ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


BREAKING: ಚುನಾವಣೋತ್ತರ ಸಮೀಕ್ಷೆ ನಿಷೇಧಿಸಿ ಚುನಾವಣಾ ಆಯೋಗ ಖಡಕ್ ಆದೇಶ

Posted by Vidyamaana on 2024-04-18 17:11:23 |

Share: | | | | |


BREAKING: ಚುನಾವಣೋತ್ತರ ಸಮೀಕ್ಷೆ ನಿಷೇಧಿಸಿ ಚುನಾವಣಾ ಆಯೋಗ ಖಡಕ್ ಆದೇಶ

ಬೆಂಗಳೂರು : ಲೋಕಸಭಾ ಚುನಾವಣೆ ಮತದಾನದ ಬಳಿಕ ಚುನಾವಣೋತ್ತರ ಸಮೀಕ್ಷೆಯನ್ನು ನಿಷೇಧಿಸಿ ಚುನಾವಣಾ ಆಯೋಗವು ಖಡಕ್ ಆದೇಶ ಹೊರಡಿಸಿದೆ.


ಈ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದಂತ ಸೂರಳ್ ಕರ್ ವಿಕಾರ್ ಕಿಶೋರ್ ಅವರು ಎಲ್ಲಾ ಮಾಧ್ಯಮಗಳ ಸಂಪಾದಕರು, ವರದಿಗಾರರು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ.

ಕಾನೂನು ವಿದ್ಯಾರ್ಥಿಗೆ ಯುವತಿಯ ಬೆತ್ತಲೆ ವಿಡಿಯೋ ಕಾಲ್

Posted by Vidyamaana on 2023-10-06 10:36:47 |

Share: | | | | |


ಕಾನೂನು ವಿದ್ಯಾರ್ಥಿಗೆ ಯುವತಿಯ ಬೆತ್ತಲೆ ವಿಡಿಯೋ ಕಾಲ್

ಉತ್ತರ ಪ್ರದೇಶ: ಕಾನೂನು ವಿದ್ಯಾರ್ಥಿಯೊಬ್ಬನಿಗೆ ಲೈಂಗಿಕ ಸುಲಿಗೆಕೋರರು ಹಿಂಸೆ ಕೊಟ್ಟ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ. ಬಿಹಾರ ಮೂಲದ ಕಾನೂನು ವಿದ್ಯಾರ್ಥಿಗೆ ಕಾಡಿದ ಲೈಂಗಿಕ ಸುಲಿಗೆಕೋರರು ಆತನಿಂದ 77 ಸಾವಿರ ರೂ. ವಸೂಲಿ ಮಾಡಿದ್ದಾರೆ.


ಕಾಲೇಜ್‌ನ ಹಾಸ್ಟೆಲ್ ರೂಂನಲ್ಲಿ ಇದ್ದ ಕಾನೂನು ವಿದ್ಯಾರ್ಥಿಯ ಮೊಬೈಲ್‌ಗೆ ಅಪರಿಚಿತ ನಂಬರ್ ಒಂದರಿಂದ  ವಿಡಿಯೋ ಕಾಲ್ ಬಂದಿತ್ತು. ಕಾಲ್ ರಿಸೀವ್ ಮಾಡಿದ ಕೂಡಲೇ ಬೆತ್ತಲಾಗಿದ್ದ ಯುವತಿಯೊಬ್ಬಳ ವಿಡಿಯೋ ಕಾಣ ಸಿಕ್ಕಿತ್ತು. ಆ ಯುವತಿಯು ನೀನೂ ಕೂಡಾ ಬೆತ್ತಲಾಗು ಎಂದು ವಿದ್ಯಾರ್ಥಿಗೆ ಪುಸಲಾಯಿಸಿದ್ದಳು. ಯುವತಿಯ ಮಾತಿಗೆ ಮರುಳಾದ ವಿದ್ಯಾರ್ಥಿ ಆಕೆ ಹೇಳಿದಂತೆಯೇ ತಾನೂ ಬೆತ್ತಲಾದ. ಕೇವಲ 30 ಸೆಕೆಂಡ್‌ನಲ್ಲಿಯೇ ಈ ಕರೆ ಕಡಿತವಾಗಿತ್ತು ಎನ್ನಲಾಗಿದೆ. ಇದಾದ ಕೂಡಲೇ ವಿದ್ಯಾರ್ಥಿಯ ಮೊಬೈಲ್‌ಗೆ ಬೆದರಿಕೆ ಕರೆ ಬಂತು. ವಿದ್ಯಾರ್ಥಿಗೆ ಕರೆ ಮಾಡಿದ್ದ ಯುವತಿ ಹಣ ಕೊಡು, ಇಲ್ಲವಾದ್ರೆ ನಿನ್ನ ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಮಾಡುತ್ತೇನೆ ಎಂದು ಬೆದರಿಕೆ ಹಾಕಿದಳು ಎನ್ನಲಾಗಿದೆ.


ಯುವತಿಯ ಬೆದರಿಕೆ ಕರೆಯಿಂದಾಗಿ ಕಂಗಾಲಾದ ವಿದ್ಯಾರ್ಥಿ ಕೂಡಲೇ ತನ್ನ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 77,599 ರೂ.ಗಳನ್ನು ಯುವತಿಯ ಖಾತೆಗೆ ವರ್ಗಾಯಿಸಿದ್ದಾನೆ. ಸೆಂಟ್ರಲ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್‌ನ ಎರಡು ಖಾತೆಗಳಿಗೆ ಹಣ ವರ್ಗಾವಣೆ ಮಾಡಿರೋದಾಗಿ ಯುವಕ ಮಾಹಿತಿ ನೀಡಿದ್ದಾನೆ. ಇನ್ನು ಯುವತಿ ತನಗೆ ಕರೆ ಮಾಡಿದ ಮೊಬೈಲ್ ಸಮಖ್ಯೆ ಹನ್ಸ್‌ರಾಜ್ ಎಂಬುವನಿಗೆ ಸೇರಿದ್ದು ಎಂದು ವಿದ್ಯಾರ್ಥಿ ಪತ್ತೆ ಹಚ್ಚಿದ್ದಾನೆ. ಮತ್ತೊಂದು ನಂಬರ್‌ನ ಮೂಲ ಗೊತ್ತಾಗಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.


ವಿಡಿಯೋ ಕರೆ ಬಳಿಕ ವಿದ್ಯಾರ್ಥಿಗೆ ಮೊದಲಿಗೆ ಯುವತಿಯ ಮೊಬೈಲ್ ಕರೆ ಬಂದಿದೆ. ಆಕೆ ವಿಡಿಯೋ ಡಿಲೀಟ್ ಮಾಡಲು 28 ಸಾವಿರ ರೂ. ಕೊಡು ಎಂದು ಬೇಡಿಕೆ ಇಟ್ಟಿದ್ದಾಳೆ. ಆಗ ಯುವಕ ಈ ಬೇಡಿಕೆ ತಿರಸ್ಕರಿಸಿದ್ದಾನೆ. ಹಣ ಕೊಡೋದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಈ ವೇಳೆ ಯುವತಿ ಕರೆ ಕಟ್ ಮಾಡಿದ್ದಾಳೆ. ನಂತರ ಪುರುಷನೊಬ್ಬನ ಮೊಬೈಲ್ ಕರೆ ಬಂದಿದೆ. ಆತ ತನ್ನನ್ನು ತಾನು ದಿಲ್ಲಿಯ ಪೊಲೀಸ್ ಆಯುಕ್ತ ಎಂದು ಪರಿಚಯಿಸಿಕೊಂಡಿದ್ದಾನೆ. ನೀನು ಹಣ ಕೊಡದಿದ್ದರೆ ನಿನ್ನ ಭವಿಷ್ಯವನ್ನೇ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.


ಯುವತಿ ನಿನ್ನ ಜೊತೆ ಬೆತ್ತಲೆಯಾಗಿ ವಿಡಿಯೋ ಸಂಭಾಷಣೆ ಮಾಡಿದ್ದಾಳೆ. ಈ ಸಂಬಂಧ ನಾವು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದೇವೆ. ಈಗಾಗಲೇ ವಿಡಿಯೋ ಯೂಟ್ಯೂಬ್‌ನಲ್ಲಿದೆ. ನೀನು ಹಣ ಕೊಡದೇ ಹೋದರೆ ಈ ವಿಡಿಯೋ ವೈರಲ್ ಆಗುತ್ತದೆ ಎಂದು ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ, ಆತ ದಿಕ್ಕೇ ತೋಚದಂತಾಗಿ ಹಣ ನೀಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.

ಅಶೋಕ್ ಕುಮಾರ್ ರೈ ಎಲೆಕ್ಷನ್ ಏಜೆಂಟ್ ಆಗಿ ನ್ಯಾಯವಾದಿ ಭಾಸ್ಕರ ಗೌಡ ಕೊಡಿಂಬಾಳ

Posted by Vidyamaana on 2023-04-21 16:25:50 |

Share: | | | | |


ಅಶೋಕ್ ಕುಮಾರ್ ರೈ ಎಲೆಕ್ಷನ್ ಏಜೆಂಟ್ ಆಗಿ ನ್ಯಾಯವಾದಿ ಭಾಸ್ಕರ ಗೌಡ ಕೊಡಿಂಬಾಳ

ಪುತ್ತೂರು: ಕಾಂಗ್ರೆಸ್ ಪಕ್ಷದ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೊಡಿಂಬಾಡಿ ಅವರ ಚುನಾವಣಾ ಏಜೆಂಟ್ ಆಗಿ ಪುತ್ತೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ, ಸಿವಿಲ್ ವಕೀಲ ಭಾಸ್ಕರ ಗೌಡ ಕೊಡಿಂಬಾಳ ನೇಮಕವಾಗಿದ್ದಾರೆ.

ಚುನಾವಣಾ ಆಯೋಗದ ನಿಯಮ ಪ್ರಕಾರ ಅಭ್ಯರ್ಥಿಯ ಪರವಾಗಿ ಪ್ರತಿನಿಧಿಯನ್ನು ನಿಯೋಜಿಸಲು ಅವಕಾಶ ಇರುತ್ತದೆ.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಸಂಚಾಲಕರು ಆಗಿರುವ ಅವರು"ಬುತ್ತಿ ಊಟ" ಎಂಬ ಸಾಹಿತ್ಯ ಕೃತಿಯನ್ನು ಪ್ರಕಟಿಸಿದ್ದಾರೆ.

ಮಂಗಳೂರು ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು  ಶಿಕ್ಷಣ ಪಡೆದಿರುವ ಭಾಸ್ಕರ ಗೌಡ ಅವರು ಸಂಘಟನೆ ಮತ್ತು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಕರ್ನಾಟಕ ರಾಜ್ಯ ಮದ್ಯಸಂಯಮ ಮಂಡಳಿಯ ಮಾಜಿ ನಿರ್ದೇಶಕರಾಗಿದ್ದು, ಒಕ್ಕಲಿಗ ಗೌಡ ನ್ಯಾಯ ತೀರ್ಮಾನ ಸಮಿತಿಯ ಅಧ್ಯಕ್ಷ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ನಿಯೋಜಿತ ವಲಯ ಸೇನಾನಿಯಾಗಿದ್ದಾರೆ.

BIG NEWS : ನಾಳೆ ಲೋಕಸಭೆ ಚುನಾವಣೆ ಫಲಿತಾಂಶ : ರಾಜ್ಯಾದ್ಯಂತ 144 ಸೆಕ್ಷನ್ ಜಾರಿ

Posted by Vidyamaana on 2024-06-03 07:05:40 |

Share: | | | | |


BIG NEWS : ನಾಳೆ ಲೋಕಸಭೆ ಚುನಾವಣೆ ಫಲಿತಾಂಶ : ರಾಜ್ಯಾದ್ಯಂತ 144 ಸೆಕ್ಷನ್ ಜಾರಿ

ಬೆಂಗಳೂರು : ಲೋಕಸಭೆ ಸಾರ್ವತ್ರಿಕ ಚುನಾವಣೆ-2024 ರ ಹಿನ್ನಲೆಯಲ್ಲಿ ನಾಳೆ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜೂ.04 ರ ಬೆಳಿಗ್ಗೆ 06 ಗಂಟೆಯಿಂದ ಜೂ.05 ರ ಬೆಳಿಗ್ಗೆ 06 ಗಂಟೆಯವರೆಗೆ ಸಿಆರ್‍ಪಿಸಿ 1973 ರ ಸೆಕ್ಷನ್ 144 ರಡಿ ರಾಜ್ಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಲಾಗಿರುತ್ತದೆ ಹಾಗೂ ಮತ ಎಣಿಕೆ ಕೇಂದ್ರದ ಸುತ್ತ-ಮುತ್ತ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದೂ ಚುನಾವಣಾ ಆಯೋಗ ಆದೇಶಿಸಿದೆ.

ಮತ ಎಣಿಕೆ ನಂತರ ವಿಜಯ ಹೊಂದಿದ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ಸಭೆ ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸಿದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆಗಳಿರುವುದರಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಹಿತದೃಷ್ಠಿಯಿಂದ ಪ್ರತಿಬಂಧಕಾಜ್ಞೆ ವಿಧಿಸಿ ಆದೇಶ ಜಾರಿಗೊಳಿಸಲಾಗಿದೆ.

ಷರತ್ತುಗಳು:

ಪ್ರತಿಬಂಧಕಾಜ್ಞೆ ಅನ್ವಯ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ರಾಜಕೀಯ ಸಭೆ ಸಮಾರಂಭ, ವಾಹನ ಜಾಥಾ, ರ್ಯಾಲಿ ಮುಂತಾದ ಯಾವುದೇ ಚಟುವಟಿಕೆ ನಡೆಸುವುದು, ಸ್ಪೋಟಕ, ದಹನ ವಸ್ತುಗಳು, ಮಾರಕ ಆಯುಧಗಳನ್ನು ಹೊಂದಿರುವುದು ಅಥವಾ ಹಿಡಿದು ಓಡಾಡುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಚುನಾವಣಾ ಅಭ್ಯರ್ಥಿ ಅಥವಾ ಬೆಂಬಲಿಗರು ಸೇರಿ ಐದು ಜನರಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರುವಂತಿಲ್ಲ.

ಮತ ಎಣಿಕೆ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯ ಪ್ರದೇಶವು ಸಂಪೂರ್ಣ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿ ವರ್ಧಕ ಬಳಕೆ ಮುಂತಾದವುಗಳನ್ನು ನಿಷೇಧಿಸಿದೆ. ಸದರಿ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಿದೆ.

ಅಡ್ಡಾದಿಡ್ಡಿ ವಾಹನ ನಿಲ್ಲಿಸುವ ಸವಾರರೇ ಎಚ್ಚರಿಕೆ!!!

Posted by Vidyamaana on 2023-08-22 16:09:29 |

Share: | | | | |


ಅಡ್ಡಾದಿಡ್ಡಿ ವಾಹನ ನಿಲ್ಲಿಸುವ ಸವಾರರೇ ಎಚ್ಚರಿಕೆ!!!

ಪುತ್ತೂರು: ಪೇಟೆಯಲ್ಲಿ ವಾಹನ ದಟ್ಟಣೆ ಕೈಮೀರಿ ಹೋಗಲು ಒಂದು ಕಾರಣ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದೂ. ಇದನ್ನು ನಿಯಂತ್ರಿಸುವಲ್ಲಿ ಟ್ರಾಫಿಕ್ ಪೊಲೀಸರು ಬಿಗು ನಿಲುವು ಕೈಗೊಂಡಿದ್ದು, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಆಸುಪಾಸು ಕೆಲ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಬಸ್ ನಿಲ್ದಾಣ ಮುಂಭಾಗದ ಖಾಸಗಿ ಕಟ್ಟಡದ ಎದುರು ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುತ್ತಿದ್ದರು. ಇದು ದೊಡ್ಡ ತಲೆನೋವಾಗಿದ್ದು, ದಿನನಿತ್ಯ ಸಂಚಾರ ದಟ್ಟಣೆ ಉದ್ಭವವಾಗುತ್ತಿತ್ತು. ಇದಕ್ಕೆ ಪರಿಹಾರವಾಗಿ, ದ್ವಿಚಕ್ರ ವಾಹನ ನಿಲ್ದಾಣ ಹಾಗೂ ಆಟೋ ರಿಕ್ಷಾಗಳಿಗೆ ಪ್ರತ್ಯೇಕ ಸ್ಥಳವನ್ನು ಪಾರ್ಕಿಂಗಿಗಾಗಿ ನಿಗದಿ ಮಾಡಲಾಗಿದೆ. ಒಂದು ವೇಳೆ ಸಾರ್ವಜನಿಕರು ಇದರಿಂದ ಹೊರಭಾಗದಲ್ಲಿ‌ ತಮ್ಮ ವಾಹನಗಳನ್ನು‌ ಪಾರ್ಕಿಂಗ್ ಮಾಡಿದ್ದೇ ಆದರೆ, ಸಂಚಾರ ಪೊಲೀಸರು ಕ್ರಮ ಕೈಗೊಳ್ಳುವುದು ನಿಶ್ಚಿತ.

ಇದೇ ರೀತಿ ಗಾಂಧೀ ಕಟ್ಟೆ, ನಗರಸಭೆಯ ವಾಣಿಜ್ಯ ಸಂಕೀರ್ಣ ಮೊದಲಾದ ಕಡೆಗಳಲ್ಲೂ ಸುಧಾರಣಾ ಕ್ರಮಗಳನ್ನು ಅಳವಡಿಸಿದ್ದಾರೆ. ಸೂಕ್ತ ಯಲ್ಲೋ ಮಾರ್ಕ್ ಮಾಡಿದ್ದಾರೆ.

ಟ್ರಾಫಿಕ್ ಪಿ.ಎಸ್.ಐ. ಉದಯರವಿ ನೇತೃತ್ವದ ಪೊಲೀಸರ ತಂಡದ ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪುತ್ತೂರು ಕ್ಷೇತ್ರದಿಂದ ಗೌಡ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಿ :ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದಿಂದ ಆಗ್ರಹ

Posted by Vidyamaana on 2023-04-11 03:00:56 |

Share: | | | | |


ಪುತ್ತೂರು ಕ್ಷೇತ್ರದಿಂದ ಗೌಡ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಿ :ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದಿಂದ ಆಗ್ರಹ

ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ದ.ಕ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಎರಡು ಸ್ಥಾನಗಳಲ್ಲಿ ಒಕ್ಕಲಿಗ ಗೌಡರಿಗೆ ಪ್ರಾತಿನಿಧ್ಯ ನೀಡಬೇಕು. ಅದರಲ್ಲೂ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗಳನ್ನು ಪರಿಗಣಿಸಲೇಬೇಕು ಎಂದು ಅವರು ಆಗ್ರಹಿಸಿದರು.

ಪುತ್ತೂರು ಕ್ಷೇತ್ರದಲ್ಲಿ ಶಾಸಕರಾಗಿರುವ ನಮ್ಮ ಸಮುದಾಯದ ಸಮರ್ಥ ನಾಯಕ ಸಂಜೀವ ಮಠಂದೂರು ಅವರಿಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದು ನಿಜವೇ ಆಗಿದ್ದಲ್ಲಿ ಮಠಂದೂರು ಅವರಿಗೆ ಟಿಕೆಟ್ ದೊರೆಯದಿರಲು ಕಾರಣವೇನುಎಂದು ಅವರು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಸುಮಾರು 3.75 ಲಕ್ಷ ಮತದಾರರಿದ್ದು, ಈ ಪೈಕಿ ಪುತ್ತೂರಿನಲ್ಲಿ ಅತೀ ಹೆಚ್ಚು ಗೌಡ ಸಮುದಾಯದ ಮತದಾರರಿದ್ದಾರೆ. ಆದ್ದರಿ0ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಾದರೂ ಒಂದು ಸ್ಥಾನ ನೀಡಬೇಕು ಎಂದು ಈ ಹಿಂದೆಯೇ ವಿವಿಧ ರಾಜಕೀಯ ಪಕ್ಷಗಳಿಗೆ ಒತ್ತಾಯಿಸಲಾಗಿತ್ತು.ಆದರೆ ಇತ್ತೀಚಿನ ವರದಿಗಳನ್ನು ಗಮನಿಸಿದಾಗ ಸಮುದಾಯದ ಯಾವೊಬ್ಬ ನಾಯಕರ ಹೆಸರೂ ಪ್ರಸ್ತಾಪವಾಗಿರುವುದು ಕಂಡು ಬಂದಿಲ್ಲ.ಪುತ್ತೂರಿನಲ್ಲಿ ಗೌಡ ಸಮುದಾಯದವರಿಗೆ ಸ್ಥಾನ ಕಲ್ಪಿಸದಿದ್ದಲ್ಲಿ ಮೇ 10ರಂದು ನಡೆಯುವ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ನಿರ್ದೇಶಕ ಪದ್ಮನಾಭ ಗೌಡ, ಗುರುದೇವ್‌ ಯು.ಬಿ. ಉಪಸ್ಥಿತರಿದ್ದರು.

ಪ್ರಾಮಾಣಿಕರಿಗೆ ಇರಿಸು- ಮುರುಸು

ಪಕ್ಷಗಳಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಸಂಘಟನೆ ಮಾಡುತ್ತಿರುವವರಿಗೆ ಚುನಾವಣೆ ಸಂದರ್ಭದಲ್ಲಿ ಜಾತಿಯಾಧಾರದ ಮೇಲೆ ಟಿಕೆಟ್ ಕೇಳುವವರಿಂದಾಗಿ ಇರಿಸು ಮುರುಸು ಉಂಟಾಗಿದೆ. ಹಲವು ವರ್ಷಗಳ ಕಾಲ ಪಕ್ಷವನ್ನ ಸಂಘಟನೆ ಮಾಡಿ, ಬಲಿಷ್ಠಗೊಳಿಸಿದ ಕಾರ್ಯಕರ್ತರು ಒಂದೆಡೆ ಟಿಕೆಟ್‌ಗಾಗಿ ನಿಷ್ಠೆಯಿಂದ ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ತಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ಜಾತಿಯ ಆಧಾರದ ಮೇಲೆ ಒತ್ತಡ ಹೇರುವವರಿಂದಾಗಿ ಪ್ರಾಮಾಣಿಕರಿಗೆ ಬೇಸರ ಉಂಟಾಗಿದೆ.




Leave a Comment: