ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಸುದ್ದಿಗಳು News

Posted by vidyamaana on 2024-07-03 08:00:29 |

Share: | | | | |


ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ : ಎರಡು ವರ್ಷಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇದಿಸಿದ್ದಾರೆ.


ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ನಡೆದ ಸುಮಾರು 1,48,000 ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ 30,000 ರೂ. ಸೇರಿ ಒಟ್ಟು 1,78,000 ರೂ. ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು, ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಿದ್ದು, ಪ್ರಸ್ತುತ ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಕಳವು ಮಾಡಿದ ಸೊತ್ತುಗಳನ್ನು ಪತ್ತೆ ಮಾಡಿ ಸ್ವಾದೀನಪಡಿಸಿಕೊಳ್ಳಲಾಗಿದೆ.

ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಸಿ ಬಿ ರಿಷ್ಯಂತ್ ಐಪಿಎಸ್ ರವರು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಎಂ ಕೆ.ಎಸ್.ಪಿ.ಎಸ್ ಮತ್ತು ರಾಜೇಂದ್ರ ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ವಿಜಯ ಪ್ರಸಾದ್, ಪ್ರಭಾರ ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ ಮತ್ತು ಸುಳ್ಯ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ಕೆ ರವರ ನೇತೃತ್ವದಲ್ಲಿ, ಸಂತೋಷ್ ಬಿ ಪಿ ಪೊಲೀಸ್ ಉಪನಿರೀಕ್ಷಕರು, ಬೆಳ್ಳಾರೆ ಪೊಲೀಸ್ ಠಾಣೆ ಹಾಗೂ ಬೆಳ್ಳಾರೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ನವೀನ ಕೆ. ಚಂದ್ರಶೇಖರ್ ಗೌಡ, ಸಂತೋಷ್ ಜಿ. ಜೀಪು ಚಾಲಕ ಪುರಂದರ ಹಾಗೂ ಬೆರಳುಮುದ್ರೆ ಘಟಕದ ಪ್ರಶಾಂತ್ ಹೊಸಮನಿ ಮತ್ತು ಸಚಿನ್ ಬಿ. ಬಿ ರವರನ್ನೊಳಗೊಂಡು ವಿಶೇಷ ತನಿಖಾ ತಂಡವು ಕರ್ತವ್ಯ ನಿರ್ವಹಿಸಿರುತ್ತದೆ.

ಸದ್ರಿ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯನ್ನು ವ್ಯಕ್ತವಾಗಿದೆ.

 Share: | | | | |


ಪುತ್ತೂರು ಸರಕಾರಿ ಆಸ್ಪತ್ರೆಗೆ ರೇಡಿಯಾಲಜಿಸ್ಟ್ ಮತ್ತು ಪ್ರಸೂತಿ ತಜ್ಞರ ನೇಮಕ

Posted by Vidyamaana on 2023-07-07 06:01:53 |

Share: | | | | |


ಪುತ್ತೂರು ಸರಕಾರಿ ಆಸ್ಪತ್ರೆಗೆ ರೇಡಿಯಾಲಜಿಸ್ಟ್ ಮತ್ತು ಪ್ರಸೂತಿ ತಜ್ಞರ ನೇಮಕ

ಪುತ್ತೂರು; ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಮತ್ತು ಪ್ರಸೂತಿ ವೈದರನ್ನು ನೇಮಕ ಮಾಡುವಂತೆ ಆಗ್ರಹಿಸಿ ವಿಧಾನಸಭಾ ಅಧಿವೇಶನದಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ಯವರು ವಿಷಯ ಪ್ರಸ್ತಾಪಿಸಿದ್ದು ಸರಕಾರಿ ಆಸ್ಪತ್ರೆಯ ಸಮಸ್ಯೆಯಗಳ ಬಗ್ಗೆ ಸರಕಾರದ ಗಮನ ಸೆಳೆದಿದ್ದಾರೆ.

ಆಸ್ಪತ್ರೆಗೆ ರೇಡಿಯಾಲಜಿಸ್ಟ್ ಅಗತ್ಯವಾಗಿ ಬೇಕಾಗಿದ್ದು , ಆಸ್ಪತ್ರೆಯಲ್ಲಿ ಒಬ್ಬರು ಪ್ರಸೂತಿ ತಜ್ಞರಿದ್ದು ಅವರು ಹೆಸರಿಗೆ ರಜೆ ಮೆಲೆ ತೆರಳಿದ ಕಾರಣ ಹೆರಿಗೆ ಮಾಡಿಸಲುವೈದ್ಯರು ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿರುತ್ತದೆ. ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿರುವ ಏಕೈಕ ದೊಡ್ಡ ಸರಕಾರಿ ಆಸ್ಪತ್ರೆಯಗಿರುವ ಕಾರಣ ಸರಕಾರಿ ಆಸ್ಪತ್ರೆಗೆ ಹೆರಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು ವೈದ್ಯರಿಲ್ಲದ ಕಾರಣ ಸಮಸ್ಯೆ ಉಂಟಾಗಿದೆ. ಸರಕಾರ ತಕ್ಷಣವೇ ನೇಮಕ ವೈದ್ಯರನ್ನು ನೇಮಕ ಮಾಡುವ ಮೂಲಕ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಅದಿವೇಶನ ಶೂನ್ಯ ವೇಳೆಯಲ್ಲಿ ಶಾಸಕರು ಈ ಪ್ರಸ್ತಾಪವನ್ನು ಮಾಡಿದ್ದರು.

ಮಲಪ್ಪುರಂ ದೋಣಿ ದುರಂತ: ಒಂದೇ ಕುಟುಂಬದ 12 ಸದಸ್ಯರು ಸಹಿತ 22 ಮಂದಿ ಮೃತ್ಯು. ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂ ಪರಿಹಾರ ಘೋಷಣೆ

Posted by Vidyamaana on 2023-05-08 09:50:17 |

Share: | | | | |


ಮಲಪ್ಪುರಂ ದೋಣಿ ದುರಂತ: ಒಂದೇ ಕುಟುಂಬದ 12 ಸದಸ್ಯರು ಸಹಿತ 22 ಮಂದಿ ಮೃತ್ಯು. ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂ ಪರಿಹಾರ ಘೋಷಣೆ

ಮಲಪ್ಪುರಂ: ಮಲಪ್ಪುರಂನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 22 ಮಂದಿಯನ್ನು ಬಲಿ ತೆಗೆದುಕೊಂಡ ಪ್ರವಾಸಿ ದೋಣಿ ದುರಂತದ ನ್ಯಾಯಾಂಗ ತನಿಖೆಗೆ ಕೇರಳ ಸರ್ಕಾರವು ಸೋಮವಾರ ಘೋಷಿಸಿದೆ. ಅಲ್ಲದೆ ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರವನ್ನು ನೀಡಲು ನಿರ್ಧರಿಸಿದೆ.ತಿರುರಂಗಂಡಿ ತಾಲೂಕು ಆಸ್ಪತ್ರೆ ಮತ್ತು 12 ಸದಸ್ಯರನ್ನು ಕಳೆದುಕೊಂಡ ಕುನ್ನುಮ್ಮೆಲ್ ಕುಟುಂಬಕ್ಕೆ ಭೇಟಿ ನೀಡಿದ ನಂತರ ಇಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅಪಘಾತವನ್ನು ‘ದುರಂತ’ ಎಂದು ಬಣ್ಣಿಸಿದರು. ಚಿಕಿತ್ಸೆಯಲ್ಲಿರುವವರ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದರು.ತಾನೂರಿನಲ್ಲಿ ನಡೆದ ಸರ್ವಪಕ್ಷಗಳ ಸಭೆಯ ನಂತರ ವಿಜಯನ್ ಅವರು ತನಿಖೆ ಮತ್ತು ಪರಿಹಾರವನ್ನು ಘೋಷಿಸಿದರು. ಸಭೆಯಲ್ಲಿ ವಿರೋಧ ಪಕ್ಷದ ಹಿರಿಯ ನಾಯಕರು ಭಾಗವಹಿಸಿದ್ದರು.

2023-24ನೇ ಸಾಲಿನ ಶೈಕ್ಷಣಿಕ ಶಾಲಾ ವೇಳಾಪಟ್ಟಿ ಪ್ರಕಟ ಮೊದಲನೇ ಶೈಕ್ಷಣಿಕ ಅವಧಿ ಮೇ 29 ರಿಂದ ಆರಂಭ

Posted by Vidyamaana on 2023-04-02 02:14:11 |

Share: | | | | |


2023-24ನೇ ಸಾಲಿನ ಶೈಕ್ಷಣಿಕ ಶಾಲಾ ವೇಳಾಪಟ್ಟಿ ಪ್ರಕಟ ಮೊದಲನೇ ಶೈಕ್ಷಣಿಕ ಅವಧಿ ಮೇ 29 ರಿಂದ ಆರಂಭ

ಪುತ್ತೂರು : 2023-24ನೇ ಸಾಲಿನ ಶೈಕ್ಷಣಿಕ ಸಾಲಿನ ಶಾಲಾ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ಈ ಪ್ರಕಟಣೆಯ ಪ್ರಕಾರ ಈ ಸಾಲಿನ ಮೊದಲನೇ ಶೈಕ್ಷಣಿಕ ಅವಧಿಯು ಮೇ 29 ರಿಂದ ತರಗತಿಗಳು ಆರಂಭವಾಗಲಿವೆ.

ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಮಾರ್ಗಸೂಚಿ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ರಾಜ್ಯಾದ್ಯಂತ 2023-24ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುತ್ತಿದ್ದು, ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ.

ಈ ಮಾರ್ಗಸೂಚಿಯಲ್ಲಿ ವಾರ್ಷಿಕ/ ಮಾಹೆವಾರು ಪಾಠ ಹಂಚಿಕೆ, ಪತ್ಯೇತರ ಚಟುವಟಿಕೆಗಳು, ಪರೀಕ್ಷೆ ಮತ್ತು ಮೌಲ್ಯಾಂಕನ ವಿಶ್ಲೇಷಣೆ, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ ಸಿಸಿಇ ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯ ಆಗುವಂತೆ ಶೈಕ್ಷಣಿಕ ಅವಧಿಗಳು, ರಜಾದಿನಗಳನ್ನು ಯೋಜಿಸಿ ಸಿದ್ಧಪಡಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

2023-24ನೇ ಮೊದಲನೇ ಶೈಕ್ಷಣಿಕ ಅವಧಿ ಮೇ 29 ರಿಂದ ಅಕ್ಟೋಬರ್ 7 ರವರಗೆ ನಡೆಯಲಿದೆ. ಎರಡನೇ ಶೈಕ್ಷಣಿಕ ಅವಧಿ ಅಕ್ಟೋಬರ್ 25, 2023 ರಿಂದ ಆರಂಭವಾಗಿ ಏಪ್ರಿಲ್ 10, 2024 ಕ್ಕೆ ಮುಕ್ತಾಯವಾಗಲಿದೆ.

ಇನ್ನು ಮಧ್ಯಂತರ ರಜೆ 2023ರ ಅಕ್ಟೋಬರ್ 8 ರಿಂದ ಅಕ್ಟೋಬರ್ 24 ರವರೆಗೆ ಇರಲಿದೆ. ಬೇಸಿಗೆ ರಜೆ 2024ರ ಏಪ್ರಿಲ್ 11 ರಿಂದ ಮೇ 28 ರ ವರೆಗೆ ನೀಡಲಾಗಿದೆ.

ಪುತ್ತೂರು : ಆಯುರ್ವೇದ ವೈದ್ಯಕೀಯ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ಡಾ.ಖದೀಜತ್ ದಿಲ್ಶಾನ

Posted by Vidyamaana on 2024-02-10 22:11:11 |

Share: | | | | |


ಪುತ್ತೂರು : ಆಯುರ್ವೇದ ವೈದ್ಯಕೀಯ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ  ಡಾ.ಖದೀಜತ್ ದಿಲ್ಶಾನ

ಪುತ್ತೂರು: ಪ್ರತಿಷ್ಠಿತ ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಡೆಸಿದ ಆಯುರ್ವೇದ ವೈದ್ಯಕೀಯ (ಬಿ.ಎ.ಎಂ.ಎಸ್) ಪದವಿ ಪರೀಕ್ಷೆಯಲ್ಲಿ ಕೆಯ್ಯೂರಿನ ಮಾಡಾವು ನಿವಾಸಿ ಡಾ.ಖದೀಜತ್ ದಿಲ್ಶಾನ ರ್ಯಾಂಕ್ ಗಳಿಸಿದ್ದಾರೆ.


ಆಯುರ್ವೇದ ವಿಭಾಗದ ಚರಕ ಸಂಹಿತಾ ಪೂರ್ವಾರ್ಧದಲ್ಲಿ ಒಂದನೇ ರ್ಯಾಂಕ್, 

ಮೌಲಿಕ ಸಿದ್ಧಾಂತದಲ್ಲಿ ಎರಡನೇ ರ್ಯಾಂಕ್, ರಿಸರ್ಚ್ ಮೆಥಾಡಾಲಜಿ ವಿಷಯದಲ್ಲಿ ಮೂರನೇ ರ್ಯಾಂಕ್ ಪಡೆದಿದ್ದಾರೆ.


ಡಾ.ಖದೀಜತ್ ದಿಲ್ಶಾನ ಅವರು ಪ್ರಸ್ತುತ ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಎಂ.ಯಸ್. ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಮೊಹಮ್ಮದ್ ಕುಂಙಿ ಮತ್ತು ನೆಬಿಸಾ ದಂಪತಿ ಸುಪುತ್ರಿ.

ಶಿರಾಡಿ ಘಾಟಿಯಲ್ಲಿ ಇನ್ನೋವಾ ಕಾರು ಭೀಕರ ಅಪಘಾತ:ಮೇಲ್ಕಾರ್ ಮೂಲದ ತಾಯಿ-ಮಗ ಮೃತ್ಯು; ಹಲವರಿಗೆ ಗಂಭೀರ

Posted by Vidyamaana on 2024-05-21 11:07:56 |

Share: | | | | |


ಶಿರಾಡಿ ಘಾಟಿಯಲ್ಲಿ ಇನ್ನೋವಾ ಕಾರು ಭೀಕರ ಅಪಘಾತ:ಮೇಲ್ಕಾರ್ ಮೂಲದ ತಾಯಿ-ಮಗ ಮೃತ್ಯು; ಹಲವರಿಗೆ ಗಂಭೀರ

ಸಕಲೇಶಪುರ: ಲಾರಿ ಮತ್ತು ಕಾರು ಡಿಕ್ಕಿಯಾಗಿ ತಾಯಿ-ಮಗ ಮೃತಪಟ್ಟ ಘಟನೆ ಶಿರಾಡಿ ಘಾಟ್ ನಲ್ಲಿ ನಡೆದಿದೆ.ಮೃತರನ್ನು ಪಾಣೆಮಂಗಳೂರು ಸಮೀಪದ ಬೊಂಡಾಲ ನಿವಾಸಿ ಶಬೀರ್ ಎಂಬವರ ಪತ್ನಿ ಸಫಿಯಾ(50) ಮತ್ತು ಪುತ್ರ ಮುಹಮ್ಮದ್ ಶಫೀಕ್(20) ಎಂದು ಗುರುತಿಸಲಾಗಿದೆ.ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರಿಗೆ

ನಾನು ನಿಶ್ಚಿಂತೆಯಿಂದ ಇರುತ್ತೇನೆ - ಮೌನಕ್ಕಿರುವ ಬೆಲೆ ಮಾತಿಗಿಲ್ಲ.. ಡಾ. ವೀರೇಂದ್ರ ಹೆಗ್ಗಡೆ

Posted by Vidyamaana on 2023-10-30 14:31:24 |

Share: | | | | |


ನಾನು ನಿಶ್ಚಿಂತೆಯಿಂದ ಇರುತ್ತೇನೆ - ಮೌನಕ್ಕಿರುವ ಬೆಲೆ ಮಾತಿಗಿಲ್ಲ.. ಡಾ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ : ನಾನು ನಿಶ್ಚಿಂತೆಯಿಂದ ಇರುತ್ತೇನೆ. ಮೌನಕ್ಕಿರುವ ಬೆಲೆ ಮಾತಿಗಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಧರ್ಮಸಂರಕ್ಷಣಾ ‌ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.


ನಮಗೆ ಸಾಕಷ್ಟು ಪ್ರಸಾದ ಬಂದಿದೆ. ಹಲವು ದೇವಸ್ಥಾನದಿಂದ ನಮಗೆ ಪ್ರಸಾದ ಬಂದಿದೆ. ನಿಜವಾದ ಪ್ರೀತಿ, ಭಕ್ತಿ ಇಟ್ಟಿದ್ದಕ್ಕೆ ಧನ್ಯವಾದಗಳು. ನಿಮಗೆ, ನಿಮ್ಮ ಕುಟುಂಬಕ್ಕೆ ಧನ್ಯವಾದಗಳು. ಮೌನಕ್ಕಿರೋ ಬೆಲೆ , ಮಾತಿಗಿಲ್ಲ. ನಾನು ಅವರಾಗೆ ಮಾತಾಡಿದ್ರೆ ವ್ಯತ್ಯಾಸ ಗೊತ್ತಾಗೊದಿಲ್ಲ. ಸ್ವಾಮೀಜಿಗಳು ಮಂತ್ರಾಕ್ಷತೆ ಕೊಟ್ಟು ನಿಮ್ಮೊಂದಿಗೆ ಇದ್ದಾರೆ ಅಂದಿದ್ದಾರೆ. ನಿಮ್ಮೊಂದಿಗೆ ನಾನು ಇದ್ದೇನೆ ಎಂದು ಅಭಯ ನೀಡಿದರು.


ನನ್ನ ಪತ್ನಿ, ಸಹೋದರ, ಅವರ ಪುತ್ರರು ಸಾಕಷ್ಟು ನೋವುಂಡಿದ್ದಿದ್ದಾರೆ. ಮಳೆಯಿಂದ ಎಲ್ಲಾ ಕಷ್ಟ ಕಳೆದುಹೋಗಲಿ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಟೀಕೆ ಆಪತ್ತು ಬಂದಾಗ ನೀವು ಮಾಡಿದ ಪೂಜೆ, ಪ್ರಾರ್ಥನೆಗೆ ಬಲ ಬಂದಿದೆ. ನಾನು ನಿಶ್ಚಿಂತೆಯಿಂದ ಇರುತ್ತೇನೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರು ಸೇರಿ ಎಲ್ಲರೂ ಬೆಂಬಲಿಸಿದ್ದಾರೆ. ನಿಮ್ಮ ತ್ಯಾಗ ಎಲ್ಲವೂ ನಮ್ಮ ಸಂಪತ್ತು. ಮಹಾರಾಷ್ಟ್ರದಿಂದ ಕೇರಳದವರೆಗೆ ದೇವಸ್ಥಾನಕ್ಕೆ ಸಹಾಯ ಮಾಡಿದ್ದೇವೆ. ಹಿಂದೆಗಿಂತ ದುಪ್ಪಟ್ಟು ಸೇವೆ ಮಾಡುತ್ತೇನೆ ಎಂದು ಪೂಜ್ಯರು ಹೇಳಿದರು.


ಹೆಗ್ಗಡೆಯವರಪರವಾಗಿನಾವಿದ್ದೇವೆ


ಸಭೆ ಮುಕ್ತಾಯದ ಬಳಿಕ ಸನಾತನ ಪರಂಪರೆಯ ರಕ್ಷಣೆಗೆ ನಾವಿದ್ದೇವೆ. ಧರ್ಮಸ್ಥಳ ಪರಂಪರೆಯ ರಕ್ಷಣೆಗೆ, ಧರ್ಮಸ್ಥಳದ ಪರವಾಗಿ, ಹೆಗ್ಗಡೆಯವರ ಪರವಾಗಿ ನಾವಿದ್ದೇವೆ ಎಂದು ನೆರೆದಿದ್ದ ಭಕ್ತರು ಘೋಷಣೆ ಕೂಗಿದರು. ಹರಶಂಭೋ, ಮಹಾದೇವ, ಶಿವಶಂಕರ, ನೀಲಕಂಠ ಸಮೋಸ್ತುತೆ ಎಂದು ಪ್ರಾರ್ಥನೆ ಮೊಳಗಿಸಿದರು.



Leave a Comment: