ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


ನವ ದಂಪತಿ ಗಳು ಚಿಲಿಸುತಿದ್ದ ಕಾರಿಗೆ ಟ್ಯಾಂಕರ್ ಢಿಕ್ಕಿ ಸ್ಥಳದಲ್ಲೇ ಇಬ್ಬರು ಮೃತ್ಯು

Posted by Vidyamaana on 2023-04-02 05:43:36 |

Share: | | | | |


ನವ ದಂಪತಿ ಗಳು ಚಿಲಿಸುತಿದ್ದ ಕಾರಿಗೆ ಟ್ಯಾಂಕರ್ ಢಿಕ್ಕಿ ಸ್ಥಳದಲ್ಲೇ  ಇಬ್ಬರು ಮೃತ್ಯು

ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ಗಾಂಧಿನಗರ ಬಳಿ ಇರುವ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿಗಗಳು ಸ್ಥಳದಲ್ಲೇ ಸಾವನ್ನಪಿದ್ದು, ಓರ್ವ ಮಹಿಳೆ ಹಾಗೂ ಓರ್ವ ಪುರಷ ಗಂಭೀರ ಗಾಯಗೊಂಡಿ ಘಟನೆ ಶನಿವಾರದ ಸಂಜೆ ನಡೆದಿದೆ.

ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕಿನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಎಲುಬು ಮತ್ತು ಕೀಲು ತಪಾಸಣೆ, ಹಾಗೂ ಫಿಸಿಯೋಥೇರೇಪಿ ಉಚಿತ ಶಿಬಿರ

Posted by Vidyamaana on 2024-01-25 16:33:53 |

Share: | | | | |


ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕಿನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಎಲುಬು ಮತ್ತು ಕೀಲು ತಪಾಸಣೆ, ಹಾಗೂ ಫಿಸಿಯೋಥೇರೇಪಿ ಉಚಿತ ಶಿಬಿರ

ಪುತ್ತೂರು: ಗಣರಾಜ್ಯೋತ್ಸವ ಪ್ರಯುಕ್ತ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕಿನಲ್ಲಿ ಜ. 26ರಂದು ಮಧ್ಯಾಹ್ನ 2ರಿಂದ 6ರವರೆಗೆ ಎಲುಬು ಮತ್ತು ಕೀಲು ತಪಾಸಣೆ, ಹಾಗೂ ಫಿಸಿಯೋಥೇರೇಪಿ ಉಚಿತ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ 1200 ರೂ. ಮೌಲ್ಯದ ಎಲುಬು ಸಾಂದ್ರತ ಪರೀಕ್ಷೆ (Bone mineral density test) ಅನ್ನು ಉಚಿತವಾಗಿ ಮಾಡಲಾಗುವುದು. ಪುತ್ತೂರಿನ ಖ್ಯಾತ ಎಲುಬು ಮತ್ತು ಕೀಲು ಸರ್ಜನ್ ಡಾ. ಸಚಿನ್ ಶಂಕರ್ ಹಾರಕೆರೆ ಅವರು ಶಿಬಿರದಲ್ಲಿ ಸಂದರ್ಶನಕ್ಕೆ ಲಭ್ಯರಿರುವರು. ಅಲ್ಲದೇ, ಫಿಸಿಯೋಥೇರೇಪಿ ತಜ್ಞರ ಸಂದರ್ಶನ ಹಾಗೂ ಫಿಸಿಯೋಥೇರೇಪಿ ಚಿಕಿತ್ಸೆ ಉಚಿತವಾಗಿ ನಡೆಯಲಿದೆ.

ಎಲುಬು ಮತ್ತು ಕೀಲು ಸಂಬಂಧಿಸಿದ ವ್ಯಾಧಿಗಳಾದ ಸಂಧಿ ವಾತಾ, ಆಮವಾತ, ಕತ್ತು ನೋವು, ಸೊಂಟ ನೋವು, ಭುಜ ನೋವು, ಎಲುಬು ಮುರಿತ, ಸ್ಪೋರ್ಟ್ಸ್ ಇಂಜ್ಯೂರಿ ಇತ್ಯಾದಿ ಸಮಸ್ಯೆಗಳಿರುವವರು ಶಿಬಿರದ ಪ್ರಯೋಜನವನ್ನು ಪಡೆಯಬಹುದು ಎಂದು ಪುರುಷರಕಟ್ಟೆ ಸಿದ್ಧಣ್ಣ ಕಾಂಪ್ಲೆಕ್ಸಿನಲ್ಲಿರುವ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕಿನ ಚೀಫ್ ಫಿಸಿಷಿಯನ್ ಮತ್ತು ಆಯುರ್ವೇದ ತಜ್ಞ ಡಾ. ಸುಜಯ್ ಕೃಷ್ಣ ತಂತ್ರಿ ಕೆಮ್ಮಿಂಜೆ ಪ್ರಕಟಣೆಯಲ್ಲಿ ತಿಳಿಸಿದರು.

ವಿಟ್ಲ: ಹಿಂದೂ ಮುಖಂಡ ಅಕ್ಷಯ್ ಗೆ ಗಡಿಪಾರು ಆದೇಶ - ಕೋಮು ಸೌಹಾರ್ದತೆ ಧಕ್ಕೆ ತಂದ ಆರೋಪ

Posted by Vidyamaana on 2023-10-03 21:31:18 |

Share: | | | | |


ವಿಟ್ಲ: ಹಿಂದೂ ಮುಖಂಡ ಅಕ್ಷಯ್ ಗೆ ಗಡಿಪಾರು ಆದೇಶ - ಕೋಮು ಸೌಹಾರ್ದತೆ ಧಕ್ಕೆ ತಂದ ಆರೋಪ

ವಿಟ್ಲ: ಭಾಗಿಯಾಗಿದ್ದ ಅಕ್ಷಯ್ ರಜಪೂತ್ ಗೆ ಗಡಿಪಾರು ನೋಟಿಸ್ ನೀಡಲಾಗಿದೆ.


ಕಲ್ಲಡ್ಕ ಬಾಳ್ತಿಲ ನಿವಾಸಿ ಅಕ್ಷಯ್ ರಜಪೂತ್ ಹಿಂದೂ ಜಾಗರಣಾ ವೇದಿಕೆಯ ಜವಾಬ್ದಾರಿಯನ್ನು ಹೊಂದಿದ್ದು ಇದೀಗ ಗಡಿಪಾರು ನೋಟೀಸ್ ನೀಡಿದ್ದಾರೆ.


ಪಡೀಲ್ ಕೆಪುಳು ಬಳಿ ಬೈಕ್ ಸ್ಕೂಟರ್ ನಡುವೆ ನಡೆದ ಅಪಘಾತದ ಸಿ ಸಿ ಟಿವಿ ದೃಶ್ಯ!

ಗಡಿಪಾರು ನೋಟೀಸ್ ನಲ್ಲಿ ಏನಿದೆ ..?


ವಿಟ್ಲ ಠಾಣಾ ವ್ಯಾಪ್ತಿಯ ಯುವಕರನ್ನು ಸೇರಿಸಿಕೊಂಡು ಗುಂಪುಗಾರಿಕೆ ನಡೆಸುವುದು, ಹಲ್ಲೆ, ದೊಂಬಿ, ಮತೀಯ ಗಲಭೆಗಳನ್ನು ಸೃಷ್ಟಿಸಲು ಜೀವಬೆದರಿಕೆ ಹಾಕುವುದು, ನೈತಿಕ ಪೊಲೀಸ್ ಗಿರಿಯಂತಹ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದು ವಿಟ್ಲ ಪರಿಸರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಹಲವು ಬಾರಿ ಠಾಣೆಗೆ ಕರೆದು ಕಾನೂನು ತಿಳುವಳಿಕೆ ನೀಡಿದರೂ ಸಹ ತನ್ನ ಚಾಳಿ ಬಿಡದಿದ್ದು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇರುವುದರಿಂದ ಈತನನ್ನು ಗಡಿಪಾರು ಮಾಡಿ ಎಂದು ಬಂಟ್ವಾಳ ಠಾಣೆಯ ಪೊಲೀಸ್ ಉಪ ಅಧೀಕ್ಷರಕರು ಪ್ರಸ್ತಾವನೆ ಸಲ್ಲಿಸಿದರಿಂದ ದಿನಾಂಕ 9.10.2023 ರಂದು ಸಹಾಯಕ ಆಯುಕ್ತರ ನ್ಯಾಯಾಲಯ ಮಂಗಳೂರು ಉಪವಿಭಾಗ ಇಲ್ಲಿಗೆ ಹಾಜರಾಗುವಂತೆ ಅಕ್ಷಯ್ ರಜಪೂತ್‌ಗೆ ನೋಟೀಸ್ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ತಲಪಾಡಿ ಗ್ರಾಪಂ ಅಧ್ಯಕ್ಷ ಚುನಾವಣೆಯಲ್ಲಿ ಎಸ್ಡಿಪಿಐಗೆ ಬೆಂಬಲ

Posted by Vidyamaana on 2023-08-11 16:23:55 |

Share: | | | | |


ತಲಪಾಡಿ ಗ್ರಾಪಂ ಅಧ್ಯಕ್ಷ ಚುನಾವಣೆಯಲ್ಲಿ ಎಸ್ಡಿಪಿಐಗೆ ಬೆಂಬಲ

ಉಳ್ಳಾಲ: ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಎಸ್ಡಿಪಿಐ ಗೆಲುವಿಗೆ ಕಾರಣರಾದ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರನ್ನು ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ. 


ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿಗೆ ಬಹುಮತ ಇದ್ದ ಕಾರಣ ಸತ್ಯರಾಜ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಲಾಗಿತ್ತು. ಆದರೆ ಬಿಜೆಪಿ ಬೆಂಬಲಿತ ಸದಸ್ಯರಾದ ಮಹಮ್ಮದ್ ಫಯಾಝ್ ಮತ್ತು ಮಹಮ್ಮದ್ ಅವರು ಎಸ್ ಡಿಪಿಐ ನಾಯಕರ ಆಸೆ, ಆಮಿಷ, ಒತ್ತಡದಿಂದ ಅಡ್ಡ ಮತದಾನ ಮಾಡಿ ಎಸ್ ಡಿಪಿಐ ಗೆಲುವಿಗೆ ಕಾರಣರಾಗಿದ್ದು ತಪ್ಪೊಪ್ಪಿಕೊಂಡಿದ್ದಾರೆ. ಆದರೂ ಅವರು ಪಕ್ಷಕ್ಕೆ ದ್ರೋಹ ಬಗೆದ ಕಾರಣ ಕ್ರಮ‌ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಚಂದ್ರಹಾಸ ಪಂಡಿತೌಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 




ಬಿಜೆಪಿ ಅಧಿಕಾರಕ್ಕಾಗಿ ಇರುವ ಪಕ್ಷವಲ್ಲ, ಎಸ್ ಡಿಪಿಐಗೆ ಬೆಂಬಲ ನೀಡುವ ಅಗತ್ಯವೂ ಇಲ್ಲ. ಗ್ರಾಮ ಪಂಚಾಯತ್ ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮೀಸಲಾತಿ ಬಂದಿದ್ದು ಬಿಜೆಪಿಯಲ್ಲಿ ಪುಷ್ಪಲತಾ ಶೆಟ್ಟಿ ಮಾತ್ರ ಇದ್ದ ಕಾರಣ ಅವಿರೋಧವಾಗಿ ಉಪಾಧ್ಯಕ್ಷರಾಗಿದ್ದಾರೆ. ಎಸ್ ಡಿಪಿಐಗೆ ಬೆಂಬಲ, ಸಹಕಾರ ನೀಡಿಲ್ಲ, ಈ ಬಗ್ಗೆ ತಪ್ಪು ಸಂದೇಶ ಹೋಗಿದ್ದು ಕಾರ್ಯಕರ್ತರು ಗೊಂದಲಕ್ಕೀಡಾಗಬಾರದು ಎಂದು ತಿಳಿಸಿದರು. 


ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ, ಕಾರ್ಯದರ್ಶಿಗಳಾದ ಸತೀಶ್ ಕುಂಪಲ, ಜಯಶ್ರೀ ಕರ್ಕೇರ, ಮುಖಂಡರಾದ ಕಸ್ತೂರಿ ಪಂಜ, ರಣದೀಪ್ ಕಾಂಚನ್, ನವೀನ್ ಪಾದಲ್ಪಾಡಿ, ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಪುಷ್ಪಲತಾ ಶೆಟ್ಟಿ, ಹೇಮಂತ್ ಶೆಟ್ಟಿ ದೇರಳಕಟ್ಟೆ ಸುದ್ದಿಗೋಷ್ಠಿಯಲ್ಲಿದ್ದರು.

ಧರ್ಮಸ್ಥಳ :ಲಾರಿ ಬೈಕ್ ಡಿಕ್ಕಿ ಪ್ರಸಾದ್ ಶೆಟ್ಟಿ ಮೃತ್ಯು :ಮತ್ತೋರ್ವ ಗಂಭೀರ

Posted by Vidyamaana on 2023-03-29 12:58:46 |

Share: | | | | |


ಧರ್ಮಸ್ಥಳ :ಲಾರಿ ಬೈಕ್ ಡಿಕ್ಕಿ ಪ್ರಸಾದ್ ಶೆಟ್ಟಿ ಮೃತ್ಯು :ಮತ್ತೋರ್ವ ಗಂಭೀರ

ಬೆಳ್ತಂಗಡಿ: ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ ಸಮೀಪದ ಮುಂಡ್ರುಪ್ಪಾಡಿ ಎಂಬಲ್ಲಿ‌ ನಡೆದಿದೆ.

ಬೆಳ್ತಂಗಡಿ ಸರ್ವೆ ಇಲಾಖೆಯ ಸರ್ವೆ ಇದ್ದ ಕಾರಣ ಕರ್ತವ್ಯ ಮುಗಿಸಿ ವಾಪಸ್ ಅಗಿವ ವೇಳೆ ಮುಂಡ್ರುಪಾಡಿಯಲ್ಲಿ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಈ ವೇಳೆ ಬೈಕ್ ನಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಬೈಕ್ ಸವಾರ ಗುರುವಾಯನಕೆರೆ ನಿವಾಸಿ ಚೈನರ್ ಅಗಿರುವ ಪ್ರಸಾದ್ ಶೆಟ್ಟಿ(27) ಸಾವನ್ನಪ್ಪಿದ್ದು , ಸಹಸವಾರ ಸರ್ವೆಯರ್ ವಿಶ್ವನಾಥ್ ಗಂಭೀರ ಗಾಯಗೊಂಡಿದ್ದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

ಪುತ್ತೂರಿನ ವಿದ್ಯಾಕ್ಷೇತ್ರದ ಪ್ರಗತಿ ಗೆ 16 ಸಂವತ್ಸರ ಸಂಪೂರ್ಣ

Posted by Vidyamaana on 2023-08-18 17:42:09 |

Share: | | | | |


ಪುತ್ತೂರಿನ ವಿದ್ಯಾಕ್ಷೇತ್ರದ ಪ್ರಗತಿ ಗೆ 16 ಸಂವತ್ಸರ ಸಂಪೂರ್ಣ

 ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ 16ನೇ ವರ್ಷದ ಸ್ಥಾಪಕ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪೋರ್ದಾಳ್ ಮಾತನಾಡಿ, 2008ರ ಆಗಸ್ಟ್ 18ರಂದು ಪ್ರಗತಿ ಸ್ಟಡಿ ಸೆಂಟರ್ ಆರಂಭಗೊಂಡಿದ್ದು, ತದನಂತರ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟುಕೊಂಡು ಹಲವಾರು ಸವಾಲುಗಳನ್ನು ಎದುರಿಸುತ್ತ ಇದೀಗ 16ನೇ ವರ್ಷದ ಸಂಭ್ರಮದಲ್ಲಿದೆ. ಗೋಕುಲ್ನಾಥ್ ಪಿ.ವಿ. ಹಾಗೂ ಹೇಮಲತಾ ಗೋಕುಲ್ನಾಥ್ ಅವರ ಕನಸಿನ ಕೂಸು ಈ ಪ್ರಗತಿ ಸಂಸ್ಥೆ. ಈ ಸಂಸ್ಥೆಯ ಅಭಿವೃದ್ಧಿಗೆ ಹಗಲಿರುಳು ದುಡಿಯುವ ಜೊತೆಗೆ ಎಲ್ಲಾ ಉಪನ್ಯಾಸಕರಿಗೆ ಸ್ಪೂರ್ತಿಯನ್ನು ತುಂಬಿ, ವಿದ್ಯಾರ್ಥಿಗಳ ಬದುಕಿನಲ್ಲಿಹೊಸ ಬರವಸೆಯನ್ನು ತರುವ ಪ್ರಯತ್ನ ಕಳೆದು 15 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಹಾಗೂ ಮಾಂಟೆಸರಿ ಶಿಕ್ಷಕಿಯರ ತರಬೇತಿಯನ್ನು ಆರಂಭಿಸಿ ಹಲವಾರು ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ತರಬೇತಿಯನ್ನು ನೀಡುತ್ತಿದ್ದಾರೆ ಎಂದ ಅವರು, ಜೀವನದಲ್ಲಿ ಸಿಹಿ ಹಾಗೂ ಕಹಿ ಅನುಭವಗಳನ್ನು ಅನುಭವಿಸಿದರು ಉತ್ತಮ ಸಾಧನೆ ಮಾಡುತ್ತಾರೆ. ಜೀವನದಲ್ಲಿ ತಪ್ಪು ಮಾಡುವುದು ಸಹಜ. ಆದರೆ ಜೀವನವೇ ತಪ್ಪಾಗಬಾರದು ಎಂದರು.

ಮುಖ್ಯಶಿಕ್ಷಕಿ ಪ್ರಮೀಳಾ ಎನ್.ಖ. ಮಾತನಾಡಿ, ಪ್ರಗತಿ ಸಂಸ್ಥೆಯು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ದಿಯನ್ನು ಕಾಣಲಿ ಎಂದು ಶುಭ ಹಾರೈಸಿದರು. 

ಸಂಸ್ಥೆಯ ಸಂಚಾಲಕ ಗೋಕುಲ್ನಾಥ್ ಪಿ.ವಿ. ಅವರು ಪ್ರಗತಿ ಸ್ಟಡಿ ಸೆಂಟರ್ ನಡೆದು ಬಂದ ಹಾದಿಯನ್ನು ವಿವರಿಸಿದರು.

ತಾಂತ್ರಿಕ ವಿಭಾಗ ಮುಖ್ಯಸ್ಥ ನಿಕೋಲಸ್ ಗೋವಿಯಸ್ ಹಾಗೂ ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್ನಾಥ್ ಉಪಸ್ಥಿತರಿದ್ದರು. 

ಒಲಿವಿಯಾ ಪಾಯಸ್ ಪ್ರಾರ್ಥಿಸಿ, ಅನುಪಮ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಸಹಕರಿಸಿದರು.



Leave a Comment: