ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಸುದ್ದಿಗಳು News

Posted by vidyamaana on 2024-07-24 19:54:18 |

Share: | | | | |


ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ.

ಕಳೆದ 8 ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡ ಸೇರಿದಂತೆ ಮಿಲ್ಟ್ರಿ ತಂಡ ಕೂಡ ಮಣ್ಣು ತೆರವು ಕಾರ್ಯಾಚರಣೆಗೆ ಆಗಮಿಸಿತ್ತು. ಈ ವೇಳೆ ನಿನ್ನೆಯವರೆಗೆ 8 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ. ಟಿಂಬರ್ ಲಾರಿ ನದಿಯಲ್ಲಿ ಪತ್ತೆ ಆಗಿರುವ ಸ್ಥಿತಿಯಲ್ಲಿ ಇದೆ.ಕೇರಳ ಮೂಲದ ಲಾರಿ ನದಿಯಲ್ಲಿ ಇದೀಗ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿ ಪತ್ತೆಯಾದ ಸ್ಥಳಕ್ಕೆ ಡಿಸಿ ಲಕ್ಷ್ಮಿಪ್ರಿಯ ಭೇಟಿ ನೀಡಿದ್ದಾರೆ. ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ

 Share: | | | | |


ಬೆಳ್ತಂಗಡಿ : ಮದ್ಯದ ಅಮಲಿನಲ್ಲಿ ಬೈಕ್ ಗೆ ಡಿಕ್ಕಿಹೊಡೆದ ಬೋಲೆರೊ ವಾಹನ: ಬಾಲಕಿ ಅನರ್ಘ್ಯ ಮೃತ್ಯು

Posted by Vidyamaana on 2024-07-28 06:45:09 |

Share: | | | | |


ಬೆಳ್ತಂಗಡಿ : ಮದ್ಯದ ಅಮಲಿನಲ್ಲಿ ಬೈಕ್ ಗೆ ಡಿಕ್ಕಿಹೊಡೆದ ಬೋಲೆರೊ ವಾಹನ: ಬಾಲಕಿ ಅನರ್ಘ್ಯ ಮೃತ್ಯು

ಬೆಳ್ತಂಗಡಿ :ಮದ್ಯದ ಅಮಲಿನಲ್ಲಿ ಬೊಲೆರೋ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಜಾಡೇ ಸೀಟು ಬಳಿ ಈ ಅಪಘಾತ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮುಂಜಾಡೇ ಸೀಟು ಬಳಿ ಈ ಒಂದು ಘಟನೆ ನಡೆದಿದೆ ತಲೆ ಮೇಲೆ ಬುಲೆರೋ ವಾಹನ ಹರಿದಿದ್ದರಿಂದ ಅನರ್ಘ್ಯ (13) ಬಾಲಕಿ ಸಾವನ್ನಪ್ಪಿದ್ದಾಳೆ.

ದೀಪಾವಳಿ ಸೀರೆ ವಿತರಣಾ ಕಾರ್ಯಕ್ರಮ; ಕೊಂಬೆಟ್ಟು ಕ್ರೀಡಾಂಗಣ ವೀಕ್ಷಿಸಿದ ಶಾಸಕರು

Posted by Vidyamaana on 2023-10-19 16:36:35 |

Share: | | | | |


ದೀಪಾವಳಿ ಸೀರೆ ವಿತರಣಾ ಕಾರ್ಯಕ್ರಮ; ಕೊಂಬೆಟ್ಟು ಕ್ರೀಡಾಂಗಣ ವೀಕ್ಷಿಸಿದ ಶಾಸಕರು

ಪುತ್ತೂರು:ನ.13 ರಂದು ದೀಪಾವಳಿ ಪ್ರಯುಕ್ತ ನಡೆಯಲಿರುವ ಬೃಹತ್ ಸೀರೆ ವಿತರಣಾ ಕಾರ್ಯಕ್ರಮವು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದ್ದು , ಸಮಾವೇಶ ನಡೆಯಲಿರುವ ಕೊಂಬೆಟ್ಟು ಕ್ರೀಡಾಂಗಣಕ್ಕೆ ಭೇಟಿ ನೀಡಿದ ಶಾಸಕರು ಸ್ಥಳ ವೀಕ್ಷಣೆ ಮಾಡಿದರು. ಸುಮಾರು 50 ಸಾವಿರಕ್ಕೂ‌ಮಿಕ್ಕಿ ಜನ ಸೇರುವ ನಿರೀಕ್ಷೆ ಇದ್ದು ಕೈಗೊಂಡಿರುವ ಸಿದ್ದತೆಗಳನ್ನು ಶಾಸಕರು ಪರಿಶೀಲನೆ ಮಾಡಿದರು.

ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ,ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್,ರೈ ಟ್ರಸ್ಟ್ ನ ಮುಖ್ಯಸ್ಥರಾದ ನಿಹಾಲ್ ಶೆಟ್ಟಿ, ನಿವೃತ್ತ ಶಿಕ್ಷಕ ದಯಾನಂದ ರೈ ಕೊರ್ಮಂಡ,ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಯುವ ಕಾಂಗ್ರೆಸ್ ನ ಹನೀಫ್ ಪುಂಚತ್ತಾರ್, ಇಂಜಿನಿಯರ್ ಸಂತೋಷ್ ಶೆಟ್ಡಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ಯೋಗೀಶ್ ಸಾಮಾನಿ, ಟ್ರಸ್ಟ್ ನ ಪ್ರಮುಖರಾದ ಕೃಷ್ಣಪ್ರಸಾದ್ ಭಟ್ ಬೊಳ್ಳಮೆ ,ದಾಮೋದರ್ ಕೋಡಿಂಬಾಡಿ ಮತ್ತಿತರರು ಉಪಸ್ಥಿತರಿದ್ದರು.

SSLC ಪರೀಕ್ಷೆ- 2ರ ವೇಳಾಪಟ್ಟಿ ಪ್ರಕಟ

Posted by Vidyamaana on 2024-05-10 07:29:20 |

Share: | | | | |


SSLC ಪರೀಕ್ಷೆ- 2ರ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟವಾಗಿದೆ. ಇದರ ಬೆನ್ನಲ್ಲೇ ಇದೀಗ ಅನುತ್ತೀರ್ಣರಾದವರಿಗೆ ಎಸ್ಎಸ್ಎಲ್ಸಿ ಪರೀಕ್ಷೆ -2ರ ವೇಳಾಪಟ್ಟಿ ಬಿಡುಗಡೆಯಾಗಿದೆ.

ಜೂನ್ 7ರಿಂದ 14ರವರೆಗೆ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆಗಳು ನಡೆಯಲಿವೆ. ಇನ್ನೂ ಪ್ರತಿ ವಿಷಯಕ್ಕೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.

ಕಾಸರಗೋಡು ಧಪನ ಮಾಡಿದ ಖಬರಸ್ತಾನದಿಂದ ವ್ಯಕ್ತಿಯೋರ್ವರ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ

Posted by Vidyamaana on 2023-05-02 04:48:59 |

Share: | | | | |


ಕಾಸರಗೋಡು ಧಪನ ಮಾಡಿದ ಖಬರಸ್ತಾನದಿಂದ ವ್ಯಕ್ತಿಯೋರ್ವರ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ

ಕಾಸರಗೋಡು;ಸಾವಿನ‌ ಬಗ್ಗೆ ಅನುಮಾನದ ಹಿನ್ನೆಲೆ‌ ಅನಿವಾಸಿ ಉದ್ಯಮಿಯೋರ್ವರ ಮೃತದೇಹವನ್ನು ಧಪನ ಮಾಡಿದ ಖಬರಸ್ತಾನದಿಂದ ತೆಗೆದು ವಾಪಾಸ್ಸು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.


ಪೂಚಕ್ಕಾಡ್ ನಿವಾಸಿ ಉದ್ಯಮಿ ಅಬ್ದುಲ್ ಗಪೂರ್ ಸಾವಿನಲ್ಲಿ ಅನುಮಾನ ಕಂಡು ಬಂದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ.


ಏ.13ರಂದು ಗಪೂರ್ ನಿಧನರಾಗಿದ್ದರು.ಅವರ ಅಂತ್ಯ ಸಂಸ್ಕಾರ ಏ.14ರಂದು ನಡೆದಿತ್ತು. ಅವರು ನಿಧನದ ದಿನ ಮನೆಯಲ್ಲಿ ಒಬ್ಬರೆ ಇದ್ದರು. ಇದೀಗ ಸಾವಿನಲ್ಲಿ ಅನುಮಾನ ಬಂದ ಹಿನ್ನೆಲೆ ಮರಣೋತ್ತರ ಪರೀಕ್ಷೆಗೆ ಪೂಚಕ್ಕಾಡ್ ಹೈದ್ರೋಸ್ ಮಸೀದಿಯ ದಫನ‌ ಭೂಮಿಯಿಂದ ಹೊರ ತೆಗೆಯಲಾಗಿದೆ.


ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ಮೃತದೇಹ ಹೊರತೆಗೆದು ಪರೀಕ್ಷೆ ಕಾರ್ಯ ನಡೆದಿದೆ.


ಆರಂಭದಲ್ಲಿ ಗಪೂರು ಅವರದ್ದು ಸಹಜ ಸಾವು ಎಂದು ಅಂತ್ಯ ಸಂಸ್ಕಾರ ನಡೆಸಲಾಗಿತ್ತು.ಆ ಬಳಿಕ ಅವರ ಮನೆಯಲ್ಲಿ 600 ಪವನ್ ಚಿನ್ನಾಭರಣ ನಾಪತ್ತೆಯಾಗಿರುವ ಹಿನ್ನೆಲೆ ಸಂಶಯ ವ್ಯಕ್ತಪಡಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.‌‌ನಾಪತ್ತೆಯಾದ ಚಿನ್ನಾಭರಣದ ಮೌಲ್ಯ ಬರೊಬ್ಬರಿ 2.85 ಕೋಟಿ ಎಂದು ಹೇಳಲಾಗಿದೆ.


ಇದೀಗ ಮರಣೋತ್ತರ ಪರೀಕ್ಷೆ ನಡೆದಿದ್ದು ಅಂತಿಮ ವರದಿಯ ಬಳಿಕ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಬರಲು ಎರಡು ವಾರಗಳ ಸಮಯ ಬೇಕಿದೆ ಎಂದು ವರದಿ ತಿಳಿಸಿದೆ.ಫಾರೆನ್ಸಿಕ್ ಸರ್ಜನ್ ಡಾ.ಸರಿತಾ ನೇತೃತ್ವದ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ

ಆ. 25ರಂದು ಮುಕ್ವೆ ಶಾಲಾ ಹಿರಿಯ ವಿದ್ಯಾರ್ಥಿಗಳ ಮಹಾಸಭೆ

Posted by Vidyamaana on 2024-08-24 06:19:21 |

Share: | | | | |


ಆ. 25ರಂದು ಮುಕ್ವೆ ಶಾಲಾ ಹಿರಿಯ ವಿದ್ಯಾರ್ಥಿಗಳ ಮಹಾಸಭೆ

ಪುತ್ತೂರು: ಮುಕ್ವೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ. 25ರಂದು ಮಧ್ಯಾಹ್ನ 2.30ಕ್ಕೆ ಶಾಲೆಯ ಸಭಾಂಗಣದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳ ಮಹಾಸಭೆ ನಡೆಯಲಿದೆ. 


ಯು.ಎ.ಇ.ಯ ಅಲ್ ಖೈರ್ ಸ್ವಯಂಸೇವಕ ಪ್ರಶಸ್ತಿಗೆ ಪಾತ್ರರಾದ ಹನೀಫ್ ಪುತ್ತೂರು

Posted by Vidyamaana on 2024-02-12 22:51:20 |

Share: | | | | |


ಯು.ಎ.ಇ.ಯ ಅಲ್ ಖೈರ್ ಸ್ವಯಂಸೇವಕ ಪ್ರಶಸ್ತಿಗೆ ಪಾತ್ರರಾದ ಹನೀಫ್ ಪುತ್ತೂರು

ದುಬೈ: ಹನೀಫ್ ಪುತ್ತೂರು ಇವರಿಗೆ ಯು.ಎ.ಇ.ಯ ಅಲ್ ಖೈರ್ ಸ್ವಯಂಸೇವಕ ಪ್ರಶಸ್ತಿ 2024 ಲಭಿಸಿದೆ. ಅಲ್ ಖೈರ್ ಸ್ವಯಂಸೇವಕ ಪ್ರಶಸ್ತಿಯ ಎಂಟನೇ ಪ್ರಶಸ್ತಿ ಪ್ರದಾನ ಸಮಾರಂಭವು ಹಟ್ಟಾ ಹನಿ ಬೀ ಗಾರ್ಡನ್, ಹಟ್ಟಾ, ದುಬೈನಲ್ಲಿ ನಡೆಯಿತು. ಈ ವರ್ಷ ಯು.ಎ.ಇ ಯ ಐವತ್ತು ಜನರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಇದರಲ್ಲಿ 47 ಮಂದಿ ಯು.ಎ.ಇ. ನಾಗರಿಕರಾದರೆ ಮೂವರು ಹೊರ ದೇಶದವರನ್ನು ಗುರುತಿಸಲಾಗಿತ್ತು,. ಇದರಲ್ಲಿ ಪುತ್ತೂರಿನ ಮಹಮ್ಮದ್ ಹನೀಫ್ ಒಬ್ಬರು ಮಾತ್ರ ಭಾರತೀಯರು.


ರಾಸ್ ಅಲ್ ಖೈಮಾದ ನಾಗರಿಕ ವಿಮಾನಯಾನ ವಿಭಾಗದ ಅಧ್ಯಕ್ಷರು ಹಾಗೂ ಅಲ್ ಖೈರ್ ಸ್ವಯಂ ಸೇವಕ ಪ್ರಶಸ್ತಿಯ ಅಧ್ಯಕ್ಷ, ಇಂಜಿನಿಯರ್ ಶೇಖ್ ಸಲೇಂ ಬಿನ್ ಸುಲ್ತಾನ್ ಅಲ್ ಖಾಸಿಮಿ ಅವರು ಈ ವರ್ಷ ಆಯ್ಕೆಗೊಂಡ ಸ್ವಯಂಸೇವಕರಿಗೆ ಮಾನ್ಯತೆ ಮತ್ತು ಮೆಚ್ಚುಗೆಯ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಿದರು.


ಹಟ್ಟಾ ಹನಿ ಬೀ ಗಾರ್ಡನ್ ನಲ್ಲಿ ನಡೆದ ಸರಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಲ್ ಖೈರ್ ಸ್ವಯಂಸೇವಕ ಪ್ರಶಸ್ತಿಯ ಡೆಪ್ಯೂಟಿ ಚೇರ್ಮನ್ ಫಿರಾಸ್ ಅಜೀಜ್ ಬಿನ್ ದರ್ವಿಶ್ ಹಾಗೂ ಸಂಸ್ಥೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


ಸಾಮಾಜಿಕ ಸ್ವಯಂಸೇವಕತ್ವದ ಪ್ರಾಮುಖ್ಯತೆ ಮತ್ತು ಪ್ರಯೋಜನಗಳನ್ನು ಒತ್ತಿಹೇಳುತ್ತಾ, ಇಂಜಿನಿಯರ್ ಶೇಖ್ ಸಲೇಮ್ ಬಿನ್ ಸುಲ್ತಾನ್ ಅಲ್ ಖಾಸಿಮಿ ಸಮಾಜ ಸೇವೆಯು ಸಮಾಜದ ಐಕ್ಯತೆಯನ್ನು ಭದ್ರಪಡಿಸುತ್ತದೆ ಎಂದು ಹೇಳಿದರು.


ಫಿರಾಸ್ ಅಜೀಜ್ ಬಿನ್ ದರ್ವಿಶ್, ಸ್ವಯಂಸೇವಕತ್ವದ ಅಪಾರ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದರಲ್ಲದೆ ಇದು ಉದಾತ್ತ ಮಾನವೀಯ ಮೌಲ್ಯ ಮತ್ತು ಸಮಾಜದ ಪ್ರಗತಿ ಮತ್ತು ಅಭಿವೃದ್ಧಿಗೆ ಅಗತ್ಯವಾದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ ಎಂದು ಶ್ಲಾಘಿಸಿದರು ಹಾಗೂ ಇದಕ್ಕಾಗಿ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು ಅಭಿನಂದಿಸಿದರು.


ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಅಬ್ಬಾಸ್ ಹಾಜೀ ಯವರ ಪುತ್ರನಾಗಿರುವ ಹನೀಫ್ ಪುತ್ತೂರು, ಪುತ್ತೂರು ಆಸುಪಾಸಿನಲ್ಲಿ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಇದರ ಸಹಯೋಗದೊಂದಿಗೆ ಗ್ರಾಮೀಣ ಮಕ್ಕಳಿಗಾಗಿ ಕಾರ್ಯಾಚರಿಸುತ್ತಿರುವ ಉಚಿತ ಕಂಪ್ಯೂಟರ್ ಬಸ್ – ಕ್ಲಾಸ್ ಆನ್ ವೀಲ್ಸ್ ಇದರ ಸಂಸ್ಥಾಪಕರು. ಮಂಗಳೂರಿನ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಎನ್.ಆರ್.ಐ ಟ್ರಸ್ಟೀ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ತಾಂತ್ರಿಕ ನಿರ್ದೇಶರ್ಕರಾಗಿಯು ಸೇವೆ ಸಲ್ಲಿಸುತಿದ್ದಾರೆ.


ಸದ್ಯ ಯು.ಎ.ಇ ಯ ಯೂನಿವರ್ಸಿಟಿ ಆಫ್ ದುಬಾಯಿ ಇದರ ಐಟಿ ಮ್ಯಾನೇಜರ್ ಹಾಗೂ ಮಹಮ್ಮದ್ ಬಿನ್ ರಾಶೀದ್ ಬಾಹ್ಯಾಕಾಶ ಸಂಸ್ಥೆಯಲ್ಲಿ ಕ್ಲೌಡ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜರ್ ಹಾಗಿ ಉದ್ಯೋಗದಲ್ಲಿರುವ ಇವರು ಯು.ಎ.ಇ ಗೋಲ್ಡನ್ ವೀಸಾ ಹೊಂದಿರುತ್ತಾರೆ.

Recent News


Leave a Comment: