ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ನದಿಗೆ ಹಾರಿ ಆತ್ಮಹತ್ಯೆಗೈದ ಪುತ್ತೂರಿನ ವಿಘ್ನೇಶ್ ಕಾಮತ್

Posted by Vidyamaana on 2023-03-26 10:04:37 |

Share: | | | | |


ನದಿಗೆ ಹಾರಿ ಆತ್ಮಹತ್ಯೆಗೈದ ಪುತ್ತೂರಿನ  ವಿಘ್ನೇಶ್ ಕಾಮತ್

ಪುತ್ತೂರು: ಇಲ್ಲಿನ ಕೋರ್ಟ್ ರೋಡಿನಲ್ಲಿರುವ ಅಂಗಡಿಯೊಂದರ ಮಾಲಕ ದಿವಂಗತ ವಿಠಲ್ ಕಾಮತ್ ಅವರ ಪುತ್ರ ವಿಘ್ನೇಶ್ ಕಾಮತ್ (೩೨) ಅವರು ಭಾನುವಾರ ಮಧ್ಯಾಹ್ನ ನೇತ್ರಾವತಿ ನದಿಗೆ ಹಾರಿ ಆತಹತ್ಯೆಗೈದಿದ್ದಾರೆ.

ಕೆಮ್ಮಿಂಜೆ ನಿವಾಸಿಯಾಗಿರುವ ಇವರು, ಕೋರ್ಟ್ ರೋಡಿನಲ್ಲಿ ಜನರಲ್ ಸ್ಟೋರ್ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಯತ್ನ ನಡೆಸಿದ್ದರು ಎಂದು ಹೇಳಲಾಗಿದೆ.ನೇತ್ರಾವತಿ ಸೇತುವೆಯ ಬಳಿ ದ್ವಿಚಕ್ರ ಜೂಪಿಟಾರ್ (KA21v3955) ಇದ್ದು ಯಾರು ಇಲ್ಲದ ಬಗ್ಗೆ ಸಂಶಯಗೊಂಡ ಸ್ಥಳೀಯ ಈಜುಗಾರರಾದ ಇಬ್ರಾಹಿಂ, ಮುಹಮ್ಮದ್ ಮಮ್ಮು ನೇತೃತ್ವದ ಯುಕವರ ತಂಡ ನೇತ್ರವತಿ ನದಿಯ ಅಸುಪಾಸು ಹುಡುಕಾಡಿದಾಗ  ನದಿಯಲ್ಲಿ ಮೃತದೇಹಯೊಂದು ನದಿಯಲ್ಲಿ ತೆಲುತೀತು ನಂತರ ಯುವಕರ ತಂಡ ನೀರಿಗೆ  ಇಳಿದು ನೀರಿನಿಂದ ಮೃತ ದೇಹವನ್ನು ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರು  ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯ ಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.ಮೃತರು ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ.


ಏ. 19ರಂದು (ಇಂದು ) ಜೈಲಿನಿಂದಲೇ SDPI ಅಭ್ಯರ್ಥಿ ಯಾಗಿ ಶಾಫಿ ನಾಮಪತ್ರ ಸಲ್ಲಿಕೆ

Posted by Vidyamaana on 2023-04-18 14:30:38 |

Share: | | | | |


ಏ. 19ರಂದು (ಇಂದು ) ಜೈಲಿನಿಂದಲೇ SDPI ಅಭ್ಯರ್ಥಿ ಯಾಗಿ ಶಾಫಿ ನಾಮಪತ್ರ ಸಲ್ಲಿಕೆ

ಪುತ್ತೂರು: ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ ಏ. 19ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಯೇ ಇರುವುದಿಲ್ಲ ಎನ್ನುವುದೇ ಇಲ್ಲಿನ‌ ವಿಶೇಷ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಶಾಫಿ ಬೆಳ್ಳಾರೆ, ಪುತ್ತೂರು ಎಸ್.ಡಿ.ಪಿ.ಐ. ಅಭ್ಯರ್ಥಿ.   ಶಾಫಿ ಬೆಳ್ಳಾರೆ ಯವರ ಪರವಾಗಿ ಎಲೆಕ್ಷನ್ ಏಜೆಂಟ್ ಅಬ್ದುಲ್ ರಹಿಮಾನ್ ನಾಮಪತ್ರ ಸಲ್ಲಿಸಲಿದ್ದಾರೆ.

    ಈ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರುಗಳಾದ  ರಿಯಾಜ್ ಪರಂಗಿಪೇಟೆ, ಅಲ್ಪಾನ್ಸ್ ಫ್ರಾಂಕೋ, ಅಬ್ದುಲ್ ಲತೀಫ್, ಅಬ್ದುಲ್ ಮಜೀದ್, ರಿಯಾಜ್ ಕಡಂಬು, ಅನ್ವರ್ ಸಾದಾತ್, ಇಬ್ರಾಹಿಂ ಸಾಗರ್ ಮೊದಲಾದವರು ಆಗಮಿಸಲಿದ್ದಾರೆ.

    ಎಪಿಎಂಸಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಕಾಲ್ನಡಿಗೆ ಮೆರವಣಿಗೆ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ ತಿಳಿದು ಬಂದಿದೆ.

ಇಂದು ಸಂಜೆ ಪುತ್ತಿಲ ಅಭಿಮಾನಿಗಳ ನಡಿಗೆ ಮಹಾಲಿಂಗೇಶ್ವರನ ನಡೆಗೆ

Posted by Vidyamaana on 2023-05-21 05:37:23 |

Share: | | | | |


ಇಂದು ಸಂಜೆ  ಪುತ್ತಿಲ ಅಭಿಮಾನಿಗಳ ನಡಿಗೆ ಮಹಾಲಿಂಗೇಶ್ವರನ ನಡೆಗೆ

ಪುತ್ತೂರು: ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಕಾಲ್ನಡಿಗೆ ಜಾಥಾ ಹಲವು ಕಾರಣಗಳಿಂದ ಗಮನ ಸೆಳೆದಿದೆ.

ಕಾರ್ಯಕ್ರಮ ಶಿಸ್ತುಬದ್ಧವಾಗಿ ಮೂಡಿಬರಲು ಸಾಕಷ್ಟು ತಯಾರಿಗಳನ್ನು ನಡೆಸುವ ಜೊತೆಗೆ, ಇಲ್ಲಿ ನಡೆಯುವ ಸಮಾರಂಭ ಮುಂದಿನ ಹಲವು ಹೆಜ್ಜೆಗಳನ್ನು ಮುಂದಿಡುವಲ್ಲಿ ಮಹತ್ವಪೂರ್ಣ ಎನಿಸಿಕೊಂಡಿದೆ.

ಕಾರ್ಯಕರ್ತರಿಗೆ, ಮತದಾರರಿಗೆ ಕೃತಜ್ಞತೆಯ ಜೊತೆಗೆ ದರ್ಬೆ ವೃತ್ತದಿಂದ ಮಹಾಲಿಂಗೇಶ್ವರ ದೇವರ ನಡೆಯವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಚುನಾವಣೆಯುದ್ಧಕ್ಕೂ ಬೆನ್ನು ಸಹಾಯವಾಗಿ ನಿಂತು ಕಾಪಾಡಿದ ಮಹಾಲಿಂಗೇಶ್ವರನಿಗೆ ಸಮರ್ಪಣಾ ಭಾವದಿಂದ ನಡೆಯುವ ಕಾರ್ಯಕ್ರಮವಿದು. ಆದರೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ನೀಡಿರುವ ಸೂಚನೆಗಳು ಗಮನ ಸೆಳೆಯುತ್ತಿವೆ.

ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ನೀಡಿರುವ ಸೂಚನೆ ಹೀಗಿವೆ:

ಕಾಲ್ನಡಿಗೆ ಜಾಥಾದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಬರಿಗಾಲಿನಲ್ಲಿ ನಡೆಯಲಿದ್ದಾರೆ. ಇವರ ಜೊತೆ ಬರಿಗಾಲಿನಲ್ಲಿ ಬರಲು ಕಾರ್ಯಕರ್ತರಿಗೆ  ಅವಕಾಶವಿದೆ. ಹಾಗೆಂದು ನಿರ್ಬಂಧವಿಲ್ಲ ಎನ್ನುವುದನ್ನು ಕೂಡ ಗಮನಿಸಬೇಕು.

ಮಹಾಲಿಂಗೇಶ್ವರ ದೇವರಿಗೆ ಜಯಘೋಷ ಹೊರತುಪಡಿಸಿ ಬೇರಾವುದೇ ಘೋಷಣೆಗಳನ್ನು ಜಾಥಾದುದ್ದಕ್ಕೂ ಕೂಗುವಂತಿಲ್ಲ. ಇದರೊಂದಿಗೆ ಭಜನೆ, ಓಂ ನಮಃ ಶಿವಾಯ, ಮಂತ್ರ ಪಠಣಕ್ಕಷ್ಟೇ ಅವಕಾಶ.

ಮಾಲಾರ್ಪಣೆ, ಹಾರಾರ್ಪಣೆಗೂ ಅವಕಾಶ ಇಲ್ಲ.

ದರ್ಬೆಯಿಂದ ಸಮಾರೋಪ ಆಗುವ ಮಹಾಲಿಂಗೇಶ್ವಲರ ದೇವರ ರಥಬೀದಿಯವರೆಗಿನ ಜಾಥಾದಲ್ಲಿ ನೂಕುನುಗ್ಗಲು ಆಗದಂತೆ ಶಿಸ್ತಿನಿಂದ ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳಬೇಕು.

ಬಿಳಿ ಬಣ್ಣದ ಶರ್ಟ್ ಮತ್ತು ಕೇಸರಿ ಪಂಚೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ದಿಕ್ಸೂಚಿ ಭಾಷಣಗಾರನಾರು?

ಮತದಾರರ ತೀರ್ಪುನ್ನು ಗೌರವಿಸುವ ನಿಟ್ಟಿನಲ್ಲಿ, ಚುನಾವಣೆ ಸಂದರ್ಭ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸೇವಾ ಸಮರ್ಪಣಾ ಸಮಾರಂಭ ಮಹತ್ವ ಪಡೆದುಕೊಂಡಿದೆ. ಇದರೊಂದಿಗೆ ಕಾರ್ಯಕ್ರಮದ ದಿಕ್ಸೂಚಿ ಭಾಷಣಗಾರರ ಹೆಸರನ್ನು ಗೌಪ್ಯವಾಗಿಟ್ಟಿರುವುದು ಕಾರ್ಯಕ್ರಮದ ಹೈಲೈಟ್ಸ್. ಇದುವರೆಗೆ ಯಾರು ದಿಕ್ಸೂಚಿ ಭಾಷಣ ಮಾಡುತ್ತಾರೆ ಎಂಬ ಹೆಸರನ್ನು ಹೊರ ಬಿಟ್ಟಿಲ್ಲ. ಇದು ಕೊನೆವರೆಗೂ ಗೌಪ್ಯವಾಗಿಯೇ ಇರುತ್ತದೆ.

ಮುಂದಿನ 5 ವರ್ಷಗಳ ಕೆಲಸ ಮುಂದಿಡುತ್ತೇವೆ:ಅರುಣ್ ಕುಮಾರ್ ಪುತ್ತಿಲ

ಪುತ್ತಿಲ ಅವರು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಚುನಾವಣೆ ಸಂದರ್ಭದಲ್ಲಿ ನಮಗೆ ಮತವನ್ನು ನೀಡಿದಎಲ್ಲಾ ಮತದಾರ ಬಾಂಧವರಿಗೆ ಮತ್ತು ಸತ್ಯಾಸತ್ಯತೆಯನ್ನು ಅತ್ಯಂತ ಪಾರದರ್ಶಕವಾಗಿ ಸಮಾಜದ ಮುಂದೆ ಇಟ್ಟಿರುವ ಎಲ್ಲಾ ಮಾಧ್ಯಮ ಮಿತ್ರರಿಗೆ ಕೃತಜ್ಞತೆ ಅರ್ಪಿಸಿದ ಅವರು, ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಸಣ್ಣ ಅಂತರದಿಂದ ನಮಗೆ ಸೋಲು ಬಂದಿದೆ. ಮತದಾರರ ತೀರ್ಮಾನವನ್ನು ನಾವು ಗೌರವಿಸುತ್ತೇವೆ.ಈ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಅಭಿನಂದನಾ ಸಭೆಯು ಮೇ 21ರಂದು ಸಂಜೆ ಗಂಟೆ 4ಕ್ಕೆ ನಡೆಯಲಿದೆ. ದರ್ಬೆ ವೃತ್ತದಿಂದ ಬರಿ ಕಾಲಿನಲ್ಲಿ ಪಾದಯಾತ್ರೆ ನಡೆಯಲಿದೆ. ಧರ್ಮಾಧಾರಿತವಾದ ರಾಜಕಾರಣ ಮತ್ತು ಹಿಂದುತ್ವವನ್ನು ಪ್ರತಿಪಾದನೆ ಮಾಡುವ ಸಂಕಲ್ಪದ ಜೊತೆಗೆ ಮಹಾಲಿಂಗೇಶ್ವರ ದೇವರ ನಡೆಯಲ್ಲೇ ಎಲ್ಲಾ ಕಾರ್ಯಚಟುವಟಿಕೆ ಮಾಡಿದ್ದೆವು. ಅದಕ್ಕಾಗಿ ಮತದಾರರಿಗೆ ಕೃತಜ್ಞತೆ ಮತ್ತು ಚುನಾವಣೆ ಸಂದರ್ಭದಲ್ಲಿ ನಮಗೆ ಶಕ್ತಿಯನ್ನು ನೀಡಿದ ದೇವರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ದರ್ಬೆಯಿಂದ ಪಾದಯಾತ್ರೆ ಮೂಲಕ ದೇವರಿಗೆ ವಂದನೆ ಸಲ್ಲಿಸಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಮುಂದಿನ 5 ವರ್ಷಗಳ ಕಾಲ ಯಾವ ರೀತಿ ಕೆಲಸ ಮಾಡಬೇಕು ಮತ್ತು ಮುಂದಿನ ನಮ್ಮ ನಡೆ ಏನು ಎಂಬುದನ್ನು ಸಮಾವೇಶದಲ್ಲಿ ತಿಳಿಸಲಿದ್ದೇವೆ.


ಬಿಜೆಪಿ ಮುಖಂಡ ಅರೆಸ್ಟ್ - ರಾತ್ರೋರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತ ಶಾಸಕ ಹರೀಶ್ ಪೂಂಜಾ

Posted by Vidyamaana on 2024-05-19 17:35:19 |

Share: | | | | |


ಬಿಜೆಪಿ ಮುಖಂಡ ಅರೆಸ್ಟ್ - ರಾತ್ರೋರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ: ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್ ಮಾಡಿದ್ದರು.ಈ ಹಿನ್ನಲೆ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರಾತ್ರೋರಾತ್ರಿ ಧರಣಿ ನಡೆಸಿದ್ದು, ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಳ್ತಂಗಡಿಯ ಮೆಲಂತಬೆಟ್ಟು ಎಂಬಲ್ಲಿ ಕಲ್ಲಿನ ಕೋರೆ ನಡೆಯುತ್ತಿದ್ದಲ್ಲಿಗೆ ಶನಿವಾರ ಸಂಜೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ - ನೊಂದು ಯುವಕ ಆತ್ಮಹತ್ಯೆ

Posted by Vidyamaana on 2024-02-09 07:27:56 |

Share: | | | | |


ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ - ನೊಂದು ಯುವಕ ಆತ್ಮಹತ್ಯೆ

ಬೆಂಗಳೂರು :ಪ್ರೀತಿಸಿದ ಯುವಕನೋರ್ವ ತಾನು ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿದೆ ಎಂದು ತಿಳಿದು ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಈ ಘಟನೆ ಕುರಿತು ಮೃತನ ಕುಟುಂಬಸ್ಥರು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.


ಅನ್ಬರಾಸನ್‌ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ವಿದ್ಯಾ ಎಂಬಾಕೆಗೆ ಈ ಹಿಂದೆ ಮದುವೆಯಾಗಿದ್ದು, ವಿಚ್ಛೇದನ ಪಡೆದಿದ್ದು. ನಂತರ ಅನ್ಬರಾಸನ್‌ ಜೊತೆ ಪ್ರೀತಿಯಾಗಿತ್ತು. ಇಬ್ಬರೂ ಆರು ತಿಂಗಳಿನಿಂದ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಇಬ್ಬರೂ ತಾವು ಪತಿ ಪತ್ನಿ ಎಂದು ಹೇಳಿ ಚಿಕ್ಕನಾಗಮಂಗಲದ ಬಾಡಿಗೆ ಮನೆಯಲ್ಲಿದ್ದರು.ವಿದ್ಯಾ ಐಟಿ ಕಂಪನಿ ಉದ್ಯೋಗಿ. ಅನ್ಬರಾಸನ್‌ ಪ್ಲಿಪ್‌ ಕಾರ್ಟ್‌ನಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ. ಆದರೆ ವಿದ್ಯಾ ಅನ್ಬರಾಸನ್‌ ಜೊತೆ ಪ್ರೀತಿಯಲ್ಲಿರುವಾಗಲೇ ಇನ್ನೋರ್ವನ ಸಹವಾಸಕ್ಕೆ ಬಿದ್ದಿದ್ದಾಳೆ. ಸಂತೋಷ್‌ ಎಂಬಾತನ ಜೊತೆ ವಿದ್ಯಾ ಅಕ್ರಮ ಸಂಬಂಧ ಹೊಂದಿದ್ದಳು. ಅನ್ಬರಾಸನ್‌ ತನ್ನ ಕಣ್ಣಾರೆ ಸಂತೋಷ್‌ ಮತ್ತು ವಿದ್ಯಾ ಜೊತೆಯಲ್ಲಿರುವುದನ್ನು ಕಂಡಿದ್ದ. ಇದರಿಂದ ನೊಂದ ಅನ್ಬರಾಸನ್‌ ವಿದ್ಯಾಗೆ ಬುದ್ಧಿವಾದ ಹೇಳಿದರೂ ಕ್ಯಾರೆ ಎನ್ನದ ವಿದ್ಯಾ ತನ್ನ ಚಾಳಿ ಮುಂದುವರಿಸಿದ್ದಾಳೆ. ಇದರಿಂದ ನೊಂದ ಅನ್ಬರಸನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.


ಅನ್ಬರಸನ್‌ ತಂದೆ ತಾಯಿ ಯುಡಿಆರ್‌ ಪ್ರಕರಣವನ್ನು ದಾಖಲು ಮಾಡಿದ್ದರು. ಆದರೆ ವಿದ್ಯಾ ಜೊತೆ ಮಾತನಾಡಿರುವ ಕಾಲ್‌ರೆಕಾರ್ಡ್‌ ಲಭ್ಯವಾಗಿದ್ದು, ಅದರ ಆಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಪ್ರಕರಣ ದಾಖಲು ಮಾಡಿದ್ದು, ವಿದ್ಯಾ, ಸಂತೋಷ್‌ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊನೆಗೂ ಪುತ್ತೂರಿಗೆ ವರುಣಾಗಮನ ; ಖುಷಿ ತಂದ ಮೊದಲ ಮಳೆಯ ಸಿಂಚನ

Posted by Vidyamaana on 2023-05-05 07:52:47 |

Share: | | | | |


ಕೊನೆಗೂ ಪುತ್ತೂರಿಗೆ ವರುಣಾಗಮನ ; ಖುಷಿ ತಂದ ಮೊದಲ ಮಳೆಯ ಸಿಂಚನ

ಪುತ್ತೂರು: ಬಿರುಬಿಸಿಲಿನಿಂದ ಕಂಗಾಲಾಗಿದ್ದ ಪುತ್ತೂರಿನ ಜನತೆಗೆ ಇಂದು ಮಳೆಯ ಆಗಮನ ಸಂತೋಷವನ್ನು ನೀಡಿದೆ. ಪುತ್ತೂರು ಜಾತ್ರೆಗೆ ನಾಲ್ಕು ಹನಿ ಮಳೆಯಾದರೂ ಸುರಿಯುತ್ತದೆ ಎಂಬ ನಿರೀಕ್ಷೆ ಈ ಬಾರಿ ಹುಸಿಯಾಗಿತ್ತು. ಮಾತ್ರವಲ್ಲದೇ ತಾಲೂಕಿನ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದರೂ ಪುತ್ತೂರು ಭಾಗದಲ್ಲಿ ಮಳೆ ಇಲ್ಲದೆ ಜನ ಪರಿತಪಿಸುವಂತಾಗಿತ್ತು.



Leave a Comment: