ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಎ.24 : ಕಲ್ಲಾರೆ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಶಿವಕೃಪಾ ಸಭಾಭವನ ಲೋಕಾರ್ಪಣೆ

Posted by Vidyamaana on 2024-04-21 08:44:30 |

Share: | | | | |


ಎ.24 : ಕಲ್ಲಾರೆ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಶಿವಕೃಪಾ ಸಭಾಭವನ ಲೋಕಾರ್ಪಣೆ

ಪುತ್ತೂರು: ಕಲ್ಲಾರೆ ಶಿವಬ್ರಾಹ್ಮಣ್ಯ (ಸ್ಥಾನಿಕ) ಸಮಾಜ ಸೇವಾ ಸಂಘ ೧೯೩೬ರಲ್ಲಿ ಸ್ಥಾಪನೆಗೊಂಡು, ಕಳೆದ೮೮ ವರ್ಷಗಳಿಂದ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ. ನೂತನವಾಗಿ ಸುಮಾರು ೧.೫೦ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ಶಿವ ಕೃಪಾ ಸಭಾಭವನದ ಲೋಕಾರ್ಪಣೆ ಏ.೨೪ರಂದು ಸಾಯಂಕಾಲ ೬.೩೦ಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಸ್. ಕೆ. ಜಗನ್ನಿವಾಸ ರಾವ್ ಹೇಳಿದರು.

ಲೈಂಗಿಕ ಕಿರುಕುಳ ಆರೋಪ : ಚರ್ಚ್ ಪಾದ್ರಿ ವಿರುದ್ಧ ಎಫ್‍ಐಆರ್

Posted by Vidyamaana on 2023-08-24 01:44:18 |

Share: | | | | |


ಲೈಂಗಿಕ ಕಿರುಕುಳ ಆರೋಪ : ಚರ್ಚ್ ಪಾದ್ರಿ ವಿರುದ್ಧ ಎಫ್‍ಐಆರ್

ಬೆಂಗಳೂರು: ಚರ್ಚ್ ಪಾದ್ರಿ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.


ಕಮ್ಮನಹಳ್ಳಿಯ ಸೆಂಟ್ ಪಿಯೂಸ್ ಚರ್ಚ್ ಪಾದ್ರಿ ಜಯಕರನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ.


ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆಂದು ಮಹಿಳೆ ದೂರು ದಾಖಲಿಸಿದ್ದಾರೆ. ಪಾದ್ರಿ ಜಯಕರನ್ ಅನುಯಾಯಿಗಳಿಂದಲೂ ತನಗೆ ಬೆದರಿಕೆ ಕರೆಗಳು ಬರುತ್ತಿದೆ ಎಂದು ಸಂತ್ರಸ್ತ ಮಹಿಳೆ ಆರೋಪ ಮಾಡಿದ್ದಾರೆ. ಘಟನೆ ಬಗ್ಗೆ ಚರ್ಚ್‍ನ ಆಂತರಿಕ ಸಮಿತಿಗೂ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.


ಮಹಿಳೆ ವಿರುದ್ಧ ಚರ್ಚ್ ಪಾದ್ರಿ ಕೂಡ ಪ್ರತಿ ದೂರು ದಾಖಲಿಸಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಚರ್ಚ್ ಹಣಕಾಸಿನ ವಿಚಾರಕ್ಕೆ ಸುಳ್ಳು ಆರೋಪ ಮಾಡಿದ್ದಾರೆಂದು ಮಹಿಳೆ ಸೇರಿದಂತೆ 9 ಮಂದಿ ವಿರುದ್ಧ ಪಾದ್ರಿ ಜಯಕರನ್ ದೂರು ಸಲ್ಲಿಸಿದ್ದಾರೆ. ತಾನು ಚರ್ಚ್ ಪಾದ್ರಿ ಆಗಿ ಅಧಿಕಾರ ವಹಿಸಿಕೊಳ್ಳದಂತೆ ಕಿರುಕುಳ ನೀಡಿದರು. ಆರೋಪಿಗಳು ಚರ್ಚ್ ಹಣ ದುರುಪಯೋಗ ಮಾಡಿಕೊಂಡಿದ್ದಾರೆ.


ಹಣದ ಲೆಕ್ಕ ಕೇಳಿದ್ದಕ್ಕೆ ಈ ರೀತಿ ಸುಳ್ಳು ಆರೋಪ ಮಾಡಿ ನನ್ನ ವಿರುದ್ಧ ದೂರು ನೀಡಿದ್ದಾರೆಂದು ಪಾದ್ರಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಿಯಾ ಕಾರು ; ಚಿಕ್ಕಮಗಳೂರು ಬಟ್ಟೆ ಅಂಗಡಿ ವ್ಯಾಪಾರಿ ದಿನೇಶ್ ಮೃತ್ಯು

Posted by Vidyamaana on 2024-05-23 19:28:47 |

Share: | | | | |


ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಿಯಾ ಕಾರು ; ಚಿಕ್ಕಮಗಳೂರು ಬಟ್ಟೆ ಅಂಗಡಿ ವ್ಯಾಪಾರಿ ದಿನೇಶ್ ಮೃತ್ಯು

ಚಿಕ್ಕಮಗಳೂರು, ಮೇ 23: ಚಾಲಕನ ನಿಯಂತ್ರಣ ತಪ್ಪಿ ಕಿಯಾ ಕಾರು ಕೆರೆಗೆ ಬಿದ್ದ ಘಟನೆ ಅಂಬಳೆ ಕೆರೆಯಲ್ಲಿ ನಡೆದಿದೆ. ದಿನೇಶ್ (33) ಕಾರ್ನೊಳಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕಾರ್ನಲ್ಲಿದ್ದ ಮತ್ತೊರ್ವ ಸಂತೋಷ್ ಪಾರಾಗಿದ್ದಾರೆ.

ಚಿಕ್ಕಮಗಳೂರಿನಿಂದ ಅಂಬಳೆ ಗ್ರಾಮಕ್ಕೆ ಇಬ್ಬರು ಕಾರಿನಲ್ಲಿ ತೆರಳುತ್ತಿದ್ದರು. ಇಂದು ಬೆಳಗ್ಗಿನ ಜಾವ ಅವರಿದ್ದ ಕಾರು ಏಕಾಏಕಿ ಕೆರೆಗೆ ಬಿದ್ದಿದೆ. ಪರಿಣಾಮ ದಿನೇಶ್ ಅಲ್ಲೇ ಸಾವನ್ನಪ್ಪಿದ್ದಾರೆ.

ಜಿ.ಎಲ್. ಜ್ಯುವೆಲ್ಲರ್ಸ್ ನಲ್ಲಿ ಸ್ವರ್ಣ ಹಬ್ಬಕ್ಕೆ ಚಾಲನೆ

Posted by Vidyamaana on 2023-10-16 21:51:33 |

Share: | | | | |


ಜಿ.ಎಲ್. ಜ್ಯುವೆಲ್ಲರ್ಸ್ ನಲ್ಲಿ ಸ್ವರ್ಣ ಹಬ್ಬಕ್ಕೆ ಚಾಲನೆ

ಪುತ್ತೂರು: ಪರಂಪರೆಯ ಆಭರಣಗಳಿಗೆ ಹೆಸರುವಾಸಿಯಾಗಿರುವ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನವರಾತ್ರಿ ಪ್ರಯುಕ್ತ ಸ್ವರ್ಣ ಹಬ್ಬವನ್ನು ಗ್ರಾಹಕರ ಮುಂದಿಟ್ಟಿದೆ.

ಅಕ್ಟೋಬರ್ 15ರಿಂದ 24ರವರೆಗೆ ಪುತ್ತೂರಿನ ಮುಖ್ಯರಸ್ತೆಯ ಆಚಾರ್ಯ ಕಾಂಪ್ಲೆಕ್ಸ್‌ನಲ್ಲಿರುವ ಜಿ.ಎಲ್‌. ಆಚಾರ್ಯ ಜ್ಯುವೆಲ್ಲರ್‌ನಲ್ಲಿ ನಡೆಯಲಿರುವ ಸ್ವರ್ಣ ಹಬ್ಬದಲ್ಲಿ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಲಾಗಿದೆ.

ಕಳೆದ 66 ವರ್ಷಗಳಿಂದ ಸ್ವರ್ಣೋದ್ಯಮದಲ್ಲಿ ಹೊಸ ಛಾಪು ಮೂಡಿಸಿರುವ ಜಿ.ಎಲ್. ಜ್ಯುವೆಲ್ಲರ್ಸ್, ಚಿನ್ನಾಭರಣ ಪ್ರಿಯರ ಮನೆಮಾತಾಗಿದೆ. ಇದೀಗ ಸ್ವರ್ಣ ಹಬ್ಬದ ಮೂಲಕ ಮತ್ತೆ ಗ್ರಾಹಕರಿಗೆ ಹೊಸ ಉಡುಗೊರೆಗಳನ್ನು ನೀಡಲು ಮುಂದಾಗಿದೆ.

ಬಂಗಾರದ ಚೈನ್ ಖರೀದಿಗೆ VA 6%ನಿಂದ ಆರಂಭ, ಜಂಟ್ಸ್ ಕಡ ಖರೀದಿಗೆ VA 6%ನಿಂದ ಆರಂಭ, ಆ್ಯಂಟಿಕ್ ಜ್ಯುವೆಲ್ಲರ್ ಖರೀದಿಗೆ VA 15% ನಿಂದ ಆರಂಭ, ಬ್ಯಾಂಗಲ್ಸ್ ಖರೀದಿಗೆ VA 8%ನಿಂದ ಆರಂಭ. ಗ್ರಾಹಕರಿಗೆ ನವರಾತ್ರಿಯ ಈ ಹಬ್ಬದ ಋತುವಿನಲ್ಲಿ ಚಿನ್ನಭರಣಗಳನ್ನು ಖರೀದಿಸಿ 9 ಚಿನ್ನದ ನಾಣ್ಯಗಳನ್ನು ಗೆಲ್ಲುವ ಅಮೂಲ್ಯ ಅವಕಾಶ ನೀಡಲಾಗಿದೆ. ಇದರೊಂದಿಗೆ ಸ್ವರ್ಣ ಹಬ್ಬದ ಪ್ರತಿ ಖರೀದಿಯ ಮೇಲೆ ವಿಶೇಷ ರಿಯಾಯಿತಿ ಪಡೆಯುವ ಅವಕಾಶವಿದೆ.

ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಸಂಸ್ಥೆ ಬದ್ಧವಾಗಿದ್ದು, ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು, ಬೆಳ್ಳಿಯ ಆಭರಣಗಳು, ಆ್ಯಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡ ಲಭ್ಯವಿದೆ.

ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಹಾಗೂ ಈ ಜಿ.ಎಲ್. ಸ್ವರ್ಣ ಹಬ್ಬ ಎಲ್ಲ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ರುದ್ರಪಾದೆಯಲ್ಲಿ ಪತ್ತೆಯಾಗಿದ್ದ ಚಪ್ಪಲಿ ವಸಂತ್ ಅವರದ್ದೇ | ವಸಂತ್ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಪತ್ತೆ

Posted by Vidyamaana on 2023-04-27 12:11:12 |

Share: | | | | |


ರುದ್ರಪಾದೆಯಲ್ಲಿ ಪತ್ತೆಯಾಗಿದ್ದ ಚಪ್ಪಲಿ ವಸಂತ್ ಅವರದ್ದೇ | ವಸಂತ್ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಪತ್ತೆ

ಪುತ್ತೂರು: ಪುರುಷರಕಟ್ಟೆಯ ಕುರೆಮಜಲು ಮೂಲದ ವಸಂತ ಅವರ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಗುರುವಾರ ಸಂಜೆ ವೇಳೆ ಪತ್ತೆಯಾಗಿದೆ.

ಗೃಹಿಣಿ ಅನುಮಾನಸ್ಪದ ಸಾವು ಪ್ರಕರಣ; ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಪತಿ

Posted by Vidyamaana on 2023-12-13 17:17:52 |

Share: | | | | |


ಗೃಹಿಣಿ ಅನುಮಾನಸ್ಪದ ಸಾವು ಪ್ರಕರಣ; ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಪತಿ

ಚಿಕ್ಕಮಗಳೂರು: ಅನುಮಾನಾಸ್ಪದವಾಗಿ ಮೃತಪಟ್ಟ ಮಹಿಳೆ ಶ್ವೇತಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪತಿ ದರ್ಶನ್ ರಾಗಿ ಮುದ್ದೆಯಲ್ಲಿ ಸೈನೆಡ್ ಬೆರೆಸಿ ನೀಡಿದ್ದು ಇದರಿಂದ ಪತ್ನಿ ಶ್ವೇತಾ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ.ಪ್ರಕರಣ ಸಂಬಂಧ ಪತಿ ದರ್ಶನ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಗೆ ಒಳಪಡಿಸಿದಾಗ ತಾನೇ ಮುದ್ದೆಯಲ್ಲಿ ಸೈನೆಡ್ ಬೆರೆಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.


ಅಕ್ರಮ ಸಂಬಂಧವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ರಾತ್ರಿ ಊಟದಲ್ಲಿ ರಾಗಿ ಮುದ್ದೆಯಲ್ಲಿ ಸೈನೆಡ್ ಹಾಕಿದ್ದು, ಶ್ವೇತಾ ಸಾವನಪ್ಪಿದ ಮೇಲೆ ಸಿರಿಂಜ್ ನಿಂದ ಇಂಜಕ್ಷನ್ ನೀಡಿದ್ದಾನೆ. ಇಂಜಕ್ಷನ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಮುಂದಾಗಿದ್ದಾನೆ. ತನ್ನ ಪ್ಲಾನ್ ಉಲ್ಟಾ ಆಗುವ ಆತಂಕದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ಬಿಂಬಿಸಿದ್ದಾನೆ.


ಪತಿ ದರ್ಶನ್ ಕೊಲೆ ಮಾಡಿದ್ದು, ಪ್ರಕರಣದ ಹಾದಿ ತಪ್ಪಿಸುವ ತುರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದು, ಶ್ವೇತಾ ಕುಟುಂಬಸ್ಥರು ಕೊಲೆ ಮಾಡಿರುವುದಾಗಿ ಶಂಕಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು.ಈ ಸಂಬಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ವಿಕ್ರಮ್ ಅಮಟೆ ಪ್ರತಿಕ್ರಿಯಿಸಿ, ತನಿಖೆಯಲ್ಲಿ ದರ್ಶನ್ ಪತ್ನಿ ಶ್ವೇತಾ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಬ್ಬರು ಲ್ಯಾಬ್ ಟ್ನೆಕ್ಷಿಶಿಯನ್ ಆಗಿದ್ದು, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಲ್ಯಾಬ್ ಇದೆ. ಎಸ್ ಎಫ್ ಎಲ್ ವರದಿ ಬಳಿಕ ಏನನ್ನು ತಿನ್ನಿಸಿದ್ದಾನೆ ಎಂದು ಸ್ಪಷ್ಟವಾಗಲಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.


ದರ್ಶನ್ ಬಂಧನದ ಬಳಿಕ ಅಕ್ರಮ ಸಂಬಂಧ ಹೊಂದಿದ್ದ ಬೆಂಗಳೂರಿನ ಮಹಿಳೆ ನಾಪತ್ತೆಯಾಗಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.



Leave a Comment: