ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿಗಳು News

Posted by vidyamaana on 2024-07-08 17:22:55 |

Share: | | | | |


ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ ಜು.09 ರಂದು ರೆಡ್ ಅಲರ್ಟ್ ಘೋಷಿಸಿದ್ದು ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.9ರಂದು ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ

 Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 23

Posted by Vidyamaana on 2023-07-22 23:25:09 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 23

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 23 ರಂದು.

ಬೆಳ್ಳಗೆ 10:30 ಯುವ ಬಂಟರ ಸಂಘ ಇದರ ವತಿಯಿಂದ ತುಳುನಾಡ ಬಂಟರ ಪರ್ಬ  ಕಾರ್ಯಕ್ರಮ


ಮದ್ಯಾಹ್ನ 12:00 ಕುಲಾಲ ಸಮಾಜ ಸೇವಾ ಸಂಘ ಇವರಿಂದ ಶಾಸಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ 


ಸಂಜೆ  5 :00

ಬಲ್ನಾಡುವಿನಲ್ಲಿ ಕೆಸರು ಗದ್ಧೆ ಕಾರ್ಯಕ್ರಮ 

ಇತರೆ ಖಾಸಗಿ ಕಾರ್ಯಕ್ರಮಗಳು


ಬೆಳ್ಳಗ್ಗೆ ನಿಡ್ಪಳ್ಳಿ ಹಾಗು ಆರ್ಯಪುವಿನಲ್ಲಿ ಚುನುವನ ಮತ ಗಟ್ಟೆಗೆ ಭೇಟಿ ಮಾಡಲಿದ್ದಾರೆ

ಅಂತಃಕರಣ ಶುದ್ದಿಯಾಗಿಟ್ಟುಕೊಳ್ಳುವ ಮೌಲ್ಯ ಅಡಗಿರುವ ಕೃತಿ; ಡಿ ಯದುಪತಿ ಗೌಡ

Posted by Vidyamaana on 2023-10-16 09:27:16 |

Share: | | | | |


ಅಂತಃಕರಣ  ಶುದ್ದಿಯಾಗಿಟ್ಟುಕೊಳ್ಳುವ ಮೌಲ್ಯ ಅಡಗಿರುವ ಕೃತಿ; ಡಿ ಯದುಪತಿ ಗೌಡ

ಬೆಳ್ತಂಗಡಿ; ಜಾಗತೀಕರಣ, ಉದಾರೀಕರಣ, ಆಧುನೀಕರಣ, ಸಂಸ್ಕೃತೀಕರಣ, ಮೊಬೈಲೀಕರಣ  ಇವೆಲ್ಲದರ ಮಧ್ಯೆ ನಮ್ಮ ಅಂತಃಕರಣ ಮೌಲ್ಯ ಹೇಗೆ ಶುದ್ದಿಯಾಗಿಟ್ಟುಕೊಳ್ಳುವುದು ಎಂಬುದರ ಕುರಿತಾಗಿ

ವಿದ್ಯಾರ್ಥಿಗಳು, ಪೋಷಕರು ಓದಬೇಕಾದ ಕೃತಿಯಾಗಿ ಮೌಲ್ಯ  ಹುಡುಕಾಟದಲ್ಲಿ ಕೃತಿ ಹೊರಬಂದಿದೆ ಎಂದು ಕಸಾಪ ಬೆಳ್ತಂಗಡಿ ಘಟಕದ ಅಧ್ಯಕ್ಷ ಡಿ‌ ಯದುಪತಿ ಗೌಡ ಹೇಳಿದರು.

ವಾಣಿ ಕಾಲೇಜಿನ ಆವರಣದಲ್ಲಿ ಅ.14 ರಂದು, ಮಾಮರ ಪ್ರಕಾಶನ ಮೈಸೂರು‌ ಅವರು ಹೊರ ತಂದಿರುವ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ಅವರ ಬರಹಗಳ ಸಂಕಲ "ಮೌಲ್ಯಗಳ ಹುಡುಕಾಟದಲ್ಲಿ" ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. 


ಈ ಪುಸ್ತಕದಲ್ಲಿ 62 ಲೇಖನಗಳಿದ್ದು, ತನ್ನ ಶಿಕ್ಷಕ ವೃತ್ತಿಬದುಕಿನ ಅನುಭವ ಮತ್ತು ಬೇರೆ ಬೇರೆ ಮನಸ್ಥಿತಿಯ ವಿದ್ಯಾರ್ಥಿಗಳ ಒಡನಾಟದ ಅನುಭವದಿಂದ ಈ ಬರಹಗಳು ಅವರ ಮೂಲಕ ಹೊರ ಬಂದಿದೆ. ಸಾಮಾಜಿಕ ಮೌಲ್ಯ ಎಂದರೇನು ಎಂಬುದನ್ನು ಪ್ರಶ್ನಿಸುವ ದಿನಮಾನದಲ್ಲಿ ಶಿಕ್ಷಣ ಅಂದರೆ ಓದು ಮಾತ್ರ ಅಲ್ಲ. ಅದರ ಆಚೆಗೆ ಬದುಕು ಇದೆ. ಸಮಾಜದ ವ್ಯಕ್ತಿಗಳು ಮತ್ತು ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡುಹೋಗಬೇಕಾದ ಮೌಲ್ಯವನ್ನು ಈ ಬರಹಗಳು ಎಚ್ಚರಿಸುತ್ತವೆ. ವ್ಯಕ್ತಿ ವ್ಯಕ್ತಿ ಗಳ ನಡುವಿನ ಸಂಬಂಧ ಇಲ್ಲದ ಶಿಕ್ಷಣ ಮೌಲ್ಯವಿಲ್ಲದ್ದು. ಹಿಂದಿನ ಕಾಲದಲ್ಲಿ ಬಡತನದ ಮಧ್ಯೆಯೂ ಹಿರಿಯರ ಜೀವನದಲ್ಲಿ ನೈತಿಕತೆ, ಜೀವನ ಮೌಲ್ಯ ಉಳಿದುಕೊಂಡಿದ್ದರು ಎಂದವರು ವಿವರಿಸಿದರು.

ಮುಖ್ಯ ಅತಿಥಿಯಾಗಿದ್ದ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ‌ದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಮಾತನಾಡಿ, ಮನುಷ್ಯನ ಮನಸ್ಸು ಮತ್ತು ಆಲೋಚನೆಗಳು ನಿರ್ಮಲವಾಗಿದ್ದರೆ ಬಾಹ್ಯವಾಗಿ ಮತ್ತು ಆಂತರಿಕವಾಗಿ ನಮ್ಮ ಯೌವ್ವನವನ್ನು ಕಾಪಾಡಿಕೊಳ್ಳಬಹುದು. ನಮ್ಮ ನಡೆ ನುಡಿಯಲ್ಲಿ ಯಾವುದಾದರೊಂದು ಅಧ್ಯಾಪಕನ ಪ್ರಭಾವ ಇದ್ದೇ ಇರುತ್ತದೆ. ಈಗಿನ ದಿನಮಾನಗಳಲ್ಲಿ ನಾವು ಹೋಗುವ ದಾರಿಯಲ್ಲಿ ಎಡವಿದ್ದೇವೆ ಎಂದೆನಿಸುತ್ತದೆ. ಆಧುನಿಕ ಶಿಕ್ಷಣದ ಶೈಲಿ ಬದಲಾದರೂ ಸ್ಥಿತಿ ಅದೇ ಎಂಬುದು ಮುಖ್ಯ. ಯಾಕೂಬ್ ಅವರ ಈ ಕೃತಿಯಲ್ಲಿ ಭಾವ ಕೇಂದ್ರಿತವಾಗಿ ವಿಚಾರವನ್ನು ಮಂಡಿಸುವ ಶೈಲಿಯ ಬರಹಗಳು ಅಡಗಿವೆ. ಇದು ಸಮಾಜಕ್ಕೆ ಪ್ರಯೋಜನಕಾರಿಯಾಗಲಿದೆ ಎಂದರು.

ಪುಸ್ತಕಕ್ಕೆ ಮುನ್ನುಡಿ‌ ಬರೆದ ಹಿರಿಯ ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಿ ಲೇಖಕ ಯಾವತ್ತೂ ತೀರ್ಪುಗಾರ ಅಲ್ಲ. ತನ್ನ ಒಳಶೋಧದ ಪರಿಣಾಮಗಳನ್ನು ಹೇಳುವವನು ಅಷ್ಟೇ. ಆತನ ಅನುಭವಗಳು ಸಹೃದಯನ ಓದಿನ‌ ಪರಿಣಾಮವಾಗಿ ಅವನ ಅನುಭವವಾಗಿ ಅವನು ಕಂಡುಕೊಳ್ಳುವ ಸತ್ಯವೇ ಅವರವರ ಮೌಲ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಬೆಳ್ತಂಗಡಿ ಘಟಕ್ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಅವರು ಮಾತನಾಡಿ, ಲಯನ್ಸ್ ಕ್ಲಬ್ ಸೇವಾ ಚಟುವಟಿಕೆಗೆ ಹೆಸರಾದ ಅಂತಾರಾಷ್ಟ್ರೀಯ ಸಂಸ್ಥೆ. ಇದೀಗ ಸಾಹಿತ್ಯಿಕ ಸೇವೆಗೂ ಮುಂದಡಿಇಟ್ಟಿದೆ. ಮೌಲ್ಯಗಳ ಬಗ್ಗೆ ಬರೆದ ಈ‌ಕೃತಿ ಹೊರತರಲು ವೇದಿಕೆ ಒದಗಿಸಿರುವುದು ನಮ್ಮ ಜವಾಬ್ದಾರಿ ಕೂಡ ಎಂದರು. 

ಲೇಖಕ ಯಾಕೂಬ್ ಎಸ್ ಕೊಯ್ಯೂರು ಅವರು ಪ್ರತಿಕ್ರಿಯಿಸಿ, ನನ್ನ ಅನುಭವ ಮತ್ತು ಆಲೋಚನೆಗಳಿಗೆ ಅಕ್ಷರ ರೂಪ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದೆ. ಜನರ ಪ್ರತಿಕ್ರಿಯೆ, ಹಿರಿಯರ ಸಲಹೆಯ ಮೂಲಕ ಅದಕ್ಕೆ ಈಗ ಪುಸ್ತಕದ ರೂಪ ಬಂದಿದೆ ಎಂದರು.


ಕಾರ್ಯಕ್ರಮ ಸಂಯೋಜಕ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿದರು. ಅಝರ್ ವಂದಿಸಿದರು. ಸಹಸಂಯೋಜಕರಾದ ಹರೀಶ್‌ ಹೆಗ್ಡೆ, ಹರ್ಷದ್, ಹೆರಾಲ್ಡ್ ಪಿಂಟೋ, ಶಾಹುಲ್ ಹಮೀದ್ ಸಹಕರಿಸಿದರು. ಸಂಘಟಕರ ಕಡೆಯಿಂದ ಯಾಕೂಬ್ ಎಸ್ ಕೊಯ್ಯೂರು ಅವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಯ್ದ ಪ್ರತನಿಧಿಗಳು ಭಾಗಿಯಾಗಿದ್ದರು.

ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

Posted by Vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ಚಲಿಸ್ತಿದ್ದ ಬಸ್ಸಲ್ಲೇ ಕಾಮದಾಟ ಆಡ್ತಿದ್ದ ಕಂಡಕ್ಟರ್ ಮಾಮ ರೆಂಡ್ ಹ್ಯಾಂಡ್ ಆಗಿ ಕ್ಯಾಚ್

Posted by Vidyamaana on 2023-07-04 21:58:42 |

Share: | | | | |


ಚಲಿಸ್ತಿದ್ದ ಬಸ್ಸಲ್ಲೇ ಕಾಮದಾಟ ಆಡ್ತಿದ್ದ ಕಂಡಕ್ಟರ್ ಮಾಮ ರೆಂಡ್ ಹ್ಯಾಂಡ್ ಆಗಿ ಕ್ಯಾಚ್

ಲಕ್ನೋ: ಈಗ ಎಲ್ಲಿ ನೋಡಿದರೂ ‘ಮಂಚ’ದ್ದೇ ಸುದ್ದಿ! ಈ ಮಂಚದ ಸಹವಾಸ ರಾಜಕಾರಣಿಗಳ ಪದವಿಗೆ ಕುತ್ತು ತಂದರೆ, ಮರ್ಯಾದಸ್ಥರೆಣಿಸಿಕೊಂಡವರ ಮಾನವನ್ನೇ ಮೂರಾಬಟ್ಟೆಯನ್ನಾಗಿಸುತ್ತದೆ. ಮನೆಯಲ್ಲಿ, ಲಾಡ್ಜ್ ನಲ್ಲಿ, ಆಫೀಸಿನಲ್ಲಿ, ಶಾಲೆ-ಕಾಲೇಜುಗಳಲ್ಲಿ, ಪಾರ್ಕ್’ನ ಸಂಧುಗೊಂದಿಗಳಲ್ಲಿ.. ಹೀಗೆ ಈ ಕಾಮದಾಟಕ್ಕೆ ಅದೇ ಜಾಗ ಇದೇ ಸ್ಥಳ ಎಂದೇನಿಲ್ಲ! ‘ಒಲ್ಪಲಾ ಆಪುಂಡು..’ ಅನ್ನೋ ರೀತಿ ನಡೆಯಿತ್ತಿರುವುದನ್ನು ನಾವಲ್ಲಾ ಪ್ರತೀನಿತ್ಯ ಓದುತ್ತಿರುತ್ತೇವೆ ಮತ್ತು ವಿಡಿಯೋ ಸಿಕ್ಕಿದ್ರಂತೂ ಎಲ್ಲವನ್ನೂ ‘ನೆಟ್ಟಗಾಗಿಸಿಕೊಂಡು’ ನೆಟ್ ಖಾಲಿ ಆಗೋವರ್ಗೂ ನೋಡ್ತಿರ್ತೇವೆ!


ಈಗ ವಿಷ್ಯ ಏನಪ್ಪಾ ಅಂದ್ರೆ ಚಲಿಸ್ತಿದ್ದ ಬಸ್ಸಿನಲ್ಲೇ ಮಹಿಳೆಯೊಂದಿಗೆ ಕಾಮದಾಟವಾಡ್ತಿದ್ದ ಕಂಡಕ್ಟರ್ ಒಬ್ಬ ಪ್ರಯಾಣಿಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರೋದು ಮಾತ್ರವಲ್ಲದೇ ಈತನ ಈ ರಾಸ ಲೀಲೆಯನ್ನು ವಿಡಿಯೋ ಮಾಡಿರುವ ಪ್ರಯಾಣಿಕರು ಅದನ್ನೀಗ ಎಲ್ಲೆಡೆ ವೈರಲ್ ಮಾಡ್ತಿದ್ದಾರೆ.


‘ಆ ವಿಡಿಯೋ ತಿಕ್ಕುವಾ..?’ ಅಂತ ಮಾತ್ರ ಕೇಳ್ಬೇಡಿ ಯಾಕಂದ್ರೆ ಇದು ನಡೆದಿರೋದು ದೂರದ ಉತ್ತರ ಪ್ರದೇಶದಲ್ಲಿ. ಇಲ್ಲಿ ಲಕ್ನೋ ಕಡೆ ಸಂಚರಿಸ್ತಿದ್ದ ಹತ್ರಾಸ್ ಡಿಪೋಗೆ ಸೇರಿದ ಬಸ್ಸಿನಲ್ಲಿ ಅದೇ ಬಸ್ಸಿನ ಕಂಡಕ್ಟರ್ ಮಹಿಳಾ ಪ್ರಯಾಣಿಕಳೊಬ್ಬಳ ಜೊತೆ ಕಂಬಳಿ ಹೊದ್ದುಕೊಂಡು ‘ಕಾಮದಾಟ’ಕ್ಕೆ ಇಳಿದಿದ್ದಾನೆ, ಹೇಗೂ ಬಸ್ಸು ಹೋಗ್ತಿತ್ತಲ್ಲ, ಕೆಲಸ ಸುಲಭ ಆಗ್ತದೆ ಅಂತ ಬಸ್ಸಿನ ಸೀಟಲ್ಲೇ ಆಟ ಶುರು ಮಾಡಿದ್ದಾನೆ ಈ ಪುಣ್ಯಾತ್ಮ!


ಆದ್ರೆ ಅವ್ನ ದುರಾದೃಷ್ಟಕ್ಕೆ ಇದನ್ನು ಗಮನಿಸಿದ ಪ್ಯಾಸೆಂಜರ್ಸ್ ಈ ಪೋಲಿ ಕಂಡಕ್ಟರ್ ನ ಕಾಮದಾಟವನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರೋದು ಮಾತ್ರವಲ್ಲದೇ ಯಾರೋ ಒಬ್ರು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಬೇರೆ ಮಾಡ್ಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗಲಿಬಿಲಿಗೊಂಡ ಕಂಡಕ್ಟರ್ ಮಾಮ ಕಂಬಳಿಯಿಂದ್ಲೇ ತನ್ನ ಮಾನ ಮುಚ್ಚಿಕೊಳ್ಳೋ ಪ್ರಯತ್ನ ಮಾಡಿರೋದು ಮಾತ್ರವಲ್ಲದೇ ವಿಡಿಯೋ ಮಾಡ್ತಿದ್ದವರ ಕೆಮರಾ ಕಿತ್ಕೊಳ್ಳೋಕೋ ಮುಂದಾಗಿದ್ದಾನೆ, ಆದ್ರೆ ಏನನ್ನೂ ಕಿತ್ಕೊಳ್ಳೋಕಾಗ್ದೇ ಕಡೆಗೆ ತನ್ನ ಮಾನವನ್ನೂ ಕಳ್ಕೊಂಡಿರುವ ಈ ಕಂಡಕ್ಟರ್ ಇದೀಗ ‍ಕೆಲಸದಿಂದ ಸಸ್ಪೆಂಡ್ ಕೂಡಾ ಆಗಿರುವ ಮಾಹಿತಿ ಲಭಿಸಿದೆ.

ಒಟ್ಟಿನಲ್ಲಿ ‘ಓಲ್ ಲಾ ಆಪುಂಡು..’ ಅಂತ ತನ್ನ ಚಟ ತೀರ್ಸೋಕೆ ಹೋದ್ರೆ ಕೊನೆಗೆ ಮಾನ-ಮರ್ಯಾದಿ ಜೊತೆಯಲ್ಲಿ ಇರೋ ಕೆಲಸಾನೂ ಹೋಗುತ್ತೇ ಅನ್ನೋದಕ್ಕೆ ಈ ಕಂಡಕ್ಟರ್ ಮಾಮ ಉದಾಹರಣೆಯಾಗಿದ್ದಾನೆ.

ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ ಬೆಂಗಳೂರಿನಲ್ಲಿ ಆತ್ಮಹತ್ಯೆ

Posted by Vidyamaana on 2023-10-26 20:47:47 |

Share: | | | | |


ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ ಬೆಂಗಳೂರಿನಲ್ಲಿ ಆತ್ಮಹತ್ಯೆ

ಬೆಂಗಳೂರು, ಅ.26: ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಅರಿಶಿನಕುಂಟೆಯಲ್ಲಿ ವರದಿಯಾಗಿದೆ.


ಅರಿಶಿನಕುಂಟೆಯ ಆದರ್ಶನಗರದ ಮನೆಯಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ(25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ಮೈಸೂರು ದಸರಾ ನೋಡಿಕೊಂಡು ಬಂದಿದ್ದ ಧನಲಕ್ಷ್ಮೀ, ತಂದೆ ಹಾಗೂ ತಮ್ಮ ಮನೆಯಲ್ಲಿರುವಾಗಲೇ ರೂಮ್‍ನಲ್ಲಿ ನೇಣು ಬಿಗಿದುಕೊಂಡಿದ್ದು, ಅನುಮಾನಗೊಂಡ ತಂದೆ ರೂಮ್‍ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.


ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆ.ತಿಮ್ಮಲಾಪುರದ ಧನಲಕ್ಷ್ಮೀ ಕುಟುಂಬ, 5 ವರ್ಷದಿಂದ ನೆಲಮಂಗಲದ ಅರಿಶಿನಕುಂಟೆಯ ಆದರ್ಶನಗರದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ವಾಸವಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ 3 ಬಾರಿ ಕಬ್ಬಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಧನಲಕ್ಷ್ಮಿ, ಕಾಡುಗೋಡಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವುದೋ ವಿಚಾರದಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಯುವತಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ

ಸಂಸತ್ ಭವನದಲ್ಲಿ ಭದ್ರತಾ ಲೋಪ; ಆರೋಪಿಗಳಿಗೆ ಸಿಕ್ಕಿತ್ತು ಪ್ರತಾಪ್​ ಸಿಂಹ ಕಚೇರಿಯಿಂದ ಪಾಸ್​​

Posted by Vidyamaana on 2023-12-13 15:01:36 |

Share: | | | | |


ಸಂಸತ್ ಭವನದಲ್ಲಿ ಭದ್ರತಾ ಲೋಪ; ಆರೋಪಿಗಳಿಗೆ ಸಿಕ್ಕಿತ್ತು ಪ್ರತಾಪ್​ ಸಿಂಹ ಕಚೇರಿಯಿಂದ ಪಾಸ್​​

ನವದೆಹಲಿ: ಸಂಸತ್ ಭವನದ ಭದ್ರತೆಯಲ್ಲಿ ಭಾರಿ ಭದ್ರತಾ ಲೋಪವಾಗಿರುವ ಘಟನೆ ಇಂದು ನಡೆದಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದಾಗ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ದಿಢೀರನೆ ಸದನಕ್ಕೆ ಜಿಗಿದು ಅವಾಂತರ ಸೃಷ್ಟಿಸಿ ಭಯದ ವಾತಾವರಣ ನಿರ್ಮಾಣ ಮಾಡಿದ ಆರೋಪಿಗಳನ್ನು ಈಗಾಗಲೇ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.ಈ ಘಟನೆ ನಡೆದ ಬೆನ್ನಲ್ಲೇ ಇವರು ಯಾರು? ಇವರ ಉದ್ದೇಶ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ.


ಸಂಸತ್ ಮೇಲೆ ಉಗ್ರ ದಾಳಿ ನಡೆದು ಇಂದಿಗೆ 22 ವರ್ಷ. ಇದೇ ದಿನ ಲೋಕಸಭೆಯಲ್ಲಿ ಭದ್ರತಾಲೋಪ ಸಂಭವಿಸಿದ್ದು ದಿಗಿಲು ಹುಟ್ಟಿಸಿದೆ. ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದರು. ಅವರು ಅನಿಲ ಹೊರಸೂಸುವಂಥಾ ಏನೋ ವಸ್ತು ಎಸೆದರು, ಅವರನ್ನು ಸಂಸದರು ಹಿಡಿದಿದ್ದಾರೆ..ಆಮೇಲೆ, ಅವರನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕರೆತಂದರು. ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಓರ್ವ ಪುರುಷ ಮತ್ತು ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಸಾರಿಗೆ ಭವನದ ಮುಂಭಾಗದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಈ ರೀತಿ ಸದನಕ್ಕೆ ನುಗ್ಗಿದ ವ್ಯಕ್ತಿಗಳು ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಅವರಿಗೆ ಪಾಸ್ ಪಡೆದಿದ್ದಾರೆ. ಪ್ರತಾಸ್​ ಸಿಂಹಾ ಅವರ ಪಿಎ ಆಗಿರುವ ಸಾಗರ್​ ಶರ್ಮಾ ಅವರ ಬಳಿ ಪಾಸ್​​ ಪಡೆದ ಆರೋಪಿಗಳು ಸಂಸತ್​ ಭವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರತಾಪ್ ಸಿಂಹ ಕಛೇರಿಯಿಂದ ಹೇಗೆ ಪಾಸ್​ ಪಡೆದಿದ್ದರು. ಇವರ ಇಬ್ಬರ ಉದ್ದೇಶ ಏನಾಗಿತ್ತು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಾಗಿದೆ.



Leave a Comment: