ಕಲ್ಲಡ್ಕ ಮ್ಯೂಸಿಯಂ ವೀಕ್ಷಿಸಿದ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್

ಸುದ್ದಿಗಳು News

Posted by vidyamaana on 2024-06-30 19:51:42 |

Share: | | | | |


ಕಲ್ಲಡ್ಕ ಮ್ಯೂಸಿಯಂ ವೀಕ್ಷಿಸಿದ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್

ಬಂಟ್ವಾಳ : ತಾಲೂಕಿನ ವಿವಿಧ ಕಡೆಗಳಿಗೆ ತೆರಳಿ ಮಳೆಹಾನಿ ಬಗ್ಗೆ ವೀಕ್ಷಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಜಿಲ್ಲೆಯಲ್ಲಿಯೇ ಖ್ಯಾತಿ ಪಡೆದಿರುವ ಕಲ್ಲಡ್ಕದ ಯಾಸೀರ್ ಅವರ ಅಪರೂಪದ ವಸ್ತುಗಳ ಸಂಗ್ರಹವಿರುವ ಕಲ್ಲಡ್ಕ ಮ್ಯೂಸಿಯಂಗೆ ಭೇಟಿ ನೀಡಿದರು.ಹಿಂದಿನ ಕಾಲದ ವಸ್ತುಗಳು, ನಾಣ್ಯ, ಪತ್ರಿಕೆಗಳ ಸಂಗ್ರಹವನ್ನು ವೀಕ್ಷಿಸಿ ರೋಮಾಂಚನಗೊಂಡ ಅವರು ಯಾಸೀರ್ ಅವರ ವಸ್ತುಗಳ ಸಂಗ್ರಹಣ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅತ್ಯಂತ ಸಾವಕಾಶವಾಗಿ ಪ್ರತಿಯೊಂದು ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮೊಡಂಕಾಪುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ಇಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲರಿಗೂ ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಕ್ಕಳಿಂದ ಅಂಬೇಡ್ಕರ್ ಬಗ್ಗೆ ಹಾಡು ಹಾಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಗಮನ ಸೆಳೆದರು. ತಹಸೀಲ್ದಾರ್ ಅರ್ಚನಾ ಭಟ್, ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು ಜೊತೆಗಿದ್ದರು.

 Share: | | | | |


ಪುರುಷರಿಗೂ ಬಂತು ಗರ್ಭನಿರೋಧಕ ಚುಚ್ಚುಮದ್ದು; ಅಡ್ಡಪರಿಣಾಮಗಳಿಲ್ಲದೆ ಸುರಕ್ಷಿತ ಎನ್ನುತ್ತದೆ ಅಧ್ಯಯನ!

Posted by Vidyamaana on 2023-10-22 21:23:55 |

Share: | | | | |


ಪುರುಷರಿಗೂ ಬಂತು ಗರ್ಭನಿರೋಧಕ ಚುಚ್ಚುಮದ್ದು; ಅಡ್ಡಪರಿಣಾಮಗಳಿಲ್ಲದೆ ಸುರಕ್ಷಿತ ಎನ್ನುತ್ತದೆ ಅಧ್ಯಯನ!

ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ವಿಶ್ವದಲ್ಲೇ ಮೊದಲು ಚುಚ್ಚುಮದ್ದಿನ ಪುರುಷ ಗರ್ಭನಿರೋಧಕದ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸಿದೆ. ಇದು ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲದೆ ಸುರಕ್ಷಿತ, ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.25-40 ವರ್ಷ ವಯಸ್ಸಿನ 303 ಅಭ್ಯರ್ಥಿಗಳನ್ನು ಒಳಗೊಂಡಿರುವ ಮೂರು ಹಂತದ ಕ್ಲಿನಿಕಲ್ ಪ್ರಯೋಗದ ಸಂಶೋಧನೆಗಳು ಕಳೆದ ತಿಂಗಳು ಅಂತರರಾಷ್ಟ್ರೀಯ ಮುಕ್ತ-ಪ್ರವೇಶ ಆಂಡ್ರೊಲಜಿ ಜರ್ನಲ್‌ನಲ್ಲಿ ಪ್ರಕಟವಾಗಿವೆ.ಮೂರು ಹಂತದ ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಇಂಡಿಯಾ (DCGI) ಅನುಮತಿ ನೀಡಿದೆ ಮತ್ತು ಆಯಾ ಕೇಂದ್ರಗಳ ಸಾಂಸ್ಥಿಕ ನೈತಿಕ ಸಮಿತಿಗಳಿಂದ ಅನುಮೋದಿಸಲಾಗಿದೆ. ಆಸ್ಪತ್ರೆ ಆಧಾರಿತ ಅಧ್ಯಯನವನ್ನು ಐದು ಕೇಂದ್ರಗಳಲ್ಲಿ ನಡೆಸಲಾಯಿತು. ಮೂರು ಹಂತ ಕ್ಲಿನಿಕಲ್ ಪ್ರಯೋಗಗಳನ್ನು ಐದು ವಿಭಿನ್ನ ಕೇಂದ್ರಗಳಲ್ಲಿ (ನವದೆಹಲಿ, ಉಧಂಪುರ್, ಲುಧಿಯಾನ, ಜೈಪುರ ಮತ್ತು ಖರಗ್‌ಪುರ) ನಡೆಸಲಾಗಿದೆ.


ಅಧ್ಯಯನ ನಡೆದಿದ್ದು ಹೇಗೆ?: ಕಳೆದ ಏಳು ವರ್ಷಗಳ ಕಾಲ 303 ಆರೋಗ್ಯವಂತ ವಿವಾಹಿತ ಪುರುಷರ ಮೇಲೆ ಈ ಇಂಜೆಕ್ಷನ್‌ನ ಪ್ರಯೋಗ ಮಾಡಲಾಗಿತ್ತು. ಇದರ ಫಲಿತಾಂಶದ ಮೇಲೆ ಈ ಪ್ರಯೋಗ ಯಶಸ್ವಿಯಾಗಿದೆ ಎಂದು ಐಸಿಎಂಆರ್‌ ತಿಳಿಸಿದೆ. ಹಾರ್ಮೋನ್ ಅಲ್ಲದ ಚುಚ್ಚುಮದ್ದಿನ ಪುರುಷ ಗರ್ಭನಿರೋಧಕ RISUG (ಮಾರ್ಗದರ್ಶನದ ಅಡಿಯಲ್ಲಿ ವೀರ್ಯದ ಹಿಮ್ಮುಖ ಪ್ರತಿಬಂಧ) ಸಂಪೂರ್ಣವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಈ ಅಧ್ಯಯನವು ಬಹಿರಂಗಪಡಿಸಿದೆ. ವೀರ್ಯ ಕೋಶಗಳು ವೃಷಣದಿಂದ ವೀರ್ಯ ನಾಳದ ಮೂಲಕ ಶಿಶ್ನವನ್ನು ತಲುಪುತ್ತವೆ.ಇದು ದೀರ್ಘಕಾಲ ಕೆಲಸ ಮಾಡುತ್ತದೆ. ಮೂರನೇ ಹಂತದ ಅಧ್ಯಯನದ ಆವಿಷ್ಕಾರಗಳನ್ನು ಅಂತಾರಾಷ್ಟ್ರೀಯ ಮುಕ್ತ ಪ್ರವೇಶ ಜರ್ನಲ್ ಆಂಡ್ರೊಲಜಿಯಲ್ಲಿ ಪ್ರಕಟಿಸಲಾಗಿದೆ.25-40 ವರ್ಷ ವಯಸ್ಸಿನವರನ್ನು ಕುಟುಂಬ ಯೋಜನೆಗಾಗಿ ಆಯ್ಕೆ ಮಾಡಲಾಯಿತು ಮತ್ತು ಅವರಿಗೆ 60 mg ರಿವರ್ಸಿಬಲ್ ಚುಚ್ಚುಮದ್ದನ್ನು ನೀಡಲಾಯಿತು. ವಿಶೇಷವೆಂದರೆ ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲದೆ RISUG ನೊಂದಿಗೆ 99 ಪ್ರತಿಶತ ಗರ್ಭಧಾರಣೆಯನ್ನು ತಡೆಯಬಹುದು ಎಂದು ಐಸಿಎಂಆರ್‌ ತನ್ನ ಪ್ರಯೋಗದ ಮೂಲಕವಾಗಿ ತಿಳಿಸಿದೆ. ಗರ್ಭನಿರೋಧಕ ಅಭಿವೃದ್ಧಿಯಲ್ಲಿ, RISUG ಎಲ್ಲಾ ಇತರ ಗರ್ಭನಿರೋಧಕಗಳಿಗೆ ಹೋಲಿಸಿದರೆ ಗಂಡು ಮತ್ತು ಹೆಣ್ಣು ಎರಡೂ ಗರ್ಭನಿರೋಧಕ ಕಾರ್ಯಕ್ರಮಕ್ಕೆ ಪ್ರವೇಶದ ಹೊಸ್ತಿಲಲ್ಲಿರುವುದರಿಂದ ಹೆಚ್ಚಿನ ಪರಿಣಾಮಕಾರಿತ್ವವನ್ನು ಪ್ರಸ್ತುತಪಡಿಸುತ್ತದೆ. ಪ್ರಯೋಗಕ್ಕೆ ಒಳಪಟ್ಟ ವಿವಾಹಿತ ಪುರುಷರ ಪತ್ನಿಯರ ಆರೋಗ್ಯದ ಮೇಲೂ ನಿಗಾ ಇಡಲಾಗಿದ್ದು, ಯಾವುದೇ ದುಷ್ಪರಿಣಾಮ ಇಲ್ಲ ಎಂದು ತಿಳಿದುಬಂದಿದೆ. ಈ ಗರ್ಭನಿರೋಧಕವು 13 ವರ್ಷಗಳವರೆಗೆ ಕಾರ್ಯನಿರ್ವಹಿಸುತ್ತದೆ. ಯಾವುದೇ ಫಾರ್ಮಾ ಕಂಪನಿಯು ಈ ರೀತಿಯ ಉತ್ಪನ್ನವನ್ನು ಮಾರಾಟ ಮಾಡಲು ಬಯಸುವುದಿಲ್ಲ, ಅದು ದೀರ್ಘಕಾಲದವರೆಗೆ ಪರಿಣಾಮಕಾರಿಯಾಗಿ ಉಳಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಮಾರುಕಟ್ಟೆಗೆ ತರುವ ಪ್ರಕ್ರಿಯೆಯು ಸವಾಲಾಗಬಹುದು. ವೀರ್ಯ ಕೋಶಗಳು ವೃಷಣದಿಂದ ವೀರ್ಯ ನಾಳದ ಮೂಲಕ ಶಿಶ್ನವನ್ನುತಲುಪುತ್ತವೆ. RISUG ಅನ್ನು ಐಐಟಿ ಖರಗ್‌ಪುರದ ಡಾ. ಸುಜೋಯ್ ಕುಮಾರ್ ಗುಹಾ ಅಭಿವೃದ್ಧಿಪಡಿಸಿದ್ದಾರೆ.


ಅಧ್ಯಯನದ ಪ್ರಕಾರ, ನಿರಂತರವಾಗಿ ಹೆಚ್ಚುತ್ತಿರುವ ವಿಶ್ವ ಜನಸಂಖ್ಯೆಯೊಂದಿಗೆ, ಜನಸಂಖ್ಯೆಯ ನಿಯಂತ್ರಣಕ್ಕಾಗಿ ಪುರುಷ ಗರ್ಭನಿರೋಧಕ ಆಧುನಿಕ ವಿಧಾನಗಳನ್ನು ಅಭಿವೃದ್ಧಿಪಡಿಸುವ ತುರ್ತು ಅವಶ್ಯಕತೆಯಿದೆ. ಸಂತಾನಹರಣವು ಗರ್ಭನಿರೋಧಕ ಕ್ರಮವಾಗಿ ಸಾಕಷ್ಟು ಪರಿಣಾಮಕಾರಿಯಾಗಿದ್ದರೂ ಸಹ, ಈ ವಿಧಾನದ ಕೆಲವು ಪ್ರಮುಖ ಮಿತಿಗಳು ಸುಧಾರಿತ ತಂತ್ರಗಳ ಅಭಿವೃದ್ಧಿಗೆ ಕರೆ ನೀಡುತ್ತವೆ.

ರಸ್ತೆ ತಡೆ ಬಂದ್ ಗೆ ಬೆಂಬಲ ಇಲ್ಲ

Posted by Vidyamaana on 2023-08-13 15:47:37 |

Share: | | | | |


ರಸ್ತೆ ತಡೆ ಬಂದ್ ಗೆ ಬೆಂಬಲ ಇಲ್ಲ

ಪುತ್ತೂರು: ಬಂದ್ ಹಾಗೂ ರಸ್ತೆ ತಡೆಗೆ ಬೆಂಬಲ ನೀಡುವುದಿಲ್ಲ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ತಿಳಿಸಿದೆ.

ಬಂದ್ ರಸ್ತೆ ತಡೆಗಳಿಂದ ವ್ಯಾಪಾರ ವ್ಯವಹಾರಗಳಿಗೆ ತೊಂದರೆ ಆಗುವುದಲ್ಲದೇ, ನಾಗರಿಕರಿಗೆ ಹಲವಾರು ರೀತಿಯ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಬಂದ್ ಹಾಗೂ ರಸ್ತೆ ತಡೆಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದೆ.

ಯಾವುದೇ ಧರ್ಮದ ಯುವತಿ ಹಾಗೂ ಯುವಕರ ಮೇಲೆ ಅತ್ಯಾಚಾರ, ದೌರ್ಜನ್ಯ, ಕೊಲೆ ಮುಂದೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು. ಈಗಾಗಲೇ ನಡೆದ ಘಟನೆಗಳಿಗೆ ಖಂಡನೆ ಇದೆ. ಆದ್ದರಿಂದ ವರ್ತಕರ ಪರವಾಗಿ ಸರಕಾರಕ್ಕೆ ಅಸಿಸ್ಟೆಂಟ್ ಕಮಿಷನರ್ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಿಕೆಟ್ ಆಡುತ್ತಲೇ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು

Posted by Vidyamaana on 2024-01-10 14:39:27 |

Share: | | | | |


ಕ್ರಿಕೆಟ್ ಆಡುತ್ತಲೇ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು

ನೋಯ್ಡಾ: ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಪ್ರತಿದಿನ ಹೃದಯಾಘಾತದಿಂದ ಯುವಕರು ಸಾವನ್ನಪ್ಪುತ್ತಿರುವ ವರದಿಗಳು ಬರುತ್ತಿವೆ. ಇದೀಗ ನೋಯ್ಡಾದಿಂದ ಅಂತಹುದೇ ಪ್ರಕರಣವೊಂದು ಬಂದಿದ್ದು, ಕ್ರಿಕೆಟ್ ಮ್ಯಾಚ್ ಆಡುತ್ತಿದ್ದ ವ್ಯಕ್ತಿಯೊಬ್ಬ ರನ್ ತೆಗೆದುಕೊಳ್ಳುವಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಲು ಕ್ಲಿಕ್ ಮಾಡಿ

ಈ ವೇಳೆ ಅಲ್ಲಿದ್ದ ಇತರ ಆಟಗಾರರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಷ್ಟರಲ್ಲಿ ವ್ಯಕ್ತಿ ಮೃತಪಟ್ಟಿದ್ದರು ಎನ್ನಲಾಗಿದೆ.ಈ ಘಟನೆಯು ಥಾನಾ ಎಕ್ಸ್‌ಪ್ರೆಸ್‌ವೇ ಪ್ರದೇಶದ ಸೆಕ್ಟರ್ -135 ರಲ್ಲಿ ನಡೆದಿದ್ದು, ಇಲ್ಲಿನ ಕ್ರೀಡಾಂಗಣದಲ್ಲಿ ಶನಿವಾರ ಕೆಲವು ಮಂದಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಉತ್ತರಾಖಂಡ ಮೂಲದ 36 ವರ್ಷದ ವಿಕಾಸ್ ನೇಗಿ ಬ್ಯಾಟಿಂಗ್‌ಗೆ ಬಂದಿದ್ದರು. ಆಟದ ವೇಳೆ ವಿಕಾಸ್ ರನ್ ತೆಗೆದುಕೊಳ್ಳಲು ಓದಿದ್ದಾರೆ ಆದರೆ ಇದರ ನಡುವೆ ಹೃದಯಾಘಾತಕ್ಕೆ ಒಳಗಾಗಿ ಪಿಚ್ ನಲ್ಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದ ಇತರ ಆಟಗಾರರು ವಿಕಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಅಷ್ಟೊತ್ತಿಗಾಗಲೇ ತಡವಾಗಿತ್ತು. ವಿಕಾಸ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವಿಕಾಸ್ ರನ್ ತೆಗೆದುಕೊಳ್ಳಲು ಓಡಿ ನಂತರ ಪಿಚ್ ಮೇಲೆ ಬೀಳುವುದು ಕಂಡುಬಂದಿದೆ.

ಮೊಬೈಲ್​​ ಫೋನ್​​ ಕಳೆದು ಹೋದ್ರೆ ಗಾಬರಿ ಆಗ್ಬೇಡಿ

Posted by Vidyamaana on 2023-09-21 20:47:54 |

Share: | | | | |


ಮೊಬೈಲ್​​ ಫೋನ್​​ ಕಳೆದು ಹೋದ್ರೆ ಗಾಬರಿ ಆಗ್ಬೇಡಿ

   ಮೊಬೈಲ್​​ ಕಳೆದು ಹೋದ ತಕ್ಷಣ ನಮಗಾಗುವ ಗಾಬರಿ ಅಷ್ಟಿಷ್ಟಲ್ಲ. ಕೇವಲ ದುಬಾರಿ ಬೆಲೆ ವಸ್ತು ಎನ್ನುವುದಕ್ಕಿಂತಲೂ ಅದರಲ್ಲಿರುವ ಸಂಪರ್ಕ ಸಂಖ್ಯೆಗಳು, ಒಡನಾಡಿಗಳ ಜೊತೆಗಿರುವ ಫೋಟೋಗಳು ಮತ್ತು ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಭಯ ಸಾಕಷ್ಟು ಕಾಡುತ್ತಿರುತ್ತದೆ.ಮೊಬೈಲ್ ಕಳವಾದಾಗ ಅತ್ಯಂತ ಮುಖ್ಯ ಮಾಹಿತಿ ಮತ್ತು ನಮ್ಮ ಮೊಬೈಲ್​ ಡೇಟಾ ಸೋರಿಕೆಯಾಗುವ ಟೆನ್ಶನ್​ ತುಂಬಾನೆ ಇರುತ್ತೆ.ಆದ್ರೆ ಇನ್ಮುಂದೆ ನಿಮ್ಮ ಸ್ಮಾರ್ಟ್​ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಮೊಬೈಲ್‌ ಅನ್ನು ಬ್ಲಾಕ್‌ ಮಾಡಲು ಕರ್ನಾಟಕ ಪೊಲೀಸ್‌ ಇಲಾಖೆ ಆರಂಭಿಸಿರುವ ಕರ್ನಾಟಕ ರಾಜ್ಯ ಪೊಲೀಸ್‌ ಆಯಪ್( KSP Application ) ಸಹಾಯ ಮಾಡಲಿದೆ. 


ನಿಮ್ಮ ಬಳಿ ಇನ್ನೊಂದು ಮೊಬೈಲ್‌ ಇದ್ದರೆ ಅಥವಾ ಮನೆಯವರದ್ದು, ಸ್ನೇಹಿತರ ಮೊಬೈಲ್‌ನಲ್ಲಿ ಈ ಆಯಪ್ ಅನ್ನು ಇನ್​ಸ್ಟಾಲ್ ಮಾಡಿ ಬ್ಲಾಕ್‌ ಮಾಡಿ ದೂರು ದಾಖಲಿಸಬಹುದು.

ಗಳೂರು ನಗರ ಪೊಲೀಸರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಯಾವರೀತಿ ನೋಂದಣಿ ಮಾಡಬೇಕು ಎಂಬ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.ಕೇಂದ್ರ ಸರ್ಕಾರ ಕೂಡ ಜನರ ಫೋನ್ ಮತ್ತು ಡೇಟಾ ಕಳ್ಳತನಕ್ಕೆ ಪರಿಹಾರ ಕಂಡುಹಿಡಿದಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೆ ಸಂಚಾರ್ ಸಾಥಿ ಪೋರ್ಟಲ್ ಅನ್ನು ಪ್ರಾರಂಭಿಸಸಿದದೆ. ಸಂಚಾರ್ ಸಾಥಿ ಪೋರ್ಟಲ್ ಅಡಿಯಲ್ಲಿ, ಬಳಕೆದಾರರು ತಮ್ಮ ಫೋನ್ ಅನ್ನು ಎಲ್ಲಿದೆ ಎಂದು ಹುಡುಕಬಹುದು ಅಥವಾ ಸ್ವಿಚ್ ಆಫ್ ಮಾಡಬಹುದು. ಆಯಪಲ್‌ ಐಫೋನ್​ನಲ್ಲಿರುವ ಫೈಂಡ್ ಮೈ ಫೋನ್ ವೈಶಿಷ್ಟ್ಯದಂತೆ ಇದು ಆಂಡ್ರಾಯ್ಡ್ ಫೋನ್​ನಲ್ಲಿ ಕಾರ್ಯನಿರ್ವಹಿಸಲಿದೆ.

ಟಿ.ವಿ.9 ದ.ಕ. ಜಿಲ್ಲಾ ವರದಿಗಾರ ಅಶೋಕ್ ಬಡಾವು

Posted by Vidyamaana on 2023-09-30 22:58:20 |

Share: | | | | |


ಟಿ.ವಿ.9 ದ.ಕ. ಜಿಲ್ಲಾ ವರದಿಗಾರ ಅಶೋಕ್ ಬಡಾವು

ಪುತ್ತೂರು: ಕೃಷ್ಣನಗರ ಬಡಾವು ನಿವಾಸಿ ಮೋನಪ್ಪ ಪೂಜಾರಿ(63ವ ) ಸೆ. 30ರಂದು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಕಮಲ, ಮಕ್ಕಳಾದ ಯಶೋದ, ಪ್ರಮೀಳಾ ಮತ್ತು ಟಿ.ವಿ.9 ದ.ಕ. ಜಿಲ್ಲಾ ವರದಿಗಾರ ಅಶೋಕ್ ಬಡಾವು ಅವರನ್ನು ಅಗಲಿದ್ದಾರೆ.

ಮೃತದೇಹವನ್ನು ಪ್ಲಾಸ್ಲಿಕ್ ನಲ್ಲಿ ಸುತ್ತಿ ಚರಂಡಿಗೆಸೆದ ಸಾಯಿ ಕೃಷ್ಣ

Posted by Vidyamaana on 2023-06-10 12:02:39 |

Share: | | | | |


ಮೃತದೇಹವನ್ನು ಪ್ಲಾಸ್ಲಿಕ್ ನಲ್ಲಿ ಸುತ್ತಿ ಚರಂಡಿಗೆಸೆದ ಸಾಯಿ ಕೃಷ್ಣ

ಹೈದರಾಬಾದ್: ವಿವಾಹಿತ ಪುರೋಹಿತರೊಬ್ಬರು ಮಹಿಳೆಯೊಬ್ಬರನ್ನು ಕೊಂದು ಅವರ ದೇಹವನ್ನು ದೇವಸ್ಥಾನದ ಬಳಿಯ ಚರಂಡಿಯಲ್ಲಿ ಅಡಗಿಸಿಟ್ಟ ಘಟನೆ ತೆಲಂಗಾಣದ ಸರೋರ್ ನಗರದಲ್ಲಿ ನಡೆದಿದೆಆರೋಪಿಯನ್ನು ಅಯ್ಯಗಾರಿ ಸಾಯಿ ಕೃಷ್ಣ ಎಂದು ಗುರುತಿಸಲಾಗಿದೆ. ಕುರುಗಂಟಿ ಅಪ್ಸರಾ ಎಂಬಾಕೆ ಮೃತ ಯುವತಿ.ಕುರುಗಂಟಿ ಅಪ್ಸರಾಳನ್ನು ಭದ್ರಾಚಲಂಗೆ ತೆರಳಲು ಮುಂದಾಗಿದ್ದ ವೇಳೆ ಶಂಶಾಬಾದ್ ಬಸ್ ನಿಲ್ದಾಣದಲ್ಲಿ ಡ್ರಾಪ್ ಮಾಡಿರುವುದಾಗಿ ಸಾಯಿಕೃಷ್ಣ ಅವರೇ ನಾಪತ್ತೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಅಂದಿನಿಂದ ಅವಳು ಯಾವುದೇ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಮೇ 3 ರಿಂದ ನಾಪತ್ತೆಯಾಗಿದ್ದಾಳೆ ಎಂದು ಪುರೋಹಿತ ಸಾಯಿ ಕೃಷ್ಣ ದೂರು ನೀಡಿದ್ದರು.


ದೂರಿನಲ್ಲಿ ಅಪ್ಸರಾ ತನ್ನ ಸೊಸೆ ಎಂದು ಸಾಯಿ ಕೃಷ್ಣ ಹೇಳಿಕೊಂಡಿದ್ದ. ತನಿಖೆ ನಡೆಸಿದ ಪೊಲೀಸರು ದೂರು ನೀಡಿದ ಸಾಯಿ ಕೃಷ್ಣನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಸಿಸಿಟಿವಿ ವಿಡಿಯೋಗಳು ಸೇರಿ ಹಲವು ಸಾಕ್ಷ್ಯಗಳು ಇದಕ್ಕೆ ಬಲ ತುಂಬಿದ್ದವು.ಪೊಲೀಸರ ಮಾಹಿತಿಯ ಪ್ರಕಾರ ಸಾಯಿ ಕೃಷ್ಣ ವಿವಾಹಿತನಾಗಿದ್ದು, ಆತನಿಗೆ ಇಬ್ಬರು ಮಕ್ಕಳಿದ್ದಾರೆ. ಅದಾಗ್ಯೂ ಅಪ್ಸರಾ ಜತೆ ಸಂಬಂಧ ಇಟ್ಟಕೊಂಡಿದ್ದ. ತನ್ನನ್ನು ಮದುವೆಯಾಗು ಎಂದು ಅಪ್ಸರಾ ಒತ್ತಾಯ ಮಾಡುತ್ತಿದ್ದಳು ಎಂದು ಸಾಯಿ ಕೃಷ್ಣ ಹೇಳಿಕೊಂಡಿದ್ದಾನೆಶಂಶಾಬಾದ್ ನಲ್ಲಿ ಅಪ್ಸರಾಳನ್ನು ಕೊಲೆ ಮಾಡಿದ್ದ ಸಾಯಿ ಕೃಷ್ಣ ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿ ಸರೋರ್ ನಗರಕ್ಕೆ ಸಾಗಿಸಿದ್ದ. ಅಲ್ಲಿ ಎಂಆರ್ ಓ ಕಚೇರಿ ಬಳಿಯ ಮ್ಯಾನ್ ಹೋಲ್ ಗೆ ಮೃತದೇಹವನ್ನು ಎಸೆದಿದ್ದ. ಈ ಎಂಆರ್ ಓ ಕಚೇರಿ ಬಳಿಯ ದೇವಸ್ಥಾನದಲ್ಲಿ ಸಾಯಿ ಕೃಷ್ಣ ಅರ್ಚಕನಾಗಿದ್ದ.



Leave a Comment: