ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಸುದ್ದಿಗಳು News

Posted by vidyamaana on 2024-07-03 13:36:16 |

Share: | | | | |


ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಬೆಂಗಳೂರು (ಜು.3): ಇಲ್ಲಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು.

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಮದುವೆಯಾಗಿದ್ದ ಶ್ರೀಕಾಂತ್!

ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 Share: | | | | |


ಗ್ರಾಹಕರ ಜವಾಬ್ದಾರಿ ನೆನಪಿಸಿದ ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ!!

Posted by Vidyamaana on 2024-02-12 07:42:40 |

Share: | | | | |


ಗ್ರಾಹಕರ ಜವಾಬ್ದಾರಿ ನೆನಪಿಸಿದ ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ!!

ವಿಟ್ಲ: ಜಿಲ್ಲೆ ಮಾತ್ರವಲ್ಲ ರಾಜ್ಯದ ಚಿತ್ತವನ್ನೇ ತನ್ನತ್ತ ಸೆಳೆದುಕೊಂಡ ಘಟನೆ ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ. ವಿರಳಾತೀವಿರಳ ಪ್ರಕರಣದಲ್ಲಷ್ಟೇ ಬ್ಯಾಂಕ್ ದರೋಡೆಯನ್ನು ದರೋಡೆಕೋರರು ಯಶಸ್ವಿಯಾಗಿ ನಡೆಸುತ್ತಾರೆ. ಅಂತಹ ಸಿನಿಮೀಯ ಘಟನೆ ಅಡ್ಯನಡ್ಕದಲ್ಲಿ ನಡೆದಿದ್ದು, ದರೋಡೆಕೋರರು ನಗ ಹಾಗೂ ನಗದಿನೊಂದಿಗೆ ಪರಾರಿಯಾಗಿದ್ದಾರೆ.

ಇದೀಗ ಆರೋಪಿಗಳಿಬ್ಬರ ಪತ್ತೆ ಆಗಿರಬಹುದು. ಪೊಲೀಸರು ತಮ್ಮ ಶ್ರಮದ ಎಲ್ಲೆ ಮೀರಿ ದರೋಡೆಕೋರರ ಹೆಡೆಮುರಿ ಕಟ್ಟಿರಬಹುದು. ಆದರೆ, ಈ ಪ್ರಕರಣ ಗ್ರಾಹಕರ ಜವಾಬ್ದಾರಿಯನ್ನು ನೆನಪಿಸಿದೆ ಎಂದು ಹೇಳಿದರೆ ತಪ್ಪಾಗದು.

ಹೌದು! ಎಚ್ಚರ ಗ್ರಾಹಕ ಎಚ್ಚರ!! ಶ್ಲೋಗನ್ ನೀವು ಎಲ್ಲಾ ಕಡೆಯೂ ಕೇಳಿರಬಹುದು. ಇದು ಬ್ಯಾಂಕಿಂಗ್ ಕ್ಷೇತ್ರಕ್ಕೂ ಅನ್ವಯಿಸುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬ್ಯಾಂಕಿಂಗ್ ಕ್ಷೇತ್ರ ಅತೀ ಸೇಫ್ ಆಗಿದೆ, ಬ್ಯಾಂಕಿಂಗ್ ಉದ್ಯಮಿಗಳು ಹದ್ದಿನ ಕಣ್ಣಿನಿಂದ ನಮ್ಮ ಆಸ್ತಿಯನ್ನು ಕಾಪಾಡುತ್ತಾರೆ ಎಂಬ ಭ್ರಮೆಯಿಂದ ಈಗಲಾದರೂ ಸ್ವಲ್ಪ ಹೊರಬಂದು ನೋಡಿ. ಅಡ್ಯನಡ್ಕ ಕರ್ಣಾಟಕ ಬ್ಯಾಂಕನ್ನು ದರೋಡೆ ಮಾಡುವ ಹಿಂದೆ ಬ್ಯಾಂಕಿನಿಂದ ನಡೆದಿರಬಹುದಾದ ತಪ್ಪುಗಳನ್ನೇ ಗಮನಿಸಿದರೂ ಸಾಕು!!

1) ದರೋಡೆಕೋರರು ಬ್ಯಾಂಕ್ ಒಳನುಗ್ಗಲು ಬಳಸಿದ ಕಿಟಕಿಯನ್ನು ಇದೀಗ ಮುಚ್ಚಲಾಗಿದೆ. ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಕಟ್ಟಡದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗುತ್ತಿದೆ.

2) ಸ್ಟ್ರಾಂಗ್ ರೂಮ್ ಅನ್ನು ಇದೀಗ ಮತ್ತಷ್ಟು ಭದ್ರ ಪಡಿಸಲಾಗುತ್ತಿದೆ. ಅದರ ಬಾಗಿಲುಗಳನ್ನು ಕ್ರೇನ್ ಸಹಾಯದಿಂದ ಅಳವಡಿಸಲಾಗುತ್ತಿದೆ.

ತಾವೇ ನಂಬರ್  ವನ್ ಎಂದು ಬಿಂಬಿಸಿಕೊಳ್ಳುತ್ತಾ, ಗ್ರಾಮ ಗ್ರಾಮದಲ್ಲೂ ತಲೆ ಎತ್ತುತ್ತಿರುವ ಬ್ಯಾಂಕಿಂಗ್ ಉದ್ಯಮ ಬರೀಯ ಉದ್ಯಮವಾಗಿದೆಯಷ್ಟೇ. ಗ್ರಾಹಕರು ಅಡ ಇಡುವ ಆಸ್ತಿಗಳ ಸೇಫ್ ಬಗ್ಗೆ ಗಮನ ಹರಿಸಿಯೇ ಇಲ್ಲ. ಗ್ರಾಹಕರು ತಾವು ಸ್ವತ್ತು ಅಡ ಇಡುವ ಮೊದಲು ಇವುಗಳನ್ನೆಲ್ಲಾ ಗಮನಿಸಿಕೊಳ್ಳುವುದು ಅನಿವಾರ್ಯ.

1) ತಮಗೆ ಸೇವೆ ನೀಡುತ್ತಿರುವ ಬ್ಯಾಂಕ್ ಅದೆಷ್ಟು ಸೇಫ್ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು.

2) ಸ್ವತ್ತುಗಳಿಗೆ ಅವರೆಷ್ಟು ಭದ್ರತೆ ನೀಡುತ್ತಾರೆ ಎನ್ನುವ ಬಗ್ಗೆಯೂ ಖಾತ್ರಿ ಪಡಿಸಿಕೊಳ್ಳಬೇಕು.

3) ಲೋನ್ ನೀಡುವಾಗ ಬ್ಯಾಂಕುಗಳು ಪಡೆದುಕೊಳ್ಳುವ ದಾಖಲಾತಿ, ಪರಿಶೀಲನೆ ಇವುಗಳನ್ನು ಅಡ ಇಡುವ ಸಂದರ್ಭ ಅನುಸರಿಸುತ್ತಿವೆಯೇ? ಇಲ್ಲಾ ಎಂದಾದರೆ ಗ್ರಾಹಕರು ಇವನ್ನು ಮಾಡಲೇಬೇಕು ತಾನೇ?

ಪೊಲೀಸರ ಜವಾಬ್ದಾರಿ:

ಯಾವುದೇ ಅವಘಡ ನಡೆದಾಗಲೂ ಮೊದಲ ಬೈಗುಳ ಪೊಲೀಸರಿಗೆ. ಯಾಕೆ ಹೀಗೆ? ಕೃತ್ಯ ನಡೆದ ಬಳಿಕವಷ್ಟೇ ಪೊಲೀಸರ ಪ್ರವೇಶ ಆಗುತ್ತದೆ. ಅದಕ್ಕೆ ಮೊದಲು ಕೃತ್ಯವನ್ನು ತಡೆಯುವಲ್ಲಿ ಗ್ರಾಹಕರ ಪಾತ್ರ ಪ್ರಮುಖವಾದದ್ದು. ತನಗೇಕೆ ಬೇಕು? ತನಗೇನು ಪ್ರಯೋಜನ? ಎಂಬಿತ್ಯಾದಿ ಧೋರಣೆ ಬಿಟ್ಟು ಪ್ರತಿಯೊಬ್ಬರು  ನಮ್ಮ ಕರ್ತವ್ಯ, ಜವಾಬ್ದಾರಿಯನ್ನು ನೆನಪಿಸಿಕೊಳ್ಳಬೇಕು.

ಬ್ಯಾಂಕ್ ದರೋಡೆ ಪ್ರಕರಣವನ್ನೇ ನೋಡಿದರೂ, ದರೋಡೆಕೋರರು ಎಷ್ಟು ಚಾಲಕಿಗಳು ಎನ್ನುವುದನ್ನು ಅರಿತುಕೊಳ್ಳಬಹುದು. ಆಧುನಿಕ ತಂತ್ರಜ್ಞಾನಗಳನ್ನು ಕಳ್ಳರು ಅಥವಾ ದರೋಡೆಕೋರರು ಬಳಸಿಕೊಳ್ಳುವ ರೀತಿಗೆ ಆಶ್ಚರ್ಯಪಡಲೇಬೇಕು. ಹೀಗಿದ್ದರೂ ಕೃತ್ಯವನ್ನು ಬೇಧಿಸಿದರೆ ಪೊಲೀಸರಿಗೆ ಶಹಬ್ಬಾಶ್, ಬೇಧಿಸದೇ ಇದ್ದರೆ ಮತ್ತದೇ ಬೈಗುಳಗಳ ಸುರಿಮಳೆ. ಇದರಿಂದ ಹೊರಬಂದು ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವ ಅಗತ್ಯ ತುಂಬಾ ಇದೆ.

ದ.ಕ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

Posted by Vidyamaana on 2024-04-22 10:48:39 |

Share: | | | | |


ದ.ಕ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕೆಲವು ಜಿಲ್ಲೆಗಳಲ್ಲಿ ಆರೆಂಜ್ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.


ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಆರೆಂಜ್ ಅಲರ್ಟ್ ಘೊಷಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ

ಪ್ರವೀಣ್ ನೆಟ್ಟಾರು ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Posted by Vidyamaana on 2023-05-12 10:23:34 |

Share: | | | | |


ಪ್ರವೀಣ್ ನೆಟ್ಟಾರು ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

ಪುತ್ತೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ, ಪ್ರವೀಣ್ ಹೆತ್ತವರೊಂದಿಗೆ ಮಾತನಾಡಿದರು.

ಕಾರ್ಕಳದಲ್ಲೊಂದು ಹೃದಯ ವಿದ್ರಾವಕ ಘಟನೆ

Posted by Vidyamaana on 2023-06-26 06:54:34 |

Share: | | | | |


ಕಾರ್ಕಳದಲ್ಲೊಂದು ಹೃದಯ ವಿದ್ರಾವಕ ಘಟನೆ

ಕಾರ್ಕಳ : ಕ್ಷುಲ್ಲಕ ವಿಚಾರಕ್ಕಾಗಿ ದಂಪತಿಗಳ ಮಧ್ಯೆ ಜಗಳವಾಗಿದ್ದು ಸಾವಿನೊಂದಿಗೆ ಅಂತ್ಯ ಕಂಡಿರುವ ಘಟನೆ ಜೂ. 25ರಂದು ಕಾರ್ಕಳ ತಾಲೂಕು ನಲ್ಲೂರಿನಲ್ಲಿ ನಡೆದಿದೆ. ಯಲ್ಲಾಪುರ ಮೂಲದ ಇಮ್ಯಾನುಲ್ ಸಿದ್ದಿ (40) ಹಾಗೂ ಯಶೋಧಾ (32) ಎಂಬವರೇ ಸಾವಿಗೀಡಾದ ದಂಪತಿ


ಭಾನುವಾರ ಬೆಳಿಗ್ಗೆ ಟಿವಿ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ಮಧ್ಯೆ ಜಗಳವಾಗಿದ್ದು, ಈ ವೇಳೆ ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿದರು. ಯಶೋಧಾರನ್ನು ರಕ್ಷಿಸಲು ತೆರಳಿದ್ದ ಪತಿ ಇಮ್ಯಾನುಲ್ ಕೂಡ ನೀರುಪಾಲಾದವರು ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳಿಂದ ಇಮ್ಯಾನುಲ್, ಯಶೋಧಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸಕ್ಕಿದ್ದರು. ದಂಪತಿ ಸಾವಿನಿಂದ ಇದೀಗ 10 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿ ಅನಾಥರಾಗಿದ್ದಾರೆ.


ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ, ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ತೇಜಸ್ವಿ, ಪೊಲೀಸರಾದ ಪ್ರಕಾಶ್, ಸುಭಾಶ್ ಕಾಮತ್, ಸುಂದರ ಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.ಶವ ಸ್ಥಳೀಯರು ಗ್ರಾಮ ಪಂಚಾಯತ್ ಸದಸ್ಯರಾದ ಸುಮಿತ್ ನಲ್ಲೂರು ಲೋಕೇಶ್ ಶೆಟ್ಟಿ, ಸ್ಥಳೀಯರಾದ ಹರಿಪ್ರಸಾದ್ ಬಜಗೋಳಿ, ಶಿವಣ್ಣ ನಲ್ಲೂರು, ನಾರಾಯಣ ಗೌಡ ಅವರು ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತುವಲ್ಲಿ ಸಹಕರಿಸಿದರು.

ಬೆಳ್ತಂಗಡಿ: ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ 9 ನೇ ತರಗತಿ ಬಾಲಕ ಆತ್ಮಹತ್ಯೆಗೆ ಶರಣು

Posted by Vidyamaana on 2023-04-28 11:35:40 |

Share: | | | | |


ಬೆಳ್ತಂಗಡಿ: ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ 9 ನೇ ತರಗತಿ ಬಾಲಕ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ : ಇಲ್ಲಿನ ಬೆಳ್ತಂಗಡಿ ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಬೆಳ್ತಂಗಡಿ ತಾಲೂಕು ಪಂಚಾಯತ್ ನ ಪಕ್ಕದಲ್ಲಿರುವ ಸರಕಾರಿ ವಸತಿಗೃಹದಲ್ಲಿ ಬೆಳ್ತಂಗಡಿ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಮಂಜಳಾ ಅವರ ತಂಗಿ ಭಾಗ್ಯಮ್ಮ ಅವರ ಮಗ ಶಿವಪ್ರಸಾದ್ (15) ವಸತಿಗೃಹದ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ಚಿತ್ರದುರ್ಗ ಜಿಲ್ಲೆಯ ಹಿರುಯೂರು ತಾಲೂಕು ಹೊಸ ಎಲೆನಾಡು ಗ್ರಾಮದ ನಿವಾಸಿ ರಮೇಶ್ ಮತ್ತು ಭಾಗ್ಯಮ್ಮ ದಂಪತಿಗಳ ಮೂವರು ಮಕ್ಕಳಲ್ಲಿ ಎರಡನೇ ಮಗನಾದ ಶಿವಪ್ರಸಾದ್ (15) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಶಿವಪ್ರಸಾದ್ ಚಿತ್ರದುರ್ಗದಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶಾಲೆಗೆ ರಜೆ ಇರುವುದರಿಂದ ದೊಡ್ಡಮ್ಮ ಮಂಜುಳಾ ಅವರ ಬೆಳ್ತಂಗಡಿ ವಸತಿಗೃಹಕ್ಕೆ ಬಂದಿದ್ದು ಘಟನೆ ವೇಳೆ ಮಂಜುಳಾ ಕೆಲಸಕ್ಕೆ ಹೋಗಿದ್ದು ,ಮಗಳು ಅಮೃತ ಕಾಲೇಜಿಗೆ ಹೋಗಿದ್ದಳು, ಮಗ ವಿರೇಂದ್ರ ಕೂಡ ಕೆಲಸಕ್ಕೆ ಹೋಗಿದ್ದರು.ಮಧ್ಯಾಹ್ನ ಮಂಜುಳಾ ಕೆಲಸದಿಂದ ವಸತಿಗೃಹಕ್ಕೆ ಬಂದಾಗ ಬಾಲಕ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು. ಬೆಳ್ತಂಗಡಿ ಸಬ್ ಇನ್ಸೆಕ್ಟರ್ ಅರ್ಜುನ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು. ಚಿತ್ರದುರ್ಗದಲ್ಲಿರುವ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಮನೆಯವರು ಬರುವಿಕೆಗಾಗಿ ಪೊಲೀಸರು ಬಾಲಕ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯನ್ನು ಭದ್ರವಾಗಿ ಬೀಗಹಾಕಿ ಇಟ್ಟಿದ್ದಾರೆ.

ನೇಣು ಬಿಗಿದು ನೆಟ್ಟಾರು ನಿವಾಸಿ ಚರಣ್ ಆತ್ಮಹತ್ಯೆ

Posted by Vidyamaana on 2024-05-13 17:08:28 |

Share: | | | | |


ನೇಣು ಬಿಗಿದು  ನೆಟ್ಟಾರು ನಿವಾಸಿ ಚರಣ್ ಆತ್ಮಹತ್ಯೆ

ಬೆಳ್ಳಾರೆ: ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಟಾರುವಿನಲ್ಲಿ ನಡೆದಿದೆ.

ಬೆಳ್ಳಾರೆ ನೆಟ್ಟಾರು ನಿವಾಸಿ ಚರಣ್ (22) ಆತ್ಮಹತ್ಯೆಗೆ ಶರಣಾದ ಯುವಕ.



Leave a Comment: