ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಸುದ್ದಿಗಳು News

Posted by vidyamaana on 2024-06-30 19:31:43 |

Share: | | | | |


ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಕೋಟ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್‍ತಿ (97) ವಯೋಸಹಜ ಅಸೌಖ್ಯದಿಂದ

ಜೂ.30ರಂದು ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

 Share: | | | | |


ಕರಾವಳಿಯಲ್ಲಿ ಮಳೆ ಅಬ್ಬರ: ಉಭಯ ಜಿಲ್ಲೆಗಳಲ್ಲಿ ಜುಲೈ 27 ರಂದು ಶಾಲೆಗಳಿಗೆ ರಜೆ

Posted by Vidyamaana on 2023-07-26 15:17:13 |

Share: | | | | |


ಕರಾವಳಿಯಲ್ಲಿ ಮಳೆ ಅಬ್ಬರ: ಉಭಯ ಜಿಲ್ಲೆಗಳಲ್ಲಿ ಜುಲೈ 27 ರಂದು ಶಾಲೆಗಳಿಗೆ ರಜೆ

ಮಂಗಳೂರು/ಉಡುಪಿ : ಕರಾವಳಿಯಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರಿದ ಕಾರಣ ಜುಲೈ 27 ರಂದು (ಗುರುವಾರ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.



ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಪ್ರೌಢ ಶಾಲೆಗಳವರೆಗೆ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.


ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಜುಲೈ 27 ರಂದು ದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.ಮಂಗಳೂರು/ಉಡುಪಿ : ಕರಾವಳಿಯಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರಿದ ಕಾರಣ ಜುಲೈ 27 ರಂದು (ಗುರುವಾರ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.


ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಪ್ರೌಢ ಶಾಲೆಗಳವರೆಗೆ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.


ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಜುಲೈ 27 ರಂದು ದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ರೈಲು ಇದು ಇತಿಹಾಸದಲ್ಲೇ ಮೊದಲು ಎಲ್ಲಿ? ಇಲ್ಲಿದೆ ಮಾಹಿತಿ

Posted by Vidyamaana on 2023-09-28 20:36:20 |

Share: | | | | |


ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ರೈಲು ಇದು ಇತಿಹಾಸದಲ್ಲೇ ಮೊದಲು ಎಲ್ಲಿ? ಇಲ್ಲಿದೆ ಮಾಹಿತಿ

ಮಥುರಾ: ಸೆ 28: ರೈಲೊಂದು ತಡರಾತ್ರಿ ಟ್ರ್ಯಾಕ್‌ ಬಿಟ್ಟು ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಘಟನೆ ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ನಡೆದಿದೆ.ಎಲೆಕ್ಟ್ರಿಕ್‌ ಮಲ್ಟಿಪಲ್‌ ಯೂನಿಟ್‌ ರೈಲೊಂದು ಏಕಾಏಕಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಘಟನೆ ಮಥುರಾ ಜಂಕ್ಷನ್‌ನಲ್ಲಿ ತಡರಾತ್ರಿ ನಡೆದಿದೆ.ರೈಲು ಶಕುರ್ ಬಸ್ತಿಯಿಂದ ಮಂಗಳವಾರ ರಾತ್ರಿ 10:49ಕ್ಕೆ ಮಥುರಾ ನಿಲ್ದಾಣಕ್ಕೆ ಬಂದಿದ್ದು, ಎಲ್ಲಾ ಪ್ರಯಾಣಿಕರು ರೈಲಿನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ಇದ್ದಕ್ಕಿದ್ದಂತೆ ರೈಲು ಪ್ಲಾಟ್‌ಫಾರ್ಮ್‌ಗೆ ನುಗ್ಗಿದೆ. ಈ ವೇಳೆ ತಕ್ಷಣ ಪ್ರಯಾಣಿಕರು ರೈಲಿನಿಂದ ಇಳಿದಿದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.ಇನ್ನು ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮಥುರಾ ರೈಲು ನಿಲ್ದಾಣದ ನಿರ್ದೇಶಕ ಎಸ್‌.ಕೆ ಶ್ರೀವಾಸ್ತವ, "ಮಹಿಳೆಯೊಬ್ಬರು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ಇದನ್ನು ಬಿಟ್ಟರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಇತರೆ ರೈಲುಗಳ ಸಂಚಾರಕ್ಕೆ ಅಡಚಣೆ ಆಗಿದೆ" ಎಂದು ತಿಳಿಸಿದ್ದಾರೆ ಅಂತಾ ಪಿಟಿಐ ವರದಿ ಮಾಡಿದೆ. ಮತ್ತೊಂದೆಡೆ ರೈಲು ಅಪಘಾತದ ವಿಡಿಯೋ ಎನ್‌ಎನ್‌ಐ ಟ್ವೀಟ್‌ನಲ್ಲಿ ಹಂಚಿಕೆಯಾಗಿದೆ.

ಮಹಿಳೆಗೆ ಸಣ್ಣಪುಟ್ಟ ಗಾಯ

ಮಥುರಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ಸ್ಥಳೀಯ ರೈಲು ಪ್ಲಾಟ್‌ಫಾರ್ಮ್‌ಗೆ ಹತ್ತಿದ ಪರಿಣಾಮ ಝಾನ್ಸಿ ಮೂಲದ ಉಷಾದೇವಿ (39) ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಆಕೆಯನ್ನು ಝಾನ್ಸಿಗೆ ಕಳುಹಿಸಲಾಯಿತು ಎಂದು ಹೇಳಿದರು. ಅಲ್ಲದೆ ಈ ಕುರಿತು ಉನ್ನತ ಮಟ್ಟದ ತನಿಖೆಗೆ ರೈಲ್ವೇ ಇಲಾಖೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಆಗ್ರಾ ವಿಭಾಗದ ಅಧಿಕಾರಿಯ ಪ್ರಕಾರ, ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ರೈಲು ಮಂಗಳವಾರ ರಾತ್ರಿ 10.50ಕ್ಕೆ ಶಕುರ್ ಬಸ್ತಿಯಿಂದ ಪ್ಲಾಟ್‌ಫಾರ್ಮ್ 2ಎಗೆ ಆಗಮಿಸಿತು. ಸಿಬ್ಬಂದಿ ಸೇರಿದಂತೆ ಎಲ್ಲಾ ಪ್ರಯಾಣಿಕರು ಡಿಬೋರ್ಡ್ ಮಾಡಿದ ನಂತರ, ರೈಲು ಹಳಿ ತಪ್ಪಿದೆ. ನಂತರ ನಿಲ್ದಾಣಕ್ಕೆ ಬರುವ ಮೊದಲು ರೈಲು ಪ್ಲಾಟ್‌ಫಾರ್ಮ್‌ಗೆ ನುಗ್ಗಿತು ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಇನ್ನು 2ಎ ಹೊರತುಪಡಿಸಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲುಗಳ ಸಂಚಾರ ಸಾಮಾನ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಸಂಸದರ ಸಾಧನೆಗೆ ಹೊಸ ಗರಿ ಮೂಡಿಸಿದ ಬಳ್ಪ - ಸಂಸದರ ಆದರ್ಶ ಗ್ರಾಮ ಯೋಜನೆ

Posted by Vidyamaana on 2023-11-10 07:41:02 |

Share: | | | | |


ಸಂಸದರ ಸಾಧನೆಗೆ ಹೊಸ ಗರಿ ಮೂಡಿಸಿದ ಬಳ್ಪ - ಸಂಸದರ ಆದರ್ಶ ಗ್ರಾಮ ಯೋಜನೆ

ಮಂಗಳೂರು: ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭಗೊಂಡಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರಾಗಬಹುದೆಂಬ ಚರ್ಚೆಗಳೂ ಸಹ ಗರಿಗೆದರಿದೆ.

ಒಂದು ಮೂಲಗಳ ಪ್ರಕಾರ ಹ್ಯಾಟ್ರಿಕ್ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೇ ಈ ಬಾರಿ ಪಕ್ಷ ಮಣೆ ಹಾಕುವ ಸಾಧ್ಯತೆಗಳು ದಟ್ಟವಾಗಿದೆ. ಹಾಲಿ ಸಂಸದರೂ ಹಾಗೂ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಬಗೆಗಿನ ಪರ ವಿರೋಧದ ಚರ್ಚೆಯ ನಡುವೆ ನಳಿನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಸಮರ್ಪಕವಾಗಿ ಬಳಸಿ ಗುರಿ ಮುಟ್ಟಿದ ರಾಜ್ಯದ ಸಂಸದರ ಪೈಕಿ ಮಂಗಳೂರು ಸಂಸದರು ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಸಂಸದರ ಆದರ್ಶ ಗ್ರಾಮದ ಯೋಜನಾ ನಿರ್ದೇಶಕರು ಹೇಳಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಳ್ಪ ಗ್ರಾಮವನ್ನು ಸಂಸದರು ಆಯ್ಕೆ ಮಾಡಿಕೊಂಡಿದ್ದು ಈ ಗ್ರಾಮದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾಲೆ, ಆಸ್ಪತ್ರೆ, ಸಾರಿಗೆ ವ್ಯವಸ್ಥೆ, ನೆಟ್ವರ್ಕ್ ವ್ಯವಸ್ಥೆ ಸೇರಿದಂತೆ 55 ಕೋಟಿ ರೂಪಾಯಿ ಅನುದಾನವನ್ನು ಒಂದು ಗ್ರಾಮಕ್ಕೆ ಒದಗಿಸಿ ಆ ಗ್ರಾಮವನ್ನು ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದು, ಸತತ ನಾಲ್ಕನೇ ಬಾರಿ ಸಂಸದ ಸ್ಥಾನದ ಮೇಲೆ ಕಣ್ಣಿಟ್ಟಿರುವ ನಳಿನ್ ಕುಮಾರ್ ಕಟೀಲ್ ಅವರ ಉಮೇದುವಾರಿಕೆಗೆ ಇನ್ನಷ್ಟು ಬಲ ತುಂಬಲಿದೆ ಎಂಬ ಲೆಕ್ಕಾಚಾರ ಪಕ್ಷದಲ್ಲಿ ನಡೆಯುತ್ತಿದೆ.

ಸೌಜನ್ಯ ಕೊಲೆ ಪ್ರಕರಣ: ಸಂತೋಷ್ ರಾವ್ ಪರ ವಾದಿಸಿದ್ದು ಪುತ್ತೂರಿನ ವಕೀಲ ಮೋಹಿತ್

Posted by Vidyamaana on 2023-06-18 14:30:22 |

Share: | | | | |


ಸೌಜನ್ಯ ಕೊಲೆ ಪ್ರಕರಣ: ಸಂತೋಷ್ ರಾವ್ ಪರ ವಾದಿಸಿದ್ದು ಪುತ್ತೂರಿನ ವಕೀಲ ಮೋಹಿತ್

ಪುತ್ತೂರು: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್ ಪರ ನ್ಯಾಯಾಲಯದಲ್ಲಿ ವಾದಿಸಿದ್ದು ಪುತ್ತೂರಿನ ವಕೀಲ. 

ಆ ಯುವ ವಕೀಲನ ಹೆಸರು ಮೋಹಿತ್ ಕುಮಾರ್ ಅಡ್ಕಾರ್ಮಜಲ್. ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದವರು.

ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ, ಸಂತೋಷ್ ರಾವ್ ಅವರಿಂದ ೧ ರೂ.ವನ್ನು ಪಡೆಯದೇ ವಾದಿಸಿದ್ದು ಇಲ್ಲಿ ವಿಶೇಷ.

ಸಂತೋಷ್ ರಾವ್ ಅವರನ್ನು ಆರೋಪಿ ಎಂದು‌ ಬಂಧಿಸಿದಾಗಲೇ ಹಲವು ಅನುಮಾನಗಳು‌ ಹುಟ್ಟಿಕೊಂಡಿತ್ತು. ಈ ಅನುಮಾನಗಳ ಎಳೆಯನ್ನು‌ ಇಟ್ಟುಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಮೋಹಿತ್ ಅವರ ವಾದವನ್ನು ನ್ಯಾಯಾಲಯ ಎತ್ತಿ‌ ಹಿಡಿದಿದೆ. ನ್ಯಾಯಾಲಯದಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತು ಪಡಿಸಲು ಮೋಹಿತ್ ಯಶಸ್ವಿಯಾಗಿದ್ದಾರೆ.

ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಫೈಝಲ್ ಸಂಶಯಾಸ್ಪದ ಮೃತ್ಯು

Posted by Vidyamaana on 2024-03-31 13:44:12 |

Share: | | | | |


ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಫೈಝಲ್ ಸಂಶಯಾಸ್ಪದ ಮೃತ್ಯು

ಬ್ರಹ್ಮಾವರ , ಮಾ.31: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮೂಡು ತೋನ್ಸೆ ಗ್ರಾಮದ ಮುಹಮ್ಮದ್ ಫೈಝಲ್(36) ಎಂಬವರ ಮೃತದೇಹವು ಮಾ.29ರಂದು ಮಧ್ಯಾಹ್ನ ಉಪ್ಪೂರು ಮಾಯಾಡಿ ಎಂಬಲ್ಲಿರುವ ಸುವರ್ಣ ನದಿಯಲ್ಲಿ ಪತ್ತೆಯಾಗಿದೆ.ರಿಕ್ಷಾ ಚಾಲಕ ವೃತ್ತಿ ಹಾಗೂ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಇವರು ಮಾ.27ರಂದು ರಾತ್ರಿ ಮನೆಯಿಂದ ರಿಕ್ಷಾದಲ್ಲಿ ಹೋಗಿದ್ದರು.ಬಳಿಕ ಹುಡು ಕಾಡಿದಾಗ ಮನೆ ಬಳಿಯ ಮೈದಾನದ ಸಮೀಪ ಇವರ ರಿಕ್ಷಾ ಪತ್ತೆಯಾಗಿತ್ತು. 

ರಾಜ್ಯಕ್ಕೆ ಅನ್ವಯಿಸುವ ಸಂಚಾರಿ ಕಾನೂನು ಬಂಟ್ವಾಳದಲ್ಲಿ ಮಾತ್ರ ಏಕಿಲ್ಲ!?

Posted by Vidyamaana on 2023-03-07 11:20:12 |

Share: | | | | |


ರಾಜ್ಯಕ್ಕೆ ಅನ್ವಯಿಸುವ ಸಂಚಾರಿ ಕಾನೂನು ಬಂಟ್ವಾಳದಲ್ಲಿ ಮಾತ್ರ ಏಕಿಲ್ಲ!?

ಬಂಟ್ವಾಳ: ಜಿಲ್ಲೆಯ ಕೇಂದ್ರ ಮಂಗಳೂರಿನ ಸನಿಹದಲ್ಲೇ ಇರುವ, ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲೂ ತೆರೆದುಕೊಂಡಿರುವ ತಾಲೂಕು ಬಂಟ್ವಾಳ. ಆದರೆ ಇಡೀ ರಾಜ್ಯದಲ್ಲೇ ಇರುವ ಸಂಚಾರಿ ಕಾನೂನುಗಳು ಇಲ್ಲಿಗೆ ಅನ್ವಯ ಆಗುವುದಿಲ್ವಂತೆ!

ಹೌದು! ಇದು ವಿಚಿತ್ರವಾದರೂ ಸತ್ಯ. ಬಂಟ್ವಾಳದ ನಾಗರಿಕರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದರೆ ಸಹಸವಾರ ಬಿಡಿ ಸವಾರರೇ ಹೆಲ್ಮೆಟ್ ಧರಿಸುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಕಡೆ ಇಬ್ಬರು ಬೈಕಿನಲ್ಲಿ ಹೋಗುತ್ತಾರೆ. ಆದರೆ ಇಲ್ಲೇಲ್ಲ ಮೂರು-ಮೂರು ಮಂದಿ ಒಂದೇ ಬೈಕಿನಲ್ಲಿ ಸಂಚರಿಸುತ್ತಾರೆ. ಕಾರಿನಲ್ಲಿ ಹೋಗುವವರಾದರೆ ಸೀಟು ಬೆಲ್ಟ್ ಹಾಕಬೇಕೆಂದೇ ಇಲ್ವಂತೆ! ರಿಕ್ಷಾದಲ್ಲಂತೂ ಕೇಳುವುದೇ ಬೇಡ. ಚಾಲಕನ ಅಕ್ಕ-ಪಕ್ಕ ಮೂವರನ್ನು ಅಂದರೆ ಚಾಲಕ ಸೇರಿ ನಾಲ್ಕು ಮಂದಿ ತೆರಳುವುದೂ ಇದೆ. ಇನ್ನು ಚಾಲನೆ ಸಂದರ್ಭ ಮೊಬೈಲ್ ಫೋನ್ ಬಳಕೆಗೆ ಯಾವುದೇ ನಿರ್ಬಂಧವಿಲ್ಲ.

ಹೀಗೆ ಸಾಗುತ್ತದೆ ಬಂಟ್ವಾಳದ ಸಂಚಾರಿ ಕಾನೂನು ಉಲ್ಲಂಘನೆಯ ಪಟ್ಟಿ. ಇದೇನು ಉಲ್ಲಂಘನೆಯೋ, ಅಥವಾ ರಾಜ್ಯದಲ್ಲೆಡೆ ಇರುವ ಕಾನೂನು ಇಲ್ಲಿ ಮಾತ್ರ ಇಲ್ಲವೇ? ಏನೊಂದು ತಿಳಿಯುತ್ತಿಲ್ಲ.

ಬಿ.ಸಿ.ರೋಡನ್ನು ಸೀಳಿ ಸಾಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲೇ ಇಂತಹ ಸಂಚಾರಿ ಕಾನೂನು ಉಲ್ಲಂಘನೆಯ ಘಟನೆಗಳು ನಮ್ಮ ಕಣ್ಣೆದುರಿಗೆ ರಾಚುತ್ತವೆ. ಪೇಟೆ ಬಿಟ್ಟು ಗ್ರಾಮೀಣ ಭಾಗಕ್ಕೆ ಹೋದರಂತೂ, ಕಾನೂನಿನ ಅಂಕುಶವೇ ಇಲ್ಲ ಎಂಬಂತೆ ಭಾಸವಾಗುತ್ತಿದೆ. ಅಷ್ಟರಮಟ್ಟಿಗೆ ಸಂಚಾರಿ ಕಾನೂನುಗಳು ಉಲ್ಲಂಘನೆ ಆಗುತ್ತಿವೆ.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹಳ ಶಿಸ್ತಿನಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ರಾತ್ರಿ ಗಸ್ತನ್ನು ಕೂಡ ಗಟ್ಟಿಗೊಳಿಸಿದ್ದು, ಜಿಲ್ಲೆಯೆಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ. ಆದರೆ ಬಂಟ್ವಾಳವನ್ನು ಮಾತ್ರ ಯಾಕೆ ಗಮನಿಸುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆ.

ಸಂಚಾರಿ ಕಾನೂನು ಬಿಗಿಗೊಳಿಸುವುದು ನಾಗರಿಕರ ಸುರಕ್ಷತೆ ದೃಷ್ಟಿಯಿಂದ ತುಂಬಾ ಅನುಕೂಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮನಸು ಮಾಡಿದರೆ, ಇದೇನು ದೊಡ್ಡ ವಿಷಯವೇ ಅಲ್ಲ. ಒಂದೇ ದಿನದಲ್ಲಿ ಕಾನೂನು ಜಾರಿ ಮಾಡಬಹುದು.

ಟ್ರಾಫಿಕ್ ಠಾಣೆಯೂ ಇದೆ!

ಜಿಲ್ಲೆಯಲ್ಲಿ ಮಂಗಳೂರು ಬಿಟ್ಟರೆ ಅತೀ ಹೆಚ್ಚು ವಾಹನ ದಟ್ಟಣೆ ಹೊಂದಿರುವ ತಾಲೂಕು ಬಂಟ್ವಾಳ. ಮಾತ್ರವಲ್ಲ ರಾಷ್ಟ್ರೀಯ ಹೆದ್ದಾರಿ ಈ ತಾಲೂಕನ್ನು ಸೀಳಿಕೊಂಡೇ ಮುಂದೆ ಹೋಗಿರುವುದರಿಂದ, ಜನಜಂಗುಳಿ ಜಾಸ್ತಿ. ಈ ಎಲ್ಲಾ ಕಾರಣದಿಂದಾಗಿ ಬಂಟ್ವಾಳಕ್ಕೆ ಸಂಚಾರಿ ಪೊಲೀಸ್ ಠಾಣೆಯನ್ನು ಮಂಜೂರು ಮಾಡಿದ್ದು, ಕಾರ್ಯಚರಣೆ ನಡೆಸುತ್ತಿದೆ. ಬಂಟ್ವಾಳ ಸಂಚಾರಿ ಠಾಣೆಯಲ್ಲಿ ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಇದ್ದಾರೆ. ಹೀಗಿದ್ದರೂ, ಇಷ್ಟೊಂದು ಸಂಚಾರಿ ಕಾನೂನು ಉಲ್ಲಂಘನೆಗಳೇಕೆ? ತಿಳಿಯುತ್ತಿಲ್ಲ. ಅಪಘಾತದಂತಹ ಪ್ರಕರಣಗಳು ಘಟಿಸಿ, ಬಳಿಕ ಬಡಿದಾಡಿಕೊಳ್ಳುವ ಬದಲು ಈಗಲೇ ಎಚ್ಚೆತ್ತುಕೊಳ್ಳುವುದು ಸೂಕ್ತವಲ್ಲವೇ?



Leave a Comment: