ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ವೈರಲ್ ವಿಡಿಯೋ : ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ ಮುಂದೇನಾಯಿತು

Posted by Vidyamaana on 2023-09-27 17:15:13 |

Share: | | | | |


ವೈರಲ್ ವಿಡಿಯೋ : ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ ಮುಂದೇನಾಯಿತು

Love Marriage: ವ್ರೀನಿ ಖನ್ನಾ ಮತ್ತು ಹಿತೇನ್​ ಎಂಟು ವರ್ಷ ಪ್ರೀತಿಸಿದ ನಂತರ ಮದುವೆ ತಯಾರಿ ನಡೆಸಿದರು. ಮದುವೆ ಇನ್ನೇನು ಒಂದು ತಿಂಗಳಿದೆ ಎನ್ನುವಾಗ ಹಿತೇನ್​ ಭೀಕರ ರಸ್ತೆ ಅಪಘಾತಕ್ಕೆ ಒಳಗಾದ. ಮೆದುಳು ತೀವ್ರವಾಗಿ ಗಾಯಗೊಂಡಿದ್ದರಿಂದ ಕೋಮಾಗೆ (Coma) ಜಾರಿಬಿಟ್ಟ. ವೈದ್ಯರು ಬದುಕುಳಿಯುವುದು ಕಷ್ಟ ಎಂದರು. ಆದರೂ ಅದೃಷ್ಟವಶಾತ್ ವೈದ್ಯೋಪಚಾರ ಮತ್ತು ವ್ರೀನಿಯ ಸತತ ಪ್ರೀತಿ, ಆರೈಕೆಯಲ್ಲಿ 3 ತಿಂಗಳುಗಳ ನಂತರ ಕೋಮಾದಿಂದ ಹೊರಬಂದ. ಈ ವೇಳೆಗೆ ಬರೋಬ್ಬರಿ 30 ಕಿ. ಗ್ರಾಂ ತೂಕ ಕಳೆದುಕೊಂಡಿದ್ದ. ಆದರೆ ಇವನನ್ನೇ ಮದುವೆಯಾಗುವುದು ಎಂದು ವ್ರೀನಿ ಹಠ ತೊಟ್ಟಿದ್ದಳು. ಇವನೊಂದಿಗೆ ಮದುವೆ ಬೇಡ ಎಂದು ಆಕೆಯ ಮನೆಯವರೆಲ್ಲ ಬುದ್ಧಿ ಹೇಳಿದರು. ನಂತರ 2022ರ ಜು. 6ರಂದು ಇವರಿಬ್ಬರ ಮದುವೆ ನಡೆಯಿತು.ನಾಲ್ಕು ಗಂಟೆಗಳ ಹಿಂದೆಯಷ್ಟೇ officialpeopleofindia ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋವನ್ನು ಈತನಕ ಸುಮಾರು 1.7 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ವ್ರೀನಿ ಮತ್ತು ಹಿತೇನ್​ ದಂಪತಿಯನ್ನು ಅಭಿನಂದಿಸಿದ್ದಾರೆ. ವ್ರಿನಿಯ ತಾಳ್ಮೆ ಮತ್ತು ಪ್ರೀತಿಯನ್ನು ಶ್ಲಾಘಿಸಿದ್ದಾರೆ.


ವ್ರೀನಿ ಹಿತೇನ್ ಪಯಣ

ವಿಡಿಯೋ ನೋಡಲು ಕ್ಲಿಕ್ ಮಾಡಿ 

ವೈರಲ್ ವಿಡಿಯೋ : ಮದುವೆಗೆ ತಿಂಗಳಿರುವಾಗ ಕೋಮಾಗೆ ಜಾರಿದ ವರ


ತನ್ನ ಹುಡುಗ/ಗಂಡನಿಗಾಗಿ ಹೆಣ್ಣುಮಕ್ಕಳು ಯಾವಾಗಲೂ ಟೊಂಕ ಕಟ್ಟಿ ನಿಲ್ಲುತ್ತಾರೆ ಎಂದಿದ್ದಾರೆ ಒಬ್ಬರು. ಜಗತ್ತಿನಲ್ಲಿ ಪ್ರೀತಿಯೇ ಎಲ್ಲದಕ್ಕಿಂತ ದೊಡ್ಡ ಶಕ್ತಿ. ವೈದ್ಯರೂ ಕೈಚೆಲ್ಲಿದಾಗ ನೀವು ಅವರನ್ನು ಬದುಕಿಸಿಕೊಂಡಿರಿ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ನೋಡಿ ನಾನು ಅಳುತ್ತಿದ್ದೇನೆ, ಸ್ವಾರ್ಥ ಬಯಸುವ ಅನೇಕರನ್ನು ನೋಡಿದ್ದೇನೆ. ಆದರೆ ನಿಮ್ಮಂಥ ಹೆಣ್ಣುಮಗಳು ನಿಜಕ್ಕೂ ಅಪರೂಪ, ನಿಮಗಿಬ್ಬರಿಗೂ ಒಳಿತಾಗಲಿ ಎಂದಿದ್ದಾರೆ ಮತ್ತೊಬ್ಬರು.ನಿಮ್ಮ ಜಾಗದಲ್ಲಿ ನನ್ನನ್ನು ನಾನು ನಿಲ್ಲಿಸಿಕೊಂಡು ನೋಡಿದೆ, ನನಗರಿವಿಲ್ಲದೇ ನನ್ನ ಕಣ್ಣಿಂದ ನೀರು ಇಳಿಯುತ್ತಿವೆ ಎಂದಿದ್ಧಾರೆ ಒಬ್ಬರು. ನಿಮ್ಮ ಈ ವಿಡಿಯೋ ನೋಡಿ ಮೈನವಿರೆದ್ದಿತು, ತುಂಬಾ ಅಪರೂಪದ ಜೋಡಿ ನಿಮ್ಮದು, ನಿಮ್ಮ ಆರೋಗ್ಯ ಸುಧಾರಿಸಲಿ ಎಂದಿದ್ದಾರೆ ಅನೇಕರು.

ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೇ ತನಿಖೆ ನಡೆಸುವಂತಿಲ್ಲ: ಹೈಕೋರ್ಟ್

Posted by Vidyamaana on 2023-07-27 15:31:37 |

Share: | | | | |


ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೇ ತನಿಖೆ ನಡೆಸುವಂತಿಲ್ಲ: ಹೈಕೋರ್ಟ್

ಬೆಂಗಳೂರು: ಸರ್ಕಾರಿ ನೌಕರರ ವಿರುದ್ಧ ದಾಖಲಾಗುವ ಭ್ರಷ್ಟಾಚಾರ ಆರೋಪದ ಖಾಸಗಿ ದೂರುಗಳ ಸಂಬಂಧ ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17(ಎ) ಪ್ರಕಾರ ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದೆ ತನಿಖೆ ನಡೆಸುವಂತಿಲ್ಲ ಎಂದು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.ಖಾಸಗಿ ದೂರು ಪರಿಗಣಿಸಿ ತನ್ನ ವಿರುದ್ಧ ತನಿಖೆಗೆ ಆದೇಶಿಸಿರುವ ಸೆಷನ್ಸ್ ನ್ಯಾಯಾಲಯದ ಆದೇಶದ ಕಾನೂನುಬದ್ಧತೆ ಪ್ರಶ್ನಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಯಾಗಿದ್ದ ವಿ. ಆಶೋಕ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ.ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಸರ್ಕಾರಿ ಅಧಿಕಾರಿಯ ವಿರುದ್ಧ ಪೊಲೀಸ್ ಅಧಿಕಾರಿಗಳು ವಿಚಾರಣೆ ಅಥವಾ ತನಿಖೆಯನ್ನು ನಡೆಸುವಂತಿಲ್ಲ ಎಂಬ ಷರತ್ತನ್ನು ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17(ಎ)ಕ್ಕೆ 2018ರಲ್ಲಿ ಸೇರಿಸಲಾಗಿದೆ. ಖಾಸಗಿ ದೂರುಗಳ ಆಧಾರದಲ್ಲಿ ವಿಚಾರಣಾ ನ್ಯಾಯಾಲಯ ಸರ್ಕಾರಿ ನೌಕರರ ವಿರುದ್ದ ವಿನಾಃಕಾರಣ ಕಾನುನು ಕ್ರಮಕ್ಕೆ ಮುಂದಾಗಿ ಕಿರಿಕಿರಿ ಉಂಟು ಮಾಡುವುದನ್ನು ತಪ್ಪಿಸುವುದಕ್ಕಾಗಿ ಸೆಕ್ಷನ್ 17ಎ ಅಡಿ ರಕ್ಷಣೆ ನೀಡಲಾಗಿದೆ. ಆದರೆ, ಈ ಪ್ರಕರಣದಲ್ಲಿ ಪೂರ್ವಾನುಮತಿ ಇಲ್ಲದೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿರುವ ನ್ಯಾಯಪೀಠ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.ಸೆಕ್ಷನ್ 17ಎ ಅಡಿ ಸಕಾರಿ ನೌಕರರಿಗೆ ನೀಡಿರುವ ರಕ್ಷಣೆ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿಫಲವಾದಲ್ಲಿ ಕಾನೂನು ದುರ್ಬಳಕೆ ಮಾಡಿದಂತಾಗುತ್ತದೆ. ಆದರೂ ಈ ಅವಕಾಶವನ್ನು ತಪ್ಪಿತಸ್ಥರು ರಕ್ಷಣೆಗೆಗಾಗಿ ಬಳಕೆ ಮಾಡುತ್ತಾರೆ ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ಆದರೆ, ಮುಗ್ದರಿಗೆ ನೀಡುವ ರಕ್ಷಣೆಯಾಗಿದೆ. ಹೀಗಾಗಿ ಅದನ್ನು ಪಾಲಿಸುವುದು ಕಡ್ಡಾಯವಾಗಿರಲಿದೆ ಎಂದು ತಿಳಿಸಿದೆ.


ಅಲ್ಲದೇ, ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸಿಆರ್‌ಪಿಸಿ ಸೆಕ್ಷನ್ 154(1)ರ ಪ್ರಕಾರ ಸರ್ಕಾರಿ ನೌಕರರ ವಿರುದ್ಧ ಮೊದಲು ಸ್ಥಳೀಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಬೇಕು. ದೂರು ದಾಖಲಾಗದಿದ್ದಲ್ಲಿ ಲೋಕಾಯುಕ್ತ ವರಿಷ್ಠಾಧಿಕಾರಿಗಳಿಗೆ ದೂರು ದಾಖಲಿಸಬೇಕು ಎಂಬುದಾಗಿದೆ. ಅಲ್ಲದೇ, ಸುಪ್ರೀಂಕೋರ್ಟ್ ತೀರ್ಪುಗಳ ಪ್ರಕಾರ ದೂರು ನೀಡುವವರು ತಮ್ಮ ದೂರಿಗೆ ಸಂಬಂಧಿಸಿದಂತೆ ಪ್ರಾಮಾಣಿಕೃತ ಹೇಳಿಕೆಗಳನ್ನು ದಾಖಲಿಸಬೇಕು. ಈ ಕಾರ್ಯ ಮಾಡದಿದ್ದಲ್ಲಿ ಪ್ರಕರಣನ್ಯಾಯಾಲಯಗಳು ಪುರಸ್ಕರಿಸಲಾಗುವುದಿಲ್ಲ ಎಂಬುದಾಗಿ ಹೇಳಿದೆ.


ಆದರೆ, ಈ ಪ್ರಕರಣ ಸಂಬಂಧ ದಾಖಲಿಸಿರುವ ದೂರಿನಲ್ಲಿ ಎಲ್ಲಿಯೂ ಲೊಕಾಯುಕ್ತ ಪೊಲೀಸರಿಗೆ ದೂರು ನೀಡಲು ಪ್ರಯತ್ನ ಮಾಡಲಾಗಿದೆ ಎಂಬ ಅಂಶ ಇಲ್ಲ. ಅಲ್ಲದೇ, ದೂರುದಾರರ ತಮ್ಮ ಹಾಗೂ ತಮ್ಮ ಪರ ವಕೀಲರ ಕುರಿತಂತೆ ಯಾವುದೇ ಪ್ರಮಾಣ ಪತ್ರವನ್ನೂ ಸಲ್ಲಿಸಿಲ್ಲ. ಹೀಗಾಗಿ ಪೊಲೀಸರಿಗೆ ದೂರು ಸಲ್ಲಿಸಲು ಮುಂದಾಗದೇ ನೇರವಾಗಿ ಖಾಸಗೀ ದೂರು ದಾಖಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್​ ಪೀಠ ತಿಳಿಸಿದೆ.


ಪ್ರಕರಣದ ಹಿನ್ನೆಲೆ: ಚಿಂತಾಮಣಿ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಚಿಕ್ಕಬಳ್ಳಾಪುರ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆ ಕುರಿತು ಮಾಹಿತಿ ಪಡೆದುಕೊಂಡಿದ್ದರು. ಈ ಅಂಶಗಳ ಆಧಾರದಲ್ಲಿ ಕೆಲವು ಅಧಿಕಾರಿಗಳ ಭ್ರಷ್ಟಾಚಾರ ಆರೋಪದಲ್ಲಿ ಭ್ರಷ್ಟಾಚಾರನಿಗ್ರಹ ದಳ (ಎಸಿಬಿ) ಕ್ಕೆ ದೂರು ನೀಡುವ ಬದಲು ಸೆಷನ್ಸ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ಅರ್ಜಿದಾರರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಿತ್ತು. ಈ ಆದೇಶವನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಉಳ್ಳಾಲ - ಗಾಯಾಳು ಬೈಕ್ ಸವಾರ ತೇಜಸ್ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Posted by Vidyamaana on 2023-06-12 13:02:19 |

Share: | | | | |


ಉಳ್ಳಾಲ - ಗಾಯಾಳು ಬೈಕ್ ಸವಾರ ತೇಜಸ್ ಚಿಕಿತ್ಸೆ ಫಲಕಾರಿಯಾಗದೆ  ಮೃತ್ಯು

ಉಳ್ಳಾಲ : ಬೈಕ್‍ಗೆ ಇನೋವಾ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದ್ದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಕೋಟೆಕಾರು ಪಟ್ಟಣ ವ್ಯಾಪ್ತಿಯ ಮಾಡೂರು ವೈದ್ಯನಾಥ ದೈವಸ್ಥಾನ ರಸ್ತೆ ನಿವಾಸಿ ತೇಜಸ್ ಕುಲಾಲ್ (28) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಕಳೆದ ಜೂ.4 ರ ಭಾನುವಾರ ತಡರಾತ್ರಿ ತೇಜಸ್ ಸಂಕೋಳಿಗೆಯ ಪೆಟ್ರೋಲ್ ಬಂಕಿಗೆ ಪೆಟ್ರೋಲ್ ತುಂಬಿಸಲು ಬೈಕಲ್ಲಿ ತೆರಳುತ್ತಿದ್ದ ವೇಳೆ ಕೇರಳ ನೋಂದಾವಣಿಯ ಇನ್ನೋವಾ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿತ್ತು.ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ತಲಪಾಡಿ ಟೋಲ್ ಗೇಟ್ ನ ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಮರುದಿನವೇ ಘಟನೆಗೆ ಕಾರಣವಾದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು.ಗಂಭೀರ ಗಾಯಗೊಂಡಿದ್ದ ತೇಜಸ್ ನನ್ನು ತಕ್ಷಣಕ್ಕೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು,ನಂತರ ಮಂಗಳೂರಿನ ಕೆಎಮ್ ಸಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ತಲೆಗೆ ಗಂಭೀರ ಗಾಯವಾಗಿದ್ದ ತೇಜಸ್ ಕೋಮಾ ಸ್ಥಿತಿಯಲ್ಲಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತ ತೇಜಸ್ ಅವಿವಾಹಿತರಾಗಿದ್ದು ಸುಝಕಿ ಕಂಪನಿಯಲ್ಲಿ ಮೆಕ್ಯಾನಿಕ್ ಆಗಿದ್ದರು.ತೇಜಸ್ ಬಜರಂಗದಳ ಮಾಡೂರು ಶಾಖೆಯ ಸಕ್ರಿಯ ಕಾರ್ಯಕರ್ತರಾಗಿದ್ದರು.ಮೃತರು ತಂದೆ ರಾಮ ಕುಲಾಲ್,ತಾಯಿ ರೇವತಿ ಮತ್ತು ಸಹೋದರ ರವೀಂದ್ರ ಅವರನ್ನು ಅಗಲಿದ್ದಾರೆ.

ಪುತ್ತೂರು : ಬಪ್ಪಳಿಗೆಯಲ್ಲಿ ನೂರುಲ್ ಹುದಾ ಪಳ್ಳಿ ದರ್ಸ್ ಅಸ್ತಿತ್ವಕ್ಕೆ

Posted by Vidyamaana on 2024-03-31 14:47:26 |

Share: | | | | |


ಪುತ್ತೂರು : ಬಪ್ಪಳಿಗೆಯಲ್ಲಿ  ನೂರುಲ್ ಹುದಾ ಪಳ್ಳಿ ದರ್ಸ್ ಅಸ್ತಿತ್ವಕ್ಕೆ

ಪುತ್ತೂರು :ಹಲವಾರು ನೂತನ ಧಾರ್ಮಿಕ ಕಾರ್ಯಕ್ರಮಗಳಿಗೆ ನಾಂದಿ ಹಾಡಿದ ಬಪ್ಪಳಿಗೆ ಇದೀಗ ಪಳ್ಳಿ ದರ್ಸ್ ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಮರ್ಹೂಂ ಪುತ್ತೂರು ಸೈಯ್ಯದ್ ಕೆ ಪಿ ಮುಹಮ್ಮದ್ ಹಾದೀ ತಙಳ್ ಸ್ಮರಣಾರ್ಥ ಪ್ರಪ್ರಥಮ ಧಾರ್ಮಿಕ ಶಿಕ್ಷಣ ಸಂಸ್ಥೆಯಾಗಿದೆ. 

ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್, ಧನುಷ್

Posted by Vidyamaana on 2024-04-08 21:59:35 |

Share: | | | | |


 ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್, ಧನುಷ್

ನವದೆಹಲಿ : ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಮತ್ತು ನಟ-ನಿರ್ದೇಶಕ ಧನುಷ್ ಇತ್ತೀಚೆಗೆ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನದ ಸೆಕ್ಷನ್ 13 ಬಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದೇವೆ ಎಂದು ದಂಪತಿಗೆ ಹತ್ತಿರದ ಮೂಲಗಳು ತಿಳಿಸಿವೆ.ಇಬ್ಬರೂ ಜನವರಿ 2022ರಲ್ಲಿ ಬೇರ್ಪಡುವ ನಿರ್ಧಾರವನ್ನ ಘೋಷಿಸಿದರು. ಆ ಸಮಯದಲ್ಲಿ, ಅವರ ಪ್ರಕಟಣೆಯು ಅವರ ಅನುಯಾಯಿಗಳಿಗೆ ಭಾರಿ ಆಘಾತವನ್ನುಂಟು ಮಾಡಿತು.

ಚಂದ್ರಯಾನ-3ರ ಲಾಂಚ್ ಪ್ಯಾಡ್ ನಿರ್ಮಿಸಿದ್ದ ಟೆಕ್ನಿಷಿಯನ್ ಗಳ ಬದುಕು ಕ್ರ್ಯಾಶ್ ಲ್ಯಾಂಡಿಂಗ್!

Posted by Vidyamaana on 2023-09-20 12:23:59 |

Share: | | | | |


ಚಂದ್ರಯಾನ-3ರ ಲಾಂಚ್ ಪ್ಯಾಡ್ ನಿರ್ಮಿಸಿದ್ದ ಟೆಕ್ನಿಷಿಯನ್ ಗಳ ಬದುಕು ಕ್ರ್ಯಾಶ್ ಲ್ಯಾಂಡಿಂಗ್!

ನವದೆಹಲಿ: ಚಂದ್ರಯಾನ -3ರ ಯೋಜನೆಯಲ್ಲಿ ತನ್ನ ಸೇವೆ ನೀಡಿದ್ದ ಟೆಕ್ನಿಶಿಯನ್‌ ಒಬ್ಬರಿಗೆ ಸೂಕ್ತ ಸಂಬಳ ಸಿಗದೆ  ರಸ್ತೆಬದಿ ಇಡ್ಲಿ ಮಾರುವ ಸ್ಥಿತಿಗೆ ತಲುಪಿದ್ದಾರೆ ಎಂದು ವರದಿ ಮಾಡಿದ್ದ ʼಬಿಬಿಸಿʼ ಸುದ್ದಿಯನ್ನು ಪತ್ರಿಕಾ ಮಾಹಿತಿ ಬ್ಯೂರೋ ಫ್ಯಾಕ್ಟ್‌ ಚೆಕ್‌ ಮಾಡಿದೆ.



ಯಾವ ಸುದ್ದಿಯಿದು?


ಇಸ್ರೋ ಚಂದ್ರಯಾನ-3ರ ಯಶಸ್ಸಿನಲ್ಲಿ  ತಂತ್ರಜ್ಞರಾಗಿ ಕೆಲಸ ಮಾಡಿದ್ದ ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ದೀಪಕ್ ಕುಮಾರ್ ಉಪ್ರಾರಿಯಾ ಅವರಿಂದು ಜೀವನ ಸಾಗಿಸಲು ರಸ್ತೆಬದಿಯಲ್ಲಿ ಇಡ್ಲಿ ಮಾರುವ ಸ್ಥಿತಿಗೆ ತಲುಪಿದ್ದಾರೆ ಎಂದು ವರದಿ ತಿಳಿಸಿತ್ತು.


ಯಾರು ಈ ದೀಪಕ್ ಕುಮಾರ್?: 


ಉಪ್ರಾರಿಯಾ ಅವರು ಮಧ್ಯಪ್ರದೇಶದ ಹರ್ದಾ ಜಿಲ್ಲೆಯವರು. 2012ರಲ್ಲಿ ಖಾಸಗಿ ಕಂಪನಿಯೊಂದರ ಕೆಲಸ ಬಿಟ್ಟು ₹ 8,000 ಸಂಬಳಕ್ಕೆ ಎಚ್‌ಇಸಿ(ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್) ಕಂಪನಿಗೆ ಸೇರಿದ್ದರು ಎಂದು ವರದಿಯಲ್ಲಿ ಹೇಳಲಾಗಿತ್ತು.ಸರ್ಕಾರಿ ಕಂಪೆನಿಯಾದ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಇಸ್ರೋದ ಚಂದ್ರಯಾನ-3ರ  ಉಡಾವಣಾ ಪ್ಯಾಡ್ ನಿರ್ಮಿಸಿದೆ. ಈ ಲಾಂಚ್‌ ಪ್ಯಾಡ್‌ ನಿರ್ಮಿಸಲು ಸುಮಾರು 2,800 ಟೆಕ್ನಿಶಿಯನ್‌ ಗಳು ಹಗಲು ಇರುಳು ಶ್ರಮವಹಿಸಿದ್ದಾರೆ. ಇದರಲ್ಲಿ ದೀಪಕ್ ಕುಮಾರ್ ಅವರು ಕೂಡ ಒಬ್ಬರಾಗಿದ್ದರು ಎಂದು ʼಬಿಬಿಸಿ ಹಿಂದಿʼ ಫೋಟೋ ಸಹಿತ ವರದಿ ಮಾಡಿತ್ತು.



“ಇಸ್ರೋ ಲಾಂಚ್‌ಪ್ಯಾಡ್ ನಿರ್ಮಿಸುತ್ತಿರುವ ಎಚ್‌ಇಸಿ ಜನರು ಟೀ, ಇಡ್ಲಿ ಮಾರುತ್ತಿದ್ದಾರೆ, 18 ತಿಂಗಳಿಂದ ಸಂಬಳ ಬಂದಿಲ್ಲ: ಗ್ರೌಂಡ್ ರಿಪೋರ್ಟ್” ಹೆಡ್‌ ಲೈನ್‌ ಹಾಕಿ ವರದಿ ಮಾಡಿತ್ತು. ಈ ಕುರಿತು ಪತ್ರಿಕಾ ಮಾಹಿತಿ ಬ್ಯೂರೋ ಫ್ಯಾಕ್ಟ್‌ ಚೆಕ್ ಮಾಡಿದ್ದು, ಈ ಸುದ್ದಿಯ ಹೆಡ್‌ ಲೈನ್‌ ಗೊಂದಲಮಯವಾಗಿದೆʼ ಎಂದಿದೆ.‌


ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಗೆ ಚಂದ್ರಯಾನ-3ರ ಯಾವುದೇ ಘಟಕಗಳ ತಯಾರಿಕೆಯನ್ನು ವಹಿಸಿಕೊಟ್ಟಿಲ್ಲ.


2003 ಮತ್ತು 2010 ರ ನಡುವೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಗೆ ಕೆಲವು ಮೂಲಸೌಕರ್ಯಗಳನ್ನು ಎಚ್‌ಇಸಿ ಪೂರೈಸಿದೆ ಎಂದು ಸರ್ಕಾರದ ಪಿಐಬಿ ಫ್ಯಾಕ್ಟ್‌ ಚೆಕ್‌ ಮಾಡಿ ಟ್ವೀಟ್‌ ಮಾಡಿದೆ.


ಕಂಪನಿಗಳ ಕಾಯಿದೆಯಡಿ ನೋಂದಾಯಿಸಲಾದ ಎಚ್‌ಇಸಿ, ಪ್ರತ್ಯೇಕ ಕಾನೂನು ಘಟಕವಾಗಿದೆ ಮತ್ತು BHEL ನಂತಹ ತನ್ನದೇ ಆದ ಸಂಪನ್ಮೂಲಗಳನ್ನು ಅದು ಉತ್ಪಾದಿಸುತ್ತದೆ ಎಂದು ಈ ಸಂಬಂಧ  ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಟ್ವೀಟ್‌ ಮಾಡಿದ್ದಾರೆ.


ಸಂಸತ್ತಿನಲ್ಲಿ ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಚಂದ್ರಯಾನ -3ಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಎಚ್‌ಇಸಿಗೆ ನಿಯೋಜಿಸಿಲ್ಲ ಎಂದಿರುವ ದಾಖಲೆಗಳ ಸ್ಕ್ರೀನ್‌ ಶಾಟ್‌ ಗಳನ್ನು ಕಾಂಚನ್ ಗುಪ್ತಾ ಹಂಚಿಕೊಂಡಿದ್ದಾರೆ.



Leave a Comment: