ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಸುದ್ದಿಗಳು News

Posted by vidyamaana on 2024-07-03 07:52:29 |

Share: | | | | |


ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಕೋಲಾರ: ನಗರ ಹೊರವಲಯದ ಖಾಸಗಿ ಕಾಲೇಜುವೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯೊಬ್ಬಳು (17) ಅದೇ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ.ಮುಳಬಾಗಿಲಿನ ಅನಿಲ್‌ ಕುಮಾರ್‌ (21) ಬಂಧಿತ ಯುವಕ.ಕೋಲಾರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯು ಶ್ರೀನಿವಾಸಪುರ ತಾಲ್ಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು. ಸೋಮವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆ ಶೌಚಾಲಯಕ್ಕೆ ಹೋಗಿದ್ದಾಳೆ. ಈ ಸಮಯದಲ್ಲಿ ಮಗು ಜನನವಾಗಿದೆ. ಮಗುವಿನ ಅಳು ಸದ್ದು ಕೇಳಿ ಕಕ್ಕಾಬಿಕ್ಕಿಯಾದ ಕಾಲೇಜಿನ ಉಪನ್ಯಾಸಕಿಯರು, ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿದ್ದಾರೆ. ತಕ್ಷಣವೇ ಸಮೀಪದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಉಪನ್ಯಾಸಕರು ಬಾಲಕಿಯ ಪೋಷಕರಿಗೆ ವಿಚಾರ ಮುಟ್ಟಿಸಿದ್ದು, ಅವರೂ ಆಸ್ಪತ್ರೆಗೆ ಬಂದಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 Share: | | | | |


ತನ್ನ ಖಾಸಗಿ ಫೋಟೋಗಳನ್ನು ಅಳಿಸಲು ಪ್ರಿಯತಮನ ಫೋನ್ ತೆರೆದ ಬೆಂಗಳೂರಿನ ಮಹಿಳೆಗೆ ಶಾಕ್!

Posted by Vidyamaana on 2023-11-30 07:13:49 |

Share: | | | | |


ತನ್ನ ಖಾಸಗಿ ಫೋಟೋಗಳನ್ನು ಅಳಿಸಲು ಪ್ರಿಯತಮನ ಫೋನ್ ತೆರೆದ ಬೆಂಗಳೂರಿನ ಮಹಿಳೆಗೆ ಶಾಕ್!

ಬೆಂಗಳೂರು :ಬೆಂಗಳೂರು ಮೂಲದ 22 ವರ್ಷದ ತನ್ವಿ (ಹೆಸರು ಬದಲಾಯಿಸಲಾಗಿದೆ) ತನ್ನ ಸಂಗಾತಿಯ ಫೋನ್ ಗ್ಯಾಲರಿಯನ್ನು ತೆರೆದಾಗ ಆಘಾತಕ್ಕೆ ಒಳಗಾಗಿದ್ದಳು ಮತ್ತು ಅವಳು ಸೇರಿದಂತೆ ವಿವಿಧ ಮಹಿಳೆಯರ ಸುಮಾರು 13,000 ನಗ್ನ ಫೋಟೋಗಳನ್ನು ಅದರಲ್ಲಿ ಕಂಡುಕೊಂಡಳು.ತನ್ವಿ ತಾನು ಕೆಲಸ ಮಾಡುತ್ತಿದ್ದ ಬಿಪಿಒ ಕಂಪನಿಗೆ ಸೇರಿದ ನಂತರ ಐದು ತಿಂಗಳ ಹಿಂದೆ 25 ವರ್ಷದ ಆದಿತ್ಯ ಸಂತೋಷ್ ಅವರನ್ನು ಭೇಟಿಯಾದರು.ಅವರು ಕಳೆದ ನಾಲ್ಕು ತಿಂಗಳಿನಿಂದ ಸಂಬಂಧದಲ್ಲಿದ್ದಾರೆ.


ತನ್ವಿ ಅವರು ರೆಕಾರ್ಡ್ ಮಾಡಿದ ಕೆಲವು ಆತ್ಮೀಯ ಕ್ಷಣಗಳನ್ನು ಅಳಿಸಲು ಸಂತೋಷ್ ಅವರ ಫೋನ್ ಅನ್ನು ಅವರಿಗೆ ತಿಳಿಯದೆ ತೆರೆದಿದ್ದಾರೆ ಎಂದು ವರದಿಯಾಗಿದೆ.


ಫೋನ್ ನೋಡಿ ವಿಚಲಿತಳಾದ ಅವಳು ಸಂತೋಷ್‌ನೊಂದಿಗಿನ ಸಂಬಂಧವನ್ನು ತಕ್ಷಣವೇ ಕಡಿದುಕೊಂಡಳು ಮತ್ತು ಭವಿಷ್ಯದಲ್ಲಿ ಯಾವುದೇ ತೊಂದರೆಯಿಂದ ತನ್ನ ಇತರ ಸಹೋದ್ಯೋಗಿಗಳನ್ನು ರಕ್ಷಿಸಲು ನವೆಂಬರ್ 20 ರಂದು ಅವರ ಕಚೇರಿಯ ಹಿರಿಯರಿಗೆ ವಿಷಯವನ್ನು ವರದಿ ಮಾಡಿದಳು. ಸಂತೋಷ್ ಅವರ ಫೋನ್‌ನಲ್ಲಿ 13,000 ನಗ್ನ ಚಿತ್ರಗಳು ಇದ್ದು, ಕೆಲವು ಅವರ ಮಹಿಳಾ ಸಹೋದ್ಯೋಗಿಗಳು ಕೂಡ ಇದ್ದರು.


ವರದಿಯ ಪ್ರಕಾರ, ತನ್ವಿ ಅನೇಕ ಫೋಟೋಗಳನ್ನು ಮಾರ್ಫ್ ಮಾಡಲಾಗಿದೆ ಎಂದು ಶಂಕಿಸಿದ್ದಾರೆ.ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡ ಅರ್ಚನಾ (ಹೆಸರು ಬದಲಾಯಿಸಲಾಗಿದೆ) ಬೆಳ್ಳಂದೂರು ಮೂಲದ ಬಿಪಿಒ ಕಂಪನಿಯು ನವೆಂಬರ್ 23 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ಔಪಚಾರಿಕ ದೂರು ದಾಖಲಿಸಿದೆ.


"ಇದು ಹಲವಾರು ಇತರ ಮಹಿಳೆಯರ ಮೇಲೆ ಪರಿಣಾಮ ಬೀರಬಹುದು. ಅವನು ಕಚೇರಿಯಲ್ಲಿ ಇತರ ಮಹಿಳೆಯರಿಗೆ ಯಾವುದೇ ಹಾನಿ ಮಾಡದಿದ್ದರೂ, ಅವನ ಉದ್ದೇಶ ಯಾರಿಗೂ ತಿಳಿದಿರಲಿಲ್ಲ. ಫೋಟೋಗಳು ಸೋರಿಕೆಯಾದಲ್ಲಿ ಅದು ಅವರಿಗೆ ಆಘಾತವನ್ನುಂಟುಮಾಡುತ್ತದೆ. ನಾವು ಪೊಲೀಸರಿಗೆ ಹೇಳಲು ಬಯಸಿದ್ದೇವೆ. ಇದು ಸಂಭಾವ್ಯ ಸಮಸ್ಯೆಯಾಗಿದೆ." ಎಂದಿ ಕಂಪನಿಯ ವಕ್ತಾರರು ಹೇಳಿದರು.


ಛಾಯಾಚಿತ್ರಗಳನ್ನು ಮಾರ್ಫ್ ಮಾಡಲು ಸಂತೋಷ್ ಸಂಸ್ಥೆಯ ಯಾವುದೇ ಸಾಧನಗಳನ್ನು ಬಳಸಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.ಏತನ್ಮಧ್ಯೆ, ಪೊಲೀಸರು ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಅವರ ಕಚೇರಿಯಿಂದಲೇ ಬಂಧಿಸಿದ್ದಾರೆ. ಆದರೆ, ಈ ಚಿತ್ರಗಳನ್ನು ಸಂಗ್ರಹಿಸಿಟ್ಟಿರುವ ಸಂತೋಷ್‌ನ ಉದ್ದೇಶವನ್ನು ಬಹಿರಂಗಪಡಿಸಲು ಇನ್ನಷ್ಟು ಸಮಯ ಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೌದಿ ಅರೇಬಿಯಾದಲಿ ಕಾರು ಅಪಘಾತ; ವಿಟ್ಲ ಮೂಲದ ಯುವಕ ಹಬೀಬ್ ಮೃತ್ಯು

Posted by Vidyamaana on 2023-04-20 20:37:14 |

Share: | | | | |


ಸೌದಿ ಅರೇಬಿಯಾದಲಿ ಕಾರು ಅಪಘಾತ; ವಿಟ್ಲ ಮೂಲದ ಯುವಕ ಹಬೀಬ್ ಮೃತ್ಯು

ವಿಟ್ಲ: ಸೌದಿ ಅರೇಬಿಯಾದಲ್ಲಿ ನಡೆದ ಅಪಘಾತದಲ್ಲಿ ವಿಟ್ಲದ ಯುವಕ ಮೃತಪಟ್ಟ ಘಟನೆ ವರದಿಯಾಗಿದೆ.

ಮುಹಮ್ಮದ್ ಮುಸ್ಲಿಯಾರ್ ಅಲ್ ಖಾಸಿಮಿ ಎಂಬವರ ಹಿರಿಯ ಪುತ್ರ ಹಬೀಬ್ ಉಕ್ಕುಡ ಮೃತ ಯುವಕ ಎಂದು ತಿಳಿದುಬಂದಿದೆ.

ಹಬೀಬ್ ಅವರು ಮೂರು ತಿಂಗಳ ಹಿಂದೆಯಷ್ಟೇ ವಿದೇಶಕ್ಕೆ ಕೆಲಸಕ್ಕೆ ತೆರಳಿದ್ದರು. ನಿಯಂತ್ರಣ ಕಳೆದುಕೊಂಡ ಕಾರು ಕಂಬಕ್ಕೆ ಢಿಕ್ಕಿ ಹೊಡೆದು ರಸ್ತೆಗೆ ಪಲ್ಟಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಹಬೀಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕುಮ್ಕಿ ಭೂಮಿಯನ್ನು ಅಕ್ರಮಸಕ್ರಮದಲ್ಲಿ ಮಂಜೂರಾತಿಗೆ ಅವಕಾಶ ನೀಡಿ: ಅಧಿವೇಶನದಲ್ಲಿ ಸರಕಾರಕ್ಕೆ ಮನವಿ ಮಾಡಿದ ಶಾಸಕ ಅಶೋಕ್ ರೈ

Posted by Vidyamaana on 2024-02-19 19:29:58 |

Share: | | | | |


ಕುಮ್ಕಿ ಭೂಮಿಯನ್ನು ಅಕ್ರಮಸಕ್ರಮದಲ್ಲಿ ಮಂಜೂರಾತಿಗೆ ಅವಕಾಶ ನೀಡಿ: ಅಧಿವೇಶನದಲ್ಲಿ ಸರಕಾರಕ್ಕೆ ಮನವಿ ಮಾಡಿದ ಶಾಸಕ ಅಶೋಕ್ ರೈ

ಪುತ್ತೂರು: ದ ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಪಟ್ಟಾ ಕೃಷಿ ಭುಮಿಗೆ ಹೊಂದಿಕೊಂಡು ಸುಮಾರು ೯೦ ಮೀಟರ್ ತನ ಅಥವಾ ನಾಲ್ಕೂವರೆ ಸಂಕೋಲೆ ಜಾಗವನ್ನು ಕುಮ್ಕಿ ಎಂಬ ಕಾರಣಕ್ಕೆ ರೈತರಿಗೆ ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ, ಈ ಜಾಗವನ್ನು ಅಕ್ರಮ ಸಕ್ರಮದಡಿ ಮಂಜೂರಾತಿ ಮಾಡಲು ಅವಕಾಶ ನೀಡುವಂತೆ ಅಧಿವೇಶನದಲ್ಲಿ ಶಾಸಕರಾದ ಅಶೋಕ್ ರೈ ಸರಕಾರವನ್ನು ಆಗ್ರಹಿಸಿದ್ದಾರೆ.


ಅಧಿವೇಶನದಲ್ಲಿ ಮಾತನಾಡಿದ ಶಾಶಕರು ದ ಕ ಹಾಗೂ ಉಡುಪಿ ಜಿಲ್ಲೆಯ ಕೃಷಿಕರು ತಮ್ಮ ಪಟ್ಟಾ ಜಾಗಕ್ಕೆ ಹೊಂದಿಕೊಂಡಿರುವ ಈ ಜಾಗದಲ್ಲಿ ಹಲವಾರು ವರ್ಷದಿಂದ ಕೃಷಿ ಮಾಡಿಕೊಂಡು ಬಂದಿದ್ದಾರೆ. ಈಗಾಗಲೇ ಈ ಜಾಗದಲ್ಲಿ ಕೃಷಿಯೂ ಇದೆ. ಈ ಜಾಗವನ್ನು ಅಕ್ರಮ ಸಕ್ರಮದಡಿ ಮಂಜೂರಾತಿ ಮಾಡಲು ಕಂದಾಯ ಇಲಾಖೆ ಒಪ್ಪುತ್ತಿಲ್ಲ. ವರ್ಗ ಜಾಗಕ್ಕೆ ತಾಗಿಕೊಂಡಿರುವ ಈ ಜಾಗವನ್ನು ಕುಮ್ಕಿ ಎಂದು ನಮೂದಾಗಿರುವ ಕಾರಣಕ್ಕೆ ಕೃಷಿಕರಿಗೆ ನೀಡಲು ಸಾಧ್ಯವಾಗುತ್ತಿಲ್ಲ. ದಾಖಲೆಯಲ್ಲಿ ಎಲ್ಲೂ ಕುಮ್ಕಿ ಎಂದೂ ನಮೂದಿಸಿಲ್ಲ. ಸರಕಾರಿ ಜಾಗವೆಂದೇ ಈ ಜಾಗದ ದಾಖಲೆ ತೋರಿಸುತ್ತದೆ ಆದರೆ ಕಂದಾಯ ಅಧಿಕಾರಿಗಳು ವರ್ಗ ಜಾಗದಿಂದ ನಾಲ್ಕೂವರೆ ಸಂಕೋಲೆ ಕುಮ್ಕಿ ಜಾಗವಾಗಿದೆ ಎಂದು ಅಕ್ರಮ ಸಕ್ರಮಕ್ಕೆ ಕೃಷಿಕರು ಅರ್ಜಿ ಹಾಕಿದ್ದರೂ ಅದನ್ನು ತಿರಸ್ಕಾರ ಮಾಡುತ್ತಿದ್ದಾರೆ. ಸರಕಾರ ಈ ಬಗ್ಗೆ ಹೊಸ ಕಾನೂನನ್ನೇ ರೂಪಿಸಿ ಕುಮ್ಕಿ ಎಂದು ಕರೆಯಲ್ಪಡುವ ಜಾಗವನ್ನು ಅಕ್ರಮ ಸಕ್ರಮದಡಿ ಮಂಜೂರು ಮಾಡಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು. ೧೯೯೮ ರಲ್ಲಿ ಕುಮ್ಕಿ ಭೂಮಿಯನ್ನು ಅಕ್ರಮ ಸಕ್ರಮದಡಿ ಮಂಜೂರಾತಿಗೆ ಅವಕಾಶ ನೀಡಲಾಗಿತ್ತು. ಸರಕಾರ ಈ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಸಭೆಗೆ ತಿಳಿಸಿದರು.

ಈ ಬಗ್ಗೆ ಆಳವಾದ ಅಧ್ಯಯನ ಮಾಡಬೇಕಿದೆ: ಸಚಿವ ಕೃಷ್ಣ ಬೈರೇಗೌಡ


ಶಾಸಕರಾದ ಅಶೋಕ್ ರೈಯವರು ಹೇಳಿದ ವಿಚಾರದ ಬಗ್ಗೆ ನಾನು ಅಧ್ಯಯನ ನಡೆಸಬೇಕಿದೆ. ಈ ವಿಚಾರದಲ್ಲಿ ಸುಪ್ರಿಂಕೋರ್ಟು ತೀರ್ಪು ಏನಿದೆ ಎಂಬುದನ್ನು ತಿಳಿಯಬೇಕಿದೆ. ಕುಮ್ಕಿ ಭೂಮಿಯ ಬಗ್ಗೆ ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ತಕರಾರು ಇರುವ ಬಗ್ಗೆ ನಾನು ಜಿಲ್ಲೆಗೆ ಭೇಟಿ ನೀಡಿದಾಗ ಹಲವು ಮಂದಿ ಹೇಳಿದ್ದರು. ಕುಮ್ಕಿ ವಿಚಾರದಲ್ಲಿ ಆಳವಾದ ಅಧ್ಯಯನ ನಡೆಸಿ ನಾನು ಆ ಬಳಿಕ ನಿಮ್ಮ ಪ್ರಶ್ನೆಗೆ ಉತ್ತರ ನೀಡಲಿದ್ದೇನೆ. ನಿಮ್ಮ ಪ್ರಶ್ನೆ ಬಹಳ ಉತ್ತಮವಾಗಿಯೇ ಇದೆ ಅದನ್ನು ನಾನು ಪರಿಗಣಿಸಿದ್ದೇನೆ. ಶಾಸಕರು ನೀಡಿದ್ದ ಪ್ರಶ್ನೆಯಲ್ಲಿ ಕುಮ್ಕಿ ಶಬ್ದ ಇಲ್ಲದೇ ಇರುವ ಕಾರಣಕ್ಕೆ ನಾನು ಕುಮ್ಕಿ ವಿಚಾರದಲ್ಲಿ ವಿವರಣೆ ಪಡೆದುಕೊಂಡಿಲ್ಲ. ಈ ವಿಚಾರದಲ್ಲಿ ಏನು ಮಾಡಬಹುದು ಎಂಬುದನ್ನು ನಾನು ಶಾಸಕರಿಗೆ ತಿಳಿಸುತ್ತೇನೆ. ಕಾನೂನಿನ ಮೂಲಕ ಸಾಧ್ಯವಾಗುವುದಿದ್ದರೆ ಸರಕಾರದ ಜೊತೆ ಚರ್ಚೆ ನಡೆಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಯತ್ನ ಮಾಡುವುದಾಗಿ ಸಭೆಗೆ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಬೈಯುವ ಆಡಿಯೋ ವೈರಲ್‌: ಪೊಲೀಸ್ ಆಯುಕ್ತರಿಗೆ ದೂರು

Posted by Vidyamaana on 2023-04-20 03:27:37 |

Share: | | | | |


ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಗೆ ಬೈಯುವ ಆಡಿಯೋ ವೈರಲ್‌: ಪೊಲೀಸ್ ಆಯುಕ್ತರಿಗೆ ದೂರು

ಮಂಗಳೂರು: ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ವ್ಯಕ್ತಿಯೋರ್ವ ಏಕವಚನದಲ್ಲಿ ಅವಾಚ್ಯವಾಗಿ ಬೈಯುವ ಆಡಿಯೋ ವೈರಲ್‌ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ನಳಿನ್‌ 2019ರ ಲೋಕಸಭಾ ಚುನಾವಣೆ ಯಲ್ಲಿ ಗೆದ್ದ ಸಂದರ್ಭ ಮುಸ್ಲಿಂ ಧರ್ಮಗುರು ಗಳು ತಮ್ಮ ಬೆಂಬಲಿಗರೊಂದಿಗೆ ನಳಿನ್‌ ಅವರಲ್ಲಿಗೆ ಆಗಮಿಸಿ ಹೂಗುತ್ಛ ನೀಡಿ ಅಭಿನಂದಿಸಿ

ಫೋಟೋ ತೆಗೆಸಿಕೊಂಡಿದ್ದರು.ಆದರೆ ಈಗ ಯಾರೋ ದುಷ್ಕರ್ಮಿ ಆ ಫೋಟೋವನ್ನು ಜಾಲತಾಣದಲ್ಲಿ ಹಾಕಿ ಅದರೊಂದಿಗೆ ನಳಿನ್‌ ಅವರಿಗೆ ಏಕವಚನದಲ್ಲಿ, ಅವಾಚ್ಯ ಶಬ್ದ ಗಳಿಂದ ಬೈಯುವ ಆಡಿಯೋ ವೈರಲ್‌ ಮಾಡಿ ದ್ದಾನೆ. ಈ ಬಗ್ಗೆ ಬಿಜೆಪಿ ಕಾನೂನು ಪ್ರಕೋಷ್ಠ ದಿಂದ ಪೊಲೀಸರಿಗೆ ದೂರು ನೀಡಲಾಗಿದೆ. ದುಷ್ಕರ್ಮಿಯನ್ನು ಪತ್ತೆ ಹಚ್ಚಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಆಯುಕ್ತರನ್ನು ಒತ್ತಾಯಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ ತಿಳಿಸಿದ್ದಾರೆ.

ಬೆಂಗಳೂರು ಕಂಬಳದಿಂದ ಹಿಂತಿರುಗುತ್ತಿದ್ದ ಕಾರು ಅಪಘಾತ ; ಮಂಗಳೂರಿನ ಇಬ್ಬರು ಯುವಕರು ದಾರುಣ ಮೃತ್ಯು

Posted by Vidyamaana on 2023-11-26 22:43:34 |

Share: | | | | |


ಬೆಂಗಳೂರು ಕಂಬಳದಿಂದ ಹಿಂತಿರುಗುತ್ತಿದ್ದ ಕಾರು ಅಪಘಾತ ; ಮಂಗಳೂರಿನ ಇಬ್ಬರು ಯುವಕರು ದಾರುಣ ಮೃತ್ಯು

ತುಮಕೂರು, ನ.26: ಬೆಂಗಳೂರಿನಲ್ಲಿ ಕಂಬಳ ಮುಗಿಸಿ ಹಿಂತಿರುಗುತ್ತಿದ್ದ ಕಾರಿಗೆ ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ಲಾರಿ ಡಿಕ್ಕಿಯಾಗಿದ್ದು ಜವರಾಯನ ಅಟ್ಟಹಾಸಕ್ಕೆ ಮಂಗಳೂರು ಮೂಲದ ಇಬ್ಬರು ಯುವಕರು ಪ್ರಾಣ ತೆತ್ತಿದ್ದಾರೆ. 


ಬೋರ್ವೆಲ್ ಲಾರಿ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ, ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಲಾರಿ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.  ಕುಣಿಗಲ್ ತಾಲ್ಲೂಕಿನ ಚಿಗಣಿ ಪಾಳ್ಯ ಬಳಿ ಘಟನೆ ನಡೆದಿದೆ. 






ಮಂಗಳೂರಿನ ಬಜಪೆ ಗ್ರಾಮದ ಪೆರಾರ ನಿವಾಸಿ ಕಿಶನ್ ಶೆಟ್ಟಿ(20), ಭಟ್ರಕೆರೆ ವಾಸಿ ಫೀಲಿಪ್ ನೇರಿ(32) ಮೃತ ದುರ್ದೈವಿಗಳು.‌ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಕಂಬಳ‌ ನೋಡಿ ಮಂಗಳೂರಿಗೆ ವಾಪಸ್ ತೆರುಳುತ್ತಿದ್ದಾಗ ಅಪಘಾತ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಯುವಕರು ತೀವ್ರ ಗಾಯಗೊಂಡಿದ್ದು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ‌ಲಾರಿ ಹಾಗೂ ಚಾಲಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಜಜ್ಜಿ ಹೋಗಿದ್ದು ಪೊಲೀಸರು ಹರಸಾಹಸಪಟ್ಟು ತೆರವು ಮಾಡಿದ್ದಾರೆ. ಕುಣಿಗಲ್ ‌ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಮಂಗಳೂರು: ಡೆಂಗ್ಯೂ ಜ್ವರಕ್ಕೆ ಗೆ ನಾಟೆಕಲ್ ನಿವಾಸಿ ನವಾಜ್ ಮೃತ್ಯು

Posted by Vidyamaana on 2023-12-22 20:25:35 |

Share: | | | | |


ಮಂಗಳೂರು: ಡೆಂಗ್ಯೂ ಜ್ವರಕ್ಕೆ ಗೆ ನಾಟೆಕಲ್ ನಿವಾಸಿ ನವಾಜ್  ಮೃತ್ಯು

ಮಂಗಳೂರು: ಉಳ್ಳಾಲ ಹರೇಕಳ ನ್ಯೂಪಡ್ಪು ನಿವಾಸಿ ಸದ್ಯ ನಾಟೆಕಲ್‌ ನಲ್ಲಿ ನೆಲೆಸಿದ್ದ ನವಾಝ್‌ (32) ಎಂಬ ಯುವಕ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ.ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನವಾಝ್‌ ಗುರುವಾರ ಜ್ವರ ತೀವ್ರವಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಾವನ್ನಪ್ಪಿದ್ದಾರೆ. ಮೃತರು ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಜಿ ಎಲ್‌ ಜಿ ಫಿಶರೀಸ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು



Leave a Comment: