ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಕೈದಿಗಳಿಗೆ ಸಿಹಿ ಸುದ್ದಿ : ಸನ್ನಡತೆ ಆಧಾರದಲ್ಲಿ 67 ಕೈದಿಗಳ ಬಿಡುಗಡೆ : ಸಂಪುಟ ಸಭೆಯಲ್ಲಿ ಒಪ್ಪಿಗೆ

Posted by Vidyamaana on 2023-07-27 15:43:28 |

Share: | | | | |


ಕೈದಿಗಳಿಗೆ ಸಿಹಿ ಸುದ್ದಿ : ಸನ್ನಡತೆ ಆಧಾರದಲ್ಲಿ 67 ಕೈದಿಗಳ ಬಿಡುಗಡೆ : ಸಂಪುಟ ಸಭೆಯಲ್ಲಿ ಒಪ್ಪಿಗೆ

ಬೆಂಗಳೂರು : ಸನ್ನಡತೆ ಆಧಾರದ ಮೇಲೆ ವಿವಿಧ ಕಾರಾಗೃಹದಲ್ಲಿರುವ ಸುಮಾರು 67 ಕೈದಿಗಳನ್ನು ಬಿಡುಗಡೆ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.ಬೆಂಗಳೂರು ಕೇಂದ್ರ ಕಾರಾಗೃಹದ 24 ಕೈದಿಗಳು, ಮೈಸೂರಿನ 8, ಬೆಳಗಾವಿ 2, ಕಲಬುರ್ಗಿ 5 ಶಿವಮೊಗ್ಗ 6 ಬಳ್ಳಾರಿ ಜೈಲಿನ 8 ಕೈದಿಗಳು ಹಾಗೂ ಧಾರವಾಡ ಜಿಲ್ಲಾ ಕಾರಾಗ್ರಹದ ಇಬ್ಬರು ಕೈದಿಗಳ ಬಿಡುಗಡೆ ಸಂಪುಟ ಸಭೆ ತೀರ್ಮಾನಿಸಿದೆ.ಅಲ್ಲದೆ ಸಚಿವ ಸಂಪುಟ ಸಭೆಯಲ್ಲಿ 15 ಪ್ರಮುಖ ವಿಷಯಗಳು ಬಗ್ಗೆ ಚರ್ಚೆ ಮಾಡಲಾಗಿದೆ

ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇಮಕ

Posted by Vidyamaana on 2023-02-05 03:16:52 |

Share: | | | | |


ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇಮಕ

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭರ್ಜರಿಯಾಗಿ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿರುವ ಬೆನ್ನಲೆ ಬಿಜೆಪಿ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಸಹ ಉಸ್ತುವಾರಿಯಾಗಿ ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ.

ಧರ್ಮೇಂದ್ರ ಪ್ರಧಾನ್ ಅವರನ್ನು ಉಸ್ತುವಾರಿಯಾಗಿ ಹಾಗೂ ತಮಿಳುನಾಡು ಬಿಜೆಪಿ ರಾಜಾಧ್ಯಕ್ಷ ಅಣ್ಣಾಮಲೈ ಅವರನ್ನು ಸಹ-ಪ್ರಭಾರಿಯಾಗಿ ಬಿಜೆಪಿ ನೇಮಕ ಮಾಡಲಾಗಿದೆ.

ಕೆ.ಅಣ್ಣಾಮಲೈ ಕರ್ನಾಟಕದಲ್ಲಿ ಪೊಲೀಸ್ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಇದರಿಂದ ಅವರಿಗೆ ಕರ್ನಾಟಕದ ಬಗ್ಗೆ ಸರಿಯಾಗಿ xತಿಳಿದಿರುವುದರಿಂದ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

ಶನಿವಾರ ಈದುಲ್ ಫಿತ್ರ್ ಉಡುಪಿ ಉಳ್ಳಾಲ ಭಟ್ಕಳ ಖಾಝಿಗಳಿಂದ ಘೋಷಣೆ

Posted by Vidyamaana on 2023-04-20 15:56:57 |

Share: | | | | |


ಶನಿವಾರ ಈದುಲ್ ಫಿತ್ರ್ ಉಡುಪಿ ಉಳ್ಳಾಲ ಭಟ್ಕಳ ಖಾಝಿಗಳಿಂದ ಘೋಷಣೆ

ಮಂಗಳೂರು: ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಎಲ್ಲೂ ಆಗಿಲ್ಲ. ಶುಕ್ರವಾರ  ಅಸ್ತಮಿಸಿದ ಶನಿವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಆಗಲಿರುವುದರಿಂದ ಪಶ್ಚಿಮ ಕರಾವಳಿ ತೀರದಲ್ಲಿ ಶನಿವಾರ (ಎ.22) ಈದುಲ್ ಫಿತ್‌ರ್ ಆಚರಿಸಲು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿ ಅಲ್‌ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಮತ್ತು ಭಟ್ಕಳ ಖಾಝಿ ಪ್ರತ್ಯೇಕ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.

ವಿರೋಧ ಪಕ್ಷಗಳ ಸಭೆಯಲ್ಲಿ ಮೈತ್ರಿಗೆ INDIA ಎಂದು ಹೆಸರಿಟ್ಟ ನಾಯಕರು

Posted by Vidyamaana on 2023-07-18 10:00:32 |

Share: | | | | |


ವಿರೋಧ ಪಕ್ಷಗಳ ಸಭೆಯಲ್ಲಿ ಮೈತ್ರಿಗೆ INDIA ಎಂದು ಹೆಸರಿಟ್ಟ ನಾಯಕರು

ಬೆಂಗಳೂರು : ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ರಾಜಕೀಯ ಪಕ್ಷಗಳು ಇಂದು ದೆಹಲಿ ಮತ್ತು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸುತ್ತಿವೆಮಹಾಮೈತ್ರಿಕೂಟದ ನಾಯಕರು ತನ್ನ ಎರಡನೇ ಏಕತಾ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದರೆ, ಬಿಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (INDA) ಪ್ರತಿಪಕ್ಷಗಳ ವಿರುದ್ಧ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸಭೆ ನಡೆಸಲಿದೆ.ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕರು ಬೆಂಗಳೂರಿನಲ್ಲಿ ಮೈತ್ರಿಗೆ ಇಂಡಿಯಾ ಎಂದು ನಾಮಕರಣ ಮಾಡಿದ್ದಾರೆ.


I – Indian

N – National

D – Democractic

I – Inclusive

A - Alliance ಎಂದು ನಾಮಕರಣ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಕೇಂದ್ರದ ವಿರೋಧ ಪಕ್ಷಗಳ ಸಭೆಯಲ್ಲಿ ಇಂದು ವಿವಿಧ ಪಕ್ಷದ ನಾಯಕರೊಂದಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕ ಹೋರಾಟ ನಡೆಸಲು ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳು ಹಾಗೂ ಕಾರ್ಯತಂತ್ರಗಳ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.

ಎಸ್.ಬಿ.ದಾರಿಮಿ ನೇತೃತ್ವದಲ್ಲಿ ಮುಸ್ಲಿಮ್ ಬಾಂಧವ್ಯ ವೇದಿಕೆಯಿಂದ ಸಿದ್ಧಗಂಗಾ ಮಠ ಭೇಟಿ

Posted by Vidyamaana on 2024-07-08 07:30:36 |

Share: | | | | |


ಎಸ್.ಬಿ.ದಾರಿಮಿ ನೇತೃತ್ವದಲ್ಲಿ ಮುಸ್ಲಿಮ್ ಬಾಂಧವ್ಯ ವೇದಿಕೆಯಿಂದ ಸಿದ್ಧಗಂಗಾ ಮಠ ಭೇಟಿ

ತುಮಕೂರು, ಜು.7: ಇಲ್ಲಿನ ಕನ್ನಡ ಭವನದಲ್ಲಿ ನಡೆದ ಮುಸ್ಲಿಮ್ ಬಾಂಧವ್ಯ ವೇದಿಕೆಯ ವಾರ್ಷಿಕ ಪದಗ್ರಹಣ ಸಮಾರಂಭಕ್ಕಿಂತ ಮುಂಚೆ ವೇದಿಕೆಯ ಸದಸ್ಯರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯೊಂದಿಗೆ ಪ್ರಸಕ್ತ ರಾಜಕೀಯ, ಸಾಮಾಜಿಕ ವಿಚಾರಗಳ ಬಗ್ಗೆ ಚರ್ಚಿಸಿದರು.

ತಂಡದ ನೇತೃತ್ವ ವಹಿಸಿದ್ದ ವೇದಿಕೆಯ ಗೌರವಾಧ್ಯಕ್ಷ ಎಸ್.ಬಿ.ದಾರಿಮಿ, ರಾಜ್ಯದಲ್ಲಿ ಕೋಮು ಸೌಹಾರ್ದ ಹದೆಗಡುತ್ತಿರುವ ದಿನಗಳಲ್ಲಿ ಮಠಾಧಿಪತಿಗಳು ಮಧ್ಯ ಪ್ರವೇಶಿಸಿ ದುಷ್ಟಶಕ್ತಿಗಳ ಮೇಲೆ ನಿಯಂತ್ರಣ ಸಾಧಿಸಬೇಕು. ಕೆಲವೊಮ್ಮೆ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮೌನವನ್ನು ಸಮಾಜಘಾತುಕ ಶಕ್ತಿಗಳು ವರದಾನವಾಗಿ ಬಳಸಿಕೊಳ್ಳುವ ಅಪಾಯ ಇದೆ. ಹಾಗಾಗಬಾರದು, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಶಾಂತಿಯ ಮರುಸ್ಥಾಪನೆಯ ಅಗತ್ಯವಿದೆ. ಮಠಾಧೀಶರು ಸೇರಿದಂತೆ ಸಮಾಜದ ಎಲ್ಲರೂ ಇದಕ್ಕೆ ಕೈಜೋಡಿಸಬೇಕು. ರಾಜ್ಯದ ಪ್ರಮುಖ ಮಠವೆಂಬ ನೆಲೆಯಲ್ಲಿ ಪೀಠಾಧಿಪತಿಯಾದ ತಾವು ಕೋಮು ಸೌಹಾರ್ದ ಗಟ್ಟಿಗೊಳ್ಳಲು ನಿರ್ಣಾಯಕ ಭೂಮಿಕೆ ನಿಭಾಯಿಸಬೇಕು ಎಂದು ಸಿದ್ಧಲಿಂಗ ಸ್ವಾಮಿಗೆ ಮನವಿ ಮಾಡಿದರು.

ಬೆಳ್ತಂಗಡಿ : ಬೈಕಿಗೆ ಪಿಕಪ್ ಢಿಕ್ಕಿ; ಸವಾರ ಪುರುಷೋತ್ತಮ ಸ್ಥಳದಲ್ಲೇ ಮೃತ್ಯು , ಸಹಸವಾರ ತೌಫೀಕ್ ಗಂಭೀರ

Posted by Vidyamaana on 2024-03-25 18:24:34 |

Share: | | | | |


ಬೆಳ್ತಂಗಡಿ : ಬೈಕಿಗೆ ಪಿಕಪ್ ಢಿಕ್ಕಿ; ಸವಾರ ಪುರುಷೋತ್ತಮ ಸ್ಥಳದಲ್ಲೇ ಮೃತ್ಯು , ಸಹಸವಾರ ತೌಫೀಕ್ ಗಂಭೀರ

ಬೆಳ್ತಂಗಡಿ: ಹಳೇಕೋಟೆ ಬಳಿ ದ್ವಿಚಕ್ರ ವಾಹನ ಹಾಗೂ ಪಿಕಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಪೈಂಟರ್ ವೃತ್ತಿ ನಿರ್ವಹಿಸುತ್ತಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಮಾ.25ರ ಮಧ್ಯಾಹ್ನ ನಡೆದಿದೆ.ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ರಾಘವೇಂದ್ರ ನಗರ ನಿವಾಸಿ ದಿ.ಜಯರಾಮ್ ಮತ್ತು ಜಯಂತಿ ದಂಪತಿಗಳ ದ್ವಿತೀಯ ಪುತ್ರ ಪುರುಷೋತ್ತಮ (19) ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಸಹಸವಾರ ಲಾಯಿಲ ಗ್ರಾಮದ ರಾಘವೇಂದ್ರ ನಗರದ ತೌಶೀಫ್ ಮಗ ತೌಫೀಕ್ (17)  ಗಂಭೀರ ಗಾಯಗೊಂಡಿದ್ದಾನೆ.ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿಯತ್ತ ಹೋಗುತಿದ್ದ ದ್ವಿಚಕ್ರ ವಾಹನಕ್ಕೆ ಎದುರಿನಿಂದ ಬರುತಿದ್ದ ಪಿಕಪ್ ವಾಹನ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಮಗುಚಿ ಬಿದ್ದು ಸವಾರರಿಬ್ಬರೂ ರಸ್ತೆಗೆಸೆಯಲ್ಪಟ್ಟು ಪುರುಷೋತ್ತಮ ಮೃತಪಟ್ಟಿದ್ದು, ತೌಫೀಕ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬೆಳ್ತಂಗಡಿ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ

Recent News


Leave a Comment: