ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಸುದ್ದಿಗಳು News

Posted by vidyamaana on 2024-07-23 06:33:29 | Last Updated by Vidyamaana on 2024-07-23 06:33:29

Share: | | | | |


ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಮುಂಬೈ :ಫಿಟ್ನೆಸ್ ಕಾಪಾಡಿಕೊಳ್ಳಲು ಹಲವರು ಜುಂಬಾ ಡ್ಯಾನ್ಸ್ ಮೊರೆ ಹೋಗುತ್ತಾರೆ. ಪ್ರತಿ ದಿನ ಜುಂಬಾ ಡ್ಯಾನ್ಸ್ ಕ್ಲಾಸ್‌ಗೆ ತೆರಳಿ ಬೆವರು ಹರಿಸುತ್ತಾರೆ. ಹೀಗೆ ಮಹಾರಾಷ್ಟ್ರದ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಫಿಟ್ನೆಸ್‌ಗಾಗಿ ಪ್ರತಿ ದಿನ ಜುಂಬಾ ಕ್ಲಾಸ್‌ಗೆ ತೆರಳಿ ಡ್ಯಾನ್ಸ್ ಮಾಡುತ್ತಾ ಬೆವರು ಹರಿಸುತ್ತಾರೆ.

ಇಂದು ಬೆಳಗ್ಗೆ ಜುಂಬಾ ಡ್ಯಾನ್ಸ್ ಮಾಡುತ್ತಿದ್ದಂತೆ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಉದ್ಯಮಿ ಬದುಕುಳಿಯಲಿಲ್ಲ.


ಛತ್ರಪತಿ ಸಂಭಾಜಿನಗರದ ನಿವಾಸಿಯಾಗಿರುವ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರತಿದಿನ ಜುಂಬಾ ಡ್ಯಾನ್ಸ್ ಮಾಡುತ್ತಾರೆ. ಎಂದಿನಂತೆ ಇಂದೂ ಕೂಡ ಅವಲ್ಜಿತ್ ಸಿಂಗ್ ಬಾಗ್ಗಾ ಜುಂಬಾ ಡ್ಯಾನ್ಸ್‌ಗೆ ತೆರಳಿದ್ದಾರೆ. ಅವಲ್ಜಿತ್ ಸಿಂಗ್ ರೀತಿಯಲ್ಲಿ ಇತರ ಕೆಲವರು ಜುಂಬಾ ಡ್ಯಾನ್ಸ್ ಮಾಡುತ್ತಿದ್ದಾರೆ. ಜುಂಬಾ ಕ್ಲಾಸ್ ತೆರಳಿ 15 ನಿಮಿಷಗಳ ಕಾಲ ಡ್ಯಾನ್ಸ್ ಮಾಡಿದ್ದಾರೆ. ಹಲವರು ಇದೇ ಕ್ಲಾಸ್‌ನಲ್ಲಿ ಅವಲ್ಜಿತ್ ಸಿಂಗ್ ಜೊತೆ ಡ್ಯಾನ್ಸ್ ಮಾಡಿದ್ದಾರೆ.

ಕೊನೆಯ ಸಾಲಿನ ಬದಿಯಲ್ಲಿದ್ದ ಅವಲ್ಜಿತ್ ಸಿಂಗ್ ಡ್ಯಾನ್ಸ್ ಮಾಡುತ್ತಿದ್ದಂತೆ ಹೃದಯಾಘಾತವಾಗಿದೆ. ಡ್ಯಾನ್ಸ್ ಮಾಡಲು ಸಾಧ್ಯವಾಗದೆ ನಿಂತಿದ್ದಾರೆ. ಚೇತರಿಸಿಕೊಳ್ಳಲು ಕೆಲ ಕ್ಷಣ ನಿಂತಿದ್ದಾರೆ. ಇತರರು ಡ್ಯಾನ್ಸ್‌ನಲ್ಲಿ ತಲ್ಲೀನರಾಗಿದ್ದರು. ಆದರೆ ಅವಲ್ಜಿತ್ ಸಿಂಗ್ ಚೇತರಿಸಿಕೊಳ್ಳಲಿಲ್ಲ. ಕಾರಣ ತೀವ್ರ ಹೃದಯಾಘಾತದಿಂದ ಅವಲ್ಜಿತ್ ಕುಸಿದಿದ್ದಾರೆ. ಈ ವೇಳೆ ಮೆಲ್ಲನೆ ಕುಳಿತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಅವಲ್ಜಿತ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಇತರರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ನೀರು ತಂದು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದಕ್ಕೂ ಅವಲ್ಜಿತ್ ಸಿಂಗ್ ಸ್ಪಂದಿಸಿಲ್ಲ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅವಲ್ಜಿತ್ ಎತ್ತಿಕೊಂಡು ವಾಹನದ ಮೂಲಕ ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆ ದಾಖಲಿಸುವ ಮೊದಲೇ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರಾಣ ಪಕ್ಷಿ ಹಾರಿಹೋಗಿದೆ. ತಪಾಸಣೆ ನಡೆಸಿದ ವೈದ್ಯರು ಅವಲ್ಜಿತ್ ಸಿಂಗ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಜಿಮ್ ಅಭ್ಯಾಸದ ವೇಳೆ ಈ ರೀತಿ ಹೃದಯಾಘಾತಕ್ಕೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಗೆ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ನಡುವೆ ಇದೀಗ ಉದ್ಯಮಿ ಅವಲ್ಜಿತ್ ಸಿಂಗ್ ಬಾಗ್ಗಾ ನಿಧನ ಸುದ್ದಿ ಆತಂಕ ಹೆಚ್ಚಿಸಿದೆ. ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ಕವಲ್ಜಿತ್ ಸಿಂಗ್ ದಿಢೀರ್ ನಿಧನ ಇದೀಗ ಮತ್ತೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

 Share: | | | | |


ದ್ವಿತೀಯ ಪಿಯುಸಿಯಲ್ಲಿ ಮಾರ್ಕ್ಸ್‌ ಕಡಿಮೆ ಬಂದಿದ್ದಕ್ಕೆ ಮಗಳನ್ನೇ ಕೊಂದ ತಾಯಿ!

Posted by Vidyamaana on 2024-04-30 08:26:23 |

Share: | | | | |


ದ್ವಿತೀಯ ಪಿಯುಸಿಯಲ್ಲಿ ಮಾರ್ಕ್ಸ್‌ ಕಡಿಮೆ ಬಂದಿದ್ದಕ್ಕೆ   ಮಗಳನ್ನೇ ಕೊಂದ ತಾಯಿ!

ಬೆಂಗಳೂರು: ತಾಯಿಯೇ ಮಗಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ತಾಯಿ ಮೇಲೆ ಮಗಳು ಕೂಡ ಚಾಕುವಿನಿಂದ ದಾಳಿ ಮಾಡಿದ್ದು, ಗಾಯಗೊಂಡ ತಾಯಿ ಆಸ್ಪತ್ರೆ ಪಾಲಾಗಿದ್ದಾರೆ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ ಮಗಳ ನಡುವೆ ಜಗಳ ನಡೆದಿದೆ. ಎಕ್ಸಾಂಗೆ ಕಾಲೇಜಿಗೆ ಹೋಗ್ತೀನಿ ಎಂದು ಮನೆಯಿಂದ ಹೊರಡುತ್ತಿದ್ದ ಮಗಳು ಪರೀಕ್ಷೆಗೆ ಗೈರು ಹಾಜರಾಗಿದ್ದ ವಿಚಾರ ಸೋಮವಾರ ತಾಯಿಗೆ ತಿಳಿದಿದ್ದು, ಜಗಳ ಶುರು ಆಗಿತ್ತು

ಉಪ್ಪಿನಂಗಡಿ ಆಯ್ತು – ಇದೀಗ ಕೋಡಿಂಬಾಡಿಯೂ ಹೋಯ್ತು..

Posted by Vidyamaana on 2023-08-16 10:12:33 |

Share: | | | | |


ಉಪ್ಪಿನಂಗಡಿ ಆಯ್ತು – ಇದೀಗ ಕೋಡಿಂಬಾಡಿಯೂ ಹೋಯ್ತು..

ಉಪ್ಪಿನಂಗಡಿ: ಕೋಡಿಂಬಾಡಿ ಗ್ರಾ.ಪಂ.ನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮಲ್ಲಿಕಾ ಅಶೋಕ್ ಪೂಜಾರಿ, ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಜಯಪ್ರಕಾಶ್ ಬದಿನಾರು ಆಯ್ಕೆಯಾಗಿದ್ದಾರೆ.11 ಸದಸ್ಯ ಬಲವನ್ನು ಹೊಂದಿರುವ ಗ್ರಾ.ಪಂ. ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಎ) ಮೀಸಲಾತಿ ಬಂದಿದೆ. ಇಲ್ಲಿನ 11 ಮಂದಿ ಸದಸ್ಯರಲ್ಲಿ ಆರು ಮಂದಿ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದು, ಐದು ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು. ಇಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಉಷಾ ಲಕ್ಷ್ಮಣ, ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮಲ್ಲಿಕಾ ಅಶೋಕ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯ ರಾಮಚಂದ್ರ ಪೂಜಾರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಯಪ್ರಕಾಶ್ ಬದಿನಾರು ನಾಮಪತ್ರ ಸಲ್ಲಿಸಿದ್ದರು.

ಪ್ರಾದೇಶಿಕ ಸಾರಿಗೆ ಇಲಾಖೆ, ಪುತ್ತೂರುನಲ್ಲಿ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

Posted by Vidyamaana on 2024-01-23 07:40:41 |

Share: | | | | |


ಪ್ರಾದೇಶಿಕ ಸಾರಿಗೆ ಇಲಾಖೆ, ಪುತ್ತೂರುನಲ್ಲಿ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

ಪುತ್ತೂರು.ವಾಹನ ಚಾಲನೆಯ ಸಮಯದಲ್ಲಿ ತಂದೆ ತಾಯಿಯಂದಿರೇ ಪ್ರಮುಖವಾಗಿ ನಿಯಮ ಪಾಲಿಸಬೇಕು. ತಂದೆ-ತಾಯಿ ನಿಯಮ ಉಲ್ಲಂಘಿಸಿದರ ಮಕ್ಕಳು ಅದನ್ನೇ ಪಾಲಿಸುತ್ತಾರೆ. ಹೀಗಾಗಿ ಪ್ರತಿಯೊಬ್ಬರ ತಂದೆ-ತಾಯಿ ಸಂಚಾರಿ ನಿಯಮ ಪಾಲಿಸುವ ಮೂಲಕ ಮಕ್ಕಳಲ್ಲಿ ನಿಯಮ ಪಾಲನೆಯ ಜಾಗೃತಿ ಮೂಡಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್‌. ವಿಶ್ವನಾಥ ನಾಯ್ಕ ಹೇಳಿದರು.ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮತ್ತು ಪೊಲೀಸ್‌ ಇಲಾಖೆ ಪುತ್ತೂರು ಉಪ ವಿಭಾಗ ಇದರ ಜಂಟಿ ಆಶ್ರಯದಲ್ಲಿ ಜ.20ರಂದು ಬನ್ನೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಾಲನ ವೃತ್ತಿಯೂ ಒಂದು ಕಲೆ. ಅದರ ಪ್ರಾವಿಣ್ಯತೆ ಎಲ್ಲರಿಗೂ ಬರುವುದಿಲ್ಲ. ವಾಹನ ಚಾಲನೆಯ ಸಮಯದಲ್ಲಿ ಎಲ್ಲರ ಜೀವ ಚಾಲಕರಲ್ಲಿದ್ದು ತಪ್ಪು ನಿರ್ಧಾರ ಕೈಗೊಳ್ಳಬಾರದು. ಚಾಲನೆಯ ಜೊತೆಗೆ ಸಂಚಾರಿ ನಿಯಮ ಪಾಲಿಸುವುದು ಮುಖ್ಯ ಪ್ರತಿಯೊಬ್ಬ ಚಾಲಕರೂ ತಮ್ಮ ಜವಾಬ್ದಾರಿ ಅರಿತು ಸಂಚಾರಿ ನಿಯಮ ಪಾಲಿಸಬೇಕು. ವಾಹನ ನಿಮ್ಮದಾಗಿರಬಹುದು.ಆದರೆ ರಸ್ತೆ ಎಲ್ಲರಿಗೂ ಸೇರಿದ್ದು ಪಾದಚಾರಿಗಳ ಜೀವಕ್ಕೂ ಬೆಲೆಯಿದೆ. ಕುರುಡರ ಬಗ್ಗೆಯೂ ಜಾಗರೂಕರಾಗಿರಬೇಕು. ಚಾಲನ ವೃತ್ತಿಯಲ್ಲಿ ಕಲಿಯಲು ಸಾಕಷ್ಟಿದೆ. ಕಾನೂನು ಉಲ್ಲಂಘಿಸಿದರೆ ಶಿಕ್ಷೆಯೂ ಇದ್ದು ನಿಯಮ ಉಲ್ಲಂಘಿಸುವ ಚಾಲಕರ ವಿರುದ್ದು ದೂರು ದಾಖಲಾದರೆ ಕನಿಷ್ಠ ಆರು ತಿಂಗಳ ಕಾಲ ಚಾಲನ ಪರವಾನಿಗೆಯನ್ನು ಅಮಾನತು ಮಾಡುವಂತೆ 2019ರಲ್ಲಿ ಸುಪ್ರಿಂ ಕೋಟ್ ಆದೇಶಿಸಿದೆ ಎಂದರು.


ಮುಖ್ಯ ಅತಿಥಿಯಾಗಿದ್ದ ನಗರ ಠಾಣಾ ನಿರೀಕ್ಷಕ ಸುನಿಲ್ ಕುಮಾ‌ರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಅಧಿಕವಾಗುತ್ತಿದೆ. ನಿರ್ಲಕ್ಷತನ, ಅತೀ ವೇಗ, ದುಡುಕಿನ ನಿರ್ಧಾರಗಳೇ ಅಪಘಾತಗಳಿಗೆ ಕಾರಣವಾಗುತ್ತಿದೆ. ವಾಹನ ಚಾಲನೆಯ ಸಮಯದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಮುಖ್ಯ ಸಂಚಾರಿ ನಿಯಮ ಪಾಲಿಸಿಕೊಂಡು ನಮ್ಮ ಜೀವದ ಜೊತೆಗೆ ಇನ್ನೊಬ್ಬರ ಜೀವ ಉಳಿಸುವ ಮೂಲಕ ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಾಯಕರಾಗಬೇಕು ಎಂದರು.


ಹಿರಿಯ ಮೋಟಾರು ವಾಹನ ನಿರೀಕ್ಷಕ ಆಫ್ಘಾನ್ ಬಿ.ಎಸ್‌.ಮಾತನಾಡಿ, ಪ್ರತಿವರ್ಷ ರಸ್ತೆ ಸುರಕ್ಷತಾ ಸಪ್ತಾಹ ನಡೆಯುತ್ತಿದ್ದು ಈ ವರ್ಷ ಕೇಂದ್ರ ಸರಕಾರದ ಆದೇಶದಂತೆ ಮಾಸಾಚರಣೆ ನಡೆಸಲಾಗುತ್ತಿದೆ ಶೇ.75ರಷ್ಟು ಮಂದಿ ಸಮಚಾರಿ ನಿಯಮಗಳನ್ನು ಪಾಲಿಸುತ್ತಿಲ್ಲ. ಸಂಚಾರಿ ನಿಯಮ ಪಾಲನೆ ಕೆಲಸವಲ್ಲ. ಅದು ಜವಾಬ್ದಾರಿ. ಪ್ರತಿಯೊಬ್ಬರೂ ಸಂಚಾರಿ ನಿಯಮ ಪಾಲಿಸಬೇಕು ಎಂದರು.

ಕೈಪಿಡಿ ಬಿಡುಗಡೆ:

ಸಂಚಾರಿ ನಿಯಮಗಳನ್ನು ಒಳಗೊಂಡ ಕೈಪಿಡಿಯನ್ನು ಕಾರ್ಯಕ್ರಮದಲ್ಲಿ ನಗರ ಠಾಣಾ ನಿರೀಕ್ಷಕ ಸುನೀಲ್ ಕುಮಾ‌ರ್ ಬಿಡುಗಡೆಗೊಳಿಸಿದರು.ಶ್ವೇತಾ ಪ್ರಾರ್ಥಿಸಿದರು. ಕಚೇರಿ ಅಧೀಕ್ಷಕ ದೀಪಕ್ ಕುಮಾರ್ ಸ್ವಾಗತಿಸಿದರು. ಅಧೀಕ್ಷಕರಾದ ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿ, ಆಸ್ಕರ್ ಸಂತೋಷ್ ವಂದಿಸಿದರು.

ಪುಣಚ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ರಸ್ತೆ ದುರಸ್ಥಿಗೆ ಶಾಸಕರಿಂದ ಶಿಲಾನ್ಯಾಸ

Posted by Vidyamaana on 2024-03-12 17:07:16 |

Share: | | | | |


ಪುಣಚ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ರಸ್ತೆ ದುರಸ್ಥಿಗೆ ಶಾಸಕರಿಂದ ಶಿಲಾನ್ಯಾಸ

ಪುತ್ತೂರು: ಪುಣಚಾ ಶ್ರೀ ಮಹಿಷಮರ್ಧಿನಿ ದೇವಸ್ಥಾನಕ್ಕೆ ತೆರಳುವ ರಸ್ತೆ ವಿವಾದಕ್ಕೆ ಅನೇಕ ವರ್ಷಗಳ ಬಳಿಕ ತೆರೆ ಎಳೆಯಲಾಗಿದ್ದು ಪುತ್ತೂರು ಶಾಸಕರಾದ ಅಶೋಕ್‌ ರೈ ಯವರ ಸಂಧಾನ ಮಾತುಕತೆ ಸಫಲವಾಗಿದ್ದು ,ಈ ರಸ್ತೆಗೆ ೫೦ ಲಕ್ಷ ರೂ ಅನುದಾನವನ್ನು ಒದಗಿಸಿ ಕಾಮಗಾರಿಗೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು.


ದೇವಸ್ಥಾನಕ್ಕೆ ತೆರಳುವ ಪ್ರಮುಖ ಪ್ರವೇಶದ್ವಾಋದ ಬಳಿ ಜಾಗದ ತಕರಾರು ಇರುವ ಕಾರಣ ರಸ್ತೆ ಅಭಿವೃದ್ದಿಗೆ ಅಡ್ಡಿಯಾಗಿತ್ತು. ಜಾಗದ ಮಾಲಕರಾದ ಸದಾನಂದ ಎಂಬವರನ್ನು ಕರೆಸಿ ಮಾತುಕತೆ ನಡೆಸಿದ ಶಸಕರು ದೇವಸ್ಥಾನದ ರಸ್ತೆ ಅಭಿವೃದ್ದಿಗೆ ಸಹಕಾರ ಮಾಡುವಂತೆ ಮತ್ತು ಈ ಹಿಂದೆ ಇದೇ ವಿಚಾರದಲ್ಲಿ ಮಾಡಲಾಗಿರುವ ಕೇಸುಗಳನ್ನು ಹಿಂಪಡೆದು ಭಕ್ತರಿಗೆ ನೆರವಾಗಲು ರಸ್ತೆ ವಿವಾದವನ್ನು ಇತ್ಯರ್ಥ ಪಡಿಸಬೇಕು ಮತ್ತು ಈ ವಿಚಾರದಲ್ಲಿ ಸಹಕಾರ ನೀಡುವಂತೆ ಶಾಸಕರು ಕೇಳಿಕೊಂಡಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ ಜಾಗದ ಮಾಲಿಕ ಸದಾನಂದ ರವರು ಪುತ್ತೂರು ಶಾಸಕರು ಹೇಳುವುದಾದರೆ ನಾನು ಏನು ಮಾಡಲು ಬೇಕಾದರೂ ಸಿದ್ದ ಎಂದು ಹೇಳಿ ಅನೇಕ ವರ್ಷಗಳಿಂದ ತಕರಾರಿನಿಂದ ಬಾಕಿಯಾಗಿದ್ದ ರಸ್ತೆ ಕಾಮಗಾರಿಗೆ ಚಾಲನೆ ಸಿಕ್ಕಂತಾಗಿದೆ.


ಪುಣಚಾ ಗ್ರಾಮಕ್ಕೆ ಒಟ್ಟು ೧. ೯೫ ಕೋಟಿ ರೂ ಕಾಮಗಾರಿಗೆ ಶಾಸಕರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು ದೇವಸ್ಥಾನದ ರಸ್ತೆ ಅಭಿವೃದ್ದಿಯಾಗದೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ವಿವಾದ ಇತ್ಯರ್ಥಪಡಿಸಿ ರಸ್ತೆ ಅಭಿವೃದ್ದಿಗೂ ಅನುದಾನ ಇರಿಸಿದ್ದೇನೆ, ಅದೇ ರೀತಿ ಪುಣಚಾ ಗ್ರಾಮದ ವಿವಿಧ ವಾರ್ಡುಗಳ ರಸ್ತೆಗೂ ಅನುದಾನವನ್ನು ನೀಡಿದ್ದೇನೆ ಎಂದು ಹೇಳಿದ ಶಾಸಕರು ಗ್ಯಾರಂಟಿ ಯೋಜನೆ ಹೇಗೆ ಜನರ ಮನೆ ಮನೆಗೆ ತಲುಪಿದೆಯೋ ಅದೇ ರೀತಿ ಅಭಿವೃದ್ದಿ ಕೆಲಸಗಳು ಪ್ರತೀ ಗ್ರಾಮಗಳಿಗೂ ತಲುಪಿದೆ ಎಂದು ಹೇಳಿದರು.

ದೇವಳದ ರಸ್ತೆಗೆ ಮೊದಲ ಬಾರಿಗೆ ಹಣ ಇಟ್ಟದ್ದು ನಾನು: ಎಂ ಎಸ್ ಮಹಮ್ಮದ್

ನಾನು ಜಿಪಂ ಉಪಾಧ್ಯಕ್ಷನಾಗಿದ್ದ ವೇಳೆ ಈ ದೇವಳದ ರಸ್ತೆ ಅಭಿವೃದ್ದಿಗೆ ಅನುದಾನವನ್ನು ಇಟ್ಟಿದ್ದೆ ಆ ಬಳಿಕ ಇಲ್ಲಿಗೆ ಯಾರೂ ಅನುದಾನವನ್ನು ನೀಡಿಲ್ಲ. ಅನುದಾನ ಕೊಟ್ಟ ನನ್ನನ್ನು ದೇವಳದ ವತಿಯಿಂದ ಸನ್ಮಾನವನ್ನು ಮಾಡಿದ್ದರು. ಇದೀಗ ಈ ರಸ್ತೆ ಸಂಪೂರ್ಣ ದುರಸ್ಥಿ ಯಾಗಲಿದ್ದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಟ್ಟ ಸದಾನಂದ ಅವ ರಿಗೆ ಅಭಿನಂದನೆ ಸಲ್ಲಿಸುವುದಾಗಿ ಎಂ ಎಸ್ ಮಹಮ್ಮದ್ ತಿಳಿಸಿದರು.


ಕಾರ್ಯಕ್ರಮದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ  ಡಾಟ. ರಾಜಾರಾಂ ಕೆ.ಬಿ, ಡಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಲ್ವಾ, ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ  ಬೈಲುಗುತ್ತು, ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಪರಿಯಾಲ್ತಡ್ಕ ಶಾಲಾ ನಿವೃತ್ತ ಮುಖ್ಯ ಗುರು ಹರ್ಷಶಾಸ್ತ್ರಿ ಮಣಿಲ, ರಮಾನಾಥ್ ವಿಟ್ಲ, ರಶೀದ್ ವಿಟ್ಲ, ನವೀನ್ ರೈ ಚೆಲ್ಯಡ್ಕ, ಅಶ್ರಫ್, ರೈತ ಸೇನಾ ಮುಖಂಡ ಶ್ರೀಧರ ಶೆಟ್ಟಿ ಬೈಲುಗುತ್ತು, ವಲಯ ಕಾರ್ಯದರ್ಶಿ ಮಹಮ್ಮದ್ ಸಿರಾಜ್ ಮನಿಲ, ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಸದಸ್ಯರಾದ ಲಲಿತಾ, ಗಿರಿಜ, ಹರೀಶ್, ಪ್ರಮುಖರಾದ ಪ್ರತಿಭಾ ಶ್ರೀಧರ್ ಶೆಟ್ಟಿ, ರಾಜೇಂದ್ರ ರೈ ಬೈಲುಗುತ್ತು, ನಾರಾಯಣ ಪೂಜಾರಿ ನೀರುಮಜಲು, ಜಯರಾಂ ಶಾಸ್ತ್ರೀ ಮಣಿಲ,  ನಾರಾಯಣ ನಾಯ್ಕ, ಅಲ್ಬರ್ಟ್ ಡಿಸೋಜಾ, ಕ್ಷೇವಿಯರ್ ಡಿಸೋಜಾ, ವೆಂಕಪ್ಪ ಗೌಡ ಅಜೇರು ಮಜಲು, ಕುಂಞಣ್ಣ ರೈ, ಸೀತಾರಾಮ ಪಟಿಕಲ್ಲು, ಮಹಾಲಿಂಗ ನಾಯ್ಕ, ಕರೀಂ ಕುದ್ದುಪದವು, ಮೌರಿಸ್‌ಟೆಲ್ಲಿಸ್, ದಿವಾಕರ ತೋರಣಕಟ್ಟೆ, ಮೋಹನ ಎಚ್, ಶಿವರಾಮ ನಾಯ್ಕ ಪಾವಳುಮೂಲೆ, ಪೂವಪ್ಪ ಎರ್ಮೆತೊಟ್ಟಿ, ಗೋವಿಂದ ನಾಯ್ಕ ಆಜೇರು, ಹಮೀದ್ ಎಂ.ಎಸ್, ಇಸ್ಮಾಯಿಲ್ ಪಾಲಸ್ತಡ್ಕ, ಮುಸ್ತಫ ಗರಡಿ, ಅಬ್ದುಲ್ಲ ಕೆಪಿ, ವಾಮನ ನಾಯ್ಕ, ಹರೀಶ್ ಕುಮಾರ್ ಆಜೇರುಮಜಲು, ಶರೀಫ್ ಕೊಲ್ಲಪದವು, ರಮೇಶ್ ದಂಬೆ, ಶ್ರೀನಿವಾಸ ನಾರ್ಣಡ್ಕ ಸೇರಿದಂತೆ ಹಲವು ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪುಣಚ ವಲಯಾದ್ಯಕ್ಷ ಬಾಲಕೃಷ್ಣ ಪೂಜಾರಿ ಹಿತ್ತಿಲು ಸ್ವಾಗತಿಸಿ, ವಂದಿಸಿದರು.

ಸಂಪ್ಯ: ಕಾಂಗ್ರೆಸ್ ಚುನಾವಣಾ ಪ್ರಚಾರಸಭೆ

Posted by Vidyamaana on 2023-04-28 13:57:41 |

Share: | | | | |


ಸಂಪ್ಯ: ಕಾಂಗ್ರೆಸ್ ಚುನಾವಣಾ ಪ್ರಚಾರಸಭೆ

ಪುತ್ತೂರು; ಮಕ್ಕಳೇ ನಮ್ಮ ಸಂಪತ್ತು, ಮಕ್ಕಳಿಗಾಗಿ ನಾವು ಎಲ್ಲವನ್ನೂ ಸಹಿಸುತ್ತೇವೆ, ತ್ಯಾಗಗಳನ್ನು ಮಾಡುತ್ತೇವೆ ಆದರೆ ಅದೇ ಮಕ್ಕಳು ನಾಳೆ ದಾರಿ ತಪ್ಪಿದಾಗ ಅಥವಾ ಕಲಿತು ಉದ್ಯೋಗ ಇಲ್ಲವಾದಾಗ ನಾವೇ ಅದರ ನೋವನ್ನು ಅನುಭವಿಸಬೇಕಾಗುತ್ತದೆ , ಮಕ್ಕಳು ದಾರಿತಪ್ಪದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪೋಷಕರದ್ದು , ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ದೊರೆಯುವಂತಾಗಲು ರಾಜ್ಯದಲ್ಲಿ , ದೇಶದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳಿ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.

ನಮಗೆ ಧರ್ಮಗಳ ನಡುವಿನ ಜಗಳ, ದ್ವೇಷ ಬೇಡ. ನಮ್ಮ ಮಕ್ಕಳೂ ಅದಕ್ಕೆ ಬಲಿಯಾಗುವುದು ಬೇಡ. ಧರ್ಮ ಧರ್ಮಗಳ ನಡುವೆ ದ್ವೇಷದಿಂದ ಸಮಾಜಕ್ಕ ಗಳಿಸಿಕೊಳ್ಲುವಂತದ್ದು ಏನೂ ಇಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಪರಸ್ಪರ ಒಂದಾಗಿ ಬಾಳಬೇಕು. ದೇಶದಲ್ಲಿ ಹಲವು ಧರ್ಮಳು, ಜಾತಿಯವರನ್ನೊಳಗೊಂಡ ಸುಂದರ ಹೂದೋಟ, ಈ ಹೂದೋಠ ಹಾಗೇಯೇ ಉಳಿಯಲಿ. ದೇಶದಲ್ಲಿ ಜಾತ್ಯಾತೀತ ಕಲ್ಪನೆ ಉಳಿದುಕೊಳ್ಳಬೇಕಾದರೆ ಹಿಂದೂ ಮುಸ್ಲಿಂ ಪರಸ್ಪರ ಒಟ್ಟಾಗಿರಬೇಕು. ಧರ್ಮಗಳ ನಡುವೆ ವಿಷ ಬೀಜ ಬಿತ್ತುವವರ ಜೊತೆ ನಮ್ಮ ಮಕ್ಕಳು ಸೇರದಂತೆ ನಾವು ಜಾಗೃತರಾಗಬೇಕಿದೆ ಎಂದು ಹೇಳಿದರು.

ಪುತ್ತೂರು ನಗರವನ್ನು ಅಭಿವೃದ್ದಿ ಮಾಡುತ್ತೇವೆ ಎಂದು ಶಾಸಕರು ಪ್ರಾರಂಭದಲ್ಲಿ ಹೇಳಿದ್ದರು ಆದರೆ ಅಭಿವೃದ್ದಿ ಮಾಡಿಲ್ಲ, ಕೇವಲ ಫ್ಲೆಕ್ಸ್ ಹಾಕಿದ್ದು ಮಾತ್ರ, ಬ್ರಹ್ಮ ನಗರದಲ್ಲಿ ೧೦೦ ಮನೆಗಳ ಫ್ಲ್ಯಾಟ್ ನಿರ್ಮಾಣ ಮಾಡುತ್ತೇವೆ ಎಂದವರಿಗೆ ಅಲ್ಲಿಗೆ ಸರಿಯಾದ ಮೂಲಭೂತ ಸೌಕರ್ಯವನ್ನು ಮಾಡಲು ಸಾಧ್ಯವಾಗಲಿಲ್ಲ. ಶಂಕುಸ್ಥಾಪನೆ ಮಾಡಿದ್ದು, ಫ್ಲೆಕ್ಸ್ ಹಾಕಿದ್ದು, ೪೦ ಪರ್ಸೆಂಟ್ ಕಮಿಷನ್ ತಗೊಂಡು ಜಾಲಿ ಮಾಡಿದ್ದು ಬಿಟ್ರೆ ಏನೇನೂ ಅಭಿವೃದ್ದಿ ಕೆಲಸ ಮಾಡಿಲ್ಲ. ಪುತ್ತೂರು ನಗರದಲ್ಲಿ ಇನ್ನೂ ಒಳಚರಂಡಿ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ ಎಂದು ದೂರಿದರು. ಕಾಂಗ್ರೆಸ್ ಬೆಂಬಲಿಸಿ ನಾವು ಅಭಿವೃದ್ದಿ ಮಡಿ ತೋರಿಸುತ್ತೇವೆ ಎಂದು ರೈಗಳು ಸಭೆಗೆ ತಿಳಿಸಿದರು. ಈ ಬಾರಿ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹವಾ ಇದೆ. ಖಂಡಿತವಾಗಿಯೂ ನಿಮ್ಮೆಲ್ಲರ ಸಹಕಾರದಿಂದ ಪುತ್ತೂರಿನಲ್ಲಿ ಕಾಂಗ್ರೆಸ್ ಮತ್ತೆ ಇತಿಹಾಸವನ್ನು ನಿರ್ಮಾಣ ಮಾಡಲಿದೆ ಎಂದು ಭವಿಷ್ಯ ನುಡಿದರು

ದೇಶಕಟ್ಟಿದ್ದು ಕಾಂಗ್ರೆಸ್ ಮಾರಿದ್ದು ಬಿಜೆಪಿ; ಮಹಮ್ಮದ್ ಬಡಗನ್ನೂರು

 ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಕಾಂಗ್ರೆಸ್ ಎಂದು ಕಾಂಗ್ರೆಸ್ಸನ್ನು ದೂರುವವನಿಗೂ ಗೊತ್ತಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಬಡವರಿಗೆ ಬದುಕಲು ಸಾಧ್ಯ ಎಂದು ಇಂದಿರಾಗಾಂಧಿಯನ್ನು, ನೆಹರೂ ಅವರನ್ನು ಹಿಯ್ಯಾಳಿಸುವವನಿಗೆ ಗೊತ್ತಿದೆ ಎಲ್ಲವೂ ಗೊತ್ತಿದ್ದು ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುತ್ತಿರುವವರು ದೆಶದ ಇತಿಹಾಸವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು ಹೇಳಿದರು.

ಹುಟ್ಟುವಾಗಲೇ ಚಿನ್ನದ ಚಮಚ ಬಾಯಿಗೆ ಇಟ್ಟುಕೊಂಡುಕೊಂಡು ಬಂದ ದೇಶದ ಜನರಿಗೋಸ್ಕರ ಅನೇಕ ವರ್ಷ ಜೈಲು ವಾಸ ಅನುಭವಿಸಿದರು. ಉಳುವವನಿಗೇ ಭೂಮಿಯನ್ನು ಕೊಟ್ಟ ಇಂದಿರಾಗಾಂಧಿಯನ್ನು ಗುಂಡಿಟ್ಟು ಕೊಂದರು, ಭಾರತವನ್ನು ವಿಶ್ವಗುರು ಮಾಡಲು ಹೊರ ರಾಜೀವ ಗಾಂಧಿ ದೇಶಕ್ಕಾಗಿ ರಕ್ತ ಸಾಕ್ಷಿಯಾದರು ಇವರೆಲ್ಲರ ತ್ಯಾಗದ ಫಲವಾಗಿ ಇಂದು ಭಾರತ ಕಂಗೊಳಿಸುತ್ತದೆ ವಿನಾ ಸಾರ್ವರ್ಕರ್ ಸಂತತಿಗಳಿಂದ ದೇಶ ಉದ್ದಾರ ಆಗಿಲ್ಲ. ಕಾಂಗ್ರೆಸ್ ಕಟ್ಟಿದ ಭವ್ಯ ಭಾರತವನ್ನು ಇಂದು ಅಧಿಕಾರದಲ್ಲಿರುವ ಬಿಜೆಪಿ ಒಂದೊಂದಾಗಿ ಮಾರಾಟ ಮಾಡುತ್ತಿದೆ. ದೇಶ ಉಳಿಯಬೇಕಾದರೆ ಬಿಜೆಪಿ ತೊಳಗಬೆಕು. ಬಿಜೆಪಿ ಮುಕ್ತ ಕರ್ನಾಟಕ, ಬಿಜೆಪಿ ಮುಕ್ತ ಭಾರತವಾಗುವಲ್ಲಿ ಪ್ರತೀಯೊಬ್ಬ ಪ್ರಜೆಯೂ ಚಿಂತಿಸಬೇಕಿದೆ. ಕಾಂಗ್ರೆಸ್ ಬೆಂಬಲಿಸುವ ಮೂಲಕ ನಾವು ಹಿರಿಯರ ತ್ಯಾಗಕ್ಕೆ ಗೌರವ ಕೊಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಶಾಸಕರಾದವರಿಗೆ ನೈತಿಕತೆ ಬೇಕು

ಚುನಾವಣೆಗೆ ಎಲ್ಲರಿಗೂ ಸ್ಪರ್ದಿಸಬಹುದು ಆದರೆ ಆತನಿಗೆ ಕನಿಷ್ಟ ನೈತಿಕತೆಯಾದರೂ ಬೇಕಾಗುತ್ತದೆ. ನೈತಿಕತೆಯಲ್ಲಿ ಬಲಹೀನನಾದವನಿಗೆ ಜನರ ಸೇವೆಯನ್ನು ಹೇಗೆ ಮಾಡಲು ಸಾಧ್ಯವಾಗುತ್ತದೆ. ಪುತ್ತೂರಿನಲ್ಲಿ ಇದೇ ಕಾರಣಕ್ಕೆ ಟಿಕೆಟ್ ಕೊಡಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಜನಪ್ರತಿನಿಧಿಯಾದವರು ಚುನಾವಣೆ ಸಂದರ್ಬದಲ್ಲಿ ತಮ್ಮ ಬಂಡವಾಳ ಬಯಲು ಆಗದಂತೆ ನ್ಯಾಯಾಲಯದಿಂದ ಸ್ಟೇ ಆರ್ಡರ್ ತರುತ್ತಿರುವುದು ನೈತಿಕತೆ ಕುಸಿದಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಸೇರ್ಪಡೆ

ಇದೇ ಸಂಧರ್ಭದಲ್ಲಿ ಬಿಜೆಪಿ ಮುಖಂಡ, ಆರ್ಯಾಪು ಗ್ರಾಪಂ ಮಾಜಿ ಸದಸ್ಯ ಜಬ್ಬಾರ್ ಸಂಪ್ಯ ತಮ್ಮ ಅಭಿಮಾನಿಗಳ ಜೊತೆಗೆ ಅಶೋಕ್ ರೈ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಹೇಮನಾಥ ಶೆಟ್ಟಿ ಕಾವು, ಎಂ ಎಸ್ ಮಹಮ್ಮದ್, ನಗರ ಪ್ರಚಾರ ಸಮಿತಿ ಅಧ್ಯಕ್ಷ ಪ್ರಸನ್ನ ಶೆಟ್ಟಿ ಸಿಝ್ಲರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದಾಲಿ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿಗೆ ಶಿಲಾನ್ಯಾಸ | 35 ಲಕ್ಷ ರೂ. ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಮಠಂದೂರು

Posted by Vidyamaana on 2023-03-11 09:04:59 |

Share: | | | | |


ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿಗೆ ಶಿಲಾನ್ಯಾಸ | 35 ಲಕ್ಷ ರೂ. ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಮಠಂದೂರು

ಪುತ್ತೂರು: ಅತ್ಯಂತ ಪಾವಿತ್ರ್ಯತೆ ಹೊಂದಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿ ಬಹುದಿನಗಳ ಬೇಡಿಕೆಯಾಗಿದ್ದು, ಇದೀಗ 35 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನ ತರಿಸಿಕೊಂಡು, ಇನ್ನಷ್ಟು ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿ ಅಭಿವೃದ್ಧಿಗಾಗಿ ಪುಡಾದ 35 ಲಕ್ಷ ರೂ. ಅನುದಾನದ ಕಾಮಗಾರಿಗೆ ಶನಿವಾರ ತೆಂಗಿನಕಾಯಿ ಒಡೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರುಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಪುಷ್ಕರಿಣಿ ಧಾರ್ಮಿಕ ಮಹತ್ವವನ್ನು ಹೊಂದಿದೆ. ಆದ್ದರಿಂದ ಈ ಕೆರೆಯನ್ನು ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಹಂತಹಂತವಾಗಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದರು

.ಬನ್ನೂರು ಕೆರೆಗೆ 1.75 ಕೋಟಿ ಅಂದಾಜು ಪಟ್ಟಿ ತಯಾರಿ : ಭಾಮಿ ಅಶೋಕ್ ಶೆಣೈ

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್‍ ಶೆಣೈ ಮಾತನಾಡಿ, ನಗರ ಸೇರಿದಂತೆ ಹೊರವಲಯದ ಹಲವು ಕೆರೆಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಈಗಾಗಲೇ ಬನ್ನೂರು ಕೆರೆ ಅಭಿವೃದ್ಧೀಗೆ 1.75 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ಪ್ರಕ್ರಿಯೆ ಕೇವಲ ನಾಲ್ಕು ದಿನಗಳಲ್ಲಿ ನಿರ್ಐಯ ತೆಗೆದುಕೊಂಡು ಮಾಡಲಾಗಿದೆ ಎಂದ ಅವರು, ದೇವಸ್ಥಾನದ ಕೆರೆ ಅಭಿವೃದ್ಧಿಗೆ 35 ಲಕ್ಷ ರೂ. ಅನುದಾನ ಪುಡಾ ವತಿಯಿಂದ ನೀಡಲಾಗಿದ್ದು, ಅನುದಾನ ನೀಡುವಲ್ಲಿ ಶಾಸಕ ಸಂಜೀವ ಮಠಂದೂರು ಅವರು ಪಾತ್ರ ಮಹತ್ವದ್ದಾಗಿದೆ. ಇನ್ನಷ್ಟು ಅನುದಾನ ಒದಗಿಸುವ ಭರವಸೆ ನೀಡಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಚಕ್ರದಿಂದ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಪುಷ್ಕರಣಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡುವಲ್ಲಿ ಪುತ್ತೂರು ಶಾಸಕರು ಸೇರಿದಂತೆ ಎಲ್ಲರೂ ಕೈಜೋಡಿಸುವಿಕೆಯಿಂದ ಆಗಿದೆ. ಒಟ್ಟಾರೆಯಾಗಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಸರಿಯಾದ ರೀತಿಯಲ್ಲಿ ಸಾಗುತ್ತಿದೆ ಎಂದರು.

ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್‍ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, , ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಲಾಷ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ರಮೇಶ್‍ ಭಟ್, ಜಯಶ್ರೀ ಶೆಟ್ಟಿ, ನ್ಯಾಯವಾದಿ ಚಿದಾನಂದ ಬೈಲಾಡಿ ಮತ್ತಿತರರು ಉಪಸ್ಥಿತರಿದ್ದರು.

ಅಪೂರ್ವ ಪ್ರಾರ್ಥನೆ ಹಾಡಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ವಂದಿಸಿದರು. ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ, ರಾಮದಾಸ್ ಗೌಡ, ವೀಣಾ ಬಿ.ಕೆ.ಶೇಖರ್ ನಾರಾವಿ, ಮ್ಯಾನೇಜರ್ ಹರೀಶ್‍ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು



Leave a Comment: