ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಸಿಗರೇಟ್ ಸೇದುತ್ತಿದ್ದ ಯುವತಿಯನ್ನ ಗುರಾಯಿಸಿದ್ದಕ್ಕೆ ಕಿರಿಕ್ ; 4 ಮಕ್ಕಳ ತಂದೆಯನ್ನ ಬರ್ಬರವಾಗಿ ಕೊಂದ ಡೆಡ್ಲಿ ಲೇಡಿ

Posted by Vidyamaana on 2024-04-09 04:43:22 |

Share: | | | | |


ಸಿಗರೇಟ್ ಸೇದುತ್ತಿದ್ದ ಯುವತಿಯನ್ನ  ಗುರಾಯಿಸಿದ್ದಕ್ಕೆ ಕಿರಿಕ್ ; 4 ಮಕ್ಕಳ ತಂದೆಯನ್ನ ಬರ್ಬರವಾಗಿ ಕೊಂದ ಡೆಡ್ಲಿ ಲೇಡಿ

ಮಹಾರಾಷ್ಟ್ರ, ಏ 08: ಆಕೆ ರಸ್ತೆ ಬದಿಯ ಬೀಡಾ ಅಂಗಡಿ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದಳು. ಆಕೆಯ ಜೊತೆ ಆಕೆಯ ಗೆಳತಿಯೂ ಇದ್ದರು. ಈ ವೇಳೆ ಅಂಗಡಿ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಸಿಗರೇಟ್ ಸೇದುತ್ತಿದ್ದ ಯುವತಿಯನ್ನೇ ಗುರಾಯಿಸುತ್ತಿದ್ದ. ಅಷ್ಟೇ.. ಯುವತಿ ಬುಲಾವ್ ಕೊಟ್ಟಿದ್ದೇ ತಡ ಸ್ಥಳಕ್ಕಾಗಮಿಸಿದ ಆಕೆಯ ಗೆಳೆಯರ ಜೊತೆ ಸೇರಿದ ಯುವತಿ ತನ್ನನ್ನು ಕೆಣಕಿದ ವ್ಯಕ್ತಿಯನ್ನು ಕೊಂದು ಮುಗಿಸಿದ್ದಾರೆ.


ಮಹಾರಾಷ್ಟ್ರ ರಾಜ್ಯದ ನಾಗಪುರ ಜಿಲ್ಲೆಯಲ್ಲಿ ನಡೆದ ಶಾಕಿಂಗ್ ಘಟನೆ ಇದು. 24 ವರ್ಷದ ಯುವತಿ ಪಾನ್ ಶಾಪ್ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದ ವೇಳೆ ಈ ಘಟನೆ ನಡೆದಿದೆ. ಆಕೆ ತನ್ನ ಇಬ್ಬರು ಪುರುಷ ಗೆಳೆಯರ ಜೊತೆ ಸೇರಿ 28 ವರ್ಷ ವಯಸ್ಸಿನ ರಂಜಿತ್ ರಾಥೋಡ್ ಎಂಬಾತನನ್ನ ಹತ್ಯೆ ಮಾಡಿದ್ದಾರೆ. ಮೃತ ವ್ಯಕ್ತಿ 4 ಹೆಣ್ಣು ಮಕ್ಕಳ ತಂದೆ ಎಂದು ತಿಳಿದು ಬಂದಿದೆ.


ಕಳೆದ ಶನಿವಾರ ತಡ ರಾತ್ರಿ ನಡೆದ ಈ ಘಟನೆಯ ಸಿಸಿಟಿವಿ ವಿಡಿಯೋ ಇದೀಗ ವೈರಲ್ ಆಗಿದೆ. ನಾಗಪುರದ ಮನೇವಾಡ ಸಿಮೆಂಟ್ ರಸ್ತೆಯ ಪಾನ್ ಶಾಪ್‌ ಬಳಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಗುದ್ದಾಟದ ದೃಶ್ಯ ದಾಖಲಾಗಿದೆ. ಈ ವಿಡಿಯೋ ನೋಡಿ ಸ್ಥಳೀಯರು ಆಘಾತಕ್ಕೀಡಾಗಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಮಾಹಿತಿ

Posted by Vidyamaana on 2024-06-14 10:19:10 |

Share: | | | | |


ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಮಾಹಿತಿ

ನವದೆಹಲಿ: ನೀವು ಮನೆ ಖರೀದಿಸಲು ಬಯಸಿದರೆ ಮತ್ತು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ  ಲಾಭವನ್ನು ಪಡೆಯಲು ಬಯಸಿದರೆ ಅದು ತುಂಬಾ ಸುಲಭ. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಸರ್ಕಾರಿ ಯೋಜನೆಯಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಿಮಗೆ ಆಧಾರ್ ಸಂಖ್ಯೆಯೂ ಅತ್ಯಗತ್ಯ. ಅಲ್ಲದೆ ಅರ್ಜಿದಾರನು ಸಂಪೂರ್ಣ ಮಾಹಿತಿಯನ್ನು ನಿಖರವಾಗಿ ನೀಡಬೇಕಾಗುತ್ತದೆ.

ಎಲ್ಲ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಆರಂಭಿಸಿದೆ. ಈ ಯೋಜನೆಯನ್ನು 2015ರ ಜೂನ್‌ 1ರಂದು ಮೊದಲ ಬಾರಿಗೆ ಪರಿಚಯಿಸಲಾಯಿತು. ಈ ಯೋಜನೆಯಡಿ ವಾರ್ಷಿಕ ಶೇ.6.50ರ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತದೆ.

PMAY ಯೋಜನೆಯಡಿ ಪ್ರಯೋಜನಗಳೇನು?

• PMAY ಯೋಜನೆಯಡಿ, ಎಲ್ಲಾ ಫಲಾನುಭವಿಗಳಿಗೆ ಕೇವಲ ವಾರ್ಷಿಕ ಶೇ. 6.50 ಬಡ್ಡಿದರದಲ್ಲಿ 20 ವರ್ಷಗಳವರೆಗೆ ವಸತಿ ಸಾಲ ನೀಡಲಾಗುತ್ತದೆ.

• ನೆಲ ಮಹಡಿಯಲ್ಲಿರುವ ಮನೆಗಳು ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಮಾತ್ರ ಮೀಸಲಾಗಿದೆ

• ಗೃಹ ನಿರ್ಮಾಣದಲ್ಲಿ ಸುಸ್ಥಿರ, ಪರಿಸರ ಸ್ನೇಹಿ ತಂತ್ರಜ್ಞಾನ ಬಳಸಲಾಗುತ್ತದೆ

• ಈ ಯೋಜನೆಯು ದೇಶದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನ್ವಯಿಸುತ್ತದೆ. ಮೂರು ಹಂತಗಳಲ್ಲಿ ನಗರ ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ

ಫಲಾನುಭವಿಗಳು ಯಾರು?

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳನ್ನು ವಾರ್ಷಿಕ ಆದಾಯದ ಆದಾರದಲ್ಲಿ ಈ ರೀತಿ ವರ್ಗೀಕರಿಸಬಹುದು

• ಮಧ್ಯಮ ಆದಾಯ ಗುಂಪು 1 (MIG1): 6 ಲಕ್ಷದಿಂದ 12 ಲಕ್ಷ ರೂ

• ಮಧ್ಯಮ ಆದಾಯ ಗುಂಪು 2 (MIG2): 12 ಲಕ್ಷದಿಂದ 18 ಲಕ್ಷ ರೂ

• ಕಡಿಮೆ ಆದಾಯದ ಗುಂಪು (ಎಲ್‌ಐಜಿ) : 3 ಲಕ್ಷದಿಂದ 6 ಲಕ್ಷ ರೂ

• ಆರ್ಥಿಕವಾಗಿ ಹಿಂದುಳಿದ ವರ್ಗ (EWS): 3 ಲಕ್ಷದವರೆಗೆ

ಯೋಜನೆಯಲ್ಲಿ ಎರಡು ವಿಧ

ಮಂಗಳೂರು : ಮಹಿಳಾ ಸಿಬ್ಬಂದಿಗೆ ಹಲ್ಲೆ ಆರೋಪ- ಆಪತ್ ಬಾಂಧವ ಆಸಿಫ್ ಅರೆಸ್ಟ್

Posted by Vidyamaana on 2023-10-12 15:13:36 |

Share: | | | | |


ಮಂಗಳೂರು : ಮಹಿಳಾ ಸಿಬ್ಬಂದಿಗೆ ಹಲ್ಲೆ ಆರೋಪ- ಆಪತ್ ಬಾಂಧವ ಆಸಿಫ್ ಅರೆಸ್ಟ್

ಮಂಗಳೂರು: ಅನಾಥ ರೋಗಿಗಳಿಗೆ ಸಹಾಯ ಮಾಡುತ್ತಿದ್ದ ಮುಲ್ಕಿ ನಿವಾಸಿ ಆಪತ್ಥಾಂಧವ ಎಂದೇ ಗುರುತಿಸಲ್ಪಟ್ಟಿದ್ದ ಆಸಿಫ್ ಅವರನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ವೆನ್ಲಾಕ್ ಆಸ್ಪತ್ರೆಯ ಮಹಿಳಾ ಸೆಕ್ಯುರಿಟಿ ಸಿಬ್ಬಂದಿಗೆ ಹಲ್ಲೆ ನಡೆಸಿರುವ ಆರೋಪದ ಮೇರೆಗೆ ಬಂಧಿಸಿದ್ದಾರೆ. ಆಸಿಫ್ ಬುಧವಾರ ಸಂಜೆ ವೆಸ್ಲಾಕ್ ಆಸ್ಪತ್ರೆಗೆ ಇಬ್ಬರು ರೋಗಿಗಳನ್ನು ಕರೆತಂದಿದ್ದರು ಎನ್ನಲಾಗಿದೆ. ಈ ಸಂದರ್ಭ ಸೆಕ್ಯುರಿಟಿ ಗಾರ್ಡ್ ವಾಹನವನ್ನು ಹೊರಗೆ ಒಯ್ಯುವಂತೆ ಸೂಚಿಸಿದಾಗ ತಾನು ರೋಗಿಗಳನ್ನು ಅಡ್ಮಿಷನ್ ಮಾಡಿಸುತ್ತಿದ್ದೇನೆ, ಸ್ವಲ್ಪ ಹೊತ್ತು ಕಾಯಿರಿ ಎಂದು ಆಸಿಫ್ ಹೇಳಿದ್ದಾರೆ. ಆದರೆ ಕೆಲವು ಹೊತ್ತಿನ ಬಳಿಕವೂ ಆ್ಯಂಬುಲೆನ್ಸ್ ತೆರವು ಮಾಡದಿದ್ದಾಗ ಮಹಿಳಾ ಸಿಬ್ಬಂದಿ ಆಕ್ಷೇಪಿಸಿದರು. ಈ ಸಂದರ್ಭ ಆಸಿಫ್ ಮತ್ತು ಮಹಿಳಾ ಸಿಬ್ಬಂದಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ತನ್ನನ್ನು ದೂಡಿ ಹಾಕಿ ಆಸಿಫ್ ಹಲ್ಲೆ ಮಾಡಿದ್ದಾರೆ ಎಂದು ಮಹಿಳಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪೊಲೀಸರು ಆಸಿಫ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರೇ ತಿಂಗಳಲ್ಲಿ ಫಲಿಸಿದ ಕೋರಿಕೆ – ಕೊರಗಜ್ಜನ ಸನ್ನಿಧಿಗೆ ಬಂದು ಆ ನಟಿ ತೀರಿಸಿದ್ರು ಹರಕೆ

Posted by Vidyamaana on 2023-08-09 12:32:22 |

Share: | | | | |


ಮೂರೇ ತಿಂಗಳಲ್ಲಿ ಫಲಿಸಿದ ಕೋರಿಕೆ – ಕೊರಗಜ್ಜನ ಸನ್ನಿಧಿಗೆ ಬಂದು ಆ ನಟಿ ತೀರಿಸಿದ್ರು ಹರಕೆ

ಮಂಗಳೂರು: ತುಳುನಾಡಿನ ಕಾರಣಿಕದ ಶಕ್ತಿ ಕೊರಗಜ್ಜನ ಕಾರಣಿಕ ಮತ್ತೊಮ್ಮೆ ಸಾಬೀತುಗೊಂಡಿದೆ. ಇಲ್ಲಿನ ಕುತ್ತಾರು ಕೊರಗಜ್ಜನ ಆದಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿ ಹೋಗಿದ್ದ ಮೂರೇ ತಿಂಗಳಿನಲ್ಲಿ ತಮ್ಮ ಬೇಡಿಕೆ ಈಡೇರಿದ ಕಾರಣದಿಂದ ಸ್ಯಾಂಡಲ್ ವುಡ್ ನ ಖ್ಯಾತ ನಟಿ  ಮಾಲಾಶ್ರೀ ಇದೀಗ ಕುತ್ತಾರಿಗೆ ಕುಟುಂಬ ಸಮೇತ ಆಗಮಿಸಿ ತಮ್ಮ ಹರಕೆ ತೀರಿಸಿದ್ದಾರೆ.


ಆ.09ರ ಬುಧವಾರದಂದು ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಕ್ಷೇತ್ರಕ್ಕೆ ತಮ್ಮ ಮಗಳು ಅನನ್ಯಾಳೊಂದಿಗೆ ಆಗಮಿಸಿದ ಮಾಲಾಶ್ರಿ ಅವರು ಇಲ್ಲಿ ಕೊರಗಜ್ಜನಿಗೆ ಹೇಳಿಕೊಂಡಿದ್ದ ಹರಕೆಯನ್ನು ತೀರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆವು. ಆ ಬಳಿಕ ನಮ್ಮ ಕೋರಿಕೆ ಪವಾಡ ಸದೃಶವಾಗಿ ಈಡೇರಿತ್ತು. ಈ ಕ್ಷೇತ್ರದ ಶಕ್ತಿ ಅಪಾರವಾದುದು..’ ಎಂದು ಮಾಲಾಶ್ರೀ ಹೇಳಿದ್ದಾರೆ.


ನಮ್ಮ ಬೇಡಿಕೆಯನ್ನು ಕೊರಗಜ್ಜ ಈಡೇರಿಸಿದ ಕಾರಣ ಹರಕೆ ತೀರಿಸಿ ಆಶೀರ್ವಾದ ಪಡೆದುಕೊಳ್ಳುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆ ನಾನಿಲ್ಲಿ ಬಂದಿದ್ದೇನೆ, ಮುಂದೆಯೂ ಬರುತ್ತೇನೆ ಎಂದು ಮಾಲಾಶ್ರಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ದ.ಕ ಜಿಲ್ಲೆ ಸೇರಿ ಕರಾವಳಿಯಲ್ಲಿ ಮೂರು ದಿನ ಬಿಸಿಗಾಳಿ ಸಾಧ್ಯತೆ: ಹವಾಮಾನ ಇಲಾಖೆ

Posted by Vidyamaana on 2024-04-27 13:31:37 |

Share: | | | | |


ದ.ಕ ಜಿಲ್ಲೆ ಸೇರಿ ಕರಾವಳಿಯಲ್ಲಿ ಮೂರು ದಿನ ಬಿಸಿಗಾಳಿ ಸಾಧ್ಯತೆ: ಹವಾಮಾನ ಇಲಾಖೆ

ಮಂಗಳೂರು: ದ.ಕ. ಜಿಲ್ಲೆ‌ ಸೇರಿ ಕರಾವಳಿಯಲ್ಲಿ ಬೇಸಿಗೆಯ ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎ.30ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ಹೇಳಿದೆ.

ಭಾರತೀಯ ಹವಾಮಾನ ಇಲಾಖೆ ಮುಂದಿನ ಐದು ದಿನಗಳ ಕಾಲ ದ.ಕ, ಉಡುಪಿ ಸಹಿತ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಹೆಚ್ಚಾಗಲಿದೆ ಎಂದು ವರದಿ ಮಾಡಿದೆ.

ವಿಟ್ಲ: ಅನುಮಾನಾಸ್ಪದವಾಗಿ ಬೈಕ್ ನಲ್ಲಿ ಯುವಕರ ಸುತ್ತಾಟ

Posted by Vidyamaana on 2023-12-04 05:11:31 |

Share: | | | | |


ವಿಟ್ಲ: ಅನುಮಾನಾಸ್ಪದವಾಗಿ ಬೈಕ್ ನಲ್ಲಿ ಯುವಕರ ಸುತ್ತಾಟ

ವಿಟ್ಲ:ಸಂಜೆ ಹೊತ್ತಲ್ಲಿ ಸಂಶಯಾಸ್ಪದವಾಗಿ ಐದಾರು ಬಾರಿ ಅತ್ತಿತ್ತ ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಯುವಕರನ್ನು ಸ್ಥಳೀಯರು ತಡೆದು ವಿಚಾರಿಸುತ್ತಿದ್ದಂತೆ ಬೈಕ್‌ ಸವಾರ ಎಸ್ಕೆಪ್ ಆದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ಳಾಡು ಗ್ರಾಮದ ಕಾಡುಮಠ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನಡೆದಿದೆ.


ಮುಸ್ಸಂಜೆ ಹೊತ್ತಲ್ಲಿ ಸಂಶಯಾಸ್ಪದವಾಗಿ ಐದಾರು ಬಾರಿ ಅತ್ತಿತ್ತ ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಯುವಕರನ್ನು ಸ್ಥಳೀಯರು ತಡೆದು ವಿಚಾರಿಸುತ್ತಿದ್ದಂತೆ ಬೈಕ್‌ ಸವಾರ ಎಸ್ಕೆಪ್ ಆಗಿದ್ದು, ಹಿಂಬದಿ ಸವಾರನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.


ಹಿಂಬದಿ ಸವಾರ ಅಡ್ಯನಡ್ಕ ನಿವಾಸಿ ರಾಕೇಶ್ ಎಂದು ಗುರುತಿಸಲಾಗಿದೆ.


ಪರಾರಿಯಾದ ಬೈಕ್ ಸವಾರನ ಸಾರ್ವಜನಿಕರು ಶೋಧ ನಡೆಸುತಿದ್ದಾರೆ.



Leave a Comment: