲ್ಲಿಸಬೇಕು. ಪಾಸ್‌ಪೋರ್ಟ್‌ ಗಾತ್ರದ ಫೋಟೋ ಕೂಡ ಅಗತ್ಯ.

ಒಮ್ಮೆ ಪರಿಶೀಲಿಸಿ, ಅನಂತರ ದೃಢೀಕರಿಸಬೇಕಾಗುತ್ತದೆ.

ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅನಂತರ, “ಪ್ರೊಸೀಡ್‌’ ಕ್ಲಿಕ್‌ ಮಾಡಿ ದರೆ ಕೈವೈಸಿ ಪೂರ್ಣಗೊಳ್ಳಲಿದೆ.

ನಿನ್ನೆ ಪ್ರಮಾಣ ವಚನ, ಇಂದು ರಾಜೀನಾಮೆ? ಮೋದಿ ಕ್ಯಾಬಿನೆಟ್ ಬಿಡಲು ಮುಂದಾಗಿದ್ದೇಕೆ ಬಿಜೆಪಿ ಸಂಸದ?

Posted by Vidyamaana on 2024-06-10 13:37:48 |

Share: | | | | |


ನಿನ್ನೆ ಪ್ರಮಾಣ ವಚನ, ಇಂದು ರಾಜೀನಾಮೆ? ಮೋದಿ ಕ್ಯಾಬಿನೆಟ್ ಬಿಡಲು ಮುಂದಾಗಿದ್ದೇಕೆ ಬಿಜೆಪಿ ಸಂಸದ?

ನವದೆಹಲಿ(ಜೂ.10): ಮೋದಿ ಸರಕಾರ 3.0ನಲ್ಲಿ ಸಚಿವ ಸಂಪುಟ ವಿಭಜನೆಯಾಗುವ ಮುನ್ನವೇ ಸಚಿವ ಸ್ಥಾನ ಕೈಬಿಡುವ ಸುದ್ದಿಗಳು ಮುನ್ನೆಲೆಗೆ ಬರುತ್ತಿವೆ. ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸುರೇಶ್ ಗೋಪಿ ಮೋದಿ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ತೊರೆಯಲು ಬಯಸಿದ್ದಾರೆ.

ಮೂಲಗಳನ್ನು ನಂಬುವುದಾದರೆ, ಅವರು ರಾಜೀನಾಮೆ ನೀಡಲು ಬಯಸುತ್ತಾರೆ. ಕೇಂದ್ರ ನಾಯಕತ್ವಕ್ಕೆ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಸುರೇಶ್ ಗೋಪಿ ಅವರು ರಾಜ್ಯ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಇದಾದ ಬಳಿಕ ಅವರು ಸಚಿವರಾಗಿ ಉಳಿಯಲು ಬಯಸುವುದಿಲ್ಲ ಎಂದು ಹೇಳಿದರು. ಅವರನ್ನು ಸಚಿವ ಸ್ಥಾನದಿಂದ ಮುಕ್ತಗೊಳಿಸಬೇಕು ಎಂಬುದು ಅವರ ಅಪೇಕ್ಷೆ.

ಮನೋರಮಾ ನ್ಯೂಸ್ ಜೊತೆ ಮಾತನಾಡಿದ ಸುರೇಶ್ ಗೋಪಿ, ಸಚಿವ ಸ್ಥಾನ ತೊರೆಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಸಂಪುಟದಿಂದ ನನ್ನನ್ನು ಮುಕ್ತಗೊಳಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ನನ್ನ ಸಿನಿಮಾಗಳನ್ನು ಪೂರ್ಣಗೊಳಿಸಬೇಕು. ಕೇಂದ್ರ ನಾಯಕತ್ವ ನಿರ್ಧರಿಸಲಿ. ಸಂಸದನಾಗಿ ತ್ರಿಶೂರ್‌ನಲ್ಲಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ನನಗೆ ಕ್ಯಾಬಿನೆಟ್ ಹುದ್ದೆ ಬೇಡ ಎಂದು ಹೇಳಿದ್ದೆ ಎಂದಿದ್ದಾರೆ.

ನಮ್ಮ ರಾಜ್ಯೊಡ್ ವೋಟು ಮುಗಿಂಡ್ ಇತ್ತೆ ಬೆಟ್ಟಿಂಗ್ ಟೈಮ್!

Posted by Vidyamaana on 2024-05-13 12:13:10 |

Share: | | | | |


ನಮ್ಮ ರಾಜ್ಯೊಡ್ ವೋಟು ಮುಗಿಂಡ್ ಇತ್ತೆ ಬೆಟ್ಟಿಂಗ್ ಟೈಮ್!

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದಿದ್ದು, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಅದರಲ್ಲೂ ಪ್ರಮುಖವಾಗಿ ದಾವಣಗೆರೆ, ಕೊಪ್ಪಳ, ಮಂಡ್ಯ, ಚಿಕ್ಕಬಳ್ಳಾಪುರ, ಹಾವೇರಿ, ಶಿವಮೊಗ್ಗ ಕ್ಷೇತ್ರಗಳಲ್ಲೂ ಸೋಲು-ಗೆಲುವಿನ ಬಗ್ಗೆ ಬೆಟ್ಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಪುರ ತಾಲೂಕು ಕಲ್ಮನೆ ಗ್ರಾಮದ ರವೀಂದ್ರ ಎಂಬುವರು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‍ಕುಮಾರ್ ಗೆಲ್ಲುತ್ತಾರೆಂದು ತಮ್ಮ ಟ್ರ್ಯಾಕ್ಟರ್ ಪಣಕ್ಕಿಟ್ಟಿದ್ದಾರೆ. ಗೀತಾ ಗೆಲ್ಲುತ್ತಾರೆ, ತಾಕತ್ತಿದ್ದರೆ ಚಾಲೆಂಜ್ ಕಟ್ಟಿ ಎಂದು ಬಿಜೆಪಿ ಕಾರ್ಯಕರ್ತರ ಬಹಿರಂಗ ಸವಾಲು ಹಾಕಿದ್ದಾರೆ.

ಮಂಗಳೂರಿನ ಖ್ಯಾತ ಯೂರಾಲಜಿಸ್ಟ್ ಡಾ.ಜಿ.ಜಿ ಲಕ್ಷ್ಮಣ ಪ್ರಭು ಹೃದಯಾಘಾತಕ್ಕೆ ಬಲಿ

Posted by Vidyamaana on 2023-11-17 12:33:12 |

Share: | | | | |


ಮಂಗಳೂರಿನ ಖ್ಯಾತ ಯೂರಾಲಜಿಸ್ಟ್ ಡಾ.ಜಿ.ಜಿ ಲಕ್ಷ್ಮಣ ಪ್ರಭು ಹೃದಯಾಘಾತಕ್ಕೆ ಬಲಿ

ಮಂಗಳೂರು, ನ.17: ಮಂಗಳೂರಿನ ಖ್ಯಾತ ಯೂರಾಲಜಿಸ್ಟ್ (ಮೂತ್ರಶಾಸ್ತ್ರ ವಿಭಾಗ) ತಜ್ಞರಾಗಿದ್ದ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಜಿ.ಜಿ. ಲಕ್ಷ್ಮಣ ಪ್ರಭು ಹೃದಯಾಘಾತದಿಂದ ನಿಧನರಾಗಿದ್ದಾರೆ.


61 ವರ್ಷದ ಲಕ್ಷ್ಮಣ ಪ್ರಭು ಅವರು ವಾರದ ಹಿಂದೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. 


ಮೂರು ದಶಕಕ್ಕೂ ಹೆಚ್ಚು ಅನುಭವ ಹೊಂದಿದ್ದ ಡಾ. ಜಿ ಜಿ ಲಕ್ಷ್ಮಣ ಪ್ರಭು ಹಲವು ವರ್ಷಗಳ ಕಾಲ ಕೆಎಂಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ಹಲವಾರು ಸಂಕೀರ್ಣ ವೈದ್ಯಕೀಯ ಪ್ರಕರಣಗಳನ್ನು ನಿರ್ವಹಿಸಿದ್ದ ಅವರು, ಯುರೊಲಿಥಿಯಾಸಿಸ್, ಆಂಡ್ರಾಲಜಿ, ಯುರೊಡೈನಾಮಿಕ್ಸ್, ರೆಕಾನ್-ಯೂರಾಲಜಿ, ಯುರೊಜಿನೆಕಾಲಜಿ ಮತ್ತು ಎಂಡೋರಾಲಜಿಯಲ್ಲಿ ಪರಿಣತಿಯನ್ನು ಹೊಂದಿದ್ದರು. ಡಾ.ಜಿ.ಜಿ. ಲಕ್ಷ್ಮಣ ಪ್ರಭು ಅವರ ಅಕಾಲಿಕ ನಿಧನಕ್ಕೆ ಅನೇಕ ಗಣ್ಯರು, ಹಿರಿಯ , ಕಿರಿಯ ವೈದ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.



Leave a Comment: