ತಾಂತ್ರಿಕ ದೋಷ: ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದ ಸುನಿತಾ ವಿಲಿಯಮ್ಸ್

ಸುದ್ದಿಗಳು News

Posted by vidyamaana on 2024-06-29 11:21:28 |

Share: | | | | |


ತಾಂತ್ರಿಕ ದೋಷ: ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದ ಸುನಿತಾ ವಿಲಿಯಮ್ಸ್

ವಾಷಿಂಗ್ಟನ್: ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹಯಾತ್ರಿ ಬಚ್‌ ವಿಲ್ಮೋರ್ ಅವರು ಇನ್ನು ಕೆಲ ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿಯಲಿದ್ದಾರೆ ಎಂದು ನಾಸಾ ತಿಳಿಸಿದೆ.ಜೂನ್ 5ರಂದು ಸುನಿತಾ ಮತ್ತು ವಿಲ್ಮೋರ್‌ ಅವರಿದ್ದ ಸ್ಟಾರ್‌ಲೈನರ್‌ ನೌಕೆಯನ್ನು ಫ್ಲಾರಿಡಾದ ಕೇಪ್‌ ಕ್ಯಾನವೆರಲ್‌ ಸ್ಪೇಸ್‌ ಫೋರ್ಸ್‌ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು.

ಜೂನ್ 6ರ ಮಧ್ಯಾಹ್ನ 1.34ಕ್ಕೆ ಗಗನನೌಕೆಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಡಾಕ್‌ (ಕೂಡಿಕೊಳ್ಳುವ ಪ್ರಕ್ರಿಯೆ) ಮಾಡಲಾಗಿತ್ತು. 

ತಾಂತ್ರಿಕ ದೋಷಕ್ಕೆ ಕಾರಣಗಳೇನು ಎಂಬ ಬಗ್ಗೆ ಪರೀಕ್ಷೆಗಳು ನಡೆಯುತ್ತಿದ್ದು, ಗಗನಯಾತ್ರಿಗಳು ಸುರಕ್ಷಿತವಾಗಿದ್ದಾರೆ ಎಂದು ನಾಸಾ ತಿಳಿಸಿದೆ. ಆದರೆ, ಗಗನಯಾತ್ರಿಗಳು ಯಾವಾಗ ಭೂಮಿಗೆ ಹಿಂದಿರುಗಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ನಾವು ಭೂಮಿಗೆ ಹಿಂದಿರುಗುವ ಕುರಿತಂತೆ ಆತುರಪಡುತ್ತಿಲ್ಲ ಎಂದು ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಹೇಳಿದರು.

ಡಾಕಿಂಗ್ ಮಾಡುವ ವೇಳೆ ಥ್ರಸ್ಟರ್‌ನಲ್ಲಿ(ಪ್ಯೊಪಲ್ಷನ್‌ ಮಾಡ್ಯೂಲ್‌ಗೆ ಅಗತ್ಯ ನೂಕುಬಲ ನೀಡಲು ಅಳವಡಿಸಲಾಗಿರುವ ಯಂತ್ರ) ತೊಂದರೆ ಕಾಣಿಸಿಕೊಂಡಿದೆ. ಅಲ್ಲದೇ ಉಡಾವಣೆ ವೇಳೆ ಹೀಲಿಯಂ ಸೋರಿಕೆಯೂ ಆಗಿದೆ. ಇವೆರಡರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಡಾಕಿಂಗ್ ಸಮಯದಲ್ಲಿ ಸಂಭವಿಸಿದ ಪರಿಸ್ಥಿತಿಯ ಬಗ್ಗೆ ತಿಳಿಯಲು ನ್ಯೂ ಮೆಕ್ಸಿಕೋ ಮರುಭೂಮಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಬಚ್‌ ಮತ್ತು ಸುನಿತಾ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿಲ್ಲ ಎಂದು ಸ್ವಿಚ್ ತಿಳಿಸಿದರು.

 Share: | | | | |


ದಕ್ಷಿಣ ಕನ್ನಡದಲ್ಲಿ ಈ ಬಾರಿ ಲೋಕ ಕಣದಲ್ಲಿ ಬಂಟ-ಬಿಲ್ಲವ ಅಭ್ಯರ್ಥಿಗಳ ಸೆಣೆಸಾಟ?

Posted by Vidyamaana on 2024-03-19 21:42:20 |

Share: | | | | |


ದಕ್ಷಿಣ ಕನ್ನಡದಲ್ಲಿ ಈ ಬಾರಿ ಲೋಕ ಕಣದಲ್ಲಿ ಬಂಟ-ಬಿಲ್ಲವ ಅಭ್ಯರ್ಥಿಗಳ ಸೆಣೆಸಾಟ?

ಮಂಗಳೂರು: ಒಂದೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಇದೀಗ ಬಿಜೆಪಿ ಭದ್ರ ಬಾಹುವಿನಲ್ಲಿ ಬಂಧಿಯಾಗಿದೆ. ಇದೀಗ ಲೋಕಸಭಾ‌ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಸಮರ್ಥ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದೀಗ ಚೌಟಾ ಅವರಿಗೆ‌ ಪ್ರತಿಸ್ಪರ್ಧಿಯಾಗಿ ಹಾಗೂ ಕಳೆದುಕೊಂಡ ಕ್ಷೇತ್ರವನ್ನು ಮರು ಸಂಪಾದಿಸಿಕೊಳ್ಳುವುದೇ ಕಾಂಗ್ರೆಸ್ ಮುಂದಿರುವ ಬಹುದೊಡ್ಡ ಸವಾಲು.

ವಿಧಾನಸಭಾ ಚುನಾವಣೆಯಂತೆ ಬಿಜೆಪಿ ಬಂಡಾಯ ಕಾಂಗ್ರೆಸಿಗೆ ವರದಾನ ಎಂಬ ಲೆಕ್ಕಾಚಾರ ಇದೀಗ ಉಲ್ಟಾ ಆಗಿದೆ. ಅರುಣ್ ಕುಮಾರ್ ಪುತ್ತಿಲ ಅವರು‌ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಗೆಲುವು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಇನ್ನು ಅಧಿಕೃತ ಮಾಹಿತಿ‌ ಹೊರಹಾಕಿಲ್ಲ.

ಜಾತಿ ಲೆಕ್ಕಾಚಾರ:

ಬಂಟ ಸಮುದಾಯದ ಕ್ಯಾ. ಚೌಟ ಅವರಿಗೆ ಬಿಜೆಪಿ ಟಿಕೇಟ್ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಲ್ಲವ ಮುಖಂಡನಿಗೆ ಟಿಕೇಟ್ ನೀಡಲು ಯೋಜನೆ ಸಿದ್ಧಪಡಿಸಿಕೊಂಡಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಂಟ ಸಮುದಾಯದ ನಳಿನ್ ಕುಮಾರ್ ಕಟೀಲ್ ಎದುರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೇ ಬಂಟ ಸಮುದಾಯದ ಮಿಥುನ್ ರೈ ಕಣಕ್ಕಿಳಿದಿದ್ದರು. ಆದರೆ ಮೋದಿ ಅಲೆಯ ಮುಂದೆ ಎಲ್ಲವೂ ಕೊಚ್ಚಿಕೊಂಡು‌ಹೋಗಿತ್ತು. ಬಂಟ ಸಮುದಾಯದ ಕಾಂಗ್ರೆಸ್ ಲೆಕ್ಕಾಚಾರ ಬುಡಮೇಲಾಗಿತ್ತು.

ಕರಾವಳಿಯಲ್ಲಿ ಬಂಟ, ಬಿಲ್ಲವ ಸಮುದಾಯದ ಸಂಖ್ಯೆ ಹೆಚ್ಚಿದೆ. ಹಾಗಾಗಿ ಬಂಟ ಸಮುದಾಯದ ಪ್ರತಿಸ್ಪರ್ಧಿಯಾಗಿ ಬಿಲ್ಲವ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂಬುದು ಸದ್ಯದ ಮಾಹಿತಿ.

ಜನಾರ್ದನ ಪೂಜಾರಿ‌ ಆಪ್ತ!

ಗುರು ಬೆಳದಿಂಗಳು ಕಾರ್ಯಕ್ರಮದ ಮೂಲಕ ಫೇಮಸ್ ಆಗಿರುವ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಆಪ್ತ ಪದ್ಮರಾಜ್ ರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಎನ್ನುವ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಪದ್ಮರಾಜ್ ಹೆಸರನ್ನೇ ಅಂತಿಮ ಮಾಡಿದೆ ಎಂದು ತಿಳಿದುಬಂದಿದೆ.



ನಾನು ಭ್ರಷ್ಟನಲ್ಲ ಇಲ್ಲಿ ಲಂಚ ಸ್ವೀಕರಿಸುವುದಿಲ್ಲ

Posted by Vidyamaana on 2023-11-09 19:40:40 |

Share: | | | | |


ನಾನು ಭ್ರಷ್ಟನಲ್ಲ ಇಲ್ಲಿ ಲಂಚ ಸ್ವೀಕರಿಸುವುದಿಲ್ಲ

ಹಾಸನ, ನ 09: ‘ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ’ ಎಂದು ಹಾಸನ ಬಿಇಒ ಕಚೇರಿ ಅಧೀಕ್ಷಕರೊಬ್ಬರು ತಮ್ಮ ಮೇಜಿನ ಮೇಲೆ ಹಾಕಿರುವ ಫಲಕದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 


ಹಾಸನ ನಗರದ ಬಿಇಒ ಕಚೇರಿಯ ಅಧೀಕ್ಷರಾಗಿರುವ ಡಿ.ಎಸ್.ಲೋಕೇಶ್‌ ಅವರೇ ಈ ಫಲಕ ಹಾಕಿಕೊಂಡಿರುವ ಅಧಿಕಾರಿ.


ಈ ಹಿಂದೆ ಲೋಕೇಶ್‌ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನ ಸಂಸದರಾಗಿದ್ದ ಅವಧಿಯಲ್ಲಿ ಅವರ ಕಚೇರಿಯ ಆಪ್ತ ಕಾರ್ಯದರ್ಶಿಯಾಗಿದ್ದರು. ಆ ಬಳಿಕ ಹಾಸನ ಕ್ಷೇತ್ರದ ಶಾಸಕರಾಗಿದ್ದ ಪ್ರೀತಂ ಜೆ.ಗೌಡರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚಿಗೆ ಬಿಇಒ ಕಚೇರಿ ಅಧೀಕ್ಷಕರಾಗಿ ಲೋಕೇಶ್‌ ಅವರು ಬಡ್ತಿ ಹೊಂದಿದ್ದಾರೆ. 


ಸದ್ಯ ಲೋಕೇಶ್‌ ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನನ್ನ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಇರಬಾರದು ಸೂರು ನೀರು ಕರೆಂಟಿಲ್ಲದ ಮನೆಯೇ ಇರಬಾರದು: ಶಾಸಕ ಅಶೋಕ್ ಕುಮಾರ್ ರೈ

Posted by Vidyamaana on 2023-08-28 13:54:49 |

Share: | | | | |


ನನ್ನ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಇರಬಾರದು ಸೂರು ನೀರು ಕರೆಂಟಿಲ್ಲದ ಮನೆಯೇ ಇರಬಾರದು: ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ನಾನು ಬಡತನದಿಂದ ಮೇಲೆ ಬಂದವ, ಬಡತನ ಏನೆಂಬುದು ನನಗೆ ಗೊತ್ತಿದೆ ಈ ಕಾರಣ ನಾನು ಹಸಿವನ್ನು ಚೆನ್ನಗಿ ಬಲ್ಲೆ, ನಾನು ಈಗ ಶಾಸಕನಾಗಿದ್ದೇನೆ ನನ್ನ ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಹಸಿವಿನಿಂದ ಮಲಗಬಾರದು, ಸೂರು, ಕುಡಿಯುವ ನೀರು ಮತ್ತು ಕರೆಂಟ್ ಎಲ್ಲರಿಗೂ ಸಿಗುವಂತಾಗಬೇಕಂಬುದೇ ನನ್ನ ಉದ್ದೇಶವಾಗಿದೆ ನನ್ನ ಅಧಿಕಾರದ ಅವಧಿಯಲ್ಲಿ ಬಡವರಿಗೆ ಇವೆಲ್ಲವನ್ನೂ ನೀಡಿಯೇ ಸಿದ್ದ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಆ. ೨೮ ರಂದು ಪುತ್ತೂರಿನಲ್ಲಿ ತನ್ನ ನೂತನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

೯೪ಸಿ ಮತ್ತು ೯೪ ಸಿಸಿ ಇದು ಇಲ್ಲಿನ ಬಡವರ ಹಕ್ಕು. ಯಾರೆಲ್ಲಾ ಸರಕಾರಿ ಜಾಗದಲ್ಲಿ ಮನೆ ಮಾಡಿಕೊಂಡಿದ್ದಾರೆ, ಅವರು ಮನೆ ಕಟ್ಟಿರುವ ಜಾಗ ಕಾನೂನು ಪ್ರಕಾರ ಸರಕಾರಕ್ಕೆ ಸೇರಿದ್ದೇ ಅದಲ್ಲಿ ಅವರಿಗೆ ಹಕ್ಕು ಪತ್ರ ಕೊಟ್ಟೇ ಕೊಡ್ತೇನೆ. ಅಕ್ರಮ ಸಕ್ರಮ ಅರ್ಜಿಗಳನ್ನು ಕೆಲವೇ ತಿಂಗಳಲ್ಲಿ ಪೂರ್ಣಗೊಳಿಸಲಿದ್ದು ನಯಾ ಪೈಸೆ ಲಂಚ ಕೊಡದೆ ಅಕ್ರಮಸಕ್ರಮ ಕಡತವನ್ನು ವಿಲೇವಾರಿ ಮಾಡಿಸುತ್ತೇನೆ. ಮನೆ ಕಟ್ಟಲು ಜಾಗವೇ ಇಲ್ಲದವರಿಗೆ ೩ ಸೆಂಟ್ಸ್ ಜಾಗವನ್ನು ನೀಡಿ ಅವರಿಗೆ ಸೂರು ಕಲ್ಪಿಸುವ ಯೋಜನೆ ಇದೆ ಇದಕ್ಕಾಗಿ ವಿಟ್ಲದಲ್ಲಿ ೭ ಎಕ್ರೆ ಜಾಗ ಮತ್ತು ಕುಂಬ್ರ ಸಮೀಪ ಸ್ವಂತ ಹಣದಿಂದ ಜಾಗವನ್ನು ಖರೀದಿ ಮಾಡಿದ್ದೇನೆ. ಈಗಾಗಲೇ ಜಾಗವೇ ಇಲ್ಲದ ೬೦೦ ಮಂದಿ ನಿವೇಶನಕ್ಕಾಗಿ ಅರ್ಜಿ ಕೊಟ್ಟಿದ್ದಾರೆ. ವಿಧವೆಯವರಿಗೆ , ಅನಾಥರಿಗೆ, ನಿರ್ಗತಿಕರಿಗೆ ಮೊದಲ ಆದ್ಯತೆ ಮೇರೆಗೆ ಜಾಗವನ್ನು ಕೊಡಲಿದ್ದೇನೆ ಮತ್ತು ಪ್ರತೀ ಗ್ರಾಮದಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಅದನ್ನು ಕಾನೂನಾತ್ಮಕವಾಗಿ ಬಡವರಿಗೆ ಹಂಚುವ ಕೆಲಸವನ್ನು ಮಾಡುತ್ತೇನೆ. ನಾನು ಚುನಾವಣೆಗೆ ಮುಂಚೆ ನಿಮಗೆ ಕೊಟ್ಟ ಭರವಸೆಯನ್ನು ಮರೆತಿಲ್ಲ ಎಂದು ಹೇಳಿದ ಶಾಸಕರು ಕ್ಷೇತ್ರದ ಅಭಿವೃದ್ದಿಗೆ ಜನರ ಸಹಕಾರವನ್ನು ಕೋರಿದರು.

ನನ ಬಿಯರ್ ಪರ್ಪಿಲೆಕಲಾ ಇಜ್ಜಿ ಮಾರ್ರೆ.. ಹೆಚ್ಚಾಯ್ತು ಬಿಯರ್ ರೇಟ್

Posted by Vidyamaana on 2024-02-01 16:28:56 |

Share: | | | | |


ನನ ಬಿಯರ್ ಪರ್ಪಿಲೆಕಲಾ ಇಜ್ಜಿ ಮಾರ್ರೆ.. ಹೆಚ್ಚಾಯ್ತು ಬಿಯರ್ ರೇಟ್

ಬೆಂಗಳೂರು: ರಾಜ್ಯ ಬಜೆಟ್ ಗೂ ಮೊದಲೇ ಸರ್ಕಾರ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ರಾಜ್ಯ ಸರ್ಕಾರವು ಅಬಕಾರಿ ಸುಂಕವನ್ನು ಹೆಚ್ಚಿಸಿದ ಕಾರಣ ಬಿಯರ್ ಗಳ ಬೆಲೆಯಲ್ಲಿ ಏರಿಕೆಯಾಗಿದೆ.


ಸರ್ಕಾರ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.185 ರಿಂದ 195 ಕ್ಕೆ ಹೆಚ್ಚಳ ಮಾಡಿರುವುದರಿಂದ ಬಿಯರ್‌ ಬೆಲೆ ಏರಿಕೆಯಾಗಿದೆ.


ಗುರುವಾರದಿಂದ (ಫೆ.1) ಪ್ರತಿ ಬಾಟಲ್ ಗೆ 5 ರಿಂದ 12 ರೂ. ವರೆಗೆ ಹೆಚ್ಚಳವಾಗಿದೆ. ಬ್ರಾಂಡ್‌ಗಳ ಆಧಾರದ ಮೇಲೆ ದರ ಏರಿಕೆಯಾಗಲಿದೆ. ಸಾಮಾನ್ಯ ಬ್ರಾಂಡ್‌ ಗಳಿಂದ ಪ್ರೀಮಿಯಂ ಬ್ರಾಂಡ್‌ ಗಳವರೆಗೆ ಎಲ್ಲಾ ಬಗೆಯ ಬಿಯರ್‌ ಗಳ ದರದಲ್ಲಿ ಹೆಚ್ಚಳವಾಗಲಿದೆ.


ಮೇ 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಎರಡನೇ ಬಾರಿಗೆ ಬಿಯರ್ ಬೆಲೆ ಏರಿಕೆಯಾಗಿದೆ. ಚುನಾವಣೆ ಗೆದ್ದ ನಂತರ ಜುಲೈ 7 ರಂದು ಮಂಡಿಸಿದ ಮೊದಲ ಬಜೆಟ್‌ ನಲ್ಲಿ ಸಿದ್ದರಾಮಯ್ಯ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಿಸಿತ್ತು.


ಫೆಬ್ರವರಿ 16 ರಂದು ರಾಜ್ಯ ಬಜೆಟ್‌ ಮಂಡನೆಯಾಗಲಿದೆ. ಇದರ ನಂತರ ಇತರ ಮದ್ಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಬಹುದಾದ ಸಾಧ್ಯತೆಯಿದೆ.


ಬಿಯರ್ ಮಾರಾಟದಲ್ಲಿ ದೊಡ್ಡ ಬೆಳವಣಿಗೆಯಾಗಿರುವುದರಿಂದ ಸರ್ಕಾರವು ಅಬಕಾರಿ ಸುಂಕ ಹೆಚ್ಚಳಕ್ಕೆ ಮಾಡಿದೆ ಎನ್ನಲಾಗಿದೆ.


ರಾಜ್ಯ ಸರಕಾರಕ್ಕೆ ಅಬಕಾರಿ ಆದಾಯವು ನಿರ್ಣಾಯಕವಾಗಿದೆ. 2023-24ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು ಅಬಕಾರಿಯಿಂದ 36,000 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿಯನ್ನು ಹೊಂದಿದೆ.

ಮೇ 12: ಮೈಸೂರಲ್ಲಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ 11ನೇ ಶಾಖೆ ಉದ್ಘಾಟನೆ

Posted by Vidyamaana on 2024-05-11 22:08:40 |

Share: | | | | |


ಮೇ 12: ಮೈಸೂರಲ್ಲಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ 11ನೇ ಶಾಖೆ ಉದ್ಘಾಟನೆ

ಮೈಸೂರು: ಸುಲ್ತಾನ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯು ತನ್ನ 11ನೇ ಶಾಖೆಯನ್ನು ನಗರದ ಮೀನಾ ಬಜಾರ್ ವೃತ್ತದ ಸಮೀಪ ಸಂತ ಫಿಲೋಮಿನಾ ಚರ್ಚ್ ರಸ್ತೆಯಲ್ಲಿ ತೆರೆಯುತ್ತಿದ್ದು, ಮೇ 12ರಂದು ಬಾಲಿವುಡ್ ನಟಿ ರವೀನಾ ಟಂಡನ್ ಅವರು ಮಳಿಗೆ ಉದ್ಘಾಟಿಸಲಿದ್ದಾರೆ.

ಶಾಸಕರಾದ ತನ್ನೀರ್ ಸೇರ್, ಜಿ.ಟಿ.ದೇವೇಗೌಡ, ಕೆ.ಹರೀಶ್ ಗೌಡ, ಸಂತ ಫಿಲೋಮಿನಾ ಚರ್ಚ್‌ನ ಧರ್ಮದರ್ಶಿ ಸ್ಪ್ಯಾನಿ ಅಡಾ, ಮಿಸ್ ಇಂಡಿಯಾ ಯುನಿವರ್ಸ್ ಖ್ಯಾತಿಯ ಡಾ.ಹೇಮಾಮಾಲಿನಿ ಲಕ್ಷ್ಮಣ್, ವೆಲ್ವಿನ್ ಇಂಡಸ್ಟ್ರೀಸ್‌ನ ಗೌರ್ ನಾಜ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನೂತನ ಮಳಿಗೆಯ ಉದ್ಘಾಟನೆಯ ಅಂಗವಾಗಿ ಮೇ 31ರವರೆಗೆ ಪ್ರತಿದಿನ

ಅಕಾಲಿಕವಾಗಿ ನಿಧನರಾದ ಪದ್ಮನಾಭ್ ಸಾಮಂತ್ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ

Posted by Vidyamaana on 2024-04-02 15:13:55 |

Share: | | | | |


ಅಕಾಲಿಕವಾಗಿ ನಿಧನರಾದ ಪದ್ಮನಾಭ್ ಸಾಮಂತ್ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ

ಬಂಟ್ವಾಳ: ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ಪದ್ಮನಾಭ ಸಾಮಂತ್ ಅವರ ಮನೆಗೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ ನೀಡಿದರು.

ಪದ್ಮನಾಭ ಸಾಮಂತ್ ಅವರ ತಾಯಿ, ತನ್ನ ಮಗನ ದಾರುಣ ಸ್ಥಿತಿಯನ್ನು ಪದ್ಮರಾಜ್ ಅವರಿಗೆ ತಿಳಿಸಿ ಕಣ್ಣೀರಾದರು. 



Leave a Comment: