40 ವರ್ಷ ಇತಿಹಾಸದ ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ಇನ್ನು ನೆನಪು ಮಾತ್ರ!!

ಸುದ್ದಿಗಳು News

Posted by vidyamaana on 2024-06-25 22:06:47 | Last Updated by Vidyamaana on 2024-06-25 22:06:47

Share: | | | | |


40 ವರ್ಷ ಇತಿಹಾಸದ ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ಇನ್ನು ನೆನಪು ಮಾತ್ರ!!

ಪುತ್ತೂರು: ಬೋನಂತಾಯ ಆಸ್ಪತ್ರೆ ಬಳಿ, ಎಸ್.ಪಿ.ಟಿ. ಸೇತುವೆ ಪಕ್ಕದಲ್ಲಿರುವ ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ತನ್ನ 40 ವರ್ಷಗಳ ಪಯಣವನ್ನು ಕೊನೆಗೊಳಿಸುತ್ತಿದೆ.ಜೂನ್ 28ರ ಬಳಿಕ ಅಂದರೆ ಶುಕ್ರವಾರದ ನಂತರ ಈ ಹೋಟೆಲ್ ಇರುವುದಿಲ್ಲ.

1979ರಲ್ಲಿ ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಳದ ಕೆರೆ ಪಕ್ಕದಲ್ಲಿದ್ದ ದೇವಸ್ಥಾನದ ಕಟ್ಟಡದಲ್ಲಿ ಗಣೇಶ್ ಪ್ರಸಾದ್ ಹೋಟೆಲ್ ಪರಿಚಯಿಸಲ್ಪಟ್ಟಿತು. 1984ರ ಫೆಬ್ರುವರಿ 12ರಂದು ಅಲ್ಲೇ ಎದುರಿನ ಕಟ್ಟಡದಲ್ಲಿ ನ್ಯೂ ಗಣೇಶ್ ಪ್ರಸಾದ್ ಎಂಬ ಹೆಸರಿನಲ್ಲಿ ಹೋಟೆಲ್ ಉದ್ಯಮದ ಇನ್ನೊಂದು ಶಾಖೆಯನ್ನು ತೆರೆಯಲಾಯಿತು.

ಇದೀಗ ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ತೆರೆ ಮರೆಗೆ ಸರಿಯುತ್ತಿದೆ. ಕಾರಣ, ಬೋನಂತಾಯ ಕಟ್ಟಡವನ್ನು ನೆಲಸಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ ನ್ಯೂ ಗಣೇಶ್ ಪ್ರಸಾದ್ ಕಟ್ಟಡವೂ ನೆಲಸಮಗೊಳ್ಳುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಟೆಲ್ ಮಾಲಕ ಗೋಪಾಲಕೃಷ್ಣ ಹೇರಳೆ ಮಾತನಾಡಿ, ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ಅನ್ನು ಸದ್ಯಕ್ಕೆ ಮುಚ್ಚುತ್ತಿದ್ದೇವೆ. ಕಟ್ಟಡ ನೆಲಸಮ ಆಗುತ್ತಿರುವುದೇ ಇದಕ್ಕೆ ಕಾರಣ. ಸ್ಥಳಾಂತರದ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ ಎಂದಿದ್ದಾರೆ.

 Share: | | | | |


ಇಂದು ಜು.19: ಸುಳ್ಯ ತಾ.ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ

Posted by Vidyamaana on 2023-07-19 01:54:45 |

Share: | | | | |


ಇಂದು ಜು.19: ಸುಳ್ಯ ತಾ.ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸ೦ಘದ ಬೆಳ್ಳಿಹಬ್ಬ ಆಚರಣೆ ಜುಲೈ19 ರಂದು ಸುಳ್ಯ ಕೇರ್ಪಳ ದ ಬಂಟರ ಭವನದಲ್ಲಿ ನಡೆಯಲಿದೆ.


ಇದರ ಅಂಗವಾಗಿ ಉದ್ಘಾಟನಾ ಸಮಾರಂಭ, ಮಾಧ್ಯಮ ವಿಚಾರ ಸಂಕಿರಣ, ಪತ್ರಕರ್ತರ ಸಮ್ಮಿಲನ, ಸಮಾರೋಪ ಸಮಾರಂಭ ಹಾಗೂ ಸನ್ಮಾನ, ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ ಎಂದು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರಕ್ಕೋಡಿ ತಿಳಿಸಿದ್ದಾರೆ.


ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ಕಾನೂನು ಸಲಹಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸುವರು, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ ವಿ ಚಿದಾನಂದ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಗುಜರಾತ್ ಉದ್ಯಮಿ ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್.ಕೆ ನಾಯರ್, ಪ್ರೆಸ್ ಕ್ಲಬ್‌ ಅಧ್ಯಕ್ಷ ಹರೀಶ್‌ ಬಂಟ್ವಾಳ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಗಂಗಾಧರ ಮಟ್ಟಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.ಸಂಜೆ 5 ರಿಂದ ಸಮಾರೋಪ ಸಮಾರಂಭ ಹಾಗೂ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ, ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಸನ್ಮಾನ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್‌ ಗುಂಡೂರಾವ್‌ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸುಳ್ಯ ಶಾಸಕಿ ಭಾಗೀರಥಿ ಮುರುಳ ಅಧ್ಯಕ್ಷತೆ ವಹಿಸುವರು, ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ,ಮಾಜಿ ಸಚಿವ ಎಸ್.ಅಂಗಾರ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ.ರೇಣುಕಾಪ್ರಸಾದ್ ಕೆ.ವಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ದ.ಕ.ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಹೆಚ್.ಜಿ. ಭಾಗವಹಿಸಲಿದ್ದಾರೆ. ವಿಸ್ತಾರ ನ್ಯೂಸ್ ಎಡಿಟರ್ ಇನ್‌ ಚೀಫ್ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.


ಸಮಾರಂಭದಲ್ಲಿ ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ. ಯು.ಪಿ.ಶಿವಾನಂದ ಹಾಗೂ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿಯವರಿಗೆ ವಿಶೇಷ ಸನ್ಮಾನ ಮತ್ತು ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಸದಸ್ಯರಿಗೆ ಗೌರವಾರ್ಪಣೆ ನಡೆಯಲಿದೆ.


ಮಾಧ್ಯಮ ವಿಚಾರಗೋಷ್ಠಿ ಪತ್ರಕರ್ತರ ಸಮ್ಮಿಲನ : ಬೆಳ್ಳಿ ಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಕುಮಾರ್ ನಾರ್ಯತೆಗೆ ಮಾತನಾಡಿ, ಪೂ.11.30ರಿಂದ ಹಿರಿಯ ಪತ್ರಕರ್ತ ಶಿವ ಸುಬ್ರಹ್ಮಣ್ಯ  ಅಧ್ಯಕ್ಷತೆಯಲ್ಲಿ ಮಾಧ್ಯಮ ವಿಚಾರ ಸಂಕಿರಣ ನಡೆಯಲಿದೆ. ವಿಸ್ತಾರ ನ್ಯೂಸ್ ಬೆಂಗಳೂರು ಇದರ ಸುದ್ದಿಸಂಪಾದಕ ಹರೀಶ್‌  ಹಾಗೂ, ಸುದ್ದಿಯಾನ ಡಿಜಿಟಲ್ ಚಾನೆಲ್ ಸಂಪಾದಕ ಹರಿಪ್ರಸಾದ್  ವಿಚಾರಮಂಡನೆ ಮಾಡಲಿದ್ದಾರೆ. ಅಪರಾಹ್ನ 3 ಗಂಟೆಯಿಂದ 5 ಗಂಟೆಯ ತನಕ ರಾಜ್ಯದ ವಿವಿಧ ಕಡೆಗಳಲ್ಲಿ ಕಾರ್ಯನಿರ್ವಹಿಸುವ ಸುಳ್ಯದ ಪತ್ರಕರ್ತರ ಸಮ್ಮಿಲನ ನಡೆಯಲಿದೆ ಎಂದು ತಿಳಿಸಿದರು. ಬೆಳಿಗ್ಗೆ 9 ರಿಂದ 10ರ ತನಕ ಸುಮನಾ ರಾವ್‌ ಪತ್ತೂರು ಹಾಗು ಬಳಗದವರಿಂದ ಸಂಗೀತ ಸಂಭ್ರಮ ವಿಶೇಷ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 2 ರಿಂದ 3ರ ತನಕ ರಂಗಮಯೂರಿ ಕಲಾಶಾಲೆ ಸುಳ್ಯ, ನೂಪುರ ನಾಟ್ಯ ಸಂಸ್ಥೆ ಸುಳ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7.30 ರಿಂದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ವಿಠಲ ನಾಯಕ್‌ ಕಲ್ಲಡ್ಕ ಮತ್ತು ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಗಂಗಾಧರ ಮಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಲ್ಲಹಳ್ಳಿ, ತಾಲೂಕು ಸಂಘದ ಕೋಶಾಧಿಕಾರಿ ದಯಾನಂದ ಕಲ್ಪಾ‌, ಬೆಳ್ಳಿಹಬ್ಬ ಸಮಿತಿಯ ಕೋಶಾಧಿಕಾರಿ ಗಿರೀಶ್  ಅಡಪಂಗಾಯ  ಇದ್ದರು.

ಕಾಪು : ರಂಗ ಕಲಾವಿದ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು

Posted by Vidyamaana on 2023-12-13 09:16:32 |

Share: | | | | |


ಕಾಪು : ರಂಗ ಕಲಾವಿದ  ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು

ಕಾಪು: ಸಮಾಜ ಸೇವಕ, ಹಿರಿಯ ರಂಗ ಕಲಾವಿದ, ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳು, ಧರಣಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ, ಕಾಪು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಲೀಲಾಧರ ಶೆಟ್ಟಿ (68) ಅವರು ಪತ್ನಿ ವಸುಂಧರಾ ಶೆಟ್ಟಿ (58) ಸಮೇತರಾಗಿ ಮಂಗಳವಾರ ಮಧ್ಯರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.



ಲೀಲಾಧರ ಶೆಟ್ಟಿ ಮತ್ತು ವಸುಂಧರಾ ಶೆಟ್ಟಿ ದಂಪತಿ ಮಂಗಳವಾರ ಮಧ್ಯರಾತ್ರಿ 11.20 ರಿಂದ 12.30 ರ ನಡುವಿನ‌ ಅವಧಿಯಲ್ಲಿ ತಮ್ಮ ಮನೆಯ ಪಕ್ಕಾಸಿಗೆ‌ ಒಂದೇ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.


ಸಾವಿನ ಬಗ್ಗೆ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿವೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರಿಸಿದ್ದಾರೆ.


 ಎಲ್.ಐ.ಸಿ. ಏಜಂಟರಾಗಿ, ಕಲಾ ಸಂಘಟಕ, ಕಲಾಪೋಷಕರಾಗಿದ್ದ ಅವರು ವಿವಿಧ ಕಾರ್ಯಕ್ರಮಗಳ ಆಯೋಜಕರಾಗಿ ಕಲೆ, ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ, ಜನಪದ, ಶೈಕ್ಷಣಿಕ ಕ್ಷೇತ್ರಗಳ ಪೋಷಕರಾಗಿ ಸ್ಚಾರ್ಥವಿಲ್ಲದೇ, ಕಳಂಕ ರಹಿತರಾಗಿ ಸಮಾಜದಲ್ಲಿ ಗುರುತಿಸಲ್ಪಟ್ಟಿದ್ದರು. ಅವರ ಸೇವೆಗಾಗಿ ಎಲ್ಲರೂ ಅವರನ್ನು ಆತ್ಮೀಯವಾಗಿ ಲೀಲಣ್ಣ ಎಂದೇ ಕರೆಯುತ್ತಿದ್ದರು.

ಕರಾವಳಿ ಜಿಲ್ಲೆಗಳಲ್ಲಿ ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

Posted by Vidyamaana on 2023-07-06 07:04:55 |

Share: | | | | |


ಕರಾವಳಿ ಜಿಲ್ಲೆಗಳಲ್ಲಿ ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

ಬೆಂಗಳೂರು: ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿ ಸಂಭವಿಸಿದ್ದು ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮಂಕಾಳ ವೈದ್ಯ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ.


ಮಳೆ ಹಾನಿ ಕುರಿತು ಮುಖ್ಯ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಪರಿಹಾರ ಕಾಮಗಾರಿಗಳಿಗೆ ಅಧಿಕಾರಿಗಳನ್ನು ತುರ್ತಾಗಿ ಸಜ್ಜುಗೊಳಿಸುವಂತೆ ಆದೇಶಿಸಿದ್ದಾರೆ.

ಪ್ರಿಯತಮನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಿಯತಮೆ; ದುರಂತ ಅಂತ್ಯ ಕಂಡ ಪೊಲೀಸ್ ಕಾನ್ಸ್ ಟೇಬಲ್ ಗಳ ಪ್ರೀತಿ

Posted by Vidyamaana on 2023-12-21 15:55:45 |

Share: | | | | |


ಪ್ರಿಯತಮನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಿಯತಮೆ; ದುರಂತ ಅಂತ್ಯ ಕಂಡ ಪೊಲೀಸ್ ಕಾನ್ಸ್ ಟೇಬಲ್ ಗಳ ಪ್ರೀತಿ

ಬೆಂಗಳೂರು : ಪ್ರಿಯತಮನಿಗೆ ಪೆಟ್ರೋಲ್ ಸುರಿದು ಪ್ರಿಯತಮೆ ಬೆಂಕಿ ಹಚ್ಚಿ ಹತ್ಯೆಗೈದ ಘೋರ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಬಳಿ ನಡೆದಿದೆ.ಕಾನ್ಸ್ ಟೇಬಲ್ ಸಂಜಯ್ ಮೃತ ದುರ್ದೈವಿ. ಕಾನ್ಸ್ ಟೇಬಲ್ ಸಂಜಯ್ ಗೆ ಹೋಮ್ ಗಾರ್ಡ್ ರಾಣಿ ಎಂಬುವವರು ಬೆಂಕಿ ಇಟ್ಟಿದ್ದಾರೆ.ಬೇರೆಯವನ ಜೊತೆ ಲವ್ವಿಡವ್ವಿ ನಡೆಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಹೋಮ್ ಗಾರ್ಡ್ ರಾಣಿ ಈ ಕೃತ್ಯವೆಸಗಿದ್ದಾಳೆ.


ಸಂಜಯ್ ಹಾಗೂ ರಾಣಿ ಇಬ್ಬರೂ ಬಸವನಗುಡಿ ಠಾಣೆಯಲ್ಲಿ ಕೆಲಸ ಮಾಡುತಿದ್ದರು. ಈ ವೇಳೆ ಸಂಜಯ್ ಹಾಗೂ ರಾಣಿ ನಡುವೆ ಪ್ರೀತಿ ಶುರುವಾಗಿತ್ತು. ವಿವಾಹವಾಗಿದ್ದರೂ ಪಿಸಿ ಸಂಜಯ್ ನನ್ನು ರಾಣಿ ಲವ್ ಮಾಡುತ್ತಿದ್ದಳು. ಇತ್ತೀಚೆಗೆ ಕಾನ್ಸ್ ಟೇಬಲ್ ಸಂಜಯ್ ನನ್ನು ರಾಣಿ ಅವೈಡ್ ಮಾಡುತ್ತಿದ್ದಳು. ಇದರಿಂದ ಬೇಸರಗೊಂಡ ಸಂಜಯ್ ಎರಡು ದಿನಗಳ ಹಿಂದೆ ರಾಣಿ ಮನೆಗೆ ಹೋಗಿದ್ದ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಈ ವೇಳೆ ಕಾನ್ಸ್ ಟೇಬಲ್ ಸಂಜಯ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ.ಗಂಭೀರವಾಗಿ ಗಾಯಗೊಂಡಿರುವ ಕಾನ್ಸ್ ಟೇಬಲ್ ಸಂಜಯ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಇದೇನು ಮಿತ್ತೂರೇ? ಕಿತ್ತೂರೇ? ಹತ್ತೂರೇ? ಪುತ್ತೂರೇ? | ಪುತ್ತೂರು ನಗರಸಭೆ ಬೋರ್ಡ್ ತಂದ ಅನುಮಾನ.

Posted by Vidyamaana on 2023-01-26 13:03:53 |

Share: | | | | |


ಇದೇನು ಮಿತ್ತೂರೇ? ಕಿತ್ತೂರೇ? ಹತ್ತೂರೇ? ಪುತ್ತೂರೇ? | ಪುತ್ತೂರು ನಗರಸಭೆ ಬೋರ್ಡ್ ತಂದ ಅನುಮಾನ.

ಪುತ್ತೂರು: ಯಾವುದೇ ಪ್ರವಾಸಿಗ ಅಥವಾ ಯಾತ್ರಾರ್ಥಿ ತಾನು ಸಾಗುವ ಪ್ರಯಾಣದ ಸಂದರ್ಭ ಎದುರಾದ ಊರು ಯಾವುದೆಂದು ನೋಡಿಯೇ ನೋಡುತ್ತಾನೆ. ಆದರೆ ಪುತ್ತೂರು ಬಂದಾಗ ಮಾತ್ರ ಆತನಿಗೆ ಇದು ಯಾವ ಊರು ಎಂಬ ಅನುಮಾನ ಬಾರದೇ ಇರದು. ಇದಕ್ಕೆ ಕಾರಣ ಮುರದ ಬಳಿ ಸ್ವಾಗತಿಸುವ ಕಮಾನು.

ಮುರ ಹಾಗೂ ನೆಹರೂನಗರದ ನಡುವೆ ಪುತ್ತೂರು ನಗರಸಭೆಯ ಕಮಾನು ಎದುರುಗೊಳ್ಳುತ್ತದೆ. ಪ್ರವಾಸಿಗರಿಗೆ, ಯಾತ್ರಾರ್ಥಿಗಳಿಗೆ ಪುತ್ತೂರು ನಗರಕ್ಕೆ ಸ್ವಾಗತ ನೀಡುವ ಉದ್ದೇಶದಿಂದ ಈ ಕಮಾನನ್ನು ಅಳವಡಿಸಲಾಗಿದೆ. ಆದರೆ ವೈಚಿತ್ರ್ಯವೆಂದರೆ, ಯಾವ ಉದ್ದೇಶದಿಂದ ಈ ಕಮಾನನ್ನು ಅಳವಡಿಸಲಾಗಿದೆಯೋ, ಆ ಉದ್ದೇಶವನ್ನೇ ಮರೆತಂತಿದೆ.

       ಪುತ್ತೂರು ನಗರಕ್ಕೆ ಸ್ವಾಗತ ಎನ್ನುವುದು ಕಮಾನಿನ ಫಲಕದಲ್ಲಿದ್ದ ಒಕ್ಕಣೆ. ಆದರೆ ಇಂದು ನೋಡಿದರೆ, `ಪು’ ಅಕ್ಷರ ಅಳಿಸಿಹೋಗಿದೆ. `ತ್ತೂರು’ ಶಬ್ದ ಮಾತ್ರ ಕಾಣಿಸುತ್ತಿದೆ. ಆದ್ದರಿಂದ ಹೊರಭಾಗದಿಂದ ಬಂದವರು, ಇದನ್ನು ಯಾವ ರೀತಿಯಲ್ಲಿ ಅರ್ಥವಿಸಿಕೊಳ್ಳಬೇಕು. ಸುತ್ತೂರು, ಮಿತ್ತೂರು, ಹತ್ತೂರು ಹೀಗೆ ಹತ್ತು ಹಲವು ಹೆಸರುಗಳ ಗೊಂದಲಕ್ಕೆ ಈಡಾಗುವ ಸಾಧ್ಯತೆಯೇ ಅಧಿಕ.

   ಈ ಕಮಾನಿನ ಫಲಕದಲ್ಲಿ ಹೆಚ್ಚಿನ ಎಲ್ಲಾ ಶಬ್ದಗಳು ಅಳಿಸಿಹೋಗಿದೆ. ಕಂಬ ಹಾಗೂ ಫಲಕ ಬಣ್ಣ ಕಳೆದುಕೊಂಡು, ವಿಕೃತಿಗೊಂಡಿದೆ. ಪ್ರವಾಸಿಗರ ಗಮನವನ್ನು ಸೆಳೆಯಬೇಕಿದ್ದ ಫಲಕ, ಪ್ರವಾಸಿಗರನ್ನು ಗೊಂದಲಕ್ಕೆ ಈಡು ಮಾಡುತ್ತಿದೆ.

      ಇಂತಹ ಕಮಾನು, ಫಲಕಗಳು ಪುತ್ತೂರು ಪೇಟೆಯ ಅಂದವನ್ನು ಹೆಚ್ಚಿಸಬೇಕಿತ್ತು. ಮಾತ್ರವಲ್ಲ, ಪುತ್ತೂರು ಪೇಟೆಯ ಪ್ರತಿಬಿಂಬದಂತೆ ಕಾರ್ಯನಿರ್ವಹಿಸಬೇಕಿತ್ತು. ಆದರೆ ಈ ಫಲಕ ಪುತ್ತೂರು ಪೇಟೆಯ ಅಂದವನ್ನು ಕೆಡಿಸುವಂತಿದೆ. ಪುತ್ತೂರು ನಗರಸಭೆ ಸ್ವಚ್ಛತೆಯಲ್ಲಿ 3ನೇ ಸ್ಥಾನದಲ್ಲಿದೆ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಆದರೆ ಈ ಫಲಕವನ್ನು ನೋಡಿದರೆ, ಇದು ನಿಜವೇ ಎಂಬ ಪ್ರಶ್ನೆಗೆ ದಾರಿ ಮಾಡಿಕೊಡುವಂತಿದೆ.

ಪುತ್ತೂರಿಗೆ ಒಪ್ಪಿಗೆ ಆಗುವ ವ್ಯಕ್ತಿಯನ್ನೇ ಆಯ್ಕೆ ಮಾಡಿ.

Posted by Vidyamaana on 2023-04-25 09:35:45 |

Share: | | | | |


ಪುತ್ತೂರಿಗೆ ಒಪ್ಪಿಗೆ ಆಗುವ ವ್ಯಕ್ತಿಯನ್ನೇ ಆಯ್ಕೆ ಮಾಡಿ.

ಪುತ್ತೂರು: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರು ಓರ್ವ ಸಮರ್ಥ ಅಭ್ಯರ್ಥಿ. ಪುತ್ತೂರಿನ ಬಗ್ಗೆ ತಿಳಿದುಕೊಂಡಿರುವ, ಪುತ್ತೂರಿನ ಅಭಿವೃದ್ಧಿಯ ಚಿಂತನೆ ಹೊಂದಿರುವ, ಪ್ರತಿಯೊಬ್ಬರ ಪರಿಚಯ ಹೊಂದಿರುವ ಅರುಣ್ ಕುಮಾರ್ ಪುತ್ತಿಲ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಖ್ಯಾತ ವೈದ್ಯ ಡಾ. ಸುರೇಶ್ ಪುತ್ತೂರಾಯ ಅಭಿಪ್ರಾಯ ಪಟ್ಟಿದ್ದಾರೆ.

ವಿದ್ಯಮಾನದ ಜೊತೆ ಮಾತನಾಡಿದ ಅವರು, ನನ್ನ ಪ್ರಕಾರ ಅರುಣ್ ಕುಮಾರ್ ಪುತ್ತಿಲ ಸಮರ್ಥ ಅಭ್ಯರ್ಥಿ. ಹಾಗಾಗಿ ನನ್ನ ಬೆಂಬಲ ಅವರಿಗೆ. ಕಳೆದ 20 ವರ್ಷಗಳಿಂದ ನಾನು ಅವರನ್ನು‌ ಗಮನಿಸುತ್ತಿದ್ದೇನೆ. ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ಸಾರ್ವಜನಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡ ಅರುಣ್ ಕುಮಾರ್ ಪುತ್ತಿಲ ಅವರು, ಪುತ್ತೂರಿನ ಎಲ್ಲಾ ದೃಷ್ಟಿಯಿಂದಲೂ ಸಮರ್ಥ ಅಭ್ಯರ್ಥಿ ಎಂದು ಅಭಿಪ್ರಾಯಪಟ್ಟರು.

ಜೊತೆಗೆ ನಿಂತು‌ ಕೆಲಸ ಮಾಡಬಲ್ಲವರು. ಹೇಗೆ ಕೆಲಸ ಮಾಡಬೇಕು ಎನ್ನುವುದರ ಬಗ್ಗೆ ಮಾರ್ಗದರ್ಶನ ನೀಡುವವರು. ಜನಪ್ರತಿನಿಧಿ ಹೇಗರ ಇರಬೇಕು ಎನ್ನುವುದಕ್ಕೆ ಮಾದರಿ ಅವರು. ಆದ್ದರಿಂದ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಯಾವುದೇ ಆಮಿಷ, ಒತ್ತಾಯಗಳಿಗೆ ಒಳಗಾಗಿ ಮತ ಚಲಾಯಿಸಬೇಡಿ. ಮತದಾನ ಎನ್ನುವುದು ಬಹಳ ಪವಿತ್ರವಾದ ಕಾರ್ಯ. ಆದ್ದರಿಂದ ಸಮರ್ಥ ಅಭ್ಯರ್ಥಿಯನ್ನೇ ಗೆಲ್ಲಿಸುವುದು ನಮ್ಮ ಧ್ಯೇಯವಾಗಬೇಕು ಎಂದು ಡಾ‌. ಸುರೇಶ್ ಪುತ್ತೂರಾಯ ತಿಳಿಸಿದ್ದಾರೆ.

Recent News


Leave a Comment: