ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


ಬೆಳ್ಳಂಬೆಳಿಗ್ಗೆ ಯುವಕನ ಪಾಲಿಗೆ ಮೃತ್ಯುವಾದ ತರಕಾರಿ ಸಾಗಾಟದ ವಾಹನ

Posted by Vidyamaana on 2024-02-25 11:00:13 |

Share: | | | | |


ಬೆಳ್ಳಂಬೆಳಿಗ್ಗೆ ಯುವಕನ ಪಾಲಿಗೆ ಮೃತ್ಯುವಾದ ತರಕಾರಿ ಸಾಗಾಟದ ವಾಹನ

ಬಂಟ್ವಾಳ : ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಭಾನುವಾರ ಮುಂಜಾನೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಡೆದಿದೆ.

    ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ನಿವಾಸಿ ಪ್ರಸ್ತುತ ಪಾಣೆಮಂಗಳೂರು - ಆಲಡ್ಕ ವಾಸ್ತವ್ಯವಿರುವ  ಆಶ್ರಫ್ (32) ಮೃತಪಟ್ಟ ಯುವಕ.

     ಆಲಡ್ಕ ನಿವಾಸಿ ತನ್ವೀರ್ ಆಶ್ರಫ್ ಅವರ ಸ್ನೇಹಿತರಾಗಿದ್ದು, ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತನಿಗೆ ಡ್ರಾಫ್ ಕೊಡುವ ಉದ್ದೇಶದಿಂದ ತನ್ನ ಸ್ಕೂಟರ್ ನಲ್ಲಿ ಬಿ.ಸಿ.ರೋಡಿಗೆ ತೆರಳಿದ್ದು ಬೆಳಿಗ್ಗೆ ಸುಮಾರು 5.30 ರ ವೇಳೆ ಆಶ್ರಫ್ ಅವರು ಕೈಕಂಬದಲ್ಲಿರುವ ತರಕಾರಿ ಅಂಗಡಿಗೆ ಇನ್ನೇನು ಸ್ನೇಹಿತ ತನ್ವೀರ್ ನ್ನು ಇಳಿಸಬೇಕು ಎನ್ನುವಷ್ಟರಲ್ಲಿ ಅದೇ ಅಂಗಡಿಗೆ ತರಕಾರಿ ತಂದು ಖಾಲಿ ಮಾಡಿ ವಾಪಾಸು ಹೋಗುವ ಲಾರಿಯ ಚಾಲಕ ಲಾರಿಯನ್ನು ಅಜಾಗರೂಕತೆಯಿಂದ ಹಿಂಬದಿಗೆ ಚಲಿಸಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.


    ಘಟನೆಯಿಂದ ಇಬ್ಬರಿಗೂ ಗಾಯವಾಗಿದ್ದು, ಗಂಭೀರವಾಗಿ ಗಾಯಗೊಂಡ ಆಶ್ರಫ್ ನನ್ನು ತಕ್ಷಣ  ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಿಲಿ ತುಳು ಚಲನಚಿತ್ರಕ್ಕೆ ನ್ಯಾಯಾಲಯ ತಡೆ

Posted by Vidyamaana on 2023-02-09 16:57:54 |

Share: | | | | |


ಪಿಲಿ ತುಳು ಚಲನಚಿತ್ರಕ್ಕೆ ನ್ಯಾಯಾಲಯ ತಡೆ

ಪುತ್ತೂರು: ಬಹುನಿರೀಕ್ಷಿತ ತುಳು ಚಲನಚಿತ್ರ ಪಿಲಿ ಇನ್ನೇನು ತೆರೆ ಕಾಣಬೇಕು ಎನ್ನುವಾಗಲೇ, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸಿನಿಮಾ ವೀಕ್ಷಣೆಗೆ ಕಾದು ಕುಳಿತಿದ್ದ ತುಳು ಸಿನಿ ರಸಿಕರು ಭ್ರಮನಿರಸನಗೊಂಡಿದ್ದಾರೆ.ಕರಾವಳಿಯಾದ್ಯಂತ ನಾಳೆ ಬಿಡುಗಡೆಗೆ ಸಿದ್ಧವಾಗಿರುವ ಪಿಲಿ ತುಳು ಚಿತ್ರ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣದಂತೆ ನ್ಯಾಯಾಲಯದಿಂದ ತಡೆ ನೀಡಲಾಗಿದೆ.

ಮಂಜೀತ್ ನಾಗರಾಜ್ ಎಂಬವರು ಚಿತ್ರ ಮಂದಿರಗಳಲ್ಲಿ 3 ಕೋರಿ ಪ್ರದರ್ಶನ ಕಾಣಲು ತಡೆಯನ್ನು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಮಂಜೀತ್ ನಾಗರಾಜ್ ಪ್ರಕಾರ ಈ ಚಿತ್ರಕ್ಕೆ 40 ಲಕ್ಷ ಬಂಡವಾಳ ಹೂಡಿದ್ದಾರೆ. ಆದರೆ ನಿರ್ಮಾಪಕ ಮಂಜೀತ್ ನಾಗರಾಜ್ ಅವರನ್ನು ಕಡೆಗಣಿಸಿ ಬೇರೆ ನಿರ್ಮಾಪಕರ ಹೆಸರನ್ನು ಬಳಸಿಕೊಂಡು ಚಿತ್ರ ಬಿಡುಗಡೆಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಸಿದ್ಧತೆ

ಇದೀಗ ನಿರ್ಮಾಪಕ ಮಂಜೀಪ್ ಅವರ ಮನವಿ

ಪುರಸ್ಕರಿಸಿದ ನ್ಯಾಯಾಲಯವು

ನಾಳೆ ಬಿಡುಗಡೆಗೊಳ್ಳಲಿರುವ "ಪಿಲಿ" ಚಿತ್ರದ ಪ್ರದರ್ಶನವನ್ನು ತಡೆ ಹಿಡಿದಿದೆ.ಈ ಬಗ್ಗೆ ಮಾಧ್ಯಮೊಂದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಾಪಕ ಮಂಜೀತ್ ನಾಗರಾಜ್ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಭರತ್ ಭಂಡಾರಿ ಎಂಬಾತ ಚಿತ್ರದ ನಿರ್ಮಾಣಕ್ಕಾಗಿ ನನ್ನಿಂದ 40 ಲಕ್ಷ ಬಂಡವಾಳ ಪಡೆದು ಮೊದಲ ಹಂತದ ಚಿತ್ರೀಕರಣ ಮುಗಿದ ಬಳಿಕ ಹಣ ಪಡೆದು ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.

ಆದರೀಗ ಬೇರೆ ಯಾವುದೋ ನಿರ್ಮಾಪಕರ ಹೆಸರು ಹಾಕಿಕೊಂಡು ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ನನಗೂ ಹಾಗೂ ಹಣ ಪಡೆದ ಇತರ ಸಹನಿರ್ಮಾಪಕರಿಗೂ ವಂಚಿಸಿದ್ದಾರೆ ಎಂದು ಮಂಜೀತ್ ನಾಗರಾಜ್ ಅವರು ಆರೋಪಿಸಿದ್ದಾರೆ. ಹಾಗೂ ಕೋರ್ಟ್ ನಲ್ಲಿ ಭರತ್ ಭಂಡಾರಿ ವಿರುದ್ಧ ಮತ್ತು ಚಿತ್ರ ಪ್ರದರ್ಶನ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ತಿಳಿಸಿದ್ದಾರೆ.

ಪಿಕಪ್ ಚಾಲಕ ಸತೀಶ್ ಕೊಪ್ಪ ನೇಣು ಬಿಗಿದು ಆತ್ಮಹತ್ಯೆ-ಡೆತ್ ನೋಟ್ ಪತ್ತೆ

Posted by Vidyamaana on 2024-07-02 21:29:21 |

Share: | | | | |


ಪಿಕಪ್ ಚಾಲಕ ಸತೀಶ್ ಕೊಪ್ಪ ನೇಣು ಬಿಗಿದು ಆತ್ಮಹತ್ಯೆ-ಡೆತ್ ನೋಟ್ ಪತ್ತೆ

ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಗುಂಪಲಾಜೆ ನಿವಾಸಿ ಸತೀಶ್ ಕುಲಾಲ್ (32ವ) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.೨ರಂದು ನಡೆದಿದೆ.

ಶಾಸಕರ ಇಂದಿನ ಕಾರ್ಯಕ್ರಮ ಜು 02

Posted by Vidyamaana on 2023-07-02 02:13:16 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 02

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 2 ರಂದು..

ಬೆಳಿಗ್ಗೆ 10 ಗಂಟೆಗೆ ಬನ್ನೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಳ ವೀಕ್ಷಣೆ

10.30 ಬನ್ನೂರು ಕುಂಟ್ಯಾನ ದೇವಳದ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ 

 ಭಾಗವಹಿಸಲಿದ್ದಾರೆ.

ಕಡಬ: ಕಾರು - ಬೈಕ್ ನಡುವೆ ಢಿಕ್ಕಿ- ಶಾಲಾ ವಿದ್ಯಾರ್ಥಿ ಬಿಪಿನ್ ಮೃತ್ಯು, ಇಬ್ಬರಿಗೆ ಗಾಯ

Posted by Vidyamaana on 2023-12-16 10:39:35 |

Share: | | | | |


ಕಡಬ: ಕಾರು - ಬೈಕ್ ನಡುವೆ ಢಿಕ್ಕಿ- ಶಾಲಾ ವಿದ್ಯಾರ್ಥಿ ಬಿಪಿನ್ ಮೃತ್ಯು, ಇಬ್ಬರಿಗೆ ಗಾಯ

ಕಡಬ, ಡಿ.16. ಇಲ್ಲಿನ ಕಳಾರ ಸಮೀಪ ಶುಕ್ರವಾರ ತಡ ರಾತ್ರಿ ಕಾರು ಮತ್ತು ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಕಾಣಿಯೂರು ಮೂಲದ ಪ್ರಸ್ತುತ ಕಳಾರದಲ್ಲಿ


ವಾಸವಿರುವ ಚಂದ್ರಶೇಖರ ಅವರ ಪುತ್ರ ,ಸರಸ್ವತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಬಿಪಿನ್ ಮೃತಪಟ್ಟ ಬಾಲಕ.ತಮ್ಮ ನಿವಾಸಕ್ಕೆ ತಲುಪುವ ಸುಮಾರು ನೂರು ಮೀಟ‌ರ್ ಅಂತರದಲ್ಲಿ ಈ ಅಪಘಾತ ನಡೆದಿದೆ ಈ ಅಪಘಾತದಲ್ಲಿ ಮೃತ ಬಾಲಕನ ತಂದೆ ಚಂದ್ರಶೇಖರ ಮತ್ತು ಪುಟಾಣಿ ತಂಗಿ ಗಂಭೀರ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರಸ್ವತಿ ಶಾಲೆಯಲ್ಲಿ ನಡೆದಿದ್ದ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್‌ ಆಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಮೃತ ಬಾಲಕನ ಮರಣೋತ್ತರ ಪರೀಕ್ಷೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ನ್ಯಾನೋ ಕಾರು ವೇಗವಾಗಿ ಸ್ಕೂಟರ್ ಗೆ ಅಪ್ಪಳಿಸಿದ ಪರಿಣಾಮ ಘಟನೆ ಸಂಭವಿಸಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.ಕಾರು ಚಾಲಕ ಪಂಜದ ಪರಮೇಶ್ವರ ಕುಡಿದ ಮತ್ತಿನಲ್ಲಿದ್ದ ಎನ್ನಲಾಗಿದೆ ಕಾರಿನಲ್ಲಿ ಮದ್ಯದ ಬಾಟಲಿ, ಸಿಗರೇಟ್ ಪ್ಯಾಕ್‌ಗಳು ಪತ್ತೆಯಾಗಿದ್ದು ಕಡಬ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ

ಇದೇನು ಮಿತ್ತೂರೇ? ಕಿತ್ತೂರೇ? ಹತ್ತೂರೇ? ಪುತ್ತೂರೇ? | ಪುತ್ತೂರು ನಗರಸಭೆ ಬೋರ್ಡ್ ತಂದ ಅನುಮಾನ.

Posted by Vidyamaana on 2023-01-26 13:03:53 |

Share: | | | | |


ಇದೇನು ಮಿತ್ತೂರೇ? ಕಿತ್ತೂರೇ? ಹತ್ತೂರೇ? ಪುತ್ತೂರೇ? | ಪುತ್ತೂರು ನಗರಸಭೆ ಬೋರ್ಡ್ ತಂದ ಅನುಮಾನ.

ಪುತ್ತೂರು: ಯಾವುದೇ ಪ್ರವಾಸಿಗ ಅಥವಾ ಯಾತ್ರಾರ್ಥಿ ತಾನು ಸಾಗುವ ಪ್ರಯಾಣದ ಸಂದರ್ಭ ಎದುರಾದ ಊರು ಯಾವುದೆಂದು ನೋಡಿಯೇ ನೋಡುತ್ತಾನೆ. ಆದರೆ ಪುತ್ತೂರು ಬಂದಾಗ ಮಾತ್ರ ಆತನಿಗೆ ಇದು ಯಾವ ಊರು ಎಂಬ ಅನುಮಾನ ಬಾರದೇ ಇರದು. ಇದಕ್ಕೆ ಕಾರಣ ಮುರದ ಬಳಿ ಸ್ವಾಗತಿಸುವ ಕಮಾನು.

ಮುರ ಹಾಗೂ ನೆಹರೂನಗರದ ನಡುವೆ ಪುತ್ತೂರು ನಗರಸಭೆಯ ಕಮಾನು ಎದುರುಗೊಳ್ಳುತ್ತದೆ. ಪ್ರವಾಸಿಗರಿಗೆ, ಯಾತ್ರಾರ್ಥಿಗಳಿಗೆ ಪುತ್ತೂರು ನಗರಕ್ಕೆ ಸ್ವಾಗತ ನೀಡುವ ಉದ್ದೇಶದಿಂದ ಈ ಕಮಾನನ್ನು ಅಳವಡಿಸಲಾಗಿದೆ. ಆದರೆ ವೈಚಿತ್ರ್ಯವೆಂದರೆ, ಯಾವ ಉದ್ದೇಶದಿಂದ ಈ ಕಮಾನನ್ನು ಅಳವಡಿಸಲಾಗಿದೆಯೋ, ಆ ಉದ್ದೇಶವನ್ನೇ ಮರೆತಂತಿದೆ.

       ಪುತ್ತೂರು ನಗರಕ್ಕೆ ಸ್ವಾಗತ ಎನ್ನುವುದು ಕಮಾನಿನ ಫಲಕದಲ್ಲಿದ್ದ ಒಕ್ಕಣೆ. ಆದರೆ ಇಂದು ನೋಡಿದರೆ, `ಪು’ ಅಕ್ಷರ ಅಳಿಸಿಹೋಗಿದೆ. `ತ್ತೂರು’ ಶಬ್ದ ಮಾತ್ರ ಕಾಣಿಸುತ್ತಿದೆ. ಆದ್ದರಿಂದ ಹೊರಭಾಗದಿಂದ ಬಂದವರು, ಇದನ್ನು ಯಾವ ರೀತಿಯಲ್ಲಿ ಅರ್ಥವಿಸಿಕೊಳ್ಳಬೇಕು. ಸುತ್ತೂರು, ಮಿತ್ತೂರು, ಹತ್ತೂರು ಹೀಗೆ ಹತ್ತು ಹಲವು ಹೆಸರುಗಳ ಗೊಂದಲಕ್ಕೆ ಈಡಾಗುವ ಸಾಧ್ಯತೆಯೇ ಅಧಿಕ.

   ಈ ಕಮಾನಿನ ಫಲಕದಲ್ಲಿ ಹೆಚ್ಚಿನ ಎಲ್ಲಾ ಶಬ್ದಗಳು ಅಳಿಸಿಹೋಗಿದೆ. ಕಂಬ ಹಾಗೂ ಫಲಕ ಬಣ್ಣ ಕಳೆದುಕೊಂಡು, ವಿಕೃತಿಗೊಂಡಿದೆ. ಪ್ರವಾಸಿಗರ ಗಮನವನ್ನು ಸೆಳೆಯಬೇಕಿದ್ದ ಫಲಕ, ಪ್ರವಾಸಿಗರನ್ನು ಗೊಂದಲಕ್ಕೆ ಈಡು ಮಾಡುತ್ತಿದೆ.

      ಇಂತಹ ಕಮಾನು, ಫಲಕಗಳು ಪುತ್ತೂರು ಪೇಟೆಯ ಅಂದವನ್ನು ಹೆಚ್ಚಿಸಬೇಕಿತ್ತು. ಮಾತ್ರವಲ್ಲ, ಪುತ್ತೂರು ಪೇಟೆಯ ಪ್ರತಿಬಿಂಬದಂತೆ ಕಾರ್ಯನಿರ್ವಹಿಸಬೇಕಿತ್ತು. ಆದರೆ ಈ ಫಲಕ ಪುತ್ತೂರು ಪೇಟೆಯ ಅಂದವನ್ನು ಕೆಡಿಸುವಂತಿದೆ. ಪುತ್ತೂರು ನಗರಸಭೆ ಸ್ವಚ್ಛತೆಯಲ್ಲಿ 3ನೇ ಸ್ಥಾನದಲ್ಲಿದೆ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಆದರೆ ಈ ಫಲಕವನ್ನು ನೋಡಿದರೆ, ಇದು ನಿಜವೇ ಎಂಬ ಪ್ರಶ್ನೆಗೆ ದಾರಿ ಮಾಡಿಕೊಡುವಂತಿದೆ.

Recent News


Leave a Comment: